ಸಿರಿತನಕ್ಕೆ ಸವಾಲ್ ಚಿತ್ರದ ಹಾಡುಗಳು
- ಬಾನಾಡಿ ಹಾರೋ ಮೇಲೇರೋ
- ರಂಗು ರಂಗಿನ ಲಂಗಾ ತೊಟ್ಟು
- ನಿಲ್ಲು ನಿಲ್ಲು ಅತ್ತಿಗೆ
- ಶಶಿಯ ಕಂಡು ಮೋಡ
- ಒಂದಡೆ ಮಿನುಗುವ ಸಿರಿತನ
ಸಿರಿತನಕ್ಕೇ ಸವಾಲ್ (1978)
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಕುಣಿಗಲ್ ನಾಗಭೂಷಣ್ ಹಾಡಿದವರು: ವಾಣಿಜಯರಾಮ್
ಆಆಆ... ಓಓಓ...
ಬಾನಾಡಿ ಹಾರೋ ಮೇಲೇರೋ ಯಾರ ಹಂಗಿಲ್ಲದೇ
ಬಾನಾಡಿ ಹಾರೋ ಮೇಲೇರೋ ಯಾರ ಹಂಗಿಲ್ಲದೇ
ಮೆರೆವೆನು ನಾನು ನಿನ್ನಂತೆ ಯಾರ ಭಯವಿಲ್ಲದೇ
ಬಾನಾಡಿ ಹಾರೋ ಮೇಲೇರೋ ಯಾರ ಹಂಗಿಲ್ಲದೇ
ಮೆರೆವೆನು ನಾನು ನಿನ್ನಂತೆ ಯಾರ ಭಯವಿಲ್ಲದೇ
ಬಾನಾಡಿ ಹಾರೋ ಮೇಲೇರೋ ಯಾರ ಹಂಗಿಲ್ಲದೇ
ಮರವ ಹಬ್ಬಿ ಬೆಳೆಯಲು ಲತೆಗೆ ಯಾರು ಹೇಳಿಲ್ಲಾ
ಎಲ್ಲೋ ಹುಟ್ಟಿ ಹರಿಯುವ ನದಿಗೆ ಎಲ್ಲೆಯು ತೋರಿಲ್ಲ
ಹಾಗೇ ತಗ್ಗಿ ಬಗ್ಗಿ ನಡೆದ ಪಾಠ ನನಗಿಲ್ಲ
ಆಹಾಂ..ಆಆಆ ಹಾಗೇ ತಗ್ಗಿ ಬಗ್ಗಿ ನಡೆದ ಪಾಠ ನನಗಿಲ್ಲ
ಅಂಜಿಕೆ ಅರಿಯದೇ ಬೆದರಿ ನಿಲ್ಲದೆ ಹಾರುವೇ ನಾನು
ಅಂಜಿಕೆ ಅರಿಯದೇ ಬೆದರಿ ನಿಲ್ಲದೆ ಹಾರುವೇ ನಾನು
ಬಾನಾಡಿ ಹಾರೋ ಮೇಲೇರೋ ಯಾರ ಹಂಗಿಲ್ಲದೇ
ಬೆಡಗಿನ ಮಾತಿಗೆ ಬೆದರದೆ ನಾನು ತೇಲುವೆ ನಿನ್ನಂತೆ
ಎಂದಿಗು ಅಳುಕದೆ ಯಾರಿಗೂ ಮಣಿಯದೆ ಬಾಳುವೆ ನಾನು
ಬಾನಾಡಿ ಹಾರೋ ಮೇಲೇರೋ ಯಾರ ಹಂಗಿಲ್ಲದೇ
ಮೆರೆವೆನು ನಾನು ನಿನ್ನಂತೆ ಯಾರ ಭಯವಿಲ್ಲದೇ
ಕೋಗಿಲೆ ಹಾಡುವ ತೆರೆದಲಿ ನಾನು ಹಾಡುವೇ ಇಂದು
