300. ಓಹಿಲೇಶ್ವರ (1956)

ಓಹಿಲೇಶ್ವರ ಚಿತ್ರದ ಹಾಡುಗಳು 
  1. ಈ ದೇಹದಿಂದ ದೂರನಾದೆ ಆತ್ಮನೇ 
  2. ಓಂ..ನಮಃ ಶಿವಾಯಃ
  3. ನಾ ಪಾಪವಿದೆನಾ ಮಾಡಿದೆನೋ 
  4. ಯಾರಿಗೆ ಯಾರಿಹರೋ 
  5. ಪಾವನ ಪರಶಿವ... 
  6. ನೀ ಎಮ್ಮ ಜೀವ... 
  7. ಬನ್ನಿರಿ ಬಾಲೆಯರೇ.... 
  8. ನಿಧಿಯೊಂದ ನಿನಗಾಗಿ 
  9. ಹರಿಯಲಿ ವಸಂತ ಧಾರೆ 
  10. ಓ..ಸುರಸುಂದರಿ 
  11. ಓ..ಜನ್ಮ ದಾತಾ  
  12. ಪರಮ ಪಾತಕಿ ನಾನಾದೇ 
  13. ವಚನಗಳು 
ಓಹಿಲೇಶ್ವರ (1956) - ಈ ದೇಹದಿಂದ ದೂರನಾದೆ ಎಕೆ ಆತ್ಮನೆ
ಸಂಗೀತ: ಜಿ.ಕೆ.ವೆಂಕಟೇಶ್ ಸಾಹಿತ್ಯ : ವಿಜಯನಾರಸಿಂಹ  ಗಾಯನ: ಘಂಟಸಾಲ

ಹೇ ಶಂಕರಾ.....ದಯಾನಿಧೇ.......
ಈ ದೇಹದಿಂದ ದೂರನಾದೆ ಏಕೆ ಆತ್ಮನೆ ? ಈ ಸಾವು ನ್ಯಾಯವೆ?, ಈ ಸಾವು ನ್ಯಾಯವೆ?
ಆಧಾರ ನೀನೆಂದು ಈ ಲೋಕ ನಂಬಿದೆ
ಈ ದೇಹದಿಂದ ದೂರನಾದೆ ಏಕೆ ಆತ್ಮನೆ ? ಈ ಸಾವು ನ್ಯಾಯವೆ?

ತಾಯಿ ಹಾಲು ವಿಷವದಾಗೆ ನ್ಯಾಯವೆಲ್ಲಿದೆ?
ಕಾಮದೇವ ಸಾವು ತರಲು ಎಲ್ಲಿ ರಕ್ಷಣೆ?
ಯಾವ ಪಾಪಕೆ ಸಾವು ಕಾಡಿತೊ?
ಪರಮಾತ್ಮ ನ್ಯಾಯ ಬೇಡವೆ?, ಈ ಸಾವು ನ್ಯಾಯವೆ?, ಈ ಸಾವು ನ್ಯಾಯವೆ?
ಆಧಾರ ನೀನೆಂದು ಈ ಲೋಕ ನಂಬಿದೆ
ಈ ದೇಹದಿಂದ ದೂರನಾದೆ ಏಕೆ ಆತ್ಮನೆ?
ಸೇವೆಗಾಗಿ ಕಾದ ಹೂವು ಕಸವ ಸೇರಿತೆ
ಬಾಳಿನಾಸೆ ಚಿಗುರಿನಲ್ಲೆ ಬಾಡಿ ಹೋಯಿತೆ
ಏನು ತಪ್ಪಿದೆ ಹೇಳಬಾರದೆ? ಸರಿಯೇನು ಮೌನಾವೇಕಿಹೆ?
ಈ ಸಾವು ನ್ಯಾಯವೆ? ಈ ಸಾವು ನ್ಯಾಯವೆ?
ಆಧಾರ ನೀನೆಂದು ಈ ಲೋಕ ನಂಬಿದೆ
ಈ ದೇಹದಿಂದ ದೂರನಾದೆ ಏಕೆ ಆತ್ಮನೆ?
ಈ ಸಾವು ನ್ಯಾಯವೆ?

ಶಿವನಾಮ ಮಂತ್ರವೊಂದೆ ಅಮರ ಜೀವಿಗೆ
ಪರಮೇಶ ಪ್ರಾಣ ಜ್ಯೊತಿ ಮರಳಿ ತಾರೆಯ?
ಮರಳಿ ತಾರೆಯ?, ಮರಳಿ ತಾರೆಯ?
ಪರಮೇಶ ಪ್ರಾಣ ಜ್ಯೊತಿ ಮರಳಿ ತಾರೆಯ?
ಮರಳಿ ತಾರೆಯ?
ಈ ದೇಹದಿಂದ ದೂರನಾದೆ ಎಕೆ ಆತ್ಮನೆ ?
ಈ ಸಾವು ನ್ಯಾಯವೆ?
------------------------------------------------------------------------------------------------------------------------

ಓಹಿಲೇಶ್ವರ (1956) - ಓಂ ನಮಃ ಶಿವಾಯ 
ಸಂಗೀತ: ಜಿ. ಕೆ. ವೆಂಕಟೇಶ್ ರಚನೆ: ಕೆ. ಆರ್. ಸೀತಾರಾಮ ಶಾಸ್ತ್ರಿ  ಗಾಯಕ: ಡಾ. ರಾಜಕುಮಾರ್

