ಶುಭ ಮಂಗಳ ಚಿತ್ರದ ಹಾಡುಗಳು
- ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ
- ಹೂವೊಂದು ಬಳಿ ಬಂದು ತಾಕೀತು ಎನ್ನೆದೆಯ
- ಶುಭ ಮಂಗಳಾ ಸುಮುಹೂರ್ತವೇ
- ಸೂರ್ಯಂಗೂ ಚಂದ್ರಂಗೂ ಬಂದಾರೇ ಮುನಿಸೂ
- ಈ ಶತಮಾನದ ಮಾದರಿ ಹೆಣ್ಣು
- ಹೇಮಾ ಹೇಮಾ ನಾಲ್ಕ ಒಂದಲೇ ನಾಲ್ಕು
ಶುಭಮಂಗಳ (1975) - ಸ್ನೇಹದ ಕಡಲಲ್ಲಿ
ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ವಿಜಯಭಾಸ್ಕರ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ
ಸ್ನೇಹದ ಕಡಲಲ್ಲಿ ನೆನಪಿನ ದೋಣೀಯಲೀ
ಸ್ನೇಹದ ಕಡಲಲ್ಲಿ ನೆನಪಿನ ದೋಣೀಯಲೀ
ಪಯಣಿಗ ನಾನಮ್ಮ ಪಯಣಿಗ ನಾನಮ್ಮ!
ಪ್ರೀತಿಯ ತೀರವ, ಸೇರುವುದೊಂದೇ
ಪ್ರೀತಿಯ ತೀರವ, ಸೇರುವುದೊಂದೇ
ಬಾಳಿನ ಗುರಿಯಮ್ಮ ಬಾಳಿನ ಗುರಿಯಮ್ಮ
ಸ್ನೇಹದ ಕಡಲಲ್ಲಿ ನೆನಪಿನ ದೋಣೀಯಲೀ
ಪಯಣಿಗ ನಾನಮ್ಮ ಪಯಣಿಗ ನಾನಮ್ಮ, ಪಯಣಿಗ ನಾನಮ್ಮ!
ಬಾಲ್ಯದ ಆಟ, ಆ ಹುಡುಗಾಟ, ಇನ್ನು ಮಾಸಿಲ್ಲ ಅಹ್ ಅಹ
ಬಾಲ್ಯದ ಆಟ, ಆ ಹುಡುಗಾಟ, ಇನ್ನು ಮಾಸಿಲ್ಲ
ಆಟದೆ ಸೋತು, ರೋಷದೆ ಕಚ್ಚಿದ;
ಆಟದೆ ಸೋತು, ರೋಷದೆ ಕಚ್ಚಿದ
ಗಾಯವ ಮರೆತಿಲ್ಲ ಅಹ ಅಹ!
ಗಾಯವ ಮರೆತಿಲ್ಲ ಅಹ ಅಹ
ಸ್ನೇಹದ ಕಡಲಲ್ಲಿ ನೆನಪಿನ ದೋಣೀಯಲೀ
ಪಯಣಿಗ ನಾನಮ್ಮ ಪಯಣಿಗ ನಾನಮ್ಮ!
ಶಾಲೆಗೆ ಚಕ್ಕರ್, ಊಟಕೆ ಹಾಜರ್ ಲೆಕ್ಕದೆ ಬರಿ ಸೊನ್ನೆ ಹೂ
ಶಾಲೆಗೆ ಚಕ್ಕರ್, ಊಟಕೆ ಹಾಜರ್ ಲೆಕ್ಕದೆ ಬರಿ ಸೊನ್ನೆ
ಎನ್ನುತ ನಾನು, ಕೆಣಕಲು ನಿನ್ನ,
ಎನ್ನುತ ನಾನು, ಕೆಣಕಲು ನಿನ್ನ ಉದಿಸಿದೆ ಕೆನ್ನೆ ಹೇ
ನಾನದ ಮರೆಯುವೆನೆ?
ಸ್ನೇಹದ ಕಡಲಲ್ಲಿ ನೆನಪಿನ ದೋಣೀಯಲೀ
ಸ್ನೇಹದ ಕಡಲಲ್ಲಿ ನೆನಪಿನ ದೋಣೀಯಲೀ
ಪಯಣಿಗ ನಾನಮ್ಮ ಪಯಣಿಗ ನಾನಮ್ಮ!
