235. ಅಪರಂಜಿ (1984)




ಅಪರಂಜಿ ಚಲನಚಿತ್ರದ ಹಾಡುಗಳು 
  1. ಹಾಡು ತಂದ ಈ ಮೋಡಿಯಲ್ಲಿ
  2. ಕಣ್ಣಂಚ ಮಿಂಚಲ್ಲಿ ಮಾತಾಡಿದೆ 
  3. ಮಧುಮಾಸದ ಮಧುಹೀರುವ
  4. ಮೋಹನ  ಮುರುಳಿಯ 

ಅಪರಂಜಿ (1984) - ಹಾಡು ತಂದ ಈ ಮೋಡಿಯಲ್ಲಿ
ಸಾಹಿತ್ಯ: ವಿಜಯನಾರಸಿಂಹ   ಸಂಗೀತ: ಎಂ.ರಂಗ ರಾವ್  ಹಾಡಿದವರು: ವಾಣಿ ಜಯರಾಮ್


ಹಾಡು ತಂದ ಈ ಮೋಡಿಯಲ್ಲಿ
ಏಕೆಂದೊ ಏನೆಂದೊ ನಾನೋಡಿ ಬಂದೆ
ಹಾಡು ತಂದ ಈ ಮೋಡಿಯಲ್ಲಿ
ಏಕೆಂದೊ ಏನೆಂದೊ ನಾನೋಡಿ ಬಂದೆ
ಏನೇನು ಸಂಕೇತವೊ
ಏನೇನು ಸಂದೇಶವೊ
ಕೆನ್ನೆ ಕೆಂಪು ತೋರಿ ನಾನು ಬಂದೆ
ಕಣ್ಣು ಕೆಂಪು ತೋರಿ ನೀನು ನಿಂದೆ
ಕೆನ್ನೆ ಕೆಂಪು ತೋರಿ ನಾನು ಬಂದೆ
ಕಣ್ಣು ಕೆಂಪು ತೋರಿ ನೀನು ನಿಂದೆ
ಎಂಥ ಎಂಥ ಮತ್ತು ಒಳ್ಳೆ ಒಳ್ಳೆ ಹೊತ್ತು
ನನ್ನ ನಿನ್ನ ಕೂಡಿ ಬಂತು
ಹಾಡು ತಂದ ಈ ಮೋಡಿಯಲ್ಲಿ
ಏಕೆಂದೊ ಏನೆಂದೊ ನಾನೋಡಿ ಬಂದೆ
ಏನೇನು ಸಂಕೇತವೊ
ಏನೇನು ಸಂದೇಶವೊ

