264. ಸಿ.ಐ.ಡಿ.72 (1973)

ಸಿಐಡಿ ೭೨ ಚಲನಚಿತ್ರದ ಹಾಡುಗಳು 
  1. ಹೀಗೇ ಇರುವ ಹಾಯಾಗಿರುವ ಎಂದೆಂದು ಒಂದಾಗಿ ಇರುವ
  2. ದಂ ದಂ ದಂ 
  3. ಹೆಲ್ಪ್ ಮೀ ಪ್ಲೀಸ್ 
ಸಿ.ಐ.ಡಿ.72 (1973) - ಹೀಗೇ ಇರುವ ಹಾಯಾಗಿರುವ ಎಂದೆಂದು ಒಂದಾಗಿ ಇರುವ
ಸಂಗೀತ: ವಿಜಯಭಾಸ್ಕರ್  ಸಾಹಿತ್ಯ: ಚಿ.ಉದಯಶಂಕರ್  ಹಾಡಿದವರು: ಪಿ.ಬಿ.ಶ್ರೀನಿವಾಸ್, ಪಿ.ಸುಶೀಲಾ

ಗಂಡು : ಹೂಂಹೂಂಹೂಂ ಹೂಂಹೂಂಹೂಂ  
ಹೆಣ್ಣು : ಲಾಲಲಲಾಲಾಲ ಲಾಲಲಲಾಲಾಲ 
          ಹೀಗೇ ಇರುವ ಹಾಯಾಗಿರುವ ಎಂದೆಂದು ಒಂದಾಗಿ ಇರುವ ನಾವು ಎಂದೂ ಒಂದಾಗೆ ಇರುವ
ಗಂಡು : ಹೀಗೇ ಇರುವ ಹಾಯಾಗಿರುವ ಎಂದೆಂದು ಒಂದಾಗಿ ಇರುವ ನಾವು ಎಂದೂ ಒಂದಾಗೆ ಇರುವ

ಹೆಣ್ಣು : ಮೈ ಬಣ್ಣ ಸೊಗಸಾದ ಬಿಳುಪು ಬಂಗಾರದ ಕಾಂತಿ ಹೊಳಪು
          ಮೈ ಬಣ್ಣ ಸೊಗಸಾದ ಬಿಳುಪು ಬಂಗಾರದ ಕಾಂತಿ ಹೊಳಪು
ಗಂಡು : ತುಂಬಿದ ಈ ಕೆನ್ನೆ ಕೆಂಪು  ಕೈ ಸೋಕೆ ಎಲ್ಲೆಲ್ಲೂ ನುಣುಪು
            ಹೀಗೇ ಇರುವ ಹಾಯಾಗಿರುವ ಎಂದೆಂದು ಒಂದಾಗಿ ಇರುವ ಎಂದೂ ಒಂದಾಗೆ ಇರುವ

ಗಂಡು : ಹೂವಂತೆ ಚೆಲುವಾದ ಮೊಗವು (ಅಹ್ಹಹ್ಹಹ್ಹ ) ಮೊಗದಲ್ಲಿ ಮುದ್ದಾದ ನಗುವು
           ಹೂವಂತೆ ಚೆಲುವಾದ ಮೊಗವು ಮೊಗದಲ್ಲಿ ಮುದ್ದಾದ ನಗುವು
ಹೆಣ್ಣು : ನಗುವಿಂದ ಸೆರೆಯಾದ ಸಲಿಗೆ ನನದೆಲ್ಲ ನಿನದಾಯ್ತು ಕೊನೆಗೆ
ಇಬ್ಬರು :  ಹೀಗೇ ಇರುವ ಹಾಯಾಗಿರುವ ಎಂದೆಂದು ಒಂದಾಗಿ ಇರುವ ನಾವು ಎಂದೂ ಒಂದಾಗೆ ಇರುವ
--------------------------------------------------------------------------------------------------------------------------

ಸಿ.ಐ.ಡಿ.72 (1973) - ದಂ ದಂ ದಂ
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಎಸ್. ಪಿ.ಬಿ.

