244. ನಮ್ಮೂರ ಮಂದಾರ ಹೂವೆ (1996)


ನಮ್ಮೂರ ಮಂದಾರ ಹೂವೇ ಚಲನಚಿತ್ರದ ಹಾಡುಗಳು 
  1. ಹಳ್ಳಿ ಲಾವಣಿಯಲ್ಲಿ ಲಾಲಿ ಸುವ್ವ ಲಾಲಿ ಇಲ್ಲಿ ಲಲಿತವಲ್ಲಿ ಈ ಮನಸಲ್ಲಿ
  2. ಹೇಳೆ ಕೋಗಿಲೆ ಇಂಪಾಗಲಹೇಳೆ ಮಲ್ಲಿಗೆ ಕಂಪಾಗಲ
  3. ಮನದಾಸೆ ಹಕ್ಕಿಯಾಗಿ ಮುಗಿಲಾಗೆ ತೇಲಿ ತೇಲಿ 
  4. ಮುತ್ತು ಮುತ್ತು ನೀರ ಹನಿಯ ತಾಂತನನಂ 
  5. ಓಂಕಾರದಿ ಕಂಡೆ ಪ್ರೇಮ ನಾದವ
  6. ಓ ಒಲವೇ ನಿನಗೇ ಎದೆಯ ಕದವ ತೆರೆಯದು  
  7. ಓಂಕಾರದಿ ಕಂಡೆ ಪ್ರೇಮ ನಾದವ (ಚಿತ್ರಾ)
ನಮ್ಮೂರ ಮಂದಾರ ಹೂವೆ (1996) - ಹಳ್ಳಿ ಲಾವಣಿಯಲ್ಲಿ
ಸಂಗೀತ: ಇಳಯರಾಜ   ಸಾಹಿತ್ಯ: ಕೆ.ಕಲ್ಯಾಣ್   ಹಾಡಿರುವವರು: ಎಸ್.ಪಿ.ಬಾಲಸುಬ್ರಮಣ್ಯಂ


ಹಳ್ಳಿ ಲಾವಣಿಯಲ್ಲಿ ಲಾಲಿ ಸುವ್ವ ಲಾಲಿ ಇಲ್ಲಿ ಲಲಿತವಲ್ಲಿ ಈ ಮನಸಲ್ಲಿ
ನೀ ಮುಡಿದರೆ ಹೂ ನಲಿವುದು ನೀ ನುಡಿದರೆ ಕಾವ್ಯ ಸುರಿವುದು

ಮುತ್ತು ಹೇಳಿತ್ತು ಮುತ್ತಲ್ಲೆ ನಿನ್ನ ಸಿಂಗರಿಸು ಅಂತ
ಅನುಮತಿಯ ನೀಡುವೆಯ ಕಲ್ಯಾಣಿ ಕಲ್ಯಾಣಿ
ಗಿಳಿಯು ಹೇಳಿತ್ತು ನಿನ್ನಿಂದ ಮಾತು ಕಲಿಬೇಕು ಅಂತ
ನಿನ್ನ ಮಾತೆ ಕಿವಿಗಳಿಗೆ ಕವಿವಾಣಿ ಕವಿವಾಣಿ
ಹಾಲು ಹಂಸೆ ಹೇಳುತಾವೆ ನಿನ್ನ ನಡೆಯೆ ಸ್ಪೂರ್ತಿ
ಮಿಂಚು ಬಳ್ಳಿ ಹೇಳುತಾವೆ ನಿನ್ನ ತಳುಕೆ ಸ್ಪೂರ್ತಿ
ಆ ತಾರೆ ಸಂಸಾರ ಶೃಂಗಾರವೇಳುತ್ತ ಕಾದಿತ್ತು ಆ ಬಾನಲ್ಲಿ
ಬೀಸೊ ತಂಗಾಳಿ ನಿನ್ನನ್ನು ಸೋಕಿ ತಂಪಾದೆ ಅಂತು
ನಿನ ವಯಸೆ ತಂಪಿನಲೂ ಬಲು ತಂಪು ಬಲು ತಂಪು
ಹರಿಯೋ ನೀರೆಲ್ಲ ನಿನ್ನ ಗೆಜ್ಜೆ ನಾದ ವರವಾಯ್ತು ಅಂತು
ನೀ ಕೊಡುವ ಕಲರವವೆ ಕಿವಿಗಿಂಪು ಕಿವಿಗಿಂಪು
ಮಳೆ ಬಿಲ್ಲು ಅಂದುಕೊಂತು ನಿನ್ನಾ ಬಣ್ಣ ಸ್ಪೂರ್ತಿ
ಕವಿ ಮನಸು ಹಾಡಿಕೊಂತು ನಿನ್ನ ಹೆಸರೆ ಸ್ಪೂರ್ತಿ
ಈ ನಿನ್ನ ವಯ್ಯಾರ ನೋಡುತ್ತ ಹಾಡಿತ್ತು ಮಂದಾರ ಈ ಊರಲ್ಲಿ
------------------------------------------------------------------------------------------------------------------------

