ಮೌನಗೀತೆ ಚಿತ್ರದ ಹಾಡುಗಳು
- ಹದವಾದ ಹದಿನೆಂಟು ವಯಸು
- ತಾವರೇ ಕಣ್ಣವಳೇ
- ನಗುವ ಹೂವ ನೀನೂ
- ತಲ್ಲಣಿಸದಿರು ಕಂಡೆಯಾ
- ಈ ಹೂವು ಈ ದುಂಬಿಗೇ
ಮೌನಗೀತೆ (1986) - ಹದವಾದ ಹದಿನೆಂಟು ವಯಸು
ಸಂಗೀತ: ಎಂ.ರಂಗ ರಾವ್ ಸಾಹಿತ್ಯ: ಗೀತಪ್ರಿಯ ಹಾಡಿದವರು: ಸುರೇಂದರ್, ಮಂಜುಳಾ
ಹೆಣ್ಣು : ಅಹ್ಹಹ್ಹಾ... (ಒಹೋಹ್ಹೋ ) ಅಹ್ಹಹ್ಹಾ... (ಒಹೋಹ್ಹೋ )
ಸಂಗೀತ: ಎಂ.ರಂಗ ರಾವ್ ಸಾಹಿತ್ಯ: ಗೀತಪ್ರಿಯ ಹಾಡಿದವರು: ಸುರೇಂದರ್, ಮಂಜುಳಾ
ಹೆಣ್ಣು : ಅಹ್ಹಹ್ಹಾ... (ಒಹೋಹ್ಹೋ ) ಅಹ್ಹಹ್ಹಾ... (ಒಹೋಹ್ಹೋ )
ಲಲಲಲ್ಲಲ್ಲಲ್ಲ (ಲಲಲಲ್ಲಲ್ಲಲ್ಲ ) ಲಲ್ಲಲ್ಲ (ಲಲ್ಲಲ್ಲ ) ಅಹ್ಹಹ್ಹಾ...
ಗಂಡು : ಹದವಾದ ಹದಿನೆಂಟು ವಯಸು ನಡೆವಾಗ ನೆಲ ಕಾಣದಂತ
ಗಂಡು : ಹದವಾದ ಹದಿನೆಂಟು ವಯಸು ನಡೆವಾಗ ನೆಲ ಕಾಣದಂತ
ಹೆಣ್ಣು : ಅದರಲ್ಲಿ ನೂರೆಂಟು ಕನಸೂ ನಮ್ಮನ್ನೂ ಬಿಡಲಾರದಂತ
ಗಂಡು : ಹದವಾದ ಹದಿನೆಂಟು ವಯಸು ಹೆಣ್ಣು : ನಡೆವಾಗ ನೆಲ ಕಾಣದಂತ
ಗಂಡು : ಅದರಲ್ಲಿ ನೂರೆಂಟು ಕನಸೂ ಹೆಣ್ಣು : ನಮ್ಮನ್ನೂ ಬಿಡಲಾರದಂತ
ಗಂಡು : ಈ ಹರೆಯ ಬಂದಾಗ ಏನೊಂದು ಸೊಗಸು
ಹೆಣ್ಣು : ಹೊಸ ಮೇಳ ಕಂಡಾಗ ಮಸಕಾದೆ ಮನಸು
ಗಂಡು : ಪ್ರತಿ ರಾತ್ರಿಯಲ್ಲೂ ನಿನ್ನ ಕನಸೇ ಬರಲೀ
ಹೆಣ್ಣು : ಪ್ರತಿ ಹಗಲಿನಲ್ಲೂ ನಿನ್ನ ನೆನಪೇ ಇರಲೀ
ಗಂಡು : ಪ್ರೇಮವೊಂದೇ (ಆಹ್ಹಾಹಾ ) ನಮ್ಮ ಮಂತ್ರ
ಹೆಣ್ಣು : ಬೇಡ ನಮಗೇ ಬೇರೆ ತಂತ್ರ
ಗಂಡು : ಇದೇ ಹೆಣ್ಣು : ಗುರಿ
ಗಂಡು : ಸರಿ ಹೆಣ್ಣು : ಸರಿ
ಇಬ್ಬರು : ಮೈಯ್ಯೆಲ್ಲಾ ಬಿಸಿ ಆರುವಂತ
