282. ಜನುಮದ ಗೆಳತಿ (2008)

ಜನುಮದ ಗೆಳತಿ ಚಲನಚಿತ್ರದ ಹಾಡುಗಳು 
  1. ಹೃದಯ ಮುಗುಳು ನಗಲು
  2. ಮುಗಿಲೆ ಕೊಡಲೇ 
  3. ನೂರೆಂಟು ಮಾತು 
  4. ಸಿಮ್ರಾನ್ ಸಿಮ್ರಾನ್ 
  5. ಧಗ ಧಗಿಸೋ 
ಜನುಮದ ಗೆಳತಿ (2008) - ಹೃದಯ ಮುಗುಳು ನಗಲು,
ಸಂಗೀತ: ವಿ.ಮನೋಹರ, ಸಾಹಿತ್ಯ: ಯೋಗರಾಜ್ ಭಟ್  ಗಾಯನ : ರಾಜೇಶ್ ಕೃಷ್ಣನ್, ನಂದಿತಾ

ಹೃದಯ ಮುಗುಳು ನಗಲು, ಅದು ಮೊದಲ ಮಧುರ ಮಿಡಿತ
ಒಲವು ನಲಿದು ಬರಲು, ಎಡವುತಿದೆ ಎದೆಯ ಬಡಿತ
ಮಿಡಿಯಲು ಕಲಿತ ಹೊಸ ಮೌನ ವೀಣೆ ನೀನಾದೆ
ಹಾಡಲು ಕಲಿತ ಹೊಸ ಮೂಕ ಪ್ರೇಮಿ ನಾನಾದೆ
ಹೃದಯ ಮುಗುಳು ನಗಲು, ಅದು ಮೊದಲ ಮಧುರ ಮಿಡಿತ
ಒಲವು ನಲಿದು ಬರಲು, ಎಡವುತಿದೆ ಎದೆಯ ಬಡಿತ
ಮಿಡಿಯಲು ಕಲಿತ ಹೊಸ ಮೌನ ವೀಣೆ ನಾನಾದೆ
ಹಾಡಲು ಕಲಿತ ಹೊಸ ಮೂಕ ಪ್ರೇಮಿ ನೀನಾದೆ

ತಿಳಿಗೊಳದಲ್ಲಿ ಬೆಳಕಿನ ಕಿರಣ, ಇಳಿಯುವ ಹಾಗೆ ಈ ಪ್ರಣಯ
ಹಿಮಮಣಿ ಮಾಲೆ ಚಿಗುರೆಲೆ ಮೇಲೆ, ಹೊಳೆಯುವ ಹಾಗೆ ಈ ಹರೆಯ
ಗುಂಡಿಗೆಯ ಕವನಗಳ ಕಣ್ಣು ಹಾಡಿದೆ
ಚೆಂದುಟಿಯು ಕಂಪಿಸುತ ನಿನ್ನ ಕೂಗಿದೆ
ಹಾಡಲು ಕಲಿತ ಹೊಸ ಮೂಕ ಪ್ರೇಮಿ ನಾನಾದೆ
ಮಿಡಿಯಲು ಕಲಿತ ಹೊಸ ಮೌನ ವೀಣೆ ನಾನಾದೆ
ಸುರಿಯುವ ಮಳೆಯ ಹನಿ ಹನಿ ಗಳಿಗೆ, ಮಾತನು ಕಲಿಸಿ ನಗಿಸುವ ಬಾ
ನಸುನಗುತಿರುವ ಬೆಳಗಿನ ರವಿಗೆ, ಮಿನುಗುವ ಬಿಂದಿ ಇರಿಸುವ ಬಾ
ಮುಡಿಸುವ ಬಾ ನವಿಲುಗರಿ ಆಸೆ ಮುಗಿಲಿಗೆ
ಹುಡುಕುವ ಬಾ ಹೊಸ ಹೆಸರ ನಮ್ಮ ಪ್ರೀತಿಗೆ
ಹಾಡಲು ಕಲಿತ ಹೊಸ ಮೂಕ ಪ್ರೇಮಿ ನಾನಾದೆ
ಮಿಡಿಯಲು ಕಲಿತ ಹೊಸ ಮೌನ ವೀಣೆ ನೀನಾದೆ
ಹೃದಯ ಮುಗುಳು ನಗಲು, ಅದು ಮೊದಲ ಮಧುರ ಮಿಡಿತ
ಒಲವು ನಲಿದು ಬರಲು, ಎಡವುತಿದೆ ಎದೆಯ ಬಡಿತ
ಮಿಡಿಯಲು ಕಲಿತ ಹೊಸ ಮೌನ ವೀಣೆ ನಾನಾದೆ
ಹಾಡಲು ಕಲಿತ ಹೊಸ ಮೂಕ ಪ್ರೇಮಿ ನಾನಾದೆ
------------------------------------------------------------------------------------------------------

ಜನುಮದ ಗೆಳತಿ (2008) - ಮುಗಿಲೆ ಕೊಡಲೇ 
ಸಂಗೀತ: ವಿ.ಮನೋಹರ, ಸಾಹಿತ್ಯ: ಜಯಂತ ಕಾಯ್ಕಿಣಿ  ಗಾಯನ : ವಿಜಯಪ್ರಕಾಶ 

------------------------------------------------------------------------------------------------------

ಜನುಮದ ಗೆಳತಿ (2008) - ನೂರೆಂಟು ಮಾತು 
ಸಂಗೀತ: ವಿ.ಮನೋಹರ, ಸಾಹಿತ್ಯ: ಜಯಂತ ಕಾಯ್ಕಿಣಿ  ಗಾಯನ : ಉದಿತನಾರಾಯಣ, ಅನುರಾಧ ಶ್ರೀರಾಮ 

------------------------------------------------------------------------------------------------------

ಜನುಮದ ಗೆಳತಿ (2008) - ಸಿಮ್ರಾನ್ ಸಿಮ್ರಾನ್ 
ಸಂಗೀತ: ವಿ.ಮನೋಹರ, ಸಾಹಿತ್ಯ: ನಾಗೇಂದ್ರ ಪ್ರಸಾದ  ಗಾಯನ : ಸುನಿತಾ, ಕೋರಸ್  

------------------------------------------------------------------------------------------------------

ಜನುಮದ ಗೆಳತಿ (2008) - ಧಗ ಧಗಿಸೋ 
ಸಂಗೀತ: ಸಾಹಿತ್ಯ: ವಿ.ಮನೋಹರ,  ಗಾಯನ : ಎಸ್.ಪಿ.ಬಿ 

------------------------------------------------------------------------------------------------------

No comments:

Post a Comment