ನಮ್ಮೂರ ಮಂದಾರ ಹೂವೇ (೧೯೯೬) - ಹೇಳೆ ಕೋಗಿಲೆ ಇಂಪಾಗಲಹೇಳೆ ಮಲ್ಲಿಗೆ ಕಂಪಾಗಲ
ಸಾಹಿತ್ಯ: ಕೆ.ಕಲ್ಯಾಣ್ ಸಂಗೀತ: ಇಳಯರಾಜ ಹಾಡಿದವರು: ಚಿತ್ರಾ

ಹೇಳೆ ಕೋಗಿಲೆ ಇಂಪಾಗಲಹೇಳೆ ಮಲ್ಲಿಗೆ ಕಂಪಾಗಲ
ಎಲ್ಲೆಲ್ಲೂ ಹೊಸ ಬೆಳಕು ಕಂಡಂತಾಯಿತು
ಹೇಳೆ ಇಬ್ಬನಿ ತಂಪಾಗಲ
ಹೇಳೆ ದುಂಬಿಯೆ ಜೊಂಪಾಗಲ
ಎಲ್ಲೆಲ್ಲೂ ಹೊಸ ಚಿಗುರು ಬಂದಂತಾಯಿತು

ಹೇ ಓ ಮೈನಾ ಈ ಮೈನ ಮರೆತಾಯಿತು
ಈ ಮನ ದುಂಬಿ ಹುರಿದುಂಬಿದಂತಾಯಿತು
ಹೇ ಏಕಿಂತ ಲವಲವಿಕೆ ಮೈಗೂಡಿತು
ಹೇಳೆ ಕೋಗಿಲೆ ಇಂಪಾಗಲ
ಎಲ್ಲೆಲ್ಲೂ ಹೊಸ ಬೆಳಕು ಕಂಡಂತಾಯಿತು
ಜಿಗಿಯೊ ಭಾವನೆಯು ಮೈಯಲಿ
ಹಸಿರ ಉತ್ಸವವ ಮಾಡಿತೊ
ಕನಸೊ ಕಲ್ಪನೆಯೊ ತೋಚದೆ
ತುಮುಲ ಪುಲಕಗಳ ತಂದಿತೊ
ಹೂವುಗಳ ಪರಿಮಳವೆ
ಪರಿಪರಿ ನಾಚುವಂತೆ
ಹೃದಯವೆ ಭ್ರಮಿಸುತಿದೆ ಏಕಿಂದು
ಹೇಳೆ ಕೋಗಿಲೆ ಇಂಪಾಗಲ
ಎಲ್ಲೆಲ್ಲೂ ಹೊಸ ಬೆಳಕು ಕಂಡಂತಾಯಿತು
ಹೇ ಓ ಮೈನ ಈ ಮೈನ ಮರೆತಾಯಿತು
ಈ ಮನ ದುಂಬಿ ಹುರಿದುಂಬಿದಂತಾಯಿತು
ಹೇ ಏಕಿಂತ ಲವಲವಿಕೆ ಮೈಗೂಡಿತು
ಹೇಳೆ ಕೋಗಿಲೆ ಇಂಪಾಗಲ
ಮುಗಿಲ ಮೇಲೇರಿ ಹಾರುವ
ಬಯಕೆ ಏಕಿಂದು ಮೂಡಿತು
ಕಡಲ ಒಡಲಾಳ ಈಜುವ
ತವಕ ಏಕಿಲ್ಲಿ ಕಾಡಿತು
ಹೊಸ ಆಕಾಶವಿದೊ
ಹೊಸತು ಭೂಮಿಯಿದೊ
ಹೃದಯವೆ ಭ್ರಮಿಸುತಿದೆ ಏಕಿಂದು
ಹೇಳೆ ಕೋಗಿಲೆ ಇಂಪಾಗಲ
ಹೇಳೆ ಮಲ್ಲಿಗೆ ಕಂಪಾಗಲ
ಎಲ್ಲೆಲ್ಲೂ ಹೊಸ ಬೆಳಕು ಕಂಡಂತಾಯಿತು
ಹೇಳೆ ಇಬ್ಬನಿ ತಂಪಾಗಲ
ಹೇಳೆ ದುಂಬಿಯೆ ಜೊಂಪಾಗಲ
ಎಲ್ಲೆಲ್ಲೂ ಹೊಸ ಚಿಗುರು ಬಂದಂತಾಯಿತು
ಹೇ ಓ ಮೈನಾ ಈ ಮೈನ ಮರೆತಾಯಿತು
ಈ ಮನ ದುಂಬಿ ಹುರಿದುಂಬಿದಂತಾಯಿತು
ಹೇ ಏಕಿಂತ ಲವಲವಿಕೆ ಮೈಗೂಡಿತು
ಹೇಳೆ ಕೋಗಿಲೆ ಇಂಪಾಗಲ
ಎಲ್ಲೆಲ್ಲೂ ಹೊಸ ಬೆಳಕು ಕಂಡಂತಾಯಿತು
---------------------------------------------------------------------------------------------------------------------

