233. ನಾಂದಿ (1964)



ನಾಂದಿ ಚಿತ್ರದ ಹಾಡುಗಳು 
  1. ಹಾಡೊಂದ ಹಾಡುವೆ ನೀ ಕೇಳು ಮಗುವೇ 
  2. ಉಡುಗೊರೆಯೊಂದ ತಂದ 
  3. ನಮ್ಮ ತಾಯಿ ಭಾರತಿ 
  4. ಚಂದ್ರಮುಖಿ ಪ್ರಾಣಸಖಿ 
  5. ನಮ್ಮ ಪಾಪ ಮುದ್ದು ಪಾಪ 
  6. ಸತ್ಯಕ್ಕೆ ಎಂದಿಗೂ ಜಯವೆಂಬ 
ನಾಂದಿ (1964) - ಹಾಡೊಂದ ಹಾಡುವೆ
ಸಾಹಿತ್ಯ : ಅರ್.ಎನ್.ಜಯಗೋಪಾಲ್  ಸಂಗೀತ : ವಿಜಯ ಭಾಸ್ಕರ್   ಗಾಯನ : ಪಿ.ಬಿ.ಶ್ರೀನಿವಾಸ್


ಹಾಡೊಂದ ಹಾಡುವೆ ನೀ ಕೇಳು ಮಗುವೇ
ಹಾಡೊಂದ ಹಾಡುವೆ ನೀ ಕೇಳು ಮಗುವೇ
ಬರಿದಾದ ಮನೆ ಬೆಳಗೆ ನೀನೆಂದು ಬರುವೆ
ಹಾಡೊಂದ ಹಾಡುವೆ ನೀ ಕೇಳು ಮಗುವೇ

ಸೀಮಂತದಾನಂದ ನಾ ನೀಡಲಿಲ್ಲ ನಿನಗಾಗಿ ಮಹಿಳೆಯರು ತಾ ಹಾಡಲಿಲ್ಲ
ಸೀಮಂತದಾನಂದ ನಾ ನೀಡಲಿಲ್ಲ ನಿನಗಾಗಿ ಮಹಿಳೆಯರು ತಾ ಹಾಡಲಿಲ್ಲ
ಸಿರಿವಂತರ ಭೋಗ ನಿನಗಿಲ್ಲಿ ಇಲ್ಲ ಸಿರಿಯಾಗಿ ನಿಧಿಯಾಗಿ ನೀ ಬರುವೆಯಲ್ಲ
ಹಾಡೊಂದ ಹಾಡುವೆ ನೀ ಕೇಳು ಮಗುವೇ

ನಿನ್ನೊಂದು ನುಡಿಮುತ್ತು ಸವಿ ಜೇನಿನಂತೆ
ಆ ಸುಖದೆ ನಾ ಮರೆವೆ ಈ ಬಾಳಚಿಂತೆ
ನಿನ್ನೊಂದು ನುಡಿಮುತ್ತು ಸವಿ ಜೇನಿನಂತೆ
ಆ ಸುಖದೆ ನಾ ಮರೆವೆ ಈ ಬಾಳಚಿಂತೆ
ಅದಕೇಳೋ ಸೌಭಾಗ್ಯ ಈ ತಾಯಿಗಿಲ್ಲ
ಅದಕೇಳೋ ಸೌಭಾಗ್ಯ ಈ ತಾಯಿಗಿಲ್ಲ
ಇವಳಾಸೆ ಆಕಾಂಕ್ಷೆ ನೀನಾದೆಯಲ್ಲ
ಹಾಡೊಂದ ಹಾಡುವೆ ನೀ ಕೇಳು ಮಗುವೇ
ಬರಿದಾದ ಮನೆ ಬೆಳಗೆ ನೀನೆಂದು ಬರುವೆ
ಹಾಡೊಂದ ಹಾಡುವೆ... ನೀ ಕೇಳು ಮಗುವೇ
------------------------------------------------------------------------------------------------------------------------