ಗಂಡು : ಹದವಾದ ಹದಿನೆಂಟು ವಯಸು ಹೆಣ್ಣು : ನಡೆವಾಗ ನೆಲ ಕಾಣದಂತ
ಗಂಡು : ಅದರಲ್ಲಿ ನೂರೆಂಟು ಕನಸೂ ಹೆಣ್ಣು : ನಮ್ಮನ್ನೂ ಬಿಡಲಾರದಂತ
ಗಂಡು : ಏನನ್ನು ನೆನೆದು ಕೆಂಪಾಯ್ತು ಕೆನ್ನೇ
ಹೆಣ್ಣು : ಏಕಾಯ್ತು ಅದಕೆ ನಿನ್ನ ಕಣ್ಣ ಸನ್ನೇ
ಗಂಡು : ನೀ ನೋಡೋ ಕುಡಿನೋಟ ರಸದೂಟ ನನಗೇ
ಹೆಣ್ಣು : ನಾ ನೋಡೋ ಈ ನೋಟ ಸಂಕೇತ ನಿನಗೇ
ಗಂಡು : ಕಣ್ಣ ನೋಟ (ಅಹ್ಹಹ್ಹ ) ಆಡೋ ಆಟ
ಹೆಣ್ಣು : ಕಲಿಸುತಿರಲೂ ಹೊಸದೇ ಪಾಠ
ಗಂಡು : ಇದೇ ಹೆಣ್ಣು : ಸುಖ
ಗಂಡು : ಸುಖ ಹೆಣ್ಣು : ಸುಖ
ಇಬ್ಬರು : ಮನದಲ್ಲಿ ಮದವೇರುವಂತ
ಗಂಡು : ಹದವಾದ ಹದಿನೆಂಟು ವಯಸು ನಡೆವಾಗ ನೆಲ ಕಾಣದಂತ
ಹೆಣ್ಣು : ಅದರಲ್ಲಿ ನೂರೆಂಟು ಕನಸೂ ನಮ್ಮನ್ನೂ ಬಿಡಲಾರದಂತ
ಗಂಡು : ಹದವಾದ ಹದಿನೆಂಟು ವಯಸು ಹೆಣ್ಣು : ನಡೆವಾಗ ನೆಲ ಕಾಣದಂತ
ಗಂಡು : ಅದರಲ್ಲಿ ನೂರೆಂಟು ಕನಸೂ ಹೆಣ್ಣು : ನಮ್ಮನ್ನೂ ಬಿಡಲಾರದಂತ
ಗಂಡು : ಅಹ್ಹಹ್ಹಹ್ಹಾ (ಅಅ ) ಅಅ ಓ (ಹ್ಹಹ್ಹಹ್ ) ಹ್ಹಹ್ಹಹೋ (ಅಹ್ಹಹ್ಹಹ್ಹಹ್ಹಹ )
ಹ್ಹಹ್ಹಹೋ (ಅಹ್ಹಹ್ಹಹ್ಹಹ್ಹಹ )
--------------------------------------------------------------------------------------------------------------------------
ಮೌನಗೀತೆ (1986) - ಈ ದುಂಬಿ ಈ ಹೂವಿಗೆ ನನಗಿರಲು ಆ ನಂಬಿಕೆ
ಸಾಹಿತ್ಯ: ಗೀತಪ್ರಿಯ ಸಂಗೀತ: ಎಂ.ರಂಗ ರಾವ್ ಹಾಡಿದವರು: ಎಸ್.ಜಾನಕಿ, ಕೆ.ಜೆ.ಯೇಸುದಾಸ್
ಹೆಣ್ಣು : ಅ... (ಲಲಲ್ಲಲ್ಲಲಾ ) ಆ... (ಲಲಲ್ಲಲ್ಲಲಾ )
ಈ ಹೂವು ಈ ದುಂಬಿಗೆ
ಗಂಡು : ಈ ದುಂಬಿ ಈ ಹೂವಿಗೆ...
