236. ಮಯೂರ (1975)



ಮಯೂರ ಚಿತ್ರದ ಹಾಡುಗಳು 
  1. ಹಗಳೋ ಇರುಳೊ ನನಗೊಂದು ತೋರದಿಂದು 
  2. ಈ ಮೌನವ ತಾಳೇನು ಮಾತಾಡೇ ದಾರಿಯ 
  3. ನಾನಿರುವುದೇ ನಿಮಗಾಗಿ ನಾಡಿರುವುದು ನಮಗಾಗಿ 
  4. ಕೇಳೋ ಮಂಗನ 
  5. ಶಾತವಾಹನನ ಮಗಳ ವಂಶದ 
ಮಯೂರ (1975) - ಹಗಲೋ ಇರುಳೋ  ನನಗೊಂದೂ ತೋರದಿಂದು
ಸಾಹಿತ್ಯ: ಚಿ.ಉದಯಶಂಕರ್   ಸಂಗೀತ: ಜಿ.ಕೆ.ವೆಂಕಟೇಶ್  ಹಾಡಿದವರು: ಎಸ್.ಜಾನಕಿ

ಹಗಲೋ ಇರುಳೋ  ನನಗೊಂದೂ ತೋರದಿಂದು
ಏನೋ ನೋವು  ಮನದಲ್ಲಿ ನಿಂತು ನೀ ಕಾಡಿರಲು
ಹಗಲೋ ಇರುಳೋ   ನನಗೊಂದೂ ತೋರದಿಂದು

ಆಕಾಶದಿಂದ ಧರೆಗೆ  ನನಗಾಗಿ ಬಂದೆಯೇನೊ
ಆಕಾಶದಿಂದ ಧರೆಗೆ  ನನಗಾಗಿ ಬಂದೆಯೇನೊ
ನಿನ್ನಾ ನುಡಿ ಜೇನಾ  ಸವಿದಾಗ ನನ್ನೆ ನಾ ಮರೆತೆ
ಹಗಲೋ ಇರುಳೋ  ನನಗೊಂದೂ ತೋರದಿಂದು

ಏನೋ ನೋವು  ಮನದಲ್ಲಿ ನಿಂತು ನೀ ಕಾಡಿರಲು
ಏಕೋ ನಿನ್ನಲ್ಲೆ ಮನಸು  ನಿನ್ನ ನೆನಪಿನಲ್ಲೆ ಸೊಗಸು
ಏಕೋ ನಿನ್ನಲ್ಲೆ ಮನಸು  ನಿನ್ನ ನೆನಪಿನಲ್ಲೆ ಸೊಗಸು
ಚೆಲುವಾ ನೀ ಬರುವಾ   ಕ್ಷಣ ಕಾದು ಕಾದು ಸೋತಿರುವೆ
ಹಗಲೋ ಇರುಳೋ  ನನಗೊಂದೂ ತೋರದಿಂದು
ಏನೋ ನೋವು  ಮನದಲ್ಲಿ ನಿಂತು ನೀ ಕಾಡಿರಲು
ಮಾತಲ್ಲಿ ಹೇಳಲಾರೆ  ನಾ ಮೂಕಾಗಿ ನಿಲ್ಲಲಾರೆ
ಮಾತಲ್ಲಿ ಹೇಳಲಾರೆ  ನಾ ಮೂಕಾಗಿ ನಿಲ್ಲಲಾರೆ
ಇನಿಯಾ ಈ ಹೃದಯಾ  ಒಲವಿಂದ ನಿನ್ನ ಕೂಗಿರಲು
ಹಗಲೋ ಇರುಳೋ  ನನಗೊಂದೂ ತೋರದಿಂದು
ಏನೋ ನೋವು  ಮನದಲ್ಲಿ ನಿಂತು ನೀ ಕಾಡಿರಲು
-------------------------------------------------------------------------------------------------------------------

