295. ಕೃಷ್ಣ ನೀ ಬೇಗನೆ ಬಾರೋ (೧೯೮೭)


ಕೃಷ್ಣ ನೀ ಬೇಗನೇ ಬಾರೋ ಚಲನಚಿತ್ರದ ಹಾಡುಗಳು 
  1. ಈ ಬಾಳಲಿ ಶಾಂತಿ ಎಲ್ಲಿದೆ ಬಿರುಗಾಳಿಯೇ ಬೀಸೀದೆ
  2. ಆಲಾರೆ ಆಲಾರೆ, ಮುಕುಂದ ಮುರಾರೆ  
  3. ಮಮ್ಮಿ ಮಮ್ಮಿ ಮಮ್ಮಿ ನನ್ನ ಮುದ್ದು ಮಮ್ಮಿ
  4. ಗೋವಿಂದ ಗೋವಿಂದ ಹರೇ ಗೋವಿಂದ ಸಿಟ್ಟು ಗಿಟ್ಟು ಬಂದಾಗ
  5. ಮಮ್ಮಯ್ಯಾ ಮಮ್ಮಯ್ಯಾ 
  6. ಈ ರಾಧೆಗೇ ಗೋಪಾಲನ ಸಂತೋಷವೇ 
ಕೃಷ್ಣ ನೀ ಬೇಗನೆ ಬಾರೋ (೧೯೮೭) - ಈ ಬಾಳಲಿ ಶಾಂತಿ ಎಲ್ಲಿದೆ 
ಸಂಗೀತ : ಬಪ್ಪಿಲಹರಿ ಸಾಹಿತ್ಯ : ಚಿ.ಉದಯಶಂಕರ  ಗಾಯನ:ಎಸ್.ಪಿ.ಬಿ ಎಸ್.ಜಾನಕಿ

ಎಸ್.ಪಿ.ಬಾಲ : ಈ ಬಾಳಲಿ ಶಾಂತಿ ಎಲ್ಲಿದೆ ಬಿರುಗಾಳಿಯೇ ಬೀಸೀದೆ ಓಓಓ .....
                      ಅನುದಿನವು ಸಂತೋಷವಾ ಹುಡುಕುತಲಿ ನಾ ಸೋತೆನೆ ಅನುರಾಗವೆ ಮುಳ್ಳಾಯಿತೇ
ಎಸ್.ಜಾನಕಿ:  ನೀ ಹಾಡಿದಾ ಶೋಕಗೀತೆಗೆ ಕಣ್ಣೀರಿನ ಕಾಣಿಕೆ  ಓಓಓ .......
                     ಅನುಕ್ಷಣವು ನಾ ನೀಡುವೆ ನೆಮ್ಮದಿಯ ಹಾರೈಸುವೆ ಅನುಗಾಲವು ಶುಭಕೋರುವೆ

ಎಸ್.ಪಿ.ಬಾಲ : ರಾಧೆ ನಿನ್ನ ಸ್ನೇಹದಲ್ಲಿ ಈ ವೇದನೆ ಮರೆವಾಸೆ...
ಎಸ್.ಜಾನಕಿ:  ಕೃಷ್ಣ ನಿನ್ನ ನೋವಿನಲ್ಲಿ ಜೊತೆಯಾಗಲು ನನಗಾಸೆ... ಓಓಓಓಓ ಆಆಆ ..
ಎಸ್.ಪಿ.ಬಾಲ: ಆಸೆಗಳೆ ಕನಸುಗಳು
ಎಸ್.ಜಾನಕಿ: ಬದುಕಿನಲಿ ಬರಿ ಇರಳು  ಓಓಓಓಓ ಓಓಓಓಓ

