262. ನನ್ನಾಸೆಯ ಹೂವೆ (1990)

ನನ್ನಾಸೆಯ ಹೂವೇ ಚಲನ ಚಿತ್ರದ ಹಾಡುಗಳು 
  1. ಹೆಣ್ಣು ಚೆಂದ ಹೆಣ್ಣು ಚೆಂದ ಹೆಣ್ಣಿನಿವಳ ಕಣ್ಣು ಚೆಂದ
  2. ಹೊಂಬಾಳೆ ಹೊಂಬಾಳೆ ಪ್ರೀತಿಯ ಹೊಂಬಾಳೆ
  3. ಹೂವೇ ನನ್ನಾಸೆಯಾ ಹೂವೇ 
  4. ಜಾಕಾಯಿ ಜಾಪತ್ರೇ ಜಾಣೆ ಬಲ್ ಜಾಣೆ ನೀನು 
  5. ಏನಾಗೋಯ್ತಮ್ಮಾ ಏನಾಗೋಯ್ತಮ್ಮಾ ಬೆಳ್ಳಿ ಬೆಡಗಿಗೆ ಏನಾಗೋಯ್ತಮ್ಮಾ 
  6. ಲಕ್ಷ್ಮಿ ಲಕ್ಷ್ಮಿ ಟಚ್ ಮೀ ಟಚ್ ಮೀ
ನನ್ನಾಸೆಯ ಹೂವೆ (1990) - ಹೆಣ್ಣು ಚೆಂದ ಹೆಣ್ಣು ಚೆಂದ
ಸಂಗೀತ / ಸಾಹಿತ್ಯ: ಹಂಸಲೇಖ  ಗಾಯನ : ರಾಜೇಶ್ ಕೃಷ್ಣನ್, ಲತಾ ಹಂಸಲೇಖ  

ಗಂಡು : ಹೆಣ್ಣು ಚೆಂದ ಹೆಣ್ಣು ಚೆಂದ ಹೆಣ್ಣಿನಿವಳ ಕಣ್ಣು ಚೆಂದ
           ಈ ಚೆಂದ ಯಾತರಿಂದ? ಕಣ್ ಕಪ್ಪಿನ ಮೆರುಗಿಂದ
           ಆ ಕಣ್ಣಿನ ನೋಟದ ಮಾತಿಂದ ಆ ಮಾತಿನ ಒಳಗಣ ಒಲವಿಂದ
          ಆ ಜೋಕಿನಿಂದ.. ನಾಜೂಕಿನಿಂದ|
         ಹೆಣ್ಣು ಚೆಂದ ಹೆಣ್ಣು ಚೆಂದ ಹೆಣ್ಣಿನಿವಳ ಕಣ್ಣು ಚೆಂದ
         ಈ ಚೆಂದ ಯಾತರಿಂದ? ಕಣ್ ಕಪ್ಪಿನ ಮೆರುಗಿಂದ

ಗಂಡು : ಬಳಸಿರುವ ಪದಗಳಲೆ ಬರೆದರೆ ಹೆಣ್ಣಿಗೆ ಮೆರುಗಿಲ್ಲ
           ಹೊಸ ಪದವ ಅರಸಿದರೆ ಅಂದವು ಮುಟ್ಟದ ಪದವಿಲ್ಲ
           ಮಲ್ಲಿಗೆ ಎಂದರೆ ಮಯೂರಿ ಆಗುವಳು ಬಳ್ಳಿಯೇ ಎಂದರೆ ಕೋಗಿಲೆ ಆಗುವಳು
           ಎಲ್ಲಾ ಇವಳ ನಗುವಿಂದ ಆ ನಗುವಿನ ಬೆಳ್ಳಿ ಬೆಳಕಿಂದ
           ಆ ಬೆಳಕಿನ ಒಳಗಣ ಒಲವಿಂದ  ಆ ಜೋಕಿನಿಂದ ನಾಜೂಕಿನಿಂದ
          ಹೆಣ್ಣು ಚೆಂದ ಹೆಣ್ಣು ಚೆಂದ ಈ ಚೆಂದ ಯಾತರಿಂದ ವಾರೆ ನೋಟದ ಮೆರುಗಿಂದ

