234. ವೀರ ಸಂಕಲ್ಪ (1964)

ವೀರ ಸಂಕಲ್ಪ ಚಿತ್ರದ ಹಾಡುಗಳು 
  1. ಕನ್ನಡ ತಾಯಿ ಶ್ರೀ ಭುವನೇಶ್ವರಿ 
  2. ಹಾಡು ಬಾ ಕೋಗಿಲೆ 
  3. ಪರಶಿವನೋ ಸಿರಿವರನೋ 
  4. ಸಿಟ್ಟ್ಯಾಕೋ ಸಿಡಿಕ್ಯಾಕೋ 
  5.  ದುಡುಕದಿರು ಹೃದಯೇಶ 
  6. ಯಾವೂರಯ್ಯಾ ನೀ ಮುಕ್ಕ 
  7. ಯುದ್ಧ ಯುದ್ಧ ಶತ್ರು ಮೈಮೇಲ್ ಬಿದ್ದ 
  8. ಭರತ ಖಂಡದೊಳ 
ವೀರ ಸಂಕಲ್ಪ (1964)
ಸಾಹಿತ್ಯ: ಹುಣಸೂರು ಕೃಷ್ಣಮೂರ್ತಿ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಪಿ. ನಾಗೇಶ್ವರ ರಾವ್

ಕನ್ನಡ ತಾಯೇ ಶ್ರೀ ಭುವನೇಶ್ವರಿ ಕನ್ನಡ ಕುಲಶಕ್ತಿ ರಾಜೇಶ್ವರಿ
ಕನ್ನಡ ತಾಯೇ ಶ್ರೀ ಭುವನೇಶ್ವರಿ ಕನ್ನಡ ಕುಲಶಕ್ತಿ ರಾಜೇಶ್ವರಿ
ಕನ್ನಡ ತಾಯೇ ಶ್ರೀ ಭುವನೇಶ್ವರಿ

ಮುನಿಶೃಂಗ ಹನುಮ ರಾಮ ಮೆರೆದ ನಾಡಿದು 
ಮೌನ ವಿದ್ಯಾರಣ್ಯ ಕಡೆದ ದಿವ್ಯ ಗುಡಿಯಿದು 
ಮುನಿಶೃಂಗ ಹನುಮ ರಾಮ ಮೆರೆದ ನಾಡಿದು 
ಮೌನ ವಿದ್ಯಾರಣ್ಯ ಕಡೆದ ದಿವ್ಯ ಗುಡಿಯಿದು 
ಮಧ್ವ ಬಸವ ಅಲ್ಲಮಾದಿ ಮಹಿಮರೆಲ್ಲರೂ 
ಸಧರ್ಮ ಕೀರ್ತಿ ನೀತಿ ನಡೆದು ಗಿಂಬು ಕೊಟ್ಟರು 
ಸಧರ್ಮ ಕೀರ್ತಿ ನೀತಿ ನಡೆದು ಗಿಂಬು ಕೊಟ್ಟರು 
ಕನ್ನಡ ತಾಯೇ ಶ್ರೀ ಭುವನೇಶ್ವರಿ ಕನ್ನಡ ಕುಲಶಕ್ತಿ ರಾಜೇಶ್ವರಿ
ಕನ್ನಡ ತಾಯೇ ಶ್ರೀ ಭುವನೇಶ್ವರಿ
ಆಆಆ... ಆಆಆ... ಆಆಆ... 

ಪುಲಕೇಶಿ ಹೊಯ್ಸಳಾದಿ ಹಕ್ಕಬುಕ್ಕರು 
ಕಲಿಗಳಾಗಿ ಗಂಡು ನಾಡೆನಿಸಿ ಮೆರೆದರು 
ಆಆಆ.. ಆಆಆ... ಆಆಆ.. 
ಪುಲಕೇಶಿ ಹೊಯ್ಸಳಾದಿ ಹಕ್ಕಬುಕ್ಕರು 
ಕಲಿಗಳಾಗಿ ಗಂಡು ನಾಡೆನಿಸಿ ಮೆರೆದರು 
ದಾನ ಶೀಲ ಕ್ಷಮಾ ಸ್ಥೈರ್ಯ ಸಹನ ತ್ಯಾಗವೂ 
ಜ್ಞಾನ ಭಕ್ತಿಯೊಡನೆ ಮೈಗೂಡಿ ಬಂದವೂ 
ಜ್ಞಾನ ಭಕ್ತಿಯೊಡನೆ ಮೈಗೂಡಿ ಬಂದವೂ 
ಕನ್ನಡ ತಾಯೇ ಶ್ರೀ ಭುವನೇಶ್ವರಿ ಕನ್ನಡ ಕುಲಶಕ್ತಿ ರಾಜೇಶ್ವರಿ
ಕನ್ನಡ ತಾಯೇ ಶ್ರೀ ಭುವನೇಶ್ವರಿ

