260. ಗಂಡ ಹೆಂಡತಿ (1977)


ಗಂಡ ಹೆಂಡತಿ ಚಿತ್ರದ ಹಾಡುಗಳು 
  1. ಹೆಣ್ಣಿನ ಮಾತಿಗೆ ಅರ್ಥವೇ ಬೇರೇ 
  2. ಇನ್ನೂ ಇನ್ನೂ ಹತ್ತಿರ ಹತ್ತಿರ ಬರಲೇನೆ 
  3. ಕಣ್ಣಿನ ಮುಂದೆ ಹೆಣ್ಣಿರುವಾಗ 
  4. ಬೊಂಬೆಗಳಾರೋ ಅಲ್ಲ 
ಗಂಡ ಹೆಂಡತಿ (1977)
ಸಾಹಿತ್ಯ: ಚಿ.ಉದಯಶಂಕರ್  ಸಂಗೀತ: ವಿಜಯಭಾಸ್ಕರ್  ಹಾಡಿದವರು: ಎಸ್.ಪಿ.ಬಿ., ಪಿ.ಸುಶೀಲಾ


ಗಂಡು : ಹೆಣ್ಣಿನ ಮಾತಿಗೆ ಅರ್ಥವೆ ಬೇರೆ
            ಹೆಣ್ಣಿನ ಮಾತಿಗೆ ಅರ್ಥವೆ ಬೇರೆ ಬಲ್ಲೆ ನೀ ಬಾರೆ
            ಹೌದು ಎಂದರೆ ಅಲ್ಲ, ಅಲ್ಲ ಎಂದರೆ ಹೌದು
           ಬೇಡ ಎಂದರೆ ಬೇಕು, ಬೇಕು ಎಂದರೆ ಸಾಕು
ಹೆಣ್ಣು : ಗಂಡಿನ ಮಾತಿಗೆ ಅರ್ಥವೆ ಬೇರೆ
          ಗಂಡಿನ ಮಾತಿಗೆ ಅರ್ಥವೆ ಬೇರೆ ಬಲ್ಲೆ ನಾ ಎಲ್ಲ
          ಕಣ್ಣಲ್ಲೆ ಅಂದವ ಹೀರಿ ಅಂಗೈಲೆ ಸ್ವರ್ಗವ ತೋರಿ
          ಮಾತಲ್ಲೆ ಮೆಲ್ಲಗೆ ಸೇರಿ ಕೈಕೊಟ್ಟು ಕೊನೆಗೆ ಪರಾರಿ

ಹೆಣ್ಣು  : ಹತ್ತಾರು ಹೆಣ್ಣನ್ನು ಕಂಡು ಬಂದ ಭೂಪತಿ ಗಂಡು
          ನಿನ್ನ ಮದುವೆ ಎಂದು ನಾ ಬಂದೇ ಬರುವೆ ಅಂದು
          ಹತ್ತಾರು ಹೆಣ್ಣನ್ನು ಕಂಡು ಬಂದ ಭೂಪತಿ ಗಂಡು
          ನಿನ್ನ ಮದುವೆ ಎಂದು ನಾ ಬಂದೇ ಬರುವೆ ಅಂದು
ಗಂಡು : ಬಂದರೆ ನಾನು ನಿನಗೆ ಪಕ್ಕದ ಪೀಠವ ಕೊಡುವೆ
           ಜೊತೆಯಲಿ ಎಂದು ಇರುವೆ ನೀ ನುಡಿದಂತೆ ನಾ ನಡೆವೆ
           ಬಂದರೆ ನಾನು ನಿನಗೆ ಪಕ್ಕದ ಪೀಠವ ಕೊಡುವೆ
           ಜೊತೆಯಲಿ ಎಂದು ಇರುವೆ ನೀ ನುಡಿದಂತೆ ನಾ ನಡೆವೆ
ಹೆಣ್ಣು : ಗಂಡಿನ ಮಾತಿಗೆ ಅರ್ಥವೆ ಬೇರೆ
           ಗಂಡಿನ ಮಾತಿಗೆ ಅರ್ಥವೆ ಬೇರೆ ಬಲ್ಲೆ ನಾ ಎಲ್ಲ
           ಕಣ್ಣಲ್ಲೆ ಅಂದವ ಹೀರಿ ಅಂಗೈಲೆ ಸ್ವರ್ಗವ ತೋರಿ
           ಮಾತಲ್ಲೆ ಮೆಲ್ಲಗೆ ಸೇರಿ ಕೈಕೊಟ್ಟು ಕೊನೆಗೆ ಪರಾರಿ

