304. ನಾಗಮಂಡಲ (1997)

ನಾಗಮಂಡಲ ಚಲನಚಿತ್ರದ ಹಾಡುಗಳು 
  1. ಈ ಹಸಿರು ಸಿರಿಯಲಿ ಮನಸು ಮೆರೆಯಲಿ ನವಿಲೇ...
  2. ಕಂಬದಾ ಮ್ಯಾಲಿನ ಗೊಂಬಿಯೇ ನಂಬಲೇನ ನಿನ್ನ ನಗಿಯನ್ನ
  3. ಕೊಂಚ ಕೋಡರಿ ಗಮನ 
  4. ಹುಡುಗಿ ಹೂ ಹುಡುಗಿ 
  5. ಇಂಥ ಚೆಲುವಿಗೆ 
  6. ಗವ್ವನ ದೆವ್ವದ 
  7. ಮಗುವೇ ನನ್ನ ನಗುವೇ 
  8. ಗೇದಿಯ ಬೇಕೂ ಮಗಳ 
  9. ಚಿಕ್ಕಿಯಾತಕಿ
  10. ಏನಿದು ಹೊಸ ಹುರುಪು
  11. ಮಾಯದ ಮನ ಭಾರ 
  12. ಜೋಡು ಹಾಸಿಗೆ 
  13. ದಣಿದನ ನನ್ನ ದೊರೆ 
  14. ಏಕಾಂತದೋಳು ಕುಂತೂ 
  15. ಸತ್ಯವುಳ್ಳ ಶಿಲವತಿಗೇ  
  16. ಒಡೆದೋದ ಮನಸೂ ಕೂಡಿ 
ನಾಗಮಂಡಲ (1997) - ಈ ಹಸಿರು ಸಿರಿಯಲಿ
ಸಂಗೀತ: ಸಿ.ಅಶ್ವಥ್ ಸಾಹಿತ್ಯ: ಗೋಪಾಲ ಯಾಗ್ನಿಕ  ಗಾಯನ: ಸಂಗೀತ ಕಟ್ಟಿ.

ಈ ಹಸಿರು ಸಿರಿಯಲಿ ಮನಸು ಮೆರೆಯಲಿ ನವಿಲೇ...
ನಿನ್ನಾಂಗೆಯೆ ಕುಣಿವೆ ನಿನ್ನಂತೆಯೆ ನಲಿವೇ.. ನವಿಲೇ.. ನವಿಲೇ 
ಈ ನೆಲದ ನೆಲೆಯಲಿ ಮನಸು ಕುಣಿಯಲಿ ನವಿಲೇ...
ನೀನೇನೆ ನಾನಾಗುವೆ ಗೆಲುವಾಗಿಯೆ ಒಲಿವೇ.. ನವಿಲೇ.. ನವಿಲೇ 

ತಂಗಾಳಿ ಬೀಸಿ ಬರದೆ ಸೌಗಂಧಾ ಸುಖವ ತರದೇ
ಚಿಗುರೆಲೆಯು ಎಲ್ಲಿ ಮರವೆ ನಿನ್ನ ಗೆಳತಿ ನಾನು ಮೊರೆವೆ
ತಂಗಾಳಿ ಬೀಸಿ ಬರದೇ ಸೌಗಂಧಾ ಸುಖವ ತರದೇ
ಚಿಗುರೆಲೆಯು ಎಲ್ಲಿ ಮರವೇ ನಿನ್ನ ಗೆಳತಿ ನಾನು ಮೊರೆವೆ
ಮತ್ಯಾಕೆ ಮೌನ ಗಿಳಿಯೇ ಸಿಟ್ಯಾಕೆ ಎಂದು ತಿಳಿಯೆ
ಹೊತ್ಯಾಕೆ ಹೇಳು ಅಳಿಲೇ ಗುಟ್ಯಾಕೆ ನನ್ನ ಬಳಿಯೆ
ಹೇಳೀರೆ ನಿಮ್ಮನ್ನ ನಾ ಹ್ಯಾಂಗ ಮರೆಯಲೇ ತೊಳೆಯಲೇ
ಈ ಹಸಿರು ಸಿರಿಯಲಿ ಮನಸು ಮೆರೆಯಲಿ ನವಿಲೇ...
ನಿನ್ನಾಂಗೆಯೆ ಕುಣಿವೆ ನಿನ್ನಂತೆಯೆ ನಲಿವೇ... ನವಿಲೇ ನವಿಲೇ 