ಬಲಿದಾನ ತ್ಯಾಗದಿಂದಲೀ ಪ್ರಭುತ್ವರಾಗುವಾ 
ತೇಜ ಸ್ಫೂರ್ತಿಗೊಂಡು ಇಂದು ಸಿದ್ಧರಾಗುವಾ 
ಭಾರತಿಯಾರಾಗಿ ನಾಡ ಬಾಷೆ ಬಲಿಸುವಾ 
(ನಾಡ ಬಾಷೆ ಬಲಿಸುವಾ ನಾಡ ಶಕ್ತಿ ಬಲಿಸುವಾ ) 
ಭಾರತಿಯಾಭಿಮಾನದ ಆಸೆ ಮೇಲ್ಮೆ ಕಾಣುವಾ (ಮೇಲ್ಮೆ ಕಾಣುವಾ)
ಭಾರತಿಯಾಭಿಮಾನದ ಆಸೆ ಮೇಲ್ಮೆ ಕಾಣುವಾ 
 -------------------------------------------------------------------------------------------------------------------------

ವೀರ ಸಂಕಲ್ಪ (1964)
ಸಾಹಿತ್ಯ: ಹುಣಸೂರು ಕೃಷ್ಣಮೂರ್ತಿ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಪಿ. ನಾಗೇಶ್ವರ ರಾವ್

ಹಾಡು ಬಾ ಕೋಗಿಲೇ ನಲಿದಾಡು ಬಾರೆ ನವಿಲೇ
ಸಿರಿಗನ್ನಡಾಂಬೆಯ ಜಯಧ್ವನಿ ಮೊಳಗಲೆ
ಹಾಡು ಬಾ ಕೋಗಿಲೇ ನಲಿದಾಡು ಬಾರೆ ನವಿಲೇ

(ಓಓಓಓಓಓಓ..ಓಓಓಓಓಓಓ.)
ಕನ್ನಡ ನಾಡು ನಮದೆಂದು ಕನ್ನಡಿಗರಿಗದೆ ಗುಡಿಯೆಂದು
(ಆಆಆಆ.... ಆಆಆಆ....ಆಆಆಆ....)
ಕನ್ನಡ ನಾಡು ನಮದೆಂದು ಕನ್ನಡಿಗರಿಗದೆ ಗುಡಿಯೆಂದು
ಕಂಡಕಂಡವರ ಜಡತೆ ನೀಗಿಸಿ ಗಂಡುಗಲಿಗಳ ತಂಡವ ಬೇಳಸೆ
ಹಾಡು ಬಾ ಕೋಗಿಲೇ ನಲಿದಾಡು ಬಾರೆ ನವಿಲೇ
ಸಿರಿಗನ್ನಡಾಂಬೆಯ ಜಯಧ್ವನಿ ಮೊಳಗಲೆ
ಹಾಡು ಬಾ ಕೋಗಿಲೇ ನಲಿದಾಡು ಬಾರೆ ನವಿಲೇ

ಇಂದಿನ ಕೀರ್ತಿಯಗಳಿಸಲು ಬಂದು ಮುಂದಡಿಯಿಡುತ ನಡೆಯಿರೊ ಎಂದು
ಇಂದಿನ ಕೀರ್ತಿಯ ಗಳಿಸಲು ಬಂದು ಮುಂದಡಿಯಿಡುತ ನಡೆಯಿರೊ ಎಂದು
ಮಾರ್ದನಿಗೊಳಲೆ ನಿನ್ನಯ ಸ್ವರವು ಮುಗಿಲಿಗೇರಲೇ ಕನ್ನಡ ಧ್ವಜವು
ಮಾರ್ದನಿಗೊಳಲೆ ನಿನ್ನಯ ಸ್ವರವು ಮುಗಿಲಿಗೇರಲೇ ಕನ್ನಡ ಧ್ವಜವು
ಎಲ್ಲರು :ಹಾಡು ಬಾ ಕೋಗಿಲೇ ನಲಿದಾಡು ಬಾರೆ ನವಿಲೇ
            ಸಿರಿಗನ್ನಡಾಂಬೆಯ ಜಯಧ್ವನಿ ಮೊಳಗಲೆ
            ಹಾಡು ಬಾ ಕೋಗಿಲೇ ನಲಿದಾಡು ಬಾರೆ ನವಿಲೇ
--------------------------------------------------------------------------------------------------------------------