ನವಿಲಿನ ಹಾಗೆ ಕುಣಿವೇ ನಾನು ಬಾಳಲಿ ಮುಂದೆಂದು
ಅಂದವ ತೋರಿ ಚಂದವ ಹೀರಿ ನಲಿವೆ ಎಂದೆಂದು
ಓಓಓ... ಅಂದವ ತೋರಿ ಚಂದವ ಹೀರಿ ನಲಿವೆ ಎಂದೆಂದು
ಬಾನಾಡಿ ಹಾರೋ ಮೇಲೇರೋ ಯಾರ ಹಂಗಿಲ್ಲದೇ
ನೆನೆಸಿದಂತೆಯೇ ನಡೆಯುವ ಛಲವು ಹೆಣ್ಣಿಗೆ ಇರಬೇಕು
ಗೋಪುರದಂತೆ ನಿಲ್ಲುವೆ ಎಂಬ ಸಾಹಸ ಬರಬೇಕು
ಗಂಡಿಗೆ ನಡುಗುವ ಗುಂಡಿಗೆಯನ್ನ ಬಡಿದೋಡಿಸಬೇಕು
ಅಹ್ಹಹ್ಹಾ... ಗಂಡಿಗೆ ನಡುಗುವ ಗುಂಡಿಗೆಯನ್ನ ಬಡಿದೋಡಿಸಬೇಕು
ಮೆರೆವೆನು ನಾನು ನಿನ್ನಂತೆ ಯಾರ ಭಯವಿಲ್ಲದೇ
ಸಿರಿತನಕ್ಕೇ ಸವಾಲ್ (1978)
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಕುಣಿಗಲ್ ನಾಗಭೂಷಣ್ ಹಾಡಿದವರು: ಎಸ್.ಪಿ.ಬಿ.
ರಂಗು ರಂಗಿನ ಲಂಗಾ ತೊಟ್ಟು ರಂಗಾದ ರಂಗಮ್ಮಾ ರಂಗಮ್ಮ
ಸಿಡುಕಿನ ಮೊರೆಯು ತರವಲ್ಲಾ ತರವಲ್ಲಾ ನಿಂಗವ್ವಾ ನಿಂಗಮ್ಮ
ರಂಗು ರಂಗಿನ ಲಂಗಾ ತೊಟ್ಟು ರಂಗಾದ ರಂಗಮ್ಮ
ರಂಗು ರಂಗಿನ ಲಂಗಾ ತೊಟ್ಟು ರಂಗಾದ ರಂಗಮ್ಮ
ಸಿಡುಕಿನ ಮೊರೆಯು ತರವಲ್ಲ ನಿಂಗಮ್ಮ
ಸಿಡುಕಿನ ಮೊರೆಯು ತರವಲ್ಲ ನಿಂಗಮ್ಮ
ಹೇ.. ರಂಗು ರಂಗಿನ ಲಂಗಾ ತೊಟ್ಟು ರಂಗಾದ ರಂಗಮ್ಮ
ಸಿಡುಕಿನ ಮೊರೆಯು ತರವಲ್ಲ ನಿಂಗಮ್ಮ
ರಂಗಮ್ಮ ನಿಂಗಮ್ಮ... ಮಂಗಮ್ಮ
ರಂಗಮ್ಮ ನಿಂಗಮ್ಮ... ಮಂಗಮ್ಮ
ಹಣದಾ ಹಮ್ಮಿನಲಿ ಓದಿರೋ ಹುಚ್ಚಿನಲಿ
ಜಂಭದ ಕೋಳಿಯಂತೆ ನೀ ನಡೆವೆ..
ಕೊಕ್ಕರೆ ಕೊಕ್ಕೋ... ಕೊಕ್ಕರೆ ಕೊಕ್ಕೋ
ಕಾಲವು ಬದಲಾಗಿ ಬಡವನ ನೆರವಾಗಿ
ಬಂದಾಗ ಅಡುಗುವುದಾ ನೀ ಕಲಿವೆ..
