ಕೆಂಪೇಗೌಡ ಚಲನಚಿತ್ರದ ಹಾಡುಗಳು
- ಹಳೇ ರೇಡಿಯೋ ಹಾಕಿ ಹಾಡು ಕೇಳುವ
- ತರ ತರ ಹಿಡಿಸಿದೆ ಮನಸಿಗೆ ನೀನು
- ಶ್ರೀ ರಾಮ ಜೈ ರಾಮ
- ಗೆಳೆಯನೇ ನನ್ನ ಗೆಳೆಯನೇ
- ಕಟ್ಟುನಿಟ್ಟು ಖಾಕಿ ತೊಟ್ಟು ರಾಜನಂತೇ
ಕೆಂಪೇಗೌಡ (2011) - ಹಳೇ ರೇಡಿಯೋ ಹಾಕಿ ಹಾಡು ಕೇಳುವ
ಸಾಹಿತ್ಯ: ಯೋಗರಾಜ್ ಭಟ್ ಸಂಗೀತ: ಅರ್ಜುನ್ ಹಾಡಿದವರು: ಸುದೀಪ್, ಶಮಿತಾ ಮಲ್ನಾಡ್ಹಳೇ ರೇಡಿಯೋ ಹಾಕಿ ಹಾಡು ಕೇಳುವ
ಮಜಾ ಮಾಡುತ ಪ್ರೀತಿ ವಾರ್ತೆ ಕೇಳುವವಾರ್ತೆಗಳು. ಈಗ ಹವಮಾನ ವರದಿ
ಕೆಂಪ ಕೆಂಪಿ ಇಬ್ಬರಿಗೂ ಪ್ರೀತಿ ಮಿತಿ ಮೀರಿ
ದೈಹಿಕ ಉಷ್ಣಾಂಶ ಅರವತ್ತು ಡಿಗ್ರಿ ದಾಟಿದೆ
ಅಲ್ಲಲ್ಲಿ ಹಗುರದಿಂದ ಸಾಧಾರಣವಾಗಿ
ಹೊಗೆ ಏಳುವ ಸಾಧ್ಯತೆಗಳಿವೆ
ಹಳೇ ರೇಡಿಯೋ ಹಾಕಿ ಹಾಡು ಕೇಳುವ
ಮಜಾ ಮಾಡುತ ಪ್ರೀತಿ ವಾರ್ತೆ ಕೇಳುವ
ಪ್ರೀತಿ ವಾರ್ತೆ ಕೇಳುವ
ಶೇವಿಂಗ್ ಮಾಡಿದ ಸಿಂಹ, ಚಂದಿರನ ತಮ್ಮ
ಎಂದಿರನ್ ರೋಬಾಟು ನೀನೇನೆ, ಐಶ್ವರ್ಯ ನಾನೆ
ಕೆಂಪ ಕೆಂಪಿಯರು ತುಂಬ ಹೀಟಿನಲಿ
ಬೈಟು ಎಳನೀರು ಕುಡ್ಕೊಂಡು
ರೋಡು ಸೈಡಿನಲಿ ಬೋಂಡ ತಿನ್ನುತಲಿ
ತುಂಬ ಹತ್ತಿರಕೆ ನಿಂತ್ಕೊಂಡು
ಹಳೇ ರೇಡಿಯೋ ಹಾಕಿ ಹಾಡು ಕೇಳುವ
ಮಜಾ ಮಾಡುತ ಪ್ರೀತಿ ವಾರ್ತೆ ಕೇಳುವ
ಇಲ್ಲಿಂದ ನಾನು ಬಂದೆ, ಅಲ್ಲಿಂದ ನೀನು ಬಾರೆ
ಸ್ಲೋಮೋಶನ್ ಅಲ್ಲಿ ಸೀರೆ ಹಾರೋ ಹಂಗೆ
ನೀ ಓಡಿ ಬಾರೆ
ಮೇಕಪ್ ಇನ್ನೂ ಮುಗಿದಿಲ್ಲ, ಹೊರಗೆ ನಿಲ್ಲು ನನ್ನ ನಲ್ಲ
ಕಿಟಕಿ ಯಾಕೋ ಸರಿಯಿಲ್ಲ, ಆದ್ರೂ ಕದ್ದು ನೋಡಲ್ಲ
ಒಳ್ಳೆವ್ನು ನಾನು ಟೈಟಾಗಲೇನು
ನನ್ನ ಪಾರುನೇ ನೀನಮ್ಮ, ದೇವ್ದಾಸ ನಾನೆ
