296. ಒಂದೇ ಗುರಿ (೧೯೮೩)

ಒಂದೇ ಗುರಿ ಚಿತ್ರದ ಹಾಡುಗಳು 
  1. ಈ ಭಾವಗೀತೆ ನಿನಗಾಗಿ ಹಾಡಿದೆ
  2. ರಂಗ ಬಾರೋ ಶ್ರೀ ರಂಗ ಬಾರೋ
  3. ನನ್ನಾಣೆಗೂ ನಾ ನಿನ್ನನ್ನೂ ಇನ್ನೆಂದಿಗೂ ಬಿಡಲಾರೇನೂ  
  4. ಅಂದ ನೋಡಿ ಚಂದ ನೋಡಿ ಆಮೇಲೆ ಆಸೇ ಹೇಳೆಲೋ 
ಒಂದೇ ಗುರಿ (೧೯೮೩).....ಈ ಭಾವಗೀತೆ ನಿನಗಾಗಿ ಹಾಡಿದೆ
ಸಾಹಿತ್ಯ :ಚಿ.ಉದಯಶಂಕರ್ ಸಂಗೀತ:ರಾಜನ್-ನಾಗೇಂದ್ರ ಗಾಯನ:ಎಸ್.ಪಿ.ಬಾಲಸುಬ್ರಹ್ಮಣ್ಯಮ್

ಆ...ಆ...ಆ...ಈ ಭಾವಗೀತೆ ನಿನಗಾಗಿ ಹಾಡಿದೆ
ಅನುರಾಗ ನನ್ನನು ಕವಿಯಾಗಿ ಮಾಡಿದೆ
ಈ ಭಾವಗೀತೆ ನಿನಗಾಗಿ ಹಾಡಿದೆ
ಈ ಭಾವಗೀತೆ ನಿನಗಾಗಿ ಹಾಡಿದೆ

ಬಳ್ಳಿಯಲಿ ಹೂವು ತುಂಬಿ ಮರಗಳಲಿ ಜೀವ ತುಂಬಿ
ಎಲ್ಲೆಲ್ಲಿ ನೊಡಿದರಲ್ಲಿ ಹೊಸ ಹಸಿರು ತುಂಬಿದೆ
ಹಾಡುತಿರೆ ದುಂಬಿಗಳೆಲ್ಲ ಹಾರುತಿರೆ ಹಕ್ಕಿಗಳೆಲ್ಲಾ
ತೋಳಿoದ ನನ್ನನು ಬಳಸಿ ನೀ ಸನಿಹ ನಿಂತಿರೇ
ನಿನ ಅಂದ ಕಂಡು ಸಂತೋಷಗೊಂಡು ಹೊಸ ಭಾವ ಮುಡಲು
ಈ ಭಾವಗೀತೆ ನಿನಗಾಗಿ ಹಾಡಿದೆ
ಅನುರಾಗ ನನ್ನನು ಕವಿಯಾಗಿ ಮಾಡಿದೆ
ಈ ಭಾವಗೀತೆ ನಿನಗಾಗಿ ಹಾಡಿದೆ
ಈ ಭಾವಗೀತೆ ನಿನಗಾಗಿ ಹಾಡಿದೆ

ಕಣ್ಣಿನಲಿ ರೂಪ ತುಂಬಿ ಮನಸಿನಲಿ ಪ್ರೇಮ ತುಂಬಿ
ನನ್ನೆದೆಯ ವೀಣೆಯ ಮೀಟಿ ಹೊಸ ನಾದ ತುಂಬಿದೆ
ಆಸೆಗಳ ಕಣ್ಣು ತುಂಬಿ ಮೋಹವನು ತುಂಬಿ ತುಂಬಿ
ನೂರಾರು ಕನಸುಗಳನ್ನು ಬಾಳಲ್ಲಿ ತುಂಬಿದೆ
ಹೀಗೇಕೆ ನೀ ಮೌನವಾದೆ ಕಾರಣ ಹೇಳದೇ
ಈ ಭಾವಗೀತೆ ನಿನಗಾಗಿ ಹಾಡಿದೆ
ಅನುರಾಗ ನನ್ನನು ಕವಿಯಾಗಿ ಮಾಡಿದೆ
ಈ ಭಾವಗೀತೆ ನಿನಗಾಗಿ ಹಾಡಿದೆ
ಈ ಭಾವಗೀತೆ ನಿನಗಾಗಿ ಹಾಡಿದೆ
--------------------------------------------------------------------------------------------------------------------------

