288. ಅರುಣ ರಾಗ(೧೯೮೬)

ಅರುಣರಾಗ ಚಲನಚಿತ್ರದ ಹಾಡುಗಳು 
  1. ನಡೆದಾಡೋ ಕಾಮನಬಿಲ್ಲೆ ಹರಿದಾಡೋ ಮುಗಿಲಿನ ಮಿಂಚೆ
  2. ಹೂವಂಥ ಹೃದಯವನು ಹಿಂಡುವಿರೇಕೆ ಹಾಲಂಥ ಮನಸನ್ನು ಕಲಕುವಿರೇಕೆ
  3. ನಾನೊಂದು ತೀರ ನೀನೊಂದು ತೀರ   ನಾನೊಂದು ತೀರ ನೀನೊಂದು ತೀರ
  4. ನೀ ಬರೆದ ಒಲವಿನ ಓಲೆ ನೀಡುತಿದೆ ಪುಳಕದ ಮಾಲೆ
  5. ಹಗಲು ರಾತ್ರಿ ಸಾಗಿದೆ ಹೋರಾಡಿ ಜೀವನ 
ಅರುಣರಾಗ (1986) - ನಡೆದಾಡೋ ಕಾಮನಬಿಲ್ಲೆ
ಸಾಹಿತ್ಯ: ದೊಡ್ಡರಂಗೆಗೌಡ ಸಂಗೀತ: ಎಂ.ರಂಗರಾವ್ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ

ನಡೆದಾಡೋ ಕಾಮನಬಿಲ್ಲೆ ಹರಿದಾಡೋ ಮುಗಿಲಿನ ಮಿಂಚೆ
ತುಳುಕಾಡೊ ಬಾನಿನ ಚೆಲುವೆ ಭುವಿಗಿಳಿದಾ ಹುಣ್ಣಿಮೆ ಹೊನಲೆ
ನೀನೆಂದಿಗು ನನ್ನ ಬಾಳಿಗೆ ಆನಂದದ ಅರುಣರಾಗ... ಅರುಣರಾಗ...  ಅರುಣರಾಗ

ಮೀನಿನ ನಯನ ಹವಳದ ತುಟಿಯ ಪಡೆದಿಹ ರೂಪಸಿ
ಸಂಪಿಗೆ ಮೂಗು ಕಬ್ಬಿನ ಹುಬ್ಬು ಹೊಂದಿದ ಷೋಡಶಿ
ನಿನ್ನ ನೋಡಿ ಪ್ರೀತಿ ಮೂಡಿ ಆಸಿ ಚಿಮ್ಮಿ ಹೊಮ್ಮಿದೆ
ನೀನೆಂದಿಗು ನನ್ನ ಬಾಳಿಗೆ ಆನಂದದ ಅರುಣರಾಗ..  ಅರುಣರಾಗ...  ಅರುಣರಾಗ

ದಂತದ ಮೈಯ ಮಲ್ಲಿಗೆ ನಗೆಯ ಅಂದದ ಊರ್ವಶಿ
ಮೇಘದ ಹುರುಳ ಕೋಗಿಲೆ ಕಂಠ ಗಳಿಸಿದ ಪ್ರೇಯಸಿ
ನಿನ್ನ ರೂಪು ಕಣ್ಣ ತುಂಬಿ ಸ್ನೇಹ ಸಂಗ ಬೇಡಿದೆ
ನೀನೆಂದಿಗು ನನ್ನ ಬಾಳಿಗೆ ಆನಂದದ ಅರುಣರಾಗ... ಅರುಣರಾಗ... ಅರುಣರಾಗ
ನಡೆದಾಡೋ ಕಾಮನಬಿಲ್ಲೆ ಹರಿದಾಡೋ ಮುಗಿಲಿನ ಮಿಂಚೆ
ತುಳುಕಾಡೊ ಬಾನಿನ ಚೆಲುವೆ ಭುವಿಗಿಳಿದಾ ಹುಣ್ಣಿಮೆ ಹೊನಲೆ
ನೀನೆಂದಿಗು ನನ್ನ ಬಾಳಿಗೆ ಆನಂದದ ಅರುಣರಾಗ... ಅರುಣರಾಗ...  ಅರುಣರಾಗ
-------------------------------------------------------------------------------------------------------------------------

