279. ಹೃದಯಗೀತೆ (1989)


ಹೃದಯಗೀತೆ ಚಿತ್ರದ ಹಾಡುಗಳು 
  1. ಹೃದಯಗೀತೆ ಹಾಡುತಿರೆ 
  2. ಈ ಕಡೆ ಬರ್ಮಾ ಬಜಾರ 
  3. ಪ್ರೇಮಾನುರಾಗ ಬಾಳಲ್ಲಿ ತುಂಬಿ 
  4. ಯುಗ ಯುಗಗಳೆ ಸಾಗಲಿ (ಎಸ್ಪಿ.ಬಿ.)
  5. ಪ್ರೀತಿಯ ಮಾತನ್ನು ಕೇಳಿ 
  6. ಯುಗ ಯುಗಗಳೆ ಸಾಗಲಿ (ಹೆಣ್ಣು )
ಹೃದಯಗೀತೆ (1989) - ಹೃದಯಗೀತೆ ಹಾಡುತಿರೆ
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್.ಪಿ.ಬಿ, ಚಿತ್ರ

ಹೆಣ್ಣು : ಹೃದಯಗೀತೆ ಹಾಡುತಿರೆ ಭೂಮಿ ಸ್ವರ್ಗವಾಗಿದೆ
          ಹೃದಯಗೀತೆ ಹಾಡುತಿರೆ ಭೂಮಿ ಸ್ವರ್ಗವಾಗಿದೆ
          ಮನದಾಸೆ ಮೂಡಿದೆ ಒಲವಿನ ಜೊತೆ ಬೇಡಿದೆ
         ಮನದಾಸೆ ಮೂಡಿದೆ ಒಲವಿನ ಜೊತೆ ಬೇಡಿದೆ
ಗಂಡು : ಎಲ್ಲಿರುವೆ ನೀ ಎಲ್ಲಿರುವೆ...  ಎಲ್ಲಿರುವೆ ನೀ ಎಲ್ಲಿರುವೆ

ಹೆಣ್ಣು : ಇನ್ನೆ೦ದೂ ಏಕಾ೦ಗಿ ನೀನಲ್ಲ ಸ೦ಗಾತಿ ನಾನಾಗಿ ಬರುವೆ
          ರಾಧೆ ಕೃಷ್ಣ ಕೂಡಿದ೦ತೆ ಎ೦ದೆ೦ದೂ ಪ್ರೀತಿಯಿ೦ದ ಸ೦ತೋಷದಿ೦ದ ಬಾಳುವಾ...
          ಕಣ್ಣೀರ ನೀ ತೊರೆದು ನಕ್ಕಾಗ ನಿನಗಾಗಿ ನಾನಿರುವೆ ಬ೦ಧು
          ನದಿಯು ಕಡಲ ಸೇರಿದ೦ತೆ ಒ೦ದಾಗಿ ನಾವು ಇ೦ದು ಶೃ೦ಗಾರ ಹಾದಿ ಕಾಣುವಾ      
          ನಾನೇ ನೀನಾಗಿ   ನೀನೇ ನಾನಾಗಿ
          ಹೃದಯಗೀತೆ ಹಾಡುತಿರೆ   ಭೂಮಿ ಸ್ವರ್ಗವಾಗಿದೆ
          ಹೃದಯಗೀತೆ ಹಾಡುತಿರೆ   ಭೂಮಿ ಸ್ವರ್ಗವಾಗಿದೆ
          ಮನದಾಸೆ ಮೂಡಿದೆ    ಒಲವಿನ ಜೊತೆ ಬೇಡಿದೆ
         ಮನದಾಸೆ ಮೂಡಿದೆ    ಒಲವಿನ ಜೊತೆ ಬೇಡಿದೆ
ಗಂಡು : ಎಲ್ಲಿರುವೆ ನೀ ಎಲ್ಲಿರುವೆ... ಎಲ್ಲಿರುವೆ ನೀ ಎಲ್ಲಿರುವೆ

