285. ದೇವರೇ ದಿಕ್ಕು (1977)

ದೇವರೇ ದಿಕ್ಕು ಚಿತ್ರದ ಹಾಡುಗಳು 
  1. ಹೃದಯದಲ್ಲಿ ಆಸೆ ಮೂಡಿ 
  2. ಗೌರಮ್ಮ ಬರುತಾಳೆ 
  3. ಭೂಮಿಯು ಬಿರಿದೂ 
  4. ಮಣ್ಣಿನ ಮಕ್ಕಳು 
ದೇವರೇ ದಿಕ್ಕು (1977)
ಸಂಗೀತ: ವಿಜಯಭಾಸ್ಕರ್  ಸಾಹಿತ್ಯ: ಬಸವರಾಜ್ ಕೆಸ್ತೂರ್  ಗಾಯನ: ಎಸ್.ಪಿ.ಬಿ, ವಾಣಿ ಜಯರಾಮ್

ಗಂಡು : ಹೃದಯದಲ್ಲಿ ಆಸೆ ಮೂಡಿ  ಮನದಿ ಮಾತು ನಿಂತಿದೆ
            ನಾಚಿ ನಾಚಿ ನಾಚಿ ತಾನು ಮನಸಿನಿಂದ ಬಾರದೆ ಬಾರದೆ
ಹೆಣ್ಣು : ಹೃದಯದಲ್ಲಿ ಆಸೆ ಮೂಡಿ  ಮನದಿ ಮಾತು ನಿಂತಿದೆ
          ನಾಚಿ ನಾಚಿ ನಾಚಿ ತಾನು ಮನಸಿನಿಂದ ಬಾರದೆ ಬಾರದೆ

ಹೆಣ್ಣು : ಏಕೋ ಏನೋ ಸೋತು ಹೋದೆ ನಿನ್ನ ಕಣ್ಣ ನೋಟಕೆ
         ಏಕೋ ಏನೋ ಸೋತು ಹೋದೆ ನಿನ್ನ ಕಣ್ಣ ನೋಟಕೆ
         ಓಡಿ ಓಡಿ ಓಡಿ ಬಂದೆ  ನಿನ್ನ ಪ್ರೇಮದಾಟಕೆ
ಗಂಡು : ಕವಿಯು ಬರೆದ ಕವನವಾದೆ ನಿನ್ನ ಪ್ರೇಮ ರಾಗಕೆ
ಹೆಣ್ಣು :  ಹೃದಯದಲ್ಲಿ ಆಸೆ ಮೂಡಿ ಮನದಿ ಮಾತು ನಿಂತಿದೆ
ಗಂಡು : ನಾಚಿ ನಾಚಿ ನಾಚಿ ತಾನು ಮನಸಿನಿಂದ ಬಾರದೆ ಬಾರದೆ

ಗಂಡು : ತನು ಮನ ನಿನ್ನದಾಯ್ತು ನಿನ್ನ ನಾನು ಸೇರಲೆ
           ತನು ಮನ ನಿನ್ನದಾಯ್ತು ನಿನ್ನ ನಾನು ಸೇರಲೆ
           ಹಾಡಿ ಹಾಡಿ ಹಾಡಿ ನಾನು ಹುಚ್ಚನಾಗಿ ಕುಣಿಯಲೆ
ಹೆಣ್ಣು : ವಿಧಿಯ ಕುಸುಮವಾಗಿ ಬಂದು ನಿನ್ನ ಪೂಜೆ ಗೈಯಲೆ
ಇಬ್ಬರು : ಹೃದಯದಲ್ಲಿ ಆಸೆ ಮೂಡಿ ಮನದಿ ಮಾತು ನಿಂತಿದೆ
           ನಾಚಿ ನಾಚಿ ನಾಚಿ ತಾನು  ಮನಸಿನಿಂದ ಬಾರದೆ ಬಾರದೆ
------------------------------------------------------------------------------------------------------------------------

ದೇವರೇ ದಿಕ್ಕು (1977)
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಬಸವರಾಜ್ ಕೆಸ್ತೂರ್ ಗಾಯನ: ಎಸ್.ಪಿ.ಬಿ, ವಾಣಿ ಜಯರಾಮ್

