277. ಶೃಂಗಾರ ಕಾವ್ಯ (1993)


ಶೃಂಗಾರ ಕಾವ್ಯ ಚಿತ್ರದ ಹಾಡುಗಳು
  1. ಹೊಸ ಗಾಳಿ ಹೊಸ ಗಂಧ ಹೊಸತನ ಬೀರಿ ಬೀಸಿದೆ
  2. ಕನ್ನಡ ಗಂಗೆಯಲಿ ಮೀಯುವೆ ನಾನೀಗ, ಮೀಯುವೆ ನಾನೀಗ
  3. ಶೃಂಗಾರ ಕಾವ್ಯ ಬರೆದನು ಸಂಗೀತ ಸಾರ ಸುರಿದನು
  4. ಓ ಮೇಘವೆ ಮೇಘವೆ ಹೋಗಿ ಬಾ ಈ ಓಲೆಯ ಅವಳಿಗೆ ನೀಡಿ ಬಾ
  5. ಜೀವನವೆಲ್ಲವೂ ನಾ ಹಾಡುವೆ,ಹಾಡಿನ ಮಡಿಲಲಿ ನಾ ಬಾಳುವೆ
  6. ಯಾರು ನೋಡರೂ ಯಾರು ಕೇಳರು 
ಶೃಂಗಾರ ಕಾವ್ಯ (1993) - ಹೊಸ ಗಾಳಿ ಹೊಸ ಗಂಧ ಹೊಸತನ ಬೀರಿ ಬೀಸಿದೆ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಎಸ್.ಪಿ.ಬಿ., ಚಿತ್ರಾ


ಹೆಣ್ಣು : ಹೊಸ ಗಾಳಿ ಹೊಸ ಗಂಧ ಹೊಸತನ ಬೀರಿ ಬೀಸಿದೆ
          ಹೊಸಗಾನ ಹೊಸಮೇಳ ಅಭಿತನ ಕೋರಿ ಹಾಡಿದೆ
ಗಂಡು : ಹೊಸ ಗಾಳಿ ಹೊಸ ಗಂಧ ಹೊಸತನ ಬೀರಿ ಬೀಸಿದೆ
           ಹೊಸಗಾನ ಹೊಸಮೇಳ ಅಭಿತನ ಕೋರಿ ಹಾಡಿದೆ
ಹೆಣ್ಣು : ನವ ಚೈತ್ರ ನವ ತರುಣ          ಗಂಡು : ನವ ಚೈತ್ರ ನವ ತರುಣ
ಹೆಣ್ಣು :  ಬದುಕಿನ ತುಂಬ ತುಂಬಿದೆ
           ಅಂಬರ ಚುಂಬಿತ ಅಂಬರ ಚುಂಬಿತ
           ಅಂಬರ ಚುಂಬಿತ ಪ್ರೇಮ ಪ್ರೇಮ ನಿರ್ಮಲ ಮನಸಿನ ಕಾವ್ಯ ನಾಮ
          ಇದು ಕವಿ ವಾಣಿಯೊ ಇದು ಋಷಿ ವಾಣಿಯೊ ಇದು ಅನುರಾಗದನುಭಾವವೋ...
ಗಂಡು : ಅಂಬರ ಚುಂಬಿತ ಪ್ರೇಮ ಪ್ರೇಮ ನಿರ್ಮಲ ಮನಸಿನ ಕಾವ್ಯ ನಾಮ
           ಇದು ಕವಿ ವಾಣಿಯೊ ಇದು ಋಷಿ ವಾಣಿಯೊ  ಓ.. ಓ.. ಓ.. ಓ.. ಓ.. ಓ..