ಮಯೂರ (1975) - ನಾನಿರುವುದೆ ನಿಮಗಾಗಿ  ನಾನಿರುವುದೆ ನಿಮಗಾಗಿ

ಸಾಹಿತ್ಯ: ಚಿ.ಉದಯಶಂಕರ್  ಸಂಗೀತ: ಜಿ.ಕೆ.ವೆಂಕಟೇಶ್  ಹಾಡಿದವರು: ಡಾ.ರಾಜ್‌ಕುಮಾರ್


ನಾನಿರುವುದೆ ನಿಮಗಾಗಿ  ನಾನಿರುವುದೆ ನಿಮಗಾಗಿ
ನಾಡಿರುವುದು ನಮಗಾಗಿ  ಕಣ್ಣೀರೇಕೆ ಬಿಸಿಯುಸಿರೇಕೆ
ಕಣ್ಣೀರೇಕೆ ಬಿಸಿಯುಸಿರೇಕೆ  ಬಾಳುವಿರೆಲ್ಲ ಹಾಯಾಗಿ
ಬಾಳುವಿರೆಲ್ಲ ಹಾಯಾಗಿ  ನಾನಿರುವುದೆ ನಿಮಗಾಗಿ.... 

ಒಂದೇ ನಾಡಿನ ಮಕ್ಕಳು ನಾವು ಸೋದರರಂತೆ ನಾವೆಲ್ಲ
ಒಂದೇ ನಾಡಿನ ಮಕ್ಕಳು ನಾವು ಸೋದರರಂತೆ ನಾವೆಲ್ಲ
ನಿಮ್ಮೊಡನಿಂದು ನಾನು ನೊಂದು  ನಿಮ್ಮೊಡನಿಂದು ನಾನು ನೊಂದು
ಮಿಡಿದಾ ಕಂಬನಿ ಆರಿಲ್ಲ  
ಭರವಸೆ ನೀಡುವೆ ಇಂದು ನಾ ನಿಮ್ಮೊಡನಿರುವೆನು ಎಂದು
ಭರವಸೆ ನೀಡುವೆ ಇಂದು  ನಾ ನಿಮ್ಮೊಡನಿರುವೆನು ಎಂದು
ತಾಯಿಯ ಆಣೆ ನಿಮ್ಮನು ಕಾಡುವ ವೈರಿಯ ಉಳಿಸೋಲ್ಲ
ನಾನಿರುವುದೆ ನಿಮಗಾಗಿ  ನಾಡಿರುವುದು ನಮಗಾಗಿ
ಕಣ್ಣೀರೇಕೆ ಬಿಸಿಯುಸಿರೇಕೆ ಕಣ್ಣೀರೇಕೆ ಬಿಸಿಯುಸಿರೇಕೆ
ಬಾಳುವಿರೆಲ್ಲ ಹಾಯಾಗಿ  ಬಾಳುವಿರೆಲ್ಲ ಹಾಯಾಗಿ
ನಾನಿರುವುದೆ ನಿಮಗಾಗಿ...

ಸಾವಿರ ಜನುಮದ ಪುಣ್ಯವೊ ಏನೋ ನಾನೀ ನಾಡಲಿ ಜನಿಸಿರುವೆ
ಸಾವಿರ ಜನುಮದ ಪುಣ್ಯವೊ ಏನೋ ನಾನೀ ನಾಡಲಿ ಜನಿಸಿರುವೆ
ತಪಸಿನ ಫಲವೊ ಹಿರಿಯರ ವರವೊ  ತಪಸಿನ ಫಲವೊ ಹಿರಿಯರ ವರವೊ
ನಿಮ್ಮೀ ಪ್ರೀತಿಯ ಗಳಿಸಿರುವೆ  
ವೈರಿಯ ಬಡಿದೋಡಿಸುವ ಈ ನಾಡಿಗೆ ಬಿಡುಗಡೆ ತರುವ
ವೈರಿಯ ಬಡಿದೋಡಿಸುವ  ಈ ನಾಡಿಗೆ ಬಿಡುಗಡೆ ತರುವ
ಜನತೆಗೆ ನೆಮ್ಮದಿ ಸೌಖ್ಯವತರಲು ಪ್ರಾಣವನೆ ಕೊಡುವೆ
ನಾನಿರುವುದೆ ನಿಮಗಾಗಿ   ನಾಡಿರುವುದು ನಮಗಾಗಿ
ಕಣ್ಣೀರೇಕೆ ಬಿಸಿಯುಸಿರೇಕೆ  ಕಣ್ಣೀರೇಕೆ ಬಿಸಿಯುಸಿರೇಕೆ
ಬಾಳುವಿರೆಲ್ಲ ಹಾಯಾಗಿ   ಬಾಳುವಿರೆಲ್ಲ ಹಾಯಾಗಿ
ನಾನಿರುವುದೆ ನಿಮಗಾಗಿ..
-------------------------------------------------------------------------------------------------------------------------

