254. ಸಹೋದರರ ಸವಾಲ್ (1977)

ಸಹೋದರರ ಸವಾಲ ಚಿತ್ರದ ಹಾಡುಗಳು 
  1. ಓ.. ನಲ್ಲನೇ.. ಸವಿ ಮತ್ತೊಂದ 
  2. ಹೇ.. ನನಗಾಗಿಯೇ.. 
  3. ಮಾತೋಂದ ನಾ ನುಡಿವೇ 
  4. ಏಕೆ ನೋಡುವೆ ಹಾಗೆ 
  5. ಜಿಂಕೆಯಂತ ಹೆಣ್ಣಿಗೆಂದು 

ಸಹೋದರರ ಸವಾಲ್ (1977) - ಹೇ ನನಗಾಗಿಯೇ ನಿನ್ನಂದವು
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಸತ್ಯಂ ಗಾಯನ: ಎಸ್. ಪಿ. ಬಾಲಸುಭ್ರಂಣ್ಯಂ

ಹೂರ್ರಾ.. ಹ್ಹಾ.. ಹೂಂ ಹೂಂ  ಹ್ಹಾ..   ಹೂಂ ಹೂಂ
ಹೇ ನನಗಾಗಿಯೇ ನಿನ್ನಂದವು...ವೂ,
ನಿನಗಾಗಿಯೇ ಈ ಜನ್ಮವು..ವುವೂ ,
ಮರೆವೆನೆ ಚಿನ್ನ, ನಾ ಬಿಡುವೆನೆ ನಿನ್ನ,ಎಲ್ಲೇ ನೀ ಇರು
ಹೇ ನನಗಾಗಿಯೇ ನಿನ್ನಂದವು...ವೂ,
ನಿನಗಾಗಿಯೇ ಈ ಜನ್ಮವು..ವುವೂ ,
ಮರೆವೆನೆ ಚಿನ್ನ, ನಾ ಬಿಡುವೆನೆ ನಿನ್ನ,ಎಲ್ಲೇ ನೀ ಇರು.. ಹ್ಹಾ..

ಹಹ್ಹಹ್ಹ .. ಏನು ಕಣ್ಣ್‌ಗಳು ಏನು ತುಟಿಗಳು, ಬಳುಕಿ ಆಡುವ ನಡುವು
ಬಿರುಸು ನುಡಿಯೊಳು, ಸೊಗಸು ನಡೆಯೊಳು, ಆಸೆ ಮನದೊಳು
ಹ್ಹಾಹ್ಹಾ .. ಏನು ಕಣ್ಣ್‌ಗಳು ಏನು ತುಟಿಗಳು, ಬಳುಕಿ ಆಡುವ ನಡುವು
ಬಿರುಸು ನುಡಿಯೊಳು, ಸೊಗಸು ನಡೆಯೊಳು, ಆಸೆ ಮನದೊಳು..
ನೋಟದೆ ಬೇಟೆಯನಾಡಲು ನೀನು, ಸೋತೆ ಕ್ಷಣದೊಳು..ಳುಳೂ 
ನನಗಾಗಿಯೇ ಹ್ಹಾ ನಿನ್ನಂದವುವುವೂ , ನಿನಗಾಗಿಯೇ ಹ್ಹಾ ಈ ಜನ್ಮವು ವುವೂ  ,
ಮರೆವೆನೆ ಚಿನ್ನ, ನಾ ಬಿಡುವೆನೆ ನಿನ್ನ,  ಎಲ್ಲೇ ನೀ ಇರು..ಹ್ಹೂ..