ಹೆಣ್ಣು : ಹೊಸ ದಾಹ ಹೊಸ ಮೋಹ ಗರಿಗರಿ ಬೀರಿ ಹಾಡಿದೆ
          ಹೊಸ ಮೈತ್ರಿ ಹೊಸ ಬೆಸುಗೆ ಕಲರವಮಾಡಿ ಕಾಡಿದೆ
ಗಂಡು : ಹೊಸ ದಾಹ ಹೊಸ ಮೋಹ ಗರಿಗರಿ ಬೀರಿ ಹಾಡಿದೆ
            ಹೊಸ ಮೈತ್ರಿ ಹೊಸ ಬೆಸುಗೆ ಕಲರವಮಾಡಿ ಕಾಡಿದೆ
ಹೆಣ್ಣು : ಹೊಸ ಮಾತು ಹೊಸ ಮುತ್ತು          ಗಂಡು : ಹೊಸ ಮಾತು ಹೊಸ ಮುತ್ತು
ಹೆಣ್ಣು : ಬದುಕಿನ ತುಂಬ ತುಂಬಿದೆ
ಗಂಡು : ಅಂಬರ ಚುಂಬಿತ ಅಂಬರ ಚುಂಬಿತ
           ಅಂಬರ ಚುಂಬಿತ ಪ್ರೇಮ ಪ್ರೇಮ ನಿರ್ಮಲ ಮನಸಿನ ಕಾವ್ಯ ನಾಮ
           ಇದು ಕವಿ ವಾಣಿಯೊ ಇದು ಋಷಿ ವಾಣಿಯೊ ಇದು ಅನುರಾಗದನುಭಾವವೋ
ಹೆಣ್ಣು : ಅಂಬರ ಚುಂಬಿತ ಪ್ರೇಮ ಪ್ರೇಮ ನಿರ್ಮಲ ಮನಸಿನ ಕಾವ್ಯ ನಾಮ
          ಇದು ಕವಿ ವಾಣಿಯೊ ಇದು ಋಷಿ ವಾಣಿಯೊ

ಹೆಣ್ಣು  : ಹೊಸ ಧೈರ್ಯ ಹೊಸ ಹುರುಪು ಝರಿಝರಿಯಾಗಿ ಓಡಿದೆ
            ಹೊಸ ನೋಟ ಹೊಸ ಪಾಠ ಹಸಿಹಸಿರಾಗಿ ಮೂಡಿದೆ
ಗಂಡು : ಹೊಸ ಧೈರ್ಯ ಹೊಸ ಹುರುಪು ಝರಿಝರಿಯಾಗಿ ಓಡಿದೆ
           ಹೊಸ ನೋಟ ಹೊಸ ಪಾಠ ಹಸಿಹಸಿರಾಗಿ ಮೂಡಿದೆ
ಹೆಣ್ಣು : ಹೊಸದೆಲ್ಲ ಸವಿ ಬೆಲ್ಲ                    ಗಂಡು : ಹೊಸದೆಲ್ಲ ಸವಿ ಬೆಲ್ಲ
ಹೆಣ್ಣು : ಬದುಕಿನ ತುಂಬ ಸೇರಿದೆ
          ಅಂಬರ ಚುಂಬಿತ ಅಂಬರ ಚುಂಬಿತ
         ಅಂಬರ ಚುಂಬಿತ ಪ್ರೇಮ ಪ್ರೇಮ ನಿರ್ಮಲ ಮನಸಿನ ಕಾವ್ಯ ನಾಮ
         ಇದು ಕವಿ ವಾಣಿಯೊ ಇದು ಋಷಿ ವಾಣಿಯೊ ಇದು ಅನುರಾಗದನುಭಾವವೋ
ಗಂಡು : ಅಂಬರ ಚುಂಬಿತ ಪ್ರೇಮ ಪ್ರೇಮ ನಿರ್ಮಲ ಮನಸಿನ ಕಾವ್ಯ ನಾಮ
            ಇದು ಕವಿ ವಾಣಿಯೊ ಇದು ಋಷಿ ವಾಣಿಯೊ
-------------------------------------------------------------------------------------------------------------------------

ಶೃಂಗಾರ ಕಾವ್ಯ (1993) - ಕನ್ನಡ ಗಂಗೆಯಲಿ ಮೀಯುವೆ ನಾನೀಗ, ಮೀಯುವೆ ನಾನೀಗ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಎಸ್.ಪಿ.ಬಿ.