ಓಂ ನಮಃ ಶಿವಾಯ    ಓಂ ನಮಃ ಶಿವಾಯ    ಓಂ ನಮಃ ಶಿವಾಯ
ಶರಣೊ ಶಂಭೋ ಶಿವ ಶರಣೊ ಶಂಭೋ   ಶರಣೊ ಶಂಭೋ ಶಿವ ಶರಣೊ ಶಂಭೋ
ಎನ್ನ ಗುರು ತೋರಿದ ಸೋಮೇಶ ಪ್ರಭು     ಎನ್ನ ಗುರು ತೋರಿದ ಸೋಮೇಶ ಪ್ರಭು
ಶರಣೊ ಶಂಭೋ ಶಿವ ಶರಣೊ ಶಂಭೋ

 ದಿನ ನೂರು ನೋವು, ಕೊನೆಗೊಂದು ಸಾವು
ದೇಹಕೆ ಬರಲೇಕೆ ಪರಮೇಶ, ಈ ಚಿರನಾಶ 
ದಿನ ನೂರು ನೋವು, ಕೊನೆಗೊಂದು ಸಾವು
ದೇಹಕೆ ಬರಲೇಕೆ ಪರಮೇಶ, ಈ ಚಿರನಾಶ
ಸುರುಚಿರ ಮೋಕ್ಷ ಒಂದೇ ಅವಿನಾಶ ಅದನೇ ಪಡೆದೇನೆ ಪ್ರಭು
ಶರಣೊ ಶಂಭೋ ಶಿವ ಶರಣೊ ಶಂಭೋ

ಆದಿಮೂಲ ಕರುಣಾಲವಾಲ ಪರಿಪೂರ್ಣ ಶಾಂತಿ ಗುಣ ಸುಶೀಲ
ನೀಲಕಂಠ ನಿಜಮಾಂತಸಾರ ಪರಪಾಶ ಕೇಶಷಯ ನಿವಾರ
ಗುರು ತೋರಿದ ಸೋಮೇಶ ಪ್ರಭು
ಶರಣೊ ಶಂಭೋ ಶಿವ ಶರಣೊ ಶಂಭೋ

ಅತಿ ಸೌಖ್ಯದಿಂದ ಮತಿ ಹೇಡಿಯಾದೆ
ಯಾಡಿಗೆ ಬರುವಲ್ಲಿ ತಡವಾದೆ ನಾ ಕಡೆಯಾದೆ 
ಅತಿ ಸೌಖ್ಯದಿಂದ ಮತಿ ಹೇಡಿಯಾದೆ
ಯಾಡಿಗೆ ಬರುವಲ್ಲಿ ತಡವಾದೆ ನಾ ಕಡೆಯಾದೆ
ಶರಣರು ನಿಂತ ನಿನ್ನಾ ಹೊಸಿಲಲ್ಲಿ ಕಾಸವಾಗಿಸಿ ಕಾಯೊ ಪ್ರಭು
ಗುರು ತೋರಿದ ಸೋಮೇಶ ಪ್ರಭು
ಶರಣೊ ಶಂಭೋ ಶಿವ ಶರಣೊ ಶಂಭೋ
ಶರಣೊ ಶಂಭೋ ಶಿವ ಶರಣೊ ಶಂಭೋ 
ಓಂ ನಮಃ ಶಿವಾಯ... ಓಂ ನಮಃ ಶಿವಾಯ....
ಓಂ ನಮಃ ಶಿವಾಯ... ಓಂ ನಮಃ ಶಿವಾಯ....
-------------------------------------------------------------------------------------------------------------------------

ಓಹಿಲೇಶ್ವರ (1956)  - ನಾ ಪಾಪವದೇನಾ ಮಾಡಿದೆನೋ
ಸಂಗೀತ: ಜಿ.ಕೆ.ವೆಂಕಟೇಶ್ ಸಾಹಿತ್ಯ :ವಿಜಯನಾರಸಿಂಹ ಗಾಯನ: ಪಿ.ಬಿ.ಶ್ರೀನಿವಾಸ 

ನಾ ಪಾಪವದೇನಾ ಮಾಡಿದೆನೋ
ನಿನ್ನ ಪಾದಕೆ ದೂರ ಆಗಿಹನೋ
ಮೋಕ್ಷದ ಮೂಲ ನೀನೆಂದೇ
ನಾ ಧಾವಿಸಿ ಬಂದೇ... ತಂದೇ
ತೀರದ ತಾಪ ಏರುತ್ತಿದೇ ನಿನ್ನ ಕಾಣದೆ ಜೀವ ಬೇಯುತಿದೆ
ನಿನ್ನಡಿಯೊಂದು ತೃಣವಾಳದರು ನಾ
ಎನ್ನನ್ನು ಯಾರೋ ನೂಕುವರು
ಹೊನ್ನಿನ ಬಾಳು ಹೂ ಪತ್ರೆಯದು
ನಿನ್ನಯ ಪಾದ ಸೇರುವುದೋ
ಪಾಪಿಯ ಜನ್ಮ ಏತಕೋ ಕಾಣೆ
ಭೂಮಿಗೆ ಭಾರ ಆಗಿಹನೇ
ಜಯ ಜಯ ಮಂಗಳಮಯ ಮಹಿಮೋದಯ ಸಾಂಬಸದಾಶಿವನೇ
ಜಯ ನಿತ್ಯ ನಿರಾಕುಳ ನಿರ್ಮಲ ಜಯ ಜಯ ಶಂಕರನೇ ಸಾಂಬ ಸದಾಶಿವ
--------------------------------------------------------------------------------------------------------------------------