ಕಣ್ಣು ಕಣ್ಣಲಿ ತುಟಿಯು ತುಟಿಯಲಿ ಸೇರಿ ನಲಿಯಲಿ
ತನುವು ಅರಳಲಿ ಮನವು ಕುಣಿಯಲಿ ಹೃದಯ ಹಾಡಲಿ.. ಹಾ..ಹಾ..ಹಾ
ಕಣ್ಣು ಕಣ್ಣಲಿ ತುಟಿಯು ತುಟಿಯಲಿ ಸೇರಿ ನಲಿಯಲಿ
ತನುವು ಅರಳಲಿ ಮನವು ಕುಣಿಯಲಿ ಹೃದಯ ಹಾಡಲಿ
ಪ್ರೇಮದ ಗಾನದಿ ಹೃದಯಗಳೆರಡು ಬೆರೆತು ಹೋಗಲಿ... ಹ್ಹಿ ಹ್ಹಿ ಹ್ಹಿ
ನನಗಾಗಿಯೇ...  ನಿನ್ನಂದವು... ,  ನಿನಗಾಗಿಯೇ ಹ್ಹಾ ಈ ಜನ್ಮವು,
ಮರೆವೆನೆ ಚಿನ್ನ, ನಾ ಬಿಡುವೆನೆ ನಿನ್ನ,ಎಲ್ಲೇ ನೀ ಇರು... ಅಹ್ಹಹ್ಹಾ ..
---------------------------------------------------------------------------------------------------------------------

ಸಹೋದರರ ಸವಾಲ್ (1977) - ಓ ನಲ್ಲನೆ ಸವಿ ಮಾತೊಂದ
ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ಸತ್ಯಂ ಗಾಯನ: ಪಿ.ಸುಶೀಲ ಮತ್ತು ಎಸ್.ಪಿ.ಬಿ

ಹೆಣ್ಣು : ಓ ನಲ್ಲನೆ ಸವಿ ಮಾತೊಂದ ನುಡಿವೆಯಾ....
ಗಂಡು : ನಾನೇನಲು ನುಡಿಯಲೆ ನಲ್ಲೆ ತಿಳಿಸೆಯಾ...
ಹೆಣ್ಣು : ನಾ ನಿನ್ನ ಬಿಡೆನು ಎಂದಿಗೂ...  ನೀ ನನ್ನ ಜೀವ ಎಂದಿಗೂ...
ಗಂಡು : ಓ ಅರಗಣಿ ಸವಿ ಮಾತೊಂದ ನುಡಿವೆಯಾ..
ಹೆಣ್ಣು ; ನಾನೇನೂ ನುಡಿಯಲಿ ನಲ್ಲ ಹೇಳೆಯಾ
ಗಂಡು  ನಾ ನಿನ್ನ ಬಿಡೆನೂ ಎಂದಿಗೂ..ನೀ ನನ್ನ ಜೀವ ಎಂದಿಗೂ...

ಗಂಡು : ಓಓಓಓಓಓಓ (ಆಆಆಅ)
ಕೋರಸ್ : ಓಓಓಓಓಓಓಓಓ ಓಓಓಓಓ 
ಗಂಡು ; ಹಾಲು ಜೇನು ಕಲೆತಂತೆ  ಮನಸು ಮನಸು ಕಲೆತಾಯ್ತು
            ಬದುಕಲ್ಲಿ ಹರುಷ ತುಂಬಿತು
ಹೆಣ್ಣು : ನದಿಗಳೆರಡು ಬೆರೆತಂತೆ ಹೃದಯವೆರಡು ಬೆರೆತಾಯ್ತು
         ನೀ ಬಂದು ಬಾಳು ಬೆಳಗಿತು
ಇಬ್ಬರೂ : ನಾವೆಂದೆಂದೂ ಹೀಗೊಂದಾಗಿ  ಇರುವಾಸೆ ತಂದಿತು
ಹೆಣ್ಣು : ಓ ನಲ್ಲನೆ ಸವಿ ಮಾತೊಂದ ನುಡಿವೆಯಾ....
ಗಂಡು : ನಾನೇನಲು ನುಡಿಯಲೆ ನಲ್ಲೆ ತಿಳಿಸೆಯಾ... ಆಆಆಆ
ಹೆಣ್ಣು : ನಾ ನಿನ್ನ ಬಿಡೆನು ಎಂದಿಗೂ...
ಗಂಡು : ನೀ ನನ್ನ ಜೀವ ಎಂದಿಗೂ...