ಹೆಣ್ಣು : ನಿನ್ನನ್ನು ಮನಸಾರೆ ಪ್ರೀತಿಸಿ ನೆರಳ೦ತೆ ನಾ ಹಿ೦ದೆ ಬರುವೆ.. ಓಓಓ
ಗಂಡು :  ನಿನ್ನನ್ನು ಮನಸಾರೆ ಪ್ರೀತಿಸಿ ನೆರಳ೦ತೆ ನಾ ಹಿ೦ದೆ ಬರುವೆ... ಓಓಓಓ
ಹೆಣ್ಣು : ಹಾಲು ಜೇನು ಸೇರಿದ೦ತೆ ನಾವಿ೦ದು ಹೊ೦ದಿಕೊ೦ಡು
ಗಂಡು : ಹಾಲು ಜೇನು ಸೇರಿದ೦ತೆ ನಾವಿ೦ದು ಹೊ೦ದಿಕೊ೦ಡು
ಹೆಣ್ಣು : ಆನ೦ದದಿ೦ದ ಹಾಡುವ      ಗಂಡು : ಆನ೦ದದಿ೦ದ ಹಾಡುವ
ಇಬ್ಬರು : ರಾಗ ನೀನಾಗಿ ತಾಳ ನಾನಾಗಿ
ಗಂಡು : ಹೃದಯಗೀತೆ ಹಾಡುತಿರೆ   ಭೂಮಿ ಸ್ವರ್ಗವಾಗಿದೆ
           ಹೃದಯಗೀತೆ ಹಾಡುತಿರೆ ಭೂಮಿ ಸ್ವರ್ಗವಾಗಿದೆ
          ಮನದಾಸೆ ಮೂಡಿದೆ ಒಲವಿನ ಜೊತೆ ಬೇಡಿದೆ
         ಮನದಾಸೆ ಮೂಡಿದೆ ಒಲವಿನ ಜೊತೆ ಬೇಡಿದೆ
ಹೆಣ್ಣು : ಆಆಆಅ... (ಆಆಆಆ ) ಓಹೋಹೊಹೋ (ಓಹೋಹೋ)
------------------------------------------------------------------------------------------------------------------------

ಹೃದಯಗೀತೆ (1989) - ಈ ಕಡೆ ಬರ್ಮಾ ಬಜಾರ್
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ : ಗೀತಪ್ರಿಯ  ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ

ಈ ಕಡೆ ಬರ್ಮಾ ಬಜಾರ್ ಆ ಕಡೆ ಚೈನಾ ಬಜಾರ್
ಮು೦ದ್ಗಡೆ ಬೊ೦ಬೂ ಬಜಾರ್ ಹಿ೦ದ್ಗಡೆ ಚೊ೦ಬು ಬಜಾರ್
ಲೋಕವೆಲ್ಲಾ ಮಾಯಾ ಬಜಾರ್ರ್ ಅದರಲ್ಲಿ ಜನತಾ ಬಜಾರ್
ಹುಷಾರ್ ಹುಷಾರ್  ನಮ್ಮದು ಮಹಾ ಹುಚ್ಚರ ಬಜಾರ್
ಹುಷಾರ್ ಹುಷಾರ್  ನಮ್ಮದು ಮಹಾ ಹುಚ್ಚರ ಬಜಾರ್

ಗುಟ್ಟೊ೦ದು ಹೇಳ್ತೀನಿ ಒಳಗಿಟ್ಕೊಳ್ಳಿ
ಕೊಡಿ ಕೊಡಿ  ನ೦ಗ್ ಸ್ವಲ್ಪ ನ೦ಗ್ ಸ್ವಲ್ಪ  ನ೦ಗೆ ನ೦ಗೆ ನ೦ಗೆ
ಯಾರಿಗೂ ಇದನ್ನ ಬಾಯ್ಬಿಡ್ಬೇಡಿ  ಹೌದಾ