ಎಸ್.ಜಾನಕಿ:  ನನ್ನ ನಿನ್ನ ನಡುವೆ ಇಂದು ದಾಟಲಾರದ ನದಿಯೊಂದಿದೆ
ಎಸ್.ಪಿ.ಬಾಲ: ಎಲ್ಲೆ ಇರಲಿ ನಮ್ಮ ಮನಸು ದೂರವಾಗದೆ ಒಂದಾಗಿದೆ  ಓಓಓಓಓಓಓ
ಎಸ್.ಜಾನಕಿ: ನಿನ್ನ  ನುಡಿಯೇ ಹಾಯಾಗಿದೆ
ಎಸ್.ಪಿ.ಬಾಲ: ಆ ವಿಧಿಗೆ ತಲೆಬಾಗಿದೆ ಓಓಓಓಓಓಓ .....
ಎಸ್.ಜಾನಕಿ: ನೀ ಹಾಡಿದಾ ಶೋಕಗೀತೆಗೆ ಕಣ್ಣೀರಿನ ಕಾಣಿಕೆ ಓಓಓಓಓ... ..
ಎಸ್.ಪಿ.ಬಾಲ: ಅನುದಿನವು ಸಂತೋಷವಾ ಹುಡುಕುತಲಿ ನಾ ಸೋತೆನೆ ಅನುರಾಗವೆ ಮುಳ್ಳಾಯಿತೇ
ಹೆಣ್ಣು : ಓಓಓಓಓಓಓ                               ಗಂಡು : ಓಓಓಓಓಓಓ
ಇಬ್ಬರು :  ಓಓಓಓಓಓಓ                               ಗಂಡು : ಓಓಓಓಓಓಓ
--------------------------------------------------------------------------------------------------------------------------

ಕೃಷ್ಣ ನೀ ಬೇಗನೆ ಬಾರೋ (1986) - ಆಲಾರೆ ಆಲಾರೆ, ಮುಕುಂದ ಮುರಾರೆ  
ಸಂಗೀತ: ಬಪ್ಪಿಲಹರಿ ಸಾಹಿತ್ಯ: ಚಿ.ಉದಯಶಂಕರ್   ಹಾಡಿದವರು: ಎಸ್.ಜಾನಕಿ 

ಆಲಾರೆ ಆಲಾರೆ, ಮುಕುಂದ ಮುರಾರೆ  ಗೋಪಾಲ ಬಾರಯ್ಯ.. ಬಾ…ರೋ  ಶ್ರೀ ಕೃಷ್ಣ ನೀ ಬೇಗ ಬಾ…ರೋ
ಆಲಾರೆ ಆಲಾರೆ, ಮುಕುಂದ ಮುರಾರೆ  ಗೋಪಾಲ ಬಾರಯ್ಯ.. ಬಾ…ರೋ ಶ್ರೀ ಕೃಷ್ಣ ನೀ ಬೇಗ ಬಾ…ರೋ
ಶ್ರೀ ಕೃಷ್ಣ ನೀ ಬೇಗ ಬಾ…ರೋ

ಓಓಓ… ನನ್ನ ಕಣ್ಣಲ್ಲಿ ನೋಡು ನಿನ್ನ ಬಿಂಬವೆ  ನನ್ನ ಮನದಲ್ಲಿ ಇಂದು ನಿನ್ನ ರೂಪವೆ, ಬಲ್ಲೆಯಾ… ಕೃಷ್ಣನೇ…
ನನ್ನ ಕಣ್ಣಲ್ಲಿ ನೋಡು ನಿನ್ನ ಬಿಂಬವೆ ನನ್ನ ಮನದಲ್ಲಿ ಇಂದು ನಿನ್ನ ರೂಪವೆ, ಬಲ್ಲೆಯಾ… ಕೃಷ್ಣನೇ…
ನೆನ್ನೆ ಕನಸಲ್ಲೂ ನಾನು ನಿನ್ನೇ ಕಂಡೆನೇ  ನಿನ್ನ ನೋಡೊ ಆಸೆ ನಾ ತಾಳಲಾರೆನೆ ಕೇಶವಾ… ಮಾಧವಾ.., ರಾಧಾಲೋಲ
ಆಲಾರೆ ಆಲಾರೆ, ಮುಕುಂದ ಮುರಾರೆ ಗೋಪಾಲ ಬಾರಯ್ಯ.. ಬಾ…ರೋ ಶ್ರೀ ಕೃಷ್ಣ ನೀ ಬೇಗ ಬಾ…ರೋ
ಶ್ರೀ ಕೃಷ್ಣ ನೀ ಬೇಗ ಬಾ…ರೋ