ವೀರ ಸಂಕಲ್ಪ (1964)
ಸಾಹಿತ್ಯ: ಹುಣಸೂರ್ ಕೃಷ್ಣಮೂರ್ತಿ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಲ್.ಆರ್.ಈಶ್ವರಿ

ಪರಶಿವನೋ ಸಿರಿವರನೋ ಧರೆಗಳಿದ ಚಂದಿರನು
ಯಾರಿವನು ಈ ಚೆಲುವಾ ಅರಮನೆಯೊಳ ಜನಿಸಿರುವ
ಪರಶಿವನೋ ಸಿರಿವರನೋ ಧರೆಗಳಿದ ಚಂದಿರನು
ಯಾರಿವನು ಈ ಚೆಲುವಾ ಅರಮನೆಯೊಳ ಜನಿಸಿರುವ 
ಪರಶಿವನೋ ಸಿರಿವರನೋ

ಎಲ್ಲರ ಪ್ರೀತಿಯ ಮಕರಂದ
ಸವಿಯುತ ಬೆಳೆಯುವ ಸುಖದಿಂದ
(ಎಲ್ಲರ ಪ್ರೀತಿಯ ಮಕರಂದ
ಸವಿಯುತ ಬೆಳೆಯುವ ಸುಖದಿಂದ )
ಅಮೃತದ ಹೊಳೆಹರಿಸಿ ಅಮರ ಕೀರ್ತಿಯನು ಗಳಿಸುವನು
(ಅಮೃತದ ಹೊಳೆಹರಿಸಿ ಅಮರ ಕೀರ್ತಿಯನು ಗಳಿಸುವನು
ಪರಶಿವನೋ ಸಿರಿವರನೋ ಧರೆಗಳಿದ ಚಂದಿರನು
ಯಾರಿವನು ಈ ಚೆಲುವಾ ಅರಮನೆಯೊಳ ಜನಿಸಿರುವ 
ಪರಶಿವನೋ ಸಿರಿವರನೋ )

ಕನ್ನಡ ನಾಡಿನ ವೈಭವವ ಉನ್ನತ ಶಿಖರಕೆ ಏರಿಸುವಾ  
(ಕನ್ನಡ ನಾಡಿನ ವೈಭವವ ಉನ್ನತ ಶಿಖರಕೆ ಏರಿಸುವಾ  )
ಭುಜ ಬಲದೊಳ ಅಜೇಯನೆನಸಿ ವಿಜಯ ಧ್ವಜವನು ಹಾರಿಸುವಾ 
(ಭುಜ ಬಲದೊಳ ಅಜೇಯನೆನಸಿ ವಿಜಯ ಧ್ವಜವನು ಹಾರಿಸುವಾ 
ಪರಶಿವನೋ ಸಿರಿವರನೋ ಧರೆಗಳಿದ ಚಂದಿರನು
ಯಾರಿವನು ಈ ಚೆಲುವಾ ಅರಮನೆಯೊಳ ಜನಿಸಿರುವ 
ಪರಶಿವನೋ ಸಿರಿವರನೋ ಧರೆಗಳಿದ ಚಂದಿರನು
ಪರಶಿವನೋ ಸಿರಿವರನೋ  )
--------------------------------------------------------------------------------------------------------------------

ವೀರ ಸಂಕಲ್ಪ (1964)
ಸಾಹಿತ್ಯ: ಹುಣಸೂರ್ ಕೃಷ್ಣಮೂರ್ತಿ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಲ್.ಆರ್.ಈಶ್ವರಿ

ಸಿಟ್ಯಾಕೊ ಸಿಡುಕ್ಯಾಕೊ ನನ ಜಾಣ.. ಅ.... ಹೊಯ್
ಇಟ್ಟಾಯ್ತೊ ನಿನ ಮೇಲೆ ನನ ಪ್ರಾಣ...ಹೂಂಹ್ಹೂ
ಒಟ್ಟೀಗೆ ಇರುವ, ಒಟ್ಟಾಗೆ ಮಡಿವ  ಕಟ್ಟಾಣೆ ಕೊಟ್ಟೆನ್ನ ಕೈಗೊಳ್ಳೊ
ಸಿಟ್ಯಾಕೊ ಸಿಡುಕ್ಯಾಕೊ ನನ ಜಾಣ  ಇಟ್ಟಾಯ್ತೊ ನಿನ ಮೇಲೆ ನನ ಪ್ರಾಣ
ಒಟ್ಟೀಗೆ ಇರುವ, ಒಟ್ಟಾಗೆ ಮಡಿವ  ಕಟ್ಟಾಣೆ ಕೊಟ್ಟೆನ್ನ ಕೈಗೊಳ್ಳೊ
ಆಂ..  ಕಟ್ಟಾಣೆ ಕೊಟ್ಟೆನ್ನ ಕೈಗೊಳ್ಳೊ  ಸಿಟ್ಯಾಕೊ ಸಿಡುಕ್ಯಾಕೊ ನನ ಜಾಣ..  ಓಹ್ಹೋ..
ತಂದಾನ ತಾನ್ ತನ್ನ ಥೈಯ್ಯ ತಾನ್  ತಂದಾನ ತನ್ನ

