245. ಜಾರಿ ಬಿದ್ದ ಜಾಣ (1980)


ಜಾರಿ ಬಿದ್ದ ಜಾಣ ಚಿತ್ರದ ಹಾಡುಗಳು 
  1. ಹಳ್ಳಿಯ ತೋಟದಿ ಅರಳಿದ ಒಂದು 
  2. ಕೋಗಿಲೆಯೂ ಹಾಡುತಿದೇ 
  3. ಎಲ್ಲೇ ಮಾಧವನೂ 
  4. ನನಗೆ ನನ್ನದೇ ನ್ಯಾಯ 
ಜಾರಿ ಬಿದ್ದ ಜಾಣ (1980)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಟಿ.ಜಿ.ಲಿಂಗಪ್ಪ ಹಾಡಿದವರು: ಎಸ್.ಪಿ.ಬಿ., ವಾಣಿ ಜಯರಾಮ್

ಗಂಡು : ಹಳ್ಳಿಯ ತೋಟದಿ ಅರಳಿದ ಒಂದು ಹೂವ ಕಂಡೆ
ಹೆಣ್ಣು : ಹೂವಿನ ಆಸೆಗೆ ದುಂಬಿಯು ಬರಲು ಬೆದರುತ ನಾ ನಿಂತೆ,
         ಹೋ ಹೋ, ಬೆದರುತ ನಾ ನಿಂತೆ
ಗಂಡು : ಹಳ್ಳಿಯ ತೋಟದಿ ಅರಳಿದ ಒಂದು ಹೂವ ಕಂಡೆ
ಹೆಣ್ಣು : ಹೂವಿನ ಆಸೆಗೆ ದುಂಬಿಯು ಬರಲು ಬೆದರುತ ನಾ ನಿಂತೆ,
         ಓಹೋ ಓಹೋ, ಬೆದರುತ ನಾ ನಿಂತೆ

ಹೆಣ್ಣು : ಬಡವನ ತೋಟದ ತುಂಬೆಯ ಹೂವಿಗೆ ಆಸೆಯು ಏಕೆ ನಿನಗೆ
          ಬಡವನ ತೋಟದ ತುಂಬೆಯ ಹೂವಿಗೆ ಆಸೆಯು ಏಕೆ ನಿನಗೆ
          ಬಯಸಲು ತಾವರೆ ಸಂಪಿಗೆ ಮಲ್ಲಿಗೆ
         ಬಯಸಲು ತಾವರೆ ಸಂಪಿಗೆ ಮಲ್ಲಿಗೆ ಸಿಗದೇನು ನಿನಗೆ
ಗಂಡು : ಹೊನ್ನಿನ ತಾವರೆ ದೊರೆತರು ಸರಿಯೆ ಬೇಡ ಎಂದೂ ನನಗೆ
           ಬೆಳ್ಳಿಯ ತುಂಬೆ ಹೂವೆ ಆದರು
           ಬೆಳ್ಳಿಯ ತುಂಬೆ ಹೂವೆ ಆದರು ಸಾಕು ನನ್ನ ಜೊತೆಗೆ
          ಹಳ್ಳಿಯ ತೋಟದಿ ಅರಳಿದ ಒಂದು ಹೂವ ಕಂಡೆ
ಹೆಣ್ಣು : ಹೂವಿನ ಆಸೆಗೆ ದುಂಬಿಯು ಬರಲು  ಬೆದರುತ ನಾ ನಿಂತೆ,
         ಓಹೋ ಓಹೋ, ಬೆದರುತ ನಾ ನಿಂತೆ

