242. ದೇವತಾ ಮನುಷ್ಯ (1990)



ದೇವತಾ ಮನುಷ್ಯ ಚಿತ್ರದ ಹಾಡುಗಳು 
  1. ಹೃದಯದಲಿ ಇದೇನಿದು ನದಿಯೊಂದು ಓಡಿದೆ 
  2. ಈ ಸೊಗಸಾದ ಸಂಜೆ 
  3. ಇದೇ ಜೀವನ 
  4. ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು 
  5. ನಿನ್ನಂಥ ಅಪ್ಪ ಇಲ್ಲಾ 
ದೇವತಾ ಮನುಷ್ಯ (1990) - ಹಾಲಲ್ಲಾದರು ಹಾಕು
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಉಪೇಂದ್ರಕುಮಾರ್ ಗಾಯನ: ಡಾ.ರಾಜ್‍ಕುಮಾರ್, ಬಿ.ಆರ್.ಛಾಯ

ಆ..ಆ.. ಆ.. ಆ..ಹಾಲಲ್ಲಾದರು ಹಾಕು  ನೀರಲ್ಲಾದರು ಹಾಕು
ರಾಘವೇಂದ್ರಾ..
ಹಾಲಲ್ಲಿ ಕೆನೆಯಾಗಿ  ನೀರಲ್ಲಿ ಮೀನಾಗಿ
ಹಾಯಾಗಿರುವೇ ರಾಘವೇಂದ್ರ..
ಹಾಲಲ್ಲಾದರು ಹಾಕು  ನೀರಲ್ಲಾದರು ಹಾಕು
ರಾಘವೇಂದ್ರಾ..
ಹಾಲಲ್ಲಿ ಕೆನೆಯಾಗಿ ನೀರಲ್ಲಿ ಮೀನಾಗಿ
ಹಾಯಾಗಿರುವೇ.. ರಾಘವೇಂದ್ರ..
ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು ರಾಘವೇಂದ್ರಾ||

ಮುಳ್ಳಲ್ಲಾದರು ನೂಕು  ಕಲ್ಲಲ್ಲಾದರು ನೂಕು
ರಾಘವೇಂದ್ರಾ.. ಆ.. ಆ.. ಆ..
ಮುಳ್ಳಲ್ಲಾದರು ನೂಕು  ಕಲ್ಲಲ್ಲಾದರು ನೂಕು
ರಾಘವೇಂದ್ರಾ
ಮುಳ್ಳಲ್ಲಿ ಮುಳ್ಳಾಗಿ  ಕಲ್ಲಲ್ಲಿ ಕಲ್ಲಾಗಿ
ಒಂದಾಗಿರುವೇ ರಾಘವೇಂದ್ರ
ಬಿಸಿಲಲ್ಲೆ ಒಣಗಿಸು ನೆರಳಲ್ಲೆ ಮಲಗಿಸು
ರಾಘವೇಂದ್ರಾ..
ಬಿಸಿಲಲ್ಲಿ ಕೆಂಪಾಗಿ ನೆರಳಲ್ಲಿ ತಂಪಾಗಿ
ನಗುನಗುತ ಇರುವೇ.. ರಾಘವೇಂದ್ರಾ||
ಹಾಲಲ್ಲಾದರು ಹಾಕು  ನೀರಲ್ಲಾದರು ಹಾಕು
ರಾಘವೇಂದ್ರಾ ಆ.. ಆ.. ಆ..