ಮಯೂರ (೧೯೭೫) - ಈ ಮೌನವ ತಾಳೆನು ..... ಮಾತಾಡೆ ದಾರಿಯ ಕಾಣೆನು
ರಚನೆ: ಚಿ. ಉದಯಶಂಕರ್  ಸಂಗೀತ: ಜಿ. ಕೆ. ವೆಂಕಟೇಶ್ ಗಾಯಕ:  ಡಾ. ರಾಜಕುಮಾರ್, ಎಸ್. ಜಾನಕಿ


ಹೆ: ಈ ಮೌನವ ತಾಳೆನು ..... ಈ ಮೌನವ ತಾಳೆನು
     ಮಾತಾಡೆ ದಾರಿಯ ಕಾಣೆನು ಓ...  ರಾಜ, 
     ಈ ಮೌನವ ತಾಳೆನು
ಗಂ: ನೀ ಹೇಳದೆ ಬಲ್ಲೆನು, ನಿನ್ನಾಸೆ ಕಣ್ಣಲ್ಲೇ ಕಂಡೆನು
      ಓ...  ರಾಣಿ, ನೀ ಹೇಳದೆ ಬಲ್ಲೆನು

ಗಂ: ನಾನಂದು ನಿನ್ನ ಕಂಡಾಗ ಚಿನ್ನ ಏನೇನೊ ಹೊಸ ಭಾವನೆ
       ಹೂವಾಗಿ ಮನಸು ಏನೇನೊ ಕನಸು ನಾ ಕಾಣದ ಕಲ್ಪನೆ
       ನಾನಂದು ನಿನ್ನ ಕಂಡಾಗ ಚಿನ್ನ ಏನೇನೊ ಹೊಸ ಭಾವನೆ
      ಹೂವಾಗಿ ಮನಸು ಏನೇನೊ ಕನಸು ನಾ ಕಾಣದ ಕಲ್ಪನೆ
ಹೆ:  ಇಂದು ನಿನ್ನ ಬಿಡೆನು ಈ ದೂರ ಸಹಿಸೆನು
ಗಂ: ನೀ ಹೇಳದೆ ಬಲ್ಲೆನು ನಿನ್ನಾಸೆ ಕಣ್ಣಲ್ಲೇ ಕಂಡೆನು
       ಓ.. ರಾಣಿ, ನೀ..  ಹೇಳದೆ ಬಲ್ಲೆನು

ಹೆ:  ಈ ಅಂದ ಕಂಡು ನಾ ಮೋಹಗೊಂಡು ಮನ ಹಿಗ್ಗಿ ಹೂವಾಯಿತು
      ಬಾನಲ್ಲಿ ಮುಗಿಲು ಕಂಡಾಗ ನವಿಲು ಕುಣಿವಂತೆ ನನಗಾಯಿತು
      ಈ ಅಂದ ಕಂಡು ನಾ ಮೋಹಗೊಂಡು ಮನ ಹಿಗ್ಗಿ ಹೂವಾಯಿತು
      ಬಾನಲ್ಲಿ ಮುಗಿಲು ಕಂಡಾಗ ನವಿಲು ಕುಣಿವಂತೆ ನನಗಾಯಿತು
ಗಂ: ಅಂದೆ ನಿನಗೆ ಸೋತೆ, ನಾ ಜಗವನೆ ಮರೆತೆ
ಹೆ: ಈ ಮೌನವ ತಾಳೆನು, ಮಾತಾಡೆ ದಾರಿಯ ಕಾಣೆನು, ಓ...  ರಾಜ
ಗಂ: ಓ....  ರಾಣಿ     ಹೆ: ಓ...  ರಾಜ
 ------------------------------------------------------------------------------------------------------------------------