ಓಓಓ… ಪ್ರೇಮವೆ ದೈವ ಎಂದೂ ಪ್ರೇಮವೆ ಜೀವಾ  ಪ್ರೇಮದ ಕೂಗು ಇನ್ನು ಕೇಳದೆ ದೇವ, ತಾಮಸಾ… ಏತಕೇ…
ಪ್ರೇಮವೆ ದೈವ ಎಂದೂ ಪ್ರೇಮವೆ ಜೀವಾ  ಪ್ರೇಮದ ಕೂಗು ಇನ್ನು ಕೇಳದೆ ದೇವ, ತಾಮಸಾ… ಏತಕೇ…
ನನ್ನ ಹೃದಯದ ಪ್ರೇಮ ಗಾನ ಕೇಳದೆ  ಜೀವ ನಿಲ್ಲದು ಕೃಷ್ಣ ನಿನ್ನ ನೋಡದೆ ಕೇಶವಾ… ಮಾಧವಾ …ರಾಧಾಲೋಲ
ಆಲಾರೆ ಆಲಾರೆ, ಮುಕುಂದ ಮುರಾರೆ  ಗೋಪಾಲ ಬಾರಯ್ಯ.. ಬಾ…ರೋ ಶ್ರೀ ಕೃಷ್ಣ ನೀ ಬೇಗ ಬಾ…ರೋ
ಆಲಾರೆ ಆಲಾರೆ, ಮುಕುಂದ ಮುರಾರೆ  ಗೋಪಾಲ ಬಾರಯ್ಯ.. ಬಾ…ರೋ ಶ್ರೀ ಕೃಷ್ಣ ನೀ ಬೇಗ ಬಾ…ರೋ
------------------------------------------------------------------------------------------------------------------------

ಕೃಷ್ಣ ನೀ ಬೇಗನೆ ಬಾರೋ (೧೯೮೭)...........ಈ ಬಾಳಲಿ ಶಾಂತಿ ಎಲ್ಲಿದೆ
ಸಂಗೀತ : ಬಪ್ಪಿಲಹರಿ ಸಾಹಿತ್ಯ : ಚಿ.ಉದಯಶಂಕರ  ಗಾಯನ:ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಎಸ್.ಜಾನಕಿ


ಹೆ : ಮಮ್ಮಿ ಮಮ್ಮಿ ಮಮ್ಮಿ ನನ್ನ ಮುದ್ದು ಮಮ್ಮಿ ಔತಣ ಕೊಡುವೆ ಎಂದು ನಿಮ್ಮನು ಕರೆದಳು ಸ್ವಾಮಿ
     ಮಮ್ಮಿ ಮಮ್ಮಿ ಮಮ್ಮಿ ನನ್ನ ಮುದ್ದು ಮಮ್ಮಿ ಔತಣ ಕೊಡುವೆ ಎಂದು ನಿಮ್ಮನು ಕರೆದಳು ಸ್ವಾಮಿ
     ಬಿಸಿಬಿಸಿ ಕಜ್ಜಾಯ ಕೊಡುವೆ ಬಂದಾಗ ಕಾದಿರುವೆ ಮನೆಯಲ್ಲೀ ಮರೆಯದೆ ಬರಬೇಕು... 
    ನಿಮಗಾಗೇ ಈ ಆಹ್ವಾನ ಅರೆರೇ ಬಂದಾಗ ಹೊಸ ಸನ್ಮಾನ ... 
ಗ : ಅಮ್ಮಿ ಅಮ್ಮಿ ಅಮ್ಮಿ ನನ್ನ ಮುದ್ದು ಅಮ್ಮಿ ಔತಣವೆನಲು ನಾನು ಬರೆದೇ ಹೋಗುವೆನೇನು 
    ಬಿಸಿಬಿಸಿ ಮುತ್ತೊಂದ ಕೊಡುವೆ ಬಂದಾಗ (ಹ್ಹಹ್ಹಾಹ್ಹಾ) ನಾಚುತಲಿ ಕೋಣೆಯಲಿ ಓಡುವೇ ನೀನಾಗ ..... 
   ಆನಂದ ನೀ ನಲಿವಾಗ ಅನುಕೂಲ ಜೊತೆ ಕಲೆತಾಗ 