ಹೆಣ್ಣು : ನನಗಿರಲು ಆ ನಂಬಿಕೆ
ಗಂಡು : ಇನ್ನೇಕೆ ನಿನಗಂಜಿಕೆ... ಓಹೋಹೋ..
ಹೆಣ್ಣು : ಈ ಹೂವು ಈ ದುಂಬಿಗೆ
ಗಂಡು : ಈ ದುಂಬಿ ಈ ಹೂವಿಗೆ... ಹೇಹೇ
ಹೆಣ್ಣು : ನನಗಿರಲು ಆ ನಂಬಿಕೆ
ಗಂಡು : ಇನ್ನೇಕೆ ನಿನಗಂಜಿಕೆ...
ಗಂಡು : ತನುಮನದಿ ನನ್ನ ನೀ ತುಂಬಿ ಇರುವೆ
ಹೆಣ್ಣು : ನೀನಿರುವೆ ಅಲ್ಲಿ ಬಲು ದೂರದಲ್ಲಿ
ಗಂಡು : ನಾನಿರುವೆ ಇಲ್ಲಿ ಆನಂದದಲ್ಲಿ
ಹೆಣ್ಣು : ಎಲ್ಲಿದ್ದರೇನು ನೀನಿಲ್ಲೆ ಇರುವೆ
ನನ್ ಮನಸಿನಲ್ಲಿ ಹೊಂಗನಸಿನಲ್ಲಿ
ಗಂಡು : ಆಸೆಗಳ ಅಲೆಗಳಲಿ ಆಡುತಲಿ ನೀನಿರಲು
ಯಾವುದೊ ತಲ್ಲಣ ತಾಳವು ಹಾಕಿದೆ ಮನಸಿನ ತಳಮಳಕೆ
ಹೆಣ್ಣು : ಈ ಹೂವು ಈ ದುಂಬಿಗೆ
ಗಂಡು : ಈ ದುಂಬಿ ಈ ಹೂವಿಗೆ... ಹೇಹೇ
ಹೆಣ್ಣು : ನನಗಿರಲು ಆ ನಂಬಿಕೆ
ಗಂಡು : ಇನ್ನೇಕೆ ನಿನಗಂಜಿಕೆ...
ಹೆಣ್ಣು : ಅದಕಿಂತ ಬೇರೆ ಸಂತೋಷ ಬೇಕೆ
ಗಂಡು : ನಾ ಹಾಡುತಿರಲೆ ಈ ಬಯಕೆಯಲ್ಲೇ
ಹೆಣ್ಣು : ನಾ ಬಾಡುತಿರಲೆ ಈ ವಿರಹದಲ್ಲೇ
ಗಂಡು : ನನ್ನಾಸೆಯೆಲ್ಲ ನಿನ್ನಾಸೆಯಲ್ಲಿ
ಹೆಣ್ಣು : ನಾ ಮೀಯುತಿರುವೆ ನಿನ್ನ ನಪಿನಲ್ಲೆ
ಗಂಡು : ಕಾದಿಹೆ ನಾ ಸಂಗಮಕೆ
ಹೆಣ್ಣು : ಸಂಗಮದ ಸಂಭ್ರಮಕೆ
ಇಬ್ಬರು : ಇಬ್ಬರು ಒಂದೇ ನಾಂದಿಯ ಹಾಡುವ ಮುಂದಿನ ಬಾಳುವೆಗೆ
ಹೆಣ್ಣು : ಈ ಹೂವು ಈ ದುಂಬಿಗೆ
ಗಂಡು : ಈ ದುಂಬಿ ಈ ಹೂವಿಗೆ... ಹೇಹೇ
ಹೆಣ್ಣು : ನನಗಿರಲು ಆ ನಂಬಿಕೆ
ಗಂಡು : ಇನ್ನೇಕೆ ನಿನಗಂಜಿಕೆ... ಓಹೋಹೋ .... ಲಾಲಾಲ ಲಾಲಾಲ ಲಾಲಾಲ
-----------------------------------------------------------------------------------------------------------------------
ಮೌನಗೀತೆ (1986) - ನಗುವ ಹೂವು ನೀನು, ಅದರ ನೋವು ನಾನು
ಸಾಹಿತ್ಯ: ಗೀತಪ್ರಿಯ ಸಂಗೀತ: ಎಂ.ರಂಗ ರಾವ್ ಹಾಡಿದವರು: ಎಸ್.ಜಾನಕಿ
ಆಆಆ... ಆಆಆ....