ನಮ್ಮೂರ ಮಂದಾರ ಹೂವೆ (1996) - ಮನದಾಸೆ ಹಕ್ಕಿಯಾಗಿ

ಸಾಹಿತ್ಯ: ಕೆ.ಕಲ್ಯಾಣ್   ಸಂಗೀತ: ಇಳಯರಾಜ  ಹಾಡಿರುವವರು: ಮಂಜುಳ ಗುರುರಾಜ್, ಎಸ್.ಪಿ.ಬಾಲಸುಬ್ರಮಣ್ಯಂ


ಮನದಾಸೆ ಹಕ್ಕಿಯಾಗಿ ಮುಗಿಲಾಗೆ ತೇಲಿ ತೇಲಿ
ಬನದಾಗೆ ಸುತ್ತಿ ಸುಳಿದು ಬಯಲಾಗೆ ಜೀಕಿ ಜೀಕಿ
ಓಹ್ ಝುಳು ಝುಳು ಹರಿಯುವ ನದಿಯಲಿ
ಕಿಲ ಕಿಲ ಒಲಿಯುವ ಗಿಳಿಯಲಿ ಪ್ರೀತಿ ಮಾತೇನೆ
ಚಿಲಿ ಪಿಲಿ ಹಾಡೊ ಮೈನ ಪ್ರೇಮದರ್ಥ ಗೊತ್ತೆ ನಿನಗೆ
ತುಡಿವ ಮಿಡಿವ ಜೀವ ಒಳಗೆ  ತುಡಿವ ಮಿಡಿವ ಜೀವ ಒಳಗೆ
ತುಂ ತುಂ ಎಂದು ಹಾಡೋ ದುಂಬಿ ಪ್ರೀತಿ ರೀತಿ ಗೊತ್ತೆ ನಿನಗೆ
ಕೂಗಿ ಕರೆವ ಭಾವ ಒಳಗೆ  ಕೂಗಿ ಕರೆವ ಭಾವ ಒಳಗೆ
ತೇಲಾದ  ನೆಲಕೆ ಹಸಿರ ನೀಡಿ ತೂಗಾಡೊ ಗಿಡ ಮರ ಪ್ರೀತಿ
ಬೋಳಾದ ಮರಕೆ ಚಿಗುರ ತಂದು ಓಲಾಡೊ ಎಲೆ ಎಲೆ ಪ್ರೀತಿ
ಇತ್ತ ಮಲೆ ಮಲೆ ಯಲ್ಲಿ ಅತ್ತ ನೆಲೆ ನೆಲೆ ಯಲ್ಲಿ
ಸುಂದರ ಸುಂದರ ಸೆಲೆ ಹಂದರ ಹಂದರ ಬಲೆ
ಎಂದು ಪ್ರೀತಿ ತಂದಾಗ
ಪ್ರೇಮಿ ಅವಳ ಕಾಣದೆ ಇರಲು ಪ್ರೀತಿ ನೋವು ತಂದೇ ತಹುದು
ಪ್ರೇಮ ರೋಗ ಬಂದೆ ಬಹುದು  ಪ್ರೇಮ ರೋಗ ಬಂದೆ ಬಹುದು
ಪ್ರೇಮ ರೋಗ ಬಿಡದೆ ಬರಲು ಪ್ರೇಮಿ ಎದೆಯ ಸುಡದೆ ಇರದು
ಸುಡುವ ಎದೆಗೆ ಪ್ರೇಮವೆ ಮದ್ದು  ಸುಡುವ ಎದೆಗೆ ಪ್ರೇಮವೆ ಮದ್ದು
ಸಂತೋಷ ತಂದ ಪ್ರೀತಿ ಎಂದು ನೋವಲ್ಲೆ ಮುಳುಗಿ ಸಾಗಿ
ಸಂಗಾತಿ ಕಂಡ ಪ್ರೀತಿ ನಿತ್ಯ ಬಾಳಲ್ಲಿ ಬೆಂದು ಹೋಗಿ
ತನ್ನ ರಾಗ ರಂಗಿನಲ್ಲಿ ಮಣ್ಣ ಅಂದ ಚೆಂದದಲ್ಲಿ
ಚಂದನ ಚಂದನ ಸಿರಿ ಚುಂಬನ ಚುಂಬನ ಸವಿ ಓ ಓ
ಮನದಾಸೆ ಹಕ್ಕಿಯಾಗಿ ಋತುಮಾನ ರಂಗು ತೂಗಿ*
ಸಂತೋಷ ಸೂರ್ಯ ಮಿನುಗಿ ಅನುರಾಗ ಬಾನು ಬೀಗಿ
ಕನಸಲಿ ಮನಸಲಿ ಅಲೆಯುತ ನೋವಲಿ ನಲಿವಲಿ ಕಲೆಯುತ
ಏನು ಅರಿಯೇ ನಾ
-----------------------------------------------------------------------------------------------------------------------