ಸುಖವನ್ನೆ ನೀಡೆಂದು  ಎಂದೂ ಕೇಳೆನು ನಾನು
ರಾಘವೇಂದ್ರಾ.. ಆ.. ಆ.. ಆ..
ಸುಖವನ್ನೆ ನೀಡೆಂದು  ಎಂದೂ ಕೇಳೆನು ನಾನು
ರಾಘವೇಂದ್ರಾ..
ಮುನ್ನ ಮಾಡಿದ ಪಾಪ, ಯಾರ ತಾತನ ಗಂಟು
ಮುನ್ನ ಮಾಡಿದ ಪಾಪ, ಯಾರ ತಾತನ ಗಂಟು
ನೀನೇ ಹೇಳೂ ರಾಘವೇಂದ್ರ..
ಎಲ್ಲಿದ್ದರೇನು ನಾ, ಹೇಗಿದ್ದರೇನು ನಾ
ರಾಘವೇಂದ್ರಾ..
ನಿನ್ನಲ್ಲಿ ಶರಣಾಗಿ, ನೀ ನನ್ನ ಉಸಿರಾಗಿ
ಬಾಳಿದರೆ ಸಾಕೂ.. ರಾಘವೇಂದ್ರ..
ಹಾಲಲ್ಲಾದರು ಹಾಕು  ನೀರಲ್ಲಾದರು ಹಾಕು
ರಾಘವೇಂದ್ರಾ..
ಹಾಲಲ್ಲಿ ಕೆನೆಯಾಗಿ  ನೀರಲ್ಲಿ ಮೀನಾಗಿ
ಹಾಯಾಗಿರುವೇ ರಾಘವೇಂದ್ರ..
ಹಾಲಲ್ಲಾದರು ಹಾಕು  ನೀರಲ್ಲಾದರು ಹಾಕು
ರಾಘವೇಂದ್ರಾ..
-------------------------------------------------------------------------------------------------------------------------

ದೇವತಾ ಮನುಷ್ಯ (೧೯೯೦)........ಹೃದಯದಲಿ ಇದೇನಿದು ನದಿಯೊಂದು ಓಡಿದೆ
ಸಾಹಿತ್ಯ :ಚಿ.ಉದಯಶಂಕರ್ ಸಂಗೀತ :ಉಪೇಂದ್ರ ಕುಮಾರ್ ಗಾಯನ:  ಡಾ.ರಾಜ, ಮಂಜುಳ ಗುರುರಾಜ್


ಡಾ.ರಾಜ : ಆಹಹಾ.. ಆಹಾ ಹೂಂ.. ಹೂಂ... ಹೂಂ
                ಹೃದಯದಲಿ ಇದೇನಿದು ನದಿಯೊಂದು ಓಡಿದೆ
                ಹೃದಯದಲಿ ಇದೇನಿದು ನದಿಯೊಂದು ಓಡಿದೆ
                ಕಲಕಲನೇ ಕಲರವ ಕೇಳಿ ಹೊಸ ಬಯಕೆ ಹೂವು ಅರಳಿ
                ಜೊತೆಯಲ್ಲಿ ಪ್ರೇಮಗೀತೆ ಹಾಡುವಾಸೆ ಈಗ
ಮಂಜುಳ : ಹೃದಯದಲಿ ಇದೇನಿದು ನದಿಯೊಂದು ಓಡಿದೆ
                ಹೃದಯದಲಿ ಇದೇನಿದು ನದಿಯೊಂದು ಓಡಿದೆ
                ಕಲಕಲನೇ ಕಲರವ ಕೇಳಿ ಹೊಸ ಬಯಕೆ ಹೂವು ಅರಳಿ
                 ಜೊತೆಯಲ್ಲಿ ಪ್ರೇಮಗೀತೆ ಹಾಡುವಾಸೆ ಈಗ
ಡಾ.ರಾಜ : ಹೃದಯದಲಿ ಇದೇನಿದು
ಮಂಜುಳ ಗುರುರಾಜ್: ನದಿಯೊಂದು ಓಡಿದೆ

ಡಾ.ರಾಜ : ಸುಯ್ ಎನ್ನುತಾ ಬೀಸುವ ತಣ್ಣನೆ ಗಾಳಿಗೆ
ಮಂಜು : ಗುಯ್ ಎನ್ನುವಾ ದುಂಬಿಯ ಹಾಡಿನ ಮೋಡಿಗೆ
ಡಾ.ರಾಜ:  ಈ ಮನಸು ಸೋಲುತಿದೆ
ಮಂಜು: ಹೊಸ ಕನಸು ಕೆಣಕುತಿದೆ
ಡಾ.ರಾಜ : ಮಾಡುವುದೇನೀಗಾ.....
ಮಂಜು: ಹೃದಯದಲಿ ಇದೇನಿದು
ಡಾ.ರಾಜ :ನದಿಯೊಂದು ಓಡಿದೆ

