309. ಹಿಮಪಾತ (೧೯೯೫)



ಹಿಮಪಾತ ಚಿತ್ರದ ಹಾಡುಗಳು 
  1. ಈ ಕಾಂಚಾಣ ಗಂಗಾ ನಮದು 
  2. ತೆರೆಯೋ ಮಂಜಿನ 
  3. ಸುಂಧರೆ ವಸುಂಧರೆ 
  4. ದೂರದಿಂದ ಬಂದೆ 
  5. ಲವ್ ಬ್ಲಡಿ ಲವ್ 
ಹಿಮಪಾತ (೧೯೯೫) - ಈ ಕಾಂಚನಗಂಗ ನಮದು
ಸಂಗೀತ: ಹಂಸಲೇಖ, ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ, ಎಸ್.ಜಾನಕಿ

ಈ ಕಾಂಚನಗಂಗ ನಮದು ಈ ಗೌರಿಶಿಖರ ನಮದು 
ಯುಗಯುಗದ ಪ್ರೇಮವಿದು  ಶಿವಗಂಗ ಗಾನವಿದು
ಆಕಾಶ ಗಂಗೆಗೆ ಆನಂದ ಕಣ್ಣೀರೊ

ವಯ್ಯಾರಿ ಗಂಗೆಗೆ ಸಿಂಗಾರಿ ಗಂಗೆಗೆ
ಅನುರಾಗ ಪನ್ನೀರೊ
ಹೇಮಂತ ಗಿರಿಯಲ್ಲಿ ಸೌಂದರ್ಯ ಗುಡಿಯಲ್ಲಿ
ಮಂಜಿಂದ ನೀರಾಗೊ ನೀರಿಂದ ಮಂಜಾಗೊ
ಏಕಾಂತ ಸೇವೆಯಲಿ
ಮಹಾ ಆಲಯ ಮನೋ ಆಲಯ ||೨||

ಮಹಾ ಸಂಭ್ರಮ ಮನೋ ಸಂಭ್ರಮ
ಮಹಾ ಸಂಗಮ ಮನೋ ಸಂಗಮ
ನುಡಿದಂತೆ ನುಡಿಯೋನು ಮನಸನ್ನು ತೆರೆಸೋನು
ಕೈಲಾಸ ಗಿರಿರಾಯ ಹಾಲಂಥ ಮಹರಾಯ
ನಮ್ಮನ್ನು ಬೆರೆಸೋನು
ಒಂದೊಂದು ದನಿಯಲ್ಲು ಒಂದೊಂದು ಹನಿಯಲ್ಲು
ಅನುರಾಗ ಸಂಚಾರ ರೋಮಾಂಚ ತಂದಾಗ
ಮನಸೆಲ್ಲ ಶೃಂಗಾರ
ಮನೋ ಕಂಪನ ಮಹಾ ಕಂಪನ ||೨||
ಮನೋ ಬಂಧನ ಮಹಾ ಬಂಧನ
ಸಖಿ ಚುಂಬನ ಸುಖಿ ಚುಂಬನ
--------------------------------------------------------------------------------------------------------------------

ಹಿಮಪಾತ (೧೯೯೫) - ಸುಂದರೆ, ವಸುಂಧರೆ
ಸಂಗೀತ: ಹಂಸಲೇಖ, ಸಾಹಿತ್ಯ: ಹಂಸಲೇಖ, ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ, ಕೆ.ಎಸ್.ಚಿತ್ರ

ಓ ಸುಂದರೆ, ವಸುಂಧರೆ ಮನೋಹರೆತುಂಬಿದ ಕಲೆಯೆ ನಿನ್ನದು  ನೋಡಲು ಕಣ್ಣುಗಳೇ ಸಾಲದು
ಅನುರಾಗ ತುಂಬಿ ಬಂತು ಬಂಗಾರಿ ಭೂಮಿಲಿ
ಅಭಿಮಾನ ತುಂಬಿ ಬಂತು ಸಿಂಗಾರಿ ತವರಲ್ಲಿ
ಬಂಗಾರಿ ನೀನು ಸಿಂಗಾರಿ