ಕೆಂಪ ಕೆಂಪಿಯರು ತುಂಬ ಕುಣಿಯುತಲಿ
ಕಾಲು ಮುರ್ಕೊಂಡು ಕೂತ್ಕೊಂಡು
ಒಂಟಿ ಕಾಲಿನಲಿ ಕೊಕ್ರೆ ಫೋಸಿನಲಿ
ಅಮೃತಾಂಜನವ ಹಚ್ಕೊಂಡು
ಹಳೆ ಹುಚ್ಚನ ಸ್ಟೈಲಿನಲ್ಲಿ, ಕಾಂಪೌಂಡು ಹಾರಿ ಬಾರೋ
ಫ್ಲಾಶ್ ಬ್ಯಾಕಿನಲ್ಲಿ ತಲೆಯ ಬೋಳುಸ್ಕೊಂಡು
ಲವ್ ಮಾಡಿ ನೋಡೋ
ಹುಚ್ಚ ನಂಬರ್ ಒನ್ನು ನಾ, ಮುಟ್ಟಿ ನೋಡು ಓ ಚಿನ್ನ
ಮುಗ್ಸು ಬೇಗ ಹಾಡನ್ನ, ನೀನೆ ಕಟ್ಟು ತಾಳೀನಾ
ಕ್ಲೋಸಪ್ಪಿನಲ್ಲಿ ಹಳೆ ಪುಂಗಿ ಊದು
ನೀ ಸನಾದಿ ಅಪ್ಪಣ್ಣ, ತುತ್ತೂರಿ ನಾನೆ
ಹಳೇ ರೇಡಿಯೋ ಹಾಕಿ ಹಾಡು ಕೇಳುವ
ಮಜಾ ಮಾಡುತ ಪ್ರೀತಿ ವಾರ್ತೆ ಕೇಳುವ
ಅಲ್ಲಿಗೆ ಕೆಂಪ ಕೆಂಪಿ ಪ್ರೇಮ ಕತೆಯ
ಕ್ಲೈಮ್ಯಾಕ್ಸ್‌ಗೆ ಲೇಟಾಯ್ತು
ಇಲ್ಲಿಗೆ ವಾರ್ತಾ ಪ್ರಸಾರ ಮುಕ್ತಾಯವಾಯ್ತು ನಮಸ್ಕಾರ
--------------------------------------------------------------------------------------------------------------------------
ಕೆಂಪೇಗೌಡ (2011) - ತರ ತರ ಹಿಡಿಸಿದೆ ಮನಸಿಗೆ ನೀನು
ಸಾಹಿತ್ಯ: ಯೋಗರಾಜ್ ಭಟ್ ಸಂಗೀತ: ಅರ್ಜುನ್ ಜನ್ಯ ಹಾಡಿದವರು:ವಿಜಯ ಪ್ರಕಾಶ, ಶ್ರೇಯಾ ಘೋಷಾಲ್
ತರ ತರ ಹಿಡಿಸಿದೆ ಮನಸಿಗೆ ನೀನು
ಹಗಲಲೆ ಮುಳುಗಿದೆ ಕನಸಲಿ ನಾನು
ಹಿಡಿದರು ಕುಣಿಯುತ ಹೃದಯವಿದು ಹಿಡಿತಕೆ ಸಿಗುತ್ತಿಲ್ಲ
ಕುಂತರು ನಿಂತರು ನಿನ್ನ ಭಜನೆ
ಬೇರೆ ಕೆಲಸಾನೇ ಇಲ್ಲ
ತರ ತರ ಹಿಡಿಸಿದೆ ಮನಸಿಗೆ ನೀನು
ಹಗಲಲೆ ಮುಳುಗಿದೆ ಕನಸಲಿ ನಾನು
ಈ ನಗು ಸಿಗಲು ಚಂದಮಾಮ ಇನ್ನೇಕೆ
ನಾ ಇದೆ ಮೊದಲು ಕಂಡೆ ಮಾತಾಡೋ ಜಿಂಕೆಪ್ರೀತಿಯಾ ರುಚಿಯನು ಇಂದು ನಾ ತಿಳಿದೆನು ಎಂಥ ಹೊಸತನ...