ಪ್ರೀತಿಯ ತೀರವ, ಸೇರುವುದೊಂದೇ
ಪ್ರೀತಿಯ ತೀರವ, ಸೇರುವುದೊಂದೇ ಬಾಳಿನ ಗುರಿಯಮ್ಮ ಬಾಳಿನ ಗುರಿಯಮ್ಮ
--------------------------------------------------------------------------------------------------------------------------
ಶುಭಮಂಗಳ (1975) - ಹೂವೊಂದು ಬಳಿಬಂದು
ಸಾಹಿತ್ಯ: ವಿಜಯಾನರಸಿಂಹ ಸಂಗೀತ: ವಿಜಯಭಾಸ್ಕರ ಗಾಯನ: ಅರ್. ಎನ್. ಸುದರ್ಶನ್
ಹೂವೊಂದು ಬಳಿಬಂದು ತಾಕಿತು ಎನ್ನೆದೆಯಾ
ಏನೆಂದು, ಕೇಳಲು, ಹೇಳಿತು, ಜೇನಂಥ ಸಿಹಿ ನುಡಿಯಾ, ಜೇನಂಥ ಸಿಹಿ ನುಡಿಯಾ
ಏನೆಂದು, ಕೇಳಲು, ಹೇಳಿತು, ಜೇನಂಥ ಸಿಹಿ ನುಡಿಯಾ, ಜೇನಂಥ ಸಿಹಿ ನುಡಿಯಾ
ಕಾವೇರಿ ಸೀಮೆಯ ಕನ್ಯೆಯು ನಾನೂ, ಬೇಲೂರು ಬಾಲೆಯ ಪ್ರತಿನಿಧಿ ನಾನೂ
ತುಂಗೆಯ ಭದ್ರೆಯಾ, ತುಂಗೆಯ, ಭದ್ರೆಯಾ, ತೌರಿನ ಹೂ ನಾನು, ತೌರಿನ ಹೂ ನಾನು
ಹೂವೊಂದು ಬಳಿಬಂದು ತಾಕಿತು ಎನ್ನೆದೆಯಾ
ಏನೆಂದು, ಕೇಳಲು, ಹೇಳಿತು, ಜೇನಂಥ ಸಿಹಿ ನುಡಿಯಾ, ಜೇನಂಥ ಸಿಹಿ ನುಡಿಯಾ
ಸೂರ್ಯನ ಕಾಂತಿಯ ಸುಂದರಿ ನಾನು ತಿಂಗಳ ಬೆಳಕಿನ ತಂಗಿಯು ನಾನೂ
ಪ್ರೇಮದ, ಕಾವ್ಯಕ್ಕೆ, ಪ್ರೇಮದ, ಕಾವ್ಯಕ್ಕೆ, ಪೂಜೆಯ ಹೂ ನಾನೂ, ಪೂಜೆಯ ಹೂ ನಾನೂ
ಹೂವೊಂದು ಬಳಿಬಂದು ತಾಕಿತು ಎನ್ನೆದೆಯಾ
ಏನೆಂದು, ಕೇಳಲು, ಹೇಳಿತು, ಜೇನಂಥ ಸಿಹಿ ನುಡಿಯಾ, ಜೇನಂಥ ಸಿಹಿ ನುಡಿಯಾ
-------------------------------------------------------------------------------------------------------------------------
ಶುಭಮಂಗಳ (1975) ಶುಭಮಂಗಳಾ
ಸಾಹಿತ್ಯ:ಕಣಗಾಲ್ ಪ್ರಭಾಕರ ಶಾಸ್ತ್ರಿ ಸಂಗೀತ:ವಿಜಯಭಾಸ್ಕರ್ ಗಾಯನ:ಪಿ.ಬಿ. ಶ್ರೀನಿವಾಸ್, ಪಿ.ಸುಶೀಲ
ಹೆಣ್ಣು:ಶುಭಮಂಗಳಾ ಗಂಡು: ಸುಮುಹೂರ್ತವೇ
ಹೆಣ್ಣು: ಶುಭವೇಳೇ ಗಂಡು: ಅಭಿಲಾಶೆಯ
ಹೆಣ್ಣು: ಅನುಬಂಧವೇ ಗಂಡು: ಕರೆಯೋಲೇ
ಇಬ್ಬರು : ಶುಭಮಂಗಳಾ ಸುಮುಹೂರ್ತವೇ ಶುಭವೇಳೇ ಶುಭಮಂಗಳಾ
