283. ಪಲ್ಲವಿ ಅನುಪಲ್ಲವಿ (1984)


ಪಲ್ಲವಿ ಅನುಪಲ್ಲವಿ ಚಿತ್ರದ ಹಾಡುಗಳು 
  1. ನಗುವ ನಯನ ಮಧುರ ಮೌನ 
  2. ನಗು ಎಂದಿದೇ ಮಂಜಿನ ಬಿಂದು 
  3. ಹೃದಯ ರಂಗೋಲಿ ಅಳಿಸುತಿದೆ ಇಂದು 
  4. ಓ ಪ್ರೇಮಿ ಒಹ್ ಪ್ರೇಮಿ 
ಪಲ್ಲವಿ ಅನುಪಲ್ಲವಿ (1984) - ನಗುವ ನಯನ...
ಸಂಗೀತ: ಇಳಯರಾಜ  ಸಾಹಿತ್ಯ: ಅರ್.ಎನ್. ಜಯಗೋಪಾಲ್ ಗಾಯಕರು: ಎಸ್.ಪಿ.ಬಿ, ಎಸ್. ಜಾನಕಿ  


ಹೆಣ್ಣು:  ಲ ಲ ಲ ಲ ಲ ಲ ಲ ಲ ಲ ಲ ಲಾ ಲ ಲ ಲ ಲ ಲ ಲ ಲ ಲ ಲಾ ಲ ಲ ಲಾ
ಗಂಡು :  ಹೂಂಹೂಂಹೂಂಹೂಂ.. ಹ ಹ ಹಾ ಹ ಹಹಾಹ ಲ ಲ ಲಾ ಲ ಲ ಲಾ ಲ
            ನಗುವ ನಯನ ಮಧುರ ಮೌನ ಮಿಡಿವಾ ಹೃದಯಾ ಇರೆ ಮಾತೇಕೆ?
ಹೆಣ್ಣು : ಹೊಸ ಭಾಷೆಯಿದು.. ರಸ ಕಾವ್ಯವಿದು ಇದ ಹಾಡಲು ಕವಿ ಬೇಕೇ?
          ನಗುವ ನಯನ ಮಧುರ ಮೌನಾ
ಗಂಡು:  ಮಿಡಿವ ಹೃದಯ ಇರೆ ಮಾತೇಕೆ?

ಗಂಡು: ನಿಂಗಾಗಿ ಹೇಳುವೆ ಕತೆ ನೂರನು  ನಾನಿಂದು ನಗಿಸುವೆ ಈ ನಿನ್ನನು
ಹೆಣ್ಣು:  ಇರುಳಲ್ಲು ಕಾಣುವೆ ಕಿರು ನಗೆಯನು  ಕಣ್ಣಲ್ಲಿ ಹುಚ್ಚೆದ್ದ ಹೊಂಗನಸನು
ಗಂಡು:  ಜೊತೆಯಾಗಿ ನಡೆವೆ ನಾ ಮಳೆಯಲೂ ಬಿಡದಂತೆ ಹಿಡಿವೆ ಈ ಕೈಯ್ಯನು
ಹೆಣ್ಣು : ಗೆಳೆಯ ಜೊತೆಗೆ ಹಾರಿ ಬರುವೆ  ಬಾನಾ ಎಲ್ಲೆ ದಾಟಿ ನಲಿವೆ
ಗಂಡು:  ನಗುವ ನಯನ ಮಧುರ ಮೌನ ಮಿಡಿವ ಹೃದಯ ಇರೆ ಮಾತೇಕೆ?

ಹೆಣ್ಣು:  ಈ ರಾತ್ರಿ ಹಾಡು ಪಿಸು ಮಾತಲಿ ನಾ ತಂದೆ ಇನಿದಾದ ಸವಿ ರಾಗವ
ಗಂಡು:  ನೀನಲ್ಲಿ ನಾನಿಲ್ಲಿ ಏಕಾಂತವೆ ನಾ ಕಂಡೆ ನನ್ನದೆ ಹೊಸ ಲೋಕವ
ಹೆಣ್ಣು:  ಈ ಸ್ನೇಹ ತಂದಿದೆ ಎದೆಯಲ್ಲಿ ಎಂದೆಂದೂ ಅಳಿಸದ ರಂಗೋಲಿ
ಗಂಡು:  ಆಸೆ ಹೂವ ಹಾಸಿ ಕಾದೆ ನಡೆ ನೀ ಕನಸಾ ಹೊಸಕಿ ಬಿಡದೆ
ಹೆಣ್ಣು:  ನಗುವ ನಯನ ಮಧುರ ಮೌನ ಮಿಡಿವ ಹೃದಯ ಇರೆ ಮಾತೇಕೆ?
ಗಂಡು:  ಹೊಸ ಭಾಷೆಯಿದು ರಸ ಕಾವ್ಯವಿದು ಇದ ಹಾಡಲು ಕವಿ ಬೇಕೆ?
ಇಬ್ಬರೂ  :  ಲ ಲ ಲ ಲ ಲ ಲ ಲ ಲ ಲ ಲ ಲಾಆಆಆಆಆಆಆಆಆಅ
----------------------------------------------------------------------------------------------------------------------