ಅರುಣ ರಾಗ(೧೯೮೬)......ಹೂವಂಥ ಹೃದಯವನು
ಸಾಹಿತ್ಯ: ದೊಡ್ಡರಂಗೇಗೌಡ ಸಂಗೀತ: ಎಂ.ರಂಗರಾವ್ ಗಾಯನ : ಕೆ.ಎಸ್.ಚಿತ್ರಾ

ಹೂವಂಥ ಹೃದಯವನು ಹಿಂಡುವಿರೇಕೆ ಹಾಲಂಥ ಮನಸನ್ನು ಕಲಕುವಿರೇಕೆ
ಜೇನಂಥ ಪ್ರೀತಿಯನು ಮೆರೆಯುವಿರೇಕೆ ಸೊಗಸಾದ ಸ್ನೇಹವನು ಕದಡುವಿರೇಕೆ
ಹೂವಂಥ ಹೃದಯವನು ಹಿಂಡುವಿರೇಕೆ    ಹಾಲಂಥ ಮನಸನ್ನು ಕಲಕುವಿರೇಕೆ
ಹೂವಂಥ ಹೃದಯವನು ಹಿಂಡುವಿರೇಕೆ    ಹಾಲಂಥ ಮನಸನ್ನು ಕಲಕುವಿರೇಕೆ
ಜೇನಂಥ ಪ್ರೀತಿಯನು ಮೆರೆಯುವಿರೇಕೆ   ಜೇನಂಥ ಪ್ರೀತಿಯನು ಮೆರೆಯುವಿರೇಕೆ
ಸೊಗಸಾದ ಸ್ನೇಹವನು ಕದಡುವಿರೇಕೆ    ಹೂವಂಥ ಹೃದಯವನು ಹಿಂಡುವಿರೇಕೆ
ಹಾಲಂಥ ಮನಸನ್ನು ಕಲಕುವಿರೇಕೆ

ನೂರಾರು ಮಾತಿಂದ ಅಣಕವನು ಮಾಡಿ ಸ್ತ್ರೀಯನ್ನು ಕೀಳಾಗಿ ಕಡೆಗಣಿಸಬೇಡಿ
ಎಂದೆಂದೂ ವಾತ್ಸಲ್ಯ ಅಕ್ಕರೆಯ ನೀಡಿ ತಾಯಾಗಿ ಸಂಸಾರ ಪೋಷಣೆಯ ಮಾಡಿ
ಅನುರಾಗ ಮಮತೆಯನು ನೀಡೋಳು ನಾರಿ
ಹೂವಂಥ ಹೃದಯವನು ಹಿಂಡುವಿರೇಕೆ     ಹಾಲಂಥ ಮನಸನ್ನು ಕಲಕುವಿರೇಕೆ
ಹೂವಂಥ ಹೃದಯವನು ಹಿಂಡುವಿರೇಕೆ     ಹಾಲಂಥ ಮನಸನ್ನು ಕಲಕುವಿರೇಕೆ
ಜೇನಂಥ ಪ್ರೀತಿಯನು ಮೆರೆಯುವಿರೇಕೆ    ಜೇನಂಥ ಪ್ರೀತಿಯನು ಮೆರೆಯುವಿರೇಕೆ
ಸೊಗಸಾದ ಸ್ನೇಹವನು ಕದಡುವಿರೇಕೆ     ಹೂವಂಥ ಹೃದಯವನು ಹಿಂಡುವಿರೇಕೆ
ಹಾಲಂಥ ಮನಸನ್ನು ಕಲಕುವಿರೇಕೆ  ಆಆ...ಆ.ಆ..ಆಆ...

