291. ಹೊಂಬಿಸಿಲು (1978)


ಹೊಂಬಿಸಲು ಚಿತ್ರದ ಹಾಡುಗಳು 
  1. ಹೂವಿಂದ ಹೂವಿಗೇ ಹಾರುವ ದುಂಬಿ 
  2. ಜೀವ ವೀಣೆ ನೀನು ಮಿಡತದಿ 
  3. ನೀರು ಬಿಟ್ಟು ನೆಲದ ಮೇಲೆ ದೋಣಿ ಸಾಗದು 
  4. ಮಾಗಿಯ ಚಳಿಯಲ್ಲಿ ನಡುಗಿದೆ ಏಕೋ 

ಹೊಂಬಿಸಿಲು (1978) - ಹೂವಿಂದ ಹೂವಿಗೆ ಹಾರುವ ದುಂಬಿ
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ಗೀತಪ್ರಿಯ ಗಾಯನ: ಎಸ್.ಜಾನಕಿ

ಹೂವಿಂದ ಹೂವಿಗೆ ಹಾರುವ ದುಂಬಿ
ಏನನು ಹಾಡುತಿಹೆ ನೀ ಏನನು ಹಾಡುತಿಹೆ
ಹೂವಿಂದ ಹೂವಿಗೆ ಹಾರುವ ದುಂಬಿ
ಏನನು ಹಾಡುತಿಹೆ ನೀ ಏನನು ಹಾಡುತಿಹೆ
ಹೂವಿನ ಕೋಮಲ ಭಾವನೆ ಕೆಣಕಿ ಏತಕೆ ಕಾಡುತಿಹೇ ನೀ …
ಹೂವಿಂದ ಹೂವಿಗೆ ಹಾರುವ ದುಂಬಿ
ಏನನು ಹಾಡುತಿಹೆ ನೀ ಏನನು ಹಾಡುತಿಹೆ
ಆ…ಆ…ಆ… ಆ…ಆ…ಆ…  ಆ…..ಆ…..ಆ….ಆ…..

ಆಸೆಯ ತುಂಬಿ ಹೂವರಳಿರಲು ಹೂವನು ಕಂಡು ನೀ ಕೆರಳಿರಲು
ಹೂವಿನ ಅಂದ ನಿನಗೇ ಚಂದ ಮಧು ಮಕರಂದ ನಿನಗಾನಂದ
ಒಲಿಸುವ ರಾಗವ ನೀ ಉಲಿಉಲಿದು
ಒಲಿಸುವ ರಾಗವ ನೀ ಉಲಿಉಲಿದು
ಏನನು ಬಯಸುತಿಹೆ ನೀ………
ಹೂವಿಂದ ಹೂವಿಗೆ ಹಾರುವ ದುಂಬಿ
ಏನನು ಹಾಡುತಿಹೆ ನೀ ಏನನು ಹಾಡುತಿಹೆ
ಹೂವಿಂದ ಹೂವಿಗೆ ಹಾರುವ ದುಂಬಿ……

ದುಂಬಿಯೆ ನಿನಗೆ ಮಿಲನಕೆ ಸಂಭ್ರಮ
ಹೂವಿಗೆ ಬೇಕೋ ಪ್ರೇಮ ಸಮಾಗಮ
ಹೂವಿಗು ದುಂಬಿಗು ಇರುವಾ ಬಂಧ
ಸಮರಸವಿದ್ದರೆ ಸವಿರಾಗಬಂಧ
ಈ ಅನುರಾಗವ ಅರಿಯದೆ ಇಂದು
ಈ ಅನುರಾಗವ ಅರಿಯದೆ ಇಂದು
ಏನನು ಬೇಡುತಿಹೆ ನೀ……..
ಹೂವಿಂದ ಹೂವಿಗೆ ಹಾರುವ ದುಂಬಿ
ಏನನು ಹಾಡುತಿಹೆ ನೀ ಏನನು ಹಾಡುತಿಹೆ|
ಹೂವಿನ ಕೋಮಲ ಭಾವನೆ ಕೆಣಕಿ
ಏತಕೆ ಕಾಡುತಿಹೇ ನೀ …
ಹೂವಿಂದ ಹೂವಿಗೆ ಹಾರುವ ದುಂಬಿ……
-------------------------------------------------------------------------------------------------------------

ಹೊಂಬಿಸಿಲು (1978) - ಜೀವವೀಣೆ
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ಗೀತಪ್ರಿಯ ಗಾಯನ: ಎಸ್.ಪಿ.ಬಿ, ಎಸ್.ಜಾನಕಿ 