ಗಂಡು : ಚೆಲುವು ಇದೆ ಸೆಳೆತ ಇದೆ ಹೆಣ್ಣಭಿಮಾನದ ಹೆಮ್ಮೆಯಿದೆ
            ಹರಯವಿದೆ ಪ್ರಣಯವಿದೆ ಸೂರ್ಯನೆ ಬಿಡಿಸುವ ದಳಗಳಿವೆ
           ತಾವರೆ ಎಂದರೆ ನೀರಾಗುವಳು ಋತುವೇ ಎಂದರೆ ಹಬ್ಬಗಳಾಗುವಳು
           ಎಲ್ಲಾ ಇವಳೇ ನೆನೆದಂತೆ ಆ ಮನಸಿನ ಸಾವಿರ ರಂಗಂತೆ
           ಆ ರಂಗಿನ ಒಳಗಣ ಒಲವಂತೆ ಆ ಜೋಕಿನಂತೆ..ನಾಜೂಕಿನಂತೆ
           ಹೆಣ್ಣು ಚೆಂದ ಹೆಣ್ಣು ಚೆಂದ ಹೆಣ್ಣಿನಿವಳ ಕಣ್ಣು ಚೆಂದ
           ಈ ಚಂದ ಯಾತರಿಂದ ಪ್ರೇಮ ನೋಟದ ಮೆರುಗಿಂದ
-------------------------------------------------------------------------------------------------------------------------

ನನ್ನಾಸೆಯ ಹೂವೇ (1990) - ಹೊಂಬಾಳೆ ಹೊಂಬಾಳೆ
ಸಂಗೀತ / ಸಾಹಿತ್ಯ: ಹಂಸಲೇಖ   ಗಾಯನ: ರಾಜೇಶ್ ಕೃಷ್ಣನ್ 

ಗಂಡು : ಹೊಂಬಾಳೆ ಹೊಂಬಾಳೆ ಪ್ರೀತಿಯ ಹೊಂಬಾಳೆ
            ನನ್ನಾಸೆಯ ಹೂವೇ ಕೇಳೇ  ನೀನಿದ್ದರೆ ಬಾಳೆ ಹೊಂಬಾಳೆ ಓಹೋಹೊಹೋ....
            ಹೊಂಬಾಳೆ ಹೊಂಬಾಳೆ ಪ್ರೀತಿಯ ಹೊಂಬಾಳೆ
            ನನ್ನಾಸೆಯ ಹೂವೇ ಕೇಳೇ  ನೀನಿದ್ದರೆ ಬಾಳೆ ಹೊಂಬಾಳೆ ಓಹೋಹೊಹೋ....

ಗಂಡು : ಕಡಲಂಥ ಕಣ್ಣೋಳೆ  ಮುಗಿಲಂಥ ಮನದೋಳೆ
           ನಿನ್ನಂಥ ಚೆಲುವೆ ಯಾರೆ?  ಹೃದಯಕ್ಕೆ ಬೆಳದಿಂಗಳ ತಾರೆ
           ಸೌಂದರ್ಯ ಲಹರೀಲಿ  ಮಿಂದೆದ್ದು ಬಂದೋಳೆ
          ಪ್ರೀತಿಯ ಪರಮಾನ್ನ ಉಂಡೆದ್ದು ಬಂದೋಳೆ
          ನಿನಗಿಂತ ಗೆಳತಿ ಯಾರೆ?  ಪ್ರೀತಿಯ ಗೆಳೆತನ ತಾರೆ
          ಹೊಂಬಾಳೆ ಹೊಂಬಾಳೆ ಪ್ರೀತಿಯ ಹೊಂಬಾಳೆ
          ನನ್ನಾಸೆಯ ಹೂವೇ ಕೇಳೇ  ನೀನಿದ್ದರೆ ಬಾಳೆ ಹೊಂಬಾಳೆ ಓಹೋಹೊಹೋ....

ಗಂಡು : ಕಂಗಳ ಬಾಗಿಲು ಹೃದಯಕ್ಕೆ ಕಾವಲು
           ಕಾವಲು ಮುರಿದ ನೀರೆ  ಕಣ್ಣಿಂದ ಕರುಣೆಯ ತೋರೆ
           ಮನಸೊಂದು ಮಗುವಂತೆ  ಬಯಸಿದ್ದು ಬಿಡದಂತೆ
          ಅಳಿಸಬೇಡ ಮಗುವ ಬಾರೆ  ಪ್ರೀತಿಯ ಉಡುಗೊರೆ ತಾರೆ
          ಹೊಂಬಾಳೆ ಹೊಂಬಾಳೆ ಪ್ರೀತಿಯ ಹೊಂಬಾಳೆ
          ನನ್ನಾಸೆಯ ಹೂವೇ ಕೇಳೇ  ನೀನಿದ್ದರೆ ಬಾಳೆ ಹೊಂಬಾಳೆ ಓಹೋಹೊಹೋ....
--------------------------------------------------------------------------------------------------------------------------

ನನ್ನಾಸೆಯ ಹೂವೇ (1990) - ಹೂವೇ ನನ್ನಾಸೆಯಾ ಹೂವೇ
ಸಂಗೀತ / ಸಾಹಿತ್ಯ: ಹಂಸಲೇಖ ಗಾಯನ: ರಾಜೇಶ್ ಕೃಷ್ಣನ್, ಚಿತ್ರಾ

