276. ಆಟೋ ರಾಜ(1980)


ಆಟೋ ರಾಜ ಚಿತ್ರದ ಹಾಡುಗಳು 
  1. ನಲಿವ ಗುಲಾಬಿ ಹೂವೆ ಮುಗಿಲಾ ಮೇಲೇರಿ ನಗುವೆ
  2. ಹೊಸ ಬಾಳು ನಿನ್ನಿಂದ, ನೀ ತಂದೆ ಆನಂದ
  3. ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ
  4. ಪರಮಾತ್ಮ ಆಡಿಸಿದಂತೆ ಆಡುವೇ ನಾನೂ 
ಆಟೋ ರಾಜ (1980) - ನಲಿವ ಗುಲಾಬಿ ಹೂವೆ
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ :  ಚಿ. ಉದಯಶಂಕರ್  ಗಾಯನ: ಎಸ್.ಪಿ. ಬಾಲಸುಬ್ರಮಣ್ಯಂ


ನಲಿವ ಗುಲಾಬಿ ಹೂವೆ ಮುಗಿಲಾ ಮೇಲೇರಿ ನಗುವೆ
ನಿನಗೆ ನನ್ನಲ್ಲಿ ಒಲವು ಅರಿಯೆ ನನ್ನಲ್ಲಿ ಛಲವೋ
ನಲಿವ ಗುಲಾಬಿ ಹೂವೆ
ಒಲವೋ ಛಲವೋ ಒಲವೋ ಛಲವೋ

ಸುಳಿದೆ ತಂಗಾಳಿಯಂತೆ ನುಡಿದೆ ಸಂಗೀತದಂತೆ
ಒಲವಿನ ಬಲೆಯಲಿ ಸೆಳೆಯುತ ಕುಣಿದೆ  ಸೊಗಸಾಗಿ ಹಿತವಾಗಿ
ಮನವ ನೀ ಸೇರಲೆಂದೆ ಬಯಕೆ ನೂರಾರು ತಂದೆ
ಬಯಸದೆ ಬಳಿಯಲಿ ಸುಳಿಯುತ ಒಲಿದೆ ಇಂದೇಕೆ ದೂರಾದೆ
ಬಯಸದೆ ಬಳಿಯಲಿ ಸುಳಿಯುತ ಒಲಿದೆ
ಇಂದೇಕೆ ದೂರಾದೆ ಹೀಗೇಕೆ ಮರೆಯಾದೆ

ಸುಮವೇ ನೀ ಬಾಡದಂತೆ ಬಿಸಿಲಾ ನೀ ನೋಡದಂತೆ
ನೆರಳಲಿ ಸುಖದಲಿ ನಗುತಿರು ಚೆಲುವೆ
ಎಂದೆಂದು ಎಂದೆಂದು
ಇರು ನೀ ಹಾಯಾಗಿ ಹೀಗೆ ಇರಲಿ ನನಗೆಲ್ಲ ಬೇಗೆ
ಕನಸಲಿ ನೋಡಿದ ಸಿರಿಯನು ಮರೆವೆ ನಿನಗಾಗಿ ನನಗಾಗಿ
ಕನಸಲಿ ನೋಡಿದ ಸಿರಿಯನು ಮರೆವೆ ನಿನಗಾಗಿ ನನಗಾಗಿ
ನಿನಗಾಗಿ ನನಗಾಗಿ
---------------------------------------------------------------------------------------------------------------------

ಆಟೋ ರಾಜ(1980) - ಹೊಸ ಬಾಳು ನಿನ್ನಿಂದ 
ಸಾಹಿತ್ಯ: ಚಿ. ಉದಯಶಂಕರ್   ಸಂಗೀತ: ರಾಜನ್-ನಾಗೇಂದ್ರ  ಗಾಯನ: ಎಸ್. ಜಾನಕಿ


ಹೊಸ ಬಾಳು.... ನಿನ್ನಿಂದ
ಹೊಸ ಬಾಳು ನಿನ್ನಿಂದ, ನೀ ತಂದೆ ಆನಂದ ನಿನ್ನ ನಾ ನೋಡಲು, ನಿನ್ನ ನಾ ಸೇರಲು
ತನುವು ಹೂವಾಯ್ತು, ಮನವು ಜೇನಾಯ್ತು
ತನುವು ಹೂವಾಯ್ತು, ಮನವು ಜೇನಾಯ್ತು
ಹೊಸ ಬಾಳು ನಿನ್ನಿಂದ, ನೀ ತಂದೆ ಆನಂದ
ನಿನ್ನ ನಾ ನೋಡಲು, ನಿನ್ನ ನಾ ಸೇರಲು