ಕೋರಸ್ : ಓಓಓಓಓಓಓಓಓ ಓಓಓಓಓ 
ಹೆಣ್ಣು : ಪ್ರೇಮ ಜ್ಯೋತಿ ಬೆಳಗುತಿದೆ  ಇರುಳ ನುಂಗಿ ಬೆಳೆಯುತಿದೆ
          ಬಾಳಿಗೆ ತಂತೂ ಹರುಷವ
ಗಂಡು : ಆರದಂತೆ ಜ್ಯೋತಿಯನು  ಕಾವಲಿರಿಸಿ ಕಂಗಳನು
            ಬಾಳನ್ನೇ ಧಾರೆ ಎರೆಯುವಾ
ಇಬ್ಬರು : ನಾವೆಂದಂದೂ ಹೀಗೊಂದಾಗಿ  ಆನಂದ ಹೊಂದುವಾ
ಗಂಡು : ಓ ಅರಗಣಿ ಸವಿ ಮಾತೊಂದ ನುಡಿವೆಯಾ..
ಹೆಣ್ಣು : ನಾ ನಿನ್ನ ಬಿಡೆನು ಎಂದಿಗೂ...
-------------------------------------------------------------------------------------------------------------------------

ಸಹೋದರರ ಸವಾಲ್ (1977) - ಮಾತೊಂದ ನಾ ನುಡಿಯುವೆ ಕೇಳು 
ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ಸತ್ಯಂ ಗಾಯನ: ಪಿ.ಸುಶೀಲ ಮತ್ತು ಎಸ್.ಪಿ.ಬಿ ಮತ್ತು ಎಸ.ಜಾನಕಿ 

ಗಂಡು : ಹೂಂಹೂಂಹೂಂ.. ಹೇಹೇಹೇಹೇ ಲಾರರಾರರರ ರರರರ
ಹೆಣ್ಣು : ಪಪಪಪ ಪಬಪಬ ಪಬಪಬ ಪಬಪಬ ಪಬಪಬ ಪಬಪಬ
ಹೆಣ್ಣು  : ಶ್!!!  ನಿನ್ನೇ ರಾತ್ರಿ ಮಿಂಚು ಗುಡುಗು ಮಳೆ ಚಳಿ
          ಒಬ್ಬಳೇ ಮರದ ಕೆಳಗಡೆ ನಡುಗುತ ನಿಂತಿದ್ದೀನಿ
         ಯಾರೋ ಭುಜದ ಮೇಲೆ ಕೈ ಇಟ್ಟಂಗಾಯ್ತು
         ಬೆಚ್ಚಿಬಿದ್ದೆ ಹಿಂತಿರುಗಿದೇ ಅವನೇ..  ಅವನೇ..  ಅವನೇ..
ಗಂಡು : ಮಾತೊಂದ ನಾ ನುಡಿಯುವೆ ಕೇಳು 
           ಮುತ್ತೊಂದ ನಾ ಕೊಡುವೇ ತಾಳು
          ಬಾ ಇಲ್ಲಿಗೆ ನೀ ಮೆಲ್ಲಗೆ ಹೆಣ್ಣೇ...
         ಮಾತೊಂದ ನಾ ನುಡಿಯುವೆ ಕೇಳು 
         ಮುತ್ತೊಂದ ನಾ ಕೊಡುವೇ ತಾಳು ಬಾ ಇಲ್ಲಿಗೆ ನೀ ಮೆಲ್ಲಗೆ ಹೆಣ್ಣೇ...

