250. ಊರಿಗೆ ಉಪಕಾರಿ (೧೯೮೨)


ಊರಿಗೆ ಉಪಕಾರಿ ಚಿತ್ರದ ಹಾಡುಗಳು 
  1. ಹಸಿರು ಹಸಿರು ಭೂಮಿಯಲ್ಲೆಲ್ಲಾ 
  2. ಸ್ನೇಹದಲಿ ಸಂಧಿಸಿದೇ 
  3. ಡೆಲ್ಲಿಯ ಕುಳ್ಳಾನೆ ಬಾ 
  4. ಚಂಡಮುಂಡರನು ರುಂಡ ಕಡೆದು 
ಊರಿಗೆ ಉಪಕಾರಿ (೧೯೮೨).......ಹಸಿರು ಹಸಿರು ಭೂಮಿಯಲೆಲ್ಲ
ಸಾಹಿತ್ಯ:ಆರ್.ಎನ್.ಜಯಗೋಪಾಲ್ ಸಂಗೀತ:ಸತ್ಯಂ ಗಾಯನ: ಎಸ್.ಪಿ.ಬಿ ಮತ್ತು ಎಸ್.ಜಾನಕಿ


ಹೆಣ್ಣು :   ಹಸಿರು ಹಸಿರು ಭೂಮಿಯಲೆಲ್ಲ ಬಿಳಿಯ ಮುಗಿಲು ಆಗಸವೆಲ್ಲ
            ಅರಳಿ ನಗಲು ಹೂವುಗಳೆಲ್ಲ ಕೇಳು ಹಕ್ಕಿ ಇನಿದನಿ ಸೊಲ್ಲ (ಹ್ಹಹ್ಹ )
           ಸಂತೋಷ ಸಂತೋಷ ಎಲ್ಲೆಲ್ಲೂ   ಏಕಾಂತ ಏಕಾಂತ ನಮಗೆಲ್ಲೂ
ಗಂಡು :ನಮಗೆ ಯಾವ ಅವಸರವಿಲ್ಲ ನಡುವೆ ಯಾರ ತೊಂದರೆಯಿಲ್ಲ
          ಸನಿಹ ಸುಖಕೆ ಸಾಟಿಯೆ ಇಲ್ಲ ಪ್ರೀತಿಗೊಂದು ಎಲ್ಲೆಯೆ ಇಲ್ಲ (ಹ್ಹಹ್ಹ )
          ಸಂತೋಷ ಸಂತೋಷ ಎಲ್ಲೆಲ್ಲೂ ಏಕಾಂತ ಏಕಾಂತ ನಮಗೆಲ್ಲೂ  
ಹೆಣ್ಣು :  ಆ....ಆ.. ಆ...ಆ..ಗಂಡು :  ಆ...ಆ........
ಗಂಡು :  ಆ...ಆ........   ಹೆಣ್ಣು :  ಆ....ಆ.. .ಆ.

ಗಂಡು : ಬಳುಕಿ ಹರಿವ ನದಿಯನು ನೋಡು
           ಅಲೆಯ ಕುಣಿತ ಮೋಜನು ನೋಡು ನಿನ್ನ ನಡೆಗೆ ಸಾಟಿ ಆಗಿದೆ...
ಹೆಣ್ಣು : ಮರಳ ಮೇಲೆ ಹೆಜ್ಜೆ ಜಾಡು  ಕಲೆತು ಬೆರೆತು ಸಾಗಿದೆ ನೋಡು
          ನಾವು ಹೀಗೇ ಒಂದೇ ಎಂದಿದೆ....
ಗಂಡು : ಗುಡಿಯ ಘಂಟೆ ಸಾರಿದೆ ಇಂದು  ಪ್ರೇಮಪೂಜೆ ವೇಳೆಯಿದೆಂದು
ಹೆಣ್ಣು : ಸಂತೋಷ ಸಂತೋಷ ಎಲ್ಲೆಲ್ಲೂ  ಏಕಾಂತ ಏಕಾಂತ ನಮಗೆಲ್ಲೂ
ಗಂಡು : ನಮಗೆ ಯಾವ ಅವಸರವಿಲ್ಲ  (ಅಹ್ಹಹ್ಹ) ನಡುವೆ ಯಾರ ತೊಂದರೆಯಿಲ್ಲ (ಅಹ್ಹಹ್ಹ)
            ಸನಿಹ ಸುಖಕೆ ಸಾಟಿಯೆ ಇಲ್ಲ  ಪ್ರೀತಿಗೊಂದು ಎಲ್ಲೆಯೆ ಇಲ್ಲ
ಹೆಣ್ಣು : ಸಂತೋಷ ಸಂತೋಷ ಎಲ್ಲೆಲ್ಲೂ  ಏಕಾಂತ ಏಕಾಂತ ನಮಗೆಲ್ಲೂ