ಗಂಡು : ಹೂವೇ ... ನನ್ನಾಸೆಯಾ ಹೂವೇ ..
ಹೆಣ್ಣು : ಆಸೆಗೂ ಸಾಗರದಲೆಗೂ ಹೋಲುವುದೇಕೋ ಗೆಳೆಯಾ
ಗಂಡು : ಹೂವೇ ... ನನ್ನಾಸೆಯಾ ಹೂವೇ ..
ಹೆಣ್ಣು : ನೀನೇ ನನ್ನ ನೇಸರ ಅನಿಸುವುದೇಕೋ ಗೆಳೆಯ 
ಗಂಡು : ಹೇ.. ಸಾವಿರ ಪ್ರಶ್ನೆ ಕೇಳು ಉತ್ತರ ಮಾತ್ರ ಒಂದೇ... ಆಆಆ... 
ಹೆಣ್ಣು : ಈ ಸಾಗರ ಆ ನೇಸರ ಹೇಗಾಯ್ತು ಗೆಳೆಯಾ .. 
          ಹೇಗಾಯ್ತು ಗೆಳೆಯಾ ಆ ಅಂಬರ ಆ ಚೆಂದಿರ  
          ಹೇಗಾಯ್ತು ಗೆಳೆಯಾ... ಹೇಗಾಯ್ತು ಗೆಳೆಯಾ... 
ಗಂಡು : ಕೇಳೇ ಗೆಳತೀ .. ಇದು ಪ್ರೀತಿಯ ಸೃಷ್ಟಿ ಈ ಸಾಗರ ಸಂಸಾಗರ ನೀನಂತೇ ಚೆಲುವೇ 
            ನೀನಂತೇ ಚೆಲುವೇ .. ನೀನಿದ್ದರೇ ನಾನಲ್ಲವೇ ನನ್ನಾಸೆಯಾ ಹೂವೇ.. ನನ್ನಾಸೆಯಾ ಹೂವೇ 

ಗಂಡು : ಜೀವ ದೈವದ ಸಂವಾದ ಈ ಪ್ರೇಮಿಗಳ ಮಾತು 
            ಜೀವ ದೈವದ ಅಪ್ಪುಗೆ ಈ ಪ್ರೇಮಿಗಳ ಮುತ್ತು ಮುಚ್ಚುಮರೆ ಕಾಲ ಬಣ್ಣಗಳ ತೆರೆ
            ಈ ಮಾತುಗಳಲಿಲ್ಲ ಈ ಅಪ್ಪುಗೆಯಲ್ಲಿಲ್ಲ.. ಆಆಆ
ಹೆಣ್ಣು : ನಾನು ನೆನೆದ ಕೂಡಲೇ ನೀನು ಬರುವೇ ಇದು ಹೇಗೆ
ಗಂಡು : ಬೆಳಕು ಹರಿದ ಕೂಡಲೇ ಹೂವೂ ಅರಳೋ ಹಾಗೆ
ಹೆಣ್ಣು : ನೀನು ಇದ್ದರೇ ಏನೂ ಬೇಡ ಅದಕೆ ಈ ಅನಿಸಿಕೆ
          ಈ ಹೂವುಗಳೂ ಮಳೆ ಬಿಲ್ಲುಗಳು ಏಕಾಯ್ತು ಗೆಳೆಯ... ಏಕಾಯ್ತು ಗೆಳೆಯ
          ಈ  ಜೀವನ ಸಹ ಗಾಯನ ಏಕಾಯ್ತು ಗೆಳೆಯ .... ಏಕಾಯ್ತು ಗೆಳೆಯ
ಗಂಡು : ಕೇಳೇ ಗೆಳತೀ ಇದು ಪ್ರೀತಿಯ ಸೃಷ್ಟಿ ಈ ಜೀವನ ಸಹಗಾಯನ ನೀನಂತೇ ಚೆಲುವೇ... ನೀನಂತೇ ಚೆಲುವೇ...
            ನೀನಿದ್ದರೇ ನಾನಲ್ಲವೇ ನನ್ನಾಸೆಯಾ ಹೂವೇ ...  ನನ್ನಾಸೆಯಾ ಹೂವೇ ...