ಹೆಣ್ಣು : (ಆಮೇಲೆ) ಕಣ್ಣ ಹೆದರತ ಇದೆ ಮೈ ನಡಗುತಾ ಇದೆ
         ತುಟಿ ಅಧರತ ಇದೆ ಹೃದಯ ಡವ ಡವ ಅಂತಾ ಇದೆ..
         ಅವನು ನನ್ನ ಬಲವಾಗಿ ತಬ್ಬಕೊಂಡ ಬೇಡಾ..  ಬೇಡಾ.. ಬೇಡಾ..
ಗಂಡು : ನಾನಿಲ್ಲಿ ಇರವಾಗ ಭಯವೇಕೆ ಬಾ ಬೇಗ
           ಮಳೆಯಲಿ ಚಳಿಯಲಿ ಹೀಗೇಕೆ ನಿಂತೇ
           ಏಕಾಂತ ಇರುವಾಗ ಸಂಗಾತಿ ಕರೆವಾಗ
           ಹರುಷದಿ ಬೇರೆಯದೇ ನಿಂಗೇಕೆ ಚಿಂತೆ..
           ಈ ತೋಳಿನ ಹೂವಾಗುವೆ ಮೈ ಮರೆಯುವೆ ಬಾರೆ ...
           ಮಾತೊಂದ ನಾ ನುಡಿಯುವೆ ಕೇಳು 
         ಮುತ್ತೊಂದ ನಾ ಕೊಡುವೇ ತಾಳು ಬಾ ಇಲ್ಲಿಗೆ ನೀ ಮೆಲ್ಲಗೆ ಹೆಣ್ಣೇ...

ಹೆಣ್ಣು : ಆಮೇಲೆ ಬಿಲ್ಲಿನ ಹಾಗ್ ಬಾಗದ ಕೈ ಎರಡು ಚಾಚಿದ
          ಮಗುವಿನ ಹಾಗ್ ಎತ್ತಕೊಂಡ ಮುಖದ ಹತ್ರ ಮುಖ ತಂದ
         ಅಯ್ಯೋ...  ಅಯ್ಯೋ... ಅಯ್ಯೋ... ಅಯ್ಯೋ...
ಗಂಡು : ನಿನ್ನಾಸೆ ನನ್ನಲ್ಲಿ ನನ್ನಾಸೆ ನಿನ್ನಲ್ಲಿ ನಾಚಿಕೆ ಏತಕೆ ಬಾ ನನ್ನ ನಲ್ಲೇ...
            ನಾ ಬಂದೆ ನಿನಗಾಗಿ ಈ ರಾತ್ರಿ ನಮಗಾಗಿ ಕಾಲವ ಕಳೆಯದೆ ಬಾ ಮುದ್ದು ಹುಲ್ಲೇ..
            ನಿನ್ನಾಸೆಯ ಪೂರೈಸುವೇ ಉಲ್ಲಾಸವ ಕೊಡುವೇ
            ಮಾತೊಂದ ನಾ ನುಡಿಯುವೆ ಕೇಳು 
         ಮುತ್ತೊಂದ ನಾ ಕೊಡುವೇ ತಾಳು ಬಾ ಇಲ್ಲಿಗೆ ನೀ ಮೆಲ್ಲಗೆ ಹೆಣ್ಣೇ...
ಹೆಣ್ಣು : ಅಹ್ಹಹ್ಹಹ್ಹಾ.. ಇದೆಲ್ಲಾ ನಿಜ ಅನಕೋಡ್ರಾ...ಉಹ್ಹೂ ಉಹ್ಹೂ  ಇಲ್ಲಾ.. ಬರಿ ಕನಸು
         ಆಹ್ಹ್.. ಇಟ್ ವಾಸ್ ಏ ಸ್ವೀಟ್ ಡ್ರೀಮ್
-------------------------------------------------------------------------------------------------------------------------