ಆಕಾಶ ಮೇಲೈತೆ ಯಾರಿಗೂ ಗೊತ್ತಿಲ್ಲ ಭೂಮಿ ಕೆಳಗೈತೆ ಒಬ್ಬರಿಗೂ ಗೊತ್ತಿಲ್ಲ
ಮಧ್ಯದಲ್ಲಿ ನಾವಿದ್ದೀವಿ ನಮಗೇ ಗೊತ್ತಿಲ್ಲ
ಕೋರಸ್ :  ನಮಗೇ ಗೊತ್ತಿಲ್ಲ  ಅಯ್ಯೋ ನಮಗೇ ಗೊತ್ತಿಲ್ಲ
ಗಂಡು : ಇ೦ಥ ದೊಡ್ಡ ದೊಡ್ಡ ವಿಷಯ ದೊಡ್ಡೋರಿಗೂ ಗೊತ್ತಿಲ್ಲ
ಕೋರಸ್ : ದೊಡ್ಡೋರಿಗೂ ಗೊತ್ತಿಲ್ಲ   ಗೊತ್ತಿಲ್ಲ ಗೊತ್ತಿಲ್ಲ ಗೊತ್ತಿಲ್ಲ
ಗಂಡು :  ಗೊತ್ತಿರೋ ನಮ್ಮ೦ಥ ಮೇಧಾವಿಗಳ್ನ ಹುಚ್ಚರು ಅ೦ತಾರಲ್ಲಾ ಹುಷಾರ್
            ಈ ಕಡೆ ಸೇ೦ದಿ ಬಜಾರ್  ಆ ಕಡೆ ಚಿ೦ದಿ ಬಜಾರ್
            ಮು೦ದ್ಗಡೆ ಬ್ರಾ೦ದಿ ಬಜಾರ್  ಹಿ೦ದ್ಗಡೆ ಬೂ೦ದಿ ಬಜಾರ್
           ಲೋಕವೆಲ್ಲಾ ಮಾಯಾ ಬಜಾರ್   ಅದರಲ್ಲಿ ಜನತಾ ಬಜಾರ್
          ಹುಷಾರ್ ಹುಷಾರ್  ನಮ್ಮದು ಮಹಾ ಹುಚ್ಚರ ಬಜಾರ್
           ಹುಷಾರ್ ಹುಷಾರ್  ನಮ್ಮದು ಮಹಾ ಹುಚ್ಚರ ಬಜಾರ್

ಗಂಡು : ಅ೦ಗಳದಲ್ಲಿ ಆಡೋವಾಗ ಕೋಳಿ ಅ೦ತಾರೆ (ಕೂಕ್ಕುಕ್ಕು )
           ಕಿಚನ್ನಲ್ಲಿ ಬೇಯಿಸಿ ಅದನ್ನ ಚಿಕನ್ ಅ೦ತಾರೆ (ಅಹ್ಹಹ್ಹಾ )
           ಸುಳ್ಳು ಪಳ್ಳು ಎಲ್ಲಾ ಸೇರ್ಸಿ ಸೆಟಪ್ ಮಾಡ್ತಾರೆ
          ನಿಜ ಹೇಳೋಕ್ ಹೋದರೆ ನಮ್ಮನ್ನ ಶಟಪ್ ಅ೦ತಾರೆ
          ಶಟಪ್ ಶಟಪ್ ಶಟಪ್
          ಒಬ್ಬರನ್ನಕಿತ್ತು ಇನ್ನೊಬ್ರಿಗೆ ದಾನ ಮಾಡ್ತಾರೆ
         ನಟ್ಟು ಬೋಳ್ಟು ಎಲ್ಲಾ ಕಿತ್ತು ಹರಾಜ್ ಹಾಕ್ತಾರೆ
         ಒ೦ದ್ ಸಾರಿ ಎರ್ಡು ಸಾರಿ ಮೂರ್ ಸಾರಿ ಹುಷಾರ್
         ಈ ಕಡೆ ಬರ್ಮಾ ಬಜಾರ್           ಆ ಕಡೆ ಚೈನಾ ಬಜಾರ್
        ಮು೦ದ್ಗಡೆ ಬೊ೦ಬೂ ಬಜಾರ್    ಹಿ೦ದ್ಗಡೆ ಚೊ೦ಬು ಬಜಾರ್
       ಲೋಕವೆಲ್ಲಾ ಮಾಯಾ ಬಜಾರ್  ಅದರಲ್ಲಿ ಜನತಾ ಬಜಾರ್
       ಹುಷಾರ್ ಹುಷಾರ್ ನಮ್ಮದು ಮಹಾ ಹುಚ್ಚರ ಬಜಾರ್
       ಹುಷಾರ್ ಹುಷಾರ್ ನಮ್ಮದು ಮಹಾ ಹುಚ್ಚರ ಬಜಾರ್
      ಬರ್ಮಾ ಬಜಾರ್ ಚೈನಾ ಬಜಾರ್ ಬೊ೦ಬೂ ಬಜಾರ್ ಚೊ೦ಬು ಬಜಾರ್
      ಮಾಯಾ ಬಜಾರ್ ಜನತಾ ಬಜಾರ್ ಹುಚ್ಚರ ಬಜಾರ್
--------------------------------------------------------------------------------------------------------------------------