ಹೆಣ್ಣು : ಪ್ರೀತಿಯೇ ದೇವರು ಅದರ ದೂಷಣೆ ಏಕಿದೆಯೋ ಪ್ರೀತಿ ಆಳೋ ಜಗದಲ್ಲಿ ಈ ದ್ವೇಷ ಏಕಿದೆಯೋ
ಗಂಡು : ತಾಯಿ ಒಲವಿಗೆ ತಾಯಿ ಎದೆಯ ಹಾಲಿಗೆ ಎರವಾದ ಮಗುವಂತೆ ಈ ದ್ವೇಷದ ಕಾಲಸಂತೆ... ಆಆಆ...
ಹೆಣ್ಣು : ಸಾವಿರ ಕಾವಲು ಬಾಳಿಗೆ ಹೇಗೆ ಪ್ರೀತಿಯ ಬೆಸುಗೆ
ಗಂಡು : ಕವಲುಗಳಾದರು ಕಡೆಗೆ ಕಡಲಾಗೋ ನದಿಯ ಹಾಗೆ
ಹೆಣ್ಣು : ಜನ್ಮ ಕೊಟ್ಟವರನ್ನು ನೋಯಿಸಿ ಪ್ರೀತ್ಸೋದ್ ತಪ್ಪು ತಾನೇ
ಗಂಡು : ಪ್ರೀತಿಯ ಮರು ಹುಟ್ಟಲ್ಲಿ ನೋವು ಸಹಜ ತಾನೇ
ಹೆಣ್ಣು : ಈ ರಾಗವು ಅನುರಾಗವು ಏಕಿವೆ ಗೆಳೆಯ ಕೇಳಿದೆ ಹೃದಯ
          ಈ ಕಂಪನ ಈ ಸ್ಪಂದನ ಏಕಿದೆ ಗೆಳೆಯ ತಾಳದಿ ಹೃದಯ
ಗಂಡು : ಕೇಳೇ ಗೆಳತೀ ಅದು ಪ್ರೀತಿಯ ಗುಟ್ಟು ಈ ರಾಗವು ಅನುರಾಗವು ನೀನಂತೆ ಚೆಲುವೇ ...ನೀನಂತೆ ಚೆಲುವೇ ...
            ನೀನಿದ್ದರೇ ನಾನಲ್ಲವೇ ನನ್ನಾಸೆಯಾ ಹೂವೇ... ನನ್ನಾಸೆಯಾ ಹೂವೇ
 -------------------------------------------------------------------------------------------------------------------------

ನನ್ನಾಸೆಯ ಹೂವೇ (1990) - ಜಾಕಾಯಿ ಜಾಪತ್ರೆ ಜಾಣೆ ನನ್ ಜಾಣೆ ನೀನು
ಸಂಗೀತ / ಸಾಹಿತ್ಯ: ಹಂಸಲೇಖ ಗಾಯನ: ರಾಜೇಶ್ ಕೃಷ್ಣನ್, ಚಿತ್ರಾ

ಗಂಡು : ಜಾಕಾಯಿ ಜಾಪತ್ರೆ ಜಾಕಾಯಿ ಜಾಪತ್ರೆ ಜಾಕಾಯಿ ಜಾಪತ್ರೆ ಜಾಣೆ ಬಲ್ ಜಾಣೆ ನೀನು
            ಜಾಜಿ ಮಲ್ಲೆ ಯಾಕೆ ಮೂಡಿದೆ ಸೂಜಿಗಲ್ಲಂತ್ಯಾಕೆ ಸೆಳೆದೆ... ಸೂಜಿಗಲ್ಲಂತ್ಯಾಕೆ ಸೆಳೆದೆ
            ಏವ್ವೋ ... ಏವ್ವೋ ... ಲವ್ವೋ ... ಲವ್ವೋ ... ಲವ್ವೋ ... ಲವ್ವೋ ...
ಹೆಣ್ಣು : ಬನವಾಸಿ ಬಿಲ್ಪತ್ರೆ...  ಬನವಾಸಿ ಬಿಲ್ಪತ್ರೆ ... ಬನವಾಸಿ ಬಿಲ್ಪತ್ರೆ ಬಹದ್ದೂರ ಬಲ್ ಬಹದ್ದೂರ
          ನೀನು ಬಯಲು ಸೀಮೆ ಯಾಕೆ ತೊರೆದೆ ಕಡಲ ತೀರ ಯಾಕೆ ಹಿಡಿದೇ
            ಏವ್ವೋ ... ಏವ್ವೋ ... ಲವ್ವೋ ... ಲವ್ವೋ ... ಲವ್ವೋ ... ಲವ್ವೋ ...