ಕೋರಸ್: ಓಓಓಓಓ.... ಓಓಓಓಓ...
ಹೆಣ್ಣು : ಪ್ರೀತಿ ಎಂಬ ಅರಮನೆಯಲ್ಲಿ  ರಾಜರಾಣಿ ನಾವೇ ಇಲ್ಲಿ
          ಹೊಸತು ರಾಜ್ಯ ನಾವು ಆಳುವ...
ಗಂಡು : ನಲಿವು ಎಂಬ ಹೂಬನದಲ್ಲಿ  ನಗುವು ಎಂಬ ಸೌರಭ ಚೆಲ್ಲಿ
           ಹರುಷದಿಂದ ಸೇರಿ ಬಾಳುವ...
ಹೆಣ್ಣು :  ಮನಕೆ ಮನಕೆ ಸೇತುವೆ ಇಲ್ಲಿ  ಸುಖದ ಸೀಮೆ ಅಂತರದಲ್ಲಿ
ಗಂಡು : ಸಂತೋಷ ಸಂತೋಷ ಎಲ್ಲೆಲ್ಲೂ
ಇಬ್ಬರೂ : ಆಹ್ಹಾಹ್ ಏಕಾಂತ ಏಕಾಂತ ನಮಗೆಲ್ಲೂ
--------------------------------------------------------------------------------------------------------------------

ಊರಿಗೆ ಉಪಕಾರಿ (1982)
ಸಾಹಿತ್ಯ: ಆರ್.ಎನ್.ಜಯಗೋಪಾಲ್   ಸಂಗೀತ: ಸತ್ಯಂ  ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ

ಕೋರಸ್ : ಲಾಲ ಲಾಲ ಲಾಲ
ಗಂಡು : ಸ್ನೇಹದಲಿ (ಲಲಲಲಲ)  ಸಂದಿಸಿದೆ,(ಲಲಲಲಲ)
            ಪ್ರೀತಿಯಲಿ (ಲಲಲಲಲ) ಬಂದಿಸಿದೆ (ಲಲಲಲಲ)
           ಈ ನನ್ನ ಬಾಳಲ್ಲಿ ನೀನೆಂದೂ ಒಂದಾದೆ
ಹೆಣ್ಣು : ಸ್ನೇಹದಲಿ (ಲಲಲಲಲ)  ಸಂದಿಸಿದೆ,(ಲಲಲಲಲ)
            ಪ್ರೀತಿಯಲಿ (ಲಲಲಲಲ) ಬಂದಿಸಿದೆ (ಲಲಲಲಲ)