ಮಯೂರ (೧೯೭೫) - ಹೇ... ಕೇಳೋ ಮಂಗಣ್ಣಾ ನೀ.. ಕೇಳೋ ತಿಮ್ಮಣ್ಣಾ
ರಚನೆ: ಚಿ. ಉದಯಶಂಕರ್  ಸಂಗೀತ: ಜಿ. ಕೆ. ವೆಂಕಟೇಶ್ ಗಾಯಕ:  ಪಿ.ಬಿ.ಶ್ರೀನಿವಾಸ 

ಹೇ... ಕೇಳೋ ಮಂಗಣ್ಣಾ ನೀ.. ಕೇಳೋ ತಿಮ್ಮಣ್ಣಾ
ಏಕೆ ನೀನು ಹೀಗೆ ಕುಂತೆ ಚಿಂತೆ ಬೇಡಣ್ಣಾ
ವೈರಿ ಜನರು ನಾಶವಾಗೋ ಕಾಲ ಬಂತಣ್ಣಾ...
ಒಳ್ಳೆ ಕಾಲ ಬಂತಣ್ಣಾ
ಕೇಳೋ ಮಂಗಣ್ಣಾ ನೀ.. ಕೇಳೋ ತಿಮ್ಮಣ್ಣಾ
ಏಕೆ ನೀನು ಹೀಗೆ ಕುಂತೆ ಚಿಂತೆ ಬೇಡಣ್ಣಾ
ವೈರಿ ಜನರು ನಾಶವಾಗೋ ಕಾಲ ಬಂತಣ್ಣಾ...
ಒಳ್ಳೆ ಕಾಲ ಬಂತಣ್ಣಾ

ಮೇಲೆ ಕುಂತೋರೆಲ್ಲಾ ಎಂದೋ ರಾಜರೇನಲ್ಲಾ
ಮೀಸೆ ತಿರುವ ಹುಂಬರೆಲ್ಲಾ ಆಳೋಕ ಬಂದಿಲ್ಲಾ
ಮೇಲೆ ಕುಂತೋರೆಲ್ಲಾ ಎಂದೋ ರಾಜರೇನಲ್ಲಾ ...
ರಾಜರೇನಲ್ಲಾ
ಮೀಸೆ ತಿರುವ ಹುಂಬರೆಲ್ಲಾ ಆಳೋಕ ಬಂದಿಲ್ಲಾ...
ಆಳೋಕ ಬಂದಿಲ್ಲಾ
ರೋಷ ದ್ವೇಷ ಮೋಸ ಎಂದೂ ಒಳ್ಳೇದೇನಲ್ಲಾ
ರೋಷ ದ್ವೇಷ ಮೋಸ ಎಂದೂ ಒಳ್ಳೇದೇನಲ್ಲಾ   
ನೊಂದ ಜನರ ಶಾಪದಿಂದ ಪಾಪಿ ಉಳಿಯೋಲ್ಲಾ...   
ಈ ಪಾಪಿ ಉಳಿಯೋಲ್ಲಾ
ಕೇಳೋ ಮಂಗಣ್ಣಾ ನೀ.. ಕೇಳೋ ತಿಮ್ಮಣ್ಣಾ
ಏಕೆ ನೀನು ಹೀಗೆ ಕುಂತೆ ಚಿಂತೆ ಬೇಡಣ್ಣಾ
ವೈರಿ ಜನರು ನಾಶವಾಗೋ ಕಾಲ ಬಂತಣ್ಣಾ...
ಒಳ್ಳೆ ಕಾಲ ಬಂತಣ್ಣಾ  