ಗಂಡು : ಆ... ಆ.. ದ್ಯಾಟ್ಸ್ ಗುಡ್ ಎ ಬೇಬೀ ... 
           ದಂ ದಂ ದಂ ಗೋವಿಂದಂ ರಂ ರಂ ರಂ ರಾಜಾರಾಮ್ 
           ದಂ ದಂ ದಂ ಗೋವಿಂದಂ ರಂ ರಂ ರಂ ರಾಜಾರಾಮ್ 
          ಭಜ ಭಜ ಭಜ ಭಜ ಭಜ ಗೋವಿಂದಂ ಮಜ ಮಜ ಮಜ ಮಜ ಬ್ರಹ್ಮಾನಂದಂ ... ಸೀ .. 
ಕೋರಸ್ : ಹರೇ ರಾಮ ಹರೇ ಕೃಷ್ಣ   ಹರೇ ರಾಮ ಹರೇ ಕೃಷ್ಣ 

ಗಂಡು : ಮಾಲೇ ಕೈಯಲ್ಲೀ ಭಗವಂತ ಬಾಯಲ್ಲಿ ಪಾಪ ಇನ್ನೇಲ್ಲಿ ಈ ಪುಣ್ಯ ಜೀವಿಲಿ 
            ಮಾಲೇ ಕೈಯಲ್ಲೀ ಭಗವಂತ ಬಾಯಲ್ಲಿ ಪಾಪ ಇನ್ನೇಲ್ಲಿ ಈ ಪುಣ್ಯ ಜೀವಿಲಿ 
            ಭೈರಾಗೀ .. ನೀನಾಗಿ ಬಾಳೋ ಹಾಯಾಗೀ.. ಬಾಳೋ ಹಾಯಾಗೀ 
           ದಂ ದಂ ದಂ ಗೋವಿಂದಂ ರಂ ರಂ ರಂ ರಾಜಾರಾಮ್ .. ಎವ್ರಿಬಡಿ 
ಕೋರಸ್ : ಹರೇ ರಾಮ ಹರೇ ಕೃಷ್ಣ   ಹರೇ ರಾಮ ಹರೇ ಕೃಷ್ಣ 

ಗಂಡು : ಬಾಳೇ ಸುಮ್ಮಾನ ಮರೇ ಸುಳ್ಳೂ ಲೋಕಾನ ಪಾನ ಈ ಗಾನ ಸುಖ ಸ್ವರ್ಗ ಸೋಪಾನ 
            ಬಾಳೇ ಸುಮ್ಮಾನ ಮರೇ ಸುಳ್ಳೂ ಲೋಕಾನ ಪಾನ ಈ ಗಾನ ಸುಖ ಸ್ವರ್ಗ ಸೋಪಾನ 
            ಕುಣಿಯೋಣ ನೆರೆಯೋಣ ಎಲ್ಲ ಮರೆಯೋಣ..  ಎಲ್ಲ ಮರೆಯೋಣ..  
           ದಂ ದಂ ದಂ ಗೋವಿಂದಂ ರಂ ರಂ ರಂ ರಾಜಾರಾಮ್ .. ಜಾಯಿನ್ ಫೋಕ್ಸ್  
ಕೋರಸ್ : ಹರೇ ರಾಮ ಹರೇ ಕೃಷ್ಣ   ಹರೇ ರಾಮ ಹರೇ ಕೃಷ್ಣ 