ಪಲ್ಲವಿ ಅನುಪಲ್ಲವಿ (1984) - ನಗೂ ಎಂದಿದೆ ಮಂಜಿನಾ ಬಿಂದು
ಸಂಗೀತ: ಇಳಯರಾಜ   ಸಾಹಿತ್ಯ: ಅರ್.ಎನ್. ಜಯಗೋಪಾಲ್ ಗಾಯಕರು: ಎಸ್. ಜಾನಕಿ  


ನಗೂ ಎಂದಿದೆ ಮಂಜಿನಾ ಬಿಂದು
ನಗೂ ಎಂದಿದೆ ಮಂಜಿನಾ ಬಿಂದು
ನಲೀ ಎಂದಿದೆ ಗಾಳಿ ಇಂದು
ನಗೂ ಎಂದಿದೆ ಮಂಜಿನಾ ಬಿಂದು

ಚಿಲಿ ಪಿಲಿ ಎಂದು ಹಕ್ಕಿಯು ಹೇಳಿದೆ ಈಗಾ ಬಾ ಬಾ
ಜೊತೆಯಲಿ ಕೂಡಿ ನಮ್ಮಂತೆ ಹಾರು ನೀ  ಬೇಗಾ ಬಾ ಬಾ
ಹಾರಲು ಆಗದೇ  ಸೋತಿರಲು  ಬಾಳಿಗೆ ಗೆಳೆಯನು ಬೇಕಿರಲು..
ಬಯಸಿದೆ ಹರಸಿದೆ ನಾ  ಕಂಡೆ ಈಗಳೆನಾ  ನನ್ನ ಸ್ನೇಹಿತನಾ
ಇದೇ ನಗುವಾ ಮನದ ಸ್ಪಂದ  ಸವೀ ಮಧುರ ಮಮತೆ ಬಂಧ

ಆ ಆ ಆ ಅ ಆಅ ಆ ಆಆಅ ತ ನ ನ ನ ನ ನಾ..
ತ ನ ನ ನ ನ ನಾ ನಅ ಅ ಅ ಆ ಆಅ
ಹಾಡುವ ಬಾ ಬಾ ನಗೆಯಲೆ ಕೊಡುವುದು ಜಾಗ ಈಗ
ಕುಣಿಯುವ ಬಾ ಬಾ  ಮಳೆಹನಿ ತರುವುದು ತಾಳ ಮೇಳ
ಪ್ರಕೃತಿಯು ಬರೆದಾ ಕವನವಿದು ಮಮತೆಯ ಸೊಗಸಿನ ಪಲ್ಲವಿಯು
ಸುಂದರ ಸ್ನೇಹವಿದು ಎಂಥಾ ಅನುಭಂಧಾ ಎಂಥಾ ಆನಂದಾ
ಇದೇ ನಗುವ ಮನದ ಸ್ಪಂದ ಸವೀ ಮಧುರ ಮಮತೆ ಬಂಧಾ
ಇದೇ ನಗುವಾ ಮನದ ಸ್ಪಂದ
-----------------------------------------------------------------------------------------------------------------------

ಪಲ್ಲವಿ ಅನುಪಲ್ಲವಿ (1984) - ಹೃದಯ ರಂಗೋಲಿ
ಸಂಗೀತ: ಇಳಯರಾಜ  ಸಾಹಿತ್ಯ: ಅರ್.ಎನ್. ಜಯಗೋಪಾಲ್ ಗಾಯಕಿ: ಎಸ್.ಪಿ.ಶೈಲಜ   


ಹೃದಯ ರಂಗೋಲಿ ಅಳಿಸುತಿದೆ ಇಂದು |
ಹೃದಯ ರಂಗೋಲಿ ಅಳಿಸುತಿದೆ ಇಂದು
ಮನದಲಿ ಅರಿಯದ ನೋವೊಂದು ತಂದು
ಹೃದಯ ರಂಗೋಲಿ ಅಳಿಸುತಿದೆ ಇಂದು
ಮನದಲಿ ಅರಿಯದ ನೋವೊಂದು ತಂದು
ಹೃದಯ ರಂಗೋಲೀ ಆಆಆಆ

ಬರುವ ತನಕ ನೀನು  ಅರಳಲಿಲ್ಲ ಆಸೆ
ಒಲುಮೆಯನು ಮೀಟಿದೆ ಕನಸುಗಳ ತುಂಬಿದೆ
ಒಲುಮೆಯನು ಮೀಟಿದೆ ಕನಸುಗಳ ತುಂಬಿದೆ
ಮಿಡಿದ ಹಾಡಲಿ ಸ್ವರ ತಪ್ಪಾ ಶೃತಿ ತಪ್ಪಾ ಅ ಅ ಆಅ
ಹೃದಯ ರಂಗೋಲಿ ಅಳಿಸುತಿದೆ ಇಂದು
ಮನದಲಿ ಅರಿಯದ ನೋವೊಂದು ತಂದು
ಹೃದಯ ರಂಗೋಲೀ..... ಅ ಅ ಅ ಆಅ