ಮಂಜು:ಘಮ್ ಎನ್ನುವಾ ತಾವರೆ ಹೂವಿನ ಕಂಪಿಗೆ
ಡಾ.ರಾಜ :ಜುಮ್ ಎನ್ನಿಸಿ ತನುವಲಿ ಓಡುವಾ ಮಿಂಚಿಗೆ
ಮಂಜು: ಮೈ ಬಿಸಿಯು ಏರುತಿದೆ
ಡಾ.ರಾಜ : ಈ ಬೆಸುಗೆ ಹೇಳುತಿದೆ
ಮಂಜು: ತುಂಬಿತು ಆನಂದಾ.......
ಡಾ.ರಾಜ : ಹೃದಯದಲಿ ಇದೇನಿದು ನದಿಯೊಂದು ಓಡಿದೆ
ಮಂಜು: ಹೃದಯದಲಿ ಇದೇನಿದು ನದಿಯೊಂದು ಓಡಿದೆ
ಡಾ.ರಾಜ : ಕಲಕಲನೇ ಕಲರವ ಕೇಳಿ
ಮಂಜು: ಹೊಸ ಬಯಕೆ ಹೂವು ಅರಳಿ
ಇಬ್ಬರೂ : ಜೊತೆಯಲ್ಲಿ ಪ್ರೇಮಗೀತೆ ಹಾಡುವಾಸೆ ಈಗ
              ಹೃದಯದಲಿ ಇದೇನಿದು ನದಿಯೊಂದು ಓಡಿದೆ
              ಹೃದಯದಲಿ ಇದೇನಿದು ನದಿಯೊಂದು ಓಡಿದೆ
--------------------------------------------------------------------------------------------------------------------------

ದೇವತಾ ಮನುಷ್ಯ (೧೯೯೦).....ಈ ಸೊಗಸಾದ ಸಂಜೆ
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ: ಉಪೇಂದ್ರ ಕುಮಾರ್ ಗಾಯನ : ಡಾ.ರಾಜಕುಮಾರ್ ಮತ್ತು ವಾಣಿ ಜಯರಾಂ