ಗಂಡೆಂಬ ಹಮ್ಮಿಂದ ದರ್ಪವನು ಬೀರಿ ನಾರಿಯರ ಚಾರಿತ್ರ್ಯ ವಧೆ ಮಾಡಬೇಡಿ
ಹೆಂಗಸರು ಅಬಲೆಯರು ಎಂದೆಲ್ಲ ತಿಳಿದು ದೌರ್ಜನ್ಯ ತೋರಿದರೆ ಸಂಸ್ಕೃತಿಯೇ ಇರದು
ನಿಮ್ಮೆಲ್ಲರ ಇರುವಿಕೆಯಾ ರೂವಾರಿ ನಾರಿ
ಹೂವಂಥ ಹೃದಯವನು ಹಿಂಡುವಿರೇಕೆ
ಹಾಲಂಥ ಮನಸನ್ನು ಕಲಕುವಿರೇಕೆ    ಹೂವಂಥ ಹೃದಯವನು ಹಿಂಡುವಿರೇಕೆ
ಹಾಲಂಥ ಮನಸನ್ನು ಕಲಕುವಿರೇಕೆ   ಜೇನಂಥ ಪ್ರೀತಿಯನು ಮೆರೆಯುವಿರೇಕೆ
ಜೇನಂಥ ಪ್ರೀತಿಯನು ಮೆರೆಯುವಿರೇಕೆ   ಸೊಗಸಾದ ಸ್ನೇಹವನು ಕದಡುವಿರೇಕೆ
ಹೂವಂಥ ಹೃದಯವನು ಹಿಂಡುವಿರೇಕೆ   ಹಾಲಂಥ ಮನಸನ್ನು ಕಲಕುವಿರೇಕೆ
ಆಆ...ಆ.ಆ..ಆಆ...
-----------------------------------------------------------------------------------------------------------------------

ಅರುಣ ರಾಗ (೧೯೮೬)......ನಾನೊಂದು ತೀರ
ಸಾಹಿತ್ಯ: ದೊಡ್ಡರಂಗೇಗೌಡ ಸಂಗೀತ: ಎಂ.ರಂಗರಾವ್ ಗಾಯನ : ಕೆ.ಜೆ.ಜೇಸುದಾಸ್ ಮತ್ತು ಕೆ.ಎಸ್.ಚಿತ್ರಾ

ಗಂಡು : ನಾನೊಂದು ತೀರ ನೀನೊಂದು ತೀರ
            ನಾನೊಂದು ತೀರ ನೀನೊಂದು ತೀರ ಮನಸು ಮನಸು ದೂರ ಪ್ರೀತಿ ಹೃದಯ ಭಾರ
ಹೆಣ್ಣು : ನಾನೊಂದು ತೀರ ನೀನೊಂದು ತೀರ
           ನಾನೊಂದು ತೀರ ನೀನೊಂದು ತೀರ ಮನಸು ಮನಸು ದೂರ ಪ್ರೀತಿ ಹೃದಯ ಭಾರ
ಗಂಡು : ಹೂವು ಚೆಲುವಾಗಿ ಅರಳಿ ದುಂಬಿ ಸೆಳೆಯೋದು ಸಹಜ
           ಹೆಣ್ಣು ಸೊಗಸಾಗಿ ಬೆಳೆದು ಗಂಡ ಬಯಸೋದು ಸಹಜ
           ಹೀಗೇಕೆ ನಿನಗೆ ಏಕಾಂಗಿ ಬದುಕು....
           ಹೀಗೇಕೆ ನಿನಗೆ ಏಕಾಂಗಿ ಬದುಕು ಸಂಗಾತಿ ಇರದೆ ಬಾಳೆಲ್ಲ ಬರಿದು
           ನಾನೊಂದು ತೀರ ನೀನೊಂದು ತೀರ
           ನಾನೊಂದು ತೀರ ನೀನೊಂದು ತೀರ ಮನಸು ಮನಸು ದೂರ ಪ್ರೀತಿ ಹೃದಯ ಭಾರ