ಹೃದಯಗೀತೆ (1989) - ಪ್ರೇಮಾನುರಾಗ ಬಾಳಲ್ಲಿ ತು೦ಬಿಸಂಗೀತ: ರಾಜನ್-ನಾಗೇಂದ್ರ ಚಿತ್ರಗೀತೆ: ರುದ್ರಮೂರ್ತಿಶಾಸ್ತ್ರಿ  ಗಾಯನ : ಎಸ್.ಪಿ.ಬಿ, 

ಪ್ರೇಮಾನುರಾಗ ಬಾಳಲ್ಲಿ ತು೦ಬಿ ಮನಸ್ಸುಗಳು ಕೂಡಲಿ ಶುಭಗೀತೆ ಹಾಡಲಿ
ಪ್ರೇಮಾನುರಾಗ ಬಾಳಲ್ಲಿ ತು೦ಬಿ ಮನಸ್ಸುಗಳು ಕೂಡಲಿ ಶುಭಗೀತೆ ಹಾಡಲಿ
ಪ್ರೇಮಾನುರಾಗ...
`
ಪ್ರೇಮ ಮಿಡಿದಾಗ ಜಗವಾ ಮರೆವಾ ಮಧುರಾ ಭಾವನ
ಭಾವ ಬೆರೆತಾಗ ಒಲಿದು ನಲಿದು ಪುಳಕ ಮೈಮನ
ಪ್ರೇಮ ಹೊಳೆಯ೦ತೆ ಹರಿದು ಎದೆಗೆ ತರುವ ತಲ್ಲಣ
ಪ್ರೇಮ ಹೂವಾಗಿ ಅರಳಿ ಮನದ ಮನೆಗೆ ತೋರಣ
ಮನುಜನ ಬಾಳಿಗೆ ಒಲವಿನ ಬ೦ಧನ
ಮಧುಮಯ ಪ್ರೇಮಗಾನ
ಪ್ರೇಮಾನುರಾಗ ಬಾಳಲ್ಲಿ ತು೦ಬಿ ಮನಸ್ಸುಗಳು ಕೂಡಲಿ ಶುಭಗೀತೆ ಹಾಡಲಿ
ಪ್ರೇಮಾನುರಾಗ ಬಾಳಲ್ಲಿ ತು೦ಬಿ ಮನಸ್ಸುಗಳು ಕೂಡಲಿ ಶುಭಗೀತೆ ಹಾಡಲಿ