ಡಾ.ರಾಜ : ಈ ಸೊಗಸಾದ ಸಂಜೆ
                  ಈ ಸೊಗಸಾದ ಸಂಜೆ ನಿನ್ನನ್ನು ನೋಡುತಾ ನನ್ನನ್ನೇ ಮರೆತೆ
                   ಎಂದೆಂದೂ ಜೊತೆಯಿರುವಾ ಬಯಕೆ ಇನ್ನೂ ಏಕೆ
ವಾಣಿ : ಈ ಸೊಗಸಾದ ಸಂಜೆ ನಿನ್ನನ್ನು ನೋಡುತಾ ನನ್ನನ್ನೇ ಮರೆತೆ
          ಎಂದೆಂದೂ ಜೊತೆಯಿರುವಾ ಬಯಕೆ ಇನ್ನೂ ಏಕೆ
ಡಾ.ರಾಜ : ಈ ಸೊಗಸಾದ ಸಂಜೆ
ಡಾ.ರಾಜ :ನಲ್ಲೆಯು ಮುಡಿದ ಮಲ್ಲಿಗೆ ಹೂವು
               ಪ್ರೇಮದ ಗೀತೆ ಹಾಡಿದೆ ಇಂಪಾಗಿ
               ಕಂಪನ್ನು ಚೆಲ್ಲಿದೆ ಹಿತವಾಗಿ
ವಾಣಿ : ನಲ್ಲನ ನುಡಿಯೂ ಕೊಳಲಿನ ದನಿಯೊ
           ಕಾಣೆನು ನಾನು ಕೇಳುತ ಬೆರಗಾಗಿ
           ಸಂಕೋಚ ತುಂಬಿತು ತಾನಾಗಿ
ಡಾ.ರಾಜ :  ಓ...ಓ....ಪ್ರೇಮದ ಗಂಗೆ ಪ್ರಣಯದ ತುಂಗೆ  ನಲ್ಲೆಯ ಮಾತುಗಳೆಲ್ಲ
ವಾಣಿ :  ಈ ಸೊಗಸಾದ ಸಂಜೆ ನಿನ್ನನ್ನು ನೋಡುತಾ ನನ್ನನ್ನೇ ಮರೆತೆ
ಇಬ್ಬರೂ: ಎಂದೆಂದೂ ಜೊತೆಯಿರುವಾ ಬಯಕೆ ಇನ್ನೂ ಏಕೆ  ಈ ಸೊಗಸಾದ ಸಂಜೆ
ವಾಣಿ: ಗೆಳೆಯನೆ ನಿನ್ನ ಕಣ್ಣಲೆ ಇಂದು
          ಪ್ರೇಮದ ಲೋಕ ನೋಡಿದೆ ನಾನೀಗ
          ನನ್ನಲ್ಲೀ ಮೂಡಿತು ಅನುರಾಗ
ಡಾ.ರಾಜ :    ಅರಗಿಣಿ ಕೂಡ ನಾಚಿತು ನಿನ್ನ
                   ಮಾತಾನು ಕೇಳಿ ಕಾದಿದೆ ಓ ಜಾಣೆ
                  ನಿನ್ನಂತೆ ಯಾರನು ನಾ ಕಾಣೆ
ವಾಣಿ :  ಓ......ಓ...... ಬಾಳಲಿ ಸರಸ ತುಂಬಿದ ಕಳಸ  ಪ್ರೇಮವು ತುಂಬಿರುವಾಗ
ಡಾ.ರಾಜ : ಈ ಸೊಗಸಾದ ಸಂಜೆ ನಿನ್ನನ್ನು ನೋಡುತಾ ನನ್ನನ್ನೇ ಮರೆತೆ
ವಾಣಿ :  ಈ ಸೊಗಸಾದ ಸಂಜೆ ನಿನ್ನನ್ನು ನೋಡುತಾ ನನ್ನನ್ನೇ ಮರೆತೆ
ಇಬ್ಬರೂ: ಎಂದೆಂದೂ ಜೊತೆಯಿರುವಾ ಬಯಕೆ ಇನ್ನೂ ಏಕೆ
              ಈ ಸೊಗಸಾದ ಸಂಜೆ
----------------------------------------------------------------------------------------------------------------------

ದೇವತಾ ಮನುಷ್ಯ (೧೯೯೦)....... ನಿನ್ನಂಥ ಅಪ್ಪ ಇಲ್ಲಾ
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ: ಉಪೇಂದ್ರ ಕುಮಾರ್ ಗಾಯನ :ಡಾ.ರಾಜಕುಮಾರ್ ಮತ್ತು ಬಿ.ಆರ್.ಛಾಯಾ


