ಸುಪ್ರಬಾತ ಚಲನ ಚಿತ್ರಗಳು
- ನನ್ನ ಹಾಡು ನನ್ನದು ನನ್ನ ರಾಗ ನನ್ನದು
- ಈ ಹೃದಯಾ ಹಾಡಿದೆ ಆಸೆಗಳಾ ತಾಳದೆ
- ಚೆಲುವೆ ನನ್ನ ಚೆಲುವೆ ನಗುವ ಹೊನ್ನ ಹೂವೇ
- ಅರಳಿದ ಆಸೇ ಮಂಜಿನ ಹೂವಾಯ್ತು
- ಈ ಹೃದಯಾ ಹಾಡಿದೆ (ಚಿತ್ರಾ)
ಸಂಗೀತ: ರಾಜನ್ - ನಾಗೇಂದ್ರ ಸಾಹಿತ್ಯ : ಚಿ||ಉದಯಶಂಕರ್ ಗಾಯನ : ಎಸ್.ಪಿ. ಬಾಲಸುಬ್ರಹ್ಮಣ್ಯಂ
ಗಂಡು : ಹೂಂಹೂಂಹೂಂಹೂಂಹೂಂ ಆಆಆಹ್ಹಾಹ್ಹಾಹ್ಹಾಆಆಅ ಆಹ್ಹಾಹ್ಹಾಆಆಆ
ಲಲಲಲ್ಲಲಾ ಲಲಲಲ್ಲಲಾ ಲಲಲಲ್ಲಲಾ ಆಹಾ ಆಹಾ ಆಹಾ
ನನ್ನ ಹಾಡು ನನ್ನದು ನನ್ನ ರಾಗ ನನ್ನದು ನನ್ನ ತಾಳ ನನ್ನದು ನನ್ನ ಆಸೆ ನನ್ನದು
ಎಲ್ಲೆಲ್ಲಿಯು ಎಂದೆಂದಿಗು
ಎಲ್ಲೆಲ್ಲಿಯು ಎಂದೆಂದಿಗುನನ್ನಂತೆ ನಾನು ಇರುವೆನು ನುಡಿವೆನು ನಡೆವೆನು ದುಡಿವೆನು... ಈ ಬಾಳಲಿ
ನನ್ನ ಹಾಡು ನನ್ನದು ನನ್ನ ರಾಗ ನನ್ನದು ನನ್ನ ತಾಳ ನನ್ನದು ನನ್ನ ಆಸೆ ನನ್ನದು
ಲಲ್ಲಲಲಾ ಲಲಲ್ಲಲಾ ಲಲಲಾ ಲಲಲಾ
ಗಂಡು : ನೋಡು ನೀಲಿ ಬಾನಿಗೆ ಮೋಡ ಅಂದ ತಂದಿದೆ
ಹಕ್ಕಿ ಹಾಡಿ ಹಾರಾಡಿದೆ ಹಾಯಾಗಿ ಆನಂದದೆ
ತಂಪು ಗಾಳಿ ಬೀಸಿದೆ ನದಿಯ ನೀರು ಓಡಿದೆ
ಹಸಿರು ಮೆತ್ತೆಯ ಹಾಸಿದೆ ಲತೆಯಲ್ಲಿ ಹೂ ನಗುತಿದೆ ಅಹ್ಹಹ್ಹಾ..
ಜಗದ ಸೊಬಗು ನನಗೆ ತಾನೆ.. ಆಹ್ಹ್
ನನ್ನ ಹಾಡು ನನ್ನದು ನನ್ನ ರಾಗ ನನ್ನದು ನನ್ನ ತಾಳ ನನ್ನದು ನನ್ನ ಆಸೆ ನನ್ನದು
ಮಾತು: ನೂರು ಜನರು ಬಂದರು ನೂರು ಜನರು ಹೋದರು ನನಗೆ ನಾನೆ ಸಂಗಾತಿಯು ಅಹ್ಹಹ್ಹಹ್ಹಾ ...