ಅಲ್ಲಿ ನೋಡು ಪ್ರೀತಿ, ಇಲ್ಲಿ ನೋಡು ಪ್ರೀತಿ
ಕಲ್ಲ ಮೇಲೆ ನೋಡು ಕಾವ್ಯ ಧಾರೆಯ
ಅಲ್ಲಿ ನೋಡು ಭಕ್ತಿ ಇಲ್ಲಿ ನೋಡು ರಕ್ತಿ
ಕಲ್ಲ ಮೇಲೆ ನೋಡು ಭಾವ ಭಾಷೆಯ
ತಲ್ಲನ ತಲ್ಲಣ, ತಲ್ಲಣ ಥರ ಥರ ತಲ್ಲಣ
ಈ ಶಿಲ್ಪ ನೋಡೊ ಹೆಣ್ಣಲೇನೊ ತಲ್ಲಣ
ಅನುರಾಗ ತುಂಬಿ ಬಂತು ಬಂಗಾರಿ ಭೂಮಿಲಿ
ಅಭಿಮಾನ ತುಂಬಿ ಬಂತು ಸಿಂಗಾರಿ ತವರಲ್ಲಿ
ಬಂಗಾರಿ ನೀನು ಸಿಂಗಾರಿ

ರಾಶಿ ರಾಶಿ ಹೂವ ನೋಡುವಾಗ ಜೀವ
ಸೂರ್ಯಕಾಂತಿಯಾಗಿ ತಾನು ಅರಳಿದೆ
ಬಂತು ನೋಡು ಬಂತು ದುಂಬಿ ದಂಡು ಬಂತು
ನಮ್ಮ ಜೀವ ದುಂಬಿ ಗಾನ ಪಾಡಿದೆ
ಹಂಬಲ ಹಂಬಲ, ಹಂಬಲ ಬರೆಯುವ ಹಂಬಲ
ಈ ಭೂಮಿ ಮೇಲೆ ನಮ್ಮ ಪ್ರೇಮ ನಿರ್ಮಲ
ಅನುರಾಗ ತುಂಬಿ ಬಂತು ಬಂಗಾರಿ ಭೂಮಿಲಿ
ಅಭಿಮಾನ ತುಂಬಿ ಬಂತು ಸಿಂಗಾರಿ ತವರಲ್ಲಿ
ಬಂಗಾರಿ ನೀನು ಸಿಂಗಾರಿ
------------------------------------------------------------------------------------------------------------------------

ಹಿಮಪಾತ (೧೯೯೫) - ತೆರೆಯೋ ಮಂಜಿನ ತೆರೆಯಾ
ಸಂಗೀತ: ಹಂಸಲೇಖ, ಸಾಹಿತ್ಯ: ಹಂಸಲೇಖ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ

ತೆರೆಯೊ ಮಂಜಿನ ತೆರೆಯಾ ಉದಯ ಓ ಉದಯ
ತೆರೆಯೊ ಮಂಜಿನ ತೆರೆಯಾ  ಮಂಕಾಗಿದೆ ಹೃದಯ
ಅರಳೊ ಹೂಮೇಲೆ ಸುರಿದಿದೆ ಹಿಮಪಾತ
ನುಡಿಸೊ ನನ್ನಿಂದ ಸುಖದ ಸಂಗೀತ
ತೆರೆಯೊ ಮಂಜಿನ ತೆರೆಯಾ ಉದಯ ಓ ಉದಯ
ತೆರೆಯೊ ಮಂಜಿನ ತೆರೆಯಾ  ಮಂಕಾಗಿದೆ ಹೃದಯ