ಹೆಣ್ಣು : ಹುಣ್ಣಿಮೆಯ ಬೆಣ್ಣೆ ಮುದ್ದೆ ಮೆದ್ದು ಬಂದಂತಿರುವೆ ಜಾಣ ನನ್ನ ನೋಡಿ ಎಂಥ ಹಸಿವೆಯೋ
ಗಂಡು : ಗೂಡು ತುಂಬಿ ಜಾರುತಿರೋ ಕಾಡು ಜೇನಂತಿರುವೇ ಜಾಣೆ ಬೆಣ್ಣೆ ಜೊತೆ ಜೇನು ಬೇಡವೇ
ಹೆಣ್ಣು : ಕುಡಿಸುವೆ ಬಾ ನಿನಗೆ ನಿನಗೆ ಹಕ್ಕಿ ಬಾನಾ
ಗಂಡು : ಕುಣಿಸುವೆ ಬಾ ನಿನಗೆ ಮನದ ಮೌನ
ಹೆಣ್ಣು : ನಿನ್ನಾ ಪ್ರೀತಿ ಮಳೆ ನನ್ನ ನೆನೆಸುತಿದೆ
ಗಂಡು : ನಿನ್ನ ಪ್ರೀತಿ ಧಗೆ ನನ್ನ ಕುದಿಸುತಿದೆ
ಹೆಣ್ಣು : ಒಂದು ಮಾತಂದ್ರೆ ನೂರಂತಿಯಲ್ಲೋ
ಗಂಡು : ಜಾಕಾಯಿ ಜಾಪತ್ರೆ ಜಾಕಾಯಿ ಜಾಪತ್ರೆ ಜಾಕಾಯಿ ಜಾಪತ್ರೆ ಜಾಣೆ ಬಲ್ ಜಾಣೆ ನೀನು
ಹೆಣ್ಣು : ಬನವಾಸಿ ಬಿಲ್ಪತ್ರೆ...  ಬನವಾಸಿ ಬಿಲ್ಪತ್ರೆ ... ಬನವಾಸಿ ಬಿಲ್ಪತ್ರೆ ಬಹದ್ದೂರ ಬಲ್ ಬಹದ್ದೂರ

ಗಂಡು : ಹಾರಿ ಬಂತೆ ನಿನ್ನ ಹತ್ರ ರೆಕ್ಕೆ ಬಿಚ್ಚಿ ನನ್ನ ಪತ್ರ ಓದಿದರೆ ಹೇಳು ಉತ್ತರ 
ಹೆಣ್ಣು : ಓದಿ ನಿನ್ನ ಚರಣವನ್ನ ಆಗಿ ಹೋಯ್ತು ಹರಣವೀನ್ನ ಹೃದಯ ಗೆಲ್ಲೋ ನನ್ನ ಹತ್ತಿರ 
ಗಂಡು : ಕನಸುಗಳಾ ಜೊತೆಗೆ ನಮ್ಮ ಲಗ್ನ 
ಹೆಣ್ಣು : ತಾರೆಗಳ ಜೊತೆಗೆ ನಮ್ಮ ದಿಬ್ಬಣ 
ಗಂಡು : ನನ್ನ ಎದೆಯಲಿರು ಉಸಿರಾಡುತಿರೂ 
ಹೆಣ್ಣು : ನನ್ನ ಬದುಕಲಿರು ದಿನ ಬೆಳಗುತಿರು 
ಗಂಡು : ನನ್ನ ಬಾಳೆಲ್ಲಾ ನೀನೇ ತಾನೇ 
ಗಂಡು : ಜಾಕಾಯಿ ಜಾಪತ್ರೆ ಜಾಕಾಯಿ ಜಾಪತ್ರೆ ಜಾಕಾಯಿ ಜಾಪತ್ರೆ ಜಾಣೆ ಬಲ್ ಜಾಣೆ ನೀನು
            ಜಾಜಿ ಮಲ್ಲೆ ಯಾಕೆ ಮೂಡಿದೆ ಸೂಜಿಗಲ್ಲಂತ್ಯಾಕೆ ಸೆಳೆದೆ... ಸೂಜಿಗಲ್ಲಂತ್ಯಾಕೆ ಸೆಳೆದೆ
ಹೆಣ್ಣು : ಬನವಾಸಿ ಬಿಲ್ಪತ್ರೆ...  ಬನವಾಸಿ ಬಿಲ್ಪತ್ರೆ ... ಬನವಾಸಿ ಬಿಲ್ಪತ್ರೆ ಬಹದ್ದೂರ ಬಲ್ ಬಹದ್ದೂರ
          ನೀನು ಬಯಲು ಸೀಮೆ ಯಾಕೆ ತೊರೆದೆ ಕಡಲ ತೀರ ಯಾಕೆ ಹಿಡಿದೇ
            ಏವ್ವೋ ... ಏವ್ವೋ ... ಲವ್ವೋ ... ಲವ್ವೋ ... ಲವ್ವೋ ... ಲವ್ವೋ ...
-------------------------------------------------------------------------------------------------------------------------

ನನ್ನಾಸೆಯ ಹೂವೇ (1990) - ಏನಾಗೋಯ್ತಮ್ಮಾ ಏನಾಗೋಯ್ತಮ್ಮಾ ಬೆಳ್ಳಿ ಬೆಡಗಿಗೆ ಏನಾಗೋಯ್ತಮ್ಮಾ 
ಸಂಗೀತ / ಸಾಹಿತ್ಯ: ಹಂಸಲೇಖ ಗಾಯನ: ರಾಜೇಶ್ ಕೃಷ್ಣನ್, ಚಿತ್ರಾ

