298. ಗುಲಾಬಿ (1997)

ಗುಲಾಬಿ ಚಲನಚಿತ್ರದ ಹಾಡುಗಳು 
  1. ಈ ಚೆಲುವೆ ನಾಚಿದರೆ ಮುತ್ತು ಮುತ್ತು
  2. ಓ ಪ್ರೇಮದೇವತೆ ಪ್ರಿಯರಾಗ ದೇವತೆ
  3. ಮಧುರನಾದ ನುಡಿಸಿದೆ ಯಾರೋ
  4. ಊರು ಮಲುಗುತಿದೆ ತಂಗಾಳಿ ಮಲುಗುತಿದೆ
  5. ಪ್ರೀತಿ ಪ್ರೀತಿಯನು ಪ್ರಿಯ, ಕರುಣಾಮಯ ಪ್ರೇಮದಾನಂದ
  6. ಅರೆ ಚಂಚಾರೇ ಅರೆ ಚಂಚಾರೇ
  7. ಮಧುರ ಗೀತೆ ಹಾಡಿದೆ ಯಾರೋ 
  8. ಬೀಸೋ ಮುಂಗಾರೇ ಕೇಳು ಕೇಳು
ಗುಲಾಬಿ (1997) - ಈ ಚೆಲುವೆ ನಾಚಿದರೆ ಮುತ್ತು ಮುತ್ತು
ಸಂಗೀತ : ಎಸ್. ನಾರಾಯಣ್ ಸಾಹಿತ್ಯ : ಇಳಯರಾಜ ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ ಮತ್ತು ಚಿತ್ರ

ಈ ಚೆಲುವೆ ನಾಚಿದರೆ ಮುತ್ತು ಮುತ್ತು
ಈ ರತಿಗೆ ಮನ್ಮಥನ ಸ್ವಾತಿ ಮುತ್ತು
ಒಹ್ ಹೂವ್ ಮೇಲೆ ದುಂಬಿ ಮುತ್ತು
ಈ ಬಾಲೆ ತಂದ ಮುತ್ತು
ನೀರಾಳ ಮೈತ್ರಿ ಮುತ್ತು ಧಾರಾಳವಾಗಿ ಇತ್ತು
ಆನಂದ ಸವಿ ಸವಿಯನಿಸಿ ಕ್ಷಣ ಕ್ಷಣ
ಈ ಚೆಲುವೆ ನಾಚಿದರೆ ಮುತ್ತು ಮುತ್ತು
ಈ ರತಿಗೆ ಮನ್ಮಥನ ಸ್ವಾತಿ ಮುತ್ತು

ಶೃಂಗಾರ ವೀನೆ ನೀ ಮೀಟಿದೆ
ಮಂದಾರವಾಗಿ ನಾ ಮೂಡಿದೆ
ಪನ್ನೀರ ಮೇಲೆ ರೋಮಾಂಚನ
ಹೆಣ್ಣಾಸೆ ಕೂಗಿ ಹೂ ಕಂಪನ
ಇವಳ ಹವಳ ಚಮ್ ಚಮ್ ಚಮ್
ಎದೆಯ ತುಡಿಸಿತೇನು
ಮದಿರೆ ಕಳಶ ಚಂ ಚಂ ಚಂ  ನಿದಿರೆ ಕೆಡಿಸಿತೇನು
ನಾಚಿಕೆ ನನನನ ನನನ ಹೋ ಹೋ ಹೋ
ರಂಗಾಗಿ ನನನ ನನನ 
ಈ ಚೆಲುವೆ ನಾಚಿದರೆ ಮುತ್ತು ಮುತ್ತು
ಈ ರತಿಗೆ ಮನ್ಮಥನ ಸ್ವಾತಿ ಮುತ್ತು
 
ಮುಂಗಾರ ಮೋಡ ನೀರಾಯಿತು
ನೀರಾಳ ಮೇಲೆ ತೇಲಾಡಿತು
ಮುಂಜಾನೆ ಕೂಗೊ ಮಾತಾಯಿತು
ಸಿಂಗಾರಿ ನೀಡೋ ಹೊತ್ತಾಯಿತು
ಇವನ ಕವನ ಚಂ ಚಂ ಚಂ ತೆರೆಯ ಬಿಡಿಸಿತೇನು
ಮಧುರ ಮಿಲನ ಚಂ ಚಂ ಚಂ ನಿದಿರೆ ಕೆಡಿಸಿತೇನು
ಬೀಸುವೆ ತನನನ ನನನ  ಹೋ ಹೋ
ರಂಗಾಗಿ ತನನ ತನನ  
ಈ ಚೆಲುವೆ ನಾಚಿದರೆ ಮುತ್ತು ಮುತ್ತು
ಈ ರತಿಗೆ ಮನ್ಮಥನ ಸ್ವಾತಿ ಮುತ್ತು
ಒಹ್ ಹೂವ್ ಮೇಲೆ ದುಂಬಿ ಮುತ್ತು
ಈ ಬಾಲೆ ತಂದ ಮುತ್ತು
ನೀರಾಳ ಮೈತ್ರಿ ಮುತ್ತು ಧಾರಾಳವಾಗಿ ಇತ್ತು
ಆನಂದ ಸವಿ ಸವಿಯನಿಸಿ ಕ್ಷಣ ಕ್ಷಣ
 ------------------------------------------------------------------------------------------------------------------------