ಹೆಣ್ಣು : ಅಆಹಾ... ಒಹೋ.... ಲಾಲಾಲಾ ಲಾಲಾಲಾ (ಲಾಲಾಲಾ  ಲಾಲಾಲಾ)
ಗಂಡು : ಗೌರಮ್ಮ ಬರುತ್ತಾಳೆ ಸಿರಿಯನ್ನೇ ತರುತ್ತಾಳೇ ನಮ್ಮೂರ ಹುಡುಗಿ...  ಚಂದ 
            ಅವಳೊಮ್ಮೆ ನಕ್ಕಾಗ ನಗುನಗುತಾ ಬರುವಾಗ ಯಾರಿಲ್ಲ ಅವಳ... ಅಂದ 
ಹೆಣ್ಣು : ಓಡೋಡಿ ಬಂದಾಗ ರಂಗಯ್ಯನ ಕಂಡಾಗ ರಂಗಾಯಿತೆನ್ನ.... ಮುಖವೂ 
          ನೀ ನನ್ನ ನೋಡದಾಗ ಕೈ ಹಿಡಿದು ಎಳೆದಾಗ ಇನ್ನಿಲ್ಲ ಅಂತ.. ಸುಖವೂ 

ಗಂಡು : ಹತ್ತಿರದ ಮನೆಯವಳು ಅತ್ತಿತ್ತ ಬರದವಳೂ ಅರೆರೇರ್ರೇ  .... 
            ಹತ್ತಿರದ ಮನೆಯವಳು ಅತ್ತಿತ್ತ ಬರದವಳೂ ಬಂದಾಳು ನನ್ನ ಕಂಡು 
            ನಡೆವಾಗ ನವಿಲಂತೇ ಮುಖವೆಲ್ಲಾ ಹೂವಂತೇ ನಕ್ಕಾಳು ಇತ್ತ ಬಂದು 
            ನಕ್ಕಾಳು ಇತ್ತ ಬಂದು ಹೋಯ್ 
ಹೆಣ್ಣು : ನೀ ನನ್ನ ನೋಡದಾಗ ಕೈ ಹಿಡಿದು ಎಳೆದಾಗ ಇನ್ನಿಲ್ಲ ಅಂತ.. ಸುಖವೂ 

ಹೆಣ್ಣು : ಕೈ ಬೀಸಿ ಕರೆದವನೇ ಹಿಡಿದೆನ್ನ ಎಳೆದವನೇ   
          ಕೈ ಬೀಸಿ ಕರೆದವನೇ ಹಿಡಿದೆನ್ನ ಎಳೆದವನೇ ಸರಿಯೇನು ನಿನ್ನ ಆಟ   
          ಸೆರಗೆಳೆದು ಕಾಡ್ಯಬ್ಯಾಡ ಕಣ್ಣ ಸನ್ನೆ ಮಾಡಬ್ಯಾಡ ಬಲ್ಲೇನು ನಿನ್ನ ನೋಟ 
          ಬಲ್ಲೇನು ನಿನ್ನ ನೋಟ 
------------------------------------------------------------------------------------------------------------------------

ದೇವರೇ ದಿಕ್ಕು (1977)
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಬಸವರಾಜ್ ಕೆಸ್ತೂರ್ ಗಾಯನ: ವಾಣಿ ಜಯರಾಮ್

ಭೂಮಿಯು ಬಿರಿದು ಬಾಯ್ ಬಿಡುವಲ್ಲಿ ಬಾಳಲು ಬಹುದೇನೂ
ಬಾಳಲು ಬಹುದೇನೂ
ಬಾನಲಿ ಬೆಂಕಿ ತಾ ಸುರಿವಲ್ಲಿ ಜೀವಿಗೆ ನೆಲೆ ಏನೂ
ಜೀವಿಗೆ ನೆಲೆ ಏನೂ

ಬೇಲಿಯೇ ಎದ್ದು ಹೊಲವನೇ ಮೇಯಲು ರೈತನ ಬದುಕೇನೂ
ಕುರುಡನ ಕಾಲು ತಾ ಘಾವಾಗಲೂ ಮುಂದಿನ ಗತಿಯೇನು
ಮೈಲಿಗೆ ನಿಜವೂ ಸಾಲುವುದಾದರೆ ನೀತಿಯ ನಿಲುವೇನೂ
ಭೂಮಿಯು ಬಿರಿದು ಬಾಯ್ ಬಿಡುವಲ್ಲಿ ಬಾಳಲು ಬಹುದೇನೂ
ಬಾಳಲು ಬಹುದೇನೂ

ಆಸ್ತಿಗೆ ಮೋಸದ ಬೆಸುಗೆಯು ಆದರೇ ಇಳಿಸುವ ಪರಿಯೇನೂ 
ತಾಯಿಯು ತಾನು ಮೂಕಿಯು ಆದರೇ ಮಕ್ಕಳ ಪಾಡೇನು
ಭೃಮದ ಬಯಕೆ ನಂಜಿಲ್ಲಾ ಆದರೇ ಕಮಲದ ಬಳಸಿರೆನು
ಭೂಮಿಯು ಬಿರಿದು ಬಾಯ್ ಬಿಡುವಲ್ಲಿ ಬಾಳಲು ಬಹುದೇನೂ
ಬಾಳಲು ಬಹುದೇನೂ
ಬಾನಲಿ ಬೆಂಕಿ ತಾ ಸುರಿವಲ್ಲಿ ಜೀವಿಗೆ ನೆಲೆ ಏನೂ
ಜೀವಿಗೆ ನೆಲೆ ಏನೂ
--------------------------------------------------------------------------------------------------------------------------

