307. ತಿರುಗು ಬಾಣ (೧೯೮೨)


ತಿರುಗು ಬಾಣ ಚಿತ್ರದ ಹಾಡುಗಳು 
  1. ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ
  2. ಸ್ನೇಹಕ್ಕೆ ಒಂದೇ ಮಾತು  ಹೃದಯಗಳು ಆಡೋ ಮಾತು
  3. ಅಂದದ ಚಂದದ ಗಿಣಿಯೇ ಸಿಹಿ ಕನ್ನಡದ ಇಂಪಿನ ನುಡಿಯೇ
ತಿರುಗು ಬಾಣ (೧೯೮೨)....ಇದೇ ನಾಡು ಇದೇ ಭಾಷೆ
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ಸತ್ಯಂ ಗಾಯನ : ಡಾ.ಎಸ್.ಪಿ.ಬಿ, ಕೋರಸ್

ಕೋರಸ್ : ಲಾಲಾಲ ಲಲ್ಲಲಾ ಲಾಲ ಲಾಲಾಲ ಲಲ್ಲಲಾ ಲಾಲ
ಗಂಡು : ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ
            ಎಲ್ಲೇ ಇರಲಿ ಹೇಗೇ ಇರಲಿ ಕನ್ನಡವೆ ನಮ್ಮ ಉಸಿರಲ್ಲಿ
           ಇದೇ ನಾಡು (ಲಾಲಾ )ಇದೇ ಭಾಷೆ (ಲಾಲಾ )ಎಂದೆಂದೂ ನನ್ನದಾಗಿರಲಿ
           ಎಲ್ಲೇ ಇರಲಿ (ಲಾಲಾ ) ಹೇಗೇ ಇರಲಿ (ಲಾಲಾ ) ಕನ್ನಡವೆ ನಮ್ಮ ಉಸಿರಲ್ಲಿ
          ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ

ಕೋರಸ್ : ಲಾಲಾಲ ಲಲ್ಲಲಲಾ ಲಾಲಾಲ ಲಲ್ಲಲ ಲಲ್ಲಲಲಾಲ
ಗಂಡು : ಕರುನಾಡು ಸ್ವರ್ಗದ ಸೀಮೆ ಕಾವೇರಿ ಹುಟ್ಟಿದ ನಾಡು
ಕೋರಸ್ :  ಲಾಲಾಲ ಲಲ್ಲಲ ಲಲ್ಲಲಲಾಲ
ಗಂಡು : ಕಲ್ಲಲ್ಲಿ ಕಲೆಯನು ಕಂಡ ಬೇಲೂರ ಶಿಲ್ಪದ ಬೀಡು ಬಸವೇಶ್ವರ ರನ್ನ ಪಂಪರ ಕವಿವಾಣಿಯ ನಾಡು
          ಇದೇ ನಾಡು (ಲಾಲಾ )ಇದೇ ಭಾಷೆ (ಲಾಲಾ )ಎಂದೆಂದೂ ನನ್ನದಾಗಿರಲಿ

ಕೋರಸ್ : ಲಾಲಾಲಲ ಲಾಲಾಲಲ ಲಾಲಾಲಲ ಲಾಲಾಲ ಲಾಲಾಲಲ ಲಲಾಲ
ಗಂಡು : ಚಾಮುಂಡಿ ರಕ್ಷೆಯು ನಮಗೆ ಗೊಮ್ಮಟೇಶ ಕಾವಲು ಇಲ್ಲಿ
           ಶೃoಗೇರಿ ಶಾರದೆ ಲೀಲೆ ರಸತುಂಗೆಯಾಗಿದೆ ಇಲ್ಲಿ
           ವಿಶ್ವಖ್ಯಾತಿಯ ವಿಶ್ವೇಶ್ವರಯ್ಯ ಜನಿಸಿದ ಈ ನಾಡು
          ಇದೇ ನಾಡು (ಲಾಲಾ )ಇದೇ ಭಾಷೆ (ಲಾಲಾ )ಎಂದೆಂದೂ ನನ್ನದಾಗಿರಲಿ

