240. ಜಂಗ್ಲಿ (2009)



ಜಂಗ್ಲಿ ಚಲನಚಿತ್ರದ ಹಾಡುಗಳು 
  1. ಹಳೆ ಪಾತ್ರೆ ಹಳೆ ಕಬ್ಬುಣ, ಹಳೆ ಪೇಪರ್ ತರ ಹೋಯಿ
  2. ಓ ನಲ್ಮೆಯ ನಾವಿಕನೆ ಎಂದು ನಿನ್ನ ಆಗಮನ
  3. ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ
  4. ಜಂಗಲೀ ಶಿವಲಿಂಗೂ 
  5. ಈ ಮಜವಾದ 
  6. ಓ ನಲ್ಮೆಯ 
ಜಂಗ್ಲಿ (2009) - ಹಳೆ ಪಾತ್ರೆ ಹಳೆ ಕಬ್ಬುಣ, ಹಳೆ ಪೇಪರ್ ತರ ಹೋಯಿ
ಸಂಗೀತ: ವಿ.ಹರಿಕೃಷ್ಣ, ಸಾಹಿತ್ಯ: ಯೋಗರಾಜ್ ಭಟ, ಗಾಯನ : ಕೈಲಾಶ್ ಖೇರ್, ಸೌಮ್ಯ ರಾವ್

ಹಳೆ ಪಾತ್ರೆ ಹಳೆ ಕಬ್ಬುಣ, ಹಳೆ ಪೇಪರ್ ತರ ಹೋಯಿ
ಈ ಪ್ರೀತಿ ಈ ಪ್ರೇಮ, ಬಲು ಬೇಜಾರ್ ಕಣ ಹೋಯಿ
ಚಂದಿರನ ತೂಕಕೆ ಇಡು, ಸಂಜೆಯನು ಸೇಲಿಗೆ ಬಿಡು
ಭೂಮಿನ ಬಾಡಿಗೆ ಕೊಡು, ಸಾಕು
ಲೋಕವ ಮೂಟೆ ಕಟ್ಟು, ಬಾರಲೆ ಸೈಕಲ್ ಹತ್ತು
ಯಾತಕೆ ದೂಸ್ರಾ ಮಾತು, ಎಲ್ಲಾ ಟೈಮ್ ವೇಸ್ಟು
ಲೋಕವ ಮೂಟೆ ಕಟ್ಟು, ಬಾರಲೆ ಸೈಕಲ್ ಹತ್ತು
ಯಾತಕೆ ದೂಸ್ರಾ ಮಾತು, ಎಲ್ಲಾ ಟೈಮ್ ವೇಸ್ಟು
ಹಳೆ ಪಾತ್ರೆ ಹಳೆ ಕಬ್ಬುಣ, ಹಳೆ ಪೇಪರ್ ತರ ಹೋಯಿ
ಈ ಪ್ರೀತಿ ಈ ಪ್ರೇಮ, ಬಲು ಬೇಜಾರ್ ಕಣ ಹೋಯಿ