ನಾಂದಿ (1964) - ನಮ್ಮ ತಾಯಿ ಭಾರತಿ, ನಮ್ಮ ನಾಡು ಭಾರತ

ರಚನೆ: ಆರ್.ಎನ್.ಜಯಗೋಪಾಲ್  ಸಂಗೀತ: ವಿಜಯಭಾಸ್ಕರ್  ಗಾಯನ: ಪಿ.ಬಿ.ಶ್ರೀನಿವಾಸ್ ಮತ್ತು ಮಕ್ಕಳ ವೃಂದ


ನಮ್ಮ ತಾಯಿ ಭಾರತಿ ನಮ್ಮ ನಾಡು ಭಾರತ
ನಮ್ಮ ರೀತಿ ನಮ್ಮ ನೀತಿ ನಮ್ಮ ಉಸಿರು ಭಾರತ
ಹಕ್ಕಿಯಂತೆ ಹಾರಿ ನಾವು ನಾಡ ನೋಡುವ
ಹತ್ತು ದೇಶದಲ್ಲಿ ತಾಯ ಕೀರ್ತಿ ಹಾಡುವ
ಶಾಂತಿ ಸ್ನೇಹ ಪ್ರೇಮದ ಸಂದೇಶವ ಸಾರುವ  ||ನಮ್ಮ ತಾಯಿ ಭಾರತಿ||

ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು
ಏಳು ಸ್ವರವು ಸೇರಿ ಸಂಗೀತವಾಯಿತು
ಸರಿಗಮಪದನಿ ಸನಿದಪಮಗರಿ
ವಿವಿಧ ನುಡಿಯು ವಿವಿಧ ನಡೆಯು ಕಲೆತ ವಿವಿಧ ಭಾರತಿ  ।।ನಮ್ಮ ತಾಯಿ ಭಾರತಿ||

ನಮ್ಮ ನಾಡು ನಡೆದ ಬಂದ ಹಾದಿ ನೆನೆಯುವ
ಆಗ ತಪ್ಪನೆಲ್ಲ ಅರಿತು ಪಾಠ ಕಲಿಯುವ
ಕರ್ಮವೀರರಾಗಿ ಪ್ರಗತಿಪಥದಿ ಮುಂದೆ ಸಾಗುವ  ||ನಮ್ಮ ತಾಯಿ ಭಾರತಿ||

ನಮ್ಮ ತಾಯ ಸೇವೆಗಾಗಿ ನಾವು ದುಡಿಯುವ
ನಮ್ಮ ನಾಡ ರಕ್ಷಣೆಗೆ ನಿಂತು ಮಡಿಯುವ
ಜಾತಿಮತದ ಭೇದಗಳನು ತೊರೆದು ಒಂದುಗೂಡುವ  ||ನಮ್ಮ ತಾಯಿ ಭಾರತಿ||
--------------------------------------------------------------------------------------------------------------------------

ನಾಂದಿ (1964) 
ಸಂಗೀತ: ವಿಜಯಭಾಸ್ಕರ್  ರಚನೆ: ಆರ್.ಎನ್.ಜಯಗೋಪಾಲ್ ಗಾಯನ: ಎಸ್.ಜಾನಕೀ 

ಆಆಆ.... ಹೃದಯ ಮಂದಿರದಲ್ಲಿ ಕದವ ತಟ್ಟಿದ ಮಾರ
ಉದಕಿಯ ಕೊರಳಲ್ಲಿ ತಾಳಿ ಕಟ್ಟಿದ ವೀರ
ವೇರಿ ಗುಡ್ ವೇರಿ ಗುಡ್ ಎಕ್ಸಲೆಂಟ್
ಉಡುಗೊರೆಯೊಂದ ತಂದ ನಿನ್ನಯ ಮನದಾನಂದ
ಮನವನು ತಣಿಸಲು ಬಂದ ಹೊಸಿಲಲಿ ನಗುತಲಿ ನಿಂದ

ನೀನೇ ನನ್ನವಳೆಂದ...  ನೀನೇ ನನ್ನವಳೆಂದ
ಕಿವಿಯಲಿ ಪಿಸುಮಾತಿಂದ
ನೀನೇ ನನ್ನವಳೆಂದ ಕಿವಿಯಲಿ ಪಿಸುಮಾತಿಂದ
ಮೊಗವೆಂಬ ಅರವಿಂದ ಕೆಂಪಾಗಿಸು ನಾಚಿಕೆ ಅಂದ 
ಉಡುಗೊರೆಯೊಂದ ತಂದ ನಿನ್ನಯ ಮನದಾನಂದ
ಮನವನು ತಣಿಸಲು ಬಂದ ಹೊಸಿಲಲಿ ನಗುತಲಿ ನಿಂದ