ಎಲೆ ಮರೆಯ ಹಣ್ಣಂತೆ ಹಾಯಾಗಿ  ರಸ ತುಂಬಿ ಕುಳಿತಿದ್ದೆ ತನಿಯಾಗಿ
ಎಲೆ ಮರೆಯ ಹಣ್ಣಂತೆ ಹಾಯಾಗಿ  ರಸ ತುಂಬಿ ಕುಳಿತಿದ್ದೆ ತನಿಯಾಗಿ
ಗಿಣಿಯಂತೆ ಇಣುಕಿ ಬಂದೆನ್ನ ಕೆಣಕಿ  ಹತ್ತಿದೆ ಮೋಹದ ಉರಿ ಬೆಂಕಿ
ಹತ್ತಿದೆ ಮೋಹದ ಉರಿ ಬೆಂಕಿ ...  ಹ್ಹೋ ಹೋ 
ಸಿಟ್ಯಾಕೊ ಸಿಡುಕ್ಯಾಕೊ ನನ ಜಾಣ  ಇಟ್ಟಾಯ್ತೊ ನಿನ ಮೇಲೆ ನನ ಪ್ರಾಣ
ಒಟ್ಟೀಗೆ ಇರುವ, ಒಟ್ಟಾಗೆ ಮಡಿವ  ಕಟ್ಟಾಣೆ ಕೊಟ್ಟೆನ್ನ ಕೈಗೊಳ್ಳೊ
ಆಂ.. ಕಟ್ಟಾಣೆ ಕೊಟ್ಟೆನ್ನ ಕೈಗೊಳ್ಳೊ  ಸಿಟ್ಯಾಕೊ ಸಿಡುಕ್ಯಾಕೊ ನನ ಜಾಣ ... ಒಹ್ಹೋ

ತಂಗಾಳಿ ಮೈಗೆ ಮುಳ್ಳಾಯ್ತು  ತಿಂಗಾಳ ಬೆಳಕು ಬಿಸಿಲಾಯ್ತು
ತಂಗಾಳಿ ಮೈಗೆ ಮುಳ್ಳಾಯ್ತು  ತಿಂಗಾಳ ಬೆಳಕು ಬಿಸಿಲಾಯ್ತು
ಹಗಲೆಲ್ಲ ನೆನಸಿ, ಇರುಳೆಲ್ಲ ಬಯಸಿ   ದಣಿದಾಯ್ತು ನಿನಗಾಗಿ ಕಾತರಿಸಿ
ದಣಿದಾಯ್ತು ನಿನಗಾಗಿ ಕಾತರಿಸಿ.. ಅಹ್ಹಹ್ಹಾ
ಸಿಟ್ಯಾಕೊ ಸಿಡುಕ್ಯಾಕೊ ನನ ಜಾಣ  ಇಟ್ಟಾಯ್ತೊ ನಿನ ಮೇಲೆ ನನ ಪ್ರಾಣ
ಒಟ್ಟೀಗೆ ಇರುವ, ಒಟ್ಟಾಗೆ ಮಡಿವ  ಕಟ್ಟಾಣೆ ಕೊಟ್ಟೆನ್ನ ಕೈಗೊಳ್ಳೊ
ಆಂ.. ಕಟ್ಟಾಣೆ ಕೊಟ್ಟೆನ್ನ ಕೈಗೊಳ್ಳೊ  ಸಿಟ್ಯಾಕೊ ಸಿಡುಕ್ಯಾಕೊ ನನ ಜಾಣ ... ಒಹ್ಹೋ
ತಂದಾನ ತಾನ್ ತನ್ನ ಥೈಯ್ಯ ತಾನ್  ತಂದಾನ ತನ್ನ
ತಂದಾನ ತಾನ್ ತನ್ನ ಥೈಯ್ಯ ತಾನ್  ತಂದಾನ ತನ್ನ
--------------------------------------------------------------------------------------------------------------------------

ವೀರ ಸಂಕಲ್ಪ (1964)
ಸಾಹಿತ್ಯ: ಹುಣಸೂರ್ ಕೃಷ್ಣಮೂರ್ತಿ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಲ್.ಆರ್.ಈಶ್ವರಿ