ಹೆಣ್ಣು ಎಂದರೆ ಎಲ್ಲ ತೊಂದರೆ
ಸಂಗಾತಿ ಇರದಾಗೆ ಸೆರೆ ಆಸರೆ
ಹೆಣ್ಣು ಎಂದರೆ ಎಲ್ಲ ತೊಂದರೆ
ಸಂಗಾತಿ ಇರದಾಗೆ ಸೆರೆ ಆಸರೆ
ಸಾವೋ ನೋವೋ ಏನೋ ಗುರಿಯದು ಬೇರೆ
ಅಂದ ಚಂದ ಎಲ್ಲ ಇಲ್ಲಿ ಬಂತು
ಹೆಣ್ಣು ಗಂಡು ಕಣ್ಣ ಮಿಂಚು ತಂತು
ಅಂದ ಚಂದ ಎಲ್ಲ ಇಲ್ಲಿ ಬಂತು
ಹೆಣ್ಣು ಗಂಡು ಕಣ್ಣ ಮಿಂಚು ತಂತು
ಚಿತ್ತ ಚಿತ್ತ ಚಿತ್ತು ನಂಗೆ ನಿಂಗೆ ಗೊತ್ತು
ಇಂತ ಚಿನ್ನ ನಿನ್ನ ಸೊತ್ತು
ಹಾಡು ತಂದ ಈ ಮೋಡಿಯಲ್ಲಿ
ಏಕೆಂದೊ ಏನೆಂದೊ ನಾನೋಡಿ ಬಂದೆ
ಏನೇನು ಸಂಕೇತವೊ
ಏನೇನು ಸಂದೇಶವೊ
ಇಂತ ಬಂಧನ ಎಂತ ಜೀವನ
ಈ ದೀನ ಬಾಳಲ್ಲಿ ಗತಿ ದಾರುಣ
ಇಂತ ಬಂಧನ ಎಂತ ಜೀವನ
ಈ ದೀನ ಬಾಳಲ್ಲಿ ಗತಿ ದಾರುಣ
ಬಂದೇ ಆದೇ ಇಂದು ತಿಳಿಯದು ತಾಣ
ಮೈಯ ಮೈಯ ತೀಡಿ ತೀಡಿ ನಿಂತು
ಕೈಯ ಕೈಯ ಕೂಡಿ ಬೇಡಿ ತಂತು
ಮೈಯ ಮೈಯ ತೀಡಿ ತೀಡಿ ನಿಂತು
ಕೈಯ ಕೈಯ ಕೂಡಿ ಬೇಡಿ ತಂತು
ಜೀವ ಜೀವ ಸಂಗ ಭಾವ ಬಾಳ ರಂಗ
ನನ್ನ ನಿನ್ನ ಮೋಹ ಮುತ್ತು
ಹಾಡು ತಂದ ಈ ಮೋಡಿಯಲ್ಲಿ
ಏಕೆಂದೊ ಏನೆಂದೊ ನಾನೋಡಿ ಬಂದೆ
ಏನೇನು ಸಂಕೇತವೊ
ಏನೇನು ಸಂದೇಶವೊ
ಕೆನ್ನೆ ಕೆಂಪು ತೋರಿ ನಾನು ಬಂದೆ
ಕಣ್ಣು ಕೆಂಪು ತೋರಿ ನೀನು ನಿಂದೆ
ಕೆನ್ನೆ ಕೆಂಪು ತೋರಿ ನಾನು ಬಂದೆ
ಕಣ್ಣು ಕೆಂಪು ತೋರಿ ನೀನು ನಿಂದೆ
ಎಂಥ ಎಂಥ ಮತ್ತು ಒಳ್ಳೆ ಒಳ್ಳೆ ಹೊತ್ತು
ನನ್ನ ನಿನ್ನ ಕೂಡಿ ಬಂತು
---------------------------------------------------------------------------------------------------------------------