           ಈ ನನ್ನ ಬಾಳಲ್ಲಿ ನೀನೆಂದೂ ಒಂದಾದೆ
ಗಂಡು : ಸ್ನೇಹದಲಿ   ಹೆಣ್ಣು : ಸಂದಿಸಿದೆ

ಕೋರಸ್ : ಲಾಲ ಲಾಲ ಲಾಲ  ಲಾಲ ಲಾಲ ಲಾಲ
ಗಂಡು : ಎದೆಯೊಳಗೆ ಮನೆಮಾಡಿ ನಿಲ್ಲುವೆ (ಲಲಲಲಲಲ)
           ಅದಕೇನು ಬಾಡಿಗೆ ನೀನು ಕೇಳುವೆ (ಲಲಲಲಲಲ)
ಹೆಣ್ಣು : ನೀನೇನೇನೊ ಹೊಸ ಮಾತು ಹೇಳುವೆ    (ಲಲಲಲಲಲ)
          ಅದಕರ್ಥ ನಾನೆಲ್ಲಿ ಹುಡುಕುವೆ(ಲಲಲಲಲಲ)
ಗಂಡು : ಈ ಕಣ್ಣಲ್ಲಿದೆ ನೂರರ್ಥವು
ಹೆಣ್ಣು : ನಿನ್ನಲ್ಲಿದೆ ಸಾಮರ್ಥ್ಯವು
ಗಂಡು : ಮನಬೆರೆಸಿ ಜೊತೆ ನಡೆವ, ನಾನು ನೀನು
           ಸ್ನೇಹದಲಿ (ಲಲಲಲಲಲ) ಸಂದಿಸಿದೆ, (ಲಲಲಲಲಲ)
            ಪ್ರೀತಿಯಲಿ (ಲಲಲಲಲಲ) ಬಂದಿಸಿದೆ (ಲಲಲಲಲಲ)
ಹೆಣ್ಣು : ಈ ನನ್ನ ಬಾಳಲ್ಲಿ ನೀನೆಂದೂ ಒಂದಾದೆ ಸ್ನೇಹದಲಿ
ಗಂಡು : ಸಂದಿಸಿದೆ

ಹೆಣ್ಣು : ಮಧುಚಂದ್ರ ನಗುವಾಗ ತಲ್ಲಣ  (ಲಲಲಲಲಲ)
          ಹೂಮಂಚ ಕರೆವಾಗ ಕಂಪನ (ಲಲಲಲಲಲ)
ಗಂಡು : ಮೈಯೆಲ್ಲ ಘಮ್ಮೆನ್ನೊ ಚಂದನ   (ಲಲಲಲಲಲ)
           ಹೊಸ ಆಸೆ ತರುವಂತ ಸಾಧನ (ಲಲಲಲಲಲ)
ಹೆಣ್ಣು : ಕೈ ಸೋಕಲು ರೋಮಾಂಚನ
ಗಂಡು : ಸುಖ ತಂದಿದೆ ಈ ಬಂಧನ
ಹೆಣ್ಣು : ಬಿಸಿ ಉಸಿರು ಕಲೆತಿರಲು, ಪ್ರೀತಿ ತಾನ
          ಸ್ನೇಹದಲಿ (ಲಲಲಲಲಲ)ಸಂದಿಸಿದೆ, (ಲಲಲಲಲಲ)
          ಪ್ರೀತಿಯಲಿ (ಲಲಲಲಲಲ) ಬಂದಿಸಿದೆ(ಲಲಲಲಲಲ)
          ಈ ನನ್ನ ಬಾಳಲ್ಲಿ ನೀನೆಂದೂ ಒಂದಾದೆ
ಇಬ್ಬರು : ಸ್ನೇಹದಲಿ ( ಆಆಆಅ)  ಸಂದಿಸಿದೆ ( ಆಆಆಅ)
-----------------------------------------------------------------------------------------------------------------------