ಬೊಂಬೆ ಮಾಡೊ ಕೈಗೆ ಬಣ್ಣ ಸಿಗಲಿಲ್ಲ
ಪ್ರೀತಿ ಕೊಡುವ ಮನೆಗೆ ಬೆಳಕೆ ಬರಲಿಲ್ಲ
ತೆರೆಯೊ ಮಂಜಿನ ತೆರೆಯಾ  ಉದಯ ಓ ಉದಯ
ತೆರೆಯೊ ಮಂಜಿನ ತೆರೆಯಾ ಮಂಕಾಗಿದೆ ಹೃದಯ
ಯಬ್ಬ ರಬ್ಬ ರಬ್ಬ ಒರಿಯಾ ಒರಿಯಾ ಯಬ್ಬ ರಬ್ಬ ರಬ್ಬ ಒರಿಯಾ ಒರಿಯಾ
ಯಬ್ಬ ರಬ್ಬ ರಬ್ಬ ಒರಿಯಾ ಒರಿಯಾ  ಯಬ್ಬ ರಬ್ಬ ರಬ್ಬ ಒರಿಯಾ ಒರಿಯಾ
ಯಬ್ಬ ರಬ್ಬ ರಬ್ಬ ಒರಿಯಾ ಒರಿಯಾ  ಯಬ್ಬ ರಬ್ಬ ರಬ್ಬ ಒರಿಯಾ ಒರಿಯಾ
ಮಮಮ ಮಾ ಬಬಬ ಬಾಬಬಾ ಬಾಬಬಾ  
ಮಮಮ ಮಾ ಬಬಬ ಬಾಬಬಾ ಬಾಬಬಾ ಓ ಓ ಓ ಓ
ಬಾರೋ ಗೆಳಯ ಸೂರ್ಯ ನೀನು ನನ್ನಂತೆ
ಬೆಳಕೆ ಕೊಟ್ಟರು ನಿನ್ನ  ಹಿಂದೆ ಇರುಳಂತೆ
ತೆರೆಯೊ ಮಂಜಿನ ತೆರೆಯಾ ಉದಯ ಓ ಉದಯ
ತೆರೆಯೊ ಮಂಜಿನ ತೆರೆಯಾ  ಮಂಕಾಗಿದೆ ಹೃದಯ
ಅರಳೊ ಹೂಮೇಲೆ ಸುರಿದಿದೆ ಹಿಮಪಾತ
ನುಡಿಸೊ ನನ್ನಿಂದ ಸುಖದ ಸಂಗೀತ
ತೆರೆಯೊ ಮಂಜಿನ ತೆರೆಯಾ ಉದಯ ಓ ಉದಯ
ತೆರೆಯೊ ಮಂಜಿನ ತೆರೆಯಾ ಮಂಕಾಗಿದೆ ಹೃದಯ
-----------------------------------------------------------------------------------------------------------------------

ಹಿಮಪಾತ (೧೯೯೫) - ದೂರದಿಂದ ಬಂದೆ 
ಸಂಗೀತ: ಹಂಸಲೇಖ, ಸಾಹಿತ್ಯ: ಹಂಸಲೇಖ ಗಾಯನ: ಎಸ್.ಜಾನಕೀ 

ದೂರದಿಂದ ಬಂದೆ ನಿನ್ನ ನೋಡಲೆಂದೇ
ಮೋಡ ಮುಚ್ಚಿತೆ ನಿನಗೆ ಚಂದಿರ
ತಂಗಾಳಿಯೇ ಬೇಗ ಬಾ ಮೋಡ ಓಡಿಸು
ದೂರದಿಂದ ಬಂದೆ ಪ್ರೀತಿ ತುಂಬಿನ ತಂದೆ
ಬೇಡವಾಯಿತೇ ನಿನಗೆ ಚಂದಿರ
ಮೇಘವೇ ಹೋಗಿ ಬಾ ನನ್ನ ಜ್ಞಾಪಿಸು
ದೂರದಿಂದ ಬಂದೆ ನಿನ್ನ ನೋಡಲೆಂದೇ
ಮೋಡ ಮುಚ್ಚಿತೆ ನಿನಗೆ ಚಂದಿರ
ತಂಗಾಳಿಯೇ ಬೇಗ ಬಾ ಮೋಡ ಓಡಿಸು