ಹೆಣ್ಣು: ಚೈತ್ರ ವಸಂತವೆ ಮಂಟಪ ಶಾಲೆ ತಾರಾಲೋಕದೆ ದೀಪಮಾಲೆ
ಗಂಡು: ಚೈತ್ರ ವಸಂತವೆ ಮಂಟಪ ಶಾಲೆ ತಾರಾಲೋಕದೆ ದೀಪಮಾಲೆ
ಹೆಣ್ಣು: ಸದಾನುರಾಗವೆ ಸಮ್ಮಂಧಮಾಲೇ
ಗಂಡು: ಸದಾನುರಾಗವೆ ಸಮ್ಮಂಧಮಾಲೇ
ಇಬ್ಬರು : ಬದುಕೇ ಭೋಗದ ರಸರಾಸ ಲೀಲೆ, ರಸರಾಸ ಲೀಲೆ
ಶುಭಮಂಗಳಾ ಸುಮುಹೂರ್ತವೇ ಶುಭವೇಳೇ ಶುಭಮಂಗಳಾ
ಹೆಣ್ಣು: ಭಾವತರಂಗವೆ ಸಪ್ತಪದಿ ನಾಗೋಲೆ ಭಾವೈಕ್ಯ ಗಾನವೆ ಉರುಟಣೆ ಉಯ್ಯಾಲೆ
ಗಂಡು: ಭಾವತರಂಗವೆ ಸಪ್ತಪದಿ ನಾಗೋಲೆ ಭಾವೈಕ್ಯ ಗಾನವೆ ಉರುಟಣೆ ಉಯ್ಯಾಲೆ
ಹೆಣ್ಣು: ಭಾವೋನ್ಮಾದವೆ ಶೃಂಗಾರ ಲೀಲೆ
ಗಂಡು: ಭಾವೋನ್ಮಾದವೆ ಶೃಂಗಾರ ಲೀಲೆ
ಇಬ್ಬರು : ಬದುಕೇ ಭಾವದ ನವರಾಗಮಾಲೆ, ನವರಾಗಮಾಲೆ
ಇಬ್ಬರು : ಶುಭಮಂಗಳಾ ಸುಮುಹೂರ್ತವೇ ಶುಭವೇಳೇ ಶುಭಮಂಗಳಾ
ಹೆಣ್ಣು: ಈ ಜೀವನವೇ ನವರಂಗ ಶಾಲೆ ಯೌವನ ಕಾಲವೆ ಆನಂದ ಲೀಲೆ
ಗಂಡು: ಈ ಜೀವನವೇ ನವರಂಗ ಶಾಲೆ ಯೌವನ ಕಾಲವೆ ಆನಂದ ಲೀಲೆ
ಹೆಣ್ಣು: ಹೃದಯ ಮಿಲನವೇ ಹರುಷದ ಹಾಲೆಲೆ
ಗಂಡು: ಹೃದಯ ಮಿಲನವೇ ಹರುಷದ ಹಾಲೆಲೆ
ಇಬ್ಬರು : ಬದುಕೇ ಸುಮಧುರ ಸ್ನೇಹ ಸಂಕೋಲೆ, ಸ್ನೇಹ ಸಂಕೋಲೆ
ಇಬ್ಬರು : ಶುಭಮಂಗಳಾ ಸುಮುಹೂರ್ತವೇ ಶುಭವೇಳೇ
ಅಭಿಲಾಶೆಯ ಅನುಬಂಧವೇ ಕರೆಯೋಲೇ ಶುಭಮಂಗಳಾ
---------------------------------------------------------------------------------------------------------------------
ಶುಭಮಂಗಳ (1975) - ಸೂರ್ಯಂಗೂ ಚಂದ್ರಂಗೂ
ಸಾಹಿತ್ಯ: ಎಂ.ಎನ್. ವ್ಯಾಸರಾವ್ ಸಂಗೀತ: ವಿಜಯಭಾಸ್ಕರ ಗಾಯನ: ರವಿ
ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು ನಗ್ತಾದ ಭೂತಾಯಿ ಮನಸು
ಸೂರ್ಯಗೂ ಚಂದ್ರಂಗೂ ಬಂದಾರೆ ಮುನಿಸು ನಗ್ತಾದ ಭೂತಾಯಿ ಮನಸು
ರಾಜಂಗೂ ರಾಣೀಗೂ ಮುರಿದೋದ್ರೆ ಮನಸು ಅರಮನ್ಯಾಗೆ ಏನೈತೆ ಸೊಗಸು,
ಅರಮನ್ಯಾಗೆ ಏನೈತೆ ಸೊಗಸು
ಮನೆತುಂಬ ಹರಿದೈತೆ ಕೆನೆಹಾಲು ಮೊಸರು