ಅಪರಂಜಿ (1984) - ಕಣ್ಣಂಚ ಮಿಂಚಲ್ಲಿ ಮಾತಾಡಿದೆ 

ಸಂಗೀತ: ಎಂ.ರಂಗ ರಾವ್ ಸಾಹಿತ್ಯ: ವಿಜಯನಾರಸಿಂಹ ಹಾಡಿದವರು: ಎಸ್.ಪಿ.ಬಿ., ವಾಣಿ ಜಯರಾಮ್


ಕಣ್ಣಂಚ ಮಿಂಚಲ್ಲಿ ಮಾತಾಡಿದೆ  ಆ ಸನ್ನೆ ಏನೆಂದು ನಾ ಕೇಳಿದೆ
ನೀ ಕಥೆ ಹೇಳಿದೆ, ಈ ಜೊತೆ ಬೇಡಿದೆ
ಇದು ಕನಸಂತೆ ಎಂದೆಂದು ಸುಳ್ಳಾಗಿದೆ
ಅಂದಿನ ಆ ಮಾತು ಇಂದೇತಕೆ  ಇಂದಿನ ಆ ಚಿಂತೆ ನಿನಗೇತಕೆ
ಅಂದಿನ ಆ ಮಾತು ಇಂದೇತಕೆ  ಇಂದಿನ ಆ ಚಿಂತೆ ನಿನಗೇತಕೆ
ಹೆಣ್ಣಿನ ಬಾಳೆಲ್ಲ ಕಣ್ಣೀರ ಕಡಲಂತೆ
ಕೈಸೇರದಾಸೆ ನೂರಂತೆ, ಅದು ನೂರಂತೆ
ನಿನಗಾಗಿ ನಾನಿರುವೆ ಭಯವೇತಕೆ  ಕಣ್ಣಂಚ ಮಿಂಚಲ್ಲಿ ಮಾತಾಡಿದೆ
ಆ ಸನ್ನೆ ಏನೆಂದು ನಾ ಕೇಳಿದೆ  ನೀ ಕಥೆ ಹೇಳಿದೆ, ಈ ಜೊತೆ ಬೇಡಿದೆ
ಇದು ಕನಸಂತೆ ಎಂದೆಂದು ಸುಳ್ಳಾಗಿದೆ
ಪ್ರೀತಿಗೆ ನಾನೆಂದು ಹೋರಾಡುವೆ  ಸೋಲದ ಗಂಡಾಗಿ ನಾ ಗೆಲ್ಲುವೆ
ಪ್ರೀತಿಗೆ ನಾನೆಂದು ಹೋರಾಡುವೆ ಸೋಲದ ಗಂಡಾಗಿ ನಾ ಗೆಲ್ಲುವೆ
ಈ ಗಾಳಿ ಬೆಳಕಂತೆ ಆಕಾಶ ಧರೆಯಂತೆ
ಇದು ನಿತ್ಯ ಸತ್ಯ ರವಿಯಂತೆ, ಆ ಶಶಿಯಂತೆ
ನಾ ನಿನ್ನ ಬಿಡಲಾರೆ ಜೊತೆ ಸೇರುವೆ
ನಮ್ಮಾಸೆ ಇಂದೇನೆ ಈಡೇರಿದೆ
ಈ ಬಾಳು ಎಂದೆಂದು ಬೆಳಕಾಗಿದೆ
ನೀ ನಿಜ ಹೇಳಿದೆ, ನಾ ಜೊತೆ ಸೇರಿದೆ
ಇದು ನನಸಾಗಿ ನಮಗಿಂದು ಸುಖ ತಂದಿದೆ
--------------------------------------------------------------------------------------------------------------------


ಅಪರಂಜಿ (1984) - ಮಧುಮಾಸದ ಮಧುಹೀರುವ

ಸಂಗೀತ: ಎಂ.ರಂಗ ರಾವ್, ಸಾಹಿತ್ಯ: ವಿಜಯನಾರಸಿಂಹ ಹಾಡಿದವರು: ಎಸ್.ಪಿ.ಬಿ., ವಾಣಿ ಜಯರಾಮ್

ಮಧುಮಾಸದ ಮಧುಹೀರುವ
ಮನಮೋಹನ ಈ ಯೌವನ
ಸೌಂಧರ್ಯದ ಸೌಭಾಗ್ಯದ
ಆನಂದವೇ ಈ ಜೀವನ
ಉಲ್ಲಾಸದ ಉಯ್ಯಾಲೆಯ ಆ ಎಲ್ಲೆಯ ಮೀರೋಣ ಬಾ ಬಾ ಬಾ ಬಾ
ಆಕಾಶದ ಆ ತಾರೆಯ ಆ ಚಂದ್ರನ ಕೂಡೋಣ ಬಾ ಬಾ ಬಾ ಬಾ
ಮಧುಮಯ ರಸಿಕತೆ ಕಾಣುವ ಬಾ
ಮೋಜಿನ ಮೋಹವ ತೋರುತ ಬಾ
ಮಧುಮಯ ರಸಿಕತೆ ಕಾಣುವ ಬಾ
ಮೋಜಿನ ಮೋಹವ ತೋರುತ ಬಾ
ಈ ಅಂದ ಈ ಚಂದ ನಾವಾಗುವ
ಮಧುಮಾಸದ ಮಧುಹೀರುವ
ಮನಮೋಹನ ಈ ಯೌವನ
ಸೌಂಧರ್ಯದ ಸೌಭಾಗ್ಯದ
ಆನಂದವೇ ಈ ಜೀವನ