ನಿನ್ನ ನಾ ಮೆಚ್ಚಿ, ನನ್ನ ನೀ ಮೆಚ್ಚಿ ಪ್ರೀತಿಯಿಂದ ಮನಸು ಬಿಚ್ಚಿ ಮಾತನಾಡಿ
ನೀನೆ ನನ್ ಜೋಡಿ, ಎಂದು ಕೈ ನೀಡಿ, ಸಂಗಾತಿಯಾದೆನು
ನಿನ್ನ ಸ್ನೇಹಕ್ಕೆ, ನಿನ್ನ ಪ್ರೇಮಕ್ಕೆ ಎಂದೋ ನಾನು ಸೋತು ಹೋದೆ ಮುದ್ದು ನಲ್ಲ
ನಿನ್ನ ಮಾತಲ್ಲಿ, ಕಣ್ಣ ಮಿಂಚಲ್ಲಿ, ನೀರಾಗಿ ಹೋದೆನು...
ನೀರಾಗಿ ಹೋದೆನು
ಹೊಸ ಬಾಳು ನಿನ್ನಿಂದ, ನೀ ತಂದೆ ಆನಂದ ನಿನ್ನ ನಾ ನೋಡಲು, ನಿನ್ನ ನಾ ಸೇರಲು

ಲಾಲಾಲಲಾ ಲಾಲಾಲಲಾ ಲಾಲಾಲಲಾ
ನೋಟ ಒಂದಾಗಿ, ಆಸೆ ಒಂದಾಗಿ ನಿನ್ನ ನನ್ನ ಮನಸು ಮನಸು ಬೆರೆತು ಹೋಗಿ
ಬಯಕೆ ಹೋವಾಗಿ, ಪ್ರೀತಿ ಹಣ್ಣಾಗಿ, ಒಂದಾಗಿ ಹೋದೆವು
ಮಾತು ಬಂಗಾರ, ಗುಣವು ಬಂಗಾರ ನನ್ನ ರಾಜ ನನ್ನ ಬಾಳ ಬಂಗಾರ
ನೀನು ನನ್ನಂತೆ ನಾನು ನಿನ್ನಂತೆ, ನೀ ನನ್ನ ಜೀವವು...
ನೀ ನನ್ನ ಜೀವವು
ಹೊಸ ಬಾಳು... ನಿನ್ನಿಂದ
ಹೊಸ ಬಾಳು ನಿನ್ನಿಂದ, ನೀ ತಂದೆ ಆನಂದ ನಿನ್ನ ನಾ ನೋಡಲು, ಓ... ನಿನ್ನ ನಾ ಸೇರಲು
ಲಾಲಾಲಲಾ ಲಾಲಾಲಲಾ ಲಾಲಾಲಲಾ
-------------------------------------------------------------------------------------------------------------------

ಆಟೋ ರಾಜ (1980) - ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ
ಸಾಹಿತ್ಯ: ಚಿ.ಉದಯಶಂಕರ್  ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಸ್.ಪಿ.ಬಿ, ಎಸ್.ಜಾನಕಿ


ಹೆಣ್ಣು : ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ
          ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ ಮನವನು ಸೇರಿದೆ, ಸಂತೋಷ ತುಂಬಿದೆ
ಗಂಡು : ಆಆಆ... ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ
            ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ ಮನವನು ಸೇರಿದೆ, ಸಂತೋಷ ತುಂಬಿದೆ
            ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ

ಹೆಣ್ಣು : ಕನಸುಗಳು ಸವಿಗನಸುಗಳು, ನಿನ್ನಿಂದ ನನಸಾಗಿದೆ
         ನಿನ್ನಾ ಜೊತೆ ಸೇರಿ, ಸುಖವೇನೊ ನಾ ಕಂಡೆ ಇಂದೆ
ಗಂಡು : ಮಾತುಗಳು ಸವಿಮಾತುಗಳು, ಮುತ್ತಂತೆ ಸೊಗಸಾಗಿದೆ
           ನಿನ್ನಾ ಜೊತೆ ಸೇರಿ, ಒಲವೇನೊ ನಾ ಕಂಡೆ ಇಂದೆ
ಹೆಣ್ಣು : ಓ ಗೆಳೆಯ ನನ್ನಿನಿಯ ನಿನ್ನಾಸೆ ನನ್ನಾಸೆ ಒಂದೇನೆ ಇನ್ನೆಂದಿಗೂ ಓಓಓಓ
ಗಂಡು : ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ
            ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ
ಹೆಣ್ಣು : ಮನವನು ಸೇರಿದೆ, ಸಂತೋಷ ತುಂಬಿದೆ
          ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ

ಗಂಡು : ಕಣ್ಣಿನಲಿ ಕಣ್ಣ ಮಿಂಚಿನಲಿ, ಈ ಜೀವ ತೇಲಾಡಿದೆ
           ಹೀಗೇ ಇರುವಾಸೆ, ಹೂವಲ್ಲಿ ನಾ ದುಂಬಿಯಂತೆ
ಹೆಣ್ಣು : ಸ್ನೇಹದಲಿ ನಿನ್ನ ಮೋಹದಲಿ, ನನಗಿಂದು ಹಿತವಾಗಿದೆ
          ಹೀಗೇ ಇರುವಾಸೆ, ಹಾಯಾಗಿ ಮರೆತೆಲ್ಲ ಚಿಂತೆ
ಗಂಡು : ಓ ಗೆಳತಿ ನನ್ನರಸಿ ನೀ ನಂಬು ಎಂದೆಂದು ನಾ ನಿನ್ನ ಬಿಡಲಾರೆನು.. ಆಆಆ...
ಹೆಣ್ಣು : ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ
          ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ
ಗಂಡು : ಮನವನು ಸೇರಿದೆ, ಸಂತೋಷ ತುಂಬಿದೆ
           ಲಾಲಾಲಾಲಾ ಲಾಲಾಲಾಲಾ ಲಾಲಾಲಾಲಾ
--------------------------------------------------------------------------------------------------------------------------

ಆಟೋ ರಾಜ (1980) - ಪರಮಾತ್ಮ ಆಡಿಸಿದಂತೇ ಆಡುವೇ ನಾನು
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ : ಚಿ. ಉದಯಶಂಕರ್ ಗಾಯನ: ಎಸ್.ಪಿ.ಬಿ, ರಮಣಿ 