ಕನ್ನಡ ಗಂಗೆಯಲಿ ಮೀಯುವೆ ನಾನೀಗ, ಮೀಯುವೆ ನಾನೀಗ
ಕನ್ನಡ ಗಂಗೆಯಲಿ ಮೀಯುವೆ ನಾನೀಗ, ಮೀಯುವೆ ನಾನೀಗ
ಗಂಧದ ಕಂಪಿನಲಿ, ಹಾಡುವೆ ನಾನೀಗ, ಹಾಡುವೆ ನಾನೀಗ
ಜೀವನ ಗಾಯನ ಪಾವನವೊ, ದೇವರ ವರದಿಂದ...
ಕನ್ನಡ ಗಂಗೆಯಲಿ ಮೀಯುವೆ ನಾನೀಗ, ಮೀಯುವೆ ನಾನೀಗ

ಒಲವಿನ ಶೃತಿಯಿರಲು, ಮನಬಯಸಿದ ಸತಿಯಿರಲು
ಸರಳತೆ ಸವಿಯಿರಲು, ನಿಜ ಗೆಳೆಯರು ಜೊತೆಯಿರಲು
ಸ್ವರ್ಗದ ಕನಸೇತಕೆ, ಮುಕ್ತಿಯ ಭ್ರಮೆಯೇತಕೆ, ಬದುಕಿಗೇ...
ಹೊನ್ನಿನ ಹೊರೆಯೇತಕೆ, ಕೀರ್ತಿಯ ಸೆರೆಯೇತಕೆ, ಬದುಕಿಗೇ....
ಸುಂದರ ಸಂಸಾರ ಸವಿ ಸಾಲದೆ
ಕನ್ನಡ ಗಂಗೆಯಲಿ ಮೀಯುವೆ ನಾನೀಗ, ಮೀಯುವೆ ನಾನೀಗ
ಗಂಧದ ಕಂಪಿನಲಿ, ಹಾಡುವೆ ನಾನೀಗ, ಹಾಡುವೆ ನಾನೀಗ
ಜೀವನ ಗಾಯನ ಪಾವನವೊ, ದೇವರ ವರದಿಂದ.....
ಕನ್ನಡ ಗಂಗೆಯಲಿ ಮೀಯುವೆ ನಾನೀಗ, ಮೀಯುವೆ ನಾನೀಗ

ಕಲೆಗಳ ತವರಿರಲು, ಕವಿ ಋಷಿಗಳ ಬಲವಿರಲು
ಕಲಿಕೆಯ ಕಡಲಿರಲು, ಗುರಿತಲುಪಿಸೊ ಹಡಗಿರಲು
ನಿತ್ಯವು ಹೊಸ ಸಾಧನೆ, ಸತ್ಯವೆ ಆಲೋಚನೆ, ಬದುಕಿಗೇ....
ಸ್ನೇಹವೆ ಸಹಚಾರಿಯೋ, ಪ್ರೇಮವೇ ಸಹಪಾಠಿಯೋ, ಬದುಕಿಗೇ.....
ಸುಂದರ ಸಂಸಾರ ಸವಿ ಸಾಲದೆ
ಕನ್ನಡ ಗಂಗೆಯಲಿ ಮೀಯುವೆ ನಾನೀಗ, ಮೀಯುವೆ ನಾನೀಗ
ಗಂಧದ ಕಂಪಿನಲಿ, ಹಾಡುವೆ ನಾನೀಗ, ಹಾಡುವೆ ನಾನೀಗ
ಜೀವನ ಗಾಯನ ಪಾವನವೊ, ದೇವರ ವರದಿಂದ.....
ಕನ್ನಡ ಗಂಗೆಯಲಿ ಮೀಯುವೆ ನಾನೀಗ, ಮೀಯುವೆ ನಾನೀಗ
--------------------------------------------------------------------------------------------------------------------

ಶೃಂಗಾರ ಕಾವ್ಯ (1993) - ಶೃಂಗಾರ ಕಾವ್ಯ ಬರೆದನು ಸಂಗೀತ ಸಾರ ಸುರಿದನು
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಎಲ್.ಏನ್.ಶಾಸ್ತ್ರಿ 