ನಗುವ ಹೂವು ನೀನು, ಅದರ ನೋವು ನಾನು
ನಗುವ ಹೂವು ನೀನು, ಅದರ ನೋವು ನಾನು
ಹೊರಗೆ ಹಾಡದಂತ, ಒಳಗೆ ಕಾಡುವಂತ
ಕವಲು ಒಡೆದ ಪ್ರೀತಿಯ, ಮೌನಗೀತೆ ನಾನು
ಯಾವ ಜನ್ಮದ ಬಂಧವೊ, ಇದು ಎಂತಹ ಸಂಬಂಧವೊ
ಎಂದೋ ಮಾಡಿದ ಸಾಲವ, ಇಂದು ಪಡೆಯಲು ಬಂದೆಯ
ಯಾವ ಜನ್ಮದ ಬಂಧವೊ, ಇದು ಎಂತಹ ಸಂಬಂಧವೊ
ಎಂದೋ ಮಾಡಿದ ಸಾಲವ, ಇಂದು ಪಡೆಯಲು ಬಂದೆಯ
ನೀನು ಮಮತೆಯ ಮಾಲೆಯೊ, ನನ್ನ ಸುಡುವ ಜ್ವಾಲೆಯೊ
ನೀನು ಮಮತೆಯ ಮಾಲೆಯೊ, ನನ್ನ ಸುಡುವ ಜ್ವಾಲೆಯೊ
ನನಗೆ ದೇವನು ನೀಡಿದ, ಕುಡಿಯು ಈಗಿದೆ ಎಲ್ಲಿಯೊ
ನಗುವ ಹೂವು ನೀನು, ಅದರ ನೋವು ನಾನು
ಯಾರ ಯೋಗವು ಯಾರಿಗೊ, ಯಾರ ಭಾಗ್ಯವು ಯಾರಿಗೊ
ಯಾರು ಇಲ್ಲಿ ಯಾರಿಗೊ, ಯಾರ ಭಾರವು ಯಾರಿಗೊ
ಯಾರ ಯೋಗವು ಯಾರಿಗೊ, ಯಾರ ಭಾಗ್ಯವು ಯಾರಿಗೊ
ಯಾರು ಇಲ್ಲಿ ಯಾರಿಗೊ, ಯಾರ ಭಾರವು ಯಾರಿಗೊ
ಯಾವ ಮನಸಿನ ಆಸೆಯೊ, ಯಾವ ಆಸೆಯ ಪಾಶವೊ
ಯಾವ ಮನಸಿನ ಆಸೆಯೊ, ಯಾವ ಆಸೆಯ ಪಾಶವೊ
ದೂರ ಎಲ್ಲಿಗೊ ಕರೆಯುವ, ನನ್ನ ಕರುಳಿನ ಸೆಳೆತವೊ
ನಗುವ ಹೂವು ನೀನು, ಅದರ ನೋವು ನಾನು
ಹೊರಗೆ ಹಾಡದಂತ, ಒಳಗೆ ಕಾಡುವಂತ
ಕವಲು ಒಡೆದ ಪ್ರೀತಿಯ... ಮೌನಗೀತೆ ನಾನು,
ಮೌನಗೀತೆ ನಾನು, ಮೌನಗೀತೆ ನಾನು
--------------------------------------------------------------------------------------------------------------------------
ಮೌನಗೀತೆ (1986) -ತಲ್ಲಣಿಸದಿರು ಕಂಡ್ಯ ತಾಳು ಮನವೇ
ಸಾಹಿತ್ಯ: ಕನಕದಾಸರು ಸಂಗೀತ: ಎಂ.ರಂಗ ರಾವ್ ಹಾಡಿದವರು: ರಾಜ್‌ಕುಮಾರ್ ಭಾರತಿ
ತಲ್ಲಣಿಸದಿರು ಕಂಡ್ಯ ತಾಳು ಮನವೇ
ತಲ್ಲಣಿಸದಿರು ಕಂಡ್ಯ ತಾಳು ಮನವೇ
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ
ತಲ್ಲಣಿಸದಿರು ಕಂಡ್ಯ ತಾಳು ಮನವೇ..., ಮನವೇ..., ಮನವೇ...