ಹೆಣ್ಣು : ಭೂಮಿ ಆಕಾಶ ಸೇರಿ ಕಲೆತು ಕೂಡೋದು ಉಂಟೆ
          ಕಡಲು ತಾನಾಗಿ ಹರಿದು ನದಿಗೆ ಸೇರೋದು ಉಂಟೆ
          ಚೂರಾದ ಹೃದಯ ಮತ್ತೊಮ್ಮೆ ಮಿಡಿದು
          ಚೂರಾದ ಹೃದಯ ಮತ್ತೊಮ್ಮೆ ಮಿಡಿದು ಜೀವಂತ ಬದುಕೇ ಸಂಬಂಧ ತರದು
          ನಾನೊಂದು ತೀರ ನೀನೊಂದು ತೀರ
          ನಾನೊಂದು ತೀರ ನೀನೊಂದು ತೀರ ಮನಸು ಮನಸು ದೂರ ಪ್ರೀತಿ ಹೃದಯ ಭಾರ
ಗಂಡು :  ನಾನೊಂದು ತೀರ ನೀನೊಂದು ತೀರ
             ನಾನೊಂದು ತೀರ ನೀನೊಂದು ತೀರ ಮನಸು ಮನಸು ದೂರ ಪ್ರೀತಿ ಹೃದಯ ಭಾರ
ಹೆಣ್ಣು : ಹುಂ..ಹುಂ....ಹುಂ....                   ಗಂಡು : ಹುಂ..ಹುಂ....ಹುಂ....
-------------------------------------------------------------------------------------------------------------------------

ಅರುಣರಾಗ (1986) - ನೀ ಬರೆದ ಒಲವಿನ ಓಲೆ
ಸಾಹಿತ್ಯ: ದೊಡ್ಡರಂಗೇಗೌಡ ಸಂಗೀತ: ಎಂ.ರಂಗರಾವ್ ಗಾಯನ: ಎಸ್.ಜಾನಕಿ

ನೀ ಬರೆದ ಒಲವಿನ ಓಲೆ ನೀಡುತಿದೆ ಪುಳಕದ ಮಾಲೆ
ಇಂದೆನಗೆ ನಲಿವಿನ ವೇಳೆ ತೂಗಿದೆ ಪ್ರೇಮದ ಉಯ್ಯಾಲೆ
ಮ್ ಮ್ ಮ್ ಮ್ ಮ್ ಮ್ ಮ್ ಮ್ ಮ್ ಮ್ ಮ್ ಮ್ ಮ್ ಮ್ ಮ್ ಮ್
ನೀ ಬರೆದ ಒಲವಿನ ಓಲೆ
ಗಮಪ ಗಮಪ ಗಮಪ ಗಮಪ ಮಗಸನಿಸ

ಅರುಣ ಕಿರಣ ಹೊಳೆವ ಹಾಗೆ ನಿನ್ನ ಮುಖದ ಹೂ ನಗೆ
ಚೈತ್ರ ಋತುವು ಬರುವ ಹಾಗೆ ಹರುಷ ತಂದೆ ಬಾಳಿಗೆ
ಸ್ವಾತಿ ಮುತ್ತಿನ ಹಾಗೆ ಪ್ರೀತಿ ಚಂದಾಗಿ
ರೂಪು ಕಣ್ಮನ ಸೆಳೆದು ಆಸೆ ರಂಗಾಗಿ
ರಾಗ ತಾನ ಕೂಡೊ ಹಾಗೆ ನಾನು ನಿನ್ನ ಕೂಡಿದೆ
ನೀ ಬರೆದ ಒಲವಿನ ಓಲೆ ನೀಡುತಿದೆ ಪುಳಕದ ಮಾಲೆ
ಇಂದೆನಗೆ ನಲಿವಿನ ವೇಳೆ ತೂಗಿದೆ ಪ್ರೇಮದ ಉಯ್ಯಾಲೆ
ಲಲಲ ಲಲಲ ಲಲಲಾ  ಲಲಲ ಲಲಲ ಆಆಆಆಅ

ಇಳೆಗೆ ಮಳೆಯು ಬಂದ ಹಾಗೆ ನೀನು ಬಂದೆ ಬದುಕಿಗೆ
ಧರೆಗೆ ಸ್ವರ್ಗ ಇಳಿದ ಹಾಗೆ ನಲ್ಮೆ ಕಂಡೆ ಒಮ್ಮೆಗೆ
ಸ್ನೇಹ ಸಂಪದ ಬೆಸೆದು ಬಂಧ ಒಂದಾಗಿ
ಮೋಹ ದಾಹ ಮರೆತು ಪ್ರೇಮ ನಂಟಾಗಿ
ಹಾಲು ಜೇನು ಸೇರೊ ಹಾಗೆ ನಾನು ನಿನ್ನ ಸೇರಿದೆ
ನೀ ಬರೆದ ಒಲವಿನ ಓಲೆ ನೀಡುತಿದೆ ಪುಳಕದ ಮಾಲೆ
ಇಂದೆನಗೆ ನಲಿವಿನ ವೇಳೆ ತೂಗಿದೆ ಪ್ರೇಮದ ಉಯ್ಯಾಲೆ
-----------------------------------------------------------------------------------------------------------------------