ಊರಿಗೆ ಉಪಕಾರಿ (೧೯೮೨) 
ಸಾಹಿತ್ಯ:ಆರ್.ಎನ್.ಜಯಗೋಪಾಲ್ ಸಂಗೀತ:ಸತ್ಯಂ ಗಾಯನ: ಎಸ್.ಜಾನಕಿ

ಡೆಲ್ಲಿಯ ಕುಳ್ಳನೇ ಬಾ ಮಾತಿನ ಮಲ್ಲನೇ ಬಾ
ಸಂತೋಷ ಕೋಡಲು ನಿನಗೆ ಬಂದೆ ಇಲ್ಲಿಗೇ
ಸಂಕೋಚ ಪಡದೇ ಬಳಿಗೆ ಬಾರೋ ಮೆಲ್ಲಗೇ
ಸಂತೋಷ ಕೋಡಲು ನಿನಗೆ ಬಂದೆ ಇಲ್ಲಿಗೇ
ಸಂಕೋಚ ಪಡದೇ ಬಳಿಗೆ ಬಾರೋ ಮೆಲ್ಲಗೇ

ನಿನ್ನಂಥ ಜಾಣ ಮೂರೂ ಲೋಕದಲ್ಲೂ ಇಲ್ಲಾ
ನಿನ್ನಂತೇ ನ್ಯಾಯ ನೀತಿ ಬಲ್ಲೋರು ಯಾರು ಇಲ್ಲ
ನಿನ್ನನ್ನು ಕಂಡ ಕ್ಷಣವೇ ಮನಸು ಸೋತಿತಲ್ಲಾ
ಬಾಳೆಲ್ಲಾ ಜೊತೆಯಾಗೆ ಇರುವ ಆಸೆ ಬಂದಿತಲ್ಲಾ
ಈ ಲೆಕ್ಕ ಇನ್ನೇಕೇ ತಲೆನೋವು ನಿನಗೇಕೇ
ಸೊಗಸಾದ ಹೆಣ್ಣೊಂದು ಒಲಿದಾಗ ತಡವೇಕೆ
ಸಾಕಿನ್ನೂ ಬಾ ಇಲ್ಲಿ ಸೇರೋಣ ನಾವೂ
ಡೆಲ್ಲಿಯ... ಯ್ಯಯ್ಯಯ್ಯ  ಡೆಲ್ಲಿಯ ಕುಳ್ಳನೇ ಬಾ
ಮಾತಿನ.. ನನನ  ಮಾತಿನ ಮಲ್ಲನೇ ಬಾ
ಸಂತೋಷ ಕೋಡಲು ನಿನಗೆ ಬಂದೆ ಇಲ್ಲಿಗೇ
ಸಂಕೋಚ ಪಡದೇ ಬಳಿಗೆ ಬಾರೋ ಮೆಲ್ಲಗೇ
ಸಂತೋಷ ಕೋಡಲು ನಿನಗೆ ಬಂದೆ ಇಲ್ಲಿಗೇ
ಸಂಕೋಚ ಪಡದೇ ಬಳಿಗೆ ಬಾರೋ ಮೆಲ್ಲಗೇ