ನಾನೆಂದು ಸುಖ ಜೀವಿಯು.. ಹ್ಹೂಹ್ಹೂಹ್ಹೂ
ಹಾಡು : ನೂರು ಜನರು ಬಂದರು ನೂರು ಜನರು ಹೋದರು
ನನಗೆ ನಾನೆ ಸಂಗಾತಿಯು ನಾನೆಂದು ಸುಖ ಜೀವಿಯು
ಉರಿವ ಬಿಸಿಲೆ ಬಂದರು ಗುಡುಗು ಮಳೆಯೆ ಸುರಿದರು
ನನಗೆ ಎಲ್ಲ ಸಂತೋಷವೆ ದಿನಕೊಂದು ಹೊಸ ನೋಟವೆ
ಹಗಲು ಇರುಳು ಸೊಗಸು ತಾನೆ
ರಪ್ಪಪ್ಪಪ್ಪಾ.. ರೇರಾರಾರಾರರ...
ಎಲ್ಲೆಲ್ಲಿಯು ಎಂದೆಂದಿಗು
ಎಲ್ಲೆಲ್ಲಿಯು ಎಂದೆಂದಿಗು ನನ್ನಂತೆ ನಾನು ಇರುವೆನು ನುಡಿವೆನು ನಡೆವೆನು ದುಡಿವೆನು... ಈ ಬಾಳಲಿ
ನನ್ನ ಹಾಡು ನನ್ನದು ನನ್ನ ರಾಗ ನನ್ನದು ನನ್ನ ತಾಳ ನನ್ನದು ನನ್ನ ಆಸೆ ನನ್ನದು
-------------------------------------------------------------------------------------------------------------------------
ಸುಪ್ರಭಾತ (1988) - ಈ ಹೃದಯಾ ಹಾಡಿದೆ ಆಸೆಗಳಾ ಕಾಣದೇ
ಸಂಗೀತ: ರಾಜನ್ - ನಾಗೇಂದ್ರ ಸಾಹಿತ್ಯ: ಚಿ||ಉದಯಶಂಕರ್ ಗಾಯನ : ಎಸ್.ಪಿ.ಬಿ
ಹೂಂಹೂಂ ಹಾಡಿದೇ ಹೂಂಹೂಂ ತಾಳದೇ
ಹೂಂ ಹೂಂ ಹುಡುಕುತ ನಿನ್ನ ಕೂಗಿದೆ
ಹೂಂಹೂಂ ಸುಮವೇ ನಿನಗಿನ್ನೂ ಕೇಳದೇ
ಈ ಹೃದಯಾ ಹಾಡಿದೆ ಆಸೆಗಳಾ ತಾಳದೇ
ಹುಡುಕುತ ನಿನ್ನ ಕೂಗಿದೆ ಸುಮವೆ ನಿನಗಿನ್ನು ಕೇಳದೆ
ಈ ಹೃದಯಾ ಹಾಡಿದೆ ಆಸೆಗಳಾ ತಾಳದೇ
ಹುಡುಕುತ ನಿನ್ನ ಕೂಗಿದೆ ಸುಮವೆ ನಿನಗಿನ್ನು ಕೇಳದೆ
ಹುಡುಕುತ ನಿನ್ನ ಕೂಗಿದೆ ಸುಮವೆ ನಿನಗಿನ್ನು ಕೇಳದೆ
ಕನಸು ಮನಸಲ್ಲಿ ಉಸಿರು ಉಸಿರಲ್ಲಿ ನಿನ್ನ ಚಿಂತೆ ತುಂಬಿದೆ.. ಆಆಆ
ಕನಸು ಮನಸಲ್ಲಿ ಉಸಿರು ಉಸಿರಲ್ಲಿ ನಿನ್ನ ಚಿಂತೆ ತುಂಬಿದೆ
ಗಾಳಿಯು ಬೀಸಲು ಭ್ರಮೆ ಇಂದ ಅಲೆದಾಡಿದೆ
ಹಗಲು ಇರುಳಾಗಿ ಇರುಳು ಹಗಲಾಗಿ ದಿನ ರಾತ್ರಿ ಓಡಿದೆ
ಮರೆಯುವ ರೀತಿಯ ನನ್ನಾಣೆ ನಾ ಕಾಣದೆ
ನೆನಪು ಎದೆಯಲ್ಲಿ ತುಳುಕಾಡಿದೆ
ಈ ಹೃದಯಾ ಹಾಡಿದೆ ಆಸೆಗಳಾ ತಾಳದೇ
ಹುಡುಕುತ ನಿನ್ನ ಕೂಗಿದೆ ಸುಮವೆ ನಿನಗಿನ್ನು ಕೇಳದೆ
ಈ ಹೃದಯಾ ಹಾಡಿದೆ ಆಸೆಗಳಾ ತಾಳದೇ