ಕೋರಸ್ : ಲಾಲಾಲ ಲಲ್ಲಲಲಾ ಲಾಲಾಲ ಲಲ್ಲಲ ಲಲ್ಲಲಲಾಲ
ಗಂಡು : ಎಳೇಳು ಜನ್ಮವೇ ಬರಲಿ ಈ ಮಣ್ಣಲಿ ನಾನು ಹುಟ್ಟುವೆ
ಕೋರಸ್ : ಲಾಲಾಲ ಲಲ್ಲಲ ಲಲ್ಲಲಲಾಲ
ಗಂಡು :  ಏನೇನು ಕಷ್ಟವೇ ಇರಲಿ ಸಿರಿಗನ್ನಡಕಾಗೆ ದುಡಿಯುವೆ
           ತನು ಕನ್ನಡ ನುಡಿ ಕನ್ನಡ ಮನ ಕನ್ನಡವಾಗಿರಲಿ
           ಇದೇ ನಾಡು (ಲಾಲಾ )ಇದೇ ಭಾಷೆ (ಲಾಲಾ )ಎಂದೆಂದೂ ನನ್ನದಾಗಿರಲಿ
           ಎಲ್ಲೇ ಇರಲಿ (ಲಾಲಾ ) ಹೇಗೇ ಇರಲಿ (ಲಾಲಾ ) ಕನ್ನಡವೆ ನಮ್ಮ ಉಸಿರಲ್ಲಿ
          ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ
---------------------------------------------------------------------------------------------------------------------

ತಿರುಗುಬಾಣ (1983) - ಸ್ನೇಹಕ್ಕೆ ಒಂದೇ ಮಾತು  ಹೃದಯಗಳು ಆಡೋ ಮಾತು
ಸಂಗೀತ: ಸತ್ಯಂ, ಸಾಹಿತ್ಯ: ಆರ್.ಎನ್.ಜಯಗೋಪಾಲ, ಹಾಡಿದವರು: ಎಸ್.ಪಿ.ಬಿ., ಎಸ್.ಪಿ.ಶೈಲಜಾ


ಹೆಣ್ಣು : ಸ್ನೇಹಕ್ಕೆ ಒಂದೇ ಮಾತು  ಹೃದಯಗಳು ಆಡೋ ಮಾತು ಈ ಮೌನ ಇನ್ನು ಏತಕೇ
           ಸೇರು ಬಾ, ಆಡು ಬಾ, ಹಾಡು ಬಾ
           ಈ ಸಂಜೆ ಹೊತ್ತಲ್ಲಿ, ನನ್ನಲ್ಲಿ ನಿನ್ನಲ್ಲಿ, ಮಾತೆಲ್ಲ ಕಣ್ಣಲ್ಲಿ.. ಹೇ..ಹೇ..ಹೇ..
          ಸ್ನೇಹಕ್ಕೆ ಒಂದೇ ಮಾತು  ಹೃದಯಗಳು ಆಡೋ ಮಾತು
          ಈ ಮೌನ ಇನ್ನು ಏತಕೇ  ಸೇರು ಬಾ, ಆಡು ಬಾ, ಹಾಡು ಬಾ

ಗಂಡು : ಮನತಣಿಯಲು ಸಂಗೀತ ಬೇಕು ಜೊತೆ ಕುಣಿಯಲು ಸಂಗಾತಿ ಬೇಕು
            ಮೈ ಮರೆಯಲು ಸಂತೋಷ ಬೇಕು ಒಡನಾಟದ ಉಲ್ಲಾಸ ಬೇಕು
            ಮನಸುಗಳ ಮಿಲನದಲಿ ಹೊಸ ವೇಗ ತುಂಬಿರಲಿ
            ಸ್ನೇಹಕ್ಕೆ ಒಂದೇ ಮಾತು  ( ಆ) ಹೃದಯಗಳು ಆಡೋ ಮಾತು (ಹೇ)
            ಈ ಮೌನ ಇನ್ನು ಏತಕೇ  ಸೇರು ಬಾ, ಆಡು ಬಾ, ಹಾಡು ಬಾ