ಕಳೆದೋದೆ ಈಗ ನಾ ನನ್ನಲಿ ರಸಿಕನೂ
ಜನುಮವು ಪಡೆದನು ನಿನ್ನ ಕಾಲ್ಗುಣ..
ಇದಕೆಲ್ಲ ಕಾರಣ ಹಿಡಿದರು ಕುಣಿಯುತ
ಹೃದಯವಿದು ಹಿಡಿತಕೆ ಸಿಗುತಿಲ್ಲಾ
ಕುಂತರು ನಿಂತರು ನಿನ್ನ ಭಜನೆ
ಬೇರೆ ಕೆಲಸಾನೇ ಇಲ್ಲ ದಿನ ರಾತ್ರಿಯೂ
ನಿಲ್ಲದೆ ನಿಲ್ಲದೆ ನಿನ್ನ ಜಾತ್ರೆಯು
ಸಾಗಿದೆ ಸಾಗಿದೆ ಇದಕೊಂದು ಪರಿಹಾರ ತಿಳಿಸು
ಮಾತಾಡೇ ಸುಮ್ಮನೆ ಸುಮ್ಮನೆ ವಧು
ಮಾಡಿಕೋ ನನ್ನನೇ ನನ್ನನ್ನೇ ಮುದ್ದಾಗಿ ಸಂಸಾರ
ನಡಿಸು ಹಾಡು ಹಗಲೇ ಶುರುವಾಯಿತು
ಸುಲಿಗೆ ಹೌದು ನಲ್ಲ ಅತಿಯಾಯ್ತು ಸಲಿಗೆ
ಸ ಗ ಮ ಗ ಮ ಗ ಮ ಗ ಮ ಗ ಮ ಗ
ಮ ಗ ಮ ಪ ಮ ಗ ರೀ ಗ ರೀ
ನೀನಿರಲು ಸಿಗೋ ಮಜವೇ ಬೇರೆ
ತರ ತರ ಹಿಡಿಸಿದೆ ಮನಸಿಗೆ ನೀನು
ಹಗಲಲೆ ಮುಳುಗಿದೆ ಕನಸಲಿ ನಾನು
ನಾನು ಕನಸಲಿ ನಾನು... ಕನಸಲಿ ನಾನು..
------------------------------------------------------------------------------------------------------------------------
ಕೆಂಪೇಗೌಡ (2011) - ಶ್ರೀ ರಾಮ ಜೈ ರಾಮ
ಸಂಗೀತ: ಅರ್ಜುನ್ ಜನ್ಯ, ಸಾಹಿತ್ಯ: ಕವಿರಾಜ ಗಾಯನ : ಶಂಕರ ಮಹಾದೇವನ
ರಾಮ ರಾಮ... ಶ್ರೀರಾಮ... ಹೋಗಯಾ... ಹಂಗಾಮ...
ಶ್ರೀರಾಮ ಜಯರಾಮ ಹೋಗಾ ರೇ ಹಂಗಾಮ
ಹೇ ಶ್ರೀರಾಮ ಜಯರಾಮ ಹೋಗಾ ರೇ ಹಂಗಾಮ
ಕೆಂಪೇಗೌಡ (2011) - ಶ್ರೀ ರಾಮ ಜೈ ರಾಮ
ಸಂಗೀತ: ಅರ್ಜುನ್ ಜನ್ಯ, ಸಾಹಿತ್ಯ: ಕವಿರಾಜ ಗಾಯನ : ಶಂಕರ ಮಹಾದೇವನ
ರಾಮ ರಾಮ... ಶ್ರೀರಾಮ... ಹೋಗಯಾ... ಹಂಗಾಮ...