ಬೆಟ್ಟದಾ ತುದಿಯಲ್ಲಿ ಹುಟ್ಟಿದ ವೃಕ್ಷಕ್ಕೆ ಕಟ್ಟೆಯನು ಕಟ್ಟಿ ನೀರೆರದವರು ಯಾರು
ಬೆಟ್ಟದಾ ತುದಿಯಲ್ಲಿ ಹುಟ್ಟಿದ ವೃಕ್ಷಕ್ಕೆ ಕಟ್ಟೆಯನು ಕಟ್ಟಿ ನೀರೆರದವರು ಯಾರು
ಹುಟ್ಟಿಸಿದಾ ಸ್ವಾಮಿ ತಾ ಹೊಣೆಗಾರನಾಗಿರಲು ಗಟ್ಯಾಗಿ ರಕ್ಷಿಪನು ಇದಕೆ ಸಂಶಯ ಬೇಡ
ತಲ್ಲಣಿಸದಿರು ಕಂಡ್ಯ ತಾಳು ಮನವೇ..., ಮನವೇ..., ಮನವೇ...
ಕಲ್ಲಿನಲಿ ಹುಟ್ಟಿದ ಕೂಗುವ ಕಪ್ಪೆಗೆ ಅಲ್ಲೆ ಆಹಾರವನು ನಿರ್ಮಿಸಿದ್ದವರಾರು
ಕಲ್ಲಿನಲಿ ಹುಟ್ಟಿದ ಕೂಗುವ ಕಪ್ಪೆಗೆ ಅಲ್ಲೆ ಆಹಾರವನು ನಿರ್ಮಿಸಿದ್ದವರಾರು
ಬಲ್ಲಿದನು ಕಾಗಿನೆಲೆ ಆದಿಕೇಶವರಾಯ... ಆಆಆ... ಆಆಆ...
ಬಲ್ಲಿದನು ಕಾಗಿನೆಲೆ ಆದಿಕೇಶವರಾಯ ಎಲ್ಲರನು ಸಲಹುವನು ಇದಕೆ ಸಂಶಯಬೇಡ
ತಲ್ಲಣಿಸದಿರು ಕಂಡ್ಯ ತಾಳು ಮನವೇ
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ
ತಲ್ಲಣಿಸದಿರು ಕಂಡ್ಯ ತಾಳು ಮನವೇ..., ಮನವೇ..., ಮನವೇ...
--------------------------------------------------------------------------------------------------------------------------
ಮೌನಗೀತೆ (1986) - ತಾವರೆ ಕಣ್ಣವಳೇ... ಕೆಂದಾವರೆ ಮುಖದವಳೇ...
ಸಾಹಿತ್ಯ: ಗೀತಪ್ರಿಯ ಸಂಗೀತ: ಎಂ.ರಂಗ ರಾವ್ ಹಾಡಿದವರು: ಎಸ್.ಜಾನಕಿ, ಕೆ.ಜೆ.ಯೇಸುದಾಸ್
ಗಂಡು : ಆ.. ಆಹ್ಹಾಹಾ ... ಹೇ... ಹೇಹೇಹೇ (ಆ.. ಆಹ್ಹಾಹಾ ...ಆ.. ಆಹ್ಹಾಹಾ ... )
ತಾವರೆ ಕಣ್ಣವಳೇ... ಕೆಂದಾವರೆ ಮುಖದವಳೇ...