ಗುಲಾಬಿ (೧೯೯೬) - ಓ ಪ್ರೇಮದೇವತೆ ಪ್ರಿಯರಾಗ ದೇವತೆ
ಸಂಗೀತ : ಇಳಯರಾಜ ಸಾಹಿತ್ಯ :ಎಸ.ನಾರಾಯಣ ಗಾಯನ : ಇಳಯರಾಜ, ಚಿತ್ರಾ 

ಓ ಪ್ರೇಮದೇವತೆ ಪ್ರಿಯರಾಗ ದೇವತೆ
ಇಳಿಯಾ ರಮಿಸೋ ಅಲೆಯೇ ನಿನಗೆ
ಪ್ರೇಮಯಾಗ ಗೀತಾಂಜಲಿ,  ಆತ್ಮ ಯಾಗ ರಾಗ  ಗೀತಾಂಜಲಿ
ಓ ಪ್ರೇಮದೇವತೆ ಪ್ರಿಯರಾಗ ದೇವತೆ

ಮಲ್ಲಿಗೆಯ ಮೇಲೆ ಮನ್ಮಥನ ಲೀಲೆ
ಓದುವಾಗ ಮೋದವು ಕಾಳಿದಾಸ ಕಾವ್ಯವು
ಚಂದನದ ಬಾಲೇ ಚೆಲ್ಲುತ್ತಿವೆ ಲೀಲೆ
ಮೂಡುವಾಗ ಲಾಸ್ಯವೊ ಪ್ರೇಮದಾಸ ಕಾವ್ಯವು
ನೀರೇ ನೀರೇ ಮಿನುಗೋ ತಾರೆ
ನೀಡು ಬಾರಾ ಜೀನಗೊ ಸಾರ
ಪ್ರೇಮವಾಹಿನಿ ಪ್ರೀತಿ ರೂಪ ನೀ
ಪ್ರೇಮ ಲೀಲೆ ದೀಪಮಾಲೆ ಜೀವವಾಹಿನಿ
ಓ ಪ್ರೇಮದೇವತೆ ಪ್ರಿಯರಾಗ ದೇವತೆ
ಇಳಿಯಾ ರಮಿಸೋ ಅಲೆಯೇ ನಿನಗೆ
ಪ್ರೇಮಯಾಗ ಗೀತಾಂಜಲಿ,  ಆತ್ಮ ಯಾಗ ರಾಗ  ಗೀತಾಂಜಲಿ
ಓ ಪ್ರೇಮದೇವತೆ ಪ್ರಿಯರಾಗ ದೇವತೆ

ಹುಣ್ಣಿಮೆಯ ದೀಪ ರಂಜನೀಯ ರೂಪ 
ನೋಡುವಾಗ ಮೇನಕೆ ಹಾಡುವಾಗ ರಾಧಿಕಾ 
ಚಂದಿರನ ರೂಪ ಸುಂದರಿಗೆ ದೀಪ 
ನೀಲವೇಣಿ ಮೋಹನ ಶಿಲಧಾರೆ ಈ ದಿನ 
ಮೇಘ ದಾಹ ದಣಿಯೋ ವೇಗ 
ವಾಯು ವರುಣ ಬೇರೆಯೇ ಈಗ 
ಪ್ರೇಮವಾಹಿನಿ ಪ್ರೀತಿ ರೂಪ ನೀ
ಪ್ರೇಮ ಲೀಲೆ ದೀಪಮಾಲೆ ಜೀವವಾಹಿನಿ
ಓ ಪ್ರೇಮದೇವತೆ ಪ್ರಿಯರಾಗ ದೇವತೆ
ಇಳಿಯಾ ರಮಿಸೋ ಅಲೆಯೇ ನಿನಗೆ
ಪ್ರೇಮಯಾಗ ಗೀತಾಂಜಲಿ,  ಆತ್ಮ ಯಾಗ ರಾಗ  ಗೀತಾಂಜಲಿ
ಓ ಪ್ರೇಮದೇವತೆ ಪ್ರಿಯರಾಗ ದೇವತೆ
------------------------------------------------------------------------------------------------------------------------- 

ಗುಲಾಬಿ (೧೯೯೬) - ಮಧುರನಾದ ನುಡಿಸಿದೆ ಯಾರೋ
ಸಂಗೀತ : ಇಳಯರಾಜ ಸಾಹಿತ್ಯ :ಎಸ.ನಾರಾಯಣ ಗಾಯನ : ನೆಪೋಲಿಯನ್, ಸೌಮ್ಯ 

ಮಧುರನಾದ ನುಡಿಸಿದೆ ಯಾರೋ
ಮನದ ಹೂವ ಮೂಡಿಸಿದ ಯಾರೋ
ಮಧುರನಾದ ನುಡಿಸಿದೆ ಯಾರೋ
ಮನದ ಹೂವ ಮೂಡಿಸಿದ ಯಾರೋ
ಚಿನ್ನ ನಿನ್ನ ರಾಗ ಚೆನ್ನ ಎಂದು ಕೂಗಿ
ನೇಸರ ಬೆಳ್ಳಿ ಹಕ್ಕಿ ಕುಹೂ ಹಕ್ಕಿ ಬಂದು ಹಾಡಿ ಬೇಸರ 
ಕವಿರಾಜನೊ ರವಿತೇಜನೋ ಯಾರು ನೀ... 