ನಮ್ಮೂರ ಮಂದಾರ ಹೂವೆ (1996) - ಮುತ್ತು ಮುತ್ತು ನೀರ ಹನಿಯ
ಸಂಗೀತ: ಇಳಯರಾಜ ಸಾಹಿತ್ಯ: ಕೆ.ಕಲ್ಯಾಣ್ ಹಾಡಿರುವವರು: ಎಸ್.ಪಿ.ಬಾಲಸುಬ್ರಮಣ್ಯಂ, ಚಿತ್ರ

ಮುತ್ತು ಮುತ್ತು ನೀರ ಹನಿಯ ತಾಂತನನಂ
ಉಲ್ಲಾಸದ ಮೇರೆ ಮೀರಿ ಧೀಂತನಕಧೀಂ
ಆಹಾ ಇಂತ ಸ್ಪಂದನಕಿಲ್ಲಿ ಮೂಲ ಋತುಮಾನ
ಓಹೋ ಇದೇನಿಂಥ ಹೊಸಥರ ಚೈತ್ರ ಋತುಗಾನ
ಮೈ ಮನವೇ ಋತು ಋತುಗಳ ಚೇತನ
ಋತುಗಳ ಆ ಬಂಡಿಯ ಮೇಲೆ ಈ ಬಾಳ ಪಯಣವಿದೆ
ಬಾಳಿನ ಈ ಪಯಣಗಳನ್ನು ಪ್ರೀತಿಯೆ ನಡೆಸುತಿದೆ
ಮಿನು ಮಿನುಗೋ ಮಿಂಚುಗಳಂತೆ ಬಾಳಲ್ಲಿ ತಿರುವು ಇದೆ
ಒಂದೊಂದು ತಿರುವುಗಳಲ್ಲೂ ಶೃಂಗಾರ ಸರಸವಿದೆ
ಆಹಾ ಎಲ್ಲಾ ಮನಸೂ ಆಹ್ಲಾದಮಯವಿಲ್ಲಿ
ಓಹೋ ಎಲ್ಲಾ ಹೃದಯ ತುಂಬೋ ಈ ಸ್ನೇಹ ಜೊತೆಯಲ್ಲಿ
ಇಲ್ಲಿ ತುಟಿಪಿಟಿ ಕೆನ್ನೆಗೆ ಚಟಪಟ ಪುಟಿಯುವ ತುಂತುರು ಸಡಗರದಲ್ಲಿ
ತಿರುತಿರುಗೋ ಭೂಮಿಯಿಂದ ಎಲ್ಲ ಮನಸು ತಿರುಗುತಿವೆ
ತಿರುತಿರುಗೋ ಮನಸುಗಳೊಳಗೆ ಆಸೆಗಳು ತಿರುಗುತಿವೆ
ತಿರುಗಾಡೊ ಮನಸುಗಳೆಲ್ಲ ಒಂದೆಡೆಗೆ ನಿಲ್ಲುತಿವೆ
ಅದು ನಿಲ್ಲೋ ಜಾಗದ ಹೆಸರು ಸವಿ ಪ್ರೀತಿ ಅಲ್ಲವೆ
ಓಹೋ ಎಂಥ ಸಮಯ ಆತ್ಮೀಯವಾಯ್ತಿಲ್ಲಿ
ಓಹೋ ಇಲ್ಲಿ ಎಲ್ಲಾ ಹೃದಯ ಬೆಳಕಾಗಿ ಹೋಯ್ತಿಲ್ಲಿ
ಇಲ್ಲಿ ಝುಳು ಝುಳು ಹನಿಯಿಸಿ ಪುಳಕಿಸಿ ಪುಸಯಿಸಿ
ಕುಣಿಸೋ ಸಡಗರದಲ್ಲಿ ನಾವಿಲ್ಲಿ
-------------------------------------------------------------------------------------------------------------------------