ಪ್ರೇಮದ ಕಾಣಿಕೆ ಎಂದ ತಂದಿಹೆ ನಾ ನಿನಗೆಂದ 
ಪ್ರೇಮದ ಕಾಣಿಕೆ ಎಂದ ತಂದಿಹೆ ನಾ ನಿನಗೆಂದ 
ಜಡೆ ಎಳೆದ ಮುದದಿಂದ ನಾ ಬಿಡೆನೆಂದ 
ಉಡುಗೊರೆಯೊಂದ ತಂದ ನಿನ್ನಯ ಮನದಾನಂದ
ಮನವನು ತಣಿಸಲು ಬಂದ ಹೊಸಿಲಲಿ ನಗುತಲಿ ನಿಂದ
ಉಂ ಉಂ ಉಂ ಉಂ ಉಂ ಉಂ ಉಂ ಉಂ ಹಹ್ಹಹ  
--------------------------------------------------------------------------------------------------------------------------

ನಾಂದಿ (1964) 
ಸಂಗೀತ: ವಿಜಯಭಾಸ್ಕರ್  ರಚನೆ: ಆರ್.ಎನ್.ಜಯಗೋಪಾಲ್ ಗಾಯನ: ಎಸ್.ಜಾನಕೀ, ಬಿ.ಲತಾ  

ಆಆಆ... ಆಆಆ... 
ಚಂದ್ರಮುಖಿ ಪ್ರಾಣಸಖಿ ಚತುರೆಯೇ ನೀ ಕೇಳೇ 
ಚಂದ್ರಮುಖಿ ಪ್ರಾಣಸಖಿ ಚತುರೆಯೇ ನೀ ಕೇಳೇ 
ಮಾನವ ಕೋಟಿಯ ಸಲಹುವ ಶಕ್ತಿ ಯಾವುದನ ನೀ ಹೇಳೇ 
ಚಂದ್ರಮುಖಿ ಪ್ರಾಣಸಖಿ ಚತುರೆಯೇ ನೀ ಕೇಳೇ 

ಮನೆಯನು ಮಡದಿಯು ಬೆಳಗುವಳು ಮಾರ್ಗವ ತೋರುವಳು... ಆಆಆ   
ಮನೆಯನು ಮಡದಿಯು ಬೆಳಗುವಳು ಮಾರ್ಗವ ತೋರುವಳು... 
ಮನುಜನ ಬಾಳಿನ ಕಷ್ಟದ ಸುಖದಿ ಜೊತೆಯಲಿ ನಡೆಯುವಳು 
ಚಂದ್ರಮುಖಿ ಪ್ರಾಣಸಖಿ ಚತುರೆಯೇ ನೀ ಕೇಳೇ 

ಮಾತೆಯ ಮಗುವಾ ನವಮಾಸಗಳು ಮುದದಲಿ ಭರಿಸಿದಳು 
ಸದಮದನಿ ನಿಸನಿದ ನಿದಮರಿ ದಾ ನಿದನಿ ಮದ ಮದದಮ 
ದಮದ ಗಮಸಗ ಪಗಮ ಸದನಿಸ ಸಂಕ ಗಗಗ ಸಮಗ ಗಗಗಮ 
ಮನಿದ ಸಾ ಗಾತಾನಿ ಸಾ ನಿದ  ನಿಗ ಮಗಮಗಸ 
ಮಾತೆಯ ಮಗುವಾ ನವಮಾಸಗಳು ಮುದದಲಿ ಭರಿಸಿದಳು 
ಕರುಳಿನ ಕುಡಿಗೆ ಅಮೃತ ನೀಡಿ ಮಮತೆಯಕಾರವಳು  
ಚಂದ್ರಮುಖಿ ಪ್ರಾಣಸಖಿ ಚತುರೆಯೇ ನೀ ಕೇಳೇ 