ಒಂದೇ ಗುರಿ (೧೯೮೩)....ರಂಗ ಬಾರೋ ಶ್ರೀ ರಂಗ ಬಾರೋ
ಸಾಹಿತ್ಯ :ಚಿ.ಉದಯಶಂಕರ್ ಸಂಗೀತ:ರಾಜನ್-ನಾಗೇಂದ್ರ ಗಾಯನ:ಎಸ್.ಜಾನಕಿ

ರಂಗ ಬಾರೋ ಶ್ರೀ ರಂಗ ಬಾರೋ
ರಂಗ ಬಾರೋ ಶ್ರೀ ರಂಗ ಬಾರೋ ರಂಗ ಬಾರೋ ಮುದ್ದು ರಂಗ ಬಾರೋ
ಕದ್ದು ಕದ್ದು ನೋಡದೇ ಮುದ್ದು ಮಾತನಾಡುತಾ
ರಂಗ ಬಾರೋ ಶ್ರೀ ರಂಗ ಬಾರೋ
ರಂಗ ಬಾರೋ ಶ್ರೀ ರಂಗ ಬಾರೋ

ಕೊಳಲಿನ ಇಂಪಾದ ರಾಗವ ಕೇಳಿ
ಕೊಳಲಿನ ಇಂಪಾದ ರಾಗವ ಕೇಳಿ ಆಸೆಯ ಹುಗಳು ಅರಳುತ ನಗಲಿ
ಆಸೆಯ ಹುಗಳು ಅರಳುತ ನಗಲಿ
ಚಿನ್ನದ ಕಾಲ್ಗೆಜ್ಜೆ ನಾದವ ಕೇಳಿ ಹೃದಯವು ಹಾಡುತ ಸಡಗರ ಪಡಲಿ
ಕರುಣೆಯ ಬಾಳಿಗೆ ಬೆಳಕಾಗಲಿ
ರಂಗ ಬಾರೋ ಶ್ರೀ ರಂಗ ಬಾರೋ
ರಂಗ ಬಾರೋ ಮುದ್ದು ರಂಗ ಬಾರೋ
ಕದ್ದು ಕದ್ದು ನೋಡದೇ ಮುದ್ದು ಮಾತನಾಡುತಾ
ರಂಗ ಬಾರೋ ಶ್ರೀ ರಂಗ ಬಾರೋ
ರಂಗ ಬಾರೋ ಶ್ರೀ ರಂಗ ಬಾರೋ ಹೆಣ್ಣಲಿ ನಿನ್ನಾಸೆ ತುಂಬುವುದೇಕೆ

ಹೆಣ್ಣಲಿ ನಿನ್ನಾಸೆ ತುಂಬುವುದೇಕೆ ಕಣ್ಣಲಿ ಕೂಗುತ ಕಾಡುವುದೇಕೆ
ಕಣ್ಣಲಿ ಕೂಗುತ ಕಾಡುವುದೇಕೆ  ಕನಸಲಿ ದಿನರಾತ್ರಿ ಕಾಣುವುದೇಕೆ
ಎದುರಲಿ ಬಂದರೆ ಓಡುವುದೇಕೆ  ಉಳಿಯದು ಜೀವವೂ ನಿನ ಸೇರದೇ
ರಂಗ ಬಾರೋ ಪಾಂಡುರಂಗ ರಂಗ ಬಾರೋ
ರಂಗ ಬಾರೋ ಶ್ರೀ ರಂಗ ಬಾರೋ
ರಂಗ ಬಾರೋ ಶ್ರೀ ರಂಗ ಬಾರೋ ರಂಗ ಬಾರೋ ಮುದ್ದು ರಂಗ ಬಾರೋ
ಕದ್ದು ಕದ್ದು ನೋಡದೇ ಮುದ್ದು ಮಾತನಾಡುತಾ
ರಂಗ ಬಾರೋ ಶ್ರೀ ರಂಗ ಬಾರೋ
ರಂಗ ಬಾರೋ ಶ್ರೀ ರಂಗ ಬಾರೋ
-------------------------------------------------------------------------------------------------------------------------