ನಮ್ಮೂರ ಮಂದಾರ ಹೂವೆ (1996) - ಓಂಕಾರದಿ ಕಂಡೆ
ಸಾಹಿತ್ಯ: ಕೆ.ಕಲ್ಯಾಣ್ ಗಾಯನ: ಚಿತ್ರ ಸಂಗೀತ: ಇಳಯರಾಜ


ಓಂಕಾರದಿ ಕಂಡೆ ಪ್ರೇಮ ನಾದವ
ಈ ತಾನದಿ ತಂದೆ ನೀ ಶುಭೋದಯ
ಮಂದಾರವಿಲ್ಲಿ ಅರಳಿ ಕಂಪು ಸೂಸಿದೆ
ಸೌಗಂಧ ಹಾಸ ಚೆಲ್ಲಿ ನಿನ್ನ ಕಾದಿದೆ
ಅರಿಯೋ ಇನಿಯ ಒಲವ ಕರೆಯ

ಮಧುರ ತಾನ ಸ್ವರಗಳ ಸೇರಿ
ಜಲಲ ಧಾರೆ ಜಲದಲಿ ಜಾರಿ
ಆಕಾಶದಾಚೆ ಆ ಹೂ ನಗೆ
ಆ ತಾರೆ ಏಕೆ ತಂಪೇರಿದೆ
ಬಂದಾಗ ಅರಿವು ಇಲ್ಲಿ
ತಂದೀತು ಒಲವು ಅಲ್ಲಿ
ಅರಿಯೋ ಇನಿಯ ಒಲವ ನಿಧಿಯ
ನಿನದೆ ಧ್ಯಾನ ಹೃದಯದಿ ತೇಲಿ
ಲಯದಿ ರಾಗ ಅಲೆಗಳ ಬೀರಿ
ಈ ಗೀತೆಗಾದೆ ನೀ ಭಾವನ
ಈ ಬಾಳಿಗಾದೆ ನೀ ಚೇತನ
ಸಂಗೀತ ಸುಧೆಯ ತುಂಬಿ
ಮಾಧುರ್ಯ ಮನದಿ ತಂದೆ
ಅರಿಯೋ ಇನಿಯ ಒಲವ ಸವಿಯ
-----------------------------------------------------------------------------------------------------------------------

ನಮ್ಮೂರ ಮಂದಾರ ಹೂವೆ (1996) - ಓಂಕಾರದಿ ಕಂಡೆ
ಸಂಗೀತ: ಇಳಯರಾಜ  ಸಾಹಿತ್ಯ: ವಿ.ಮನೋಹರ ಗಾಯನ : ಇಳಯರಾಜ, ಚಿತ್ರಾ 

ಹೆಣ್ಣು : ಓಂಕಾರದಿ ಕಂಡೆ ಪ್ರೇಮ ನಾದವ ಈ ತಾನದಿ ತಂದೆ ನೀ ಶುಭೋದಯ
          ಅನುರಾಗ ನದಿಯು ಜೇನ ಕಡಲ ಸೇರಿತು ಪ್ರಿಯ ರಾಗದಿಂದ ಬದುಕೇ ಗೆಲುವ ತಂದಿತು
          ನಿನದೇ ಸ್ವರವೂ... ನಿನದೇ ವರವೂ...
          ಓಂಕಾರದಿ ಕಂಡೆ ಪ್ರೇಮ ನಾದವ ಈ ತಾನದಿ ತಂದೆ ನೀ ಶುಭೋದಯ

ಗಂಡು : ನಿನ್ನೀ ಹರುಷ ನನಗೆ ವಸಂತ...  ಓಹೋಹೋ....
           ನಿನ್ನೀ ಒಲವೂ ಮಧುರಾನಂದ ಒಹೋ.. ಒಹೋ.. ಓ...
           ಮುಂಜಾನೆ ಮೂಡೋ ರಂಗವಲ್ಲಿ  ನೀನಾದೆ ನನ್ನ ಈ ಬಾಳಲ್ಲಿ
           ಮಂದಹಾಸ ಎಂದು ನಿಂದೆ ನಿನ್ನ ಜಯವು ಎಂದು ನಂದೇ
          ಒಲವೇ ಒಲವೇ ನಿನದೇ ಗೆಲುವು
ಹೆಣ್ಣು : ಓಂಕಾರದಿ ಕಂಡೆ ಪ್ರೇಮ ನಾದವ                    ಗಂಡು : ಈ ತಾನದಿ ತಂದೆ ನೀ ಶುಭೋದಯ
ಹೆಣ್ಣು : ಅನುರಾಗ ನದಿಯು ಜೇನ ಕಡಲ ಸೇರಿತು         ಗಂಡು : ಪ್ರಿಯ ರಾಗದಿಂದ ಬದುಕೇ ಗೆಲುವ ತಂದಿತು
ಹೆಣ್ಣು : ನಿನದೇ ಸ್ವರವೂ... ನಿನದೇ ವರವೂ...              ಗಂಡು : ಓಂಕಾರದಿ ಕಂಡೆ ಪ್ರೇಮ ನಾದವ