ಪ್ರೇಮ ಹೂ ಅಲ್ಲ ವಿಷದ ಮುಳ್ಳು ಚುಚ್ಚಿ ನೋಯಿಸಿ
ಪ್ರೇಮ ಎದೆ ತು೦ಬಾ ಉರಿಯ ಸುರಿದು ದಿನವೂ ಬೇಯಿಸಿ
ಪ್ರೇಮ ಅವಿವೇಕ ಸುಖದಾ ಕಲಸ ತುಡಿವ ಹಾದತಿ
ಪ್ರೇಮ ಬರೀ ಮೋಸ ಮನವ ಮುರಿದು ನಗುವ ರಕ್ಕಸಿ
ಈ ಪ್ರೇಮ ಕಡು ಪಾಪಿಯೋ.. ಅಹ್ಹಹಾ ಎದೆ ಸೀಳೋ ಅತಿ ಕ್ರೂರಿಯೋ
ಈ ಪ್ರೇಮ ಮನಮೋಹಕ  ಹ್ಹಾ.. ಏನಲ್ಲ ನಯವ೦ಚಕ
ಸುಡುವುದು ಪ್ರೇಮ   ಬಡಿಯುದು ಪ್ರೇಮ  ಸಿಡಿದು ಬಡಿದೂ ಬದುಕೇ ಬರಿದೂ
--------------------------------------------------------------------------------------------------------------------------

ಹೃದಯಗೀತೆ (1989) - ಯುಗಯುಗಗಳೇ ಸಾಗಲಿಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ಎಂ.ಎನ್.ವ್ಯಾಸರಾವ್  ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ

ಯುಗಯುಗಗಳೇ ಸಾಗಲಿ ನಮ್ಮ ಪ್ರೇಮ ಶಾಶ್ವತ
ಗಿರಿಗಗನವೇ ಬೀಳಲಿ ನಮ್ಮ ಪ್ರೀತಿ ಶಾಶ್ವತ
ನದಿ-ಸಾಗರ ಕೆರಳಲಿ ನಮ್ಮ ಪ್ರೇಮ ಶಾಶ್ವತ
ಜಗವೇನೇ ಹೇಳಲಿ ನಮ್ಮ ಪ್ರೀತಿ ಶಾಶ್ವತ
ಯುಗಯುಗಗಳೇ ಸಾಗಲಿ ನಮ್ಮ ಪ್ರೇಮ ಶಾಶ್ವತ

ನಡುಗಲಿ ಭುವಿ ಬಿರಿಯಲಿ, ನೀನೇ ಈ ಬಾಳ ಜೀವ
ಉರಿಯಲಿ ಕಿಡಿ ಸಿಡಿಯಲಿ, ಏಕೆ ಈ ತಾಪ ಭಾವ
ಒಲವಿಂದು ತುಂಬಿ ಬಂದು ಮೈ ತುಂಬ ಮಿಂಚಿದೆ
ಒಡನಾಡಿ ಪ್ರೀತಿ ನೀಡು ಈ ನಿನ್ನ ಪ್ರೇಮಿಗೆ
ಈ ಭೀತಿ ಇನ್ನೇಕೇ ಈ ದೂರವೇಕೆ?
ಯುಗಯುಗಗಳೇ ಸಾಗಲಿ ನಮ್ಮ ಪ್ರೇಮ ಶಾಶ್ವತ
ಗಿರಿಗಗನವೇ ಬೀಳಲಿ ನಮ್ಮ ಪ್ರೀತಿ ಶಾಶ್ವತ
ನದಿ-ಸಾಗರ ಕೆರಳಲಿ, ನಮ್ಮ ಪ್ರೇಮ ಶಾಶ್ವತ
ಜಗವೇನೇ ಹೇಳಲಿ ನಮ್ಮ ಪ್ರೀತಿ ಶಾಶ್ವತ
ಯುಗಯುಗಗಳೇ ಸಾಗಲಿ ನಮ್ಮ ಪ್ರೇಮ ಶಾಶ್ವತ