ಹೆಣ್ಣು: ತಂಗಾಳಿಯಂತೆ ನೀ ಬಂದೆ ನನ್ನಲ್ಲಿ ಒಂದಾಗಿ ಹೋದೆ
         ಬಾಳಲ್ಲಿ ಹುಣ್ಣಿಮೆ ತಂದೆ ನಾ ನಿನ್ನಿಂದ ಆನಂದ ಕಂಡೆ
         ತಂಗಾಳಿಯಂತೆ ನೀ ಬಂದೆ ನನ್ನಲ್ಲಿ ಒಂದಾಗಿ ಹೋದೆ
         ಬಾಳಲ್ಲಿ ಹುಣ್ಣಿಮೆ ತಂದೆ ನಾ ನಿನ್ನಿಂದ ಆನಂದ ಕಂಡೆ
ಗಂಡು : ಕಣ್ಣಿಗೆ ರೆಪ್ಪೆಯ ಹಾಗೆ ಮುತ್ತಿಗೆ ಚಿಪ್ಪಿನ ಹಾಗೆ
            ನಿನ್ನನು ಸೇರಿ ಇರುವೆ ನಾ ನೆಮ್ಮದಿಯನ್ನು ತರುವೆ
            ಕಣ್ಣಿಗೆ ರೆಪ್ಪೆಯ ಹಾಗೆ ಮುತ್ತಿಗೆ ಚಿಪ್ಪಿನ ಹಾಗೆ
           ನಿನ್ನನು ಸೇರಿ ಇರುವೆ ನಾ ನೆಮ್ಮದಿಯನ್ನು ತರುವೆ
           ಹೆಣ್ಣಿನ ಮಾತಿಗೆ ಅರ್ಥವೆ ಬೇರೆ  (ಅಹ್ಹಹ್ಹಾ )
           ಹೆಣ್ಣಿನ ಮಾತಿಗೆ ಅರ್ಥವೆ ಬೇರೆ ಬಲ್ಲೆ ನೀ ಬಾರೆ
           ಹೌದು ಎಂದರೆ ಅಲ್ಲ, ಅಲ್ಲ ಎಂದರೆ ಹೌದು
           ಬೇಡ ಎಂದರೆ ಬೇಕು, ಬೇಕು ಎಂದರೆ ಸಾಕು
ಹೆಣ್ಣು : ಗಂಡಿನ ಮಾತಿಗೆ ಅರ್ಥವೆ ಬೇರೆ
          ಗಂಡಿನ ಮಾತಿಗೆ ಅರ್ಥವೆ ಬೇರೆ ಬಲ್ಲೆ ನಾ ಎಲ್ಲ
          ಕಣ್ಣಲ್ಲೆ ಅಂದವ ಹೀರಿ ಅಂಗೈಲೆ ಸ್ವರ್ಗವ ತೋರಿ
          ಮಾತಲ್ಲೆ ಮೆಲ್ಲಗೆ ಸೇರಿ ಕೈಕೊಟ್ಟು ಕೊನೆಗೆ ಪರಾರಿ
------------------------------------------------------------------------------------------------------------------------


ಗಂಡ ಹೆಂಡತಿ (1977)

