281. ಕುಲವಧು (1963)


ಕುಲವಧು ಚಿತ್ರದ ಹಾಡುಗಳು 
  1. ಎಮ್ಮ ಮನೆಯಂಗಳದಿ 
  2. ಯುಗಯುಗಾದಿ ಕಳೆದರೂ 
  3. ತಾಯೇ ಬಾರಾ ಮೊಗವ ತೋರ 
  4. ಒಲವಿನ ಪ್ರಿಯಲತೆ 

ಕುಲವಧು (1963)
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ: ದ.ರಾ.ಬೇಂದ್ರೆ, ಗಾಯನ : ಎಸ.ಜಾನಕಿ 

ಆಆಆ... ಓಓಓ.... ಆಆಆ ....  
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ
ಹೊಸತು ಹೊಸತು ತರುತಿದೆ

ಹೊಂಗೆ ಹೂವ ತೊಂಗಲಲ್ಲಿ  ಭೃಂಗದ ಸಂಗೀತ ಕೇಳಿ
ಹೊಂಗೆ ಹೂವ ತೊಂಗಲಲ್ಲಿ  ಭೃಂಗದ ಸಂಗೀತ ಕೇಳಿ
ಮತ್ತೆ ಕೇಳ ಬರುತಿದೆ ಆ ಆ ಆ ಆ ಓ ಓ ಓ ಆ ಆ ಆ ಆ
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸಿ ಜೀವಕಳೆಯ ತರುತಿದೆ
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ
ಹೊಸತು ಹೊಸತು ತರುತಿದೆ

ವರುಷಕೊಂದು ಹೊಸತು ಜನ್ಮ  ಹರುಷಕೊಂದು ಹೊಸತು ನೆನೆಯು
ವರುಷಕೊಂದು ಹೊಸತು ಜನ್ಮ  ಹರುಷಕೊಂದು ಹೊಸತು ನೆನೆಯು
ಅಖಿಲ ಜೀವ ಜಾತಕೆ  ಆಆಆ ಓಓಓ ಆಆಆ...
ಒಂದೆ ಒಂದು ಜನ್ಮದಲ್ಲಿ  ಒಂದೆ ಬಾಲ್ಯ ಒಂದೆ ಹರೆಯ
ನಮಗದಷ್ಟೆ ಏತಕೋ..
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ
ಹೊಸತು ಹೊಸತು ತರುತಿದೆ
ಆ ಆ ಆ ಆ ಆ... ಓ ಓ ಓ ಓ.... ಆ ಆ ಆ ಆ..
------------------------------------------------------------------------------------------------------------------------

ಕುಲವಧು (1963) - ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು
ಚಿತ್ರಗೀತೆ : ವಿ. ಸೀತಾರಾಮಯ್ಯ ಸಂಗೀತ: ಜಿ.ಕೆ.ವೆಂಕಟೇಶ್ ಗಾಯನ: ಎಸ್.ಜಾನಕಿ

ಎಮ್ಮ್  ಮನೆಯಂಗಳದಿ ಬೆಳೆದೊಂದು ಹೂವನ್ನು
ನಿಮ್ಮ ಮಡಿಲೊಳಗಿರಲು ತಂದಿರುವೆವು
ಕೊಳ್ಳೀರೀ ಮಗುವನ್ನು ಎಮ್ಮ ಮನೆ ಬೆಳಕನ್ನು
ನಿಮ್ಮ ಮನೆಯನ್ನು ತುಂಬಲು ಒಪ್ಪಿಸುವೆವು
ಎಮ್ಮ್  ಮನೆಯಂಗಳದಿ ಬೆಳೆದೊಂದು ಹೂವನ್ನು