ಓಹಿಲೇಶ್ವರ (1956) - ಯಾರಿಗೆ ಯಾರಿಹರೋ ...
ಸಂಗೀತ: ಜಿ.ಕೆ.ವೆಂಕಟೇಶ್ ಸಾಹಿತ್ಯ : ಕುರಾಸೀ  ಗಾಯನ: ರಘುನಾಥ ಪಾಣಿಗ್ರಹಿ 

ಯಾರಿಗೆ ಯಾರಿಹರೋ ... ಬಾಳಿನ ಜಾತ್ರೆಯು ಸೇರಿಹುದು
ಜಾತ್ರೆಯು ಸೇರಿಹುದು
ಯಾರಿಗೆ ಯಾರಿಹರೋ ಬಾಳಿನ ಜಾತ್ರೆಯು ಸೇರಿಹುದು
ಯಾರಿಗೆ ಯಾರಿಹರೋ ...

ಜಾತ್ರೆಯಲ್ಲಿರುವ ನೆರೆಹೊರೆಯಲ್ಲ ನೆಂಟರು ನಿನಗೆ ಎಲ್ಲಿಯವರೆಗೆ
ಆಸೆಯ ಹೂಮಾಲೇ ಮೋಹದ ಲೀಲೆ ಮೋಸದ ಬಲೆಗೆ ಆಮೇಲೆ
ಯಾರಿಗೆ ಯಾರಿಹರೋ ಬಾಳಿನ ಜಾತ್ರೆಯು ಸೇರಿಹುದು
ಯಾರಿಗೆ ಯಾರಿಹರೋ ...
--------------------------------------------------------------------------------------------------------------------------

ಓಹಿಲೇಶ್ವರ (1956) - ಪಾವನ ಪರಶಿವ ಪಾರ್ವತಿ ರಮಣ
ಸಂಗೀತ: ಜಿ.ಕೆ.ವೆಂಕಟೇಶ್ ಸಾಹಿತ್ಯ : ಕುರಾಸೀ  ಗಾಯನ: ಸಿ.ಎಸ್.ಸರೋಜಿನಿ ಮತ್ತು ಪಿ.ಲೀಲಾ 

ಪಾವನ ಪರಶಿವ ಪಾರ್ವತಿ ರಮಣ ಪಾಲಿಸು ನಂಬಿದೆ ನಿನ್ನಯ ಚರಣ
ಕಣ್ಣು ಕಾಣದೆ ಮಾಡಿದ ತಪ್ಪನು ಮನ್ನಿಸಿ ಕಾಯೋ ಮಹಾದೇವಾ
ದೀನರ ಪಾಲಿನ ಪರದೈವಾ ಮನ್ನಿಸಿ ಕಾಯೋ ಮಹಾದೇವಾ
ಪಾವನ ಪರಶಿವ ಪಾರ್ವತಿ ರಮಣ ಪಾಲಿಸು ನಂಬಿದೆ ನಿನ್ನಯ ಚರಣ

ಏನು ಬೇಡಲು ತೋರದು ಎನಗೆ ನೀನಿರು ಜತೆಗೆ ಶಂಕರನೇ 
ಕಾಣೆನು ದೇವನೇ ದಾರಿಯನೇ ನೀನಿರು ಜತೆಗೆ ಶಂಕರನೇ 
ಪಾವನ ಪರಶಿವ ಪಾರ್ವತಿ ರಮಣ ಪಾಲಿಸು ನಂಬಿದೆ ನಿನ್ನಯ ಚರಣ 

ಕಣ್ಣು ಕಾಣದೆ ಮಾಡಿದ ತಪ್ಪನು ಮನ್ನಿಸಿ ಕಾಯೋ ಮಹಾದೇವ 
ಪಾವನ ಪರಶಿವ ಪಾರ್ವತಿ ರಮಣ ಪಾಲಿಸು ನಂಬಿದೆ ನಿನ್ನಯ ಚರಣ

ಕಾಡು ಹೂವಲಿ ಪರಿಮಳ ಬೆರಸಿ ಬಾಡುವ ಮೊದಲೇ ಮುಡಿಯೊಳಗಿರಿಸಿ 
ಮೂರೂ ಗಳಿಗೆಯ ಬಾಳನು ಮರೆಸಿ ಪಾರುಗಾಣಿಸೋ ಕರುಣೆಯಿರಿಸಿ 
ಪಾವನ ಪರಶಿವ ಪಾರ್ವತಿ ರಮಣ ಪಾಲಿಸು ನಂಬಿದೆ ನಿನ್ನಯ ಚರಣ
ಕಣ್ಣು ಕಾಣದೆ ಮಾಡಿದ ತಪ್ಪನು ಮನ್ನಿಸಿ ಕಾಯೋ ಮಹಾದೇವಾ
ದೀನರ ಪಾಲಿನ ಪರದೈವಾ ಮನ್ನಿಸಿ ಕಾಯೋ ಮಹಾದೇವಾ
ಪಾವನ ಪರಶಿವ ಪಾರ್ವತಿ ರಮಣ ಪಾಲಿಸು ನಂಬಿದೆ ನಿನ್ನಯ ಚರಣ
------------------------------------------------------------------------------------------------------------------------