ಗಂಡು : ಒಲವು ಇರುವ ಮನಸೇ ಪ್ರಶಾಂತ ಒಹೋ... ಒಹೋ... ಓ...
           ಗೆಳತೀ ಹರಿಸೋ ಹರುಷ ಸಂಗೀತ ಒಹೋ... ಒಹೋ... ಓ...
ಹೆಣ್ಣು : ನೂರಾರು ಹೂವು ಹಾಡಾದವು ನನ್ನಾಸೆಯೆಲ್ಲ  ಸಾಕಾರವು
          ಮನ ತುಂಬಾ ನಿನ್ನ ಧ್ಯಾನ ಬದುಕೆಲ್ಲಾ ಚೈತ್ರ ಗಾನ ನಿನದೆ ಸ್ವರವು ನಿನದೆ ವರವು..
ಗಂಡು : ಓಂಕಾರದಿ ಕಂಡೆ ಪ್ರೇಮ ನಾದವ                   ಹೆಣ್ಣು : ಈ ತಾನದಿ ತಂದೆ ನೀ ಶುಭೋದಯ
ಗಂಡು : ಅನುರಾಗ ನದಿಯು ಜೇನ ಕಡಲ ಸೇರಿತು        ಹೆಣ್ಣು : ಪ್ರಿಯ ರಾಗದಿಂದ ಬದುಕೇ ಗೆಲುವ ತಂದಿತು
ಗಂಡು : ನಿನದೇ ಸ್ವರವೂ... ನಿನದೇ ವರವೂ...             ಹೆಣ್ಣು : ಓಂಕಾರದಿ ಕಂಡೆ ಪ್ರೇಮ ನಾದವ
ಗಂಡು : ಈ ತಾನದಿ ತಂದೆ ನೀ ಶುಭೋದಯ     
--------------------------------------------------------------------------------------------------------------------------

ನಮ್ಮೂರ ಮಂದಾರ ಹೂವೆ (1996) - ಓ ಒಲವೇ ನಿನಗೇ ಎದೆಯ ಕದವ ತೆರೆಯದು  
ಸಂಗೀತ: ಇಳಯರಾಜ  ಸಾಹಿತ್ಯ: ವಿ.ಮನೋಹರ ಗಾಯನ :ಎಸ್.ಪಿ.ಬಿ. 

ಗಂಡು : ಆಆಆಅ... ಆಆಆ... ಆಆಆ... ಆಆಆ...
           ಧೋಮ್ ತಕಿಟ ಧೀರನ್ ಧೀರನ್ ಧೀಮ್ ತಕಿಟ ತರನ್ ಧೀರನ್
           ತೋಮ್ ತಕಿಟ ಧೀರನ್ ಧೀರನ್ ಧೀಮ್ ತಕಿಟ ತರನ್ ಧೀರನ್
           ಓ ಒಲವೇ ನಿನಗೇ ಎದೆಯ ಕದವ ತೆರೆಯದು ನೀ ಅಳುತ ಕುಳಿತರೂನು ಕರುಣೆ ಬಾರದೂ
           ಓ ಒಲವೇ ನಿನಗೇ ಎದೆಯ ಕದವ ತೆರೆಯದು ನೀ ಅಳುತ ಕುಳಿತರೂನು ಕರುಣೆ ಬಾರದೂ
           ಹೃದಯವೇ.. ಓ ಹೃದಯವೇ ಓ.. ಮರಳಿ ಮರಳಿ ಕೆಣಕೋ ಒಲವ ನೆನಪನಳಿಸು ನೀ.. 
           ಓ ಒಲವೇ ನಿನಗೇ ಎದೆಯ ಕದವ ತೆರೆಯದು
           ಓ ಒಲವೇ ನಿನಗೇ ಎದೆಯ ಕದವ ತೆರೆಯದು ನೀ ಅಳುತ ಕುಳಿತರೂನು ಕರುಣೆ ಬಾರದೂ