ಸಹೋದರರ ಸವಾಲ್ (1977) - ಹೇ.. ಹೇ.. ಹೇಹೇ ... ಹೇ.. ಏಕೇ ನೋಡುವೆ ಹಾಗೇ
ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ಸತ್ಯಂ ಗಾಯನ: ಪಿ.ಸುಶೀಲ ಮತ್ತು ಎಸ್.ಪಿ.ಬಿ ಮತ್ತು ಎಸ.ಜಾನಕಿ

ಗಂಡು : ಹ್ಹೂರಾ... (ಆಹ್ಹಾಹ್ಹಹ್ಹಾ )
ಗಂಡು : ಹೇ.. ಹೇ.. ಹೇಹೇ ... ಹೇ.. ಏಕೇ ನೋಡುವೆ ಹಾಗೇ
ಹೆಣ್ಣು : ಹೇ.. ಹೇ.. ಹೇಹೇ ... ಹೇ.. ಪ್ರೇಮಿಸುವುದೇ ಹೀಗೆ...
ಗಂಡು : ಹೇ.. ಹೇ.. ಹೇಹೇ ... ಹೇ.. ಏಕೇ ನೋಡುವೆ ಹಾಗೇ
ಹೆಣ್ಣು : ಹೇ.. ಹೇ.. ಹೇಹೇ ... ಹೇ.. ಪ್ರೇಮಿಸುವುದೇ ಹೀಗೆ...
ಇಬ್ಬರು : ಪ್ರೇಮಿಸಲೆಂದೇ ಹುಟ್ಟಿದೆವೆಂದು ತಿಳಿಯಿರಿ ಎಲ್ಲಾ ಇಂದೂ...
ಗಂಡು : ಹೇ.. ಹೇ.. ಹೇಹೇ ... ಹೇ.. ಏಕೇ ನೋಡುವೆ ಹಾಗೇ
ಹೆಣ್ಣು : ಹೇ.. ಹೇ.. ಅಹ್ಹಹ್ಹ  ಹೇ.. ಪ್ರೇಮಿಸುವುದೇ ಹೀಗೆ...

ಗಂಡು : ಅರೇ... ಯಾರ್ ಅರೇ ಸಂಭಲಕೇ ರಸ್ತಾ ದೇಖೇ ಸಂಭಲಕೇ ಚಲನಾ ಅಹ್ಹಹ್ಹಹಾ..
ಗಂಡು : ಹ.. ಹ.. ಪ್ರೇಮದ ಆಟವ ನೋಡಿದ ಮುದುಕರು ನೆನೆಯಲಿ ಕನಸಿನ ದಿನವಾ...
ಹೆಣ್ಣು : ಪ್ರೇಮಿಗಳಾಡುವ ಸರಸವ ಕಂಡು ಪಡೆಯಲಿ ನವ ಯೌವ್ವನವ
ಇಬ್ಬರು : ಪ್ರೇಮದ ಆಟವ ನೋಡಿದ ಮುದುಕರು ನೆನೆಯಲಿ ಕನಸಿನ ದಿನವಾ...
           ಪ್ರೇಮಿಗಳಾಡುವ ಸರಸವ ಕಂಡು ಪಡೆಯಲಿ ನವ ಯೌವ್ವನವ
ಹೆಣ್ಣು : ಆಡುವಾ... (ಓಡುವಾ)... ಹಾಡುವಾ... (ಕೂಡುವಾ..). 
ಇಬ್ಬರು : ಪ್ರೇಮದ ಕಡಲಲಿ ಮುಳುಗಿರುವಾ...   
ಗಂಡು : ಹೇ.. ಹೇ.. ಹೇಹೇ ... ಹೇ.. ಏಕೇ ನೋಡುವೆ ಹಾಗೇ
ಹೆಣ್ಣು : ಹೇ.. ಹೇ.. ಹೇಹೇ ... ಹೇ.. ಪ್ರೇಮಿಸುವುದೇ ಹೀಗೆ...