ಹೆಣ್ಣು : ದಾರಿಗಳು ಸೇರೋದು ಒಮ್ಮೆ ಅಗಲಿಕೆಯು ನೋಡಲ್ಲಿ ಮುಂದೇ
ಗಂಡು : ಜೊತೆಯಿರುವ ಕ್ಷಣಕಾಲ ಹಾಡು ಉಳಿಯುವುದು ನೆನಪೊಂದೆ ಮುಂದೇ
ಇಬ್ಬರು : ಜೀವನವೇ ಸುಖಪಡಲು ಯೌವನವೆ ನಗೆಗಡಲು
ಹೆಣ್ಣು : ಸ್ನೇಹಕ್ಕೆ ಒಂದೇ ಮಾತು  (ಅರೆರೆರೆರೇ)  ಹೃದಯಗಳು ಆಡೋ ಮಾತು (ಅರೆರೆರೆರೇ)
           ಈ ಮೌನ ಇನ್ನು ಏತಕೇ  ಸೇರು ಬಾ ಆಡು ಬಾ ಹಾಡು ಬಾ
ಗಂಡು : ಈ ಸಂಜೆ ಹೊತ್ತಲ್ಲಿ, ನನ್ನಲ್ಲಿ ನಿನ್ನಲ್ಲಿ, ಮಾತೆಲ್ಲ ಕಣ್ಣಲ್ಲಿ ಅಹ್ಹಹ್ಹ ಅಹ್ಹಹ್ಹ
ಇಬ್ಬರು : ಸ್ನೇಹಕ್ಕೆ ಒಂದೇ ಮಾತು  ಹೃದಯಗಳು ಆಡೋ ಮಾತು
             ಈ ಮೌನ ಇನ್ನು ಏತಕೇ  ಸೇರು ಬಾ ಆಡು ಬಾ ಹಾಡು ಬಾ
------------------------------------------------------------------------------------------------------------------------

ತಿರುಗುಬಾಣ (1983) - ಅಂದದ ಚಂದದ ಗಿಣಿಯೇ ಸಿಹಿ ಕನ್ನಡದ ಇಂಪಿನ ನುಡಿಯೇ
ಸಾಹಿತ್ಯ: ಆರ್.ಎನ್.ಜಯಗೋಪಾಲ್   ಸಂಗೀತ: ಸತ್ಯಂ   ಹಾಡಿದವರು: ಎಸ್.ಪಿ.ಬಿ., ಪಿ.ಸುಶೀಲಾ 

ಹೆಣ್ಣು : ಅಂದದ ಚಂದದ ಗಿಣಿಯೇ ಸಿಹಿ ಕನ್ನಡದ ಇಂಪಿನ ನುಡಿಯೇ
          ನಗುವಿನ ಚಿನ್ನದ ಗಣಿಯೆ ನಮ್ಮ ಬಾಳಿನ ಗಂಧದ ಗುಡಿಯೇ
          ಅಂದದ ಚಂದದ ಗಿಣಿಯೇ ಸಿಹಿ ಕನ್ನಡದ ಇಂಪಿನ ನುಡಿಯೇ
          ನಗುವಿನ ಚಿನ್ನದ ಗಣಿಯೆ ನಮ್ಮ ಬಾಳಿನ ಗಂಧದ ಗುಡಿಯೇ
          ಚಿನ್ನ ನಿನ್ನ ಕಣ್ಣಲ್ಲಿನ್ನು ಕಣ್ಣಿರೇತಕೆ ತಾಯಿ ತಂದೆ ಜೀವ ನೀನೆ ದೈವ ತಂದ ಭಾಗ್ಯ ನೀನೇ ....
          ಆಆ ಆಆ... ಆಆ ಆಆ
ಗಂಡು : ಆಆ ಆಆ... ಆಆ ಆಆ  ಅರೆರೇ ಅಹ್ಹಹ್ಹಹ್ಹ  ಇಲ್ನೋಡು ಇಲ್ನೋಡು (ಅಹ್ಹಹ್ಹಹ್ಹ )