ಒಂದೇ ಗುರಿ (೧೯೮೩)....ನನ್ನಾಣೆಗೂ ನಾ ನಿನ್ನನ್ನೂ ಇನ್ನೆಂದಿಗೂ ಬಿಡಲಾರೆನು
ಸಂಗೀತ:ರಾಜನ್-ನಾಗೇಂದ್ರ ಸಾಹಿತ್ಯ :ಚಿ.ಉದಯಶಂಕರ್, ಗಾಯನ : ಎಸ್.ಜಾನಕಿ , ಎಸ್.ಪಿ.ಬಿ,

ಹೇ.. ಮಿಸ್ಟರ್ ...
ನನ್ನಾಣೆಗೂ ನಾ ನಿನ್ನನ್ನೂ ಇನ್ನೆಂದಿಗೂ ಬಿಡಲಾರೆನು
ನೀನೆಲ್ಲೋ ನಾನಲ್ಲೇ ಇರುವೇ  ನೆರಳಂತೇ ನಿನ್ನಾ ಹಿಂದೆ ಬರುವೇ
ಅದುರುತಿವೆ ತುಟಿಗೆಳೇಕೆ ನಡುಗುತಿದೆ ಮೈ ಏಕೇ
ನನ್ನಾಣೆಗೂ ನಾ ನಿನ್ನನ್ನೂ ಇನ್ನೆಂದಿಗೂ ಬಿಡಲಾರೆನು
ನೀನೆಲ್ಲೋ ನಾನಲ್ಲೇ ಇರುವೇ  ನೆರಳಂತೇ ನಿನ್ನಾ ಹಿಂದೆ ಬರುವೇ

ಈ ತಾಣವು ನಮಗೇತಕೆ ಹೊಸ ಜಾಗ ಅಲ್ಲೊಂದಿದೇ ನಿನಗಾಗಿಯೇ ಕಾದಿದೆ
ನಿನ್ನಂಥ ಸುಕುಮಾರಿಗೆ ನನ್ನಲ್ಲಿ ಛಲವೇತಕೆ ಈ ಸ್ನೇಹ ನಮಗೇತಕೆ
ಈ ಬೇಸರ ಸರಿಯಲ್ಲ ಈ ಕೋಪವೂ ನಿನಗಲ್ಲ
ಈ ಬೇಸರ ಸರಿಯಲ್ಲ ಈ ಕೋಪವೂ ನಿನಗಲ್ಲ ನಿನ್ನಾಟ ನಾ ಬಲ್ಲೆ ಕಳ್ಳ
ಹೇ.. ಮಿಸ್ಟರ್ ಆಯ್ ನೌ ಯುವರ್ ಹಿಸ್ಟರಿ ಮನೆ ನಂಬರ ಒನ್ ಟ್ವೆಂಟಿ
ಬೈಕ್ ನಂಬರ್ ಟೂ ಟ್ವೆಂಟಿ ಯು ಆರ್ ಫೋರ್ ಟ್ವೆಂಟಿ... ಫೋರ್ ಟ್ವೆಂಟಿ .. ಫೋರ್ ಟ್ವೆಂಟಿ
ನನ್ನಾಣೆಗೂ ನಾ ನಿನ್ನನೂ ಇನ್ನೆಂದಿಗೂ ಬಿಡಲಾರೆ
ನೀನೆಲ್ಲೋ ನಾನಲ್ಲೇ ಇರುವೇ  ನೆರಳಂತೇ ನಿನ್ನಾ ಹಿಂದೆ ಬರುವೇ