ಮರೆಯೆನು ನಾನು, ಎಂದಿಗು ನಿನ್ನ
ಮರೆಯೆನು ನಾನು, ಎಂದಿಗು ನಿನ್ನ ಮೋಹಕ ನಗೆಯವಳೇ
(ಹೂಂಹುಂ ) ಹೂಂಹುಂ (ಹೂಂಹುಂ)
ಹೆಣ್ಣು : ನಲಿಸಲು ಬಂದವನೇ, ಈ ಒಲವನು ತಂದವನೇ
ಮೆತ್ತಗೆ ಬಂದು, ಮನದಲಿ ನಿಂದು
ಮೆತ್ತಗೆ ಬಂದು, ಮನದಲಿ ನಿಂದು ಹತ್ತಿರ ಸೆಳೆದವನೆ
(ಹೂಂಹುಂ ) ಹೂಂಹುಂ (ಹೂಂಹುಂ)
ಹೆಣ್ಣು: ಆ ಯೋಚನೆ ನಿನಗೀಗೆತಕೆ ಈ ನಾಚಿಕೆ ಬರಲಿ ಬಾಳಿಕೆ
ಗಂಡು : ಯೋಚನೆ ಸಾಕಿನ್ನು ಸೂಚನೆ ಬೇಕಿನ್ನು
ಹೆಣ್ಣು : ಆಡುತ ಹೀಗೇಕೆ ಕಾಡುವೆ ನನ್ನನ್ನು
ಇಬ್ಬರು : ನಮ್ಮಲ್ಲೀಗ ನಾವೇ ಇಲ್ಲ ನೊಡುವರಾರು ಇಲ್ಲಿಲ್ಲ
ಗಂಡು : ತಾವರೆ ಕಣ್ಣವಳೇ... ಕೆಂದಾವರೆ ಮುಖದವಳೇ...
ಗಂಡು : ನೀ ಹಾಕಲು ಮನಕೇ ಮುತ್ತಿಗೆ.. ನಾ ಕಾದಿಹೆ ಸವಿಯೋ ಮುತ್ತಿಗೆ
ಹೆಣ್ಣು : ಈ ಆಸೆಯು ಬರುವಾ ಹೊತ್ತಿಗೆ... ಈ ನಿನ್ನಲಿ ನಿನ್ನೀ ಮತ್ತಿಗೆ
ಗಂಡು : ಹೂವಲ್ಲಿ ಜೇನಂತೆ ನಿನ್ನಲ್ಲಿ ನಾನಾಗಿ
ಹೆಣ್ಣು : ಎಂದೆಂದು ಹೀಗೇನೆ ಆಡೋಣ ಹಾಯಾಗಿ
ಇಬ್ಬರು : ಸೋಲು ಗೆಲುವು ಏನೇ ಬರಲಿ ಬಾಳುವ ನಾವು ಒಂದಾಗಿ
ಗಂಡು : ತಾವರೆ ಕಣ್ಣವಳೇ... ಕೆಂದಾವರೆ ಮುಖದವಳೇ...
ಮರೆಯೆನು ನಾನು, ಎಂದಿಗು ನಿನ್ನ
ಮರೆಯೆನು ನಾನು, ಎಂದಿಗು ನಿನ್ನ ಮೋಹಕ ನಗೆಯವಳೇ
(ಹೂಂಹುಂ ) ಹೂಂಹುಂ (ಹೂಂಹುಂ) ಹೂಂಹುಂ (ಹೂಂಹುಂ)
--------------------------------------------------------------------------------------------------------------------------
--------------------------------------------------------------------------------------------------------------------------
No comments:
Post a Comment