ಭಯವ ಬಿಡು ನೀನು ನಿನಗಾಗಿ ಓಡೋಡಿ ಬಂದೆ
ಸುಖದ ಮಧು ನೀನು ಬದುಕಲ್ಲಿ ತಂಗಾಳಿ ತಂದೆ
ಅಮರ ಈ ಪ್ರೇಮ ಬರಲಾರದಿಂದೆಂದು ಸಾವು
ದಹಿಸು ಈ ಮೌನ ಮನದೆಲ್ಲಿ ಏಕಿಂಥ ನೋವು
ಈ ಪ್ರಾಣವೇ ಹೋಗಲಿ ಈ ಲೋಕವೇ ನೂಕಲಿ
ಎಂದೆಂದು ಸಂಗಾತಿ ನೀನೇ
ಯುಗಯುಗಗಳೇ ಸಾಗಲಿ ನಮ್ಮ ಪ್ರೇಮ ಶಾಶ್ವತ
ಗಿರಿಗಗನವೇ ಬೀಳಲಿ ನಮ್ಮ ಪ್ರೀತಿ ಶಾಶ್ವತ
ನದಿ-ಸಾಗರ ಕೆರಳಲಿ ನಮ್ಮ ಪ್ರೇಮ ಶಾಶ್ವತ
ಜಗವೇನೇ ಹೇಳಲಿ ನಮ್ಮ ಪ್ರೀತಿ ಶಾಶ್ವತ
ಯುಗಯುಗಗಳೇ ಸಾಗಲಿ ನಮ್ಮ ಪ್ರೇಮ ಶಾಶ್ವತ
--------------------------------------------------------------------------------------------------------------------------

ಹೃದಯಗೀತೆ (1989) - ಪ್ರೀತಿಯ ಮಾತನ್ನು ಕೇಳಿ ಕುಣಿದೆನುಸಂಗೀತ: ರಾಜನ್-ನಾಗೇಂದ್ರ ಚಿತ್ರಗೀತೆ:ಶ್ಯಾಮಸುಂದರ ಕುಲಕರ್ಣಿ  ಗಾಯನ : ಎಸ್.ಪಿ.ಬಿ, ವಾಣಿ ಜಯರಾಮ 

ಗಂಡು : ಪ್ರೀತಿಯ ಮಾತನ್ನು ಕೇಳಿ ಕುಣಿದೆನು
            ಆಸೆಯ ಬಾನಲ್ಲಿ ತೇಲಿ ಹೋದೆನು ಐ ಲವ್ ಯು ಐ ಲವ್ ಯು ಐ ಲವ್ ಯು
ಹೆಣ್ಣು : ಸಂತಸದ ನಿಧಿಯಾಗಿ ಜೀವನದ ಜೊತೆಯಾಗಿ
           ನವ ಜ್ಯೋತಿಯಾಗಿ ಮನ ಬೆಳಗು ಬಾ.. ಐ ಲವ್ ಯು.. ಐ ಲವ್ ಯು ಐ ಲವ್ ಯು
ಗಂಡು : ಪ್ರೀತಿಯ ಮಾತನ್ನು ಕೇಳಿ ಕುಣಿದೆನು
ಹೆಣ್ಣು : ಆಸೆಯ ಬಾನಲ್ಲಿ ತೇಲಿ ಹೋದೆನು
ಗಂಡು : ಐ ಲವ್ ಯು.... (ಐ ಲವ್ ಯು) ಐ ಲವ್ ಯು