ಎದೆಯಾಗೆ ಬೆರೆತೈತೆ ಬ್ಯಾಸರದಾ ಉಸಿರು, ಬ್ಯಾಸರದಾ ಉಸಿರು
ಗುಡಿಯಾಗೆ ಬೆಳ್‍ಗೈತೆ ತುಪ್ಪಾದ ದೀಪ
ನುಡಿಯಾಗೆ ನಡೆಯಾಗೆ ಸಿಡಿದೈತೆ ಕ್ವಾಪ, ಸಿಡಿದೈತೆ ಕ್ವಾಪ
ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು ನಗ್ತಾದ ಭೂತಾಯಿ ಮನಸು
ರಾಜಂಗೂ ರಾಣೀಗೂ ಮುರಿದೋದ್ರೆ ಮನಸು
ಅರಮನ್ಯಾಗೆ ಏನೈತೆ ಸೊಗಸು, ಅರಮನ್ಯಾಗೆ ಏನೈತೆ ಸೊಗಸು
ಬೆಳದಿಂಗಳು ಚೆಲ್ಲೈತೆ ಅಂಗಳದಾ ಹೊರಗೇ
ಕರಿಮೋಡ ಮುಸುಕೈತೆ ಮನಸಿನಾ ಒಳಗೇ
ಬಯಲಾಗೆ ತುಳುಕೈತೆ ಹರುಸದಾ ಒನಲು
ಪ್ರೀತಿಯಾ ತೇರಿಗೇ ಬಡಿದೈತೆ ಸಿಡಿಲು,ಬಡಿದೈತೆ ಸಿಡಿಲು
ಸೂರ್ಯಗೂ ಚಂದ್ರಂಗೂ ಬಂದಾರೆ ಮುನಿಸು ನಗ್ತಾದ ಭೂತಾಯಿ ಮನಸು
ರಾಜಂಗೂ ರಾಣೀಗೂ ಮುರಿದೋದ್ರೆ ಮನಸು
ಅರಮನ್ಯಾಗೆ ಏನೈತೆ ಸೊಗಸು, ಅರಮನ್ಯಾಗೆ ಏನೈತೆ ಸೊಗಸು
ಮುಂಬಾಗಿಲ ರಂಗೋಲಿ ಮನಗೈತೆ ಹಾಯಾಗೀ
ಕಿರುನಗೆಯ ಮುಖವೆಲ್ಲ ಮುದುಡೈತೆ ಸೊರಗೀ
ಆನಂದ ಸಂತೋಸ ಈ ಮನೆಗೆ ಬರಲೀ
ಬೇಡುವೆನು ಕೈಮುಗಿದು ಆ ನನ್ನ ಸಿವನಾ,ಆ ನನ್ನ ಸಿವನಾ
ಸೂರ್ಯಗೂ ಚಂದ್ರಂಗೂ ಬಂದಾರೆ ಮುನಿಸು ನಗ್ತಾದ ಭೂತಾಯಿ ಮನಸು
ಸೂರ್ಯಗೂ ಚಂದ್ರಂಗೂ ಬಂದಾರೆ ಮುನಿಸು ನಗ್ತಾದ ಭೂತಾಯಿ ಮನಸು
ರಾಜಂಗೂ ರಾಣೀಗೂ ಮುರಿದೋದ್ರೆ ಮನಸು
ಅರಮನ್ಯಾಗೆ ಏನೈತೆ ಸೊಗಸು, ಅರಮನ್ಯಾಗೆ ಏನೈತೆ ಸೊಗಸು
------------------------------------------------------------------------------------------------------------------------
ಶುಭಮಂಗಳ (೧೯೭೫) - ಈ ಶತಮಾನದ ಮಾದರಿ ಹೆಣ್ಣು
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಎಂ.ಎನ್. ವ್ಯಾಸರಾವ್ ಗಾಯನ: ವಾಣಿ ಜಯರಾಮ್

ಈ ಶತಮಾನದ ಮಾದರಿ ಹೆಣ್ಣು
ಸ್ವಾಭಿಮಾನದ ಸಾಹಸಿ ಹೆಣ್ಣು
ಈ ಶತಮಾನದ ಮಾದರಿ ಹೆಣ್ಣು
ಸ್ವಾಭಿಮಾನದ ಸಾಹಸಿ ಹೆಣ್ಣು
ಗುಲಾಮಳಿವಳಲ್ಲಾ.. ಸಲಾಮು ಹೊಡೆಯೊಲ್ಲಾ!