ರಾವಣಂಗೆ ಮೃತ್ಯುವಾಗಿ ರಾಮನು ಬಂದಂತೇ 
ರಾಮನು ಬಂದಂತೇ 
ಕೀಚಕಂಗೇ  ವೈರಿಯಾಗಿ ಭೀಮನು ಬಂದಂತೇ 
ಆ.. ಭೀಮನು ಬಂದಂತೇ 
ಕಂಸನು ಹಿಡಿದು ದ್ವಂಸ ಮಾಡೇ ಕೃಷ್ಣನು ಬಂದಂತೇ 
ಕಂಸನು ಹಿಡಿದು ದ್ವಂಸ ಮಾಡೇ ಕೃಷ್ಣನು ಬಂದಂತೇ 
ಕಾಡೋರನ್ನು ಓಡಿಸಲೆಂದೇ ಬಂದೆ ಬಿಡು ಚಿಂತೇ 
ನಾ ಬಂದೆ ಬಿಡು ಚಿಂತೇ 
ಏನೋ ಮಂಗಣ್ಣ ಮೇಲೇರು ಮಂಗಣ್ಣಾ 
ಲಂಕೆ ಸುಟ್ಟ ವೀರ ನೀನು ಮರೆಯ ಬೇಡಣ್ಣಾ 
ಮುಗಿಲ ತನಕ ಏರಿ ವಿಜಯದ ಕಹಳೆ ಊದಣ್ಣಾ 
ವಿಜಯದ ಕಹಳೆ ಊದಣ್ಣಾ.....  
ಸಾಕು ನಿಲ್ಲಿಸಿ  
--------------------------------------------------------------------------------------------------------------------------

ಮಯೂರ (೧೯೭೫) - ಶಾತವಾಹನನ ಮಗಳ ವಂಶದ
ಸಂಗೀತ: ಜಿ. ಕೆ. ವೆಂಕಟೇಶ್ ರಚನೆ: ಚಿ. ಉದಯಶಂಕರ್ ಗಾಯಕ: ಜಿ.ಕೆ.ವೆಂಕಟೇಶ

ಶಾತವಾಹನನ ಮಗಳ ವಂಶದ ನಾಗಶ್ರೀ ಮಾತ್ಸರ್ಯದಲಿ 
ಚಂದ್ರವರ್ಮನ ವಂಚಿಸಿ ರಾಜ್ಯವ ಪಡೆಯುವೆನೆಂದಳು ಕ್ರೋಧದಲಿ 
ಪಲ್ಲವರೊಡನೇ ಸಂಚನು ಮಾಡಿ ಮೋಸದಿ ಕೊಲ್ಲಿಸಿ ರಾಜನನ್ನು 
ರಾಜ್ಯವ ಪಡೆದೆ ಎನ್ನುತ ಹಿಗ್ಗಲೂ ವಿಧಿ ವಂಚಿಸಿತು ಅವಳನ್ನು ಪಲ್ಲವರು ರಾಜ್ಯವ ನುಂಗಿದರು 
ರಾಜ್ಯಲಕ್ಷ್ಮಿಯ ಬಿಡುಗಡೆ ಮಾಡಲು ಶಿವನ ಪುತ್ರ ಧರೆಗಿಳಿದಿಹನು 
ನೊಂದ ಜನತೆಯಾ ಕಂಬನಿ ತೊಡೆಯಲು ಮಯೂರ ನಾಗವತರಿಸಿಹನು 
ದುಷ್ಟ ವೈರಿಗಳ ನಾಶ ಮಾಡಲು ಖಡ್ಗ ಝಳಪಿಸುತ ಬರುತಿಹನು ಮಯೂರ ಬರುತಿಹನೂ .. 
--------------------------------------------------------------------------------------------------------------------------

No comments:

Post a Comment