ನೋಡು ಮುಂಗಾರು ಮಳೆ, ಅದರೊಳಗೆ ಹೇಳವ್ರೆ
ಈ ಪ್ರೀತಿ ಎಂದೂ ಅತಿ ಮಧುರ, ತ್ಯಾಗ ಅಮರ
ಬೇಡುವೆನು ಓ ಚಿನ್ನ, ಮಾಡಿಬಿಡು ತ್ಯಾಗಾನ
ನಿಂತುಬಿಡು ಜೋಗದ ಗುಂಡೀಲಿ, ಬಿಟ್ಟುಬಿಡು ನನ್ನನ್ನಾ
ಹಳೆ ಹುಡುಗಿ ಹೆಸರೆ ತೆಗೆಯದಲೆ, ನಿನ್ನ ಮುಂದೆ ಸಾಚ ಆಗಿರುವೆ
ದಿನ ರಾತ್ರಿ ಮನೆಗೆ ಬರುವೆನು ನಾ, ಕೊನೆಯವರೆಗೂ
ಹಳೆ ಪಾತ್ರೆ ಹಳೆ ಕಬ್ಬುಣ, ಹಳೆ ಪೇಪರ್ ತರ ಹೋಯಿ
ಈ ಪ್ರೀತಿ ಈ ಪ್ರೇಮ, ಬಲು ಬೇಜಾರ್ ಕಣ ಹೋಯಿ
ನಾ ಒಳ್ಳೆ ರೀತಿಯಲಿ, ಕೇಳುವೆನು ಪ್ರೀತಿಯಲಿ
ಹೇಳಿಬಿಡು ತುಂಬಾ ಫ್ರಾಂಕಾಗಿ, ಪ್ರೀತಿಸುವೆಯಾ
ನೀನಿಟ್ಟ ತೋಳಿನಲಿ, ಕಳೆದೆಂಟು ಜನುಮದಲಿ
ಇದು ನೂರು ಜನುಮದ ಕಾಂಟ್ರಾಕ್ಟು, ಮರೆತಿರುವೆಯಾ
ಕಮ್ಮಿ ಕಣೋ ನೂರು ಜನುಮಗಳು, ಬೇಕೆನಗೆ ಕೋಟಿ ಮರಣಗಳು
ಅಪ್ಪಿ ಹಿಡಿ ನನ್ನ ಬಿಗಿಯಾಗಿ, ಗೋರಿಯೊಳಗೂ
ಹಳೆ ಪಾತ್ರೆ ಹಳೆ ಕಬ್ಬುಣ, ಹಳೆ ಪೇಪರ್ ತರ ಹೋಯಿ
ಈ ಪ್ರೀತಿ ಈ ಪ್ರೇಮ, ಬಲು ಬೇಜಾರ್ ಕಣ ಹೋಯಿ
ಚಂದಿರನ ತೂಕಕೆ ಇಡು, ಸಂಜೆಯನು ಸೇಲಿಗೆ ಬಿಡು
ಭೂಮಿನ ಬಾಡಿಗೆ ಕೊಡು, ಸಾಕು
ಲೋಕವ ಮೂಟೆ ಕಟ್ಟು, ಬಾರೊಲೊ ಸೈಕಲ್ ಎತ್ತು
ಯಾತಕೆ ದೂಸ್ರಾ ಮಾತು, ಎಲ್ಲಾ ಟೈಮ್ ವೇಸ್ಟು
ಲೋಕವ ಮೂಟೆ ಕಟ್ಟು, ಬಾರೆಲೆ ಸೈಕಲ್ ಹತ್ತು
ಯಾತಕೆ ದೂಸ್ರಾ ಮಾತು, ಎಲ್ಲಾ ಟೈಮ್ ವೇಸ್ಟು
--------------------------------------------------------------------------------------------------------------------------

ಜಂಗ್ಲೀ (೨೦೦೯) - ಓ ನಲ್ಮೆಯ ನಾವಿಕನೆ ಎಂದು ನಿನ್ನ ಆಗಮನ
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ಜಯಂತ ಕಾಯ್ಕಣಿ ಗಾಯನ : ಎಂ ಡಿ ಪಲ್ಲವಿ ಹಾಗು ಅರುಣ 

ಓ ನಲ್ಮೆಯ ನಾವಿಕನೆ ಎಂದು ನಿನ್ನ ಆಗಮನ
ನೀ ಎಲ್ಲಿಯೇ ಅಡಗಿದರು ಅಲ್ಲೇ ನನ್ನ ಈ ಗಮನ
ಈ ಪ್ರೀತಿಯ ಪರಿಣಾಮ ನಿನಗೂ ಕೂಡ ಹೀಗೆನಾ

ಕರೆದುಬಿಡು ನನ್ನ ನೀ ಬೇಗ
ಬರೆದುಕೊಡು ಎಲ್ಲ ಆವೇಗ
ಮಿರುಗುತಿದೆ ಜೀವ ನೋಡೀಗ ಏನು ಕಾರಣ
ನನ್ನ ಪಾಡಿಗಿಲ್ಲಿ ನಾನು ನಿನ್ನ ಹಾಡು ಹಾಡಲೇನು
ನಿನ್ನ ಊರಿನಿಂದ ಬಂದ ತಾರೆಯನ್ನೇ ನೋಡಲೇನು
ಹಚ್ಚಿಕೊಂಡ ಹುಚ್ಚಿ ನಾನು ನೀನು ಹೀಗೆನಾ?