ಚಂದ್ರಮುಖಿ ಪ್ರಾಣಸಖಿ ಚತುರೆಯೇ ನೀ ಕೇಳೇ 
ಮಾನವ ಕೋಟಿಯ ಸಲಹುವ ಶಕ್ತಿ ಮಗುವೆಯೇ ಕಾದಿರುವೇ... 
ಎಂದಿಗೂ ಮಗುವೆಯೇ ಕಾದಿರುವೇ ನಿಜದಲಿ ಮಗುವೆಯೇ ಕಾದಿರುವೇ
--------------------------------------------------------------------------------------------------------------------------

ನಾಂದಿ (1964)
ಸಂಗೀತ: ವಿಜಯಭಾಸ್ಕರ್ ರಚನೆ: ಆರ್.ಎನ್.ಜಯಗೋಪಾಲ್ ಗಾಯನ: ಎಲ್.ಆರ್.ಈಶ್ವರಿ


ಓಓಓಓಓ..... ಆಆಆಅ
ನಮ್ಮ ಪಾಪ ಮುದ್ದು ಪಾಪ ಪುಟ್ಟ ಹೆಜ್ಜೆ ಹಾಕು ಪಾಪ
ತುಂಟತನ ಮಾಡು ಪಾಪ...
ಪಾಪ (ಒಹೋ) ಪಾ...ಪ (ಓ ಒಹೋ)
ಅಪ್ಪನೊಡನೆ ಆಟ ಆಡಿ  ಸುತ್ತ ಮುತ್ತ ಮೇಲೆ ನೋಡಿ
ಅಪ್ಪನೊಡನೆ ಆಟ ಆಡಿ  ಸುತ್ತ ಮುತ್ತ ಮೇಲೆ ನೋಡಿ
ಮುತ್ತಿನಂಥ ಮಾತನಾಡಿ
ಮುತ್ತಿನಂಥ ಮಾತನಾಡಿ ಆ.. ಬಾ (ಓಹೋಹೋ)

ಬುಗುಬುಗುಬುಗು ರೈಲು ಬಂಡಿ (ಹೇ..ಹೇ..ಹೇಹೇ... ಹೇಹೇ )
ಟಕ ಟಕ ಟಕ ಟಕ ಎಂದು ಗಾಡಿ
ಬುಗುಬುಗುಬುಗು ರೈಲು ಬಂಡಿ ಟಕ ಟಕ ಟಕ ಟಕ ಎಂದು ಗಾಡಿ
ನೋಡಿ ಇವನ ಮೀಸೆ ದಾಡಿ.. ನೋಡಿ ಇವನ ಮೀಸೆ ದಾಡಿ
ಆ...ಟ (ಹೋ ಹೋ ) ಮುದ್ದು ಪಾಪ (ಓ ಒಹೋ)

(ಓಒಹೋ ಆಹಾ  ಓ ಒಹೋ... ಓ ಒಹೋ ಆಹಾ  ಓ ಒಹೋ.. )
ಜಟ್ಟಿ ಇವನು ಜಾರಿ ಬಿದ್ದ...  ಜಟ್ಟಿ ಇವನು ಜಾರಿ ಬಿದ್ದ...
ಜಟ್ಟಿಗಳಿಗೆ ಸೋತ ಪೆದ್ದ ಪೆದ್ದ ಪೆದ್ದ ಪೆದ್ದ
ಬಿದ್ದ ಎದ್ದ ಬಿದ್ದ ಪೆದ್ದ   ಬಿದ್ದ ಎದ್ದ ಬಿದ್ದ ಪೆದ್ದ
ಆದರಿವನ ಮೂಗು ಉದ್ದ ... ಆದರಿವನ ಮೂಗು ಉದ್ದ     
ಆ...ಟ (ಹೋ ಹೋ ) ಅಯ್ಯೋ ಪಾಪ (ಓ ಒಹೋ)
ಅಪ್ಪನೊಡನೆ ಆಟ ಆಡಿ  ಸುತ್ತ ಮುತ್ತ ಮೇಲೆ ನೋಡಿ
ಮುತ್ತಿನಂಥ ಮಾತನಾಡಿ... ಮುತ್ತಿನಂಥ ಮಾತನಾಡಿ
ಪಾಪ (ಓ ಒಹೋ)  ಓಡಿ ಪಾಪ (ಓ ಒಹೋ)
--------------------------------------------------------------------------------------------------------------------------

