284. ಮುಂಗಾರಿನ ಮಿಂಚು (1997)

ಮುಂಗಾರಿನ ಮಿಂಚು ಚಲನಚಿತ್ರದ ಹಾಡುಗಳು 
  1. ಹೃದಯದ ಅಂಚಿನಲಿ ಮುಂಗಾರಿನ ಮಿಂಚು
  2. ಸೈಲೆನ್ಸ ಸೈಲೆನ್ಸ ಎಲ್ಲಾ ಸೈಲೆನ್ಸ 
  3. ದೀಪಾವಳಿಗೆ ತೋಟದ ಮನೆಗೆ 
  4. ಸಖಿ ಶಂಕುತಲಾ ಚಿಂತೇಲಿ ಕುಂತಳ 
  5. ವಸಂತದಲ್ಲಿ ಸಂತನಾಗ ಬೇಡ 
ಮುಂಗಾರಿನ ಮಿಂಚು (೧೯೯೭) - ಹೃದಯದ ಅಂಚಿನಲಿ ಮುಂಗಾರಿನ ಮಿಂಚು
ಸಂಗೀತ ಹಾಗು ಸಾಹಿತ್ಯ: ವಿ.ಮನೋಹರ್  ಗಾಯನ : ರಾಜೇಶ್ ಕೃಷ್ಣನ್, ಚಿತ್ರಾ

ಹೃದಯದ ಅಂಚಿನಲಿ ಮುಂಗಾರಿನ ಮಿಂಚು
ಮಿನುಗುತ ಮರೆಯಾಯ್ತು ಮುಂಗಾರಿನ ಮಿಂಚು
ಕಾಮನ ಬಿಲ್ಲಿನಲಿ ಇನ್ನೇನಿದೆ
ಪ್ರೇಮದ ಬಣ್ಣಗಳು ಏನಾದವು
ಓ ಮೇಘವೇ ದೂರಾಗಿರು ಇನ್ನೇತಕೆ ಸಂದೇಶವು
ಹೃದಯದ ಅಂಚಿನಲಿ ಮುಂಗಾರಿನ ಮಿಂಚು
ಮಿನುಗುತ ಮರೆಯಾಯ್ತು ಮುಂಗಾರಿನ ಮಿಂಚು
ಕಾಮನ ಬಿಲ್ಲಿನಲಿ ಇನ್ನೇನಿದೆ ಪ್ರೇಮದ ಬಣ್ಣಗಳು ಏನಾದವು

ಓ ಮೇಘವೇ ನೀ ಬಾರೆಯ ಸಂದೇಶವ ನೀ ತಾರೆಯ
ಈ ಸುಂದರ ಸಂಜೆ, ಬರಿ ಬಂಜೆ
ಈ ಸುಂದರ ಸಂಜೆ, ಬರಿ ಬಂಜೆ ನೀನಿಲ್ಲದೆ ನಲ್ಲೆ
ಈ ಸುಂದರ ಸಂಜೆ, ಬರಿ ನಂಜೆ
ಈ ಸುಂದರ ಸಂಜೆ, ಬರಿ ನಂಜೆ ನೀನಿಲ್ಲದೆ ನಲ್ಲ
ಬಳಿಗೆ ಬರಬೇಡ, ಓ ಮಂದಾನಿಲ
ಅರಳದೆ ಇರು ನೀನು, ಓ ಕೆಂದಾವರೆ
ಸಿಹಿ ನೆನಪಿನ, ಬಿಡಿ ಹೂವುಗಳ
ನಾ ಬೆಸೆಯುತ, ಕಾದಿರುವೆನು
ನೀ ನನ್ನೆದೆಯಿಂದ, ಮರೆಯಾದೆ
ಈ ತೋಳುಗಳೀಗ, ಬರಿದಾಯ್ತು ನೀನಿಲ್ಲದೆ ನಲ್ಲೆ
ನಾ ಗಾಜಿನ ಗೊಂಬೆ, ಉಸಿರಿಲ್ಲ
ಈ ಪ್ರೇಮದ ನೆಲದಿ, ಹಸಿರಿಲ್ಲ ನೀನಿಲ್ಲದೆ ನಲ್ಲ
ಮುಗಿಲಿಲ್ಲದ ಬಾನು, ಬರಿ ಬೆತ್ತಲು
ಕನಸನೆ ಅಳಿಸಿರುವ, ಈ ಕಂಗಳು
ಈ ಪ್ರೇಮಕೆ, ಮಹಲೊಂದನು
ನಾ ಕಟ್ಟಲು, ನೆರವಾಗು ಬಾ
ಹೃದಯದ ಅಂಚಿನಲಿ ಮುಂಗಾರಿನ ಮಿಂಚು
ಮಿನುಗುತ ಮರೆಯಾಯ್ತು ಮುಂಗಾರಿನ ಮಿಂಚು
ಕಾಮನ ಬಿಲ್ಲಿನಲಿ ಇನ್ನೇನಿದೆ
ಪ್ರೇಮದ ಬಣ್ಣಗಳು ಏನಾದವು
ಓ ಮೇಘವೇ ದೂರಾಗಿರು ಇನ್ನೇತಕೆ ಸಂದೇಶವು
---------------------------------------------------------------------------

ಮುಂಗಾರಿನ ಮಿಂಚು (೧೯೯೭) - ಸೈಲೆನ್ಸ ಸೈಲೆನ್ಸ ಎಲ್ಲಾ ಸೈಲೆನ್ಸ 
ಸಂಗೀತ ಹಾಗು ಸಾಹಿತ್ಯ: ವಿ.ಮನೋಹರ್  ಗಾಯನ : ರಾಜೇಶ್ ಕೃಷ್ಣನ್, ಚಿತ್ರಾ

---------------------------------------------------------------------------

ಮುಂಗಾರಿನ ಮಿಂಚು (೧೯೯೭) - ದೀಪಾವಳಿಗೆ ತೋಟದ ಮನೆಗೆ 
ಸಂಗೀತ ಹಾಗು ಸಾಹಿತ್ಯ: ವಿ.ಮನೋಹರ್  ಗಾಯನ : ರಾಜೇಶ್ ಕೃಷ್ಣನ್, ಸೌಮ್ಯ, ಚಂದ್ರಿಕಾ  

---------------------------------------------------------------------------

ಮುಂಗಾರಿನ ಮಿಂಚು (೧೯೯೭) - ಸಖಿ ಶಂಕುತಲಾ ಚಿಂತೇಲಿ ಕುಂತಳ 
ಸಂಗೀತ ಹಾಗು ಸಾಹಿತ್ಯ: ವಿ.ಮನೋಹರ್  ಗಾಯನ : ರಾಜೇಶ್ ಕೃಷ್ಣನ್, ಸಿ.ಅಶ್ವಥ 

---------------------------------------------------------------------------

ಮುಂಗಾರಿನ ಮಿಂಚು (೧೯೯೭) - ವಸಂತದಲ್ಲಿ ಸಂತನಾಗ ಬೇಡ 
ಸಂಗೀತ ಹಾಗು ಸಾಹಿತ್ಯ: ವಿ.ಮನೋಹರ್  ಗಾಯನ : ರಾಜೇಶ, ಸುಮಶಾಸ್ತ್ರಿ 

---------------------------------------------------------------------------

No comments:

Post a Comment