ಶ್ರೀರಾಮ ಜಯರಾಮ ಹೋಗಾ ರೇ ಹಂಗಾಮ
ಹೇ ಶ್ರೀರಾಮ ಜಯರಾಮ ಹೋಗಾ ರೇ ಹಂಗಾಮ
ನೀನೇ ಭಗವಂತ ಮೇಲ್ಯಾರು ಇಲ್ಲ ಕಣೋ ಕಣೋ, ಹೇ ಇಲ್ಲ ಕಣೋ
ನಿನ್ನ ಹಣೆಬರಹ ಬರೆಯೋನು ನೀನೆ ಕಣೋ ಕಣೋ, ನೀನೇನೆ ಕಣೋ
ಕೈಯ ಕಟ್ಟಿ ಕೂರಬೇಡ, ಆಗೋದಿಲ್ಲ ಅನ್ನಬೇಡ
ಏನೇ ಆದ್ರೂ ಅಂಜಬೇಡ, ಯಾರೆ ಬಂದ್ರೂ ನಿಲ್ಲಬೇಡ
ಕೊಟ್ಟ ಮಾತು ತಪ್ಪ ಬೇಡ, ಇಟ್ಟ ಹೆಜ್ಜೆ ಹಿಂದಿಡಬೇಡ
ನೀ ನಿಂತ್ರೆ ನಿನ್ನಾಳು ಪೂರ ಜಗ
ಹಾ ಶ್ರೀರಾಮ ಜಯರಾಮ ಹೋಗಾ ರೇ ಹಂಗಾಮ ಹಂಗಾಮ...
ಹೇ ಶ್ರೀರಾಮ ಜಯರಾಮ ಹೋಗಾ ರೇ ಹಂಗಾಮ
ನೀನೇ ಭಗವಂತ ಮೇಲ್ಯಾರು ಇಲ್ಲ ಕಣೋ ಕಣೋ, ಹೇ ಇಲ್ಲ ಕಣೋ
ರಾಮ ರಾಮ... ಶ್ರೀರಾಮ... ಹೋಗಯಾ... ಹಂಗಾಮ...
ದೋಸ್ತಿ ಮಾಡೋಣ ಬಾರೊ ಶ್ರೀರಾಮ
ಕುಸ್ತಿ ಬೇಡಣ್ಣ ಮಾಡೊ ಹಂಗಾಮ
ಹೇ ಕೈಯಿ ಕಾಲು ಕೊಟ್ಟ, ಭೂಮಿ ಮೇಲೆ ಬಿಟ್ಟ
ಏನೇ ಬಂದ್ರು ಕಷ್ಟ, ನುಗ್ಗು ನೀನು ಭಂಟ
ಕಟ್ಟೋ ಮುಂಚೆ ಚಟ್ಟ, ಗೆಲ್ಲೋ ನೀನು ಆಟ
ನಿಂಗಾಗಿಯೇ ಇದೆ ಧರೆ, ನೀನೆ ಧೊರೆ
ಏ ಸಾಕೋ rap-ಉ, ಹಾಕೋ ಟಪಾಂಗು
ಶ್ರೀರಾಮ ಜಯರಾಮ ಹೋಗಾ ರೇ ಹಂಗಾಮ
ಹೇ ಶ್ರೀರಾಮ ಜಯರಾಮ ಹೋಗಾ ರೇ ಹಂಗಾಮ ಯಾಕೋ...?
ಗೋವಿಂದ ಗೋಪಾಲ ಗೋಳೆಲ್ಲಾ ಬೇಕಿಲ್ಲ ಸಾಕೋ...
ಏಳೋದು ಬೀಳೋದು ಮಾಮೂಲು ಲೈಫೆಲ್ಲಾ
ಬಗ್ಗುವನೆಂದು ಹಾಕೋಕೆ ಗುದ್ದು ಕಾಯುವರೆಂದಿಗೂ ನಮ್ಮ ಜನ
ಸೋಲನೂ ಒದ್ದು ಗೆಲ್ಲೂ ನೀನೆಂದೂ ಗೆಲ್ಲುವುದೆಂದಿಗೂ ಒಳ್ಳೇ ತನ
ಹಣೆಯಬರಹಾನೇ ದಿಗ್ಬರೆಯೊ ನೀನೆ
ಶ್ರೀರಾಮ... ರಾಮ ರಾಮ ರಾಮ ರಾಮ
ಶ್ರೀರಾಮ ಜಯರಾಮ ಹೋಗಾ ರೇ ಹಂಗಾಮ
ಹೇ ಶ್ರೀರಾಮ ಜಯರಾಮ ಹೋಗಾ ರೇ ಹಂಗಾಮ
ನೀನೇ ಭಗವಂತ ಮೇಲ್ಯಾರು ಇಲ್ಲ ಕಣೋ ಕಣೋ, ಹೇ ಇಲ್ಲ ಕಣೋ
ರಾಮ ರಾಮ... ಶ್ರೀರಾಮ... ಹೋಗಯಾ... ಹಂಗಾಮ...