ಏನಂಥಾ ಮುನಿಸು ಗಿರಿಯೆ ಮಾತನ್ನ ಮರೆತೆ ಸರಿಯೇ
ಜೇನಂಥಾ ಪ್ರೀತಿ ಸುರಿದೇ ನನ್ನ ಜೀವ ಜೀವ ನದಿಯೇ
ಏನಂಥಾ ಮುನಿಸು ಗಿರಿಯೆ ಮಾತನ್ನ ಮರೆತೆ ಸರಿಯೇ
ಜೇನಂಥಾ ಪ್ರೀತಿ ಸುರಿದೇ ನನ್ನ ಜೀವ ಜೀವ ನದಿಯೇ
ಸುರಲೋಕಾ ಇದನು ಬಿಡಲೇ ತವರೀಗೆ ಸಾಟಿ ಇದೆಯೇ
ಚಿರಕಾಲ ಇಲ್ಲೆ ಇರಲೇ ನಗುತಿರು ನೀಲಿ ಮುಗಿಲೇ
ನಾನಿನ್ನು ನಿಮ್ಮಿಂದ ಬಹುದೂರ ಸಾಗುವೇ ಹರಸಿರೇ
ಈ ಹಸಿರು ಸಿರಿಯಲಿ ಮನಸು ಮೆರೆಯಲಿ ನವಿಲೇ...
ನಿನ್ನಾಂಗೆಯೆ ಕುಣಿವೆ ನಿನ್ನಂತೆಯೆ ನಲಿವೇ..  
ನವಿಲೇ ನವಿಲೆ ನವಿಲೇ ನವಿಲೆ ನವಿಲೇ ನವಿಲೆ
-----------------------------------------------------------------------------------------------------------------------

ನಾಗಮಂಡಲ (1997) - ಕಂಬದಾ ಮ್ಯಾಲಿನ
ಸಂಗೀತ: ಸಿ. ಅಶ್ವಥ್  ಸಾಹಿತ್ಯ: ಗೋಪಾಲ್ ಯಾಗ್ನಿಕ್ ಗಾಯನ: ಸಂಗೀತ ಕಟ್ಟಿ

ಕಂಬದಾ ಮ್ಯಾಲಿನ ಗೊಂಬಿಯೇ ನಂಬಲೇನ ನಿನ್ನ ನಗಿಯನ್ನಾ|
ಭಿತ್ತಿಯಾ ಮ್ಯಾಲಿನ ಚಿತ್ತಾರವೇ ಚಿತ್ತ ಗೊತ್ತ ಹೇಳ ಉತ್ತಾರವಾ||
ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ ಮಬ್ಬು ಹರಿಯುವುದೇನಾ ಹಬ್ಬವಾಗುವುದೇನಾ||

ನೀರೊಲೆಯ ನಿಗಿ ಕೆಂಡ ಸತ್ಯವೇ ಈ ಅಭ್ಯಂಜನವಿನ್ನೂ ನಿತ್ಯವೇ|
ಒಳ್ಳೇ ಘಮಗುಡುತಿಯಲ್ಲೆ ಸೀಗೆಯೇ ನಿನ್ನ ವಾಸನೀ ಹರಡಿರಲಿ ಹೀಗೆಯೇ 
ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ ಮಬ್ಬು ಹರಿಯುವುದೇನಾ ಹಬ್ಬವಾಗುವುದೇನಾ