ಮೇಘದಲ್ಲಿ ರಂಗವಲ್ಲಿ ಬರೆವ ಚಕೋರ 
ಗಾಳಿಯಲ್ಲಿ ಗಂಧ ಚೆಲ್ಲಿ  ಕರೆವ ಸುಧೀರ 
ರಾಜ ರಾಗ ಗೀತೆಯಾ ನೀ ಹಾಡು ಮೋಹನ 
ಹಾಡುವಾಗ ನಲಿಯದೆ ಈ ರಮ್ಯ ಕಾನನ 
ಮಿಂಚು ಮಿಂಚು ಕಣ್ಣ ಸಂಚು ... ನನ್ನ ಅಂತರಂಗದಲ್ಲಿ 
ಮಧುರನಾದ ನುಡಿಸಿದೆ ಯಾರೋ
ಮನದ ಹೂವ ಮೂಡಿಸಿದ ಯಾರೋ 

ಸೂಜಿ ಮಲ್ಲೆ ನಿನ್ನಾ ನಲ್ಲೆ ಹೆಸರ ಬಲ್ಲೆಯಾ 
ಒರೆಗಣ್ಣು ತುಂಟ ನಿನ್ನ ಗುರುತು ಹೇಳೆಯಾ 
ಯಾವುದೋ ಈ ಬಂಧವು ನನ್ನನ್ನು ಕಾಡಿದೆ 
ಹೇಳದಾ ನೂರಾಸೆಯು ನಿನ್ನಲ್ಲಿ ಮೂಡಿದೆ
ಮಿಂಚು ಮಿಂಚು... ಮಿಂಚು ಮಿಂಚು
ಕಣ್ಣ ಮಿಂಚು ... ಕಣ್ಣ ಸಂಚು
ಮಿಂಚು ಮಿಂಚು...  ಕಣ್ಣ ಸಂಚು
ನನ್ನ ಅಂತರಂಗದಲ್ಲಿ ಮಧುರ ಗೀತೇ ಹಾಡಿದೆ ಯಾರೋ 
ಮನದ ವೀಣೆ ಮೀಟಿದ ಯಾರೋ 
ಚಿನ್ನ ನಿನ್ನ ರಾಗ ಚೆನ್ನ ಎಂದು ನಾನು ಸಾರಿದೆ 
ಹೆಣ್ಣೇ ನಿನ್ನ ರೂಪವನ್ನ ಒಮ್ಮೆ ತೋರಬಾರದೇ.. 
ಕಲೇ ವಾಣಿಯೋ ನನ್ನ ರಾಣಿಯೋ ಯಾರು ನೀ.. 

ಮಧುರನಾದ ನುಡಿಸಿದೆ ಯಾರೋ
ಮನದ ಹೂವ ಮೂಡಿಸಿದ ಯಾರೋ
ಮಧುರನಾದ ನುಡಿಸಿದೆ ಯಾರೋ
ಮನದ ಹೂವ ಮೂಡಿಸಿದ ಯಾರೋ
ಚಿನ್ನ ನಿನ್ನ ರಾಗ ಚೆನ್ನ ಎಂದು ಕೂಗಿ
ನೇಸರ ಬೆಳ್ಳಿ ಹಕ್ಕಿ ಕುಹೂ ಹಕ್ಕಿ ಬಂದು ಹಾಡಿ ಬೇಸರ 
ಕವಿರಾಜನೊ ರವಿತೇಜನೋ ಯಾರು ನೀ...
--------------------------------------------------------------------------------------------------------------------------

ಗುಲಾಬಿ (೧೯೯೬) - ಊರು ಮಲುಗುತಿದೆ ತಂಗಾಳಿ ಮಲುಗುತಿದೆ
ಸಂಗೀತ : ಇಳಯರಾಜ ಸಾಹಿತ್ಯ :ಎಸ.ನಾರಾಯಣ ಗಾಯನ : ರಾಜೇಶ, ಚಿತ್ರಾ 

ಊರು ಮಲುಗುತಿದೆ ತಂಗಾಳಿ ಮಲುಗುತಿದೆ
ಪ್ರೀತಿ ತಂದ ಹೂವೆ ನೀ ಕೇಳೇ ನನ್ನ ನೋವೇ
ಈ ಮನಸ್ಯಾಕೋ ಮಲಗಲಿಲ್ಲವೇ
ಊರು ಮಲುಗುತಿದೆ ತಂಗಾಳಿ ಮಲುಗುತಿದೆ
ನಿನ್ನ ತುಂಬಿ ಜೀವ ಕಣ್ಣಾಯ್ತು
ನುಂಗಿ ನೋವ ಈ ಮನಸ್ಯಾಕೋ ಮಲಗಲಿಲ್ಲವೆ
ಊರು ಮಲುಗುತಿದೆ ತಂಗಾಳಿ ಮಲುಗುತಿದೆ