ಸ್ವಾತಿ ಪ್ರೀತಿ ಮಾಡಿ... ಹೋಗಲಲ್ಲಿ ಮೋಡಿ
ನೆನಪುಗಳು ನೂರಿದೆ.. ಕೆದಕುತಿದೆ ನನ್ನೆದೆ
ನೆನಪುಗಳು ನೂರಿದೆ.. ಕೆದಕುತಿದೆ ನನ್ನೆದೆ
ಹರಿಸಿ ಕಂಬನಿ ಎಲ್ಲಿ ನೀ ನೀನೆಲ್ಲೀ
ಹೃದಯ ರಂಗೋಲಿ ಅಳಿಸುತಿದೆ ಇಂದು |
ಹೃದಯ ರಂಗೋಲಿ ಅಳಿಸುತಿದೆ ಇಂದು
ಮನದಲಿ ಅರಿಯದ ನೋವೊಂದು ತಂದು
ಹೃದಯ ರಂಗೋಲೀ ಆ ಆ ಆ
----------------------------------------------------------------------------------------------------------------------

ಪಲ್ಲವಿ ಅನುಪಲ್ಲವಿ (1984) - ಓ ಪ್ರೇಮಿ ಓ ಪ್ರೇಮಿ
ಸಂಗೀತ: ಇಳಯರಾಜ  ಸಾಹಿತ್ಯ: ಅರ್.ಎನ್. ಜಯಗೋಪಾಲ್ ಗಾಯಕರು: ಎಸ್. ಪಿ. ಬಿ.  


ಸ್ಟಾಪ್... ರಿವೋಕ್
ರ ಪ ಪಾ.. ಒ ಪಾ ಪಾ
ಓ ಪ್ರೇಮಿ  ಓ ಪ್ರೇಮಿ ಕನಸಲ್ಲಿ ಒಂದು ರೂಪಸಿ ಬಂದು 
ಕರೆದಾಗ ಹೇ ನಾ ಸೋತೆ ಕರೆದಾಗ ಹೇ ನಾ ಸೋತೆ
ಓ ಪ್ರೇಮಿ ಓ ಪ್ರೇಮಿ

ಇಲ್ಲೋ ಅಲ್ಲೋ ಗುಂಪಲಿ ಎಲ್ಲೋ ಇರುಳಲ್ಲಿ ಸೇರಿ ಹೋದಳು
ಇಲ್ಲೋ ಅಲ್ಲೋ ಗುಂಪಲಿ ಎಲ್ಲೋ ಇರುಳಲ್ಲಿ ಸೇರಿ ಹೋದಳು
ಬೆಳಕನ್ನು ತನ್ನಿ ಹುಡುಕುವ ಬನ್ನಿ
ಬೆಳಕನ್ನು ತನ್ನಿ ಹುಡುಕುವ ಬನ್ನಿ  ಚಂದಿರ ನೀ ಕೊಂಚ ಕಿರಣ ತಾರ
ಓ ಪ್ರೇಮಿ .. ಓ ಪ್ರೇಮಿ ಕನಸಲ್ಲಿ ಒಂದು.. ರೂಪಸಿ ಬಂದು 
ಕರೆದಾಗ ಹೇ ನಾ ಸೊತೆ.. ಕರೆದಾಗ ಹೇ ನಾ ಸೊತೆ
ಓ ಪ್ರೇಮಿ .. ಓ ಪ್ರೇಮಿ

ಪಾ ಪ ಪ ಪಾ ಪ ಪ ಪ ಪಾಅ ಪಾ ಪ ಪ ಪಾ ಪ ಪ ಪ ಪಾಅ
ಪಾ ಪ ಪ ಪಾ ಪ ಪ ಪ ಪಾಅ  ಪಾ ಪ ಪ ಪಾ ಪ ಪ ಪ ಪಾಅ
ಅವಳಾ ಬದಲು ಇವಳಾ ಕಂಡೆ  ಎದೆಯಲ್ಲಿ ತಾಳ ತಪ್ಪಿತು
ಅವಳಾ ಬದಲು ಇವಳಾ ಕಂಡೆ  ಹ್ಹಾ  ಎದೆಯಲ್ಲಿ ತಾಳ ತಪ್ಪಿತು
ನನಸಿಲ್ಲಿ ನಗಲು ಕನಸೇಕೆ ಇನ್ನು..ರ ಪ ಪ ಪ ಪಾ
ನನಸಿಲ್ಲಿ ನಗಲು ಕನಸೇಕೆ ಇನ್ನು ಗಾಳಿಯಲಿ ಈ ಮಾತು ತೂರಿ ಬಂದು
ಓ ಪ್ರೇಮಿ ಓ ಪ್ರೇಮಿ  ಎದುರಲ್ಲಿ ಬಂದು ರೂಪಸಿ ಇಂದು  ಕರೆಯುವಳೆ ಹೇ ಈ ನನ್ನ
ಕರೆಯುವಳೆ ಹೇ ಈ ನನ್ನ ಓ ಪ್ರೇಮೀ.....
--------------------------------------------------------------------------------------------------------------------------

No comments:

Post a Comment