ನಾಂದಿ (1964)
ಸಂಗೀತ: ವಿಜಯಭಾಸ್ಕರ್ ರಚನೆ: ಆರ್.ಎನ್.ಜಯಗೋಪಾಲ್ ಗಾಯನ:ಪಿ.ಬಿ.ಶ್ರೀನಿವಾಸ, ಎಸ್.ಜಾನಕೀ
ಸತ್ಯಕೆ

ಎಂದಿಗೂ ಜಯವೆಂಬ ಸತ್ಯವ ಸಾರುವ ಕಥೆಯೊಂದ
ಹೇಳುವೆ ಕೇಳಿರಿ  ಮಕ್ಕಳಿರಾ ಕನ್ನಡ ಮಾತೆಯ ಮಕ್ಕಳಿರಾ
ಸತ್ಯಕೆ ಎಂದಿಗೂ ಜಯವೆಂಬ ಸತ್ಯವ ಸಾರುವ ಕಥೆಯೊಂದ
ಹೇಳುವೆ ಕೇಳಿರಿ  ಮಕ್ಕಳಿರಾ ಕನ್ನಡ ಮಾತೆಯ ಮಕ್ಕಳಿರಾ 

ಊರಿನ ಹೊರಗೆ ಕಾಡೊಂದು ಅದರಲಿ ಜಿಂಕೆಯ ಹಿಂಡೊಂದು 
ಸಂಜೆಗೆ ತಿರುಗಿ ಬರುವಂದು ಹಿಂದೆಯೇ ಉಳಿಯಿತು ಹೆಣ್ಣೊಂದು
ಸಂಜೆಗೆ ತಿರುಗಿ ಬರುವಂದು ಹಿಂದೆಯೇ ಉಳಿಯಿತು ಹೆಣ್ಣೊಂದು
ತೆರೆಯೊಂದರಿಂದ ಹುಲಿರಾಯ ಬಂದ ಆ ಜಿಂಕೆ ಎದುರು ನಿಂದ 
ನಾ ತಿಂದು ಬಿಡುವೆ ನಿನ್ನ ಈಗಲೇ ಎಂದ ಖಳನವನ ರೋಷದಿಂದ
ಹುಲಿರಾಯ ಅಣ್ಣಾ  ಕೈಬಿಡೇನು  ಹೋಗಲು ಬೀಡೆಯಾ  ಈ ಸ್ಥಳಕೆ 
ಕಾದಿದೆ ಕಂದನು ಎನಗಾಗಿ ಹಾಲನು ಉಣಿಸಿ ನಾ ಬರುವೇ
ಹುಲಿರಾಯ ಅಣ್ಣಾ  ಕೈಬಿಡೇನು  ಹೋಗಲು ಬೀಡೆಯಾ  ಈ ಸ್ಥಳಕೆ 
ಕಾದಿದೆ ಕಂದನು ಎನಗಾಗಿ ಹಾಲನು ಉಣಿಸಿ ನಾ ಬರುವೇ 
ನೀ ನಿನ್ನ ಮಾತೆಲ್ಲ ಸುಳ್ಳೆಂದು ನಾ ಬಲ್ಲೇ ಬಿಡಲಾರೆ ನೀ ನಿಲ್ಲು ಇಲ್ಲೇ 
ಕೊಲ್ಲುವೆನು ನಾನ್ ಈಗ ಹುಲ್ಲೇ... ಕೊಲ್ಲುವೆನು ನಾನ್ ಈಗ ಹುಲ್ಲೇ
ಆಡಿದ ಮಾತಿಗೆ ತಪ್ಪೇನು ನಾನು ಸತ್ಯವ ಎಂದಿಗೂ ಪಾಲಿಸೆ ನಾ 
ಗೆಳೆಯರ ಬಳಿಗೆ ಒಪ್ಪಿಸಿ ಕಂದನ ಹೇಳಿದ ಸಮಯಕೆ ಬರುವೆನು ನಾ 
ಆಡಿದ ಮಾತಿಗೆ ತಪ್ಪೇನು ನಾ.. 
ಹೋಗಲು ಬಿಡುವೇ ಮನೆಗೆ ನಾ ಕಾಯುವೇ ನಿನ್ನೀ ನಿನಗೆ  
ಬೇಗನೆ ಬಂದು ಹೆದರದೇ ನಿಂದು ಉಳಿಸಿಕೋ ಮಾತನು ಎಂದೂ 