ತಾರೆ ಮೈ ಚೆಲ್ಲಿದಾಗ ನೀರೇ ನೀನಿಲ್ಲದಾಗ
ಚಂದಿರನ ಬೆಳಕು ಬೆಂಕಿಯಾಗಿದೆ
ಹೋಳಾದ ಪ್ರೇಮದಲ್ಲಿ ಬೋಳಾದೆ ನಾನು ಇಲ್ಲಿ
ವಂಚಕರ ಬಲೆಯ ಬಂದಿಯಾದೆ ನಾ
ನೆನಪಿನ ತುಂಬ ನಿನ್ನದೇ ಬಿಂಬ ನಿದೆರೆಯು ಕೂಡ ದೂರವಿದೆ
ಬಾಡುವ ಮುನ್ನ ಕೂಡುವೆ ನಿನ್ನಾ ವಿರಹದಿ ಕೂಡಾ ಸಾರವಿದೆ
ಓ.. ಪ್ರೀತಿ ತಂದ ಹೂವೆ ನೀ ಕೇಳೇ
ನನ್ನ ನೋವೇ ಈ ಮನಸ್ಯಾಕೋ ಮಲಗಲಿಲ್ಲವೇ
ಊರು ಮಲುಗುತಿದೆ ತಂಗಾಳಿ ಮಲುಗುತಿದೆ
ಪ್ರೀತಿ ತಂದ ಹೂವೆ ನೀ ಕೇಳೇ ನನ್ನ ನೋವೇ

ಪ್ರೀತಿಯ ಗೂಡಿನಲ್ಲಿ ಆಸೆಯ ನಂಜು ಚೆಲ್ಲಿ 
ಬಾಷೆ ಕೊಟ್ಟು ನನಗೆ ಚೂರಿ ಇಟ್ಟಳು 
ಬಾಷೆಯ ಸಂತೆಯಲಿ ಪ್ರೀತಿಯ ಕೊಂದೆ 
ಅಲ್ಲಿ ಬಾಳಿನಲ್ಲಿ ನನಗೆ ಕಹಿ ಬಟ್ಟಲು
ನಂಬಿಕೆ ಎಂಬ ಕೋಟೆಯ ತುಂಬ ಬದುಕುವ ನಿನ್ನ ನೆನಪಿನಲ್ಲಿ
ಅಂಜಿಕೆ ಎಂಬ ಕೂಪದ ಮುದಡಿದ ನಾ ಹೂವಿನಲಿ
ಓ.. ಪ್ರೀತಿ ತಂದ ಹೂವೆ ನೀ ಕೇಳೇ
ನನ್ನ ನೋವೇ ಈ ಮನಸ್ಯಾಕೋ ಮಲಗಲಿಲ್ಲವೇ
ಊರು ಮಲುಗುತಿದೆ ತಂಗಾಳಿ ಮಲುಗುತಿದೆ
ಪ್ರೀತಿ ತಂದ ಹೂವೆ ನೀ ಕೇಳೇ ನನ್ನ ನೋವೇ
-------------------------------------------------------------------------------------------------------------------------

ಗುಲಾಬಿ (೧೯೯೬) - ಪ್ರೀತಿ ಪ್ರೀತಿಯನು ಪ್ರಿಯ, ಕರುಣಾಮಯ ಪ್ರೇಮದಾನಂದ
ಸಂಗೀತ : ಇಳಯರಾಜ ಸಾಹಿತ್ಯ :ಎಸ.ನಾರಾಯಣ ಗಾಯನ : ಎಸ್ಪಿ.ಬಿ., ಇಳಯರಾಜ, ಚಿತ್ರಾ 

ಪ್ರೀತಿ ಪ್ರೀತಿಯನು ಪ್ರಿಯ, ಕರುಣಾಮಯ ಪ್ರೇಮದಾನಂದ
ಸಾಗರದಿ ಬರುವ ಪ್ರೇಮಿಗಳ ನಿತ್ಯ ಸತ್ಯ ನಿಜ ನಿರಂತರ
ಸುಖಮಯ ನೀವು ನಾನೆಂಬ ಭೇಧವಿರದ ಯುವ ಪ್ರೇಮಿಗಳೇ
ಪ್ರೇಮ ರಾಜ್ಯದಿ ಆಗಮಿಸಿ ಪ್ರೇಮ ವೇದ ದಿನ ಸ್ವೀಕರಿಸಿ
ಪ್ರೇಮ ಮೆರವಣಿಗೆಯಾ ನಡೆಸಿ
ಪ್ರೇಮ ವಿಜಯಕ್ಕೆ ಬೆಳಕರಿಸಿ... ಸ್ವಾಗತ... ನಿಮಗೆ ಸುಸ್ವಾಗತ...