------------------------------------------------------------------------------------------------------------------------
------------------------------------------------------------------------------------------------------------------------
ಕೆಂಪೇಗೌಡ (2011) - ಗೆಳೆಯನೇ ನನ್ನ ಗೆಳೆಯನೇ
ಸಂಗೀತ: ಅರ್ಜುನ್ ಜನ್ಯ, ಸಾಹಿತ್ಯ: ವಿ.ನಾಗೇಂದ್ರಪ್ರಸಾದ ಗಾಯನ : ನರೇಶ ಅಯ್ಯರ, ಲಕ್ಷ್ಮಿ ಮನಮೋಹನ
ಹೆಣ್ಣು : ವಯಸ್ಸು ನನಗೆ ಹದಿನೆಂಟಾಯ್ತು ಮನಸ್ಸಲೇನೋ ಶುರುವಾಗೋಯ್ತು
ಗೆಳೆಯನೇ ನನ್ನ ಗೆಳೆಯನೇ ತಿಳಿಸದೇ ನನ್ನ ಸೆಳೆದನೇ
ಗಂಡು : ವಯಸ್ಸು ನನಗೆ ಹದಿನೆಂಟಾಯ್ತು ಮನಸ್ಸಲೇನೋ ಶುರುವಾಗೋಯ್ತು
ಮೆಲ್ಲನೇ ನಾನು ಮೆಲ್ಲನೆ ಒಲವಿನ ದಾರಿ ಹಿಡಿದೇನೇ
ಗೆಳತಿಯೇ ನಿನ್ನ ಪ್ರೀತಿ ಮಾಡೋ ವಿಷಯನ್ನೇ ನಾ ನನಗೂನು ಹೇಳಿರಲಿಲ್ಲಾ
ಹೇಳದೇ ಬಂದ ಪ್ರೀತಿ ತುಂಬಾ ಚಂದಾನೇ.. ಜೋರಾಗೋಯ್ತು ಎದೆ ತಾಳ
ಹೊಸಬ ಹೊಸಬ ತುಂಬಾ ಹೊಸಬ ಈ ಪ್ರೀತಿ ಶಾಲೇಲಿ
ನನಗೂ ಹೊಸದೇ ಒಲವ ಪದವು ಕರೆಯೋಣ ಜೊತೆಯಲ್ಲಿ ಪ್ರೀತಿ ಗುರುವಾಯ್ತು ನೋಡಿಲ್ಲಿ
ಹೆಣ್ಣು : ಗೆಳೆಯನೇ ನನ್ನ ಗೆಳೆಯನೇ ತಿಳಿಸದೇ ನನ್ನ ಸೆಳೆದನೇ
ಹೆಣ್ಣು : ಸೂರ್ಯನಿಗೊಂದು ಗಿರಿಜ ಮೀಸೆ ಇಟ್ಟಂತೇ ಈ ಅನುಮಾನ ನಿನ್ನ ಕಂಡಾಗ
ಗಂಡು : ತಾವರೆಯೊಂದು ಜರಿ ಸೀರೇನ ಉಟ್ಟಂತೇ ಈ ಅಭಿಮಾನ ನೀ ನಕ್ಕಾಗ
ಹೆಣ್ಣು : ನಿನ್ನ ಹೊರತು ಬೇರೆ ಏನು ಬೇಕಿಲ್ಲ ನನಗೀಗ
ಗಂಡು : ಹೃದಯ ಹೃದಯ ಅದಲು ಬದಲು ಆಗಿದ್ದು ಯಾವಾಗ ನಾನು ನಾನಲ್ಲಾ ಈಗೀಗ...
