- ಹೋದೆಯ ದೂರ ಓ ಜೊತೆಗಾರ ಸೇರಲು ಬಂದಾಗ
- ಕಾಮನ ದುಂಬಿಯ ಝೇಂಕಾರಕೇ
ಅನುಭವ (1984) - ಹೋದೆಯ ದೂರ ಓ ಜೊತೆಗಾರ
ನೀ ಅರಿಯದೆ ಹೋದೆ ಪ್ರೇಮದ ನಾ ಸಂದೇಶವ ತಂದಾಗ
ಹೋದೆಯ ದೂರ ಓ ಜೊತೆಗಾರ ಸೇರಲು ಬಂದಾಗ
ನೀ ಅರಿಯದೆ ಹೋದೆ ಪ್ರೇಮದ ನಾ ಸಂದೇಶವ ತಂದಾಗ
ನೀ ಶೃತಿಯ ಮಿಡಿದಾಗ ಹಾಡಿದೆ ನಾ ಹುಸಿ ರಾಗ
ತೋರಿದೆ ನೀ ಅನುರಾಗ ಗಮನಿಸದೆ ತೆರಳಿದೆ ನಾ .... ಆಆಆ ಆಆಆಆ ..ಆ
ಹೋದೆಯ ದೂರ ಓ ಜೊತೆಗಾರ ಸೇರಲು ಬಂದಾಗ
ನೀ ಅರಿಯದೆ ಹೋದೆ ಪ್ರೇಮದ ನಾ ಸಂದೇಶವ ತಂದಾಗ
ನಲ್ಲ ಬಳಿಸಾರಿ ಮೆಲ್ಲ ಬಿಗಿದಾಗ ತಳ್ಳಿ ದೂರಾದೆ ಅರಿಯದೆ ನಾ
ಮದನ ನೀನಾಗಿ ಮುದದಿ ತೆರೆದಾಗ ರತಿಯ ಸವಿಲೀಲೆ ಮರೆತೆನು ನಾ
ಹೂವಿನ ಹಾಸಿಗೆ ನೀ ಹಾಸಿ ಮೋಗದಿ ನನ್ನನು ಕರೆದಾಗ
ಮಾಡಿದೆ ನಾನು ಪರಿಹಾಸ ನೀಡದೆ ನಿನಗೆ ಉಲ್ಲಾಸ ಸವಿ ಇರುಳ ಹೊಂಗನಸ ಮುರಿದೆನು ನಾ.. ಆಆಆ ಆಆಆಆ ..ಆ
ಹೋದೆಯ ದೂರ ಓ ಜೊತೆಗಾರ ಸೇರಲು ಬಂದಾಗ
ನೀ ಅರಿಯದೆ ಹೋದೆ ಪ್ರೇಮದ ನಾ ಸಂದೇಶವ ತಂದಾಗ
ಮೇಘ ಸರಿದಾಗ ತಾರೆ ಹೊಳೆದಾಗ ಚಂದ್ರ ಮರೆಯಾದ ನನ್ನ ತೊರೆದ
ಯಾರ ಬಳಿ ನಾನು ನೋವ ನುಡಿದೇನು ಇನಿಯ ಮರೆತಾಗ ಸಹಿಸೆನು ನಾ
ಬಾಳೆನು ಚಿಂತೆಯ ಪಾಲಾಗೀ ದುಂಬಿಯ ಕಾಣದ ಹೂವಾಗಿ
ತಾಳೆನು ನಾನು ಏಕಾಂತ ಬರುವೆನೆ ಎಂದೋ ಓ ಕಾಂತ ಕೊರಗುತಿಹೆ ಮರುಗುತಿಗೆ ವಿರಹದಿ ನಾ... ಆಆಆ ಆಆಆಆ ..ಆ
ಹೋದೆಯ ದೂರ ಓ ಜೊತೆಗಾರ ಸೇರಲು ಬಂದಾಗ
ನೀ ಅರಿಯದೆ ಹೋದೆ ಪ್ರೇಮದ ನಾ ಸಂದೇಶವ ತಂದಾಗ
ನೀ ಶೃತಿಯ ಮಿಡಿದಾಗ ಹಾಡಿದೆ ನಾ ಹುಸಿ ರಾಗ
ತೋರಿದೆ ನೀ ಅನುರಾಗ ಗಮನಿಸದೆ ತೆರಳಿದೆ ನಾ .... ಆಆಆ ಆಆಆಆ ..ಆ
ಅಹಹಹ್ಹಹಹ್ಹಹ
--------------------------------------------------------------------------------------------------------------------------ಅನುಭವ (1984) - ಕಾಮನ ದುಂಬಿಯ ಝೇಂಕಾರಕೆ
ಸಂಗೀತ: ವೈದ್ಯನಾಥನ್ ಸಾಹಿತ್ಯ: ವಿ.ಮನೋಹರ್ ಗಾಯನ: ಎಸ್.ಪಿ.ಬಿ. ವಾಣಿ ಜಯರಾಂ
ಗಂಡು : ಕಾಮನ ದುಂಬಿಯ ಝೇಂಕಾರದೇ ನನ್ನಾಸೆಯ ಕರೆಯಿದೇ
ತೀರಿಸು ದಾಹವಾ ಕಾಡಿದೆ ಈ ಕಾಮನೇ ಹೊಯ್ ತಾಳೇನು ಈ ವೇದನೇ
ಜೂಮ್ ಜೂಮ್ ಜೂಮ್ ಜೂಮ್ ಜೂಮ್ ಜೂಮ್ ಜೂಮ್ ಜೂಮ್ ಜೂಮ್
ಜೂಮ್ ಜೂಮ್ ಜೂಮ್ ಜೂಮ್ ಜೂಮ್ ಜೂಮ್ ಜೂಮ್ ಜೂಮ್ ಜೂಮ್
ಕಾಮನ ದುಂಬಿಯ ಝೇಂಕಾರದೇ ನನ್ನಾಸೆಯ ಕರೆಯಿದೇ ತೀರಿಸು ದಾಹವಾ
ಗಂಡು : ಕನ್ಯೆ ನಿನ್ನಾ ಚೆಂದ ಕಂಡು ಇಂದು ನಾನು ದಂಗಾದೇನೇ
ಆಹ್ ಏನು ಸುಖ ಬಾರೇ ಕೋಮಲೇ ಮಂದಾರ ಮಾಲೆ ಕೂಡಿ ತೋರುವ ಶೃಂಗಾರ ಲೀಲೆ ಬಾ.