ಕೇಳಿಸದೇ ಪ್ರೇಮ ವೇದ ಆ ಗಂಧರ್ವರ ವೇದ ಮಂತ್ರಗಳ ಪೂಜಿಸುವ ದೈವ ನೀನೋ
ಈ ಮಂಗಳದಾ   ಕೋಟಿ ಮಂತ್ರಗಳ ಮನಸು ಮನಸು
ಬೆರೆತಾ ಕ್ಷಣವೇ ನನಗೂ  ನಿನಗೂ ಮುಗಿದಾ ಮದುವೇ

ಕೇಳಿಸದೇ ಪ್ರೇಮ ವೇದ ಆ ಗಂಧರ್ವರ ವೇದ ಮಂತ್ರಗಳ ಪೂಜಿಸುವ ದೈವ ನೀನೋ

ಕಾವೇರಿ ನೀಡೋ ಆ ಕಲರವ ಮೇಳ ತಾಳ ಬಾನಾಡಿ ಕೇಳು ಚಿಲಿಪಿಲಿ ಶಾಸ್ತ್ರ 
ಘೋರ ರವಿಯಾ ಬೆಳಕಲ್ಲಿ ಆರತಿ ನೀ ನೀಡು 
ಭೂಮಿಯ ಮಡಿಲಲ್ಲಿ ಮೂಡಿದೆ ಈ ಹಾಡು 
ಸುಮವೇ ಬಾರಿ ಅಕ್ಷತೆಯಾ ತೂರಿ ನಡೆಯೇ ಈಗ ಸಪ್ತಪದಿ ಆಗಿ 
ನಮ್ಮ ಮದುವೆಗೆ ಶುಭ ಶಕುನವು ಆ ದೈವ ಬಲವು ಜೊತೆ ಇರೋ ಪ್ರೇಮಿಗೆ 
ಕೇಳಿಸದೇ ಪ್ರೇಮ ವೇದ ಆ ಗಂಧರ್ವರ ವೇದ ಮಂತ್ರಗಳ ಪೂಜಿಸುವ ದೈವ ನೀನೋ 

ಆ ದೇವಿ ಸಾಕ್ಷಿನಾ ನೀಡುವೆ ಕೇಳೇ ಜಾಣೆ ಬೇರಾರು ಕಾಣೆ ಈ ಬದುಕಲಿ ದೇವರಾಣೆ 
ಜೊತೆ ನೀ ಇರುವಾಗ ಪ್ರೇಮದ ಓಂಕಾರ ಹೃದಯ ಮಿಡಿವಾಗ ಪ್ರೀತಿಯ ಝೇಂಕಾರ 
ಬದುಕೇ ಈಗ ವರ್ಣಗಳ ಹಳೆ ಬರೆದೇ ಬಣ್ಣಗಳ ಬಲೆ 
ಯುಗ ಯುಗದಲ್ಲೂ ನೀನೇ ಬೆರೆಯುವ ಈ ಒಲವ ಹೂವ ಮುಡಿಸುವ ಪ್ರೇಮಿಗೆ 
ಕೇಳಿಸದೇ ಪ್ರೇಮ ವೇದ ಆ ಗಂಧರ್ವರ ವೇದ ಮಂತ್ರಗಳ ಪೂಜಿಸುವ ದೈವ ನೀನೋ 
ಈ ಮಂಗಳದಾ   ಕೋಟಿ ಮಂತ್ರಗಳ ಮನಸು ಮನಸು
ಬೆರೆತಾ ಕ್ಷಣವೇ ನನಗೂ  ನಿನಗೂ ಮುಗಿದಾ ಮದುವೇ
ಕೇಳಿಸದೇ ಪ್ರೇಮ ವೇದ ಆ ಗಂಧರ್ವರ ವೇದ ಮಂತ್ರಗಳ ಪೂಜಿಸುವ ದೈವ ನೀನೋ 
--------------------------------------------------------------------------------------------------------------------------

ಗುಲಾಬಿ (೧೯೯೬) - ಅರೆ ಚಂಚಾರೇ ಅರೆ ಚಂಚಾರೇ
ಸಂಗೀತ : ಇಳಯರಾಜ ಸಾಹಿತ್ಯ :ಎಸ.ನಾರಾಯಣ ಗಾಯನ :ಎಸ್ಪಿ.ಬಿ,  ಚಿತ್ರಾ 

ಅರೆ ಚಂಚಾರೇ ಅರೆ ಚಂಚಾರೇ
ಚಿಕ್ಕ ಚಕ್ಕಂದದಲಿ ಲವ್ ಜೋಡಿ ಅರೆ ಚಂಚಾರೇ ಅರೆ ಚಂಚಾರೇ
ಚಂದ ಚಂದದ ಚಂದನದಲಿ ಲವ್ ಮೋಡಿ ಥಳುಕು ಬಳುಕು ನಲುವಂತೆ
ಬಿರಿದ ನವಿಲ ಗರಿಯಂತೆ ರಸಗುಲ್ಲಾದಂಥ ಗಲ್ಲ ಸವಿದಾಗ ಬಾಯಿ ಬೆಲ್ಲ
ಅರೆ ಚಂಚಾರೇ ಚಿಕ್ಕ ಚಕ್ಕಂದ ಚಂಕದದಲಿ ಲವ್ ಮೋಡಿ
ಅರೆ ಚಂಚಾರೇ ಅರೆ ಚಂಚಾರೇ
ಚಂದ ಚಂದದ ಚಂದನದಲಿ ಲವ್ ಮೋಡಿ ಥಳುಕು ಈ ಬಳುಕೋ ಬೆಡಗು
ನನಗಂತ ಮೊಗ ಬೀರಿದ ನವಿಲ ಗರಿಯಂತೆ
ಮಾಲಗೋಬದಂತ ಗಲ್ಲ ಸವಿದಾಗ ಬಾಯಿ ಬೆಲ್ಲ
ಅರೆ ಚಂಚಾರೇ ಅರೆ ಚಂಚಾರೇ