ಶೃಂಗಾರ ಕಾವ್ಯ ಬರೆದನು ಸಂಗೀತ ಸಾರ ಸುರಿದನು
ಶೃಂಗಾರ ಕಾವ್ಯ ಬರೆದನು ಸಂಗೀತ ಸಾರ ಸುರಿದನು
ಉಸಿರಾ ಹಿಡಿದಾ ತಂತಿ ಕಡಿದ ಇನ್ನು ಮೌನ ಗಾನವೆ
ಶೃಂಗಾರ ಕಾವ್ಯ ಬರೆದನು ಸಂಗೀತ ಸಾರ ಸುರಿದನು

ಕಲೆಗಾರ ಕಡೆದು ಕರುಬಿದ ಕಥೆಗಾರ ಕಥೆಯ ಕೆಡಿಸಿದ
ಹೊಣೆಗಾರ ಹರಸಿ ಹಲುಬಿದ ಬೆಳೆಗಾರ ಬರವ ಬರಿಸಿದ
ಕನಸು ಸುರಿದಾ ಕಣ್ಣೇ ತೆಗೆದ ಇನ್ನು ಶೂನ್ಯ ಗಾನವೇ
ಶೃಂಗಾರ ಕಾವ್ಯ ಬರೆದನು ಸಂಗೀತ ಸಾರ ಸುರಿದನು
ಉಸಿರಾ ಹಿಡಿದಾ ತಂತಿ ಕಡಿದ ಇನ್ನು ಮೌನ ಗಾನವೆ
ಶೃಂಗಾರ ಕಾವ್ಯ ಬರೆದನು ಸಂಗೀತ ಸಾರ ಸುರಿದನು

ಹೆಣ್ಣು : ಲಲಲಲಲಾ ಲಲಲಾಲಾ ಲಲ್ಲಲ್ಲಲ್ಲಲಾ
ಗಂಡು : ವರವಾಗಿ ಒಲವ ತಂದನು ಮರವಾಗೊ ಗಿಡವ ಕಡಿದನು
           ಶುಭವಾಗಲೆಂದು ನುಡಿದನು ಸುಖಕಾಣುವಾಗ ಮುನಿದನು
           ಜಯವ ತಡೆದ ಭಯವ ಸುರಿದ ಇನ್ನು ಶೋಕ ಗಾನವೇ
          ಶೃಂಗಾರ ಕಾವ್ಯ ಬರೆದನು ಸಂಗೀತ ಸಾರ ಸುರಿದನು
         ಉಸಿರಾ ಹಿಡಿದಾ ತಂತಿ ಕಡಿದ ಇನ್ನು ಮೌನ ಗಾನವೆ
         ಶೃಂಗಾರ ಕಾವ್ಯ ಬರೆದನು ಸಂಗೀತ ಸಾರ ಸುರಿದನು
------------------------------------------------------------------------------------------------------------------------

ಶೃಂಗಾರ ಕಾವ್ಯ (೧೯೯೩) - ಓ ಮೇಘವೆ ಮೇಘವೆ ಹೋಗಿ ಬಾ ಈ ಓಲೆಯ ಅವಳಿಗೆ ನೀಡಿ ಬಾ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಹಿನ್ನೆಲೆ ಗಾಯನ: ಎಸ್ ಪಿ ಬಿ , ಚಿತ್ರ


ಗಂಡು : ಓಹೊಹೊ ಓಹೊ ...ಓಹೊಹೊ ಓಹೊ ಅಹಹಾ ಹಹ ಅಹಹಾ ಹಹ
ಹೆಣ್ಣು : ಓಹೊಹೊ ಓಹೊ ...ಓಹೊಹೊ ಓಹೊ ಅಹಹಾ ಹಹ ಅಹಹಾ ಹಹ
ಗಂಡು : ಓ ಮೇಘವೆ ಮೇಘವೆ ಹೋಗಿ ಬಾ ಈ ಓಲೆಯ ಅವಳಿಗೆ ನೀಡಿ ಬಾ
           ನಾ ಹೋಗಲು ಮಾತಾಡಲು ಈ ನಾಚಿಕೆ ಅಂಜಿಕೆ ಮುಂದಿದೆ
ಹೆಣ್ಣು : ಓ ಮೇಘವೆ ಮೇಘವೆ ಹೋಗಿ ಬಾ ಈ ಓಲೆಯ ಅವನಿಗೆ ನೀಡಿ ಬಾ
          ನಾ ಹೋಗಲು ಮಾತಾಡಲು ಈ ನಾಚಿಕೆ ಅಂಜಿಕೆ ಮುಂದಿದೆ..
ಗಂಡು : ಓ ಮೇಘವೆ ಮೇಘವೆ ಹೋಗಿ ಬಾ ಈ ಓಲೆಯ ಅವಳಿಗೆ ನೀಡಿ ಬಾ