ಹೆತ್ತವರ ಮನೆಗಿಂದು ಹೊರಗಾದೆ ನೀ ಮಗಳೆ
ಹೆತ್ತವರ ಮನೆಗಿಂದು ಹೊರಗಾದೆ ನೀ ಮಗಳೆ
ಈ ಮನೆಯೇ ಈ ಇವರೆ ನಿನ್ನವರು ಮುಂದೆ
ಇವರೆ ತಾಯ್ಗಳು ಸಖರು ಭಾಗ್ಯವನು ಬೆಳಸುವರು
ಇವರದ  ದೇವರೆ ನಿನ್ನ ದೇವರುಗಳು
ಎಮ್ಮ್  ಮನೆಯಂಗಳದಿ ಬೆಳೆದೊಂದು ಹೂವನ್ನು
ನಿಮ್ಮ ಮಡಿಲೊಳಗಿರಲು ತಂದಿರುವೆವು

ನಿಲ್ಲು ಕಣ್ಣರೊಸಿಕೊ ನಿಲ್ಲು ತಾಯ್ ಹೋಗುವೆವು
ನಿಲ್ಲು ಕಣ್ಣರೊಸಿಕೊ ನಿಲ್ಲು ತಾಯ್ ಹೋಗುವೆವು
ತಾಯಿರ ತಂದೆಯಿರ ಕೊಳ್ಳಿರಿ ಇವಳ ಎರಡು ಮನೆಗಳ ಹೆಸರು
ಖ್ಯಾತಿ  ಬಳುವಳಿ ಉಳಿವಂತೆ ತುಂಬಿದಾ ಆಯುಶ್ಯದಲಿ ಬಾಳಿ ಬದುಕು
ಎಮ್ಮ್  ಮನೆಯಂಗಳದಿ ಬೆಳೆದೊಂದು ಹೂವನ್ನು
ನಿಮ್ಮ ಮಡಿಲೊಳಗಿರಲು ತಂದಿರುವೆವು
ಕೊಳ್ಳೀರೀ ಮಗುವನ್ನು ಎಮ್ಮ ಮನೆ ಬೆಳಕನ್ನು
ನಿಮ್ಮ ಮನೆಯನ್ನು ತುಂಬಲು ಒಪ್ಪಿಸುವೆವು
ಎಮ್ಮ್  ಮನೆಯಂಗಳದಿ ಬೆಳೆದೊಂದು ಹೂವನ್ನು
--------------------------------------------------------------------------------------------------------------------------

ಕುಲವಧು (1963) - ಒಲವಿನ ಪ್ರಿಯಲತೆ
ಸಾಹಿತ್ಯ: ಕಣಗಾಲ್ ಪ್ರಭಾಕರ ಶಾಸ್ತ್ರಿ ಸಂಗೀತ: ಜಿ. ಕೆ. ವೆಂಕಟೇಶ್ ಹಾಡಿದವಾರು: ಪಿ.ಬಿ. ಶ್ರೀನಿವಾಸ್ 

ಒಲವಿನ ಪ್ರಿಯಲತೆ ಅವಳದೆ ಚಿಂತೆ
ಅವಳ ಮಾತೆ ಮಧುರ ಗೀತೆ ಅವಳೆ ಎನ್ನ ದೇವತೆ
ಒಲವಿನ ಪ್ರಿಯಲತೆ ಅವಳದೆ ಚಿಂತೆ
ಅವಳ ಮಾತೆ ಮಧುರ ಗೀತೆ  ಅವಳೆ ಎನ್ನ ದೇವತೆ
ಹೂಂ..... ಓಓಓ .....

ಮರೆಯದಂತ ಪ್ರೇಮ ರಾಶಿ  ಹೃದಯದಾಶಾ ರೂಪಸಿ
ಮನದೋಳಾಡೊ ಆ ವಿಲಾಸಿ ಒಲಿದು ಬಂದ ಪ್ರೇಯಸಿ
ಒಲವಿನ ಪ್ರಿಯಲತೆ ಅವಳದೆ ಚಿಂತೆ 
ಅವಳ ಮಾತೆ ಮಧುರ ಗೀತೆ ಅವಳೆ ಎನ್ನ ದೇವತೆ
ಹೂಂ..... ಓಓಓ .....