ಬಿ.ಆರ್.ಛಾಯಾ: ನಿನ್ನಂಥ ಅಪ್ಪ ಇಲ್ಲಾ (ಆಹಾ) ಒಂದೊಂದು ಮಾತು ಬೆಲ್ಲ (ಒಹೋ)
                        ನಿನ್ನಂಥ ಅಪ್ಪ ಇಲ್ಲಾ (ಆಹಾ) ಒಂದೊಂದು ಮಾತು ಬೆಲ್ಲ (ಒಹೋ)
                        ನೀನೇ ನನ್ನ ಜೀವ ನೀನೇ ನನ್ನ ಪ್ರಾಣ
                       ಯಾವ ದೇವ ತಂದ ವರವೋ ಇನ್ನು ನಾನು ಅರಿಯೆನು
ಡಾ.ರಾಜ: ನಿನ್ನಂಥ ಮಗಳು ಇಲ್ಲಾ (ಆಹಾ) ಬಾಳಲ್ಲಿ ನೀನೇ ಎಲ್ಲಾ (ಒಹೋ)
                ನಿನ್ನಂಥ ಮಗಳು ಇಲ್ಲಾ ಬಾಳಲ್ಲಿ ನೀನೇ ಎಲ್ಲಾ
                ನಿನ್ನ ಕಂಡ ಮೇಲೆ ಬೆಳಕ ಕಂಡೆ ಬಾಲೆ
               ಯಾವ ದೇವ ತಂದ ವರವೋ ಇನ್ನು ನಾನು ಅರಿಯೆನು
ಬಿ.ಆರ್.ಛಾಯಾ: ನಿನ್ನಂಥ ಅಪ್ಪ ಇಲ್ಲಾ (ಆಹಾ..)
ಡಾ.ರಾಜ : ನಿನ್ನಂಥ ಮಗಳು ಇಲ್ಲಾ (ಹ್ಹಹ್ಹಹ್ಹ.. )  

ಬಿ.ಆರ್.ಛಾಯಾ:  ನೀ ಹೀಗೇ ನಡೆಯಲು ನಡು ಹೀಗೇ ಕುಣಿಯಲು
                          ಹದಿನೆಂಟು ವಯಸಿನ ಹುಡುಗನ ಹಾಗಿದೆ
ಡಾ.ರಾಜ: ಹೇ... ಹೇ... ನೀ ಹೀಗೆ ನಗುತಿರೆ ಜೊತೆಯಾಗಿ ಬರುತಿರೆ
               ಆನಂದ ತರುತಿರೆ ಹುಡುಗನೇ ಎಂದಿಗೂ
ಇಬ್ಬರೂ : ರಂಪಂ ರಪಂಪ ಪಂಪ ರಂಪಂ ರಪಂಪ ಪಂಪ
ಬಿ.ಆರ್.ಛಾಯಾ:  ಮಾತಿನಾ ಮೋಡಿಗೆ ನಿನ್ನಾಣೆ ನಾನು ಮೆಚ್ಚಿದೆ
ಡಾ.ರಾಜ: ನಿನ್ನಂಥ ಮಗಳು ಇಲ್ಲಾ
ಬಿ.ಆರ್.ಛಾಯಾ: ನಿನ್ನಂಥ ಅಪ್ಪ ಇಲ್ಲಾ