ಗಂಡು : ಮುಗಿಲ ಬಾನಗಲ ಓಲೆಯಲಿ ಹೃದಯ ಇಡುವೆ ನೀಡಿರುವೆ ಓ ಗೆಳತಿ ಓದುವೆಯ
ಹೆಣ್ಣು : ಮುಗಿಲ ಬಾನಗಳ ಓಲೆಯಲಿ ಹೃದಯ ಇಡುವೆ ನೀಡಿರುವೆ ಓ ಗೆಳೆಯ ಓದುವೆಯ
ಗಂಡು : ಈ ಬೆಳ್ಳನೆ ಓಲೆಯ ಹೇಗೆ ನಾ ಓದಲಿ
ಹೆಣ್ಣು : ಇದು ಓದೋ ಓಲೆಯಲ್ಲ ಬರೆದುಕೊ ನನ್ನ ಜೀವ ನಿನ್ನದೆ ಎಂದುಕೋ
         ನಿನ್ನ ಮನದ ಮನೆಗೆ ತಂದುಕೋ
ಗಂಡು : ಈ ಕಂಗಳ ಮುಂಬಾಗಿಲ ಬಾ ತೆರೆಯುವೆ ಬಂದು ನೀ ಸೇರಿಕೋ
           ಓ ಮೇಘವೇ ಮೇಘವೆ ವಂದನೆ ಸಂಧಾನದ ಪಾತ್ರಕೆ ವಂದನೆ

ಹೆಣ್ಣು : ಮುಗಿಲೆ ಬೆಳ್ಮುಗಿಲೆ ತಂಬೆಲರೆ ತಳಿರೆ ಹಗಲೇ ಹಗಲಿರುಳೆ ನಿನ್ನೆದುರು ನಾವೊಬ್ಬರೆ
ಗಂಡು : ವನವೇ ಕಾನನವೇ ಹೂಬನವೇ ಹಸಿರೇ ಗಿರಿಯೇ ನೀರ್ಝರಿಯೇ ನಮ್ಮೊಳಗೇ ನಿನ್ನುಸಿರೇ
ಹೆಣ್ಣು : ಈ ಒಲವಿನ ಕಣ್ಣಲಿ ಸರ್ವವೂ ಸುಂದರ
ಗಂಡು : ಇಲ್ಲಿ ಬಾನು ಭೂಮಿಗಿಲ್ಲ ಅಂತರ ನಾನು ನೀನು ಇಲ್ಲ ನಮ್ಮಲಿ ಒಂದೇ ಜೀವ ಜೋಡಿ ಒಡಲಲಿ
ಹೆಣ್ಣು : ಈ ಕಂಗಳ ಮುಂಬಾಗಿಲ ಬಾ ತೆರೆಯುವೆ ಬಂದು ನೀ ಸೇರಿಕೋ
          ಓ ಮೇಘವೇ ಮೇಘವೆ ವಂದನೆ ಸಂಧಾನದ ಪಾತ್ರಕೆ ವಂದನೆ
ಗಂಡು : ಈ ಕಂಗಳ ಮುಂಬಾಗಿಲ ಬಾ ತೆರೆಯುವೆ ಬಂದು ನೀ ಸೇರಿಕೋ
ಹೆಣ್ಣು :   ಓ ಮೇಘವೇ ಮೇಘವೆ ವಂದನೆ
ಗಂಡು : ಸಂಧಾನದ ಪಾತ್ರಕೆ ವಂದನೆ
------------------------------------------------------------------------------------------------------------------------