ಕುತಂತ್ರವಿಲ್ಲದೆ.. ಅತಂತ್ರವಾಗದೆ..
ಸ್ವತಂತ್ರಳಾಗಿಹಳು!
ಈ ಶತಮಾನದ ಮಾದರಿ ಹೆಣ್ಣು
ಸ್ವಾಭಿಮಾನದ ಸಾಹಸಿ ಹೆಣ್ಣು
ನಾಗರೀಕತೆಯ ನಾಟಕದಲ್ಲಿ ನಟಿಸುವ ಹೆಣ್ಣಲ್ಲಾ!
ಆದುನಿಕತೆಯ ಅಹಂಕಾರದಲಿ ಮೆರೆಯುವ ಹೆಣ್ಣಲ್ಲಾ!
ಆದರ್ಶವಿಲ್ಲದ ಅಂದಥೆಯಲ್ಲಿ ಅಳಿಯುವ ಹೆಣ್ಣಲ್ಲಾ!
ವಿವೇಕವೀರದ, ವಿಚಾರಧಾರೆಯ, ವಿಬಿನ್ನ ರುಚಿಯವಳು!
ಈ ಶತಮಾನದ ಮಾದರಿ ಹೆಣ್ಣು
ಸ್ವಾಭಿಮಾನದ ಸಾಹಸಿ ಹೆಣ್ಣು
ಮಾನಾಭಿಮಾನಕೆ ಮಾನ್ಯತೆ ನೀಡುವ ಮಾಲಿನಿ ಹೆಣ್ಣು!
ಮನತನ ಗೌರವ, ಮಂಗಳ ದೀಪವ ಬೆಳುಗುವಳೀ ಹೆಣ್ಣು!
ದುಡಿಮೆಯ ದೇವರು ಎನ್ನುವ ಮಂತ್ರದ ಮಾಂತ್ರಿಕಳೀ ಹೆಣ್ಣೂ!
ವಿಲಾಸ ಜೀವನ ವಿಚಿತ್ರ ವೇಷಕೆ ವಿರೋಧಿಯಾಗಿಹಳು!
ಈ ಶತಮಾನದ ಮಾದರಿ ಹೆಣ್ಣು
ಸ್ವಾಭಿಮಾನದ ಸಾಹಸಿ ಹೆಣ್ಣು
ರಾಜತಂತ್ರದ ಚದುರಂಗದಲಿ ಚತಮಕ ಚತುರೆ ಈ ಹೆಣ್ಣು!
ಬಾಳಿನ ಬಗೆ ಬಗೆ ಬಣ್ಣದ ಬದುಕಿನ ನಾಯಕಿ ಈ ಹೆಣ್ಣು!
ವಿದ್ಯಾ ಬುದ್ಧಿಯ, ಸಿದ್ಧಿ-ಪ್ರಸಿದ್ಧಿಯ ಸಾದಕಳೀ ಹೆಣ್ಣೂ!