ಚಕ್ಕಾ ಮುಕ್ಕಿ... ಚಕ್ಕಾ ಮುಕ್ಕಿ
ಜಂಭದಾ ಜೋರೆಲ್ಲಾ ಥಳುಕಿನ ಬಾಳೆಲ್ಲಾ
ಸೊಕ್ಕಿ ನಿಲ್ಲೋ ಹಕ್ಕು ಎಲ್ಲಾ ಮಂಗಮಾಯ
ಮಂಗಮಾಯ ಮಂಗಮಾಯ ಮಂಗಮಾಯ ಮಂಗಮಾಯ
ಅರೆರೇ.. ರಂಗು ರಂಗಿನ ಲಂಗಾ ತೊಟ್ಟು ರಂಗಾದ ರಂಗಮ್ಮ
ಸಿಡುಕಿನ ಮೊರೆಯು ತರವಲ್ಲ ನಿಂಗಮ್ಮ
ಸಿಡುಕಿನ ಮೊರೆಯು ತರವಲ್ಲ ನಿಂಗಮ್ಮ
ರಂಗಮ್ಮ ನಿಂಗಮ್ಮ... ಮಂಗಮ್ಮ ರಂಗಮ್ಮ ನಿಂಗಮ್ಮ... ಮಂಗಮ್ಮ
ರಂಗಮ್ಮ ನಿಂಗಮ್ಮ... ಮಂಗಮ್ಮ ರಂಗಮ್ಮ ನಿಂಗಮ್ಮ... ಮಂಗಮ್ಮ
ಹೆಣ್ಣಿಗೆ ಗುಣ ಒಂದು ಚಿನ್ನದಾ ಮೆರಗೊಂದು
ತಿಳಿಯದೆ ನಿನಗೆ ಅಮ್ಮಯ್ಯ
ಅಮ್ಮಯ್ಯ ಅಮ್ಮಯ್ಯ
ಮಹಡಿ ಮನೆಯೊಂದೇ ಎಂದೂ ನೆಲೆ ಎಂದೇ
ತಿಳಿಯಲು ಬೇಡವೇ ದಮ್ಮಯ್ಯ
ದಮ್ಮಯ್ಯ ದಮ್ಮಯ್ಯದಮ್ಮಯ್ಯ
ದುಡ್ಡಿನ ಮದವೆಲ್ಲಾ ತೀರಿದಾ ಮೇಲೆಲ್ಲಾ
ಕೊಬ್ಬು ಹೆಚ್ಚಿ ಮೆರೆಯೋ ಬುದ್ದಿ ತಾರಮ್ಮಯ್ಯ
ತಾರಾಮಯ್ಯ ತಾರಾಮಯ್ಯತಾರಾಮಯ್ಯ
ಹೇಹೇ.. ರಂಗು ರಂಗಿನ ಲಂಗಾ ತೊಟ್ಟು ರಂಗಾದ ರಂಗಮ್ಮ
ಸಿಡುಕಿನ ಮೊರೆಯು ತರವಲ್ಲ ನಿಂಗಮ್ಮ
ಸಿಡುಕಿನ ಮೊರೆಯು ತರವಲ್ಲ ನಿಂಗಮ್ಮ
ರಂಗಮ್ಮ ನಿಂಗಮ್ಮ... ಮಂಗಮ್ಮ ರಂಗಮ್ಮ ನಿಂಗಮ್ಮ... ಮಂಗಮ್ಮ
ರಂಗಮ್ಮ ನಿಂಗಮ್ಮ... ಮಂಗಮ್ಮ ರಂಗಮ್ಮ ನಿಂಗಮ್ಮ... ಮಂಗಮ್ಮ
--------------------------------------------------------------------------------------------------------------------------
ಸಿರಿತನಕ್ಕೇ ಸವಾಲ್ (1978)
ಸಾಹಿತ್ಯ: ಕುಣಿಗಲ್ ನಾಗಭೂಷಣ್ ಸಂಗೀತ: ವಿಜಯಭಾಸ್ಕರ್ ಹಾಡಿದವರು: ವಾಣಿಜಯರಾಂ, ಎಸ್.ಜಾನಕೀ