ಗಂಡು : ಪರಮಾತ್ಮ ಆಡಿಸಿದಂತೇ ಆಡುವೇ ನಾನು 
ಹೆಣ್ಣು : ಪರಮಾತ್ಮ ಆಡಿಸಿದಂತೇ ಆಡುವೇ ನಾನು 
ಗಂಡು : ಪರಮಾತ್ಮ ಕೇಳಿಸಿದಂತೇ ಹೇಳುವೇ ನೀನೂ 
ಹೆಣ್ಣು : ಪರಮಾತ್ಮ ಹೇಳಿಸಿದಂತೇ ಹೇಳುವೇ ನೀನೂ 
ಗಂಡು : ಅಳು ಎಂದರೇ ಅಳಬೇಕೂ 
ಹೆಣ್ಣು : ಅಳು ಎಂದರೇ ಅಳಬೇಕೂ 
ಗಂಡು : ಹಹ್ಹಹ್ಹಹ್ಹ...  ಹಹ್ಹಹ್ಹಹ್ಹ...  ನಗು ಎಂದರೇ ನಗಬೇಕೂ 
ಹೆಣ್ಣು :  ನಗು ಎಂದರೇ ನಗಬೇಕೂ
ಗಂಡು : ಅಯ್ಯಯ್ಯೋ.. ಅಯ್ಯಯ್ಯೋ.. ಅಯ್ಯಯ್ಯೋ.. 
ಹೆಣ್ಣು :  ಅಯ್ಯಯ್ಯೋ.. ಅಯ್ಯಯ್ಯೋ.. ಅಯ್ಯಯ್ಯೋ.. 
ಗಂಡು : ಎದುರು ಇರುವ ಈ ಹುಚ್ಚು ದೆವ್ವ ಕುಣಿ ಎಂದರೇ ಕುಣಿಬೇಕು 
ಹೆಣ್ಣು : ಎದುರು ಇರುವ ಈ ಹುಚ್ಚು ದೆವ್ವ ಕುಣಿ ಎಂದರೇ ಕುಣಿಬೇಕು 
ಗಂಡು :  ಥೈಯ್ಯ ತಕ್ಕ ಝುಮ್ಮ ತಕ್ಕ 
ಹೆಣ್ಣು :  ಥೈಯ್ಯ ತಕ್ಕ ಝುಮ್ಮ ತಕ್ಕ 
ಗಂಡು : ತಕಿಟ ತಕಧಿಮ್ಮಿ ತಕಿಟ ತಕಧಿಮ್ಮಿ 
ಹೆಣ್ಣು : ತಕಿಟ ತಕಧಿಮ್ಮಿ ತಕಿಟ ತಕಧಿಮ್ಮಿ
ಗಂಡು : ತತ್ತಳಂಗೂ ತತ್ತಳಂಗೂ  ಥಾ ಧಿತ್ತಳಂಗು ಧಿತ್ತಳಂಗು ಥೈ
ಹೆಣ್ಣು :  ತತ್ತಳಂಗೂ ತತ್ತಳಂಗೂ  ಥಾ ಧಿತ್ತಳಂಗು ಧಿತ್ತಳಂಗು ಥೈ 
ಗಂಡು : ತಾಳಂಗು ತಧಿಕಿಟ ತೊಂ 
ಹೆಣ್ಣು :  ತಾಳಂಗು ತಧಿಕಿಟ ತೊಂ 
ಗಂಡು : ಯಾರು ಯಾರು ನೀ ಯಾರು ಎಲ್ಲಿಂದ ಬಂದೆ ಯಾವೂರು 
            ಸರಿಯಾದ ಜನರು ಇಲ್ಲೆಂದೂ ಬರರು ಬಂದವರು ಹೋಗಲಾರ್ರು 
            ಸನಿದಪ ಮಗರಿಸ 
ಹೆಣ್ಣು : ನೋಡೋ ನೋಡೋಲೋ ಕುಳ್ಳ ನನ್ನ ಕೆಣಕಬೇಡವೋ ಕಳ್ಳ 
          ಚಿಲಕ ಹಾಕಿದೆ ಬಿಗ ಬಡಿದಿದೆ ಬಿಡಿಸು ಬಾರೋ ನೀ ಬೇಗ 
           ಮದುವೆಯಾಗು ನನ್ನ ಈಗ
ಗಂಡು : ಗಂಡು ಒಂದು ಕಡೆ ಹೆಣ್ಣು ಒಂದು ಕಡೆ ಮದುವೆಯಾಗುವುದು ಯಾವ ಕಡೇ
           ಅಯ್ಯೋ ಇವಳಿಂದಲೇ ತಡೆ ಅಯ್ಯಯ್ಯೋ ಬಿಡೇ
ಡಾಕ್ಟರ್ : ಏ.. ಹುಚ್ಚ ಹುಚ್ಚಾಗ ಆಡ್ಬೇಡಾ
ಕುಳ್ಳ : ಹುಚ್ಚಾದರೇನು ಶಿವಾ
ಹುಚ್ಚರು: ಪೆಚ್ಚರಾದರೇನು ಶಿವಾ
             ಜಗವೆಲ್ಲಾ ಹುಚ್ಚರೇ ಶಿವಾ ಎಲ್ಲಾ ನಮ್ಮಂತೇ ಶಿವಾ  ಇವರೆಲ್ಲಾ ನಮ್ಮಂತೆ ಶಿವಾ
ಗಂಡು : ಮಹಡಿಯಲ್ಲಿದ್ದರೇನು ಗುಡಿಸಲಲಿದ್ದರೇನು ಎಲ್ಲರೂ ನಮ್ಮಂತೇ ಹುಚ್ಚರಾಗಿ ಹಾಡಲು ಸಾಧ್ಯವೇನೂ
            ಹಣದಾ ಹುಚ್ಚನಿವನೂ ಹುಡುಗಿ ಹುಚ್ಚನಿವನು ಹುಚ್ಚರ ನಾಯಕೆನೇ ಇವ ಓ.. ಶಿವಾ
            ಹುಚ್ಚಾದರೇನು ಶಿವಾ ಪೆಚ್ಚರಾದರೇನು ಶಿವಾ ಜಗವೆಲ್ಲಾ ಹುಚ್ಚರೇ ಶಿವಾ
            ಎಲ್ಲಾ ನಮ್ಮಂತೇ ಶಿವಾ  ಇವರೆಲ್ಲಾ ನಮ್ಮಂತೆ ಶಿವಾ
--------------------------------------------------------------------------------------------------------------------------

No comments:

Post a Comment