ಸಾಹಿತ್ಯ: ಚಿ.ಉದಯಶಂಕರ್  ಸಂಗೀತ: ವಿಜಯಭಾಸ್ಕರ್  ಹಾಡಿದವರು: ಎಸ್.ಪಿ.ಬಿ., ವಾಣಿ ಜಯರಾಮ್

ಗಂಡು : ಇನ್ನೂ ಇನ್ನೂ ಹತ್ತಿರ ಹತ್ತಿರ ಬರಲೇನೆ
            ಯಾರೂ ಇಲ್ಲ ಒಂದೇ ಒಂದು ಕೊಡಲೇನೆ
ಹೆಣ್ಣು : ಎಗ್ಗು ಸಿಗ್ಗು ಇಲ್ಲವೆ ಎನ್ನುತ ನಗಬೇಡ
          ಸಾಕು ಸಾಕು ಎನ್ನುವ ತನಕ ಬಿಡಬೇಡ
ಗಂಡು : ಇನ್ನೂ ಇನ್ನೂ ಹತ್ತಿರ ಹತ್ತಿರ ಬರಲೇನೆ
            ಯಾರೂ ಇಲ್ಲ ಒಂದೇ ಒಂದು ಕೊಡಲೇನೆ
ಹೆಣ್ಣು : ಎಗ್ಗು ಸಿಗ್ಗು ಇಲ್ಲವೆ ಎನ್ನುತ ನಗಬೇಡ
          ಸಾಕು ಸಾಕು ಎನ್ನುವ ತನಕ ಬಿಡಬೇಡ

ಹೆಣ್ಣು : ಚಿನ್ನಾ... ಕಂಗಳಲ್ಲಿ ನುಂಗುವಾಸೆ ಏನು
          ಏಕೇ... ಇನ್ನು ನಿನ್ನ ದಾಹ ತೀರದೇನು
ಗಂಡು : ನಿನ್ನ ಅಧರಗಳು, ನನ್ನ ಅಧರಗಳ
            ಸ್ನೇಹ ಬಯಸಿರಲು, ಮೋಹ ತುಂಬಿರಲು
ಹೆಣ್ಣು : ಕಾಲ ಕಳೆಯದಿರು ಇನ್ನು
ಗಂಡು : ಇನ್ನೂ ಇನ್ನೂ ಹತ್ತಿರ ಹತ್ತಿರ ಬರಲೇನೆ
            ಯಾರೂ ಇಲ್ಲ ಒಂದೇ ಒಂದು ಕೊಡಲೇನೆ

ಗಂಡು : ನಲ್ಲೇ... ಕೆನ್ನೆ ಕೆನ್ನೆ ಸೋಕಬಾರದೇನು
            ನಿನ್ನಾ... ಮೊಗವು ಹೀಗೆ ಕೆಂಪಗಾಯಿತೇನು
ಹೆಣ್ಣು : ನಿನ್ನ ಬಿಸಿಯುಸಿರ, ನಾದ ಕೇಳಿರಲು
          ಎಲ್ಲ ಆಸೆಗಳು, ಒಡನೆ ಚಿಮ್ಮಿರಲು
ಗಂಡು : ಕಣ್ಣೆ ನುಡಿಯುತಿದೆ ಎಲ್ಲ
ಹೆಣ್ಣು : ಎಗ್ಗು ಸಿಗ್ಗು ಇಲ್ಲವೆ ಎನ್ನುತ ನಗಬೇಡ ( ಅಹ್ಹಹ್ಹಹ್ಹ  )
          ಸಾಕು ಸಾಕು ಎನ್ನುವ ತನಕ ಬಿಡಬೇಡ
ಗಂಡು : ಇನ್ನೂ ಇನ್ನೂ ಹತ್ತಿರ ಹತ್ತಿರ ಬರಲೇನೆ
            ಯಾರೂ ಇಲ್ಲ ಒಂದೇ ಒಂದು ಕೊಡಲೇನೆ
--------------------------------------------------------------------------------------------------------------------------

ಗಂಡ ಹೆಂಡತಿ (1977)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಎಸ್.ಪಿ.ಬಿ., ಪಿ.ಸುಶೀಲಾ

