265. ಧೂಳ್ (2011)

ಧೂಳ ಚಲನಚಿತ್ರದ ಹಾಡುಗಳು 
  1. ಹಿಂದಿಲ್ಲ ಮುಂದಿಲ್ಲ ಅನುರಾಗ ಶುರುವಾಗಿ
  2. ಎದುರು ಮನೆ ಮೀನಾಕ್ಷಿ 
  3. ನನಗೇಕೆ ಹೀಗೆ 
  4. ವಸಂತ ಬಂತು 
  5. ನನ್ನ ನೀನು ಗೆಲ್ಲಲಾರೆ 
  6. ಅಮ್ಮಾ ಲೂಸಾ 
 ಧೂಳ್ (೨೦೧೧) - ಹಿಂದಿಲ್ಲ ಮುಂದಿಲ್ಲ ಅನುರಾಗ ಶುರುವಾಗಿ
ಸಂಗೀತ: ವಿ.ಹರಿಕೃಷ್ಣ, ಸಾಹಿತ್ಯ: ಯೋಗರಾಜ್ ಭಟ್, ಗಾಯನ : ಕಾರ್ತಿಕ್

ಹಿಂದಿಲ್ಲ ಮುಂದಿಲ್ಲ ಅನುರಾಗ ಶುರುವಾಗಿ
ಇನ್ನೇನು ಹೇಳೋದು ನಾನಾದೆ ಅನುರಾಗಿ

ಅತಿಯಾದ ಹುರುಪಿನಲಿ ನನ್ನ ಹೃದಯವು ಹೊರಗಡೆ ಇಣುಕುತಿದೆ
ಹಾಳಾದ ಹೃದಯವಿದು ಕಣ್ಣನ್ನು ಹೊಡೆಯಲು ಕಲಿಯುತಿದೆ
ನನ್ನಾ ಕತೆ ಮುಂದೇನೋ, ಒಲವಾಗಿದೆ ನಂಗೂನು
ಹಿಂದಿಲ್ಲ ಮುಂದಿಲ್ಲ ಅನುರಾಗ ಶುರುವಾಗಿ
ಇನ್ನೇನು ಹೇಳೋದು ನಾನಾದೆ ಅನುರಾಗಿ

ಅಲೆದಾಡುವ ಕಾಲಿಗೆ ಕುಣಿತವ ಕಲಿಯುವ ಆಸೆಯು ಬಂದಿದೆ ಒಂಥರಾ
ನನ್ನ ಮಾತನು ಕೇಳದೆ ನಾಲಿಗೆ ಕಲಿತಿದೆ, ಹಾಡಲು ಪ್ರೇಮದ ಇಂಚರ
ಮುಗಿಯದ ಹಾಡೊಂದ ಹಾಡುತ ನಾನಿಂದು
ಕಳೆದು ಕೊಂಡಿರುವೆ ನಾನೇ ನನ್ನನ್ನು
ಹಗಲು ಇರುಳು ಅವಳದೆ ಸ್ವರ
ನನ್ನಾ ಕತೆ ಮುಂದೇನೋ, ಒಲವೆಂಬುದು ಹಿಂಗೇನೋ
ಹಿಂದಿಲ್ಲ ಮುಂದಿಲ್ಲ ಅನುರಾಗ ಶುರುವಾಗಿ
ಇನ್ನೇನು ಹೇಳೋದು ನಾನಾದೆ ಅನುರಾಗಿ

ಬರಗಾಲದ ನನ್ನೆದೆಯೊಳಗಡೆ ಬಂದಿದೆ, ದಾರಿ ತಪ್ಪಿದ ಮೋಡವು
ತುದಿಗಾಲಲಿ ನಿನ್ನನು ಕಾಯುವ ಕೆಲಸವ ಕಲಿತಿದೆ ನನ್ನ ಹೃದಯವು
ಹಸಿಬಿಸಿ ಕನಸನ್ನು ಕಂಡಿದೆ ಈ ಕಣ್ಣು
ಮಾಡಲು ಇನ್ನೇನು ಉಳಿದಿದೆ ನನಗಿನ್ನು
ಹೊಸದು ನನಗೂ ಹುಡುಗಿಯ ಜ್ವರ
ನನ್ನಾ ಕತೆ ಮುಂದೇನೋ, ಮಾತಾಡೆನೂ ನಾನಿನ್ನು
ಹಿಂದಿಲ್ಲ ಮುಂದಿಲ್ಲ ಅನುರಾಗ ಶುರುವಾಗಿ
ಇನ್ನೇನು ಹೇಳೋದು ನಾನಾದೆ ಅನುರಾಗಿ
-----------------------------------------------------------------------------------------

ಧೂಳ್ (೨೦೧೧) - ಎದುರು ಮನೆ ಮೀನಾಕ್ಷಿ 
ಸಂಗೀತ: ವಿ.ಹರಿಕೃಷ್ಣ, ಸಾಹಿತ್ಯ: ನಾಗೇಂದ್ರ ಪ್ರಸಾದ, ಗಾಯನ : ರಾಜೇಶ 

-----------------------------------------------------------------------------------------

ಧೂಳ್ (೨೦೧೧) - ನನಗೇಕೆ ಹೀಗೆ 
ಸಂಗೀತ: ವಿ.ಹರಿಕೃಷ್ಣ, ಸಾಹಿತ್ಯ: ನಾಗೇಂದ್ರ ಪ್ರಸಾದ, ಗಾಯನ : ನಂದಿತಾ, ಹರಿಚರಣ 

-----------------------------------------------------------------------------------------

ಧೂಳ್ (೨೦೧೧) - ವಸಂತ ಬಂತು 
ಸಂಗೀತ: ವಿ.ಹರಿಕೃಷ್ಣ, ಸಾಹಿತ್ಯ: ಕವಿರಾಜ , ಗಾಯನ : ಸುವ್ವಿ ಸುರೇಶ 

-----------------------------------------------------------------------------------------

ಧೂಳ್ (೨೦೧೧) - ನನ್ನ ನೀನು ಗೆಲ್ಲಲಾರೆ 
ಸಂಗೀತ: ವಿ.ಹರಿಕೃಷ್ಣ, ಸಾಹಿತ್ಯ: ನಾಗೇಂದ್ರಪ್ರಸಾದ, ಗಾಯನ : ಎಸ್.ಪಿ.ಬಿ, ಟಿಪ್ಪು 

-----------------------------------------------------------------------------------------

ಧೂಳ್ (೨೦೧೧) - ಅಮ್ಮಾ ಲೂಸಾ 
ಸಂಗೀತ: ವಿ.ಹರಿಕೃಷ್ಣ, ಸಾಹಿತ್ಯ: ನಾಗೇಂದ್ರ ಪ್ರಸಾದ, ಗಾಯನ : ಹರಿಕೃಷ್ಣ, ಮೇಘಾ 

-----------------------------------------------------------------------------------------

No comments:

Post a Comment