ಓ.. ದೇವರೇ ಈ ಹೆಣ್ಣಿನ ತಲೆಯೊಳಗೆ ಹೀಗೇತಕೆ ಬರಿ ಮಣ್ಣನ್ನೇ ತುಂಬಿದೆ
ಓ.. ದೇವರೇ ಈ ಗಂಡಿನ ಮನಸ್ಸನ್ನೂ ಹೀಗೇತಕೆ ಪಾಷಾಣವ ಮಾಡಿದೇ
ನೀ ಯಾರೋ ನೋಡಿರುವೇ ಇನ್ಯಾರನೋ ಕಾಡಿರುವೇ
ನೀ ಯಾರೋ ನೋಡಿರುವೇ ಇನ್ಯಾರನೋ ಕಾಡಿರುವೇ ನೀ ನಾಳೆ ಕಣ್ಣೀರು ಬಿಡುವೇ
ಮಿಸ್ ನಿನ್ ಚರಿತ್ರೆನೇ ನನಗೊತ್ತು ವಯಸ್ಸು ಇಪ್ಪತ್ತೂ
ಕಾರ್ ನಂಬರ್ ಎಪ್ಪತ್ತು ನಿನ್ನ ನಂಬಿದರೇ ಆಪತ್ತೂ... ಆಪತ್ತೂ .... ಆಪತ್ತೂ
ನನ್ನಾಣೆಗೂ ನಾ ನಿನ್ನನ್ನೂ ಇನ್ನೆಂದಿಗೂ ಬಿಡಲಾರೆನು
ನೀನೆಲ್ಲೋ ನಾನಲ್ಲೇ ಇರುವೇ  ನೆರಳಂತೇ ನಿನ್ನಾ ಹಿಂದೆ ಬರುವೇ
ಅದುರುತಿವೆ ತುಟಿಗೆಳೇಕೆ ನಡುಗುತಿದೆ ಮೈ ಏಕೇ
ನನ್ನಾಣೆಗೂ ನಾ ನಿನ್ನನ್ನೂ ಇನ್ನೆಂದಿಗೂ ಬಿಡಲಾರೆನು
ನೀನೆಲ್ಲೋ ನಾನಲ್ಲೇ ಇರುವೇ  ನೆರಳಂತೇ ನಿನ್ನಾ ಹಿಂದೆ ಬರುವೇ
------------------------------------------------------------------------------------------------------------------------

ಒಂದೇ ಗುರಿ (೧೯೮೩) - ಅಂದ ನೋಡಿ ಚಂದ ನೋಡಿ ಆಮೇಲೆ ಆಸೇ ಹೇಳೆಲೋ
ಸಂಗೀತ:ರಾಜನ್-ನಾಗೇಂದ್ರ ಸಾಹಿತ್ಯ :ಚಿ.ಉದಯಶಂಕರ್, ಗಾಯನ : ಎಸ್.ಪಿ.ಶೈಲಜಾ, ಎಸ್.ಪಿ.ಬಿ,

ಅಂದ ನೋಡಿ ಚಂದ ನೋಡಿ ಆಮೇಲೆ ಆಸೇ ಹೇಳೆಲೋ
ನನ್ನ ಕೂಡಿ ಕುಣಿದು ಹಾಡಿ ಏನು ಬೇಕು ಎಂದು ಕೇಳೆಲೋ
ತಟ್ಟಲೋ ತಟ್ಟಲೋ ಕೈಯ್ ತಟ್ಟಲೋ ಮುಟ್ಟಲೋ ಮುಟ್ಟಲೋ ಮನಸು ಮುಟ್ಟಲೋ
ಹೂ.. ಗೀ..ಗೀ.. ಹುಡುಗೀ...ಗೀ...ಗೀ.. ಬೇಡಗಿ.. ಗೀ ... ಗೀ ...
ಹೊಂಗೇಯ ನೆರಳನ್ನೂ ಕಂಡಾಗ ಕಂಡಾಗ ಒಂಟಿಯಾ ಬಾಳೆಂದೂ ನೊಂದಾಗ ಪಾಪ
ಬೇಸರದಿ ಆಕಳಿಕೆ ಬಂದಾಗ ಮೈ ಮುರಿಯುತ ನಾನು ನಿಂತಾಗ ನಿನ್ನನ್ನೂ ಕಂಡೇ ಓಡೋಡಿ ಬಂದೇ
ಓ.. ಗೆಳೆಯಾ ಹೊಯ್.. ಹೊಯ್.. ಹೊಯ್
ಅಂದ ನೋಡಿ ಚಂದ ನೋಡಿ ಆಮೇಲೆ ಆಸೆ ಹೇಳೆಲೋ
ನನ್ನ ಕೂಡಿ ಕುಣಿದು ಹಾಡಿ ಏನು ಬೇಕು ಎಂದು ಕೇಳೆಲೋ
ತಟ್ಟಲೋ ತಟ್ಟಲೋ ಕೈಯ್ ತಟ್ಟಲೋ ಮುಟ್ಟಲೋ ಮುಟ್ಟಲೋ ಮನಸು ಮುಟ್ಟಲೋ
ಹೂ.. ಗೀ..ಗೀ.. ಹುಡುಗೀ...ಗೀ...ಗೀ.. ಬೇಡಗಿ.. ಗೀ ... ಗೀ ...