ಅರುಣರಾಗ (1986) - ಹಗಲು ರಾತ್ರಿ ಸಾಗಿದೇ ಹೋರಾಡೋ ಜೀವನ
ಸಂಗೀತ: ಎಂ.ರಂಗರಾವ್, ಸಾಹಿತ್ಯ: ದೊಡ್ಡರಂಗೇಗೌಡ ಗಾಯನ: ಎಸ್.ಪಿ.ಬಿ.

ಹಗಲು ರಾತ್ರಿ ಸಾಗಿದೇ ಹೋರಾಡೋ ಜೀವನ
ಹಗಲು ರಾತ್ರಿ ಸಾಗಿದೇ ಹೋರಾಡೋ ಜೀವನ
ಪ್ರೀತಿ ಸೆಳೆದ ಹಾದಿಯೆಲ್ಲಾ ಮುಳ್ಳಾಗಿ ಸ್ಪಂದನ
ಪ್ರೀತಿ ಸೆಳೆದ ಹಾದಿಯೆಲ್ಲಾ ಮುಳ್ಳಾಗಿ ಸ್ಪಂದನ ಎಲ್ಲಿಹುದೋ ಚೇತನಾ
ಹಗಲು ರಾತ್ರಿ ಸಾಗಿದೇ ಹೋರಾಡೋ ಜೀವನ

ಮುಗುದೇ ಮನಸ ಕದ್ದು ವಿಲಾಸದಲಿ ನಾ ನಿಲ್ಲದೇ 
ನಗುತಾ ಒಲಿದ ಹೆಣ್ಣ ನಿರಾಕರಿಸಿ ನಾ ನಡೆದೇ
ವಿನೋದದಲೀ ವಿಹಾರದಲೀ ವ್ಯಾಮೋಹದ ದಾಹ ನಾ ಸವಿದೂ
ಚೆಲ್ಲಾಟದಲೀ ಚೆಕ್ಕಂದದಲಿ ರೋಮಾಂಚನದ ಲೀಲೆ ನಾ ಕಂಡು ಹರಿದಿಹುದು ರೋಧನ
ಹಗಲು ರಾತ್ರಿ ಸಾಗಿದೇ ಹೋರಾಡೋ ಜೀವನ

ವಿರಹ ಕಹಿಯ ಸವಿದು ವಿರಾಗದಲೀ ನಾ ಬೆಂದೆ ವಿರಸ ಮನಸ ತುಂಬಿ
ವಿಶಾದದಲಿ ನಾ ನೊಂದೇ ಸಂಚಾರದಲೀ ಸಂಬ್ರಾಂತಿಯಲಿ
ಆವೇಶದ ಆಸೇ ನಾ ಕಂಡು ಉನ್ಮಾದದಲಿ ಉದ್ವೇಗದಲಿ
ವಿದ್ರೋಹದ ಬೆಂಕಿ ನಾ ಉಂಡೂ ನಡೆದಿಹುದೋ ಮಂಥನ
ಹಗಲು ರಾತ್ರಿ ಸಾಗಿದೇ ಹೋರಾಡೋ ಜೀವನ
ಪ್ರೀತಿ ಸೆಳೆದ ಹಾದಿಯೆಲ್ಲಾ ಮುಳ್ಳಾಗಿ ಸ್ಪಂದನ
ಪ್ರೀತಿ ಸೆಳೆದ ಹಾದಿಯೆಲ್ಲಾ ಮುಳ್ಳಾಗಿ ಸ್ಪಂದನ ಎಲ್ಲಿಹುದೋ ಚೇತನಾ
ಹಗಲು ರಾತ್ರಿ ಸಾಗಿದೇ ಹೋರಾಡೋ ಜೀವನ
------------------------------------------------------------------------------------------------------------------------

No comments:

Post a Comment