ಹೆ : ಒಲವಿನ ಗೆಳೆಯನೇ ನಿಜವನೇ ನುಡಿವೆನು ಕರೆದರೂ ಬರದಿರೆ ಇನ್ನೆಂದೂ ಮಾತಾಡೇನು 
ಗ : ಆ... ಚೆಲುವಿನಾ ಗೆಳತಿಯೇ ಮನಸನು ಅರಿತೆನು ತಿಳಿಯದೆ ಕನಸಲು ತುಂಟಾಟವ ಆಡೇನು 
ಹೆ : ಸ್ನೇಹವೋ.. ಮೋಹವೋ .. ಮಾತಿಗೆ.. ಸೋತೆನು... ಉಉಉಉ
ಗ : ಅಮ್ಮಿ.....
ಹೆ : ಮಮ್ಮಿ ಮಮ್ಮಿ ಮಮ್ಮಿ ನನ್ನ ಮುದ್ದು ಮಮ್ಮಿ
ಗಂಡು : ಔತಣವೆನಲು ನಾನು ಬರೆದೇ ಹೋಗುವೆನೇನು

ಗ : ಗೆಳತಿಯ ಸನಿಹವೇ ಸಲಿಗೆಯೇ ಹರುಷವು ಅರಳಿದ ಹೃದಯದಿ ಅನುರಾಗದಾನಂದವು
ಹೆ :ಓಓಓ ... ಸರಸವು ಮಧುರವೂ ವಿರಸವು ಮಧುರವೂ ಇನಿಯನ ನುಡಿಗಳೇ ಜೇನಂತೆ ಮಾಧುರ್ಯವು 
ಗ : ಕೋಮಲೇ.... ಈಗಲೇ... ಔತಣ... ನೀಡಲೇ... ಏಏಏ 
ಹೆ : ಮಮ್ಮಿ..... 
ಗ : ಅಮ್ಮಿ ಅಮ್ಮಿ ಅಮ್ಮಿ ನನ್ನ ಮುದ್ದು ಅಮ್ಮಿ ಔತಣವೆನಲು ನಾನು ಬರೆದೇ ಹೋಗುವೆನೇನು 
      ಬಿಸಿಬಿಸಿ ಮುತ್ತೊಂದ ಕೊಡುವೆ ಬಂದಾಗ (ಹ್ಹಹ್ಹಾಹ್ಹಾ) ನಾಚುತಲಿ ಕೋಣೆಯಲಿ ಓಡುವೇ ನೀನಾಗ ..... ಹ್ಹಹ್ಹಾಹ್ಹಾ
     ಆನಂದ ನೀ ನಲಿವಾಗ ಅನುಕೂಲ ಜೊತೆ ಕಲೆತಾಗ 
ಹೆಣ್ಣು :  ಮಮ್ಮಿ ಮಮ್ಮಿ ಮಮ್ಮಿ ನನ್ನ ಮುದ್ದು ಮಮ್ಮಿ ಔತಣ ಕೊಡುವೆ ಎಂದು ನಿಮ್ಮನು ಕರೆದಳು ಸ್ವಾಮಿ
          ಬಿಸಿಬಿಸಿ ಕಜ್ಜಾಯ ಕೊಡುವೆ ಬಂದಾಗ (ಹ್ಹಹ್ಹಾಹ್ಹಾ )ಕಾದಿರುವೆ ಮನೆಯಲ್ಲೀ ಮರೆಯದೆ ಬರಬೇಕು... ಹ್ಹಹ್ಹಾಹ್ಹಾ
         ನಿಮಗಾಗೇ ಈ ಆಹ್ವಾನ
ಗಂಡು : ಅನುಕೂಲ ಜೊತೆ ಕಲೆತಾಗ
ಹೆಣ್ಣು : ನಿಮಗಾಗೇ ಈ ಆಹ್ವಾನ
ಗಂಡು : ಅರೇ .. ಅನುಕೂಲ ಜೊತೆ ಕಲೆತಾಗ 
----------------------------------------------------------------------------------------------------------------------- 
  