ಸಾರಾಯಿ ಬಾಯಲ್ಲಿ ಸುರಿದಾಗ ಕಿಕ್ಕೇರಲಿಲ್ಲಾ ನನಗಾಗ
ಎದುರಲ್ಲಿ ನೀ ನಿಂತು ಕೊಂಡಾಗ ಮತ್ತೇರಿ ಹೋದೇ ನಾನಾಗ
ಓ... ಓ... ಓ.. ಬೆಣ್ಣೆ ಮುದ್ದೇ ಮನಸೇಕೆ ಕದ್ದೇ ಓ.. ಓ..ಓ ಗೆಳತೀ ಹಾಂ ಹಾಂ ಹಾಂ
ಅಂದ ನೋಡಿ ಚಂದ ನೋಡಿ ಆಮೇಲೆ ಆಸೆ ಹೇಳೆಲೋ ಹುಯೀ ... ಹುಯೀ
ನನ್ನ ಕೂಡಿ ಕುಣಿದು ಹಾಡಿ ಏನು ಬೇಕು ಎಂದು ಕೇಳೆಲೋ
ಅರೇ .. ತಟ್ಟಲೇ ತಟ್ಟಲೇ ಕೈಯ್ ತಟ್ಟಲೇ ಮುಟ್ಟಲೇ ಮುಟ್ಟಲೇ ಮನಸು ಮುಟ್ಟಲೇ
ಹೂ.. ಗೀ..ಗೀ.. ಹುಡುಗೀ...ಗೀ...ಗೀ.. ಬೇಡಗಿ.. ಗೀ ... ಗೀ ...

ಈ ಹುಬ್ಬು ಕಾಮನ ಬಿಲ್ಲಂತೇ ಕಣ್ಣೆರಡು ದ್ರಾಕ್ಷಿಯ ಹೆಣ್ಣಂತೆ
ಕೆನ್ನೆಗಳು ಗುಲಾಬಿ ಹೂವಂತೇ ನೀನಿರಲೂ ನನಗಿನ್ನೂ ಏನು ಚಿಂತೇ
ಬಾ ನನ್ನ ರಂಭೇ ಬಂಗಾರದ ಬೊಂಬೆ ಹೂ ಬೆಡಗಿ ಹಾಂ ಹಾಂ ಹಾಂ
ಅಂದ ನೋಡಿ ಚಂದ ನೋಡಿ ಆಮೇಲೆ ಆಸೆ ಹೇಳೆಲೋ ಹುಯೀ ... ಹುಯೀ
ನನ್ನ ಕೂಡಿ ಕುಣಿದು ಹಾಡಿ ಏನು ಬೇಕು ಎಂದು ಕೇಳೆಲೋ
ಅರೇ .. ತಟ್ಟಲೋ ತಟ್ಟಲೋ ಕೈಯ್ ತಟ್ಟಲೋ ಮುಟ್ಟಲೋ ಮುಟ್ಟಲೋ ಮನಸು ಮುಟ್ಟಲೋ
ಹೂ.. ಗೀ..ಗೀ.. ಹುಡುಗೀ...ಗೀ...ಗೀ.. ಬೇಡಗಿ.. ಗೀ ... ಗೀ ...
--------------------------------------------------------------------------------------------------------------------------

No comments:

Post a Comment