ಈ  ರಾತ್ರಿ ತೋಟದಲ್ಲಿ ಯಾರು ಇಲ್ಲದಾಗ
ಹುಣ್ಣಿಮೆ ಚಂದ್ರ ಬಂದು ಹಾಲು ಚೆಲ್ಲಿದಾಗ
ಮೆತ್ತನೆ ಹುಲ್ಲು ಹಾಸಿ ನಾನು ಮಲಗಿದಾಗ
ತಣ್ಣನೆ ಗಾಳಿ ಬೀಸಿ ಸೆರಗು ಜಾರಿದಾಗ
ನೀನಲ್ಲಿ ಬಂದಾಗ  ಎದುರಲ್ಲಿ ನಿಂತಾಗ
ಮೈಯೆಲ್ಲಾ ಜುಮ್ ಎಂದೂ ಮಿಂಚೊಂದು ಹರಿದಾಗ
ಬೆಳಗಾಗಿ ದಂಗಾಗಿ ಬಾ ಎನ್ನು ಆಗ
ಡೆಲ್ಲಿಯ... ಯ್ಯಯ್ಯಯ್ಯ  ಡೆಲ್ಲಿಯ ಕುಳ್ಳನೇ ಬಾ
ಮಾತಿನ.. ನನನ  ಮಾತಿನ ಮಲ್ಲನೇ ಬಾ
ಸಂತೋಷ ಕೋಡಲು ನಿನಗೆ ಬಂದೆ ಇಲ್ಲಿಗೇ
ಸಂಕೋಚ ಪಡದೇ ಬಳಿಗೆ ಬಾರೋ ಮೆಲ್ಲಗೇ
ಸಂತೋಷ ಕೋಡಲು ನಿನಗೆ ಬಂದೆ ಇಲ್ಲಿಗೇ
ಸಂಕೋಚ ಪಡದೇ ಬಳಿಗೆ ಬಾರೋ ಮೆಲ್ಲಗೇ
--------------------------------------------------------------------------------------------------------------------------
ಊರಿಗೆ ಉಪಕಾರಿ (೧೯೮೨) 
ಸಾಹಿತ್ಯ:ಆರ್.ಎನ್.ಜಯಗೋಪಾಲ್ ಸಂಗೀತ:ಸತ್ಯಂ ಗಾಯನ: ಎಸ್.ಜಾನಕಿ


ಗಂಡು : ಚಂಡಮುಂಡರ ರುಂಡ ಕಡಿದು ಆ ಭಂಢ ರಕ್ಕಸರ ತುಂಡು ಮಾಡಿ
           ಆ ಭಂಢ ರಕ್ಕಸರ ತುಂಡು ಮಾಡಿ ರಣಚಂಡಿಯಂತೇ ಆರ್ಭಟಿಸಿ ನಿಂತವೋ
           ನಮ್ಮಮ್ಮ ನೀ ಧರೆಗೇ ಬಾ ( ಆ... ಆಆ ...)
           ನಮ್ಮನ್ನು ಕಾಪಾಡು ಬಾ ( ಆ... ಆಆ ...)
           ಓ... ನಮ್ಮಮ್ಮ ನೀ ಧರೆಗೇ ಬಾ ( ಆ... ಆಆ ...)
           ನಮ್ಮನ್ನು ಕಾಪಾಡು ಬಾ ( ಆ... ಆಆ ...)
          ಚಂಡಮುಂಡರ ರುಂಡ ಕಡಿದು ಆ ಭಂಢ ರಕ್ಕಸರ ತುಂಡು ಮಾಡಿ
          ಆ ಭಂಢ ರಕ್ಕಸರ ತುಂಡು ಮಾಡಿ ರಣಚಂಡಿಯಂತೇ ಆರ್ಭಟಿಸಿ ನಿಂತವೋ 
ಕೋರಸ್ :  ನಮ್ಮಮ್ಮ ನೀ ಧರೆಗೇ ಬಾ ( ಆ... ಆಆ ...)
              ನಮ್ಮನ್ನು ಕಾಪಾಡು ಬಾ ( ಆ... ಆಆ ...) 
             ಓ..ಓ..ಓ.. ಲಲಲಾ ಲಲಲಾ ಲಲಲಾ 
             ಓ..ಓ..ಓ.. ಲಲಲಾ ಲಲಲಾ ಲಲಲಾ 