ಓಹಿಲೇಶ್ವರ (1956) - ನೀ ಯೆಮ್ಮ ಜೀವಾ ಶರಣು ಮಹಾದೇವಾ
ಸಂಗೀತ: ಜಿ.ಕೆ.ವೆಂಕಟೇಶ್ ಸಾಹಿತ್ಯ : ಕುರಾಸೀ  ಗಾಯನ: ಎ.ಪಿ.ಕೋಮಲ, ಸತ್ಯಮತಿ 

ನೀ ಯೆಮ್ಮ ಜೀವ ಶರಣು ಮಹಾದೇವ
ಶಂಕರನೇ ಕಾಯುವುದೈ ಕರುಣಾತರಂಗ
ನೀ ಯೆಮ್ಮ ಜೀವ ಶರಣು ಮಹಾದೇವ
 
ಅತ್ತಾಗ ಕಣ್ಣೊರಸಿ ತುತ್ತಿಡುವೆಯಂತೆ
ಕತ್ತಲಲಿ ಹೆದರಿದರೆ ನೀ ಕಾಯುವಂತೆ
ಹತ್ತಿರವೇ ಬಾ ಗೌರಿ ಶಿವನೊಡನೆ ತಾಯೇ 
ಮುತ್ತಂತೆ ನಮ್ಮಮ್ಮ ಚೆನ್ನಾಗಿ ಕಾಯೇ
ಶಂಕರನೇ ಕಾಯುವುದೈ ಕರುಣಾತರಂಗ
ನೀ ಯೆಮ್ಮ ಜೀವ ಶರಣು ಮಹಾದೇವ

ನೋಡಿದೆನಲ್ಲ ಲೋಕದ ನೋವ 
ಬೇಡುವ ಕೈಯ್ಯ ಮುಪ್ಪಿನ ಮೈಯ್ಯ
ಕೋಪವಿದೇಕೆ ದೀನರ ಮೇಲೆ 
ಸರಿಯೇನೋ ಈ ರೀತಿ ನಿನಗೆ ಮಹೇಶಾ 
ಶಂಕರನೇ ಕಾಯುವುದೈ ಕರುಣಾತರಂಗ 
ನೀ ಯೆಮ್ಮ ಜೀವ ಶರಣು ಮಹಾದೇವ

ತಂದೆಯು ನೀನೇ ತಾಯಿಯು ನೀನೇ 
ವಂದಿಸಿ ನಲಿವ ಬಾಲರ ನೋಡೋ 
ನಂದದ ಜ್ಯೋತಿಯ ಬೆಳಸಿಸು ದೇವಾ 
ನಂದದ ಜ್ಯೋತಿಯ ಬೆಳಸಿಸು ದೇವಾ 
ನೀ ಯೆಮ್ಮ ಜೀವಾ ಶರಣು ಮಹಾದೇವಾ
ಶಂಕರನೇ ಕಾಯುವುದೈ ಕರುಣಾತರಂಗ 
ನೀ ಯೆಮ್ಮ ಜೀವ ಶರಣು ಮಹಾದೇವ
--------------------------------------------------------------------------------------------------------------------------

ಓಹಿಲೇಶ್ವರ (1956) - ಬನ್ನಿ ಬಾಲೆಯರೇ 
ಸಂಗೀತ: ಜಿ.ಕೆ.ವೆಂಕಟೇಶ್ ಸಾಹಿತ್ಯ : ಕುರಾಸೀ  ಗಾಯನ: ಎ.ಪಿ.ಕೋಮಲ, ಸತ್ಯವತಿ, ಸರೋಜಿನಿ, ಕೋರಸ್   

ಬನ್ನೀ ಬಾಲೆಯರೇ ಹೊನ್ನಿನಾರತಿಯ ತನ್ನೀ ನಮ್ಮ ಯುವರಾಜನಿಗೇ..   
ಕೋಟಿ ಸೂರ್ಯ ಸಮ ತೇಜನಿಗೇ ಕೋಮಲಾಂಗ ಸುಮಬಾಲನಿಗೇ .. ಹೇಯ್ 
ಕೋಮಲಾಂಗ ಸುಮಬಾಲನಿಗೇ ..
ಬನ್ನೀ ಬಾಲೆಯರೇ ಹೊನ್ನಿನಾರತಿಯ ತನ್ನೀ ನಮ್ಮ ಯುವರಾಜನಿಗೇ..   
ಕೋಟಿ ಸೂರ್ಯ ಸಮ ತೇಜನಿಗೇ ಕೋಮಲಾಂಗ ಸುಮಬಾಲನಿಗೇ .. ಹೇಯ್ 
ಕೋಮಲಾಂಗ ಸುಮಬಾಲನಿಗೇ ..

ಯುವರಾಜನ ಶುಭಯೋಗ ಭುವಿಗಿಯಲಿ ಸಂಪದವೀಗ 
ಆನಂದದ ಭಾವಾವೇಗ ಮೊರೆಯಲಿ ಹರುಷದ ರಾಗ 
ಅನುರಾಗ ಅದೇ ಯೋಗ ಯಾಗ ಭೋಗ ಸರ್ವಧರ್ಮಗಳ ಸನ್ಮಾರ್ಗ 
ಬನ್ನೀ ಬಾಲೆಯರೇ ಹೊನ್ನಿನಾರತಿಯ ತನ್ನೀ ನಮ್ಮ ಯುವರಾಜನಿಗೇ..   
ಕೋಟಿ ಸೂರ್ಯ ಸಮ ತೇಜನಿಗೇ ಕೋಮಲಾಂಗ ಸುಮಬಾಲನಿಗೇ .. ಹೇಯ್ 
ಕೋಮಲಾಂಗ ಸುಮಬಾಲನಿಗೇ ..