ಆ ಮತ್ತಿನ ಸವಿಜೇನಿನ ನಿಶೆಯೆಲ್ಲವ ಸವಿಯೋಣ ಬಾ ಬಾ ಬಾ ಬಾ
ಆ ಸ್ವರ್ಗದ ಸೋಪಾನವ ಒಂದಾಗುತ ಹೀರೋಣ ಬಾ ಬಾ ಬಾ ಬಾ
ಕನಸನು ನನಸಲಿ ಕಾಣುವ ಬಾ
ಆತುರ ಕಾತರ ನೀಗುತ ಬಾ
ಕನಸನು ನನಸಲಿ ಕಾಣುವ ಬಾ
ಆತುರ ಕಾತರ ನೀಗುತ ಬಾ
ಈ ಭಾಗ್ಯ ಎಂದೆಂದು ಹೊಂದೋಣ ಬಾ
ಮಧುಮಾಸದ ಮಧುಹೀರುವ
ಮನಮೋಹನ ಈ ಯೌವನ
ಸೌಂಧರ್ಯದ ಸೌಭಾಗ್ಯದ
ಆನಂದವೇ ಈ ಜೀವನ
---------------------------------------------------------------------

ಅಪರಂಜಿ (1984) - ಮೋಹನ ಮುರಳಿಯ ನಾದಲೀಲೆಗೆ ಸಂಗೀತ: ಎಂ.ರಂಗ ರಾವ್ ಸಾಹಿತ್ಯ: ವಿಜಯನಾರಸಿಂಹ  ಹಾಡಿದವರು: ವಾಣಿ ಜಯರಾಮ್

ಮೋಹನ ಮುರಳಿಯ ನಾದಲೀಲೆಗೆ
ಗೋಕುಲ ಕೋರಿತು ಸ್ವಾಗತ
ರಾಧೆಯ ಮೋಹದಾ ಮೋಡಿಗೆ ಸೋತು
ಕೃಷ್ಣನು ಬಂದಾ ನಗು ನಗುತಾ

ರಾಧೆಯ ತಾವರೆ ಕಂಗಳ ನೋಟಕೆ ಲೋಕನಾಯಕನೇ ಶರಣೆಂದ ಹೂಬಾಣವನು ಹೂಡಿದ ಕಾಮನು
ನಿತ್ಯ ವಸಂತವ ತಂದಾ ಅಂದ ಚೆಂದದಾ ಬೃಂದಾವನದಲಿ
ನಂದನ ವನದಾ ಅನಂದಾ
ಮೋಹನ ಮುರಳಿಯ ನಾದಲೀಲೆಗೆ
ಗೋಕುಲ ಕೋರಿತು ಸ್ವಾಗತ
ರಾಧೆಯ ಮೋಹದಾ ಮೋಡಿಗೆ ಸೋತು
ಕೃಷ್ಣನು ಬಂದಾ ನಗು ನಗುತಾ

ಕೃಷ್ಣನ ಪ್ರೀತಿಗೆ ಪರವಶವಾಯಿತು ಸಂತಸ ತುಂಬಿದ ಗೋಕುಲ
ಕೃಷ್ಣನ ಪ್ರೀತಿಗೆ ಪರವಶವಾಯಿತು ಸಂತಸ ತುಂಬಿದ ಗೋಕುಲ
ಕೃಷ್ಣನ ಹೆಸರೇ ಉಸಿರಾಗಿಹುದು
ಯುಗ ಯುಗ ಕಳೆದರೂ ಜಗಕೆಲ್ಲ
ಕೃಷ್ಣ ಇಂದಿಗೂ ದಾರಿಯ ತೋರುವ ನಂಬಿ ಕರೆದರೆ ನಾವೆಲ್ಲ
ಮೋಹನ ಮುರಳಿಯ ನಾದಲೀಲೆಗೆ
ಗೋಕುಲ ಕೋರಿತು ಸ್ವಾಗತ
ರಾಧೆಯ ಮೋಹದಾ ಮೋಡಿಗೆ ಸೋತು
ಕೃಷ್ಣನು ಬಂದಾ ನಗು ನಗುತಾ
--------------------------------------------------------------------

No comments:

Post a Comment