ಹೆಣ್ಣು : ಮೆಲ್ಲನೆ ನಾನು ಮೆಲ್ಲನೆ ಒಲವಿನ ದಾರಿ ಹಿಡಿದೇನೇ
ಗೆಳೆಯನೇ ನನ್ನ ಗೆಳೆಯನೇ ತಿಳಿಸಿಯಾದೆ ನನ್ನ ಸೆಳೆದನೇ ಮೆಲ್ಲನೇ ...
------------------------------------------------------------------------------------------------------------------------
ಕೆಂಪೇಗೌಡ (2011) - ಕಟ್ಟುನಿಟ್ಟು ಖಾಕಿ ತೊಟ್ಟು ರಾಜನಂತೇ
ಸಂಗೀತ: ಅರ್ಜುನ್ ಜನ್ಯ, ಸಾಹಿತ್ಯ: ವಿ.ನಾಗೇಂದ್ರಪ್ರಸಾದ ಗಾಯನ : ರವಿಶಂಕರ, ಅರ್ಜುನ ಜನ್ಯ, ಕೋರಸ್
ಓಂ ನಮಃ ಶಿವಾಯ ನಾಗೇಂದ್ರಾಹಾರಯ ತ್ರಿಲೋಕ ಲೋಕನಾಯ ನಮಃಶಿವಾಯಃ ನಮೋ ಓಂ..
ಶಂಕರ ಶಶಿಧರ ಹರ ಹರ
ಓಂ ದಿಗಂಬರಾಯ ವರದೇಶುರಾಯ ಗುಣ ಸಂಭವಾಯ ಶಿವತಾಂಡವಾಯಃ ನಮಃ ಓಂ ...
ಶಂಕರ ಶಶಿಧರ ಹರ ಹರ ಶಶಿ ಸಂಭ್ರದಾ...
ಕಟ್ಟುನಿಟ್ಟು ಖಾಕಿ ತೊಟ್ಟು ರಾಜನಂತೇ ಮೀಸೆ ಬಿಟ್ಟು ಪಾರ್ಟಿ ಚಿಟ್ಟೂ ಮಾಡೋ ಕೆಂಪೇಗೌಡೇ..
ಸುಟ್ಟು ಹಾಕೋ ಸಿಟ್ಟಿನಲ್ಲಿ ಅಟ್ಟಹಾಸ ಮಾಡಿಕೊಂಡು ಹಿಂದೇ ಹಿಂದೇ ಹೆಜ್ಜೆ ಇಟ್ಟು ಬಂದ ಕೆಂಪೇಗೌಡೇ ...
ಹೆಬ್ಬುಲಿ ಬಂದಿದೇ ಹೆಬ್ಬುಲಿ ಬಂದಿದೇ ಎಲ್ಲರೂ ಭಯ ಭಯ ಅಂತಾರೇ
ದುಷ್ಟರ ಶಿಕ್ಷಕ ಶಿಷ್ಟರ ರಕ್ಷಕ ಎಲ್ಲರೂ ಜಯ ಜಯ ಅಂತಾರೇ
ಊರ ಕಾಯೋ ದೊರೆಗೇ.. ಈ ಊರೇ ನಿಂದೂ ದೊರೆಗೇ...
ಕಟ್ಟುನಿಟ್ಟು ಖಾಕಿ ತೊಟ್ಟು ರಾಜನಂತೇ ಮೀಸೆ ಬಿಟ್ಟು ಪಾರ್ಟಿ ಚಿಟ್ಟೂ ಮಾಡೋ ಕೆಂಪೇಗೌಡೇ..
ಹರ ಶಿವ ಶಂಕರ ಶಿವ ಹರ ಶಿವ ಶಂಕರ ಶಿವ
ಸುಟ್ಟು ಹಾಕೋ ಸಿಟ್ಟಿನಲ್ಲಿ ಅಟ್ಟಹಾಸ ಮಾಡಿಕೊಂಡು ಹಿಂದೇ ಹಿಂದೇ ಹೆಜ್ಜೆ ಇಟ್ಟು ಬಂದ ಕೆಂಪೇಗೌಡೇ ...