ಗಂ : ಹೂಂ...ಹೂಂ....ಹೂಂ..ಹೂಂ...ಹೂಂ....ಹೂಂ....
ಹೆ : ಆ...ಆ... ಆ...ಆ...ಆ... ಆ...
ಗಂ :  ಜೀವವೀಣೆ ನೀಡು ಮಿಡಿತದ ಸಂಗೀತ
ಹೆ :  ಓ.. ಭಾವಗೀತೆ ಬಾಳಿನೊಲುಮೆಯ ಸಂಕೇತ
       ಇಂದು ಮಿಲನದ ಸಂತೋಷ  ಸುಖ ಸಂತೋಷ
      ಶುಭ ಸಂದೇಶ ಸಂದೇಶ ಸಂದೇಶವು
ಗಂ : ಜೀವವೀಣೆ ನೀಡು ಮಿಡಿತದ ಸಂಗೀತ  
ಹೆ : ಓ.. ಓ.. ಭಾವಗೀತೆ ಬಾಳಿನೊಲುಮೆಯ ಸಂಕೇತ

ಗಂ : ಮಿಡಿಯುವ ಮನಗಳು ಎರಡು ಮಿಡಿತದ ರಾಗವು ಒಂದೇ
        ಮಿಂಚುವ ಕಣ್ಣಂಚಿನ ಸಂಚೂ ಇಂದು ಒಂದೇ 
ಹೆ : ಆ.. ಆ.. ಲಾ..ಲಾ..ಆ.. ತಪಿಸುವ ಹೃದಯಗಳೆರಡು ತಾಪದ ವೇಗವು ಒಂದೇ 
       ಸೇರುವ ಶುಭ ಸಮಯದಿ ವಿರಹಾ ಇರದು ಮುಂದೆ
       ಭಾವಗೀತೆ ಬಾಳಿನೊಲುಮೆಯ ಸಂಕೇತ 
ಗಂ : ಓ.. ಓ...ಜೀವವೀಣೆ ನೀಡು ಮಿಡಿತದ ಸಂಗೀತ

ಹೆ : ಒಲವಿನ ಬಯಕೆಯು ಅಂದು
ಗಂ : ಮಿಲನ ಮಹೋತ್ಸವವಿಂದು
ಇಬ್ಬರು: ರಚಿಸುವ ನಾವ್ ಅನುದಿನ ಮುದದಾ ಪ್ರೇಮ ಕವನ  
ಗಂ:  ಆ.. ಆ.. ಆ..   ಹೆ: ಆ..ಆ..
ಗಂ: ಲಾಲಾ        ಹೆ : ಆ.. ಆ..
ಗಂ :ಕನಸಿನ ರಾತ್ರಿಯು ಕಳೆದು
ಹೆ : ಬಂದಿರೆ ನೆನಿಸಿದ ಹಗಲು
ಇಬ್ಬರು: ಕಾಣುವ ಹೊಂಬಿಸಿಲಿನ ಸುಖದಾ ಸೂರ್ಯ ಕಿರಣ
ಹೆ : ಭಾವಗೀತೆ ಬಾಳಿನೊಲುಮೆಯ ಸಂಕೇತ
ಗಂ:  ಆ.. ಆ.. ಜೀವವೀಣೆ ನೀಡು ಮಿಡಿತದ ಸಂಗೀತ
        ಇಂದು ಮಿಲನದ ಸಂತೋಷ  ಸುಖ ಸಂತೋಷ
       ಶುಭ ಸಂದೇಶ ಸಂದೇಶ ಸಂದೇಶವು
       ಜೀವವೀಣೆ ನೀಡು ಮಿಡಿತದ ಸಂಗೀತ
ಹೆ : ಆ.. ಆ.. ಭಾವಗೀತೆ ಬಾಳಿನೊಲುಮೆಯ ಸಂಕೇತ 
ಇಬ್ಬರು: ಆ.. .. ಆ.. ಓ.. ಓ..ಹುಂ.ಹುಂ..
-------------------------------------------------------------------------------------------------------------------------

ಹೊಂಬಿಸಿಲು (1978) - ನೀರ ಬಿಟ್ಟು ನೆಲದ
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ಗೀತಪ್ರಿಯ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ 

ಹೇ... ಹೇಏಏಏ ...ಒಹೋ ಒಹೋ ....
ಆಹಾ..ಆಹಾ.. ಆಹಹಾ
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು 
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು 
ನನ್ನ ಬಿಟ್ಟು ನಿನ್ನ  ನಿನ್ನ ಬಿಟ್ಟು ನನ್ನ
ಜೀವನ ಸಾಗದು... ಜೀವನ ಸಾಗದು 
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು  