ಮೂರೂ ಲೋಕ ಸುಂದರ ನೋಟದಲ್ಲಿ ಗಂಭೀರ, ಗಂಡೆದೆಯ ಸರದಾರ 
ದೇವಕಿಯ ಕಂದನೋ  ಇಂದಿರನ ತಮ್ಮನೋ, ವೀರರಲಿ ಬಲು ಶೂರ 
ಪಂಚರಂಗಿ ಪಾರ್ವತಿ ಕೇಳೇ ಒಂದು ಸಂಗತಿ ಹೂವಿಗಿಂತ ಅಂದ ನೀನೇ 
ಕಾಸಗಲ ಕಣ್ಣಲ್ಲಿ ಲೋಕವನ್ನೇ ತೋರುವ ನನ್ನ ಮುದ್ದು ನಳಿನಾಕ್ಷಿ 
ನನ್ನ ಸೆರೆಯಾದೆ ಹೆಣ್ಣಾ ಸಿರಿಯಾದೆ ನಿನ್ನ ಎದೆಯ ನದಿಯ ಅಲೆ ನಾನಾದೆ 
ಇದು ಹುಡುಗಾಟ ದಿನ ಇರುವಾಗ ಜೊತೆ ಜೊತೆಗೆ ಬೆರೆವ ಪಡೆವ ಕೊಡುವ ಕೇಳು 
ಅರೆ ಚಂಚಾರೇ ಅರೆ ಚಂಚಾರೇ 
ಅರೆ ಚಂಚಾರೇ ಅರೆ ಚಂಚಾರೇ
ಚಿಕ್ಕ ಚಕ್ಕಂದದಲಿ ಲವ್ ಜೋಡಿ ಅರೆ ಚಂಚಾರೇ ಅರೆ ಚಂಚಾರೇ
ಚಂದ ಚಂದದ ಚಂದನದಲಿ ಲವ್ ಮೋಡಿ ಥಳುಕು ಬಳುಕು ನಲುವಂತೆ
ಬಿರಿದ ನವಿಲ ಗರಿಯಂತೆ ರಸಗುಲ್ಲಾದಂಥ ಗಲ್ಲ ಸವಿದಾಗ ಬಾಯಿ ಬೆಲ್ಲ
ಅರೆ ಚಂಚಾರೇ ಚಿಕ್ಕ ಚಕ್ಕಂದ ಚಂಕದದಲಿ ಲವ್ ಮೋಡಿ  

ಮಲ್ಲಿಗೆಯ ಮತ್ತಿದೆ ಸಂಪಿಗೆಯ ಸೊಂಪಿದೆ ನನ್ನವಳ ಒಡಲಲ್ಲಿ 
ಮುತ್ತು ರತ್ನ ಚೆಲುವ ಮುತ್ತಿನಂಥ ಚೆಲುವ 
ಬಾರೋ ನನ್ನ ಜೊತೆಗಾರ ಮಲ್ಲಿಗೆಯ ಮತ್ತಿಗೂ 
ಸಂಪಿಗೆಯ ಸೊಂಪಿಗೂ ಕಂಪು ತಂದ ಸುಕಮಾರ 
ಹೆಣ್ಣ ಸೆರೆಯಾದೆ ಕಣ್ಣ ಸಿರಿಯಾದೆ ನನ್ನ ಎದೆಯ ನದಿಯ ಅಲೆ ನೀನಾದೆ 
ಸಿಹಿ ಓಡಲಾದೆ ಮಧು ಕಡಲಾದೆ ಮಧು ಬನದ ಮಡಿಲ ಸಿರಿ ನೀನಾದೆ 
ಇದು ಹುಡುಗಾಟ ದಿನ ಇರುವಾಟ ಜೊತೆ ಜೊತೆಗೆ ಬೆರೆವ ಪಡೆವ ಕೊಡುವ ಕೇಳು 
ಅರೆ ಚಂಚಾರೇ ಅರೆ ಚಂಚಾರೇ
ಚಿಕ್ಕ ಚಕ್ಕಂದದಲಿ ಲವ್ ಜೋಡಿ ಅರೆ ಚಂಚಾರೇ ಅರೆ ಚಂಚಾರೇ
ಚಂದ ಚಂದದ ಚಂದನದಲಿ ಲವ್ ಮೋಡಿ ಥಳುಕು ಬಳುಕು ನಲುವಂತೆ
ಬಿರಿದ ನವಿಲ ಗರಿಯಂತೆ ರಸಗುಲ್ಲಾದಂಥ ಗಲ್ಲ ಸವಿದಾಗ ಬಾಯಿ ಬೆಲ್ಲ
ಅರೆ ಚಂಚಾರೇ ಚಿಕ್ಕ ಚಕ್ಕಂದ ಚಂಕದದಲಿ ಲವ್ ಮೋಡಿ  
--------------------------------------------------------------------------------------------------------------------------