ಗಂಡು : ರಾಮ ಅನ್ನೋಣ ಹರೆ ಕೃಷ್ಣ ಅನ್ನೋಣ ಮಾಡಿ ಈ ಧ್ಯಾನ ಇದೇ ಲೋಕ ಕಲ್ಯಾಣ 
           ರಾಮ ಅನ್ನೋಣ ಹರೆ ಕೃಷ್ಣ ಎನ್ನೋಣ ಮಾಡಿ ಈ ಧ್ಯಾನ ಇದೇ ಲೋಕ ಕಲ್ಯಾಣ 
           ಆಡೋಣ ಹಾಡೋಣ ಪ್ರೇಮ ಮಾಡೋಣ... ಪ್ರೇಮ ಮಾಡೋಣ 
           ದಂ ದಂ ದಂ ಗೋವಿಂದಂ ರಂ ರಂ ರಂ ರಾಜಾರಾಮ್ .. 
ಕೋರಸ್ : ಹರೇ ರಾಮ ಹರೇ ಕೃಷ್ಣ   ಹರೇ ರಾಮ ಹರೇ ಕೃಷ್ಣ 
                ಹರೇ ರಾಮ ಹರೇ ಕೃಷ್ಣ   ಹರೇ ರಾಮ ಹರೇ ಕೃಷ್ಣ 
--------------------------------------------------------------------------------------------------------------------------

ಸಿ.ಐ.ಡಿ.72 (1973) - ಹೆಲ್ಪ್ ಮೀ ಪ್ಲೀಸ್
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಎಲ್.ಆರ್.ಈಶ್ವರಿ

ಹೆಣ್ಣು : ಸಿಕ್ಕತ್ತಾ... ಡಿಸಿಲ್ವಾ.. ಜಸ್ಟ್ ಮಂಜ ... 
ಕೋರಸ್ : ರೂಬಿ.. ರೂಬಿ..  ರೂಬಿ..  ರೂಬಿ..  ಬೊಂಬೆ ನಾ 
                ರೂಬಿ.. ರೂಬಿ..  ರೂಬಿ..  ರೂಬಿ..  ಬೊಂಬೆ ನಾ 
                ಓಕೇ ..ಓಕೇ .. ಓಕೇ .. ಓಕೇ .. ಬಾಂಬೆ ಓಕೇ .. 
                ಓಕೇ ..ಓಕೇ .. ಓಕೇ .. ಓಕೇ .. ಬಾಂಬೆ ಓಕೇ .. 
ಹೆಣ್ಣು : ಹೆಲ್ಪ್ ಮೀ ಪ್ಲೀಸ್,  ಹೆಲ್ಪ್ ಮೀ ಆಯ್ ಮೀಟ್ ಸಂಬಡಿ.. 
          ಹೆಲ್ಪ್ ಮೀ ಪ್ಲೀಸ್,  ಹೆಲ್ಪ್ ಮೀ ಆಯ್ ಮೀಟ್ ಸಂಬಡಿ..
          ಮೊನ್ನೆವರೇಗೂ ಓನ್ಲಿ ಫಿಫ್ಟೀನ ನಿನ್ನೆಯಿಂದ ಫಿಫ್ಟೀನ ಟು ಸೆವೆಂಟಿನ್ 
          ಹೆಲ್ಪ್ ಮೀ .. ಹೆಲ್ಪ್ ಮೀ ಪ್ಲೀಸ್,  ಹೆಲ್ಪ್ ಮೀ 
  
ಹೆಣ್ಣು : ಅಂದಿನಂತೇ ಮೈ ಮನಸ್ಸಿಲ್ಲಾ.. ತಳಮಳವೇನೋ ಅರಿತಿಲ್ಲಾ 
ಕೋರಸ್ : ತೂಗಿ ತೂಗಿ ತೂಗಿ 
ಹೆಣ್ಣು : ಓ..ಅಂದಿನಂತೇ ಮೈ ಮನಸ್ಸಿಲ್ಲಾ.. ತಳಮಳವೇನೋ ಅರಿತಿಲ್ಲಾ            
          ಒಂದೇಡೆ ನೋಟ ನಿಲ್ಲುವುದಿಲ್ಲಾ... ಏನೋ ಬೇಕೋ ಎನಿಸಿದೆಯಲ್ಲಾ.. 
          ಹೆಲ್ಪ್ ಮೀ .. ಹೆಲ್ಪ್ ಮೀ ಪ್ಲೀಸ್,  ಹೆಲ್ಪ್ ಮೀ 
          ಹೆಲ್ಪ್ ಮೀ ಪ್ಲೀಸ್,  ಹೆಲ್ಪ್ ಮೀ ಆಯ್ ಮೀಟ್ ಸಂಬಡಿ..