ದುಡುಕದಿರು ಹೃದಯೇಶ  ಧಣಿಯದಿರ ಎನ್ನರಸ
ಹೋಗದಿರೂ ಹೃದೆಯೇಶ
ದುಡುಕದಿರು ದುಡುಕದಿರು ದುಡುಕದಿರು ಹೃದಯೇಶ 
ದುಡುಕದಿರು ದುಡುಕದಿರು ದುಡುಕದಿರು ಹೃದಯೇಶ 
ದುಡುಕಿ ನೀ ರಣದೊಳಗೆ ದಣಿಯದಿರು ಎನ್ನರಸ 
ದುಡುಕದಿರು ದುಡುಕದಿರು ದುಡುಕದಿರು ಹೃದಯೇಶ   

ಕಾಣಬಾರದ ಕನಸ ನೂರಾರು ಕಂಡಿರುವೇ 
ಕಾಣಬಾರದ ಕನಸ ನೂರಾರು ಕಂಡಿರುವೇ 
ಪ್ರಾಣನಾಥ ನಿನಗೆ ಹೇಳದೆ ಸುಮ್ಮನಿರುವೇ 
ಇಂದೇನೋ ಆಗುವುದೋ ಇನ್ನೇನು ಕಾದಿಹುದೋ 
ಏನೇನೋ ಆಗುವುದೋ ಮುಂದೇನು ಕಾದಿಹುದೋ 
ಎಂದೆನ್ನ ಮನದೊಳಗೆ ಚಿಂತಿಸುತ ಬೆಂದಿಹೆನು 
ದುಡುಕದಿರು ದುಡುಕದಿರು ದುಡುಕದಿರು ಹೃದಯೇಶ 

ಚದುರಂಗ ಬಲವೆಲ್ಲಾ ಚದುರಿ ಹೋಗುದ ಕಂಡೇ 
ಚದುರಂಗ ಬಲವೆಲ್ಲಾ ಚದುರಿ ಹೋಗುದ ಕಂಡೇ 
ಅದರಿಂದ ನೀ ಬೆದರಿ ಬಂದಿಯಾಗುದ ಕಂಡೇ 
ಓಡೋಡಿ ಬಂದವರು ಇರಿದಾಡಿ ನಿನ್ನೆದೆಯ 
ಓಡೋಡಿ ಬಂದವರು ಇರಿದಾಡಿ ನಿನ್ನೆದೆಯ 
ಅರಮನೆಯಲಾಡಿದರೂ ರಕುತದ ಕಲೆಯಾ 
ದುಡುಕದಿರು ದುಡುಕದಿರು ದುಡುಕದಿರು ಹೃದಯೇಶ   
--------------------------------------------------------------------------------------------------------------------------

ವೀರ ಸಂಕಲ್ಪ (1964)
ಸಾಹಿತ್ಯ: ಹುಣಸೂರ್ ಕೃಷ್ಣಮೂರ್ತಿ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಲ್.ಆರ್.ಈಶ್ವರಿ

ಯಾವೂರಯ್ಯ ನೀ  ಮುಕ್ಕ ಯಾಕೆ ನಿಂತ್ಯೋ ನನ್ನ ಪಕ್ಕ
ಸಿಕ್ಕಲಾರದ ಹೆಣ್ಣಿಗ್ಯಾಕೆ ಕಣ್ಣ ನೀಡ್ತೀಯೋ
ದಕ್ಕಲಾರದ ಹಣ್ಣಿಗ್ಯಾಕೆ ಬಾಯಿ ಬಿಡ್ತೀಯೋ
ಯಾವೂರಯ್ಯ ಈ ಯಾವೂರಯ್ಯ ಹ್ಹ.. ಯಾವೂರಯ್ಯ
ನೀ  ಮುಕ್ಕ ಯಾಕೆ ನಿಂತ್ಯೋ ನನ್ನ ಪಕ್ಕ
ಸಿಕ್ಕಲಾರದ ಹೆಣ್ಣಿಗ್ಯಾಕೆ ಕಣ್ಣ ನೀಡ್ತೀಯೋ
ದಕ್ಕಲಾರದ ಹಣ್ಣಿಗ್ಯಾಕೆ ಬಾಯಿ ಬಿಡ್ತೀಯೋ
ಯಾವೂರಯ್ಯ ಯಾವೂರಯ್ಯ ಯಾವೂರಯ್ಯ 