ಒಪ್ಪಿಸುವೆ ಹೂ-ಹಣ್ಣು ಭಗವಂತ ನೆಪ್ಪಿಲೆ ಹರಸುನಗಿ ಇರಲೆಂತ|
ಕಪ್ಪುರವ ಬೆಳಗುವೆ ದೇವನೇ ತಪ್ಪದೆ ಬರಲೆನ್ನ ಗುಣವಂತ
ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ ಮಬ್ಬು ಹರಿಯುವುದೇನಾ ಹಬ್ಬವಾಗುವುದೇನಾ||
ಕಂಬದಾ ಮ್ಯಾಲಿನ ಗೊಂಬಿಯೇ ನಂಬಲೇನ ನಿನ್ನ ನಗಿಯನ್ನಾ|
ಭಿತ್ತಿಯಾ ಮ್ಯಾಲಿನ ಚಿತ್ತಾರವೇ ಚಿತ್ತ ಗೊತ್ತ ಹೇಳ ಉತ್ತಾರವಾ
------------------------------------------------------------------------------------------------------------------

ನಾಗಮಂಡಲ (1997) - ಕೊಂಚ ಕೋಡರಿ ಗಮನ 
ಸಂಗೀತ: ಸಿ. ಅಶ್ವಥ್  ಸಾಹಿತ್ಯ: ಗೋಪಾಲ್ ಯಾಗ್ನಿಕ್ ಗಾಯನ: ಕೋರಸ್ 

------------------------------------------------------------------------------------------------------------------

ನಾಗಮಂಡಲ (1997) - ಹುಡುಗಿ ಹೂ ಹುಡುಗಿ 
ಸಂಗೀತ: ಸಿ. ಅಶ್ವಥ್  ಸಾಹಿತ್ಯ: ಗೋಪಾಲ್ ಯಾಗ್ನಿಕ್ ಗಾಯನ: ರತ್ನಮಾಲಪ್ರಕಾಶ, ಕೋರಸ್  

ಹೆಣ್ಣು : ಹುಡುಗಿ ಹೂ ಹುಡುಗಿ ನಿನಗ್ಯಾಕ ಈ ಮಲ್ಲಿಗೀ 
ಕೋರಸ್ :  ಹುಡುಗಿ ಹೂ ಹುಡುಗಿ ನಿನಗ್ಯಾಕ ಈ ಮಲ್ಲಿಗೀ 
ಹೆಣ್ಣು : ಮಾತಿಗೇ ಒಂದೇ ವಾಸನೆ ನಿನ್ನ ನಡಿಗೇ ಮತ್ತೊಂದ ವಾಸನೇ 
          ಮುಟ್ಟಿದರೇ ಒಂದು ವಾಸನೆ ನಿನ್ನ ಮುಡಿದರೆ ಒಂದು ವಾಸನೆ 
          ಹುಡುಗಿ ಹೂ ಹುಡುಗಿ ನಿನಗ್ಯಾಕ ಈ ಮಲ್ಲಿಗೀ 

ಹೆಣ್ಣು : ಹೇರಳೇನ ರೇಶಿಮೆ ನುಣುಪೂ ತಡವಿದರ ಮನಕ ಒಣಪು  
ಕೋರಸ್ : ಹೇರಳೇನ ರೇಶಿಮೆ ನುಣುಪೂ ತಡವಿದರ ಮನಕ ಒಣಪು  
ಹೆಣ್ಣು : ಬೆನ್ನಂತೂ ಹೊನ್ನ ತವಕ ನಿನ್ನ ಇನ್ನಷ್ಟೂ ನೋಡೋ ತವಕ 
           ಮೈಯ್ಯಂತೂ ಮುತ್ತುಮಲ್ಲೇ ಮಾಯೆ ಬಲು ಕುಣಿವಂತೇ ನಿನ್ನವ್ವ ತಾಯೇ 
ಕೋರಸ್ : ಬೆನ್ನಂತೂ ಹೊನ್ನ ತವಕ ನಿನ್ನ ಇನ್ನಷ್ಟೂ ನೋಡೋ ತವಕ 
           ಮೈಯ್ಯಂತೂ ಮುತ್ತುಮಲ್ಲೇ ಮಾಯೆ ಬಲು ಕುಣಿವಂತೇ ನಿನ್ನವ್ವ ತಾಯೇ 
ಹೆಣ್ಣು : ಅಮ್ಮಯ್ಯ ಚೆಂದುಳ್ಳಿ ಚೆಲುವೇ ಹೆಣ್ಣಾ ಆ.. 
          ನಿನಗ್ಯಾಕ ಈ ಮಲ್ಲಿಗೀ ನಿನಗ್ಯಾಕ ಈ ಮಲ್ಲಿಗೀ   
          ಹುಡುಗಿ ಹೂ ಹುಡುಗಿ ನಿನಗ್ಯಾಕ ಈ ಮಲ್ಲಿಗೀ 
ಕೋರಸ್ :  ಹುಡುಗಿ ಹೂ ಹುಡುಗಿ ನಿನಗ್ಯಾಕ ಈ ಮಲ್ಲಿಗೀ 