ಶೃಂಗಾರ ಕಾವ್ಯ (೧೯೯೩) - ಜೀವನವೆಲ್ಲವೂ ನಾ ಹಾಡುವೆ,ಹಾಡಿನ ಮಡಿಲಲಿ ನಾ ಬಾಳುವೆ
ಸಂಗೀತ ಮತ್ತು ಸಾಹಿತ್ಯ: ಹಂಸಲೇಖ ಗಾಯಕರು: ಎಸ್.ಪಿ.ಬಿ


ಆ ಆ ಆ ಹಾಹಾಹಾಹಾ ,ಆ ಆ ಆ ಹಾಹಾಹಾಹಾ ಲಲಲ ಲಲಲಲ ಲಲಲಲ ಲಾ ಲಾ
ಜೀವನವೆಲ್ಲವೂ ನಾ ಹಾಡುವೆ,ಹಾಡಿನ ಮಡಿಲಲಿ ನಾ ಬಾಳುವೆ
ನಿಮ್ಮನು ನಾ ಪ್ರೀತಿಸುವೆ, ಮಣ್ಣ ಋಣಾ ತೀರಿಸುವೇ
ಜೀವನವೆಲ್ಲವೂ ನಾ ಹಾಡುವೆ,ಹಾಡಿನ ಮಡಿಲಲಿ ನಾ ಬಾಳುವೆ
ನಿಮ್ಮನು ನಾ ಪ್ರೀತಿಸುವೆ, ಮಣ್ಣ ಋಣ ತೀರಿಸುವೇ
ಜೀವನವೆಲ್ಲವೂ ನಾ ಹಾಡುವೆ,ಹಾಡಿನ ಮಡಿಲಲಿ ನಾ ಬಾಳುವೆ

ಮಧುರ ಮಧುರವೀ ಕನ್ನಡನಾಡ, ನುಡಿವ ಬಾಯಿಗಿದು ವೇದ
ವಿನಯ ವಿನಯವೀ ಕನ್ನಡ ಭಾವಾ, ಕರುಣೆ ನಾಡಿಗಿದು ಜೀವಾ
ಇಲ್ಲಿ ಬಾನಾಡಿ ನುಡಿಯುವ ಸ್ವರವೇ, ನನ್ನ ಪದವಾಗಿದೆ......... ಹೋ
ಇಲ್ಲಿ ಜನನಾಡಿ ಮೀಟುವ ಶ್ರುತಿಗೆ, ನನ್ನ ಪದ ಸೇರಿದೆ
ಧರಣಿ ಆಕಾಶ, ತೆರೆಸೋ ಆವೇಶ,ಧರಣಿ ಆಕಾಶ, ತೆರೆಸೋ ಆವೇಶ
ತರುವ ಕಸ್ತೂರಿ ಜನ ನನ್ನವರು
ಜೀವನವೆಲ್ಲವೂ ನಾ ಹಾಡುವೆ, ಹಾಡಿನ ನೆರಳಲಿ ನಾ ಬಾಳುವೆ
ನಿಮ್ಮನು ನಾ ಪ್ರೀತಿಸುವೆ, ಮಣ್ಣ ಋಣ ತೀರಿಸುವೇ
ಜೀವನವೆಲ್ಲವೂ ನಾ ಹಾಡುವೆ ಹಾಡಿನ ಮಡಿಲಲಿ ನಾ ಬಾಳುವೆ