ಹೆಣ್ಣು : ಅರೇ...  ಅರೇ... ಯಾಕ್ರೀ... ಹಾಗ್ ನೋಡತಾ ಇದ್ದೀರಾ...
ಹೆಣ್ಣು : ಪ್ರೇಮವೇ ಹಾಸಿಗೆ ಪ್ರೇಮವೇ ಹೊದ್ದಿಕೆ ಪ್ರೇಮವೇ ಉಸಿರು ನಮಗೇ
ಗಂಡು : ಪ್ರೇಮವೇ ಕಾಲವು ಸಾಲದೇ ಇರಲೂ ಬೇರೆ ಗಮನವು ಏಕೇ...
ಗಂಡು : ಪ್ರೇಮವೇ ಹಾಸಿಗೆ ಪ್ರೇಮವೇ ಹೊದಿಕೆ ಪ್ರೇಮವೇ ಉಸಿರು ನಮಗೇ
ಹೆಣ್ಣು : ಪ್ರೇಮವೇ ಕಾಲವು ಸಾಲದೇ ಇರಲೂ ಬೇರೆ ಗಮನವು ಏಕೇ...
ಗಂಡು : ಪ್ರೇಮಿಗೇ (ಏತಕೆ) ಬೇಡದ (ನಾಚಿಕೆ)
ಇಬ್ಬರು : ಆನಂದವಾಗಿ ಪ್ರೇಮಿಸುವಾ..
ಗಂಡು : ಹೇ.. ಹೇ.. ಹೇಹೇ ... ಹೇ.. ಏಕೇ ನೋಡುವೆ ಹಾಗೇ
ಹೆಣ್ಣು : ಹೇ.. ಹೇ.. ಹೇಹೇ ... ಹೇ.. ಪ್ರೇಮಿಸುವುದೇ ಹೀಗೆ...
ಇಬ್ಬರು : ಪ್ರೇಮಿಸಲೆಂದೇ ಹುಟ್ಟಿದೆವೆಂದು ತಿಳಿಯಿರಿ ಎಲ್ಲಾ ಇಂದೂ...
ಗಂಡು : ಹೇ.. ಹೇ.. ಹೇಹೇ ... ಹೇ.. ಏಕೇ ನೋಡುವೆ ಹಾಗೇ
ಹೆಣ್ಣು : ಹೇ.. ಹೇ.. ಅಹ್ಹಹ್ಹ  ಹೇ.. ಪ್ರೇಮಿಸುವುದೇ ಹೀಗೆ...
----------------------------------------------------------------------------------------------------------------------

ಸಹೋದರರ ಸವಾಲ್ (1977) - ಹೇ.. ಹೇ.. ಹೇಹೇ ... ಹೇ.. ಏಕೇ ನೋಡುವೆ ಹಾಗೇ
ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ಸತ್ಯಂ ಗಾಯನ: ಪಿ.ಸುಶೀಲ ಮತ್ತು ಎಸ್.ಪಿ.ಬಿ ಮತ್ತು ರಮೇಶ 