ಗುಲಾಬಿ (೧೯೯೬) - ಮಧುರ ಗೀತೆ ಹಾಡಿದೆ ಯಾರೋ 
ಸಂಗೀತ : ಇಳಯರಾಜ ಸಾಹಿತ್ಯ :ಎಸ.ನಾರಾಯಣ ಗಾಯನ :ನೆಪೋಲಿಯನ್, ಸೌಮ್ಯ 

ಮಧುರ ಗೀತೆ ಹಾಡಿದೆ ಯಾರೋ ಮನದ ವೀಣೆ ಮೀಟಿದೆ ಯಾರೋ
ಮಧುರ ಗೀತೆ ಹಾಡಿದೆ ಯಾರೋ ಮನದ ವೀಣೆ ಮೀಟಿದೆ ಯಾರೋ
ನಲ್ಲೆ ನಿನ್ನ ರಾಗ ಚೆನ್ನ ಎಂದು ನಾನು ಸಾರಿದೆ ಹೆಣ್ಣೇ ನಿನ್ನ ರೂಪವನ್ನೇ 
ಒಮ್ಮೆ ತೋರಬಾರದೇ ಕಲೆವಾಣಿಯೋ ನನ್ನ ರಾಣಿಯೋ ಯಾರು ನೀ... 
ಮಧುರ ಗೀತೆ ಹಾಡಿದೆ ಯಾರೋ ಮನದ ವೀಣೆ ಮೀಟಿದೆ ಯಾರೋ 

ಮೇಘದಲ್ಲಿ ರಂಗವಲ್ಲಿ ಬರೆವ ಚಕೋರ,
 ಗಾಳಿಯಲ್ಲಿ ಗಂಧ ಚೆಲ್ಲಿ ಕರೆವ ಸುಧೀರ 
ರಾಗ ರಾಗ ಗೀತೆಯಾ ನೀ ಹಾಡು 
ಮೋಹನ ಹಾಡುವಾಗ ನಲಿಯದೆ ಈ ರಮ್ಯ ಕಾನನ 
ಮಿಂಚು ಮಿಂಚು ಕಣ್ಣ ಸಂಚು ನನ್ನ ಅಂತರಂಗದಲ್ಲಿ
ಮಧುರ ಗೀತೆ ಹಾಡಿದೆ ಯಾರೋ ಮನದ ವೀಣೆ ಮೀಟಿದೆ ಯಾರೋ

ಸೂಜಿ ಮಲ್ಲೆ ನಲ್ಲೆ ನನ್ನ ಹೆಸರ ಬಲ್ಲೆಯಾ
ಒರೆಗಣ್ಣ ತುಂಟಿ ನಿನ್ನ ಗುರುತು ಹೇಳೆಯಾ
ಯಾವುದೋ ಈ ಬಂಧವು ನನ್ನನ್ನು ಕಾಡಿದೆ
ಕೇಳದಾ ನೂರಾಸೆಯು ನಿನ್ನಲ್ಲಿ ಮೂಡಿದೆ
ಮಿಂಚು ಮಿಂಚು ಕಣ್ಣ ಸಂಚು ನನ್ನ ಅಂತರಂಗದಲ್ಲಿ 
ಮಧುರ ಗೀತೆ ಹಾಡಿದೆ ಯಾರೋ ಮನದ ವೀಣೆ ಮೀಟಿದೆ ಯಾರೋ
ಮಧುರ ಗೀತೆ ಹಾಡಿದೆ ಯಾರೋ ಮನದ ವೀಣೆ ಮೀಟಿದೆ ಯಾರೋ
ನಲ್ಲೆ ನಿನ್ನ ರಾಗ ಚೆನ್ನ ಎಂದು ನಾನು ಸಾರಿದೆ ಹೆಣ್ಣೇ ನಿನ್ನ ರೂಪವನ್ನೇ 
ಒಮ್ಮೆ ತೋರಬಾರದೇ ಕಲೆವಾಣಿಯೋ ನನ್ನ ರಾಣಿಯೋ ಯಾರು ನೀ... 
ಮಧುರ ಗೀತೆ ಹಾಡಿದೆ ಯಾರೋ ಮನದ ವೀಣೆ ಮೀಟಿದೆ ಯಾರೋ 
--------------------------------------------------------------------------------------------------------------------------

ಗುಲಾಬಿ (೧೯೯೬) - ಬೀಸೋ ಮುಂಗಾರೇ ಕೇಳು ಕೇಳು
ಸಂಗೀತ : ಇಳಯರಾಜ ಸಾಹಿತ್ಯ : ಎಸ.ನಾರಾಯಣ ಗಾಯನ :ಎಸ್ಪಿ.ಬಿ 