ನೀಡು ನಿನ್ನ ಕುತ್ತಿಗೆ ಅಣ್ಣನು ಕಟ್ಟುವ ತಾಳಿಗೆ
ನಿಲ್ಲು ನಿಲ್ಲು ಅತ್ತಿಗೆ ಒಂಟಿದ್ದೆ ನೀನು ಎತ್ತಗೆ
ನೀಡು ನಿನ್ನ ಕುತ್ತಿಗೆ ಅಣ್ಣನು ಕಟ್ಟುವ ತಾಳಿಗೆ
ಚಂದುಳ್ಳಿ ಚಲುವ ನಮ್ಮಣ್ಣನಮ್ಮ
ಚಿಗುರು ಮೀಸೆ ಹುಂಬನಮ್ಮ
ಚಂದುಳ್ಳಿ ಚಲುವ ನಮ್ಮಣ್ಣನಮ್ಮ
ಚಿಗುರು ಮೀಸೆ ಹುಂಬನಮ್ಮ
ದುಡಿಯೋ ಜೀವಕೆ ತಾ ಜೊತೆಯಮ್ಮಾ
ನಿಲ್ಲು ನಿಲ್ಲು ಅತ್ತಿಗೆ ಒಂಟಿದ್ದೆ ನೀನು ಎತ್ತಗೆ
ನೀಡು ನಿನ್ನ ಕುತ್ತಿಗೆ ಅಣ್ಣನು ಕಟ್ಟುವ ತಾಳಿಗೆ
ನೀಡು ನಿನ್ನ ಕುತ್ತಿಗೆ ಅಣ್ಣನು ಕಟ್ಟುವ ತಾಳಿಗೆ
ನಿನ್ನಾ ರೂಪಕೆ ಸಮನಾರಮ್ಮಾ
ಚಲುವಿನ ಅರಗಿಣಿ ನೀನೇನಮ್ಮ
ನಿನ್ನಯ ಜೋಡಿಗೆ ಚಲವಣ್ಣನಮ್ಮ
ಅವನಾ ಬಾಳಿಗೆ ಬೆಳಕಾಗಮ್ಮಈಡೋ ಜೋಡೋ ಸೇರಿದ ಮೇಲೆ
ಹುಟ್ಟೋ ಮಗುವು ಚುರುಕೇನಮ್ಮ
ಇಂಥಾ ಬಾಳ್ನ ಬಿಟ್ಟು ಹೋಗಬೇಡಮ್ಮ
ನಿಲ್ಲು ನಿಲ್ಲು ಅತ್ತಿಗೆ ಅರೆರೇ... ಒಂಟಿದ್ದೆ ನೀನು ಎತ್ತಗೆ
ನೀಡು ನಿನ್ನ ಕುತ್ತಿಗೆ ಅಣ್ಣನು ಕಟ್ಟುವ ತಾಳಿಗೆ
ನಮಗೆ ನಾಯಕ ಇವನೇನಮ್ಮ .. ಹ್ಹ..
ಭೂತಾಯಿಯ ನಂಬಿ ಬಾಳುವನಮ್ಮ
ಹ್ಹ.. ಸಾವ್ಕಾರ ಬಡವಾ ಬೇಧಾ ಮರೆವಾ
ಎಲ್ಲರು ಒಂದೇ ಮಾನವರೆನುವಾ
ಕಪಟ ಮೋಸ ತಿಳಿಯದೆ ಇರುವ
ಬೇಸರ ಮರೆತು ತಾ ನಗುತಿರುವ
ಇಂಥಾ ಅಣ್ಣನ ಬಿಟ್ಟು ಹೋಗಬೇಡಮ್ಮಾ
ನಿಲ್ಲು ನಿಲ್ಲು ಅತ್ತಿಗೆ... ಹೇ ಒಂಟಿದ್ದೆ ನೀನು ಎತ್ತಗೆ
ನೀಡು ನಿನ್ನ ಕುತ್ತಿಗೆ ಅಣ್ಣನು ಕಟ್ಟುವ ತಾಳಿಗೆ
ನಿಲ್ಲು ನಿಲ್ಲು ಅತ್ತಿಗೆ ಒಂಟಿದ್ದೆ ನೀನು ಎತ್ತಗೆ
ನೀಡು ನಿನ್ನ ಕುತ್ತಿಗೆ ಅಣ್ಣನು ಕಟ್ಟುವ ತಾಳಿಗೆ