ನಡೆಯುತಿರುವಾಗ ಜೊತೆ ನೀನು
ಹಿಡಿದುಕೊಳಲೇನು ಕೈಯನ್ನು
ತಡೆಯದಿರು ಯಾವ ಮಾತನ್ನು ನೀನು ಈ ದಿನ
ಬೇರೆ ಏನು ಕಾಣಲಾರೆ ಒಮ್ಮೆ ನೀನು ಕಂಡ ಮೇಲೆ
ಬಾಕಿ ನೂರು ಮಾತನೆಲ್ಲ ಮೌನದಲ್ಲೇ ಅಂದಮೇಲೆ
ಮೋಹದಲ್ಲಿ ಮೂಕಿ ನಾನು ನೀನು ಹೀಗೆನಾ?
------------------------------------------------------------------------------------------------------------------------

ಜಂಗ್ಲೀ (೨೦೦೯) - ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ಜಯಂತ ಕಾಯ್ಕಣಿ, 
ಗಾಯನ : ಸೋನು ನಿಗಮ್ 

ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ
ನಾ ಬರೆಯದ ಕವಿತೆಗಳ ನೀನೆ ಒಂದು ಸಂಕಲನ
ಓ ಜೀವವೇ ಹೇಳಿಬಿಡು ನಿನಗೂ ಕೂಡ ಹೀಗೆನಾ?

ತಂದೆನು ಪಿಸುಮಾತು ಜೇಬಲ್ಲಿ  ಕಂಡೆನು ಹಸಿ ಮಿಂಚು ಕಣ್ಣಲ್ಲಿ
ಬಂದೆನು ತುಸು ದೂರ ಜೊತೆಯಲ್ಲಿ ಮರೆತು ಮೈಮನ
ನಿನ್ನ ಬೆರಳು ಹಿಡಿದು ನಾನು ನೀರ ಮೇಲೆ ಬರೆಯಲೇನು
ನಿನ್ನ ನೆರಳು ಸುಳಿಯುವಲ್ಲು ಹೂವ ತಂದು ಸುರಿಯಲೇನು
ನಂಬಿ ಕೂತ ಹುಂಬ ನಾನು ನೀನು ಹೀಗೆನಾ?

ಹೂವಿನ ಮಳೆ ನೀನು ಕನಸಲ್ಲಿ  ಮೋಹದ ಸೆಲೆ ನೀನು ಮನಸಲ್ಲಿ
ಮಾಯದ ಕಲೆ ನೀನು ಎದೆಯಲ್ಲಿ ಒಲಿದ ಈ ಕ್ಷಣ
ನಿನ್ನ ಗುಂಗಿನಿಂದ ನನ್ನ ಬಂದು ಪಾರು ಮಾಡು ನೀನು
ಒಂದೆ ಕನಸು ಕಾಣುವಾಗ ನಾನು ನೀನು ಬೇರೆಯೇನು
ಶರಣು ಬಂದ ಚೋರ ನಾನು ನೀನು ಹೀಗೆನಾ?
---------------------------------------------------------------------------------------------

ಜಂಗ್ಲಿ (2009) - ಜಂಗಲೀ ಶಿವಲಿಂಗೂ 
ಸಂಗೀತ: ವಿ.ಹರಿಕೃಷ್ಣ, ಸಾಹಿತ್ಯ: ಯೋಗರಾಜ್ ಭಟ, ಗಾಯನ : ಟಿಪ್ಪು, ಅನುರಾಧ ಭಟ್ಟ, ರಂಗಾಯಣ ರಘು, ಕೋರಸ್  

---------------------------------------------------------------------------------------------

ಜಂಗ್ಲಿ (2009) - ಈ ಮಜವಾದ 
ಸಂಗೀತ: ವಿ.ಹರಿಕೃಷ್ಣ, ಸಾಹಿತ್ಯ: ಯೋಗರಾಜ್ ಭಟ, ಗಾಯನ : ಸುಮಶಾಸ್ತ್ರಿ 

---------------------------------------------------------------------------------------------

No comments:

Post a Comment