ಚೆಲುವೆ ಚೆಲುವೆ ಈ ಕೊಡಗಿನ ನಾರಿ, ಚಲುವಿಗಿವಳೇ ಸರಿಸಾಟಿ . . ಆಹಾ... ಓಹೋ
ಸುಮತಿ ಸುಮತಿ ಈ ನಾಡಿನ ಬೆಡಗಿ, ಇವಳಿಗ್ಯಾರು ಪೈಪೋಟಿ .... ಅಹಹಾ .... ಓಹೋಹೋ
ಇಂಥ ಊರಲ್ಲಿ ಲಭಿಸಿದ ಸ್ನೇಹ, ಸ್ವರ್ಗ ಸನ್ಮಾನವೊ,...... ಹೋ
ಇಂಥ ಊರಲ್ಲಿ ಫಲಿಸಿದ ಪ್ರೇಮ ಧೈವ ಸಾಕಾರವೋ,.......
ಧರಣಿ ಆಕಾಶ, ತೆರೆಸೋ ಆವೇಶ,ಧರಣಿ ಆಕಾಶ, ತೆರೆಸೋ ಆವೇಶ
ತರುವ ಕಸ್ತೂರಿ ಜನ ನನ್ನವರು
ಜೀವನವೆಲ್ಲವೂ ನಾ ಹಾಡುವೆ,ಹಾಡಿನ ಗುಂಗಲಿ ನಾ ಬಾಳುವೆ
ನಿಮ್ಮನು ನಾ ಪ್ರೀತಿಸುವೆ, ಮಣ್ಣ ಋಣಾ ತೀರಿಸುವೇ
ಜೀವನವೆಲ್ಲವೂ ನಾ ಹಾಡುವೆ,ಹಾಡಿನ ಋಣದಲಿ ನಾ ಬಾಳುವೆ
ನಿಮ್ಮನು ನಾ ಪ್ರೀತಿಸುವೆ, ಮಣ್ಣ ಋಣಾ ತೀರಿಸುವೇ
ಜೀವನವೆಲ್ಲವೂ ನಾ ಹಾಡುವೆ,ಹಾಡಿನ ಮಡಿಲಲಿ ನಾ ಬಾಳುವೆ
-------------------------------------------------------------------------------------------------------------------------

ಶೃಂಗಾರ ಕಾವ್ಯ (೧೯೯೩) - ಯಾರು ನೋಡರೂ ಯಾರು ಕೇಳರು
ಸಂಗೀತ ಮತ್ತು ಸಾಹಿತ್ಯ: ಹಂಸಲೇಖ ಗಾಯಕರು: ಎಸ್.ಪಿ.ಬಿ, ಚಿತ್ರಾ

ಗಂಡು : ಯಾರು ನೋಡರೂ ಯಾರು ಕೇಳರು ಎಂದೂ ಇಬ್ಬರೇ ಬಂದರೇ
ಹೆಣ್ಣು : ಯಾರು ನೋಡರೂ ಯಾರು ಕೇಳರು ಎಂದೂ ಇಬ್ಬರೇ ಬಂದರೇ
ಗಂಡು : ಚಂದಮಾಮ ನೋಡಿದ ಗಾಳಿರಾಯ ಕಾಡಿದ  
ಹೆಣ್ಣು : ಚಂದಮಾಮ ನೋಡಿದ ಗಾಳಿರಾಯ ಕಾಡಿದ 
ಗಂಡು : ಯಾರು ನೋಡರೂ ಯಾರು ಕೇಳರು ಎಂದೂ ಇಬ್ಬರೇ ಬಂದರೇ 
ಹೆಣ್ಣು : ಯಾರು ನೋಡರೂ ಯಾರು ಕೇಳರು ಎಂದೂ ಇಬ್ಬರೇ ಬಂದರೇ
ಗಂಡು : ಚಂದಮಾಮ ನೋಡಿದ ಗಾಳಿರಾಯ ಕಾಡಿದ  
ಹೆಣ್ಣು : ಚಂದಮಾಮ ನೋಡಿದ ಗಾಳಿರಾಯ ಕಾಡಿದ 
ಇಬ್ಬರು : ಯಾರು ನೋಡರೂ ಯಾರು ಕೇಳರು ಎಂದೂ ಇಬ್ಬರೇ ಬಂದರೇ 