ಕನ್ಯೆ ನಿನ್ನಾ ಚೆಂದ ಕಂಡು ಇಂದು ನಾನು ದಂಗಾದೇನೇ
ಆಹ್ ಏನು ಸುಖ ಬಾರೇ ಕೋಮಲೇ ಮಂದಾರ ಮಾಲೆ ಕೂಡಿ ತೋರುವ ಶೃಂಗಾರ ಲೀಲೆ ಬಾ..ಬಾ
ಮದನನ ಬಾಣ ಹೂಡುವ ಮುನ್ನ ಕುಣಿಸು ತಣಿಸು ಮೈಯ್ಯ ಮರೆಸು ಬಾ ಇನೀಯೆ ಸನಿಹ ಚಿಮ್ಮಿ ಚಿಮ್ಮಿ ಬಾ
ಕಾಮನ ದುಂಬಿಯ ಝೇಂಕಾರದೇ ನನ್ನಾಸೆಯ ಕರೆಯಿದೇ ತೀರಿಸು ದಾಹವಾ.. ಆಹ್ಹ್
ಆಹ್ಹ್.. ಅಹಹಹ್ಹ್ .. ಹೊಯ್ ಹೊಯಹೊಯ್ ಹೊಯ್ ಆಹ್ಹ್
ಗಂಡು : ಬಳ್ಳಿ ಮರ ಹಬ್ಬಿದಂತೇ ನನ್ನಾ ನೀನು
ಹೆಣ್ಣು : ಬಳ್ಳಿ ಮರ ಹಬ್ಬಿದಂತೇ ತಬ್ಬಲ್ಲೇನು ನನ್ನಾ ನಾನೂ ಬಾರೋ ನನ್ನ ಸುಖ
ಗಾಢಲಿಂಗನ ನೀಡು ಬಾ ಚುಂಬನ ಬೇಕು ಹೆಣ್ಣಿಗೇ ಉನ್ಮಾದ ಬಂಧನ..ಬಾ..
ಗಂಡು : ಹೇ... ನಿಂಗೇ ಇದೆಲ್ಲ ಹೇಗ್ ಗೊತ್ತಾಯ್ತು
ಹೆಣ್ಣು : ಇದೆಲ್ಲಾ... ಇನ್ನೂ ಯಾರೂ ಹೇಳೋದಿಲ್ಲ ಸುತ್ತ ಮುತ್ತ ಕಾಣೋದೆಲ್ಲಾ
ಕಾಮನ ವಿಲಾಸವೇ ಜೀವರಾಶಿಗೇ ಈ ಭೂಮಿ ತೋರಿದೇ
ಸ್ನೇಹ ಬೆಸುಗೆಯ ಆನಂದ ನೋಟವ...ಅಹ್ಹ... ..
ಹಸಿವು ದಾಹ ಉಸಿರ ಮೋಹ ಇದಕೇ ಕಲೆತೆ ಏಕೆ ಪ್ರಿಯತಮ ಇದುವೇ ಬಯಕೆ ಸಹಜ ಸಂಭ್ರಮ
ಇಬ್ಬರು : ಕಾಮನ ರಂಗಿನ ಚಂದೋಟದಿ ಸುತ್ತೋಣ ಬಾ ಅನುದಿನ ತೀರಿಸು ದಾಹವಾ
ಗಂಡು ಕಾಡಿದೇ ಹೆಣ್ಣು : ಈ ಕಾಮನೇ
ಗಂಡು : ಹೇಯ್ ತಾಳೇನು .... ಹ್ಹಾ
--------------------------------------------------------------------------------------------------------------------------
No comments:
Post a Comment