ಹೆಣ್ಣು : ಕಣ್ಣಿನ ಮುಂದೆ ಹೆಣ್ಣಿರುವಾಗ ಅಂಗೈಯಲ್ಲಿ ಹಣ್ಣಿರುವಾಗ 
          ಕಣ್ಣಿನ ಮುಂದೆ ಹೆಣ್ಣಿರುವಾಗ ಅಂಗೈಯಲ್ಲಿ ಹಣ್ಣಿರುವಾಗ 
          ಏನೂ ಮಾಡದೀ ಕಣ್ಣು ಕಣ್ಣು ಬಿಡುತ್ತಿರೇ ಏನು ಮಾಡಲೀ 
          ನಾನು ಏನೂ ಮಾಡಲೀ ನಾನು ಏನು ಮಾಡಲೀ 
ಗಂಡು : ನಾನೇನ ಮಾಡಲೀ       ಹೆಣ್ಣು: ನಾನೇನ ಮಾಡಲೀ 

ಹೆಣ್ಣು : ಸಂಜೆ ಗಾಳಿ ಬೀಸಿರಲೂ  ಮೈಯ ಮಿಂಚು ತುಂಬಿರಲೂ 
          ಚೆಂಡಿಹೂವಿನಂತೆ ಹೆಣ್ಣು ಮೇಲೆ ಮೇಲೆ ಬೀಳಲೂ 
          ಸಂಜೆ ಗಾಳಿ ಬೀಸಿರಲೂ  ಮೈಯ ಮಿಂಚು ತುಂಬಿರಲೂ 
          ಚೆಂಡಿಹೂವಿನಂತೆ ಹೆಣ್ಣು ಮೇಲೆ ಮೇಲೆ ಬೀಳಲೂ 
          ಕದಲದೇ ಬೆದರದೇ ನಿಂತರೇ ಅವನ 
          ಏನೂ ಮಾಡಲೀ ನಾನು ಏನು ಮಾಡಲೀ 
          ನಾನು ಏನು ಮಾಡಲೀ ನಾನು ಏನು ಮಾಡಲೀ 
ಗಂಡು : ಹೋ.. ಹೋ ... ಹಗಲೆಲ್ಲ ಕೆಲಸ ಮಾಡು  
ಹೆಣ್ಣು : ಹ್ಹಹ್ಹ ಅದೆಲ್ಲ ನೀನೇ ಹೇಳಿ ಕೊಡು 
ಹೆಣ್ಣು : ಒಳ್ಳೇ ಸೀರೇ ಧರಿಸಿರಲೂ ಮಲ್ಲೆ ಹೂವೂ ಮುಡಿದಿರಲೂ 
          ಕನ್ನಡಿ ಮುಂದೇ ನಿಂತಿರಲೂ ಯಾರಿಗಾಗಿ ಅಂದವೆನಿಸಿ.. ಹೂಂ (ಹುಂ ಹೂಂ )
          ಒಳ್ಳೇ ಸೀರೇ ಧರಿಸಿರಲೂ ಮಲ್ಲೆ ಹೂವೂ ಮುಡಿದಿರಲೂ 
          ಕನ್ನಡಿ ಮುಂದೇ ನಿಂತಿರಲೂ ಯಾರಿಗಾಗಿ ಅಂದವೆನಿಸಿ.. 
          ಆಸೆಯೂ ಬತ್ತಿ ನಿರಾಸೆಯೂ ಬರಲೂ 
          ಏನೂ ಮಾಡಲೀ ನಾನು ಏನು ಮಾಡಲೀ 
          ನಾನು ಏನು ಮಾಡಲೀ ನಾನು ಏನು ಮಾಡಲೀ 
          ನಾನು ಏನು ಮಾಡಲೀ  ಏನು ಮಾಡಲೀ 
ಗಂಡು :  ದೊಡ್ಡವರಿಗೇ ಹೇಳಿ ಮದುವೇ ಮಾಡಿಕೋ 
ಹೆಣ್ಣು : ಅಯ್ಯೋ.. ಮಂಕೇ ಮಂಕೇ ..  
          ಕಣ್ಣಿನ ಮುಂದೆ ಹೆಣ್ಣಿರುವಾಗ ಅಂಗೈಯಲ್ಲಿ ಹಣ್ಣಿರುವಾಗ 
          ಏನೂ ಮಾಡದೀ ಕಣ್ಣು ಕಣ್ಣು ಬಿಡುತ್ತಿರೇ ಏನು ಮಾಡಲೀ 
          ನಾನು ಏನೂ ಮಾಡಲೀ ನಾನು ಏನು ಮಾಡಲೀ 
ಗಂಡು : ಕಣ್ಣಿನ ಮುಂದೆ ಹೆಣ್ಣಿರುವಾಗ ಅಂಗೈಯಲ್ಲಿ ಹಣ್ಣಿರುವಾಗ 
           ಕಣ್ಣಿನ ಮುಂದೆ ಹೆಣ್ಣಿರುವಾಗ ಅಂಗೈಯಲ್ಲಿ ಹಣ್ಣಿರುವಾಗ 
           ಏನೂ ಮಾಡಲು ತೋಚದೇ ಇರಲೂ ಏನು ಮಾಡಲೀ 
          ನಾನು ಏನು ಮಾಡಲೀ ನಾನು ಏನು ಮಾಡಲೀ 
          ನಾನು ಏನು ಮಾಡಲೀ  ಏನು ಮಾಡಲೀ 
--------------------------------------------------------------------------------------------------------------------------