ಊರು ಹೆಂಗಳ ದೃಷ್ಟಿಯ ನೂರಾರು ಕಂಗಳ ದೃಷ್ಟಿಯ 
ತೆಗೆದು ನೀವಾಳಿಸಲು ಬನ್ನಿರೇ ಅರಸು ಕುವರನಿಗಾರತಿ 
ಈ ಸೊಗಸು ಮೂರುತಿಗಾರುತಿ 
ಬನ್ನೀ ಬಾಲೆಯರೇ ಹೊನ್ನಿನಾರತಿಯ ತನ್ನೀ ನಮ್ಮ ಯುವರಾಜನಿಗೇ..   
ಕೋಟಿ ಸೂರ್ಯ ಸಮ ತೇಜನಿಗೇ ಕೋಮಲಾಂಗ ಸುಮಬಾಲನಿಗೇ .. ಹೇಯ್ 
ಕೋಮಲಾಂಗ ಸುಮಬಾಲನಿಗೇ ..

ಚೆಲುವರಾಯಗೆ ಒಲವಿನಾರತಿ ಬೆಳಗಿ ನಲವ ತನ್ನಿರೇ 
ನಿರುತ ನಿರ್ಮಲ ಹರುಷ ಜೀವನ ಹರಸಿ ಮೆರವ ಬನ್ನಿರೇ 
ಬನ್ನೀ ಬಾಲೆಯರೇ ಹೊನ್ನಿನಾರತಿಯ ತನ್ನೀ ನಮ್ಮ ಯುವರಾಜನಿಗೇ..   
ಕೋಟಿ ಸೂರ್ಯ ಸಮ ತೇಜನಿಗೇ ಕೋಮಲಾಂಗ ಸುಮಬಾಲನಿಗೇ .. ಹೇಯ್ 
ಕೋಮಲಾಂಗ ಸುಮಬಾಲನಿಗೇ ..
-------------------------------------------------------------------------------------------------------------------------

ಓಹಿಲೇಶ್ವರ (1956) - ನಿಧಿಯೊಂದ ನಿನಗಾಗಿ 
ಸಂಗೀತ: ಜಿ.ಕೆ.ವೆಂಕಟೇಶ್ ಸಾಹಿತ್ಯ : ಕುರಾಸೀ ಗಾಯನ: ಪಿ.ಸುಶೀಲಾ 

ನಿಧಿಯೊಂದ ನಿನಗಾಗಿ ವಿಧಿರಾಯ ಕರೆತಂದ 
ತುಂಬಾ ದೂರದಿಂದ ಬಂಗಾರ ನಿನ್ನಂದ ಬಿನ್ನಾಣ ನೋಡಿ ಮಾಡಿಸಿದ 
ನಿನ್ನ ಜೋಡಿ ಅವ ಸಿಂಗಾರ 
ನಿಧಿಯೊಂದ ನಿನಗಾಗಿ ವಿಧಿರಾಯ ಕರೆತಂದ 

ಮನವನ್ನೇ ಸೂರೆಗೈವ ಮಾಯಾ ಮಂತ್ರಗಾರ ಈ ನರ ನವ ಕಿನ್ನರ 
ವನ ಸುತ್ತಿ ವಿಹರಿಸುತ್ತ ಚಿತ್ತ ಕೆಡುವ ಮತ್ತು ಮಂತ್ರವನೂದಿದ ಈ ಚೋರ 
ಬಂದು ನೀನಲ್ಲಿ ಬೀರಿದೆ ವಯ್ಯಾರ  ವಾರೆ ನೋಟ ನೂರು ಬಗೆ ಕಣ್ಣಾರ 
ಮೂರೂ ಲೋಕ ನಾಚಿಸುವ ಸಿಂಗಾರ 
ನಿಧಿಯೊಂದ ನಿನಗಾಗಿ ವಿಧಿರಾಯ ಕರೆತಂದ 

ಕಣ್ಣ ಕಿರಣದಲ್ಲೇ ಕಳ್ಳ ಗೆಳೆತನ ತೋರಿದ ಮೋಹ ತೂರಿದ  
ಮೋಹ ಮಲ್ಲೆ ಮಲರುವಲ್ಲೇ ಸ್ನೇಹ ಮಧುವ ಹೊರ ನೂಕುವ ಕಾಲ ಓಡಿ ಬಂದಿದೆ 
ನಿನ್ನ ಸೌಭಾಗ್ಯ ಮಾಲೆ ಕಾದು ನಿಂತಿದೆ ನೂರು ಹಾಸಭಾಸಗಳ ತಂದಿದೆ 
ನಿನ್ನ ಹಾವಭಾವದಲಿ ಒಂದಿದೆ 
ನಿಧಿಯೊಂದ ನಿನಗಾಗಿ ವಿಧಿರಾಯ ಕರೆತಂದ 
ತುಂಬಾ ದೂರದಿಂದ ಬಂಗಾರ ನಿನ್ನಂದ ಬಿನ್ನಾಣ ನೋಡಿ ಮಾಡಿಸಿದ 
ನಿನ್ನ ಜೋಡಿ ಅವ ಸಿಂಗಾರ 
ನಿಧಿಯೊಂದ ನಿನಗಾಗಿ ವಿಧಿರಾಯ ಕರೆತಂದ 
------------------------------------------------------------------------------------------------------------------------