ಹೆಣ್ಣು : ಏನಾಗೋಯ್ತಮ್ಮಾ ... ಏನಾಗೋಯ್ತಮ್ಮಾ  ಬೆಳ್ಳಿ ಬೆಡಗಿಗೆ ಏನಾಗೋಯ್ತಮ್ಮಾ
          ಸೂರ್ಯ ಮುಟ್ಟಿದ ಭೂಮಿ ತಾಯಂತೇ ಕೆಂಪು ಕನ್ಯಾಕುವರಿ ನಿನ್ನೊಳಗೇನಾಗೋಯ್ತಮ್ಮಾ
          ಕಳುವಾಗೋಯ್ತಮ್ಮಾ ...  ಕಳುವಾಗೋಯ್ತಮ್ಮಾ ...   ಹೃದಯಾನೇ ಕಳುವಾಗೋಯ್ತಮ್ಮಾ ...
          ಕಾವಲಲ್ಲಿದ್ದ ಜಂಭ ಕೊಚ್ಚಿದ ಹರೆಯ ತೆರೆಯ ಮರೆಯ ಮನಸು ಬಯಲಾಗೋಯ್ತಮ್ಮಾ
          ಏನಾಗೋಯ್ತಮ್ಮಾ ... ಏನಾಗೋಯ್ತಮ್ಮಾ  ಬೆಳ್ಳಿ ಬೆಡಗಿಗೆ ಏನಾಗೋಯ್ತಮ್ಮಾ

ಹೆಣ್ಣು : ಕನಸಲೂ ನೆನಸಿರಲಿಲ್ಲ ನೆನೆಯದೇ ಕನಸೇ ಇಲ್ಲ ನಾನಂತು ನಂಬೋದಿಲ್ಲ ನಂಬುವುದೇ ಬೇಕಾಗಿಲ್ಲ
          ಸ್ನೇಹದಾ ಸಂಗೀತನಾ ಪ್ರೀತಿಯ ರಾಗ ಅನ್ನದಿರು  ಅಪಸ್ವರದ ಆಲಾಪನಾ ಹಾಡದಿರು ನೀ ನನ್ನೆದುರು
ಗಂಡು : ಓಓಓಓಓಓಓಓ ... ಓಓಓಓಓಓಓ ... ಓಓಓಓಓಓಓ
ಹೆಣ್ಣು : ಏನಾಗೋಯ್ತಮ್ಮಾ ... ಏನಾಗೋಯ್ತಮ್ಮಾ  ಬೆಳ್ಳಿ ಬೆಡಗಿಗೆ ಏನಾಗೋಯ್ತಮ್ಮಾ

ಗಂಡು : ಕಣ್ಣಲ್ಲಿ ಚೈತ್ರದ ಚೆಲುವೇ ಅಲ್ಲೊಂದು ಚಿಮಿಣಿಯ ಕುಲುಮೆ ತನುವೆಲ್ಲ ಪ್ರೀತಿಯ ಸಂತೆ 
            ಛೀ ಛೀ ಇದು ಅಂತೇ ಕಂತೆ ಪ್ರೇಮ ಜೊತೆ ಬಂದ ಹೆಣ್ಣಾ ಕಣ್ಣಾ ರಪ್ಪೆ ಮುಚ್ಚುವುದೇ 
           ಸೋತಿರೋ ಹರೆಯ ನನ್ನ ಹೃದಯ ನೀನು ಚುಚ್ಚುವುದೇ 
ಹೆಣ್ಣು : ಓಓಓಓಓಓಓಓ ... ಓಓಓಓಓಓಓ ... ಓಓಓಓಓಓಓ
          ಏನಾಗೋಯ್ತಮ್ಮಾ ... ಏನಾಗೋಯ್ತಮ್ಮಾ  ಬೆಳ್ಳಿ ಬೆಡಗಿಗೆ ಏನಾಗೋಯ್ತಮ್ಮಾ
          ಸೂರ್ಯ ಮುಟ್ಟಿದ ಭೂಮಿ ತಾಯಂತೇ ಕೆಂಪು ಕನ್ಯಾಕುವರಿ ನಿನ್ನೊಳಗೇನಾಗೋಯ್ತಮ್ಮಾ
          ಕಳುವಾಗೋಯ್ತಮ್ಮಾ ...  ಕಳುವಾಗೋಯ್ತಮ್ಮಾ ...   ಹೃದಯಾನೇ ಕಳುವಾಗೋಯ್ತಮ್ಮಾ ...
          ಕಾವಲಲ್ಲಿದ್ದ ಜಂಭ ಕೊಚ್ಚಿದ ಹರೆಯ ತೆರೆಯ ಮರೆಯ ಮನಸು ಬಯಲಾಗೋಯ್ತಮ್ಮಾ
          ಏನಾಗೋಯ್ತಮ್ಮಾ ... ಏನಾಗೋಯ್ತಮ್ಮಾ  ಬೆಳ್ಳಿ ಬೆಡಗಿಗೆ ಏನಾಗೋಯ್ತಮ್ಮಾ
--------------------------------------------------------------------------------------------------------------------------