ಹೆಣ್ಣು : ಮಾತೆಯ ಮಮತೆಯ ಹೂಬನದಲ್ಲಿ ಹೂವಿನ ತೊಟ್ಟಿಲ ಹಾಸಿಹುದಿಲ್ಲಿ
          ತಂಗಾಳಿ ಮೆಲ್ಲಗೆ ಜೋಗುಳ ಹಾಡೇ ಕಂಗಳ ರೆಪ್ಪೆಗೆ ಚುಂಬನ ನೀಡೆ
          ತೂಗಲು ನಾ ನಿನ್ನ ಮಲಗೋ ಚಿನ್ನ ಕನಸಿನ ಹೊಂಬಣ್ಣ ತುಂಬಲಿ ಕಣ್ಣ
          ಉಸಿರೇ ಹಸಿರೇ ಅಳದಿರು ನೀ
ಗಂಡು : ತಾಯಿ ತಂದೆ ಜೀವ ನೀನೆ ಆಹ್ಹಾ.. ದೈವ ತಂದ ಭಾಗ್ಯ ನೀನೇ .... 

ಗಂಡು : ನನ್ ಚಿನ್ನ ನನ್ ಬಂಗಾರ ನೋಡಮ್ಮಾ ಇಲ್ಲಿ ನಗು ಮಗು ಅಹ್ಹಹ್ಹಾ (ಅಹ್ಹಹ್ಹಾ) 
            ಚಂದ ಮಾಮ ಬಂಗಾರ ತೇರಾಗಿ ಬರಲಿ ತಾರೆಗಳ ಕುದುರೆಯ ಜೋಡಿಯ ತರಲಿ
            ನಿದಿರೆಯ ಹೊಸಲೋಕ ಹೂಬನದಲ್ಲಿ ಮೋಡಗಳ ಬೆಳ್ಳಿಯ ದಾರಿಗಳಲ್ಲಿ
            ಬರುತಿರೆ ನೀ ಕುಳಿತು ವೈಭವದಲ್ಲಿ ನಗುತಿರೆ ನೀನಾಗ ಆನಂದದಲ್ಲಿ
            ನಲಿವೆ ಮೆರೆವೆ ಮೈ ಮರೆವೆ ತಾಯಿ ತಂದೆ ಜೀವ ನೀನೆ  ದೈವ ತಂದ ಆಆಆ.. ಭಾಗ್ಯ ನೀನೇ .... 
ಹೆಣ್ಣು : ಅಂದದ ಚಂದದ ಗಿಣಿಯೇ ಸಿಹಿ ಕನ್ನಡದ ಇಂಪಿನ ನುಡಿಯೇ
ಗಂಡು : ನಗುವಿನ ಚಿನ್ನದ ಗಣಿಯೆ ನಮ್ಮ ಬಾಳಿನ ಗಂಧದ ಗುಡಿಯೇಅಹ್ಹಹಹಾ
ಹೆಣ್ಣು :  ಚಿನ್ನ ನಿನ್ನ ಕಣ್ಣಲ್ಲಿನ್ನು ಕಣ್ಣಿರೇತಕೆ
ಇಬ್ಬರು : ತಾಯಿ ತಂದೆ ಜೀವ ನೀನೆ  ದೈವ ತಂದ ಭಾಗ್ಯ ನೀನೇ ....
--------------------------------------------------------------------------------------------------------------------------

No comments:

Post a Comment