--------------------------------------------------------------------------------------------------------------------------
ಸಿರಿತನಕ್ಕೇ ಸವಾಲ್ (1978)
ನೀಡು ನಿನ್ನ ಕುತ್ತಿಗೆ ಅಣ್ಣನು ಕಟ್ಟುವ ತಾಳಿಗೆ
ನಿಲ್ಲು ನಿಲ್ಲು ಅತ್ತಿಗೆ ಒಂಟಿದ್ದೆ ನೀನು ಎತ್ತಗೆ
ನೀಡು ನಿನ್ನ ಕುತ್ತಿಗೆ ಅಣ್ಣನು ಕಟ್ಟುವ ತಾಳಿಗೆ
--------------------------------------------------------------------------------------------------------------------------
ಸಿರಿತನಕ್ಕೇ ಸವಾಲ್ (1978)
ಸಾಹಿತ್ಯ: ಕುಣಿಗಲ್ ನಾಗಭೂಷಣ್ ಸಂಗೀತ: ವಿಜಯಭಾಸ್ಕರ್ ಹಾಡಿದವರು: ವಿಷ್ಣುವರ್ಧನ್
ನೆರಳ ಕಂಡು ಬುವಿಯು ಹೇಳಿತು ನನ್ನ ಮುಟ್ಟದಿರು
ಶಶಿಯ ಕಂಡು ಮೋಡ ಹೇಳಿತು ನನ್ನ ಮುಟ್ಟದಿರು
ಮಡದಿ ನುಡಿದಳು ಗೋರಕುಂಬಾರಗೆ ನನ್ನ ಮುಟ್ಟದಿರೆಂದು
ಮರೆತು ಮುಟ್ಟಿದ ತಪ್ಪಿಗೆ ಕೈಗಳ ಕಾಣಿಕೆ ನೀಡಿದನಂದು
ಹಾಗೆ ನುಡಿದು ನನ್ನಯ ಮನವ ಕಲಕಿದೆ ನೀ ಇಂದು
ಶಶಿಯ ಕಂಡು ಮೋಡ ಹೇಳಿತು ನನ್ನ ಮುಟ್ಟದಿರು
ಬೆಳಕನು ಬೀರಲು ರವಿಯ ಕಿರಣವು ಬೀಳಲೇ ಬೇಕು
ನೈದಿಲೆ ಅರಳಲು ಚಂದ್ರನ ಕಿರಣವು ಬೀಳಲೇ ಬೇಕು
ತಾಳಿಯ ಬೆಲೆಯ ಮರೆತರೆ ಬಾಳಲಿ ಕೊರಗಲೇ ಬೇಕು
ಹೊಯ್ ಶಶಿಯ ಕಂಡು ಮೋಡ ಹೇಳಿತು ನನ್ನ ಮುಟ್ಟದಿರು
ಕೈಗಳು ಭೂಮಿಯ ಮುಟ್ಟದೆ ಇದ್ದರೆ ಪೈರು ಬೆಳೆಯು ಇಲ್ಲ
ತಂದೆ ತಾಯಿಯು ಮುಟ್ಟದೆ ಇದ್ದರೆ ನಾನೂ ನೀನೂ ಇಲ್ಲ.. ಅಹ್ಹ...