ಊರು ಕೇರಿ ರಾಜರೆಲ್ಲಾ ಹಾರಿ ತಿರುವಿ ಮೀಸೆಯೆರೆಲ್ಲ   
ನನ್ನ ಕೆಣಕಿ ಕರೆದರಲ್ಲಾ ನಾನು ಕಣ್ಣ ನೆತ್ತಿ ನೋಡಲಿಲ್ಲಾ
ಹ್ಹಾಹಾಹಾ..  ಓಹ್ಹೋಹೋಹೊ  
ಊರು ಕೇರಿ ರಾಜರೆಲ್ಲಾ ಹಾರಿ ತಿರುವಿ ಮೀಸೆಯೆರೆಲ್ಲ   
ನನ್ನ ಕೆಣಕಿ ಕರೆದರಲ್ಲಾ ನಾನು ಕಣ್ಣ ನೆತ್ತಿ ನೋಡಲಿಲ್ಲಾ
ಹಾಲು ಕುಡಿವ ಹೈದ ನೀನು ಹಲ್ಲು ಕಿರಿದು ನಾಕವೇನೋ  
ಹಾಲು ಕುಡಿವ ಹೈದ ನೀನು ಹಲ್ಲು ಕಿರಿದು ನಾಕವೇನೋ 
ಮೊರೆ ನಿನ್ನ ಮೋಹವನ್ನು ನಾನು ಮದುವೆಯಾದ್ರೆ ಸುಖವೇನೋ 
ಯಾವೂರಯ್ಯ ನೀ  ಮುಕ್ಕ ಯಾಕೆ ನಿಂತ್ಯೋ ನನ್ನ ಪಕ್ಕ
ಸಿಕ್ಕಲಾರದ ಹೆಣ್ಣಿಗ್ಯಾಕೆ ಕಣ್ಣ ನೀಡ್ತೀಯೋ
ದಕ್ಕಲಾರದ ಹಣ್ಣಿಗ್ಯಾಕೆ ಬಾಯಿ ಬಿಡ್ತೀಯೋ
ಯಾವೂರಯ್ಯ ಯಾವೂರಯ್ಯ ಯಾವೂರಯ್ಯ

ನನ್ನ ನಿನ್ನ ವ್ಯಾಪಾರ ಗಿಟ್ಟೋದಿಲ್ಲ ಸರದಾರ
ಸಾಕು ಮಾಡೋ ತಕರಾರ ಓ ಮುಕ್ಕ ಕೇಳೋ ನನ್ನ ನಿರ್ಧಾರ
ಓಹೋಹೋಹೊಹೋ.. ಆಹಾಹಾ.. ಆಆಆ...
ನನ್ನ ನಿನ್ನ ವ್ಯಾಪಾರ ಗಿಟ್ಟೋದಿಲ್ಲ ಸರದಾರ
ಸಾಕು ಮಾಡೋ ತಕರಾರ ಓ ಮುಕ್ಕ ಕೇಳೋ ನನ್ನ ನಿರ್ಧಾರ
ಮದುವೆಯನ್ನೋ ಗಮ್ಮತ್ತು ಕೂಡಿ ಬಾಳೋ ಕಿಮ್ಮತ್ತು 
ಮದುವೆಯನ್ನೋ ಗಮ್ಮತ್ತು ಕೂಡಿ ಬಾಳೋ ಕಿಮ್ಮತ್ತು 
ಬಲ್ಲ ಹುಡುಗ ಬೇಕಿತ್ತೂ ನನಗೆ ಅವನ ಮೇಲೆ ಮೋಹಬ್ಬತ್ತು  
ಯಾವೂರಯ್ಯ ನೀ  ಮುಕ್ಕ ಯಾಕೆ ನಿಂತ್ಯೋ ನನ್ನ ಪಕ್ಕ
ಸಿಕ್ಕಲಾರದ ಹೆಣ್ಣಿಗ್ಯಾಕೆ ಕಣ್ಣ ನೀಡ್ತೀಯೋ
ದಕ್ಕಲಾರದ ಹಣ್ಣಿಗ್ಯಾಕೆ ಬಾಯಿ ಬಿಡ್ತೀಯೋ
ಯಾವೂರಯ್ಯ ಯಾವೂರಯ್ಯ ಯಾವೂರಯ್ಯ
ಯ್ಯಾ...ಯ್ಯಾ... ಯ್ಯಾ... ಯ್ಯಾ... ಯ್ಯಾ... ಯ್ಯಾ... ಯ್ಯಾ...  
--------------------------------------------------------------------------------------------------------------------------

ವೀರ ಸಂಕಲ್ಪ (1964)
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ಶ್ರೀ.ಭಾರತಿಂದ್ರಸ್ವಾಮಿ ಹಾಡಿದವರು: ಸಂಗಡಿಗರು