ಓಹಿಲೇಶ್ವರ (1956) - ಹರಿಯಲಿ ವಸಂತಧಾರೆ 
ಸಂಗೀತ: ಜಿ.ಕೆ.ವೆಂಕಟೇಶ್ ಸಾಹಿತ್ಯ : ಕುರಾಸೀ ಗಾಯನ: ಜಮುನಾರಾಣಿ, ಕೋರಸ್ 

ಹೊಳೆ ಹರಿಯಲಿ ವಸಂತ ಧಾರೆ ಕಿರುನಗೆಯ ಬೀರುತ ಬಾರೆ 
ರವಿ ಬಂದ ನೋಡೇ ಚತುರೆ ಬಿಗುಮಾನ ಸಾಕೆ ತಾವರೇ .. 
ಹೊಳೆ ಹರಿಯಲಿ ವಸಂತ ಧಾರೆ ಕಿರುನಗೆಯ ಬೀರುತ ಬಾರೆ 

ಹಗಲು ಬರುವ ಮೊದಲು ಏಕೆ ಮುಗಿಲು ಕೆಂಪಿನ ಸಾಲು 
ರವಿರಾಯನ ರಥದಲ್ಲೂ ಹೊರ ಚೆಲ್ಲುವ ಕೆಂಧೂಳು 
ಸುಳ್ಳು ಸುದ್ದಿ ಪೊಳ್ಳು ಕಥೆ ಬೇಡ ಜನ ನಂಬದಂತ ಮಾತ ಹೇಳಬೇಡ 
ಬಲು ಜಾಣೆ ನೀನೇ ಪೇಳೆ ಸುರಲೋಕ ಕೆನ್ನೀರೇ 
ಶುಭ ರಾಣಿ ತಂದು ಚೆಲ್ಲಿರೆ ಕೆಂಪಾದದು ಸೂರ್ಯನ ಮೊರೆ 
ಹೊಳೆ ಹರಿಯಲಿ ವಸಂತ ಧಾರೆ ಕಿರುನಗೆಯ ಬೀರುತ ಬಾರೆ 

ಹರೆಯ ಬಂದ ಸಮಯ ಇವ ಗೆಳೆಯ ಕೋಮಲರಾಯ 
ಇವನಾರೇ ಈವಯ್ಯ ಇದು ಯಾರೋ ಪರಕೀಯ 
ಅಲ್ಲಿ ಇಲ್ಲಿ ಸುತ್ತಿ ಬಂದ ಧೀರ ಇವಳಂತರಂಗ ಸೂರೆಗೈದು ಪೂರ 
ಭಲೇ ಶೂರ ಭಾರಿ ಚೋರ ಪಿಚಕಾರಿ ತುಂಬಿ ಚೆಲ್ಲಿರೇ ಕೆಂಪಾಗಲಿ ಈತನ ಮೊರೆ 
ಹೊಳೆ ಹರಿಯಲಿ ವಸಂತ ಧಾರೆ ಕಿರುನಗೆಯ ಬೀರುತ ಬಾರೆ 
ರವಿ ಬಂದ ನೋಡೇ ಚತುರೆ ಬಿಗುಮಾನ ಸಾಕೆ ತಾವರೇ .. 
ಹೊಳೆ ಹರಿಯಲಿ ವಸಂತ ಧಾರೆ ಕಿರುನಗೆಯ ಬೀರುತ ಬಾರೆ 
-----------------------------------------------------------------------------------------------------------------------

ಓಹಿಲೇಶ್ವರ (1956) - ಓ ಸುರ ಸುಂದರಿ 
ಸಂಗೀತ: ಜಿ.ಕೆ.ವೆಂಕಟೇಶ್ ಸಾಹಿತ್ಯ : ಕುರಾಸೀ ಗಾಯನ: ಜಮುನಾರಾಣಿ, ಕೋರಸ್ 

ಓ ಸುರಸುಂದರೀ ಬಾರೆಂದೆಯಾ ಸುಖ ತಾರಂದೆಯಾ  
ನಾನು ನೀನು ಹಾಲು ಜೇನು ಅನುಮಾನವೇನು 

ಕೈಲಾಸ ವಾಸ ನೀ ಕೋರಿದಂದು ನೀ ಕೋರಿದಂದು 
ಈ ಪಾನಕಾನೇ ತಂದಿವುದು ಇದೇ ಸಾಕೇನು ಸದಾ ಬೇಕೇನು 
ನಾನು ನೀನು ಹಾಲು ಜೇನು ಅನುಮಾನವೇನು 
ಓ ಸುರಸುಂದರೀ ಬಾರೆಂದೆಯಾ ಸುಖ ತಾರಂದೆಯಾ  

ವೇದಾಂತ ಸಾರ ಈ ನೃತ್ಯ ಗೀತ..  ಈ ನೃತ್ಯ ಗೀತ..  
ಭಾವಾನುರಾಗ ಧ್ಯಾನಮೃತ ಭಲೇ ಚಾತರ್ಯ ಅತಿ ಮಾಧುರ್ಯ 
ಏನೀ ಧೈರ್ಯ ಏನಾಶ್ಚರ್ಯ ಅಪರೂಪ ನ್ಯಾಯ 
ನಾನು ನೀನು ಹಾಲು ಜೇನು ಅನುಮಾನವೇನು 
ಓ ಸುರಸುಂದರೀ ಬಾರೆಂದೆಯಾ ಸುಖ ತಾರಂದೆಯಾ  
------------------------------------------------------------------------------------------------------------------------