ಕೃಷ್ಣ ನೀ ಬೇಗನೆ ಬಾರೋ (೧೯೮೭) - ಗೋವಿಂದ ಗೋವಿಂದ ಹರೇ ಗೋವಿಂದ
ಸಂಗೀತ : ಬಪ್ಪಿಲಹರಿ ಸಾಹಿತ್ಯ : ಚಿ.ಉದಯಶಂಕರ  ಗಾಯನ:ಎಸ್.ಪಿ.ಬಾಲಸುಬ್ರಹ್ಮಣ್ಯಂ 

ಗೋವಿಂದ ಗೋವಿಂದ
ಗೋವಿಂದ ಗೋವಿಂದ ಗೋವಿಂದ ಹರಿ ಗೋವಿಂದ
ಗೋವಿಂದ ಗೋವಿಂದ ಹರಿ ಗೋವಿಂದ ಸಿಟ್ಟು ಗಿಟ್ಟು ಬಂದಾಗ ರಾತ್ರಿ ನಮ್ಮ ಆನಂದ 
ಗೋವಿಂದ ಗೋವಿಂದ ಗೋವಿಂದ ಗೋವಿಂದ ಹರಿ ಗೋವಿಂದ..
ಸಿಟ್ಟು ಗಿಟ್ಟು ಬಂದಾಗ ರಾತ್ರಿ ನಮ್ಮ ಆನಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ
ಅರೇ ಗೋವಿಂದ.. ಹೋಯ್

ಅರೆರೇ..  ಡವಡವ ಎನುತಿದೆ ಎದೆಯಲ್ಲ ಗಡಗಡ ಎನುತಿದೆ ತನುವೆಲ್ಲ
ನನ್ನಲ್ಲಿ ಕರುಣೆ ತೋರಮ್ಮ ಈ ಪ್ರಾಣವನ್ನು ಉಳಿಸಮ್ಮ...
ಹಾಯ್ ಮೊನ್ನೆಗಿಂತ ಚೆಂದ ಇನ್ನು ನಿನ್ನ ಮೊಗವು ನಿನ್ನೆಗಿಂತ ಅಂದ  ಇಂದು ನಿನ್ನ ನಗುವು
ಕೆಣುಕುತ ಕೂಗಿದೆ ಬಾ ಇಂದು ಕೇಳಿದೆ ಮೌನದಿ ತುಟಿಗೊಂದು
ದೂರಕೆ ಓಡದೇ ನನ್ನನ್ನು ಕಾಡದೆ ಹತ್ತಿರ ಬಂದರೆ ಸಾಕಮ್ಮ ...
ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಹರಿ ಗೋವಿಂದ..
ಸಿಟ್ಟು ಗಿಟ್ಟು ಬಂದಾಗ ರಾತ್ರಿ ನಮ್ಮ ಆನಂದ ಗೋವಿಂದ ಗೋವಿಂದ ಅರೇ ಗೋವಿಂದ ಗೋವಿಂದ
ಗೋವಿಂದ ಆಹ್ಹ್ ಆಹ್ಹ್ ಆಹ್ಹ್ ಆಹ್ಹ್