ಗಂಡು : ರಾತ್ರಿ ರಾಣಿ ಕಂಪು ಕಂಪಿನೊಳಗೇ ಜೋಂಪು ಹೂವಿನ ಮೇಲೆ ತಂಗಾಳಿಯ ಲೀಲೆ
            ಪ್ರಾಯದ ಮೇಲೆ ಸುಮಬಾಣನ ಲೀಲೆ ನಡೆಯುತಿದೇ ನಲಿಸುತಿದೆ
ಹೆಣ್ಣು  : ರಾತ್ರಿ ರಾಣಿ ಕಂಪು ಕಂಪಿನೊಳಗೇ ಜೋಂಪು ಹೂವಿನ ಮೇಲೆ ತಂಗಾಳಿಯ ಲೀಲೆ
            ಪ್ರಾಯದ ಮೇಲೆ ಸುಮಬಾಣನ ಲೀಲೆ ನಡೆಯುತಿದೇ ನಲಿಸುತಿದೆ
ಗಂಡು : ಯಾರು ನೋಡರೂ ಯಾರು ಕೇಳರು ಎಂದೂ ಇಬ್ಬರೇ ಬಂದರೇ 
ಹೆಣ್ಣು : ಯಾರು ನೋಡರೂ ಯಾರು ಕೇಳರು ಎಂದೂ ಇಬ್ಬರೇ ಬಂದರೇ
ಗಂಡು : ಚಂದಮಾಮ ನೋಡಿದ ಗಾಳಿರಾಯ ಕಾಡಿದ  
ಹೆಣ್ಣು : ಚಂದಮಾಮ ನೋಡಿದ ಗಾಳಿರಾಯ ಕಾಡಿದ 
ಇಬ್ಬರು : ಯಾರು ನೋಡರೂ ಯಾರು ಕೇಳರು ಎಂದೂ ಇಬ್ಬರೇ ಬಂದರೇ 

ಹೆಣ್ಣು : ನೋಡು ಚಂದಮಾಮ ಹರಸು ನಮ್ಮ ಪ್ರೇಮ ಸುಂದರ ರಾತ್ರಿ ಮಧುಚಂದ್ರನ ಮೈತ್ರಿ
          ಚುಂಬನ ಖಾತ್ರಿ ಆಲಿಂಗನ ಖಾತ್ರಿ ನಮಗುಂಟೂ ನಿನಗಿಲ್ಲಾ
ಗಂಡು : ನೋಡು ಚಂದಮಾಮ ಹರಸು ನಮ್ಮ ಪ್ರೇಮ ಸುಂದರ ರಾತ್ರಿ ಮಧುಚಂದ್ರನ ಮೈತ್ರಿ
          ಚುಂಬನ ಖಾತ್ರಿ ಆಲಿಂಗನ ಖಾತ್ರಿ ನಮಗುಂಟೂ ನಿನಗಿಲ್ಲಾ
ಹೆಣ್ಣು : ಯಾರು ನೋಡರೂ ಯಾರು ಕೇಳರು ಎಂದೂ ಇಬ್ಬರೇ ಬಂದರೇ 
ಗಂಡು : ಯಾರು ನೋಡರೂ ಯಾರು ಕೇಳರು ಎಂದೂ ಇಬ್ಬರೇ ಬಂದರೇ 
ಹೆಣ್ಣು : ಚಂದಮಾಮ ನೋಡಿದ ಗಾಳಿರಾಯ ಕಾಡಿದ 
ಗಂಡು : ಚಂದಮಾಮ ನೋಡಿದ ಗಾಳಿರಾಯ ಕಾಡಿದ
ಹೆಣ್ಣು : ಯಾರು ನೋಡರೂ ಯಾರು ಕೇಳರು ಎಂದೂ ಇಬ್ಬರೇ ಬಂದರೇ 
ಗಂಡು : ಯಾರು ನೋಡರೂ ಯಾರು ಕೇಳರು ಎಂದೂ ಇಬ್ಬರೇ ಬಂದರೇ 
ಹೆಣ್ಣು : ಚಂದಮಾಮ ನೋಡಿದ ಗಾಳಿರಾಯ ಕಾಡಿದ 
ಗಂಡು : ಚಂದಮಾಮ ನೋಡಿದ ಗಾಳಿರಾಯ ಕಾಡಿದ
ಇಬ್ಬರು : ಯಾರು ನೋಡರೂ ಯಾರು ಕೇಳರು ಎಂದೂ ಬಂದರೇ 
-------------------------------------------------------------------------------------------------------------------------

No comments:

Post a Comment