ಗಂಡ ಹೆಂಡತಿ (1977)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಎಸ್.ಪಿ.ಬಿ.,

ಅಹ್ಹ.. ಬೊಂಬೆಗಳಾರೂ  ಅಲ್ಲ ಆಡಿಸುವಾತನು ಇಲ್ಲ
ಬೊಂಬೆಗಳಾರೂ  ಅಲ್ಲ ಆಡಿಸುವಾತನು ಇಲ್ಲ 
ನಮ್ಮ ಬಾಳಿಗೇ ನಾವೇ ಶಿಲ್ಪಿಗಳೂ ಕಾಣದ ಕೈಯೇ ನಲ್ಲ
ಕಾಣದ ಕೈಯೇ ನಲ್ಲ 

ನಿನ್ನಂತೇ ನಡೆದಾಗ ನೀನೇ ಕಾರಣ ಏನುವೇ ಅಹ್ಹ.. 
ಬೇರೇನು ಆದಾಗ ಆ ವಿಧಿಯನು ಜರಿವೇ 
ನನ್ನವರೆಂದೂ ಜನರ ನೀನೇ ಸೇರಿಸಿಕೊಳ್ಳುವೇ 
ಸ್ವಾರ್ಥವೂ ಮುಂದಾದಾಗ ಸಂಬಂಧವನೇ ಮುರಿವೇ 
ಅಹ್ಹ.. ಬೊಂಬೆಗಳಾರೂ  ಅಲ್ಲ ಆಡಿಸುವಾತನು ಇಲ್ಲ 
ನಮ್ಮ ಬಾಳಿಗೇ ನಾವೇ ಶಿಲ್ಪಿಗಳೂ ಕಾಣದ ಕೈಯೇ ನಲ್ಲ
ಕಾಣದ ಕೈಯೇ ನಲ್ಲ 

ಕರ್ಮವ ನಂಬಿದ ಜನರೂ ಕೇಡನು ಬಗೆಯುವರೇನೋ 
ಮಮತೆಯ ಕೊಲ್ಲುವರೇನೂ ಗರ್ವದಿ ಮೆರೆಯುವರೇನೋ 
ಬೆಂಕಿಯು ಹಿಡಿದರೇ ಕೈಯಲಿ ಸುಡದೇ ಹೋಗುವುದೇನೋ 
ಅಯ್ಯೋ ಕರ್ಮವೂ ಎನ್ನಲೂ ಬಿಸಿಯೂ ಆರುವುದೇನೋ 
ಬೊಂಬೆಗಳಾರೂ  ಅಲ್ಲ ಅಹ್ಹ.. ಆಡಿಸುವಾತನು ಇಲ್ಲ 
ನಮ್ಮ ಬಾಳಿಗೇ ನಾವೇ ಶಿಲ್ಪಿಗಳೂ ಹ್ಹ ಕಾಣದ ಕೈಯೇ ನಲ್ಲ
ಕಾಣದ ಕೈಯೇ ನಲ್ಲ 
 -------------------------------------------------------------------------------------------------------------------------

No comments:

Post a Comment