ಚಿಗುರು ಎಲೆಯಾಗಿ ಮೊಗ್ಗು ಹೂವಗಿ ಋತುಕಾಲ ಓಡಿದೆ.. ಆಆಆ
ಚಿಗುರು ಎಲೆಯಾಗಿ ಮೊಗ್ಗು ಹೂವಗಿ ಋತುಕಾಲ ಓಡಿದೆ
ತಡೆಯುವ ಶಕುತಿಯು ನಿನ್ನಾಣೆ ನನಗಿಲ್ಲದೆ
ಕಡಲು ಮುಗಿಲಾಗಿ ಮುಗಿಲು ಮಳೆಯಾಗಿ ನದಿಯಾಗಿ ಓಡಿದೆ
ಬಯಕೆಯು ಮುಗಿಯದೆ ಸುಖ ಶಾಂತಿ ನಾ ಕಾಣದೆ
ನಯನ ಕಣ್ಣೀರ ಹನಿಯಾಗಿದೆ
ಈ ಹೃದಯಾ ಹಾಡಿದೆ ಆಸೆಗಳಾ ತಾಳದೇ
ಹುಡುಕುತ ನಿನ್ನ ಕೂಗಿದೆ ಸುಮವೆ ನಿನಗಿನ್ನು ಕೇಳದೆ
ಹುಡುಕುತ ನಿನ್ನ ಕೂಗಿದೆ ಸುಮವೆ ನಿನಗಿನ್ನು ಕೇಳದೆ
ಹೂಂಹೂಂಹೂಂಹೂಂ
-----------------------------------------------------------------------------------------------------------------------
ಸುಪ್ರಭಾತ (1988) - ಅರಳಿದ ಆಸೆ ಮಂಜಿನ ಹೂವಾಯ್ತು
ಸಂಗೀತ: ರಾಜನ್ - ನಾಗೇಂದ್ರ ಸಾಹಿತ್ಯ: ಚಿ||ಉದಯಶಂಕರ್ ಗಾಯನ: ಎಸ್.ಪಿ. ಬಿ ಚಿತ್ರ
ಗಂಡು : ಅರಳಿದ ಆಸೆ ಮಂಜಿನ ಹೂವಾಯ್ತು ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು, ಬದುಕು ಸಾಕಾಯ್ತು
ಹೆಣ್ಣು : ಅರಳಿದ ಆಸೆ ಮಂಜಿನ ಹೂವಾಯ್ತು ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು, ಬದುಕು ಸಾಕಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು, ಬದುಕು ಸಾಕಾಯ್ತು
ಗಂಡು : ಅರಳಿದ ಆಸೆ ಮಂಜಿನ ಹೂವಾಯ್ತು ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು, ಬದುಕು ಸಾಕಾಯ್ತು
ಗಂಡು : ಒಲವಿನ ಸವಿಕಾಣದೆ ಮದುವೆಯ ಮಾತಾಗದೇ
ಒಲವಿನ ಸವಿಕಾಣದೆ ಮದುವೆಯ ಮಾತಾಗದೇ
ಮಗುವಿನ ತಾಯಾದರೆ ಎಂದಿಗೂ ನೋವೇ
ಹೆಣ್ಣು : ಓಓಓಓಓ ಆಆಆಅ
ಗಂಡು : ಕಂದನ ನೀ ಕಾಣದೆ ಮುದ್ದಿನ ಧ್ವನಿ ಕೇಳದೆ
ಗಂಡು : ಕಂದನ ನೀ ಕಾಣದೆ ಮುದ್ದಿನ ಧ್ವನಿ ಕೇಳದೆ
ಕಂದನ ನೀ ಕಾಣದೆ ಮುದ್ದಿನ ಧ್ವನಿ ಕೇಳದೆ ಜೋಗುಳ ನೀ ಹಾಡದೆ ಏತಕೆ ನೀ ಅಳುವೇ
ಬಾಳಿನ ಸಂಗೀತವು ಶೃತಿ ಸೇರದಾಯ್ತು....