ಓಹಿಲೇಶ್ವರ (1956) - ಕೋ ಜನ್ಮದಾತ 
ಸಂಗೀತ: ಜಿ.ಕೆ.ವೆಂಕಟೇಶ್ ಸಾಹಿತ್ಯ : ವಿಜಯನಾರಸಿಂಹ  ಗಾಯನ: ಪಿ.ಸುಶೀಲಾ 

ಕೋ ಜನ್ಮದಾತ ಆಜನ್ಮ ಪೂರ್ತ ಕಣ್ಣೀರಧಾರೆ 
ಇನ್ನೇನು ಬೇರೆ ನಾ ನೀಡಲಾರೆ 

ಹೊರಹೊಮ್ಮಿ ಎದೆಯಿಂದ ಕಣ್ಣಾರೆ ಬಂದ ಗಂಗೋಧಕ 
ಹಾರೈಸಿ ಮರೆಯಾದ ನಿನ್ನಾತ್ಮ ತಣಿಸೆ 
ಹಾರೈಸಿ ನಾ ತಂದ ಈ ಶೋಕ ಧಾರೆ ಈ ಅಂತ್ಯ ಧಾರೆ 
ಕೋ ಜನ್ಮದಾತ ಆಜನ್ಮ ಪೂರ್ತ ಕಣ್ಣೀರಧಾರೆ 
ಇನ್ನೇನು ಬೇರೆ ನಾ ನೀಡಲಾರೆ 

ಕೈಲಾಸ ನಿನಗಾಗಿ ಕೈ ಚಾಚಿ ಕರೆದು ಬಾ ಎಂದೀತೇ 
ನಿನ್ನಾಯು ಇಂತೆ ಹಣ್ಣಾಯಿತೇಕೆ 
ಓ ನನ್ನ ತಂದೆ ನಾ ನೀವುದೊಂದೇ ಈ ಅಂತ್ಯ ಧಾರೆ 
ಕೋ ಜನ್ಮದಾತ ಆಜನ್ಮ ಪೂರ್ತ ಕಣ್ಣೀರಧಾರೆ 
ಇನ್ನೇನು ಬೇರೆ ನಾ ನೀಡಲಾರೆ 
------------------------------------------------------------------------------------------------------------------------

ಓಹಿಲೇಶ್ವರ (1956) - ಪಾತಕಿ ನಾನಾದೆ 
ಸಂಗೀತ: ಜಿ.ಕೆ.ವೆಂಕಟೇಶ್ ಸಾಹಿತ್ಯ : ವಿಜಯನಾರಸಿಂಹ  ಗಾಯನ: ಟಿ.ಎಂ.ಸುಂದರಾಜನ್ 

ಪಾತಕಿ ನಾನಾದೆ ಪರಮ ಪಾರ್ವತಿನಾಥನ ವಿಧಿ ಮೀರಿದ 
ಪರಮ ಪಾತಕಿ ನಾನಾದೆ 
ಪಾಪವ ಸುಡಲೊಂದು ಧೂಪವೇ ಸಾಕೆಂದು 
ಆಣತಿ ನೀ ಗೈದೆ ಅದ ಮುರಿದ ಪರಮ ಪಾತಕಿ ನಾನಾದೆ 

ಆಲಸಿಕೆ ಇಲ್ಲದೆ ಸುಲಭದ ಸೇವೆಯ ಸಲ್ಲಿಸದೆ ನಾ ಬಂದೆನೋ
ನಿನ್ನ ಒಲವಿಗೆ ಹೇರಾದೇನೋ ಕ್ಷುಲಕ ಈ ಜನ್ಮ ನೀಗುವುದೇ 
ಕ್ಷೇಮ ವರ ನೀಡಿದ ದೊರೆಯ ಸಿರಿಯ ಧೂರ್ಜಟಿಯ ವಂಚಿಸಿ 
ಪರಮ ಪಾತಕಿ ನಾನಾದೆ 

ಮಾತನು ನಡೆಸದ ಘಾತುಕನೆಂಬುವ ಯಾತನೆಯ ತೀರಿಸೋ ಎನ್ನ 
ಚೇತನವ ಆರಿಸೋ ಈ ತನು ಇನ್ನೇಕೆ ಈ ತರ ಬದುಕೇಕೆ 
ರೀತಿ ನೀತಿಯಲಿ ಪಾಪಗೈದ ಕಡು ಪಾತಕಿ ಜೀವನ ಕೊನೆಗೊಳಿಸೋ 
ಹಣೆಯ ಕಣ್ಣಿನ ಕಿಡಿಯ ಸಿಡಿಸೋ ದಣಿದ ಪಾಪಿಯ ತನು ದಹಿಸೋ 
ದೇಹ ಧೂಪಾಗ್ನಿ ಸೇವೆ ಕೈಗೊಂಡು ದೋಷವ ಪರಿಹರಿಸೋ 
ಪಾಪಿಯ ತನು ಉರಿಸೋ 
ಪಾತಕಿ ನಾನಾದೆ ಪರಮ ಪಾರ್ವತಿನಾಥನ ವಿಧಿ ಮೀರಿದ 
ಪರಮ ಪಾತಕಿ ನಾನಾದೆ 
ಪಾಪವ ಸುಡಲೊಂದು ಧೂಪವೇ ಸಾಕೆಂದು 
ಆಣತಿ ನೀ ಗೈದೆ ಅದ ಮುರಿದ ಪರಮ ಪಾತಕಿ ನಾನಾದೆ 
------------------------------------------------------------------------------------------------------------------------