ತರರರರ... ಹ್ಹ..ಹ್ಹಾ..
ಅರೆ ಮಲ್ಲಿಗೆ ಹೂವು ಎಲ್ಲ ಧೂಳಾಗಿ ಅರೆ ಅಳುತಿದೆ ಮಂಚ ನೋಡು ಮಂಕಾಗಿ
ತಂಗಾಳಿ ಎಲ್ಲ ಅನ್ಯಾಯ ಇನ್ನೇಕೆ ನಿನ್ನ ಸೌಂದರ್ಯ.. ಅಹಹಹ್ಹ್
ಹ್ಹ.. ನನ್ನ ಬೇರೆ ಮಾಡಿದರೇ ನಿನ್ನ ಅಂದ ಕಾಡ ಬೆಳದಿಂಗಳಂತೆ ಬರಿ ದಂಡ
ಬದುಕಲಿ ಬಂದಿದೆ ನವರಾತ್ರಿ ಓ ಕೊನೆ ಆದರೆ ಶಿವರಾತ್ರಿ
ನೀಡದೇ ತೊಂದರೇ ಪ್ರೇಮದಿ ಬಂದರೇ ಇಂದೇ ನಮಗೇ ಶುಭರಾತ್ರಿ....
ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಹರಿ ಗೋವಿಂದ..
ಸಿಟ್ಟು ಗಿಟ್ಟು ಬಂದಾಗ ರಾತ್ರಿ ನಮ್ಮ ಆನಂದ ಗೋವಿಂದ ಗೋವಿಂದ ಅರೇ  ಗೋವಿಂದ ಗೋವಿಂದ
ಗೋವಿಂದ...... ಗೋವಿಂದ .... ಆಹ್ಹ್ ಆಹ್ಹ್ ಆಹ್ಹ್ ಆಹ್ಹ್ .. ಹೊಯ್.. ಹೊಯ್ ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೋಹೊಹೋ
--------------------------------------------------------------------------------------------------------------------------

ಕೃಷ್ಣ ನೀ ಬೇಗನೆ ಬಾರೋ (೧೯೮೭) - ಮಮ್ಮಯ್ಯ ಮಮ್ಮಯ್ಯ ಮನಸಿಗ ಎಲ್ಲಯ್ಯ ಮಾಯ ಮಾಯ ಮಾಯ
ಸಂಗೀತ : ಬಪ್ಪಿಲಹರಿ ಸಾಹಿತ್ಯ : ಚಿ.ಉದಯಶಂಕರ ಗಾಯನ:ಎಸ್.ಜಾನಕೀ, ಕೋರಸ್ 


ಹೆಣ್ಣು : ಲಾ ಲಲಲಲಾ ಲಾ ಲಲಲಲಾ ಲಲಲಲಾ  ಲಲಲಲಾ  ಲಾ ಲಲಾ 
ಕೋರಸ್ : ಲಾ ಲಲಲಲಾ ಲಾ ಲಲಲಲಾ ಲಲಲಲಾ  ಲಲಲಲಾ  ಲಾ ಲಲಾ 
ಹೆಣ್ಣು : ಮಮ್ಮಯ್ಯ ಮಮ್ಮಯ್ಯ ... ಮಮ್ಮಯ್ಯ ಮಮ್ಮಯ್ಯ ಮನಸಿಗ ಎಲ್ಲಯ್ಯ ಮಾಯ ಮಾಯ ಮಾಯ
          ಮಮ್ಮಯ್ಯ ಮಮ್ಮಯ್ಯ ... ಮಮ್ಮಯ್ಯ ಮಮ್ಮಯ್ಯ ಮನಸಿಗ ಎಲ್ಲಯ್ಯ ಮಾಯ ಮಾಯ ಮಾಯ  
          ಓ .. ಸುಖವೆಂಬ ಮಾತು ಮಾಯ .. ಹೇ.. ಹಿತವೆಂಬ ಮಾತು ಮಾಯ 
         ಒಲವೆಂದು ಬರುವ ಕೈ ಹಿಡಿದು ನಡೆವ ಅನುರಾಗವೆಲ್ಲ ಮಾಯ 
         ಮಮ್ಮಯ್ಯ ಮಮ್ಮಯ್ಯ ... ಮಮ್ಮಯ್ಯ ಮಮ್ಮಯ್ಯ ಮನಸಿಗ ಎಲ್ಲಯ್ಯ ಮಾಯ ಮಾಯ ಮಾಯ  