ಹೆಣ್ಣು : ಅರಳಿದ ಆಸೆ ಮಂಜಿನ ಹೂವಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು,
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು,
ಹೆಣ್ಣು : ಹಾರುವ ಹಕ್ಕಿಯಂತೆ ಓಡುವ ಜಿಂಕೆಯಂತೆ
ಹಾರುವ ಹಕ್ಕಿಯಂತೆ ಓಡುವ ಜಿಂಕೆಯಂತೆ ಹರುಷದಿ ನೀನಿರಲು ಸಡಗರವೇನು
ಗಂಡು : ಓಓಓಓಓ ಆಆಆ
ಹೆಣ್ಣು : ಬಳೆಗಳ ಸವಿನಾದಕೆ ಚೆಲುವೆಯ ಕುಡಿನೋಟಕೆ
ಹೆಣ್ಣು : ಬಳೆಗಳ ಸವಿನಾದಕೆ ಚೆಲುವೆಯ ಕುಡಿನೋಟಕೆ
ಬಳೆಗಳ ಸವಿನಾದಕೆ ಚೆಲುವೆಯ ಕುಡಿನೋಟಕೆ ಕಂಗಳ ಮಿಲನಕೆ ಸೋತೆ ನೀನು
ಎಲ್ಲವೂ ಕನಸಾಯಿತು ಬಾಳು ಬರಿದಾಯ್ತು... ಓಓಓಓಓ
ಗಂಡು : ಅರಳಿದ ಆಸೆ ಮಂಜಿನ ಹೂವಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು, ಬದುಕು ಸಾಕಾಯಿತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು, ಬದುಕು ಸಾಕಾಯಿತು
ಇಬ್ಬರು : ಅರಳಿದ ಆಸೆ ಮಂಜಿನ ಹೂವಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು
--------------------------------------------------------------------------------------------------------------------------
ಸುಪ್ರಭಾತ (1988) - ಚೆಲುವೆ ನನ್ನ ಚೆಲುವೆ ನಗುವ ಹೊನ್ನ ಹೂವೇ
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ಚಿ||ಉದಯಶಂಕರ್ ಗಾಯನ: ಎಸ್.ಪಿ.ಬಿ ಚಿತ್ರ

ಗಂಡು : ಚೆಲುವೆ ನನ್ನ ಚೆಲುವೆ ನಗುವ ಹೊನ್ನ ಹೂವೇ
ಸೊಗಸು ತುಂಬಿದೆ ತುಂಬಿದೆ ನನ್ನಲ್ಲಿ
ಹರುಷ ಹೊಮ್ಮಿದೆ ಚಿಮ್ಮಿದೆ ನನ್ನಲ್ಲಿ ಏನೋ ಹಾಯಾಗಿದೇ....
ಚೆಲುವೆ ನನ್ನ ಚೆಲುವೆ ನಗುವ ಹೊನ್ನ ಹೂವೇಗಂಡು : ಎದೆಯಲ್ಲಿ ಮಿಡಿವ ಮಾತು ನುಡಿವ...