ಗಂಡು : ಸುಮಧುರ ಸುಮಧುರ ಕುಸುಮವೇ ಎದುರೇ ಇದ್ದರೂ 
           ಮುಡಿಯುವ ಭಾಗ್ಯವೂ ಯಾರಿಗೋ ಯಾರು ಬಲ್ಲರೂ 
           ಧೀರನ್ ಧೀರನನ ಧೀರನನ  ಧೀರನ ಧೀಮ್ ತನ 
           ತರನನ ಧೀರನನ ತರನನ ಧೀರನನ  ಧೀಮ್ ತನ 
           ಓ ಕ್ರೂರ ಪ್ರೇಮ ನಿನ್ನಿಂದ ತಾನೇ ಜಗದಿ ಘೋರ ಸಮರ ನಡೆದವು 
           ನೂರಾರು ಜೀವ ನಿನ್ನಿಂದ ತಾನೇ ವಿರಹದುರಿಗೇ ನಲುಗಿ ಹೋದವು 
          ಒಲವಿನ ಕುಲುಮೆಯಲ್ಲಿ ಬೆಂದಿರೋ ಜೀವವಿದು 
          ಎದೆಯ ಪ್ರೀತಿ ಹೂಗಳೆಲ್ಲಿ  ಮಾಯವಾದವೂ 
          ಓ ಒಲವೇ ನಿನಗೇ ಎದೆಯ ಕದವ ತೆರೆಯದು ನೀ ಅಳುತ ಕುಳಿತರೂನು ಕರುಣೆ ಬಾರದೂ
           ಹೃದಯವೇ.. ಓ ಹೃದಯವೇ ಓ.. ಮರಳಿ ಮರಳಿ ಕೆಣಕೋ ಒಲವ ನೆನಪನಳಿಸು ನೀ.. 
          ಓ ಒಲವೇ ನಿನಗೇ ಎದೆಯ ಕದವ ತೆರೆಯದು ನೀ ಅಳುತ ಕುಳಿತರೂನು ಕರುಣೆ ಬಾರದೂ

ಗಂಡು : ಆಹಾ .. ಆಹಾ ..  ಆಹಾ ..  ಆಹಾಹಾ..  ಆಹಾ ..  ಆಹಾ ..  ಆಹಾ ..  ಆಹಾ ..  ಆಹಾಹಾ ..             
            ಆಹಾ .. ಆಹಾ ..  ಆಹಾ ..  ಆಹಾಹಾ..  ಆಹಾ ..  ಆಹಾ ..  ಆಹಾ ..  ಆಹಾ ..  ಆಹಾಹಾ ..          
            ತಂಗಡರ ತಂಗಡರ ತಂಗಡರ ತಾಮ್ ತಂಗಡರ ತಕಿಟ ತಕಿಟ  ತಾಮ್
            ತಾರೀಕಿಟ ತಕಿಟ ತಕಿಟ ತೋಮ್
            ಬದುಕಿದು ಬರಿ ಭ್ರಮೆಗಳ ಕನಸೇ ಆಗಿದೇ ಕನಸಿನ ಒಳಗಡೆ ತಿರುಗಿಯೂ ಕನಸು ಏತಕೇ ..
           ಧೀರನ್ ಧೀರನನ ಧೀರನನ  ಧೀರನ ಧೀಮ್ ತನ 
           ತರನನ ಧೀರನನ ಧೀರನನ ಧೀರನ  ಧೀಮ್ ತನ 
           ಈ ಪ್ರೀತಿ ಕೂಡ ನಿಜವಲ್ಲ ಕನಸೇ ನಿದಿರೆಯಿಂದ ಹೊರಗೆ ಬಾರೇ ನೀ
           ನಿಜವಾದ ಬಾಳ ಬೆಳೆಯಾಗಿ ಗೆದ್ದೂ ವಿಧಿಯೂ ಕುಣಿಸೋ ಬೊಂಬೆಯಾದೇನೇ
           ಎದೆಯಲಿ ಅನುರಾಗ ಉದಯಿಸಿ ಬರುವಾಗ ಹೂವ ನೆರಳ ತನ್ನ ಜೊತೆಗೇ ತರುವುದೇತಕೆ
           ಓ ಒಲವೇ ನಿನಗೇ ಎದೆಯ ಕದವ ತೆರೆಯದು ನೀ ಅಳುತ ಕುಳಿತರೂನು ಕರುಣೆ ಬಾರದೂ
           ಹೃದಯವೇ.. ಓ ಹೃದಯವೇ ಓ.. ಮರಳಿ ಮರಳಿ ಕೆಣಕೋ ಒಲವ ನೆನಪನಳಿಸು ನೀ.. 
           ಓ ಒಲವೇ ನಿನಗೇ ಎದೆಯ ಕದವ ತೆರೆಯದು ನೀ ಅಳುತ ಕುಳಿತರೂನು ಕರುಣೆ ಬಾರದೂ
           ಓ ಒಲವೇ ನಿನಗೇ ಎದೆಯ ಕದವ ತೆರೆಯದು ನೀ ಅಳುತ ಕುಳಿತರೂನು ಕರುಣೆ ಬಾರದೂ
--------------------------------------------------------------------------------------------------------------------------