ಗಂಡು : ಸವಿಯಾದ ಮಾತುಗಳಾಡಿ ಜನರನ್ನು ಮರಳು ಮಾಡಿ 
            ವಂಚನೆಯ ಮಾಡೋರು ಇಲ್ಲುಂಟೂ 
           ಸಾಧುಗಳ ಹಾಗೇ ವೇಷ ನಂಬಿದರೇ ಕಡೆಗೇ ಮೋಸ 
           ಇವರಂತೇ ನಟಿಸೋರೂ ಯಾರುಂಟೂ 
           ಅನ್ಯಾಯಕಾರರೂ (ಓ..) ಬಲು ಮೋಸಗಾರರೂ  (ಓ..)
           ಇಂಥ ದುಷ್ಟರ ನಾಶ ಮಾಡಲೂ ಶಿಷ್ಟ ಜನಗಳ ಕಷ್ಟ ಅಳಿಸಲೂ 
           ನಮ್ಮಮ್ಮ ನೀ ಧರೆಗೇ ಬಾ ( ಆ... ಆಆ ...)
           ನಮ್ಮನ್ನು ಕಾಪಾಡು ಬಾ ( ಆ... ಆಆ ...)
          ಚಂಡಮುಂಡರ ರುಂಡ ಕಡಿದು ಆ ಭಂಢ ರಕ್ಕಸರ ತುಂಡು ಮಾಡಿ
          ಆ ಭಂಢ ರಕ್ಕಸರ ತುಂಡು ಮಾಡಿ ರಣಚಂಡಿಯಂತೇ ಆರ್ಭಟಿಸಿ ನಿಂತವೋ 
ಕೋರಸ್ : ನಮ್ಮಮ್ಮ ನೀ ಧರೆಗೇ ಬಾ ( ಆ... ಆಆ ...)  
               ನಮ್ಮನ್ನು ಕಾಪಾಡು ಬಾ ( ಆ... ಆಆ ...)
ಗಂಡು :       ಓ..ಓ..ಓ..ಓ..ಓ..ಓ.. (ಆಆಆಆ ಆಆಆಆ ಆಆಆಅ )


ಗಂಡು :  ಕೊಲೆಯನ್ನೇ ಮಾಡಿದರೇನೋ  ಸುಲಿಗೆಯನೋ ಮಾಡಿದರೇನೋ 
             ಇವರನ್ನು ಹಿಡಿಯವವರು ಯಾರಿಲ್ಲಾ... 
             ಕೈತುಂಬಾ ಹಣವಿರುವಾಗ ಅಧಿಕಾರ ಜೊತೆಗಿರುವಾಗ 
            ಎದುರಿಸುವ ರಣಧೀರ ಇಲ್ಲುಂಟೂ  
             ಅದಕ್ಕಾಗೇ ಬಂದೇನೂ (ಹ್ಹಾ..)  ನಾ ಸಿಡಿದು ನಿಂತೇನೂ (ಹ್ಹಾ..) 
             ಇವರಾಟವ ಬೇಗ ಮುಗಿಸಲೂ ನನ್ನ ತೊಳಲಿ ಶಕ್ತಿ ತುಂಬಲೂ...  
           ನಮ್ಮಮ್ಮ ನೀ ಧರೆಗೇ ಬಾ ( ಆ... ಆಆ ...)
           ನಮ್ಮನ್ನು ಕಾಪಾಡು ಬಾ ( ಆ... ಆಆ ...)
          ಚಂಡಮುಂಡರ ರುಂಡ ಕಡಿದು ಆ ಭಂಢ ರಕ್ಕಸರ ತುಂಡು ಮಾಡಿ
          ಆ ಭಂಢ ರಕ್ಕಸರ ತುಂಡು ಮಾಡಿ ರಣಚಂಡಿಯಂತೇ ಆರ್ಭಟಿಸಿ ನಿಂತವೋ 
ಕೋರಸ್ : ನಮ್ಮಮ್ಮ ನೀ ಧರೆಗೇ ಬಾ ( ಆ... ಆಆ ...)  
               ನಮ್ಮನ್ನು ಕಾಪಾಡು ಬಾ ( ಆ... ಆಆ ...)
ಗಂಡು :  ಹೇ...ಹೇ.....ನಮ್ಮಮ್ಮ ನೀ ಧರೆಗೇ ಬಾ ನಮ್ಮನ್ನು ಕಾಪಾಡು ಬಾ 
------------------------------------------------------------------------------------------------------------------------

No comments:

Post a Comment