ಎದೆಯಲ್ಲಿ ಮಿಡಿವ ಮಾತು ನುಡಿವ ಚಪಲ ನಿನ್ನಲ್ಲಿ ನಾ ಕಂಡೇ
ಈ ಕಣ್ಣೇ ಸಾಕಲ್ಲ ಬೇರೇನೂ ಬೇಕಿಲ್ಲಾ ಮನದ ಮಾತಾಡಲು...
ಹೆಣ್ಣು : ಸವಿಯಾದ ನುಡಿಯು ಜೇನ ಹನಿಯು...
ಸವಿಯಾದ ನುಡಿಯು ಜೇನ ಹನಿಯು ಚೆನ್ನ ನೀನಾಡೋ ಮಾತೆಲ್ಲಾ
ನಿನ್ನಿಂದ ಬದುಕೆಲ್ಲಾ ಬಂಗಾರವಾಯ್ತಲ್ಲ ಒಲಿದು ನೀ ಬರಲು..
ಚೆಲುವ ನನ್ನ ಚೆಲುವ ನಗುವ ನಿನ್ನ ಮೊಗವ
ಗೆಳೆಯ ನೋಡುತ ನೋಡುತ ಆನಂದ
ಪಡೆದೆ ಈ ದಿನ ಈ ದಿನ ನಿನ್ನಿಂದ ಎಂಥ ಹೀತವಾಗಿದೇ
ಚೆಲುವ ನನ್ನ ಚೆಲುವ ನಗುವ ನಿನ್ನ ಮೊಗವ
ನಲಿದಾಡೋ ಗಿಣಿಯ ಬಿಸಿ ಬಲೆಯ ಬಳಿಗೆ ಸೆಳೆದಂತೆ ನಾ ಸೆಳೆದು
ಮಾತಾಡದಂತೆಯೇ ನಾ ಪಡೆದೇ ನಿನ್ನನ್ನೇ ಎಂಥಾ ಭಾಗ್ಯವಿದು
ಗಂಡು : ಆಹಾ ಆಹಾ (ಆಹಾ ಆಹಾ ) ಲಲಲಲ್ಲಲ್ಲಲಾ (ಲಲಲಲ್ಲಲ್ಲಲಾ )
ಸೊಗಸಾಗಿ ನಗುವ ನಿನ್ನ ತುಟಿಯ
ಸೊಗಸಾಗಿ ನಗುವ ನಿನ್ನ ತುಟಿಯ
ಸೊಗಸಾಗಿ ನಗುವ ನಿನ್ನ ತುಟಿಯ ಚಂದ ಕಂಡಂದೆ ನಾ ಸೋತೆ
ಹೊಸ ಹೂವ ಕಂಡಂತೆ ಹೊಸ ಜೀವ ಬಂದಂತೆ ಬದುಕೇ ಹಾಡಾಯಿತು
ಚೆಲುವೆ ನನ್ನ ಚೆಲುವೆ ನಗುವ ಹೊನ್ನ ಹೂವೇ
ಸೊಗಸು ತುಂಬಿದೆ ತುಂಬಿದೆ ನನ್ನಲ್ಲಿ
ಹರುಷ ಹೊಮ್ಮಿದೆ ಚಿಮ್ಮಿದೆ ನನ್ನಲ್ಲಿ ಏನೋ ಹಾಯಾಗಿದೇ....