ಕೋರಸ್ : ಲಲಲ್ಲಲ್ಲಲ್ಲಾ .. ಲಲಲ್ಲಲ್ಲಲ್ಲಾ .. (ಹೇಯ್ )ಲಲಲ್ಲಲ್ಲಲ್ಲಾ .. (ಹೇಯ್ ) ಲಲಲ್ಲಲ್ಲಲ್ಲಾ .. (ಹೇಯ್ )
                ಲಲಲ್ಲಲ್ಲಲ್ಲಾ .. ಲಲಲ್ಲಲ್ಲಲ್ಲಾ .. (ಹೇಯ್ )ಲಲಲ್ಲಲ್ಲಲ್ಲಾ .. (ಹೇಯ್ ) ಲಲಲ್ಲಲ್ಲಲ್ಲಾ .. (ಹೇಯ್ )
ಹೆಣ್ಣು : ಯಾ ಯಾಯಾಯಾಯ ಯಾ ಯಾಯಾಯಾಯ ಯಾ ಯಾಯಾಯಾಯ ಯಾ ಯಾಯಾಯಾಯ 
          ಯಾ ಯಾಯಾಯಾಯ 
          ಈ ನೀತಿಯೆಲ್ಲಾ ನೀ ಕೇಳಲಾರೇ ಆ ಪ್ರೀತಿಯನ್ನೂ ನೀ ತೂರಲಾರೇ 
          ನೀ.. ನನಗಂತೂ ಅಗ್ನಿ ಉಂಡೇ ಕೈ... ಹಿಡಿದಾಗ ಕೊಟ್ಟ ಮಾತೇ .. 
          ನೀ ಬರದ ಮೇಲೆ ಅನುಬಂಧವೆಲ್ಲಿ ಬದುಕಲ್ಲ ಎಲ್ಲಿ ಮಾಯ 
         ಮಮ್ಮಯ್ಯ ಓಓಓ.. ಮಮ್ಮಯ್ಯ ಮಮ್ಮಯ್ಯ ಮಮ್ಮಯ್ಯ ಮಮ್ಮಯ್ಯ ಮನಸಿಗ ಎಲ್ಲಯ್ಯ ಮಾಯ ಮಾಯ ಮಾಯ  

ಕೋರಸ್  : ಯಾ ಯಾಯಾಯಾಯ ಯಾ ಯಾಯಾಯಾಯ ಯಾ ಯಾಯಾಯಾಯ ಯಾ ಯಾಯಾಯಾಯ 
                ಯಾ ಯಾಯಾಯಾಯ 
ಹೆಣ್ಣು : ಆ... ಕೃಷ್ಣನಂತೇ .. ನೀ ದೇವರಲ್ಲೀ ಆ.. ಶಕ್ತಿಯೆಲ್ಲಾ ಆ.. ಬುದ್ದಿಗಿಲ್ಲಾ.. 
          ನೀ.. ಇದನೇಕೆ ಇಂದೂ ಮರೆತೇ .. ಈ.. ಸತಿಯಲ್ಲಿ ಏನೋ ಕೊರತೆ 
          ಅಲ್ಲೊಂದು ಹೆಣ್ಣು ಇಲ್ಲೊಂದು ಕಣ್ಣೂ ಸಂಸಾರ ಸುಖವೂ ಮಾಯ 
         ಮಮ್ಮಯ್ಯ ಓಓಓ.. ಮಮ್ಮಯ್ಯ ಮಮ್ಮಯ್ಯ ಮಮ್ಮಯ್ಯ ಮಮ್ಮಯ್ಯ ಮನಸಿಗ ಎಲ್ಲಯ್ಯ ಮಾಯ ಮಾಯ ಮಾಯ  
          ಓ .. ಸುಖವೆಂಬ ಮಾತು ಮಾಯ .. ಹೇ.. ಹಿತವೆಂಬ ಮಾತು ಮಾಯ 
         ಒಲವೆಂದು ಬರುವ ಕೈ ಹಿಡಿದು ನಡೆವ ಅನುರಾಗವೆಲ್ಲ ಮಾಯ 
         ಮಮ್ಮಯ್ಯ ಮಮ್ಮಯ್ಯ ... ಮಮ್ಮಯ್ಯ ಮಮ್ಮಯ್ಯ ಮನಸಿಗ ಎಲ್ಲಯ್ಯ ಮಾಯ ಮಾಯ ಮಾಯ  
ಕೋರಸ್ : ಲಲಲ್ಲಲ್ಲಲ್ಲಾ .. ಲಲಲ್ಲಲ್ಲಲ್ಲಾ .. ಲಲಲ್ಲಲ್ಲಲ್ಲಾ ..  ಲಲಲ್ಲಲ್ಲಲ್ಲಾ .. 
--------------------------------------------------------------------------------------------------------------------------