ಡಾ.ರಾಜ: ಸಂತೋಷವೆಂದರೆ ಉಲ್ಲಾಸವೆಂದರೆ ಸಂಗೀತವೆಂದರೆ ನಿನ ಜೊತೆ ನಡೆದರೆ
ಬಿ.ಆರ್.ಛಾಯಾ:  ಮುದ್ಡಾದ ಮಾತನೆ ಹಿತವಾದ ರಾಗದಿ ದಿನವೆಲ್ಲ ಹಾಡಲು ಹೇಗೇ ನೀ ಅರಿತೆಯೋ
ಇಬ್ಬರೂ : ರಂಪಂ ರಪಂಪ ಪಂಪ ರಂಪಂ ರಪಂಪ ಪಂಪ
ಡಾ.ರಾಜ: ನನ್ನ ಈ ಅರಗಿಣಿ ಮಾತಾಡೇ ನೋಡಿ ಕಲಿತೆನೋ
ಬಿ.ಆರ್.ಛಾಯಾ: ನಿನ್ನಂಥ ಅಪ್ಪ ಇಲ್ಲಾ ಒಂದೊಂದು ಮಾತು ಬೆಲ್ಲ
ಡಾ.ರಾಜ: ನಿನ್ನಂಥ ಮಗಳು ಇಲ್ಲಾ ಬಾಳಲ್ಲಿ ನೀನೇ ಎಲ್ಲಾ
ಬಿ.ಆರ್.ಛಾಯಾ:  ನೀನೇ ನನ್ನ ಜೀವ
ಡಾ.ರಾಜ: ನೀನೇ ನನ್ನ ಪ್ರಾಣ
ಇಬ್ಬರೂ : ಯಾವ ದೇವ ತಂದ ವರವೋ ಇನ್ನು ನಾನು ಅರಿಯೆನು
ಬಿ.ಆರ್.ಛಾಯಾ: ನಿನ್ನಂಥ ಅಪ್ಪ ಇಲ್ಲಾ
ಡಾ.ರಾಜ:ನಿನ್ನಂಥ ಮಗಳು ಇಲ್ಲಾ
ಬಿ.ಆರ್.ಛಾಯಾ: ನಿನ್ನಂಥ ಅಪ್ಪ ಇಲ್ಲಾ
ಡಾ.ರಾಜ:ನಿನ್ನಂಥ ಮಗಳು ಇಲ್ಲಾ
ಬಿ.ಆರ್.ಛಾಯಾ: ನಿನ್ನಂಥ ಅಪ್ಪ ಇಲ್ಲಾ
ಡಾ.ರಾಜ:ನಿನ್ನಂಥ ಮಗಳು ಇಲ್ಲಾ
ಬಿ.ಆರ್.ಛಾಯಾ: ನಿನ್ನಂಥ ಅಪ್ಪ ಇಲ್ಲಾ
ಡಾ.ರಾಜ:ನಿನ್ನಂಥ ಮಗಳು ಇಲ್ಲಾ
ಬಿ.ಆರ್.ಛಾಯಾ: ನಿನ್ನಂಥ ಅಪ್ಪ ಇಲ್ಲಾ
ಡಾ.ರಾಜ:ನಿನ್ನಂಥ ಮಗಳು ಇಲ್ಲಾ
ಬಿ.ಆರ್.ಛಾಯಾ: ನಿನ್ನಂಥ ಅಪ್ಪ ಇಲ್ಲಾ
ಡಾ.ರಾಜ:ನಿನ್ನಂಥ ಮಗಳು ಇಲ್ಲಾ
--------------------------------------------------------------------------------------------------------------------------

ದೇವತಾ ಮನುಷ್ಯ (೧೯೯೦)....... ಬಿಸಿಲಲ್ಲೇ ಒಣಗಿಸು ನೆರಳಲ್ಲೇ
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ: ಉಪೇಂದ್ರ ಕುಮಾರ್ ಗಾಯನ : ಬಿ.ಆರ್.ಛಾಯಾ 

ಬಿಸಿಲಲ್ಲೇ ಒಣಗಿಸು ನೆರಳಲ್ಲೇ ಮಲಗಿಸು ರಾಘವೇಂದ್ರ
ಬಿಸಲಲ್ಲಿ ಕೆಂಪಾಗಿ ನೆರಳಲ್ಲಿ ತಂಪಾಗಿ ನಗುನಗುತಾ ಇರುವೆ ರಾಘವೇಂದ್ರ
ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು ರಾಘವೇಂದ್ರ
--------------------------------------------------------------------------------------------------------------------------

ದೇವತಾ ಮನುಷ್ಯ (೧೯೯೦)....... ಇದೇ ಜೀವನ 
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ: ಉಪೇಂದ್ರ ಕುಮಾರ್ ಗಾಯನ :ಎಸ್.ಪಿ.ಬಿ,. 

ಇದೇ ಜೀವನ... ಇದೇ ಜೀವನ
ಅರಿತಾಗ ಬಾಳು ಸುಮಧುರ ಗಾನಾ

ದೇವರು ಬೇರೆ ಇಲ್ಲ ಕಾಣದೆಯೇ ಅಡಗಿಲ್ಲ
ಅರಿಯುವ ಜಾಣ್ಮೆಯು ಬೇಕು
ನೋಡುವ ಕಣ್ಣಿರಬೇಕು
ಪ್ರೇಮವೂ ತುಂಬಿದ ಜೀವ
ಮಾನವನಾದರು ದೈವ
-------------------------------------------------------------------------------------------------------------------------

No comments:

Post a Comment