ಓಂಕಾರ ಹಿಂಕಾರ ಮಹಾಂಕಾರ ಓಂಕಾರ ಚಿತ್ತಾರ ಸಿಂಗಾರ ಗಂಗಾಧರ
ಕೆಂಪೇಗೌಡ.. ಕೆಂಪೇಗೌಡ.. ಕೆಂಪೇಗೌಡ.. ಕೆಂಪೇಗೌಡ..
ರೌಡಿಸಂ ಅಂದರೇ ಅಲ್ಲೇನೇ ಇಕ್ಕುವೇ ಅಲ್ಲನೇ ಇಕ್ಕುವೇ
ಹಿಂದುಜಮ್ ಅಂದರೇ ಹಾಡೆಲ್ಲ ಲೆಕ್ಕವೇ... ಹಾಡೆಲ್ಲ ಲೆಕ್ಕವೇ
ಈಶ್ವರ ಶ್ರೀನಿವಾಸ ತುಪಾಕೀ ಉಂಡಬಾಲ ಮನೆ ಮುಂದೆ ಪಟಾಕಿ
ಸರುಗಳ್ಳ ಹಿಡಿಯುವ ಚಾಲಾಕೀ ನಿನ್ನ ಹುಮ್ಮತೆರೆಳುತಲಿ ಸಲಾಕಿ
ಊರ ಕಾಯೋ ದೊರೆಗೇ.. ಈ ಊರೇ ನಿಂದೂ ದೊರೆಗೇ...
ಹರಹರ ರುಧ್ರ ವೀರಭಧ್ರ ಭವಭಯಹರಕ ಶಂಕರ
ಹರಹರ ನೆತ್ತರ ತಾಂಡ ಈಶ್ವರ ದೂರದೃಷ್ಟಿ ಭಯಂಕರ
ಕೆಂಪೇಗೌಡ.. ಕೆಂಪೇಗೌಡ.. ಕೆಂಪೇಗೌಡ.. ಕೆಂಪೇಗೌಡ..
ನೋಡೋಕೇ ಆರಡಿ ಆಕಾಶ ಕಾಲಾಡಿ ಆಕಾಶ ಕಾಲಾಡಿ
ಮಾಡೋದೂ ಗಾರುಡಿ ಈ ಮನಸ್ಸೂ ಕನ್ನಡಿ ಈ ಮನಸ್ಸೂ ಕನ್ನಡಿ
ಅವನಿಗೇ ಇಷ್ಟಕಾಮ್ ಪೋಲಿಸ್ಸೂ ಕಳ್ಳಸಂತೇ ಅನ್ನೋದೇಲ್ಲಾ ಖಲ್ಲಾಸ್ಸೂ
ಕೇಡಿಗಳೂ ರೌಡಿಗಳೂ ಸೊಗಸೂ ಕಟ್ಟಿಕೊಂಡ್ರೂ ಬೇಗ ಭಾಗ ಮ್ಯಾನರಸೂ
ಊರ ಕಾಯೋ ದೊರೆಗೇ.. ಈ ಊರೇ ನಿಂದೂ ದೊರೆಗೇ...
ಕಟ್ಟುನಿಟ್ಟು ಖಾಕಿ ತೊಟ್ಟು ರಾಜನಂತೇ ಮೀಸೆ ಬಿಟ್ಟು ಪಾರ್ಟಿ ಚಿಟ್ಟೂ ಮಾಡೋ ಕೆಂಪೇಗೌಡೇ..
ಸುಟ್ಟು ಹಾಕೋ ಸಿಟ್ಟಿನಲ್ಲಿ ಅಟ್ಟಹಾಸ ಮಾಡಿಕೊಂಡು ಹಿಂದೇ ಹಿಂದೇ ಹೆಜ್ಜೆ ಇಟ್ಟು ಬಂದ ಕೆಂಪೇಗೌಡೇ ...
ಶಂಕರ ಶಶಿಧರ ಹರ ಹರ ಶಂಕರ ಶಶಿಧರ ಹರ ಹರ ಹರಹರ ಶಶಿಧರ ಹರಹರ ಶಂಕರಾ ......
-----------------------------------------------------------------------------------------------------------------------
No comments:
Post a Comment