ಸೂರ್ಯ ಬರೆದೆ ಕಮಲವೆಂದು ಅರಳದು  ಚಂದ್ರನಿರದೆ ತಾರೆಯೆಂದು ನಲಿಯದು ...  
ಸೂರ್ಯ ಬರೆದೆ ಕಮಲವೆಂದು ಅರಳದು  ಚಂದ್ರನಿರದೆ ತಾರೆಯೆಂದು ನಲಿಯದು ...  
ಒಲವು ಮೂಡದಿರಲು ಮನವು ಅರಳದು..  ಮನವು ಅರಳದಿರಲು ಗೆಲುವು ಕಾಣದು 
ಮನವು ಅರಳದಿರಲು ಗೆಲುವು ಕಾಣದು
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು 
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು 
ನಿನ್ನ ಬಿಟ್ಟು ನನ್ನ  ನನ್ನ ಬಿಟ್ಟು ನಿನ್ನ  ಜೀವನ ಸಾಗದು... ಜೀವನ ಸಾಗದು 
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾ.... ಗದು 

ಲೋಕದಲ್ಲಿ ಗಂಡು ಹೆಣ್ಣಿಗಾಸರೇ...  ಆದರಿಲ್ಲಿ ನಾನು ನಿನ್ನ ಕೈಸೆರೇ... 
ಲೋಕದಲ್ಲಿ ಗಂಡು ಹೆಣ್ಣಿಗಾಸರೇ...  ಆದರಿಲ್ಲಿ ನಾನು ನಿನ್ನ ಕೈಸೆರೇ... 
ಕೂಡಿ ನಲಿವ ಆಸೆ ಮನದಿ ಕಾದಿರೇ.. ಹಿತವೂ ಎಲ್ಲಿ ನಾವು ಬೇರೆ ಆದರೇ ....
ಹಿತವೂ ಎಲ್ಲಿ ನಾವು ಬೇರೆ ಆದರೇ ....
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು 
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು 
ನಿನ್ನ ಬಿಟ್ಟು ನನ್ನ  ನನ್ನ ಬಿಟ್ಟು ನಿನ್ನ  ಜೀವನ ಸಾಗದು...
ಭಾವನಾ  ಸಾಗದು  ಅಹಾಹ್.. ಅಹ್ಹಹ  ಹೂಂ   ಹೂಂ ... 
---------------------------------------------------------------------------------------------------------------------

ಹೊಂಬಿಸಿಲು (1978) - ಮಾಗಿಯ ಚಳಿಯಲ್ಲಿ 
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ಗೀತಪ್ರಿಯ ಗಾಯನ: ಎಸ್.ಪಿ.ಬಿ, ಎಸ್.ಜಾನಕಿ 

ಇಬ್ಬರು : ಅಹ್ಹಹ್ಹಹ... ಅಹ್ಹಹ್ಹಹ
ಹೆಣ್ಣು : ಮಾಗಿಯ ಚಳಿಯಲ್ಲಿ ಈ ಬಿಸಿ ಏಕೋ
ಗಂಡು : ಮಾಗಿದ ಮೈಯಲ್ಲಿ ಮಿಂಚಿದು ಏಕೋ
ಹೆಣ್ಣು : ಮಾಗಿಯ ಚಳಿಯಲ್ಲಿ ಈ ಬಿಸಿ ಏಕೋ
ಗಂಡು : ಮಾಗಿದ ಮೈಯಲ್ಲಿ ಮಿಂಚಿದು ಏಕೋ
ಹೆಣ್ಣು : ಒಂದಾದ ನಮ್ಮಲ್ಲಿ ನೂರಾಸೆ ಕಣ್ಣಲ್ಲಿ
ಗಂಡು : ಒಂದಾದ ನಮ್ಮಲ್ಲಿ ನೂರಾಸೆ ಕಣ್ಣಲ್ಲಿ
ಹೆಣ್ಣು : ಇಣಿಕಿದೆ.. ಕೆಣಕಿದೆ.. ಕುಣಿದಿದೆ.... ಅಹ್..
ಗಂಡು : ಇಣಿಕಿದೆ.. ಕೆಣಕಿದೆ.. ಕುಣಿದಿದೆ..
            ಅಬ್ಬಬ್ಬಾಬ್ಬಾ (ಹ್ಹಹ್ಹಹ್ಹಹ್ಹ) ಹ್ಹಹ್ಹಹ್ಹಹ್ಹಾ (ಹ್ಹಹ್ಹಹ್ಹಹ್ಹಹ್ಹಾ) ಹೇ..ಹೇ..ಹೇ..
ಹೆಣ್ಣು : ಅಹ್ಹಹ್ಹಾ..  ಮಾಗಿಯ ಚಳಿಯಲ್ಲಿ ಈ ಬಿಸಿ ಏಕೋ
ಗಂಡು : ಮಾಗಿದ ಮೈಯಲ್ಲಿ ಮಿಂಚಿದು ಏಕೋ