ಕನ್ನಡದಾ ತಾಯಿ ಶ್ರೀಭುವನೇಶ್ವರಿ
ಕನ್ನಡದಾ ಕುಲಶಕ್ತಿ ರಾಜೇಶ್ವರಿ

ಮುನಿಶೃಂಗ ಹನುಮ ರಾಮ ಮರೆದ ನಾಡಿದು
ಮೌನಿ ವಿದ್ಯಾರಣ್ಯ ಕಡೆದ ಗುಡಿಯಿದು
ಮಧ್ವ ಬಸವ ಅಲ್ಲಮಾದಿ ಮಹಿಮರೆಲ್ಲರೂ
ಸದ್ಧರ್ಮ ಕೀರ್ತಿ ನೀತಿ ನಡತೆಗಿಂಬು ಕೊಟ್ಟರು
ಕನ್ನಡದಾ ತಾಯಿ ಶ್ರೀಭುವನೇಶ್ವರಿ
ಕನ್ನಡದಾ ಕುಲಶಕ್ತಿ ರಾಜೇಶ್ವರಿ

ಪುಲಕೇಶಿ ಹೊಯ್ಸಳಾದಿ ಹಕ್ಕ ಬುಕ್ಕರು 
ಕಲಿಗಳಾಗಿ ಗಂಡು ನಾಡೆನಿಸಿ ಮೆರೆದರೂ 
ದಾನ ಶೀಲ ಕ್ಷಮಾ ಸ್ಥೈರ್ಯ ಸಹನೆ ತ್ಯಾಗವು 
ಜ್ಞಾನವು ಭಕ್ತಿಯೊಡನೆ ಮೈಗೂಡಿ ಬಂದವು 
ಕನ್ನಡದಾ ತಾಯಿ ಶ್ರೀಭುವನೇಶ್ವರಿ
ಕನ್ನಡದಾ ಕುಲಶಕ್ತಿ ರಾಜೇಶ್ವರಿ 

ಬಲಿದಾನ ತ್ಯಾಗದಿಂದಲಿ ಪ್ರಬುದ್ಧರಾಗುವ 
ಬಲತೇಜ ಸ್ಫೂರ್ತಿಗೊಂಡು ಇಂದು ಸಿದ್ಧರಾಗುವ 
ಭಾರತೀಯರಾಗಿ ನಾಡಭಾಷೆ ಬಲಿಸುವಾ 
ನಾಡಭಾಷೆ ಬಲಿಸುವಾ ಭಾರತಿಯಾಭಿಮಾನದಾತೆ
ಮೇಲ್ಮೈ ಕಾಣುವಾ... ಮೇಲ್ಮೈ ಕಾಣುವಾ
ಕನ್ನಡದಾ ತಾಯಿ ಶ್ರೀಭುವನೇಶ್ವರಿ
ಕನ್ನಡದಾ ಕುಲಶಕ್ತಿ ರಾಜೇಶ್ವರಿ 
-------------------------------------------------------------------------------------------------------------------------

ವೀರ ಸಂಕಲ್ಪ (1964)
ಸಾಹಿತ್ಯ: ಹುಣಸೂರ್ ಕೃಷ್ಣಮೂರ್ತಿ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಡಿ.ಮೋಹನ್ ಸುಂದರಂ 

ಭರತ ಖಂಡದೊಳಗೆಲ್ಲಾ  ಭವ್ಯ ಸಾಮ್ರಾಜ್ಯವೆನಿಸಿತ್ತು
ವಿಜಯನಗರದ ಕೀರ್ತಿ ಹೋಳಾಗಿ ಹೋಯಿತಯ್ಯಾ..
ತಿರುಗಿ ನೋಡಿದ ಕಡೆಯಲ್ಲಾ ಗುಡಿ ಗೋಪುರಗಳೂ
ಮುರಿದು ಬಿದ್ದದವಯ್ಯಾ ಅಯ್ಯೋ ಉರಿಯುವುದೋ ಎಂಥ ಕರಳೋ
ಹಂಪೆಯೋ ಇಲ್ಲಾ ಇದು ಹಾಳು ಕೊಂಪೆಯೋ
ನಾವು ಗೈದ ಕರ್ಮ ಫಲವೋ ಹಿರಿಯರೋ ವಿರೂಪಾಕ್ಷ
-------------------------------------------------------------------------------------------------------------------------

ವೀರ ಸಂಕಲ್ಪ (1964)
ಸಾಹಿತ್ಯ: ಹುಣಸೂರ್ ಕೃಷ್ಣಮೂರ್ತಿ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಡಿ.ಮೋಹನ್ ಸುಂದರಂ 