ವಿಷೇಶ ಪ್ರತಿಭೆಯ ವಿಶಾಲ ಕೀರ್ತಿಯ ವಿಜೆತಳಾಗಿಹಳು!
ಈ ಶತಮಾನದ ಮಾದರಿ ಹೆಣ್ಣು
ಸ್ವಾಭಿಮಾನದ ಸಾಹಸಿ ಹೆಣ್ಣು
ಗುಲಾಮಳಿವಳಲ್ಲಾ.. ಸಲಾಮು ಹೊಡೆಯೊಲ್ಲಾ!
ಕುತಂತ್ರವಿಲ್ಲದೆ.. ಅತಂತ್ರವಾಗದೆ..
ಸ್ವತಂತ್ರಳಾಗಿಹಳು!
--------------------------------------------------------------------------------------------------------------------------
ಬಾಳಿನ ಬಗೆ ಬಗೆ ಬಣ್ಣದ ಬದುಕಿನ ನಾಯಕಿ ಈ ಹೆಣ್ಣು!
ವಿದ್ಯಾ ಬುದ್ಧಿಯ, ಸಿದ್ಧಿ-ಪ್ರಸಿದ್ಧಿಯ ಸಾದಕಳೀ ಹೆಣ್ಣೂ!
ವಿಷೇಶ ಪ್ರತಿಭೆಯ ವಿಶಾಲ ಕೀರ್ತಿಯ ವಿಜೆತಳಾಗಿಹಳು!
ಈ ಶತಮಾನದ ಮಾದರಿ ಹೆಣ್ಣು
ಸ್ವಾಭಿಮಾನದ ಸಾಹಸಿ ಹೆಣ್ಣು
ಗುಲಾಮಳಿವಳಲ್ಲಾ.. ಸಲಾಮು ಹೊಡೆಯೊಲ್ಲಾ!
ಕುತಂತ್ರವಿಲ್ಲದೆ.. ಅತಂತ್ರವಾಗದೆ..
ಸ್ವತಂತ್ರಳಾಗಿಹಳು!
--------------------------------------------------------------------------------------------------------------------------
ಶುಭಮಂಗಳ (೧೯೭೫) - ಹೇಮಾ.. ಹೇಮಾ... ಹೇಮಾ.. ಹೇಮಾ..
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಎಂ.ಎನ್.ವ್ಯಾಸರಾವ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ
ಹೇಮಾ.. ಹೇಮಾ... ಹೇಮಾ.. ಹೇಮಾ..
ನಾಕೊಂದ್ಲ ನಾಕು ನಾಕೆರಡ್ಲ ಎಂಟು
ನಾಕೊಂದ್ಲ ನಾಕು ನಾಕೆರಡ್ಲ ಎಂಟು
ಇಷ್ಟೇ ಲೆಕ್ಕದ ನೆಂಟು ಅಷ್ಟೇ ಲೆಕ್ಕದ ನಂಟು
ನಾಕೊಂದ್ಲ ನಾಕು ನಾಕೆರಡ್ಲ ಎಂಟು
ಇಷ್ಟೇ ಲೆಕ್ಕದ ನೆಂಟು ಅಷ್ಟೇ ಲೆಕ್ಕದ ನಂಟು
ಮಳೆಗರೆದ.. ಹನಿ ಹನಿ ಗೆ.. ಭೂತಾಯಿ ಬರೆದಳೆ ಲೆಕ್ಕ?
ಚಿಗುರೊಡೆದ.. ಎಲೆ ಎಲೆಗೆ.. ವನದೇವಿ ಇಡುವಳೆ ಲೆಕ್ಕ ?
ಮಳೆಗರೆದ.. ಹನಿ ಹನಿ ಗೆ.. ಭೂತಾಯಿ ಬರೆದಳೆ ಲೆಕ್ಕ?
ಚಿಗುರೊಡೆದ.. ಎಲೆ ಎಲೆಗೆ.. ವನದೇವಿ ಇಡುವಳೆ ಲೆಕ್ಕ ?
ಕೂಡದ ಕಳೆಯದ ಆ ಲೆಕ್ಕ ಕೂಡೊ ಕಳೆಯೊ ಈ ಲೆಕ್ಕ

ಯಾರಿಗೆ ಬೇಕು ಈ ಲೆಕ್ಕ? ಅ.. ಯಾರಿಗೆ ಬೇಕು ಈ ಲೆಕ್ಕ?