ಹೆಣ್ಣು : ಗುಡಿಸಲ ಹೂವಿಗೆ ಅರಮನೆ ದೊರೆಯ ಒಲವು ಸ್ನೇಹ ಏಕೆ
          ಗುಡಿಸಲ ಹೂವಿಗೆ ಅರಮನೆ ದೊರೆಯ ಒಲವು ಸ್ನೇಹ ಏಕೆ
          ಮಳೆಯ ನೀರಲಿ ಬೆಳೆದ ಸುಮಕೆ
         ಮಳೆಯ ನೀರಲಿ ಬೆಳೆದ ಸುಮಕೆ ಪ್ರೇಮದ ಪನ್ನೀರೇಕೆ
ಗಂಡು : ಅಂದದ ಸಿರಿಯ ಹೊಂದಿದ ಹೂವೆ ಬೇಕು ನನ್ನ ಮನೆಗೆ
           ತುಂಬೆ ಹೂವು ಶಿವನಿಗೆ ಪ್ರೀತಿ
           ತುಂಬೆ ಹೂವು ಶಿವನಿಗೆ ಪ್ರೀತಿ ಎಂಬುದು ತಿಳಿಯದೆ ನಿನಗೆ
          ಹಳ್ಳಿಯ ತೋಟದಿ ಅರಳಿದ ಒಂದು ಹೂವ ಕಂಡೆ
ಹೆಣ್ಣು :   ಹೂವಿನ ಆಸೆಗೆ ದುಂಬಿಯು ಬರಲು ನಾಚುತ ನಾ ನಿಂತೆ,
           ಓಹೋ ಓಹೋ, ನಾಚುತ ನಾ ನಿಂತೆ
--------------------------------------------------------------------------------------------------------------------------

ಜಾರಿ ಬಿದ್ದ ಜಾಣ (1980) - ಕೋಗಿಲೆಯೂ ಹಾಡುತಿದೇ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಟಿ.ಜಿ.ಲಿಂಗಪ್ಪ ಹಾಡಿದವರು: ವಾಣಿ ಜಯರಾಮ್

ಅಹ್ಹಹಾ... ಓಓಓಓಓ...
ಕೋಗಿಲೆಯೂ ಹಾಡುತಿದೇ ಹೊಸ ರಾಗ ನನಗಾಗಿ
ಹೊಸ ರಾಗ ನನಗಾಗಿ
ಕೋಗಿಲೆಯೂ ಹಾಡುತಿದೇ ಹೊಸ ರಾಗ ನನಗಾಗಿ
ಹೊಸ ರಾಗ ನನಗಾಗಿ

ಸಂಜೆ ಹೆಣ್ಣಿನ ಕುಣಿವ ಹೆಜ್ಜೆಯ ಗೆಜ್ಜೆಯ ತಾಳಕೇ ಸರಿಯಾಗಿ
ಸಂಜೆ ಹೆಣ್ಣಿನ ಕುಣಿವ ಹೆಜ್ಜೆಯ ಗೆಜ್ಜೆಯ ತಾಳಕೇ ಸರಿಯಾಗಿ
ಹರಿವ ನೀರಿನ ಕಲಕಲ ನಾದಕೆ ಧನಿಯ ಸೇರಿಸಿ ಹೀತವಾಗಿ 
ನನ್ನ ಎದೆಯ ವೀಣೆ ಮಿಡಿವ ಹಾಗೇ ಹರುಷ ತುಂಬುತ 
ತನುವ ಮನವ ಗಾನದಿಂದ ಬಳಿಗೇ ಸೆಳೆಯುತಾ ಆಆ ಓಓ..ಹೂಂಹೂಂ . 
ಕೋಗಿಲೆಯೂ ಹಾಡುತಿದೇ ಹೊಸ ರಾಗ ನನಗಾಗಿ
ಹೊಸ ರಾಗ ನನಗಾಗಿ

ತಂಪು ಗಾಳಿಯೂ ಬಿದಿರಾ ಎಳೆಯಲಿ ನುಸುಳಿ
ಸುಯ್ ಸುಯ್ ಸುಯ್ ಎನ್ನುತ್ತಿರೇ
ತಂಪು ಗಾಳಿಯೂ ಬಿದಿರಾ ಎಳೆಯಲಿ ನುಸುಳಿ
ಸುಯ್ ಸುಯ್ ಸುಯ್ ಎನ್ನುತ್ತಿರೇ
ಕೆಂಪು ಚೆಲ್ಲಿದಾ ನೀಲಿ ಬಾನಲಿ ಬೆಳ್ಳಿ ಮುಗಿಲೂ ತೇಲುತಿರೇ 
ಕಂಡು ಚಿನ್ನದಂತ ನೂರು ಕನಸು ಕಣ್ಣು ತುಂಬಿದೆ 
ಹೃದಯದಲ್ಲಿ ಚಿಲುಮೆಯಂತೇ ಆಸೇ ಚಿಮ್ಮಿದೇ ಆಆ ಓಓ..ಹೂಂಹೂಂ . 
ಕೋಗಿಲೆಯೂ ಹಾಡುತಿದೇ ಹೊಸ ರಾಗ ನನಗಾಗಿ
ಹೊಸ ರಾಗ ನನಗಾಗಿ
--------------------------------------------------------------------------------------------------------------------------