ನೀ ಉಳಿಸಿಕೋ ಮಾತನು ಎಂದೂ
ಕಂದಾ ಕಂದಾ ಮನದಾನಂದ ನೀಡುವೆ ಕೊನೆಯಾ ಮಾತೊಂದಾ 
ನೆನಪಿರಲಿ ಎಂದೂ ಇಂದಿನಿಂದ ಸಲುಹುರಿವರು 
ನಿನ್ನ ಕಂದಾ ತೀರಿತು ನಮ್ಮಯ ಬಂಧ 
ತಾಯಿಯಿರಾ ತಂದೆಯಿರಾ ಸೊದರಿರಾ  ಗೆಳೆಯರಿರಾ
ಈ ತಬ್ಬಲಿಯಾ ಪ್ರೇಮಿಸಿರಿ ತಪ್ಪುಗಳಾ ಮನ್ನಿಸಿರಿ   
ತಾಯಿಯಿರಾ ತಂದೆಯಿರಾ ಸೊದರಿರಾ  ಗೆಳೆಯರಿರಾ
ಹಣ್ಣನು ತರುವೇ ನಾನು ಜೇನನು ತರುವೇ ನಾನು 
ಆಡುವೆ ಜೊತೆಗೆ ನಾನು ರಕ್ಷಣೆ ಮಾಡುವೆ ನಾನು 
ವಚನವ ನೀನು ಉಳಿಸು ವಂಶಕೆ ಕೀರ್ತಿಯ ಗಳಿಸು 
ಅಮ್ಮಾ... ಅಮ್ಮಾ.. ಕಂದಾ.. ಕಂದಾ...    
ಅಮ್ಮಾ... ಅಮ್ಮಾ.. ಕಂದಾ.. ಕಂದಾ...    
ಕಂದನಿಗೆ ಹಾಲನುಣಿಸಿ ಬಂದೆ ಎನ್ನಯ ಮಾತಿನಂತೇ 
ಕೊಂದು ಎನ್ನನ್ನು ಹಸಿವ ತೀರಿಕೋ ನಿಂದಿರುವೇ ಹುಲಿರಾಯನೇ  
ಕಂದನಿಗೆ ಹಾಲನುಣಿಸಿ ಬಂದೆ ಎನ್ನಯ ಮಾತಿನಂತೇ 
ಮೆಚ್ಚಿದ ನಿನ್ನಯ ಸತ್ಯವ  ನಾ ಉಳಿಸುವೇ ನಿನ್ನಯ ಪ್ರಾಣವ 
ಬೇಗನೆ ಓಡಿ ಕಂದನ ಕೂಡಿ ಪಡಿ ನೀ ಚಿರ ಸಂತೋಷವ 
ಪಡಿ ನೀ  ಚಿರ ಸಂತೋಷವ.. 
ಆಆಆಅ ಆಆಆ ಆಆಆ 
ಸತ್ಯಕೆ ಎಂದಿಗೂ ಜಯವೆಂಬ ಸತ್ಯವ ಸಾರುವ ಕಥೆಯೊಂದ
ಹೇಳುವೆ ಕೇಳಿರಿ  ಮಕ್ಕಳಿರಾ ಕನ್ನಡ ಮಾತೆಯ ಮಕ್ಕಳಿರಾ 
ಕನ್ನಡ ಮಾತೆಯ ಮಕ್ಕಳಿರಾ .. ಕನ್ನಡ ಮಾತೆಯ ಮಕ್ಕಳಿರಾ 
ಕನ್ನಡ ಮಾತೆಯ ಮಕ್ಕಳಿರಾ ... ಕನ್ನಡ ಮಾತೆಯ ಮಕ್ಕಳಿರಾ 
------------------------------------------------------------------------------------------------------------------------




No comments:

Post a Comment