ಕೃಷ್ಣ ನೀ ಬೇಗನೆ ಬಾರೋ (೧೯೮೭) - ಈ ರಾಧೆಗೇ ಗೋಪಾಲನ ಸಂತೋಷವೇ ನಿಜವಾದ
ಸಂಗೀತ : ಬಪ್ಪಿಲಹರಿ ಸಾಹಿತ್ಯ : ಚಿ.ಉದಯಶಂಕರ ಗಾಯನ:ಎಸ್.ಜಾನಕೀ, ಕೋರಸ್ 


ಹೆಣ್ಣು : ಈ ರಾಧೆಗೇ ಗೋಪಾಲನ ಸಂತೋಷವೇ ನಿಜವಾದ ಆನಂದವೂ ... 
          ಈ ರಾಧೆಗೇ ಗೋಪಾಲನ ಸಂತೋಷವೇ ನಿಜವಾದ ಆನಂದವೂ ... 
          ರಾಧೆಯಾ.. ಕೃಷ್ಣನ ಅನುಬಂಧವಾ ಹೇಳುವೇ .. ಈ ರಾಧೆಗೇ 

ಕೋರಸ್ :  ಆಆಆಆ.... ಆಆಆಆ.... ಆಆಆಆ.... 
ಹೆಣ್ಣು : ರಾಧೆಯೆಂದೂ ರುಕ್ಮಿಣೀಗೇ ಸವತಿಯಾದ ಕಥೆಯಿಲ್ಲ 
          ಅವಳ ಪ್ರೇಮ ಹೂವಂತೇ ಭಕ್ತಿ ಅವಳ ಉಸಿರಂತೇ .. 
          ಸೀತೆಯ ಹಾಗೇ ನೀನಮ್ಮಾ.. ಗಂಗೆಯಂತೇ ನಾನಮ್ಮಾ.. 
          ರಾಮ ಪಾದ ಕಂಡಾಗ ಸೋಕುವಾಸೇ ಬಂತಮ್ಮಾ.. 
          ಈ ರಾಧೆಗೇ ಗೋಪಾಲನ... 
          ಈ ರಾಧೆಗೇ ಗೋಪಾಲನ ಸಂತೋಷವೇ ನಿಜವಾದ ಆನಂದವೂ ... 
          ರಾಧೆಯಾ.. ಕೃಷ್ಣನ ಅನುಬಂಧವಾ ಹೇಳುವೇ .. ಈ ರಾಧೆಗೇ 

ಹೆಣ್ಣು : ಆ.. ಆಹ್ಹ್ .. ಆ.. 
ಕೋರಸ್ : ಓಓಓಓಓಓಓ ... ಓಓಓಓಓಓಓ ... 
ಹೆಣ್ಣು : ಇನ್ನೂ ಕೋಪ ಏಕಮ್ಮಾ ಇನ್ನೀ ನೋವೂ ಸಾಕಮ್ಮಾ 
          ಕೃಷ್ಣನಿಂದ ದೂರಾಗಿ ಶಾಂತಿ ಹುಡುಕಬೇಡಮ್ಮಾ.. 
         ಇನ್ನೂ ನಿಮ್ಮ ಬಾಳಲ್ಲಿ ನನ್ನ ನೆರಳೂ ಇಲ್ಲಮ್ಮಾ 
         ಹೋಗಿ ಬರುವೇ ನಾನೀಗ ನೀನು ಸುಖದಿ ಬಾಳಮ್ಮಾ.. 
          ಈ ರಾಧೆಗೇ ಗೋಪಾಲನ... 
          ಈ ರಾಧೆಗೇ ಗೋಪಾಲನ ಸಂತೋಷವೇ ನಿಜವಾದ ಆನಂದವೂ ... 
          ರಾಧೆಯಾ.. ಕೃಷ್ಣನ ಅನುಬಂಧವಾ ಹೇಳುವೇ .. ಈ ರಾಧೆಗೇ 
--------------------------------------------------------------------------------------------------------------------------

No comments:

Post a Comment