ಪ್ರಣಯ ರಾಗದ ಜೀವ ಗೆಳತಿ  ಬಾಳ ಬೆಳಗೋ ಶ್ರೀಮತಿ
ಸನ್ನೆ ಮಾತಿನ ಸರಸಗಾತಿ ಕನ್ನಡಾಂಬೆಯ ಕುಲಸತಿ
ಒಲವಿನ ಪ್ರಿಯಲತೆ ಅವಳದೆ ಚಿಂತೆ 
ಅವಳ ಮಾತೆ ಮಧುರ ಗೀತೆ ಅವಳೆ ಎನ್ನ ದೇವತೆ
ಹೂಂ..... ಓಓಓ .....
----------------------------------------------------------------------------------------------------------------------

ಕುಲವಧು (೧೯೬೩) 
ಸಂಗೀತ: ಜಿ.ಕೆ. ವೆಂಕಟೇಶ್  ಸಾಹಿತ್ಯ: ಎಂ. ಗೋವಿಂದ ಪೈ  ಗಾಯನ: ಎಸ್. ಜಾನಕಿ

ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ
ಹರಸು ತಾಯೆ ಸುತರ ತಾಯೆ ನಮ್ಮ ಜನ್ಮದಾತೆಯೆ,
ನಮ್ಮ ಜನ್ಮದಾತೆಯೆ
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ
ಹರಸು ತಾಯೆ ಸುತರ ತಾಯೆ ನಮ್ಮ ಜನ್ಮದಾತೆಯೆ,
ನಮ್ಮ ಜನ್ಮದಾತೆಯೆ
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ

ನಮ್ಮ ತಪ್ಪನೆನಿತ ತಾಳ್ವೆ, ಅಕ್ಕರೆಯಿಂದೆಮ್ಮನಾಳ್ವೆ
ನೀನೆ ಕಣಾ ನಮ್ಮ ಬಾಳ್ವೆ, ನಿನ್ನ ಮರೆಯಲೆಂದೆವು
ತನು ಕನ್ನಡ, ಮನ ಕನ್ನಡ ನುಡಿ ಕನ್ನಡವೆಮ್ಮವು
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ
ಹರಸು ತಾಯೆ ಸುತರ ತಾಯೆ ನಮ್ಮ ಜನ್ಮದಾತೆಯೆ,
ನಮ್ಮ ಜನ್ಮದಾತೆಯೆ... ಆಆಆ....

ತನ್ನ ಮರೆಯ ಕಂಪನರಿಯ ಗಗನ ಹೊರಗೆ ಹುಡುಕುವ
ಮೃಗದ ಸೇಡು ನಮ್ಮ ಪಾಡು ಪರರ ನುಡಿಗೆ ಮಿಡುಕುವ
ಕನ್ನಡ ಕಸ್ತೂರಿಯನ್ನ ಹೊಸತು ಸಿರೆಂತೀರದೆನ್ನ
ಸುರಭಿಯಲ್ಲಿ ನೀನದನ್ನ ನವಶಕ್ತಿಯನ್ನೆಬ್ಬಿಸು,
ನವಶಕ್ತಿಯನ್ನೆಬ್ಬಿಸು, ನವಶಕ್ತಿಯನ್ನೆಬ್ಬಿಸು
ಹೊಸ ಸುಗಂಧ, ರಸಗೆಯಿಂದ ಜಗದಿ ಹೆಸರ ಹಬ್ಬಿಸು
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ
ಹರಸು ತಾಯೆ ಸುತರ ತಾಯೆ ನಮ್ಮ ಜನ್ಮದಾತೆಯೆ,
ನಮ್ಮ ಜನ್ಮದಾತೆಯೆ
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ
ಹರಸು ತಾಯೆ ಸುತರ ತಾಯೆ ನಮ್ಮ ಜನ್ಮದಾತೆಯೆ,
ನಮ್ಮ ಜನ್ಮದಾತೆಯೆ.... ಆಆಆ...... 
------------------------------------------------------------------------------------------------------------------------

No comments:

Post a Comment