ಇದರ ನೀತಿಯ ತಿಳಿಯದೆ ಇದ್ದರೆ ಮಾನವಳೇ ಅಲ್ಲ
ಶಶಿಯ ಕಂಡು ಮೋಡ ಹೇಳಿತು ನನ್ನ ಮುಟ್ಟದಿರು
ನೆರಳ ಕಂಡು ಬುವಿಯು ಹೇಳಿತು ನನ್ನ ಮುಟ್ಟದಿರು
ನನ್ನ ಮುಟ್ಟದಿರು ಓಯ್ ನನ್ನ ಮುಟ್ಟದಿರು
ಹೇ ನನ್ನ ಮುಟ್ಟದಿರು ಹೇ
--------------------------------------------------------------------------------------------------------------------------
ಸಿರಿತನಕ್ಕೇ ಸವಾಲ್ (1978)
ಸಾಹಿತ್ಯ: ಕುಣಿಗಲ್ ನಾಗಭೂಷಣ್ ಸಂಗೀತ: ವಿಜಯಭಾಸ್ಕರ್ ಹಾಡಿದವರು: ವಾಣಿಜಯರಾಂ
ಒಂದೆಡೆ ಮಿನುಗುವ ಸಿರಿತನ ಬೇರೆಡೆ ನೋವಿನ ಬಡತನ
ಯಾವೆಡೆ ನಡೆದರೆ ಚನ್ನ ಬಯಸಲಿ ನಾನು ಏನನ್ನ
ಒಂದೆಡೆ ಮಿನುಗುವ ಸಿರಿತನ ಬೇರೆಡೆ ನೋವಿನ ಬಡತನ
ಯಾವೆಡೆ ನಡೆದರೆ ಚನ್ನ ಬಯಸಲಿ ನಾನು ಏನನ್ನ
ಸಿರಿತನದಲ್ಲಿ ಕಣ್ಣ ಸೆಳೆವಾ ಬೆಳ್ಳಿ ಬಂಗಾರ
ಅನುದಿನವೂ ಮಿಂಚಿ ಹೊಳೆವಾ ಸೊಬಗು ಸಿಂಗಾರ
ಸಿರಿತನದಲ್ಲಿ ಕಣ್ಣ ಸೆಳೆವಾ ಬೆಳ್ಳಿ ಬಂಗಾರ
ಅನುದಿನವೂ ಮಿಂಚಿ ಹೊಳೆವಾ ಸೊಬಗು ಸಿಂಗಾರ
ಒಳಮನಸು ಸಾರಿ ಹೇಳಿದೆ ಸುಖವೇ ಸುಂದರ
ಒಂದೆಡೆ ಮಿನುಗುವ ಸಿರಿತನ ಬೇರೆಡೆ ನೋವಿನ ಬಡತನ
ಬಡತನದಲ್ಲಿ ತಾಳ್ಮೆ ಬೆಳಗೋ ಮೌನ ಬಂಗಾರ
ಎಡ ಬಲದಲ್ಲಿ ಜಾಣ್ಮೆ ಕಲಿತು ಗುಣವೇ ಸಿಂಗಾರ
ಹಗಲಿರುಳೂ ತುಂಬಿ ನಿಂತ ಶ್ರದ್ಧೆ ಸಾಗರ
ಅಂತರಂಗ ಹರಡಿದೆ ನಗೆಯಾ ಹಂದರಾ
ಒಂದೆಡೆ ಮಿನುಗುವ ಸಿರಿತನ ಬೇರೆಡೆ ನೋವಿನ ಬಡತನ
ಸಿರಿತನದಲ್ಲಿ ಸ್ವರ್ಗ ಅರಳಿದೆ ಎಳೆಯ ಮೇಲೆ
ಮೈಯ ಮಾಟಕೆ ಮೋಜು ಮೋಜಿನಾ ಉಡುಗೆಯಾ ನೆಲೆ
ಅಂಗಡಿ ತುಂಬಾ ರಂಗು ರಂಗಿನ ನೂರಾರು ಸೀರೆ
ಏನು ಪಡೆಯಲಿ ಏನು ಬಿಡಲಿ ಒಂದು ಆರಿಸಲಾರೆ
ಒಳಮನಸು ಸಾರಿ ಹೇಳಿದೆ ಸುಖವೇ ಸುಂದರ
ಒಂದೆಡೆ ಮಿನುಗುವ ಸಿರಿತನ ಬೇರೆಡೆ ನೋವಿನ ಬಡತನ
ಬಡತನದಲಿ ಉಡಲು ಒಗೆಯಲು ಇರುವುದೊಂದೇ ಸೀರೆ
ಸುಖವಾ ಪಡೆಯಲು ಗಂಜಿಯೊಂದೇ ಬದುಕಿಗೆ ಆಸರೇ
ಒಂದೆಡೆ ಮಿನುಗುವ ಸಿರಿತನ ಬೇರೆಡೆ ನೋವಿನ ಬಡತನ
ಯಾವೆಡೆ ನಡೆದರೆ ಚನ್ನ ಬಯಸಲಿ ನಾನು ಏನನ್ನ ಒಂದೆಡೆ ಮಿನುಗುವ ಸಿರಿತನ
--------------------------------------------------------------------------------------------------------------------------
No comments:
Post a Comment