ಹೆಣ್ಣು : ತಂದಾಗ ಈ ನಮ್ಮ ಸ್ನೇಹ  ಒಂದಾಗಿ ಅಪ್ಪುವ ಮೋಹ 
ಗಂಡು : ನಿನಗಾಗಿ ಸೋತಿದೆ ದೇಹ ಎಂದೆಂದೂ ತೀರದ ದಾಹ 
ಹೆಣ್ಣು : ಸಂಯಮವೆಲ್ಲಿ ಸಂಗಮದಲ್ಲಿ 
ಗಂಡು : ಸ್ವರ್ಗವು ಇಲ್ಲಿ ಸಂಭ್ರಮದಲ್ಲಿ 
ಆ... ಆ... ಆ...  ಲಲಲಲಲಲಲಲಲ
ಗಂಡು : ಅಹ್ಹಹ್ಹ ... ಮಾಗಿಯ ಚಳಿಯಲ್ಲಿ ಈ ಬಿಸಿ ಏಕೋ 
ಹೆಣ್ಣು : ಮಾಗಿದ ಮೈಯಲ್ಲಿ ಮಿಂಚಿದು ಏಕೋ
ಗಂಡು : ಒಂದಾದ ನಮ್ಮಲ್ಲಿ ನೂರಾಸೆ ಕಣ್ಣಲ್ಲಿ
ಹೆಣ್ಣು : ಇಣಿಕಿದೆ.. ಕೆಣಕಿದೆ.. ಕುಣಿದಿದೆ..ಅಹ್ಹಹ್
ಗಂಡು : ಇಣಿಕಿದೆ.. ಕೆಣಕಿದೆ.. ಕುಣಿದಿದೆ..ಅಹ್ಹಹ್
ಹೆಣ್ಣು : ಅಹ್ಹಹ್ಹಾ..  ಮಾಗಿಯ ಚಳಿಯಲ್ಲಿ ಈ ಬಿಸಿ ಏಕೋ
ಗಂಡು : ಮಾಗಿದ ಮೈಯಲ್ಲಿ ಮಿಂಚಿದು ಏಕೋ

ಗಂಡು : ಕಡಲಲ್ಲಿ  ತಲ್ಲಣವೇಕೋ ಕರೆ ಸೇರೋ ಆತುರವೇನೋ.. 
ಹೆಣ್ಣು : ಒಡಲಲ್ಲಿ ಕಂಪನವೇಕೊ ಜೊತೆ ಸೇರೋ ಕಾತುರವೇನೋ 
ಗಂಡು : ಹರೆಯದ ಬಯಕೆ ಅಂಕೆಯು ಬೇಕೇ 
ಹೆಣ್ಣು : ಬೆರೆಯುವ ಮನಕೆ ಅಂಜಿಕೆ ಏಕೆ 
ಗಂಡು : ... ಓ...ರರರರರ ರರರರರ ಆಹ್ಹ್  (ಲಲಲ) ಅಹ್ಹಹ್ಹ
ಇಬ್ಬರು :  ಅಹ್ಹಹ್ಹ ... ಮಾಗಿಯ ಚಳಿಯಲ್ಲಿ ಈ ಬಿಸಿ ಏಕೋ 
               ಮಾಗಿದ ಮೈಯಲ್ಲಿ ಮಿಂಚಿದು ಏಕೋ
                ಒಂದಾದ ನಮ್ಮಲ್ಲಿ ನೂರಾಸೆ ಕಣ್ಣಲ್ಲಿ
                ಒಂದಾದ ನಮ್ಮಲ್ಲಿ ನೂರಾಸೆ ಕಣ್ಣಲ್ಲಿ
                ಇಣಿಕಿದೆ.. ಕೆಣಕಿದೆ.. ಕುಣಿದಿದೆ.. ಅಹ್ಹಹ್
                ಇಣಿಕಿದೆ.. ಕೆಣಕಿದೆ.. ಕುಣಿದಿದೆ.. ಅಬ್ಬಬ್ಬಾ
                ( ಅಹ್ಹಹ್ಹಾ ) ಅಹ್ಹಹ್ಹ ( ಅಹ್ಹಹ್ಹಾ ) ಅಹ್ಹಹ್ಹ  ಹೇಹೇಹೇಹೇ ಓಓಓಓಓ
-------------------------------------------------------------------------------------------------------------------------

No comments:

Post a Comment