ಹೆಣ್ಣು : ಹಾಸಿಗೇ ಒಪ್ಪಿತ್ತು ಕೆನ್ನೇ .. ಹೂವಿದು ಚುಚ್ಚಿತೂ ನನ್ನೇ .. 
ಕೋರಸ್ : ತೂಗಿ ತೂಗಿ ತೂಗಿ 
ಹೆಣ್ಣು : ಹಾಸಿಗೇ ಒಪ್ಪಿತ್ತು ಕೆನ್ನೇ .. ಹೂವಿದು ಚುಚ್ಚಿತೂ ನನ್ನೇ .. 
          ತುಟಿಗಳೂ ಒಣಗಿವೇ ಕಾಣದೇ ನೆನ್ನೇ 
          ಬಾ ಬಾ ಕೋಡುವೇ  ಇಲ್ಲೇ ನನ್ನೇ 
          ಹೆಲ್ಪ್ ಮೀ .. ಹೆಲ್ಪ್ ಮೀ ಪ್ಲೀಸ್,  ಹೆಲ್ಪ್ ಮೀ 
          ಹೆಲ್ಪ್ ಮೀ ಪ್ಲೀಸ್,  ಹೆಲ್ಪ್ ಮೀ ಆಯ್ ಮೀಟ್ ಸಂಬಡಿ..

ಹೆಣ್ಣು : ನಿಂತ ಕಡೇ ನಾ ನಿಲ್ಲಲಾರೇ .. ಒಂಟಿಯಾಗಿ ನಾ ಬಾಳಲಾರೇ 
ಕೋರಸ್ : ತೂಗಿ ತೂಗಿ ತೂಗಿ 
ಹೆಣ್ಣು : ಓಯ್..  ನಿಂತ ಕಡೇ ನಾ ನಿಲ್ಲಲಾರೇ .. ಒಂಟಿಯಾಗಿ ನಾ ಬಾಳಲಾರೇ 
           ಕಾಣದೇ ನಿನ್ನ ನಾನೀರಲಾರೇ  ದೂರ ನಿಂತರೇ ತಾಳಲಾರೇ 
          ಹೆಲ್ಪ್ ಮೀ .. ಹೆಲ್ಪ್ ಮೀ ಪ್ಲೀಸ್,  ಹೆಲ್ಪ್ ಮೀ 
ಕೋರಸ್ : ಓಕೇ ..ಓಕೇ .. ಓಕೇ .. ಓಕೇ .. ಬಾಂಬೆ ಓಕೇ .. 
               ಓಕೇ ..ಓಕೇ .. ಓಕೇ .. ಓಕೇ .. ಬಾಂಬೆ ಓಕೇ .. 
               ಓಕೇ ..ಓಕೇ .. ಓಕೇ .. ಓಕೇ .. ಬಾಂಬೆ ಓಕೇ .. 
ಹೆಣ್ಣು : ಹೆಲ್ಪ್ ಮೀ ಪ್ಲೀಸ್,  ಹೆಲ್ಪ್ ಮೀ ಆಯ್ ಮೀಟ್ ಸಂಬಡಿ..
          ಹೆಲ್ಪ್ ಮೀ .. ಹೆಲ್ಪ್ ಮೀ ಪ್ಲೀಸ್,  ಹೆಲ್ಪ್ ಮೀ 
          ಹೆಲ್ಪ್ ಮೀ ಪ್ಲೀಸ್,  ಹೆಲ್ಪ್ ಮೀ ಆಯ್ ಮೀಟ್ ಸಂಬಡಿ..
--------------------------------------------------------------------------------------------------------------------------

No comments:

Post a Comment