ಹೇಮಾ.. ಹೇಮಾ... ಹೇಮಾ.. ಹೇಮಾ ಅ ಆ..
ನಾಕೊಂದ್ಲ ನಾಕು ನಾಕೆರಡ್ಲ ಎಂಟು
ಹೇಮಾ.. ಹೇಮಾ... ಹೇಮಾ.. ಹೇಮಾ ಅ ಆ..
ನಾಕೊಂದ್ಲ ನಾಕು ನಾಕೆರಡ್ಲ ಎಂಟು
ಇಷ್ಟೇ ಲೆಕ್ಕದ ನೆಂಟು ಅಷ್ಟೇ ಲೆಕ್ಕದ ನಂಟು
ಕೋಗಿಲೆಯ.. ಇಂಚರಕೆ.. ವಸಂತ ಕೊಡುವನೆ ಲೆಕ್ಕ?
ಅರಳಿದ ಹೂ.. ಪರಿಮಳಕೆ.. ತಂಗಾಳಿ ಬರೆಯಿತೆ ಲೆಕ್ಕ?
ಕೋಗಿಲೆಯ.. ಇಂಚರಕೆ.. ವಸಂತ ಕೊಡುವನೆ ಲೆಕ್ಕ?
ಅರಳಿದ ಹೂ.. ಪರಿಮಳಕೆ.. ತಂಗಾಳಿ ಬರೆಯಿತೆ ಲೆಕ್ಕ?
ಎಣಿಸದ ಗುಣಿಸದ ಆ ಲೆಕ್ಕ ಎಣಿಸೊ ಗುಣಿಸೊ ಈ ಲೆಕ್ಕ
ಎಣಿಸದ ಗುಣಿಸದ ಆ ಲೆಕ್ಕ ಎಣಿಸೊ ಗುಣಿಸೊ ಈ ಲೆಕ್ಕ
ಯಾರಿಗೆ ಬೇಕು ಈ ಲೆಕ್ಕ? ಹ ಯಾರಿಗೆ ಬೇಕು ಈ ಲೆಕ್ಕ?
ಹೇಮಾ.. ಹೇಮಾ... ಹೇಮಾ.. ಹೇಮಾ ಮಾ ಮಾ..
ನಾಕೊಂದ್ಲ ನಾಕು ನಾಕೆರಡ್ಲ ಎಂಟು
ಇಷ್ಟೇ ಲೆಕ್ಕದ ನೆಂಟು ಅಷ್ಟೇ ಲೆಕ್ಕದ ನಂಟು
ಪ್ರೇಮಿಗಳ.. ಸಂಗಮಕೆ.. ಋತುವು ಹೇಳಿತೆ ಲೆಕ್ಕ?
ಪ್ರಿಯತಮನ.. ಚುಂಬನಕೆ.. ಪ್ರೇಯಸಿ ಇಡುವಳೆ ಲೆಕ್ಕ?
ಪ್ರೇಮಿಗಳ.. ಸಂಗಮಕೆ.. ಋತುವು ಹೇಳಿತೆ ಲೆಕ್ಕ?
ಪ್ರಿಯತಮನ.. ಚುಂಬನಕೆ.. ಪ್ರೇಯಸಿ ಇಡುವಳೆ ಲೆಕ್ಕ?
ಕಾಣದ ಕೇಳದ ಆ ಲೆಕ್ಕ ಕಾಣುವ ಕೇಳುವ ಈ ಲೆಕ್ಕ |೨|
ಯಾರಿಗೆ ಬೇಕು ಈ ಲೆಕ್ಕ? ಹ ಹ ಹ ಯಾರಿಗೆ ಬೇಕು ಈ ಲೆಕ್ಕ?