ಬೀಸೋ ಮುಂಗಾರೇ ಕೇಳು ಕೇಳು
ಸಂದೇಶ ಹೋಗಿ ಹೇಳು ಹೇಳು
ಪ್ರೇಮಚಂದಿರ ವರ್ಷದಲ್ಲಿ ಕಾಯುತ್ತ ನಿಂತನೆಂದು
ಹೇಳು ಕಾಣದೆ ಅವಳ ನೊಂದೆ ನಾನಿಲ್ಲಿ
ಬೆಂಕಿ ಬಿರುಗಾಳಿ ನನ್ನ ಒಡಲಲ್ಲಿ ಬೆಂದು ನೀರಾದೆ ನೀ ಹೇಳು ಓಓಓಓಓ...
ಬೀಸೋ ಮುಂಗಾರೇ ಕೇಳು ಕೇಳು
ಸಂದೇಶ ಹೋಗಿ ಹೇಳು ಹೇಳು

ಮುತ್ತೇ ನೀರು ಚಿಪ್ಪಲಿ ಅಡಗಿ ಹೇಳ ನನ್ನೇಕೆ ಕೊಲುವೆ ಹೆಣ್ಣೇ
ನಿನ್ನ ಒಳಗಣ್ಣ ತೆರೆದು ಬಾರೆ ಮಿಂಚಂತೆ ಹೊರಗೆ
ಮರೆಯಾಗಿ ಇರಲು ನೀನು ಹೊರೆಯಾಯ್ತು ಒಲವೇ
 ಜೇನು ಮಳೆಯಾದ ನೆಲವು ಕೂಡ ಸುಡು ಬೆಂಕಿಯಾಯ್ತು ಈಗ
ಪ್ರೇಮಕ್ಕೆ ಬೇಲಿಯನ್ನ ಹಾಕಿದೋರ ಯಾರೇ ನನ್ನ ಹೂವೆ
ಹೇಳು ಪ್ರೀತಿಯ ಬೇಲಿಯನ್ನ ದಾಟುವ ಶಕ್ತಿ ಉಂಟು
ಕೇಳಯ್ಯ ನೀನು ಬಾಬಾರೆ ಹತ್ತಿರ.. ಓಓಓಓಓ
ಬೀಸೋ ಮುಂಗಾರೇ ಕೇಳು ಕೇಳು
ಸಂದೇಶ ಹೋಗಿ ಹೇಳು ಹೇಳು

ತಾರೆ ಇಲ್ಲದ ಬಾನಿನಲ್ಲಿ ಚಂದ್ರ ಕಂಗಾಲು ಈಗ 
ನೀನೇ ಇಲ್ಲದಿ ಬಾಳಿನಲ್ಲಿ ಬೀಡು ಬೆಂಗಾಡು ಈಗ 
ಸಿಹಿಯಾದ ಒಲವ ಜೇನು ಕಹಿಯಾಯ್ತು ಬರದೆ ನೀನು 
ಸೆರೆಯಾದ ಗೂಡಿನೊಳಗೆ ಶಿಲೆಯಾದ ಏಕೆ ಚೆಲುವೆ 
ಬೀಸೋ ಗಾಳಿಯನ್ನ ಬಂದಿಸೋರ್ ಯಾರೇ ನನ್ನ ಪ್ರೀತಿಯ 
ಹೂವ ಉಕ್ಕುವ ಗಂಗೆಯನ್ನು ನಿಲ್ಲಿಸೋ ಶಕ್ತಿ ಇಲ್ಲ 
ಕೇಳೇ ನೀರೇ ಪ್ರೀತಿಯ ಹೂವ ಉಕ್ಕುವ ಗಂಗೆಯನ್ನು 
ನಿಲ್ಲಿಸೋ ಶಕ್ತಿ ಇಲ್ಲ ಕೇಳೇ ನೀರೇ ಪ್ರೀತಿಯ ಹಾಗೇನ 
ಬೀಸೋ ಮುಂಗಾರೇ ಕೇಳು ಕೇಳು
ಸಂದೇಶ ಹೋಗಿ ಹೇಳು ಹೇಳು 
ಪ್ರೇಮಚಂದಿರ ವರ್ಷದಲ್ಲಿ ಕಾಯುತ್ತ ನಿಂತನೆಂದು
ಹೇಳು ಕಾಣದೆ ಅವಳ ನೊಂದೆ ನಾನಿಲ್ಲಿ
ಬೆಂಕಿ ಬಿರುಗಾಳಿ ನನ್ನ ಒಡಲಲ್ಲಿ ಬೆಂದು ನೀರಾದೆ ನೀ ಹೇಳು ಓಓಓಓಓ...
ಬೀಸೋ ಮುಂಗಾರೇ ಕೇಳು ಕೇಳು
ಸಂದೇಶ ಹೋಗಿ ಹೇಳು ಹೇಳು 
----------------------------------------------------------------------------------------------------------------------

No comments:

Post a Comment