ನಮ್ಮೂರ ಮಂದಾರ ಹೂವೆ (1996) - ಓಂಕಾರದಿ ಕಂಡೆಸಂಗೀತ: ಇಳಯರಾಜ  ಸಾಹಿತ್ಯ: ಕೆ.ಕಲ್ಯಾಣ್ ಗಾಯನ: ಚಿತ್ರ 

ಓಂಕಾರದಿ ಕಂಡೆ ಪ್ರೇಮ ನಾದವ ಈ ತಾನದಿ ತಂದೆ ನೀ ಶುಭೋದಯ
ಮಂದಾರವಿಲ್ಲಿ ಅರಳಿ ಕಂಪು ಸೂಸಿದೆ ಸೌಗಂಧ ಹಾಸ ಚೆಲ್ಲಿ ನಿನ್ನ ಕಾದಿದೆ
ಅರಿಯೋ ಇನಿಯ ಒಲವ ಕರೆಯ... 
ಓಂಕಾರದಿ ಕಂಡೆ ಪ್ರೇಮ ನಾದವ ಈ ತಾನದಿ ತಂದೆ ನೀ ಶುಭೋದಯ

ಮಧುರ ತಾನ ಸ್ವರಗಳ ಸೇರಿ .. ಓಓಓಓಹೋ  ಜಲಲ ಧಾರೆ ಜಲದಲಿ ಜಾರಿ.. ಓಓಓಓಹೋ
ಆಕಾಶದಾಚೆ ಆ ಮೌನದೀ ಆ ತಾರೆ ಏಕೆ ಸಾಟಿಯಲ್ಲಿದೆ
ಬಂದಾಗ ಅರಿವು ಇಲ್ಲಿ ತಂದೀತು ಒಲವು ಅಲ್ಲಿ ಅರಿಯೋ ಇನಿಯ ಒಲವ ನಿಧಿಯ 
ಓಂಕಾರದಿ ಕಂಡೆ ಪ್ರೇಮ ನಾದವ ಈ ತಾನದಿ ತಂದೆ ನೀ ಶುಭೋದಯ
ಮಂದಾರವಿಲ್ಲಿ ಅರಳಿ ಕಂಪು ಸೂಸಿದೆ ಸೌಗಂಧ ಹಾಸ ಚೆಲ್ಲಿ ನಿನ್ನ ಕಾದಿದೆ
ಅರಿಯೋ ಇನಿಯ ಒಲವ ಕರೆಯ... 
ಓಂಕಾರದಿ ಕಂಡೆ ಪ್ರೇಮ ನಾದವ ಈ ತಾನದಿ ತಂದೆ ನೀ ಶುಭೋದಯ

ನಿನದೇ  ಧ್ಯಾನ ಹೃದಯದಿ ತೇಲಿ.. ಓಓಓಓಹೋ  ಲಯದಿ ರಾಗ ಅಲೆಗಳ ಬೀರಿ.. ಓಓಓಓಹೋ 
ಈ ಗೀತೆಗಾದೆ ನೀ ಭಾವನ ಈ ಬಾಳಿಗಾದೆ ನೀ ಚೇತನ ಸಂಗೀತ ಸುಧೆಯ ತುಂಬಿ
ಮಾಧುರ್ಯ ಮನದಿ ತಂದೆ ಅರಿಯೋ ಇನಿಯ ಒಲವ ಸವಿಯ
ಓಂಕಾರದಿ ಕಂಡೆ ಪ್ರೇಮ ನಾದವ ಈ ತಾನದಿ ತಂದೆ ನೀ ಶುಭೋದಯ
ಮಂದಾರವಿಲ್ಲಿ ಅರಳಿ ಕಂಪು ಸೂಸಿದೆ ಸೌಗಂಧ ಹಾಸ ಚೆಲ್ಲಿ ನಿನ್ನ ಕಾದಿದೆ
ಅರಿಯೋ ಇನಿಯ ಒಲವ ಕರೆಯ... 
ಓಂಕಾರದಿ ಕಂಡೆ ಪ್ರೇಮ ನಾದವ ಈ ತಾನದಿ ತಂದೆ ನೀ ಶುಭೋದಯ
-----------------------------------------------------------------------------------------------------------------------

No comments:

Post a Comment