ಚೆಲುವೆ ನನ್ನ ಚೆಲುವೆ ನಗುವ ಹೊನ್ನ ಹೂವೇ--------------------------------------------------------------------------------------------------------------------------
ಸುಪ್ರಭಾತ (1988) - ಈ ಹೃದಯ ಹಾಡಿದೆ
ಸಂಗೀತ: ರಾಜನ್ - ನಾಗೇಂದ್ರ ಸಾಹಿತ್ಯ: ಚಿ||ಉದಯಶಂಕರ್ ಗಾಯನ: ಚಿತ್ರ
ಈ ಹೃದಯಾ ಹಾಡಿದೆ ಆಸೆಗಳಾ ತಾಳದೆ
ಹುಡುಕುತ ನಿನ್ನ ಕೂಗಿದೆ ಸುಮವೆ ನಿನಗಿನ್ನು ಕೇಳದೆ
ಈ ಹೃದಯಾ ಹಾಡಿದೆ ಆಸೆಗಳಾ ತಾಳದೆ
ಹುಡುಕುತ ನಿನ್ನ ಕೂಗಿದೆ ಸುಮವೆ ನಿನಗಿನ್ನು ಕೇಳದೆ
ಹುಡುಕುತ ನಿನ್ನ ಕೂಗಿದೆ ಸುಮವೆ ನಿನಗಿನ್ನು ಕೇಳದೆ
ಕನಸು ಮನಸಲ್ಲಿ ಉಸಿರು ಉಸಿರಲ್ಲಿ ನಿನ್ನ ಚಿಂತೆ ತುಂಬಿದೆ.. ಆಆಆ..
ಕನಸು ಮನಸಲ್ಲಿ ಉಸಿರು ಉಸಿರಲ್ಲಿ ನಿನ್ನ ಚಿಂತೆ ತುಂಬಿದೆ
ಗಾಳಿಯು ಬೀಸಲು ಭ್ರಮೆ ಇಂದ ಅಲೆದಾಡಿದೆ
ಹಗಲು ಇರುಳಾಗಿ ಇರುಳು ಹಗಲಾಗಿ ದಿನ ರಾತ್ರಿ ಓಡಿದೆ
ಮರೆಯುವ ರೀತಿಯ ನನ್ನಾಣೆ ನಾ ಕಾಣದೆ
ನೆನಪು ಎದೆಯಲ್ಲಿ ತುಳುಕಾಡಿದೆ
ಈ ಹೃದಯಾ ಹಾಡಿದೆ ಆಸೆಗಳಾ ತಾಳದೆ
ಹುಡುಕುತ ನಿನ್ನ ಕೂಗಿದೆ ಸುಮವೆ ನಿನಗಿನ್ನು ಕೇಳದೆ
ಈ ಹೃದಯಾ ಹಾಡಿದೆ ಆಸೆಗಳಾ ತಾಳದೆ
ಚಿಗುರು ಎಲೆಯಾಗಿ ಮೊಗ್ಗು ಹೂವಗಿ ಋತುಕಾಲ ಓಡಿದೆ.. ಆಆಆ
ಚಿಗುರು ಎಲೆಯಾಗಿ ಮೊಗ್ಗು ಹೂವಗಿ ಋತುಕಾಲ ಓಡಿದೆ
ತಡೆಯುವ ಶಕುತಿಯು ನಿನ್ನಾಣೆ ನನಗಿಲ್ಲದೆ
ಕಡಲು ಮುಗಿಲಾಗಿ ಮುಗಿಲು ಮಳೆಯಾಗಿ ನದಿಯಾಗಿ ಓಡಿದೆ
ಬಯಕೆಯು ಮುಗಿಯದೆ ಸುಖ ಶಾಂತಿ ನಾ ಕಾಣದೆ
ನಯನ ಕಣ್ಣೀರ ಹನಿಯಾಗಿದೆ
ಈ ಹೃದಯಾ ಹಾಡಿದೆ ಆಸೆಗಳಾ ತಾಳದೆ
ಹುಡುಕುತ ನಿನ್ನ ಕೂಗಿದೆ ಸುಮವೆ ನಿನಗಿನ್ನು ಕೇಳದೆ
ಹುಡುಕುತ ನಿನ್ನ ಕೂಗಿದೆ ಸುಮವೆ ನಿನಗಿನ್ನು ಕೇಳದೆ
ಹೂಂಹೂಂಹೂಂ
--------------------------------------------------------------------------------------------------------------------------
No comments:
Post a Comment