ಯುದ್ಧ...  ಯುದ್ಧ ಯುದ್ಧ ಶತ್ರು ಮೈಮೇಲೆ ಬಿದ್ದ
ನಿದ್ದೆ ಮಾಡೋದು ಬಿಟ್ಟು ಎದ್ದು ಹಾಕೋ ಬೆನ್ನ ಮೇಲೆ ಗುದ್ದಾ
ಯುದ್ಧ...  ಯುದ್ಧ ಯುದ್ಧ ಶತ್ರು ಮೈಮೇಲೆ ಬಿದ್ದ
ನಿದ್ದೆ ಮಾಡೋದು ಬಿಟ್ಟು ಎದ್ದು ಹಾಕೋ ಬೆನ್ನ ಮೇಲೆ ಗುದ್ದಾ
ಯುದ್ಧ...  ಯುದ್ಧ ಯುದ್ಧ 

ಅಯ್ಯಯ್ಯಯ್ಯೋ ಇವನು ಒಬ್ಬಕೂ  ಚೇಲಾ 
ರಕ್ತ ಮಾಂಸ ಏನು ಇಲ್ಲಾ ಒಣಗಿದ ಚರ್ಮದ ಚೀಲ 
ಗುಡಿಸೋ ಇವನಿಗೆ ಭರ್ಜರಿಯಾದ ಬಾದಾಮಿ ಹಾಲ 
ಕೂಡಲಿ ಬರಲಿ ಮೈಕೈ ತುಂಬಿ ಭೀಮನ ಬಾಹುಬಲ 
ಕೊಡೋ ... ಕುಡಿ.. ಕುಡಿ.. ಕುಡಿ..    
ಯುದ್ಧ...  ಯುದ್ಧ ಯುದ್ಧ ಶತ್ರು ಮೈಮೇಲೆ ಬಿದ್ದ
ನಿದ್ದೆ ಮಾಡೋದು ಬಿಟ್ಟು ಎದ್ದು ಹಾಕೋ ಬೆನ್ನ ಮೇಲೆ ಗುದ್ದಾ
ಯುದ್ಧ...  ಯುದ್ಧ ಯುದ್ಧ 

ಅಬ್ಬಬ್ಬಾಬ್ಬಾ.. ಬೊಜ್ಜು ಬೆಳೆದ ಹೊಟ್ಟೆ ಇದ್ದರೇ ಹೆಜ್ಜೆ ಹಾಕೋಕ ಆಪತ್ತು
ಬೊಜ್ಜು ಬೆಳೆದ ಹೊಟ್ಟೆ ಇದ್ದರೇ ಹೆಜ್ಜೆ ಹಾಕೋಕ ಆಪತ್ತು
ಬೊಜ್ಜು ಕರಗಲು ಮಜ್ಜಿಗೆ ಕುಡಿದು ಮಾಡಬೇಕು ಕಸರತ್ತು 
ಕಸರತ್ತು... ಕೂಡು.. ಏಳು   ಕೂಡು.. ಏಳು ಕೂಡು.. ಏಳು
ಕೂಡು.. ಏಳುಕೂಡು.. ಏಳುಕೂಡು.. ಏಳುಕೂಡು.. ಏಳು 
ಯುದ್ಧ...  ಯುದ್ಧ ಯುದ್ಧ ಶತ್ರು ಮೈಮೇಲೆ ಬಿದ್ದ
ನಿದ್ದೆ ಮಾಡೋದು ಬಿಟ್ಟು ಎದ್ದು ಹಾಕೋ ಬೆನ್ನ ಮೇಲೆ ಗುದ್ದಾ
ಯುದ್ಧ...  ಯುದ್ಧ ಯುದ್ಧ 

ಎಲ್ಲರು ಇಲ್ಲಿ ನೆಟ್ಟಗೆ ನಿಲ್ಲಿ ಕತ್ತಿಯ ಮೇಲೆ ಕೈಯಿರಲೀ
ಏನೇ ಬರಲಿ ಒಗ್ಗಟ್ಟು ಇರಲಿ ವೈರಿ ಮೇಲೆ ಗುರಿ ಇರಲೀ
ಎಡಗಾಲ್ ಯಾಡ್  ಇಡ್ ಎಡ ಎಡ್
ಬಲಗಾಲ ಯಾಡ್ ಬಲ ಬಲ ಬಲ
ಎಡ ಬಲ ಎಡ ಬಲ ಎಡ ಬಲ
ಎರಡು ಕಾಲು ಒಟ್ಟಿಗೆ ಜಾಡಿಸೂ
ಯುದ್ಧ...  ಯುದ್ಧ ಯುದ್ಧ ಶತ್ರು ಮೈಮೇಲೆ ಬಿದ್ದ
ನಿದ್ದೆ ಮಾಡೋದು ಬಿಟ್ಟು ಎದ್ದು ಹಾಕೋ ಬೆನ್ನ ಮೇಲೆ ಗುದ್ದಾ
ಯುದ್ಧ...  ಯುದ್ಧ ಯುದ್ಧ 
------------------------------------------------------------------------------------------------------------------------

No comments:

Post a Comment