ದೇವರೇ ದಿಕ್ಕು (1977)
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಬಸವರಾಜ್ ಕೆಸ್ತೂರ್ ಗಾಯನ: ಎಸ್.ಪಿ.ಬಿ, ವಾಣಿ ಜಯರಾಮ್

ಮಣ್ಣಿನ ಮಕ್ಕಳು ನಾವೇ ನಾವೂ (ನಾವೇ ನಾವೂ )
ಮಣ್ಣೇ ನಮಗೇ ಬಂಗಾರ (ಬಂಗಾರ)
ಉಳುವ ಎತ್ತು ಬೆಳೆಯುವ ಭೂಮಿ ನೇಗಿಲ ನಮಗೇ ಆಧಾರ
(ನೇಗಿಲ ನಮಗೇ ಆಧಾರ  ನೇಗಿಲ ನಮಗೇ ಆಧಾರ  )

ದುಡಿಯುವ  ರೈತ ಮಡಿಯುವ ಯೋಧ (ಆಆಆ...)
ದುಡಿಯುವ  ರೈತ ಮಡಿಯುವ ಯೋಧ
ತಂದರು ಸ್ವತಂತ್ರದ ಹಕ್ಕು (ತಂದರು ಸ್ವತಂತ್ರದ ಹಕ್ಕು )
ಬಡವನ ದುಡಿಸಿ ಒಡೆಯೆನೆನುವ ಮೂರ್ಖನ ಬಾಳಿಗೆ ದೇವರೇ ದಿಕ್ಕೂ...
(ದೇವರೇ ದಿಕ್ಕೂ... )
ಮಣ್ಣಿನ ಮಕ್ಕಳು ನಾವೇ ನಾವೂ (ನಾವೇ ನಾವೂ )

ನೋವೇ ಇರಲಿ ನಲಿವೇ ಬರಲೀ (ಆಆಆ...)
ನೋವೇ ಇರಲಿ ನಲಿವೇ ಬರಲೀ
ಉಳುವುದು ರೈತನ ಹಕ್ಕು (ಉಳುವುದು ರೈತನ ಹಕ್ಕು )
ದುಡಿಯುವನೊಬ್ಬ ತಿನ್ನುವನೊಬ್ಬ
ದುಡಿಯದ ಜನರಿಗೇ ದೇವರೇ ದಿಕ್ಕೂ ( ದೇವರೇ ದಿಕ್ಕೂ )
ಮಣ್ಣಿನ ಮಕ್ಕಳು ನಾವೇ ನಾವೂ (ನಾವೇ ನಾವೂ )

ಅತಿಸುಖ ಬಯಸದೇ ಅರಿತರೇ ದುಡಿಮೇ (ಆಆಆ...)
ಅತಿಸುಖ ಬಯಸದೇ ಅರಿತರೇ ದುಡಿಮೇ 
ಮೆಚ್ಚುವ ನಮ್ಮನ್ನು  ಶಿವ ನಕ್ಕು (ಮೆಚ್ಚುವ ನಮ್ಮನ್ನು ಶಿವ ನಕ್ಕು ) 
ಅನ್ನವ ನೀಯುವ ಹೊನ್ನನೇ ಹಾಸುವ ಹಣ್ಣನು ಮರೆತರೇ ದೇವರೇ ದಿಕ್ಕೂ
(ದೇವರೇ ದಿಕ್ಕೂ  )
ಮಣ್ಣಿನ ಮಕ್ಕಳು ನಾವೇ ನಾವೂ (ನಾವೇ ನಾವೂ )
ಮಣ್ಣೇ ನಮಗೇ ಬಂಗಾರ (ಬಂಗಾರ)
ಉಳುವ ಎತ್ತು ಬೆಳೆಯುವ ಭೂಮಿ ನೇಗಿಲ ನಮಗೇ ಆಧಾರ
(ನೇಗಿಲ ನಮಗೇ ಆಧಾರ  ನೇಗಿಲ ನಮಗೇ ಆಧಾರ  )
(ನೇಗಿಲ ನಮಗೇ ಆಧಾರ  ನೇಗಿಲ ನಮಗೇ ಆಧಾರ  )
------------------------------------------------------------------------------------------------------------------------

No comments:

Post a Comment