ಹೆಣ್ಣು : ಇವು ಕಿವಿಯಲ್ಲ ಜೋಡಿ ಪಣಕಿ ಬರಿ ಸವಿ ಮಾತಿನ ಜೇನ ಹುಣಕಿ 
ಕೋರಸ್ : ಇವು ಕಿವಿಯಲ್ಲ ಜೋಡಿ ಪಣಕಿ ಬರಿ ಸವಿ ಮಾತಿನ ಜೇನ ಹುಣಕಿ 
ಹೆಣ್ಣು : ಈಕ ಕಣ್ಣಲ್ಲ ಮೀನ ಮರಿಯು  ಸುಖ ಸುರಿವಂಥ ಜೇನ ತೊರೆಯು 
          ನಿನ ಮೂಗು ಮಿಡಿಬಾಳೆ ಹಣ್ಣ ನಿನ್ನ ಕೈ ಹಿಡಿವನ್ಯಾರ ಕಾಮಣ್ಣ 
ಕೋರಸ್ : ನಿನ ಮೂಗು ಮಿಡಿಬಾಳೆ ಹಣ್ಣ ನಿನ್ನ ಕೈ ಹಿಡಿವನ್ಯಾರ ಕಾಮಣ್ಣ
ಹೆಣ್ಣು :  ಚೆಂದುಳ್ಳಿ ಚೆಲುವೆ ಹೆಣ್ಣಾ ಆ..           
           ನಿನಗ್ಯಾಕ ಈ ಮಲ್ಲಿಗೀ ನಿನಗ್ಯಾಕ ಈ ಮಲ್ಲಿಗೀ   
          ಹುಡುಗಿ ಹೂ ಹುಡುಗಿ ನಿನಗ್ಯಾಕ ಈ ಮಲ್ಲಿಗೀ 
ಕೋರಸ್ :  ಹುಡುಗಿ ಹೂ ಹುಡುಗಿ ನಿನಗ್ಯಾಕ ಈ ಮಲ್ಲಿಗೀ 
ಹೆಣ್ಣು : ಮಾತಿಗೇ ಒಂದೇ ವಾಸನೆ ನಿನ್ನ ನಡಿಗೇ ಮತ್ತೊಂದ ವಾಸನೇ 
          ಮುಟ್ಟಿದರೇ ಒಂದು ವಾಸನೆ ನಿನ್ನ ಮುಡಿದರೆ ಒಂದು ವಾಸನೆ 
------------------------------------------------------------------------------------------------------------------

ನಾಗಮಂಡಲ (1997) - ಇಂಥ ಚೆಲುವಿಗೆ 
ಸಂಗೀತ: ಸಿ. ಅಶ್ವಥ್  ಸಾಹಿತ್ಯ: ಗೋಪಾಲ್ ಯಾಗ್ನಿಕ್ ಗಾಯನ: ಶಿವಾನಂದ ಪಾಟೀಲ 

------------------------------------------------------------------------------------------------------------------

ನಾಗಮಂಡಲ (1997) - ಗವ್ವನ ದೆವ್ವದ 
ಸಂಗೀತ: ಸಿ. ಅಶ್ವಥ್  ಸಾಹಿತ್ಯ: ಗೋಪಾಲ್ ಯಾಗ್ನಿಕ್ ಗಾಯನ: ಸಿ.ಅಶ್ವಥ 

------------------------------------------------------------------------------------------------------------------