ಓಹಿಲೇಶ್ವರ (1956) - ವಚನಗಳು 
ಸಂಗೀತ: ಜಿ.ಕೆ.ವೆಂಕಟೇಶ್ ಸಾಹಿತ್ಯ : ವಚನ ಗಾಯನ: ಡಾ||ರಾಜಕುಮಾರ 

ಹುಲ್ಲಾಗು ಬೆಟ್ಟದಲಿ ಮನೆಗೆ ಮಲ್ಲಿಗೆಯಾಗು 
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ 
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಗೆ 
ಎಲ್ಲರೊಳು ಒಂದಾಗಿ ಬಾಳಿ ನೀವು 

ವಚನದಲಿ ನಿಮ್ಮ ನಾಮಾಮೃತ ತುಂಬಿ 
ನಯನದಲಿ ನಿಮ್ಮ ಮೂರುತಿಯ ತುಂಬಿ 
ಮನದಲ್ಲಿ ನಿಮ್ಮ ನೆನಹು ತುಂಬಿ 
ಕಿವಿಯಲ್ಲಿ ನಿಮ್ಮ ಕೀರುತಿ ತುಂಬಿ 
ಸೋಮನಾಥೇಶ ನಿಮ್ಮ ಚರಣ ಕಮಲದೊಳಗಾನು ತುಂಬಿ 
  
ಅಯ್ಯಾ ಅಯ್ಯಾ ಎಂದು ಕರೆವುತ್ತಲಿದ್ದೇನೆ 
ಅಯ್ಯಾ ಅಯ್ಯಾ ಎಂದು ಒರಲುತ್ತಲಿದ್ದೇನೆ 
ಓ ಎನ್ನಲಾಗದೆ ಅಯ್ಯಾ ಆವಾಗಲು 
ನಿಮ್ಮ ಕರೆವುತ್ತಲಿದ್ದೇನೆ ಮೌನವೇಕೋ ಸೋಮನಾಥೇಶ್.. 

ಅಕಟಕಟಾ ಶಿವ ನಿನಗಿನಿತು ಕರುಣವಿಲ್ಲ 
ಅಕಟಕಟಾ ಶಿವ ನಿನಗೇನಿತು ಕೃಪೆಯಿಲ್ಲ 
ಏಕೆ ಹುಟ್ಟಿಸಿದೆ ಇಹಲೋಕ ದುಃಖಿಯ 
ಪರಲೋಕ ದುರನ ಏಕೆ ಹುಟ್ಟಿಸಿದೆ ಸೋಮನಾಥೇಶ ಹೇಳಯ್ಯ  
ಎನಗಾಗಿ ಮತ್ತೊಂದು ತರುಮರಾದಿಗಳಿದ್ದಿಲ್ಲವೇ ಹೇಳಯ್ಯ ಸೋಮನಾಥೇಶ 

ಕಾಗೆ ಒಂದಗಳ ಕಂಡರೇ .. ಕರೆಯದೆ ತನ್ನ ಬಳಗವನ್ನೂ .. 
ಕೋಳಿ ಒಂದು ಕುಟಕ ಕಂಡರೇ.. ಹೋಗಿ ಕರೆಯದೆ ತನ್ನ ಕುಲವೆಲ್ಲವ 
ಶಿವಭಕ್ತನಾಗಿ ಶಿವಭಕ್ತಿ ಪಕ್ಷವಿಲ್ಲದಿದ್ದರೆ ಆ ಕಾಗೆ ಕೋಳಿಗಿಂತ ಕರ ಕಷ್ಟ 

ನೆಲವೊಂದೇ ಹೊಲಗೇರಿ ಶಿವಾಲಯಕ್ಕೆ ನೆಲವೊಂದೇ 
ಜಲವೊಂದೇ ಶೌಚ ಆಚಮನಕ್ಕೆ ಜಲವೊಂದೇ 
ಕುಲವೊಂದೇ ತನ್ನ ತಾನರಿತಂಗೆ ಫಲವೊಂದೇ ಸದ್ದರ್ಶನ ಮುಕ್ತಿಗೆ 
ನಿಲುವೊಂದೇ ನಮ್ಮ ಸೋಮನಾಥೇಶನ ಅರಿತವಂಗೆ 

ಹಾಲೆಂಜಲು ಮಗುವಿನ ಉದಕವೆಂಜಲು ಮೀನಿನ 
ಪುಷ್ಪವೆಂಜಲು ತುಂಬಿಯ ಎಂತು ಪೂಜಿಸಿವೇನಯ್ಯ ಶಿವ ಶಿವ 
ತಂದುದಕ ಇಕೋ ಸೋಮನಾಥೇಶ 

ಮೊರನ ಗೊಟ್ಟಿಗೆ ಬಪ್ಪ ಕಿರುಕುಳದ ದೈವಕೆ 
ಕುರಿಯನಿತ್ತಹೆನೆಂದು ನಲಿನಲಿದಾಡುವಿರೇ 
ಕುರಿ ಸತ್ತು ಕಾಯುವುದೇ ಹರ ಮುಳಿದವರ 
ಕುರಿ ಬೇಡ ಮರೀಬೇಡ ಬರಿ ಪತ್ರೆ ತಂದು 
ಮರೆಯದೆ ಪೂಜಿಸಿದರೆ ಸಾಲದೇ ನಮ್ಮ ಸೋಮನಾಥೇಶನ 
------------------------------------------------------------------------------------------------------------------------

No comments:

Post a Comment