ಜಾರಿ ಬಿದ್ದ ಜಾಣ (1980) - ಎಲ್ಲೇ ಮಾಧವನೂ ಸಖಿ ಎಲ್ಲೇ ಮಾಧವನೂ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಟಿ.ಜಿ.ಲಿಂಗಪ್ಪ ಹಾಡಿದವರು: ಎಸ್.ಜಾನಕೀ

ಎಲ್ಲೇ ಮಾಧವನೂ ಸಖಿ ಎಲ್ಲೇ ಮಾಧವನೂ
 ಸಖಿ ಎಲ್ಲೇ ಮಾಧವನೂ ಕೊಳಲ ಕರೆಗೇ ಸೋತು ಬಂದೇನೇ
ಎಲ್ಲೇ ಮಾಧವನೂ ಸಖಿ ಎಲ್ಲೇ ಮಾಧವನೂ

ಏನೋ ರಾಗವೋ ಏನೋ ಭಾವವೂ ಆಆಆಅ.... ಆಆಆ... ಆಆಆ...
ಏನೋ ರಾಗವೋ ಏನೋ ಭಾವವೂ
ಬೇಸರವೂ ಓಡಿಸಿ ಆಸೆಯೂ ಮೂಡಿಸಿ
ಬೇಸರ ಓಡಿಸಿ ಆಸೆಯ ಮೂಡಿಸಿ
ಕೇಳುತ ಕೇಳುತ ರಾಗಕೆ ಸೋಲುತ 
ಕೇಳುತ ಕೇಳುತ ರಾಗಕೆ ಸೋಲುತ ಕಂಗಳಲಿ ಸವಿಗನಸು 
ಕಂಗಳಲಿ ಸವಿಗನಸು ಕುಣಿಯತಿರಲು ಅರಸಿ ಬಂದೇ 
ಎಲ್ಲೇ ಮಾಧವನೂ 

ಸದ್ದು ಮಾಡದೇ ಕದ್ದು ನೋಡಿದ 
ಸದ್ದು ಮಾಡದೇ..  ಕದ್ದು ನೋಡಿದ ಮುದ್ದಿಸಿ ಮಲ್ಲಿಗೇ ಮಾಲೆಯ ಹಾಕಿದ
ಮುದ್ದಿಸಿ ಮಲ್ಲಿಗೇ ಮಾಲೆಯ ಹಾಕಿದ ಪ್ರೀತಿಯ ಮಾತನು ಆಡುತಾ ಕಾಡುತಾ
ಪ್ರೀತಿಯ ಮಾತನು ಆಡುತಾ ಕಾಡುತಾ ತೋಳಿನಲಿ ಬಳಸುತಲಿ
ತೋಳಿನಲಿ ಬಳಸುತಲಿ ಮನವ ಕೆಣಕಿ ಓಡಿ ಹೋದ ಎಲ್ಲೇ ಮಾಧವನೂ
ಗರಿನಿಸರಿಮ ಎಲ್ಲೇ ಮಾಧವನೂ 
ಸನಿಸ ಮಪನಿ  ಗರಿಸರಿ ನಿಸರಿಮ ಎಲ್ಲೇ ಮಾಧವನೂ 
ಸ ಗ ಗಾಗ ಗಗರಿಸನಿನಿ ನಿನಿಸರಿ 
ರಿರಿರಿರಿಸನಿಮಗರಿಸ ನಿದಪ ಗರಿಸ ಎಲ್ಲೇ ಮಾಧವನೂ 
ಆಆಆಅ... ಆಆಆಅ..  
ಎಲ್ಲೇ ಮಾಧವನೂ ಸಖಿ ಎಲ್ಲೇ ಮಾಧವನೂ
 ಸಖಿ ಎಲ್ಲೇ ಮಾಧವನೂ ಕೊಳಲ ಕರೆಗೇ ಸೋತು ಬಂದೇನೇ
ಎಲ್ಲೇ ಮಾಧವನೂ 
--------------------------------------------------------------------------------------------------------------------------

ಜಾರಿ ಬಿದ್ದ ಜಾಣ (1980) - ನನಗೇ ನನ್ನದೇ ನ್ಯಾಯ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಟಿ.ಜಿ.ಲಿಂಗಪ್ಪ ಹಾಡಿದವರು: ಎಸ್.ಪಿ.ಬಿ.,