ನಾಗಮಂಡಲ (1997) - ಮಗುವೇ ನನ್ನ ನಗುವೇ 
ಸಂಗೀತ: ಸಿ. ಅಶ್ವಥ್  ಸಾಹಿತ್ಯ: ಗೋಪಾಲ್ ಯಾಗ್ನಿಕ್ ಗಾಯನ: ಸಿ.ಅಶ್ವಥ 

------------------------------------------------------------------------------------------------------------------

ನಾಗಮಂಡಲ (1997) - ಗೇದಿಯ ಬೇಕೂ ಮಗಳ 
ಸಂಗೀತ: ಸಿ. ಅಶ್ವಥ್  ಸಾಹಿತ್ಯ: ಗೋಪಾಲ್ ಯಾಗ್ನಿಕ್ ಗಾಯನ: ರತ್ನಮಾಲ ಪ್ರಕಾಶ 

ಗೇಧಿಯ ಬೇಕು ಮಗಳ ಗೇಧಿಯ ಬೇಕು
ಗೇಧಿಯ ಮಗಳ ಮನಸ ಕದೀಯ ಬೇಕು
ಗೇಧಿಯ ಬೇಕು ಮಗಳ ಗೇಧಿಯ ಬೇಕು
ಗೇಧಿಯ ಮಗಳ ಮನಸ ಕದೀಯ ಬೇಕು

ಮುಥಾಗ್ ಬಂದರೆ ಮಾರು ದೂರ ಸರಿ ತಂಗಿ
ಸಿಟ್ಟಾಗಿ ನಿಂತರೆ ಮುದ್ದೆಲೇ ಕರಿ ತಂಗಿ
ಕರೆದು ಕೈಯ ಗುಂಟ ಸರದಾರ ಸರ್ದಾರ
ಸಲಾದು ಸತ್ಕೊಂಡು ಸುಸ್ವರ ಹೋರಾಡಿಸು ತಂಗಿ ಇಇ
ಗೇಧಿಯ ಬೇಕು ಮಗಳ ಗೇಧಿಯ ಬೇಕು
ಗೇಧಿಯ ಮಗಳ ಮನಸ ಕದೀಯ ಬೇಕು

ತೂತಸ್ತು ಹಾಲಿಗೆ ರುಚಿ ಬರಿತೈತೆ ಮಗಳ
ಕಳ್ಳಿತಷ್ಟು ಹಣ್ಣಿಗೆ ಸವಿ ಇರಿತೈತೆ ಬಹಳ
ಜೆನ್ನಾಗಿ.. ಹಾಲಾಗಿ.. ಹೂವೋಗಿ.. ಹಣ್ಣಾಗಿ..
ನಿನ್ನಾಗಿಹೇ ಅವಗ ಒಪಿಸ್ಕೊ ಮಗಳ ...
ಗೇಧಿಯ ಬೇಕು ಮಗಳ ಗೇಧಿಯ ಬೇಕು
ಗೇಧಿಯ ಮಗಳ ಮನಸ ಕದೀಯ ಬೇಕು

ಮೈಮರೆಸೋ. ಆಟ್ಟಿದು ಮರೆಯಲೇ ಬೇಡ
ಮೈ ಮೇಲಿನ ಸೆರಗ ಸ್ವಲ್ಪ ಸರಿಸಿ ನೋಡ
ಮೈ ಗಂದ ಮಕರಂದ ನಾಲಿಗೆ ನೀರ ತರಲೆ
ಮನಸಿಚಿ ಆಡಿದರೆ ನಾಲಿಗೆ ತುಸ ಇರಲಿ ..
ಗೇಧಿಯ ಬೇಕು ಮಗಳ ಗೇಧಿಯ ಬೇಕು
ಗೇಧಿಯ ಮಗಳ ಮನಸ ಕದೀಯ ಬೇಕು
ಗೇಧಿಯ ಬೇಕು ಮಗಳ ಗೇಧಿಯ ಬೇಕು
ಗೇಧಿಯ ಮಗಳ ಮನಸ ಕದೀಯ ಬೇಕು
------------------------------------------------------------------------------------------------------------------