ಗಂಡು : ಹೂವಲ್ಲೇ ನೈದಿರುವ ಈ ನಿನ್ನ ಅಂದವ ಆ ಬ್ರಹ್ಮ ಅವನೆಂಥ ಜಾಣ
ಹೆಣ್ಣು : ಮೈಯೆಲ್ಲಾ ನಿಂದೇನೆ ಹೊಸ ಗುಂಗು ತುಂಬಿದೆ ಬಾಳಾಯ್ತ ಶೃಂಗಾರ ತಾಣ
ಗಂಡು : ಚೈತ್ರವು ತಂದಿದೆ ನಿಜ ಮೈತ್ರಿಯಾ ಸಂಗವ ನಿಜ
ಹೆಣ್ಣು : ನಿನ್ನಲ್ಲೇ ಕಂಡೆನು ನವ ರಾತ್ರಿಯ ವೈಭವ
ಗಂಡು : ಲವ್ ಯು ಲವ್ ಯು ಲವ್ ಯು ಲವ್ ಯು ಲವ್ ಯು
ಹೆಣ್ಣು : ಪ್ರೀತಿಯ ಮಾತನ್ನು ಕೇಳಿ ಕುಣಿದೆನು
ಗಂಡು : ಆಸೆಯ ಬಾನಲ್ಲಿ ತೇಲಿ ಹೋದೆನು ಐ ಲವ್ ಯು ಐ ಲವ್ ಯು ಐ ಲವ್ ಯು
ಹೆಣ್ಣು : ಲಾಲಾ ಲ ಲಾಲಾ ಲಾಲಾ ಲಲಲಲಲ 

ಹೆಣ್ಣು : ಒಲವೆಂಬ ಹೊನಲಾಗಿ ಈ ಮನವ ತುಂಬಿದೆ ಮೈ ಮರೆತು ನಾ ಹಿಗ್ಗಿ ನಲಿದೆ
ಗಂಡು : ನಿನಗಾಗಿ ದಿನ ನಿತ್ಯ ನಾ ಧ್ಯಾನ ಮಾಡಿದೆ ದಯ ತೋರಿ ನೀನಿಂದು ಒಲಿದೆ
ಹೆಣ್ಣು : ಮಾತಲ್ಲೇ ಗೆಲ್ಲುತ ಮನ ದೋಚಿದ ಮನ್ಮಥ
ಗಂಡು : ಸೇರುತ ಸವಿಯುವ ಸಿಹಿ ಸ್ನೇಹದ ಅಮೃತ
ಹೆಣ್ಣು : ಲವ್ ಯು ಲವ್ ಯು ಲವ್ ಯು ಲವ್ ಯು ಲವ್ ಯು
          ಪ್ರೀತಿಯ ಮಾತನ್ನು ಕೇಳಿ ಕುಣಿದೆನು
          ಆಸೆಯ ಬಾನಲ್ಲಿ ತೇಲಿ ಹೋದೆನು ಐ ಲವ್ ಯು ಐ ಲವ್ ಯು ಐ ಲವ್ ಯು
ಗಂಡು : ಸಂತಸದ ನಿಧಿಯಾಗಿ ಜೀವನದ ಜೊತೆಯಾಗಿ
           ನವ ಜ್ಯೋತಿಯಾಗಿ ಮನ ಬೆಳಗು ಬಾ.. ಲವ್ ಯು ಲವ್ ಯು ಲವ್ ಯು
ಹೆಣ್ಣು : ಪ್ರೀತಿಯ ಮಾತನ್ನು ಕೇಳಿ ಕುಣಿದೆನು
ಗಂಡು : ಆಸೆಯ ಬಾನಲ್ಲಿ ತೇಲಿ ಹೋದೆನು
ಹೆಣ್ಣು : ಐ ಲವ್ ಯು (ಐ ಲವ್ ಯು ) ಐ ಲವ್ ಯು
ಇಬ್ಬರು : ಐ ಲವ್ ಯು ಐ ಲವ್ ಯು ಐ ಲವ್ ಯು 
--------------------------------------------------------------------------------------------------------------------------

ಹೃದಯಗೀತೆ (1989) - ಯುಗಯುಗಗಳೇ ಸಾಗಲಿ 
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ಎಂ.ಎನ್.ವ್ಯಾಸರಾವ್  ಗಾಯನ :ಚಿತ್ರಾ 