ನನಗೆ ನನ್ನದೇ ನ್ಯಾಯ ನಿನಗೇ ನಿನದೇ ನ್ಯಾಯ
ನನಗೆ ನನ್ನದೇ ನ್ಯಾಯ ನಿನಗೇ ನಿನದೇ ನ್ಯಾಯ
ಎಲ್ಲಿದೆಯೋ ಅನ್ಯಾಯ.. ಎಲ್ಲಿದೆಯೋ ಅನ್ಯಾಯ ಅಹ್ಹಹ್ಹಹ್ಹಹ್ಹ... 
ನನಗೆ ನನ್ನದೇ ನ್ಯಾಯ ನಿನಗೇ ನಿನದೇ ನ್ಯಾಯ
ಎಲ್ಲಿದೆಯೋ ಅನ್ಯಾಯ 

 ಕುರಿಯನು ಕೊಲ್ಲುವುದೇ ಕಟುಕನ ನ್ಯಾಯ 
ತಿನ್ನುವಾತನಿಗೇ ತಿನ್ನುವುದೇ ನ್ಯಾಯ 
 ಕುರಿಯನು ಕೊಲ್ಲುವುದೇ ಕಟುಕನ ನ್ಯಾಯ 
ತಿನ್ನುವಾತನಿಗೇ ತಿನ್ನುವುದೇ ನ್ಯಾಯ 
ಲಾಭವೇ ನಿನ್ನ ಗುರಿಯಾಗಿರಲೂ 
ಮೋಸ ಮಾಡುವುದೇ ನ್ಯಾಯ ಅಹ್ಹಹ್ಹಹ್ಹಹ್ಹ... 
ನನಗೆ ನನ್ನದೇ ನ್ಯಾಯ ನಿನಗೇ ನಿನದೇ ನ್ಯಾಯ
ಎಲ್ಲಿದೆಯೋ ಅನ್ಯಾಯ.. ಹ್ಹ... 

ಕಪ್ಪೆಯ ತಿನ್ನುವುದೂ ಹಾವಿಗೇ ನ್ಯಾಯ 
ಹಾವನು ಹಿಡಿವುದೂ ಗರುಡನ ನ್ಯಾಯ ಹೌದೂ...  ಹೌದೂ ಅಹ್ಹಹ್ಹಹ್ಹ 
ಕಪ್ಪೆಯ ತಿನ್ನುವುದೂ ಹಾವಿಗೇ ನ್ಯಾಯ 
ಹಾವನು ಹಿಡಿವುದೂ ಗರುಡನ ನ್ಯಾಯ
ಒಬ್ಬನ ತುಳಿದೂ ಒಬ್ಬನೇ ಇರುವುದೇ ನಮ್ಮಿ ಜನರ ನ್ಯಾಯ.. ಹ್ಹ..   
ನನಗೆ ನನ್ನದೇ ನ್ಯಾಯ ನಿನಗೇ ನಿನದೇ ನ್ಯಾಯ
ಎಲ್ಲಿದೆಯೋ ಅನ್ಯಾಯ.. ಹ್ಹ... 

ಆಸೆಯ ಪಡುವುದೂ ಮನಸಿನ ನ್ಯಾಯ 
ಸುಖ ಬೇಕೆನ್ನುವುದೂ ದೇಹದ ನ್ಯಾಯ 
ಆಸೆಯ ಪಡುವುದೂ ಮನಸಿನ ನ್ಯಾಯ 
ಸುಖ ಬೇಕೆನ್ನುವುದೂ ದೇಹದ ನ್ಯಾಯ 
ಸ್ವಾರ್ಥವ ನೀನೂ ಮರೆತರೇ ಅಂದೇ ಆಗುವುದೂ ಅನ್ಯಾಯ ಹ್ಹ...  
ನನಗೆ ನನ್ನದೇ ನ್ಯಾಯ ನಿನಗೇ ನಿನದೇ ನ್ಯಾಯ
ಎಲ್ಲಿದೆಯೋ ಅನ್ಯಾಯ.. ಹ್ಹ...
ಎಲ್ಲಿದೆಯೋ ಅನ್ಯಾಯ..ಅಹ್ಹಹ್ಹಹ್ಹಹ್ಹ ..  ನನಗೆ ನನ್ನದೇ ನ್ಯಾಯ 
--------------------------------------------------------------------------------------------------------------------------

No comments:

Post a Comment