ಹೇಮಾ.. ಹೇಮಾ... ಹೇಮಾ.. ಆ.. ಹೇಮಾ
ನಾಕೊಂದ್ಲ ನಾಕು ನಾಕೆರಡ್ಲ ಎಂಟು
ಇಷ್ಟೇ ಲೆಕ್ಕದ ನೆಂಟು ಅಷ್ಟೇ.. ಏ ಲೆಕ್ಕದ ನಂಟು
ನಾಕೊಂದ್ಲ ನಾಕು ನಾಕೆರಡ್ಲ ಎಂಟು
ನಾಕೊಂದ್ಲ ನಾಕು ನಾಕೆರಡ್ಲ ಎಂಟು
--------------------------------------------------------------------------------------------------------------------------
ಕೋಗಿಲೆಯ.. ಇಂಚರಕೆ.. ವಸಂತ ಕೊಡುವನೆ ಲೆಕ್ಕ?
ಅರಳಿದ ಹೂ.. ಪರಿಮಳಕೆ.. ತಂಗಾಳಿ ಬರೆಯಿತೆ ಲೆಕ್ಕ?
ಕೋಗಿಲೆಯ.. ಇಂಚರಕೆ.. ವಸಂತ ಕೊಡುವನೆ ಲೆಕ್ಕ?
ಅರಳಿದ ಹೂ.. ಪರಿಮಳಕೆ.. ತಂಗಾಳಿ ಬರೆಯಿತೆ ಲೆಕ್ಕ?
ಎಣಿಸದ ಗುಣಿಸದ ಆ ಲೆಕ್ಕ ಎಣಿಸೊ ಗುಣಿಸೊ ಈ ಲೆಕ್ಕ
ಎಣಿಸದ ಗುಣಿಸದ ಆ ಲೆಕ್ಕ ಎಣಿಸೊ ಗುಣಿಸೊ ಈ ಲೆಕ್ಕ
ಯಾರಿಗೆ ಬೇಕು ಈ ಲೆಕ್ಕ? ಹ ಯಾರಿಗೆ ಬೇಕು ಈ ಲೆಕ್ಕ?
ಹೇಮಾ.. ಹೇಮಾ... ಹೇಮಾ.. ಹೇಮಾ ಮಾ ಮಾ..
ನಾಕೊಂದ್ಲ ನಾಕು ನಾಕೆರಡ್ಲ ಎಂಟು
ಇಷ್ಟೇ ಲೆಕ್ಕದ ನೆಂಟು ಅಷ್ಟೇ ಲೆಕ್ಕದ ನಂಟು
ಪ್ರೇಮಿಗಳ.. ಸಂಗಮಕೆ.. ಋತುವು ಹೇಳಿತೆ ಲೆಕ್ಕ?
ಪ್ರಿಯತಮನ.. ಚುಂಬನಕೆ.. ಪ್ರೇಯಸಿ ಇಡುವಳೆ ಲೆಕ್ಕ?
ಪ್ರೇಮಿಗಳ.. ಸಂಗಮಕೆ.. ಋತುವು ಹೇಳಿತೆ ಲೆಕ್ಕ?
ಪ್ರಿಯತಮನ.. ಚುಂಬನಕೆ.. ಪ್ರೇಯಸಿ ಇಡುವಳೆ ಲೆಕ್ಕ?
ಕಾಣದ ಕೇಳದ ಆ ಲೆಕ್ಕ ಕಾಣುವ ಕೇಳುವ ಈ ಲೆಕ್ಕ |೨|
ಯಾರಿಗೆ ಬೇಕು ಈ ಲೆಕ್ಕ? ಹ ಹ ಹ ಯಾರಿಗೆ ಬೇಕು ಈ ಲೆಕ್ಕ?
ಹೇಮಾ.. ಹೇಮಾ... ಹೇಮಾ.. ಆ.. ಹೇಮಾ
ನಾಕೊಂದ್ಲ ನಾಕು ನಾಕೆರಡ್ಲ ಎಂಟು
ಇಷ್ಟೇ ಲೆಕ್ಕದ ನೆಂಟು ಅಷ್ಟೇ.. ಏ ಲೆಕ್ಕದ ನಂಟು
ನಾಕೊಂದ್ಲ ನಾಕು ನಾಕೆರಡ್ಲ ಎಂಟು
ನಾಕೊಂದ್ಲ ನಾಕು ನಾಕೆರಡ್ಲ ಎಂಟು
--------------------------------------------------------------------------------------------------------------------------
No comments:
Post a Comment