ನನ್ನಾಸೆಯ ಹೂವೇ (1990) - ಲಕ್ಷ್ಮಿ ಲಕ್ಷ್ಮಿ ಟಚ್ ಮೀ ಟಚ್ ಮೀ
ಸಂಗೀತ / ಸಾಹಿತ್ಯ: ಹಂಸಲೇಖ ಗಾಯನ: ರಾಜೇಶ್ ಕೃಷ್ಣನ್, ಚಿತ್ರಾ

ಗಂಡು : ಮಹಾಲಕ್ಷ್ಮಿ ನಮಸ್ತುಭ್ಯಂ... ನಮಸ್ತುಭ್ಯಂ
           ಸುರೇಶ್ವರಿ ಕೃತ ಯುಗದಲ್ಲಿ ತ್ರೇತ್ರಾಯುಗದಲ್ಲಿ ಇಷ್ಟ ಲಕ್ಷ್ಮಿ ನಮಸ್ತುಭ್ಯಂ.. ನಮಸ್ತುಭ್ಯಂ
           ದಯಾನಿಧೇ ಅಷ್ಟ ಲಕ್ಷ್ಮಿ ನಮಸ್ತುಭ್ಯಂ.. ನಮಸ್ತುಭ್ಯಂ
          ಜಯಪ್ರದೆ ದ್ವಾಪರ ಯುಗದಲ್ಲಿ ಕಲಿಯುಗದಲ್ಲಿ ವಿಶ್ವಲಕ್ಷ್ಮಿ ನಮಸ್ತುಭ್ಯಂ.. ನಮಸ್ತುಭ್ಯಂ ಜಗನ್ಮಾತ್ರಂ
          ಕಾನ್ವೆಂಟ್ ಯುಗದಲ್ಲಿ..... 
          ಲಕ್ಷ್ಮಿ ಲಕ್ಷ್ಮಿ ಟಚ್ ಮೀ ಟಚ್ ಮೀ ಟಚ್ ಮೀ ಟಚ್ ಮೀ ಬ್ಲೆಸ್ ಮೀ ಬ್ಲೆಸ್ ಮೀ
          ಲಕ್ಷ್ಮಿ ಲಕ್ಷ್ಮಿ ಪ್ಲೀಸ್ ಟಚ್ ಮೀ ಟಚ್ ಮೀ ಟಚ್ ಮೀ ಟಚ್ ಮೀ ಪ್ಲೀಸ್ ಬ್ಲೆಸ್ ಮೀ ಬ್ಲೆಸ್ ಮೀ
          ಟಚ್ಚಾದ್ರೆ ಲಕ್ಕುಪತಿ ಬ್ಲೆಸ್ ಆದ್ರೇ ಸುಖಪತಿ ಮಿಸ್ ಆದ್ರೇ ತಿರುಪತಿ
          ಶ್ರೀ ಲಕ್ಷ್ಮಿ ವರಲಕ್ಷ್ಮಿ ಜಯಲಕ್ಷ್ಮಿ ಧನಲಕ್ಷ್ಮೀ
          ಲಕ್ಷ್ಮಿ ಲಕ್ಷ್ಮಿ ಟಚ್ ಮೀ ಟಚ್ ಮೀ ಟಚ್ ಮೀ ಟಚ್ ಮೀ ಬ್ಲೆಸ್ ಮೀ ಬ್ಲೆಸ್ ಮೀ
          ಲಕ್ಷ್ಮಿ ಲಕ್ಷ್ಮಿ ಪ್ಲೀಸ್ ಟಚ್ ಮೀ ಟಚ್ ಮೀ ಟಚ್ ಮೀ ಟಚ್ ಮೀ ಪ್ಲೀಸ್ ಬ್ಲೆಸ್ ಮೀ ಬ್ಲೆಸ್ ಮೀ