ಎಸ್ಪಿಬಿ : ಜಿಂಕೆಯಂಥ ಹೆಣ್ಣಿಗೆಂದೂ  ಜಿನ್ನು ತಂದೆ ನಾನು (ಹ್ಹಾಂ )
ಪಿಬಿಎಸ್ :  ರಂಭೆಯಂಥ ಹೆಣ್ಣಿಗೆಂದೂ ರಮ್ಮು ತಂದೆ ನಾನು (ಹ್ಹ ಹ್ಹಾಂ )
ಎಸ್ಪಿಬಿ : ಜಿಂಕೆಯಂಥ ಹೆಣ್ಣಿಗೆಂದೂ  ಜಿನ್ನು ತಂದೆ ನಾನು (ಹ್ಹಾಂ )
ಪಿಬಿಎಸ್ :  ರಂಭೆಯಂಥ ಹೆಣ್ಣಿಗೆಂದೂ ರಮ್ಮು ತಂದೆ ನಾನು (ಹ್ಹ ಹ್ಹಾಂ )
ಎಸ್ಪಿಬಿ :   ಇಲ್ಲೇ ಬರ್ತಿಯಾ ಇಲ್ಲೇ ಅಲ್ಲೇ ಕೂರ್ತಿಯಾ ( ಹ್ಹಾಂ )
ಪಿಬಿಎಸ್  : ಅಲ್ಲೇ ಇರ್ತಿಯಾ ಇಲ್ಲಾ ಇಲ್ಲೇ ಬರ್ತಿಯಾ.(. ಹ್ಹಾ )
ಎಸ್ಪಿಬಿ :   ಇಲ್ಲೇ ಬರ್ತಿಯಾ ಇಲ್ಲೇ ಅಲ್ಲೇ ಕೂರ್ತಿಯಾ ( ಹ್ಹಾಂ )
ಪಿಬಿಎಸ್  : ಅಲ್ಲೇ ಇರ್ತಿಯಾ ಇಲ್ಲಾ ಇಲ್ಲೇ ಬರ್ತಿಯಾ.(. ಹ್ಹಾ  ಹಹ್ಹಹ್ಹಹ )
ಎಸ್ಪಿ: ಧೂಮ್ ಥಾ ತಿನಾ ಉಬ್ಬಾಬ್ಬಾ
ಹೆಣ್ಣು : ಲಾಲಾ ಲಾಲಾ ಲಾಲಾ ಲಾಲಾ ಲಾಲಾ ಲಲ್ಲ
ಪಿಬಿಎಸ್ : ತಿಗರಡತಾ   ತಿಗರಡತಾ  ತಿಗರಡತಾ ಹ್ಹಾ...

ಎಸ್ಪಿ :  ಕುಳ್ಳನವನು ಏನು ಬಲ್ಲ ರಸಿಕ ನಾನು ನೋಡು
ಪಿಬಿಎಸ್ : ಕಳ್ಳನವನು ಕೋಳಿ ಕಡಿವ ಅವನ ಆಚೆ ದೂಡು
ಎಸ್ಪಿ :  ಕುಳ್ಳನವನು ಏನು ಬಲ್ಲ ರಸಿಕ ನಾನು ನೋಡು
ಪಿಬಿಎಸ್ : ಕಳ್ಳನವನು ಕೋಳಿ ಕಡಿವ ಅವನ ಆಚೆ ದೂಡು
ಎಸ್ಪಿ : ನಿನಗೆ ನಾ ಜೋಡಿ   ಪಿಬಿಎಸ್ :  ನನಗೆ ನೀ ಜೋಡಿ
ಎಸ್ಪಿ : ನಿನಗೆ ನಾ ಜೋಡಿ   ಪಿಬಿಎಸ್ :  ನನಗೆ ನೀ ಜೋಡಿ
ಎಸ್ಪಿ : ಅವನ ನೀನು ನಂಬಬೇಡಾ ಮುದಿಯಾ ತುಂಬಾ ಕೇಡಿ
        ಅಲ್ಲೇ ಇರ್ತಿಯಾ ಇಲ್ಲಾ ಇಲ್ಲೇ ಬರ್ತಿಯಾ..
ಪಿಬಿಎಸ್ :   ಇಲ್ಲೇ ಬರ್ತಿಯಾ ಇಲ್ಲೇ ಅಲ್ಲೇ ಕೂರ್ತಿಯಾ