ನಾಗಮಂಡಲ (1997) - ಚಿಕ್ಕಿಯಾತಕಿ
ಸಂಗೀತ: ಸಿ. ಅಶ್ವಥ್ ಸಾಹಿತ್ಯ: ಗೋಪಾಲ್ ಯಾಗ್ನಿಕ್ ಗಾಯನ: ಶಿವಾನಂದ ಪಾಟೀಲ

------------------------------------------------------------------------------------------------------------------

ನಾಗಮಂಡಲ (1997) - ಏನಿದು ಹೊಸ ಹುರುಪು 
ಸಂಗೀತ: ಸಿ. ಅಶ್ವಥ್  ಸಾಹಿತ್ಯ: ಗೋಪಾಲ್ ಯಾಗ್ನಿಕ್ ಗಾಯನ: ಕೋರಸ್ 

------------------------------------------------------------------------------------------------------------------

ನಾಗಮಂಡಲ (1997) - ಮಾಯದ ಮನ ಭಾರ 
ಸಂಗೀತ: ಸಿ. ಅಶ್ವಥ್  ಸಾಹಿತ್ಯ: ಗೋಪಾಲ್ ಯಾಗ್ನಿಕ್ ಗಾಯನ: ಕೋರಸ್ 

------------------------------------------------------------------------------------------------------------------

ನಾಗಮಂಡಲ (1997) - ಜೋಡು ಹಾಸಿಗೆ 
ಸಂಗೀತ: ಸಿ. ಅಶ್ವಥ್  ಸಾಹಿತ್ಯ: ಗೋಪಾಲ್ ಯಾಗ್ನಿಕ್ ಗಾಯನ: ಸಿ.ಅಶ್ವಥ 

------------------------------------------------------------------------------------------------------------------

ನಾಗಮಂಡಲ (1997) - ದಣಿದನ ನನ್ನ ದೊರೆ 
ಸಂಗೀತ: ಸಿ. ಅಶ್ವಥ್  ಸಾಹಿತ್ಯ: ಗೋಪಾಲ್ ಯಾಗ್ನಿಕ್ ಗಾಯನ: ಕೋರಸ್ 

------------------------------------------------------------------------------------------------------------------

ನಾಗಮಂಡಲ (1997) - ಏಕಾಂತದೋಳು ಕುಂತೂ
ಸಂಗೀತ: ಸಿ. ಅಶ್ವಥ್ ಸಾಹಿತ್ಯ: ಗೋಪಾಲ್ ಯಾಗ್ನಿಕ್ ಗಾಯನ: ಕೋರಸ್

Ekanthadolu Koothu Ekantha Ekantha
Yaakantha Halubali Halubina Koragali
Baarelena Mukha Thoralena
Seralena Sukha Thaaralena

Nattirula Raatriyali Bittenga Badukali
Ghattagala Dinadali Kettu Nodi Kelali
Bari Raatri Nee Baruti Tharavena
Uri Hagala Irulaagi Iradena
Hottili Beleyuva Putta Jeevaka Ena
Hottiya Sankata Thattadirali Sivane
Jatti Bettigeyinda Barathaana
Mutti Hottiya Gatti Jaggathaana
Baarelena Mukha Thoralena
Baarelena Mukha Thoralena

------------------------------------------------------------------------------------------------------------------

ನಾಗಮಂಡಲ (1997) - ಸತ್ಯವುಳ್ಳ ಶಿಲವತಿಗೇ 
ಸಂಗೀತ: ಸಿ. ಅಶ್ವಥ್  ಸಾಹಿತ್ಯ: ಗೋಪಾಲ್ ಯಾಗ್ನಿಕ್ ಗಾಯನ: ಕೋರಸ್ 

------------------------------------------------------------------------------------------------------------------

ನಾಗಮಂಡಲ (1997) - ಒಡೆದೋದ ಮನಸೂ ಕೂಡಿ 
ಸಂಗೀತ: ಸಿ. ಅಶ್ವಥ್  ಸಾಹಿತ್ಯ: ಗೋಪಾಲ್ ಯಾಗ್ನಿಕ್ ಗಾಯನ: ಸಿ.ಅಶ್ವಥ 

------------------------------------------------------------------------------------------------------------------

No comments:

Post a Comment