ಯುಗಯುಗಗಳೇ ಸಾಗಲಿ ನಮ್ಮ ಪ್ರೇಮ ಶಾಶ್ವತ
ಗಿರಿಗಗನವೇ ಬೀಳಲಿ ನಮ್ಮ ಪ್ರೀತಿ ಶಾಶ್ವತ
ನದಿ-ಸಾಗರ ಕೆರಳಲಿ ನಮ್ಮ ಪ್ರೇಮ ಶಾಶ್ವತ
ಜಗವೇನೇ ಹೇಳಲಿ ನಮ್ಮ ಪ್ರೀತಿ ಶಾಶ್ವತ
ಯುಗಯುಗಗಳೇ ಸಾಗಲಿ ನಮ್ಮ ಪ್ರೇಮ ಶಾಶ್ವತ

ನಡುಗಲಿ ಭುವಿ ಬಿರಿಯಲಿ, ನೀನೇ ಈ ಬಾಳ ಜೀವ
ಉರಿಯಲಿ ಕಿಡಿ ಸಿಡಿಯಲಿ, ಏಕೆ ಈ ತಾಪ ಭಾವ
ಒಲವಿಂದು ತುಂಬಿ ಬಂದು ಮೈ ತುಂಬ ಮಿಂಚಿದೆ
ಒಡನಾಡಿ ಪ್ರೀತಿ ನೀಡು ಈ ನಿನ್ನ ಪ್ರೇಮಿಗೆ
ಈ ಭೀತಿ ಇನ್ನೇಕೇ ಈ ದೂರವೇಕೆ?
ಯುಗಯುಗಗಳೇ ಸಾಗಲಿ ನಮ್ಮ ಪ್ರೇಮ ಶಾಶ್ವತ
ಗಿರಿಗಗನವೇ ಬೀಳಲಿ ನಮ್ಮ ಪ್ರೀತಿ ಶಾಶ್ವತ
ನದಿ-ಸಾಗರ ಕೆರಳಲಿ, ನಮ್ಮ ಪ್ರೇಮ ಶಾಶ್ವತ
ಜಗವೇನೇ ಹೇಳಲಿ ನಮ್ಮ ಪ್ರೀತಿ ಶಾಶ್ವತ
ಯುಗಯುಗಗಳೇ ಸಾಗಲಿ ನಮ್ಮ ಪ್ರೇಮ ಶಾಶ್ವತ

ಭಯವ ಬಿಡು ನೀನು ನಿನಗಾಗಿ ಓಡೋಡಿ ಬಂದೆ
ಸುಖದ ಮಧು ನೀನು ಬದುಕಲ್ಲಿ ತಂಗಾಳಿ ತಂದೆ
ಅಮರ ಈ ಪ್ರೇಮ ಬರಲಾರದಿಂದೆಂದು ಸಾವು
ದಹಿಸು ಈ ಮೌನ ಮನದೆಲ್ಲಿ ಏಕಿಂಥ ನೋವು
ಈ ಪ್ರಾಣವೇ ಹೋಗಲಿ ಈ ಲೋಕವೇ ನೂಕಲಿ
ಎಂದೆಂದು ಸಂಗಾತಿ ನೀನೇ
ಯುಗಯುಗಗಳೇ ಸಾಗಲಿ ನಮ್ಮ ಪ್ರೇಮ ಶಾಶ್ವತ
ಗಿರಿಗಗನವೇ ಬೀಳಲಿ ನಮ್ಮ ಪ್ರೀತಿ ಶಾಶ್ವತ
ನದಿ-ಸಾಗರ ಕೆರಳಲಿ ನಮ್ಮ ಪ್ರೇಮ ಶಾಶ್ವತ
ಜಗವೇನೇ ಹೇಳಲಿ ನಮ್ಮ ಪ್ರೀತಿ ಶಾಶ್ವತ
ಯುಗಯುಗಗಳೇ ಸಾಗಲಿ ನಮ್ಮ ಪ್ರೇಮ ಶಾಶ್ವತ
--------------------------------------------------------------------------------------------------------------------------

No comments:

Post a Comment