ಎಸ್ಪಿಬಿ : ಹಹ್ಹಹಾ ಹೇಹೇ ಹ್ಹಾಹ್ಹಾ ಹೇಹೇ ಹಹ್ಹಹ್ಹಾ
            ಮುದಿಯಾ ಹದ್ದು ಒಣಗಿ ಹೋದ ಮರದ ಹಾಗೇ ಇವನು
ಪಿಬಿಎಸ್ :  ಮುದಿಯಾ ಹುಣಸೆ ಮರದ ಹಣ್ಣು ರುಚಿಯು ಕಮ್ಮಿ ಏನೂ
ಎಸ್ಪಿಬಿ :  ಮುದಿಯಾ ಹದ್ದು ಒಣಗಿ ಹೋದ ಮರದ ಹಾಗೇ ಇವನು
ಪಿಬಿಎಸ್ :  ಮುದಿಯಾ ಹುಣಸೆ ಮರದ ಹಣ್ಣು ರುಚಿಯು ಕಮ್ಮಿ ಏನೂ
ಎಸ್ಪಿ : ಹತ್ತಿರಾ  ಬರಲೇನೆ ಮುತ್ತು ಕೊಡಲೇನೆ
ಪಿಬಿ : ಹತ್ತಿರಾ  ಬರಲೇನೆ ಮುತ್ತು ಕೊಡಲೇನೆ
         ಕುಳ್ಳನವನು ನಂಬಬೇಡಾ ಇವನು ಶುದ್ಧ ತರಲೇ...
        ಇಲ್ಲೇ ಬರ್ತಿಯಾ ಇಲ್ಲೇ ಅಲ್ಲೇ ಕೂರ್ತಿಯಾ
ಎಸ್ಪಿ : ಅಲ್ಲೇ ಇರ್ತಿಯಾ ಇಲ್ಲಾ ಇಲ್ಲೇ ಬರ್ತಿಯಾ..
ಪಿಬಿ  :   ಇಲ್ಲೇ ಬರ್ತಿಯಾ ಇಲ್ಲೇ ಅಲ್ಲೇ ಕೂರ್ತಿಯಾ ( ಹ್ಹಾಂ )
ಎಸ್ಪಿ : ಅಲ್ಲೇ ಇರ್ತಿಯಾ ಇಲ್ಲಾ ಇಲ್ಲೇ ಬರ್ತಿಯಾ..
ಪಿಬಿ  :   ಇಲ್ಲೇ ಬರ್ತಿಯಾ ಇಲ್ಲೇ ಅಲ್ಲೇ ಕೂರ್ತಿಯಾ ( ಹ್ಹಾಂ )
ಎಸ್ಪಿಬಿ : ಜಿಂಕೆಯಂಥ ಹೆಣ್ಣಿಗೆಂದೂ  ಜಿನ್ನು ತಂದೆ ನಾನು (ಹ್ಹಾಂ )
ಪಿಬಿಎಸ್ :  ರಂಭೆಯಂಥ ಹೆಣ್ಣಿಗೆಂದೂ ರಮ್ಮು ತಂದೆ ನಾನು (ಹ್ಹ ಹ್ಹಾಂ )
ಎಸ್ಪಿ : ಅಲ್ಲೇ ಇರ್ತಿಯಾ ಇಲ್ಲಾ ಇಲ್ಲೇ ಬರ್ತಿಯಾ..
ಪಿಬಿ  :   ಇಲ್ಲೇ ಬರ್ತಿಯಾ ಇಲ್ಲೇ ಅಲ್ಲೇ ಕೂರ್ತಿಯಾ ( ಹ್ಹಾಂ )
ಎಸ್ಪಿ :  ಜಿನ್ನು...           ಪಿಬಿಎಸ್ :  ರಮ್ಮು...
ಎಸ್ಪಿ :  ಜಿನ್ನು...           ಪಿಬಿಎಸ್ :  ರಮ್ಮು...   
ಎಸ್ಪಿ :  ಜಿನ್ನು...           ಪಿಬಿಎಸ್ :  ರಮ್ಮು...   (ಅಹ್ಹಹ್ಹಾಹ್ಹ )
--------------------------------------------------------------------------------------------------------------------------

No comments:

Post a Comment