ಗಂಡು : ಆ ಆಹಾ ಆಹಾ ಆಹಾ ಕಮಲ ಸೀರೆ ಕಮಲ ಸೀರೆ ಜಗತ್ತಿನಲ್ಲಿ ಅದೇ ನಮ್ಮ ನಿನ್ನ ಗಲಾಟೆ 
           ವಾಟರ್ ಮೇ ಲೋಟಸ್ ಫ್ಲವರ್ ಇದೆ ಲೋಟಸ್ ಫ್ಲೋರನಲ್ಲಿ ನಿನ್ನ ಪ್ಲಾಟಿದೇ 
           ಲೋಟಸ್ ಪಿಲ್ಲರ್ ತುಂಬಾ ದುರ್ಬಲ ನಿನ್ನ ಮೈ ಎಂದೋ  ಚಂಚಲ 
           ಬಿಟ್ಟರೆ ಹರಿದು ಪೋಗುವೇ ಪಿಡಿದರೇ ಹರಿದು ನೀ ಬರುವೇ 
          ಭಕ್ತ ಬಂದವನೇ ಲುಕ್ ಆಟ್ ಮೀ ಲಕ್ಷ್ಮಿ ಸೇವೆ ಮಾಡ್ತಾನೇ ಕೈಕಾಲು ಅದುಮಿ 
          ಲುಕ್ಕೂ ಬೇಡೋಕೆ ನಿಂತಿವಿನೀ ಲಕ್ಷ್ಮಿ ನಿನ್ನ ಸುವರ್ಣ ರಶ್ಮಿಲಿ ಟಚ್ ಮೀ 
          ಲಕ್ಷ್ಮಿ ಲಕ್ಷ್ಮಿ ಟಚ್ ಮೀ ಟಚ್ ಮೀ ಟಚ್ ಮೀ ಟಚ್ ಮೀ ಬ್ಲೆಸ್ ಮೀ ಬ್ಲೆಸ್ ಮೀ
          ಲಕ್ಷ್ಮಿ ಲಕ್ಷ್ಮಿ ಪ್ಲೀಸ್ ಟಚ್ ಮೀ ಟಚ್ ಮೀ ಟಚ್ ಮೀ ಟಚ್ ಮೀ ಪ್ಲೀಸ್ ಬ್ಲೆಸ್ ಮೀ ಬ್ಲೆಸ್ ಮೀ

ಗಂಡು : ಶಾರದೆ ನೀನು ಪ್ರಸಾದ ಪ್ರಿಯೇ ದುರ್ಗೆ ನೀನು ಸಂಹಾರ ಪ್ರಿಯೇ 
            ಮನೆ ಮನೆ ಸುತ್ತೋ ಹ್ಯಾಬಿ ಇದ್ದರೂ ಲಕ್ಷ್ಮಿ ನೀನು ಬಂಧನ ಪ್ರಿಯೇ 
            ನಮಿಸುವುದು ನಮ್ಮ ಫ್ಯಾಮಿಲಿ ನೆಲೆಸಿರು ನಮ್ಮ ಹೋಮಲಿ 
           ಕಾಸಿದ್ರೆ ಕೈಲಾಸ ದೂರ ಅಂತ ಹಾಡ್ತೀವಿ ಪ್ರತಿ ಶುಕ್ರವಾರ 
ಹೆಣ್ಣು : ಕಾಸೊಂದಿದ್ರೆ ನಡಿಯೋದಿಲ್ಲಣ್ಣ ಅಂತ ಹೇಳೋಕು ಕಾಸಿರಬೇಕಣ್ಣ 
ಗಂಡು : ಲಕ್ಷ್ಮಿ ಲಕ್ಷ್ಮಿ ಟಚ್ ಮೀ ಟಚ್ ಮೀ ಟಚ್ ಮೀ ಟಚ್ ಮೀ ಬ್ಲೆಸ್ ಮೀ ಬ್ಲೆಸ್ ಮೀ
          ಲಕ್ಷ್ಮಿ ಲಕ್ಷ್ಮಿ ಪ್ಲೀಸ್ ಟಚ್ ಮೀ ಟಚ್ ಮೀ ಟಚ್ ಮೀ ಟಚ್ ಮೀ ಪ್ಲೀಸ್ ಬ್ಲೆಸ್ ಮೀ ಬ್ಲೆಸ್ ಮೀ
          ಟಚ್ಚಾದ್ರೆ ಲಕ್ಕುಪತಿ ಬ್ಲೆಸ್ ಆದ್ರೇ ಸುಖಪತಿ ಮಿಸ್ ಆದ್ರೇ ತಿರುಪತಿ
          ಶ್ರೀ ಲಕ್ಷ್ಮಿ ವರಲಕ್ಷ್ಮಿ ಜಯಲಕ್ಷ್ಮಿ ಧನಲಕ್ಷ್ಮೀ
          ಲಕ್ಷ್ಮಿ ಲಕ್ಷ್ಮಿ ಟಚ್ ಮೀ ಟಚ್ ಮೀ ಟಚ್ ಮೀ ಟಚ್ ಮೀ ಬ್ಲೆಸ್ ಮೀ ಬ್ಲೆಸ್ ಮೀ
          ಲಕ್ಷ್ಮಿ ಲಕ್ಷ್ಮಿ ಪ್ಲೀಸ್ ಟಚ್ ಮೀ ಟಚ್ ಮೀ ಟಚ್ ಮೀ ಟಚ್ ಮೀ ಪ್ಲೀಸ್ ಬ್ಲೆಸ್ ಮೀ ಬ್ಲೆಸ್ ಮೀ
--------------------------------------------------------------------------------------------------------------------------

No comments:

Post a Comment