ನಾನೆಲ್ಲಿ ತಪ್ಪಿರುವೆ ಇಲ್ಲಿ ನೀನೇಕೆ ಹೀಗಿರುವೆ
ನಿಂದಿಸು ಬಾ ನೋವು ನಂದಿಸು ಬಾ
ನೋಡಿದ್ದು ಸುಳ್ಳಾಗಲಿ ಇಲ್ಲಿ ಕೇಳಿದ್ದು ಕಥೆಯಾಗಲಿ
ನಂಬಿಸು ಬಾ ಪ್ರೀತಿ ತುಂಬಿಸು ಬಾ
ಕಾಯುವ ಮನಸಿದೆ ಸೇರಲು ತಪಿಸಿದೆ
ದೂರದಿಂದ ಬಂದೆ ನಿನ್ನ ನೋಡಲೆಂದೇ
ಮೋಡ ಮುಚ್ಚಿತೆ ನಿನಗೆ ಚಂದಿರ
ತಂಗಾಳಿಯೇ ಬೇಗ ಬಾ ಮೋಡ ಓಡಿಸು
ದೂರದಿಂದ ಬಂದೆ ನಿನ್ನ ನೋಡಲೆಂದೇ
ಮೋಡ ಮುಚ್ಚಿತೆ ನಿನಗೆ ಚಂದಿರ

ತಾವರೆ ಎಲೆ ಮೇಲೆ ನಿಂತ ನೀರಿನ ಮುತ್ತಂತಿರು
ಜಾರಿದರು ಯಾರ ಸೇರದಿದು
ಹೆಜ್ಜೆಯು ಕಾಣಿಸದೆ ಗೆಜ್ಜೆ ನಾದವ ಕೇಳಿಸದೇ
ಸಾಕ್ಷಿ ಇದೆ ಮನ ಸಾಕ್ಷಿ ಇದೆ
ಆಸೆಗೆ ಬಲವಿದೆ ಪ್ರೀತಿಗೆ ಛಲವಿದೆ
ದೂರದಿಂದ ಬಂದೆ ನಿನ್ನ ನೋಡಲೆಂದೇ
ಮೋಡ ಮುಚ್ಚಿತೆ ನಿನಗೆ ಚಂದಿರ
ತಂಗಾಳಿಯೇ ಬೇಗ ಬಾ ಮೋಡ ಓಡಿಸು 

ಆಸೆಯಿಂದ ಬಂದೆ ನಿನ್ನ ಸೇರಲೆಂದೇ
ದಾರಿ ಮುಚ್ಚಿತೆ ನನಗೆ ಅಂಬರ
ತಂಬೆಳಕೆ ಬೇಗ ಬಾ ದಾರಿ ತೋರಿಸು
ದೂರದಿಂದ ಬಂದೆ ನಿನ್ನ ನೋಡಲೆಂದೇ
ಮೋಡ ಮುಚ್ಚಿತೆ ನಿನಗೆ ಚಂದಿರ
ತಂಗಾಳಿಯೇ ಬೇಗ ಬಾ ಮೋಡ ಓಡಿಸು
-------------------------------------------------------------------------------------------------------------------------

ಹಿಮಪಾತ (೧೯೯೫) - ಲವ್ ಬ್ಲಡಿ ಲವ್  ಹಯ್ಯಾ 
ಸಂಗೀತ: ಹಂಸಲೇಖ, ಸಾಹಿತ್ಯ: ಹಂಸಲೇಖ  ಗಾಯನ: ರಾಜೇಶ್ ಕೃಷ್ಣನ, ಚಿತ್ರಾ, ಮಂಜುಳಾ ಗುರುರಾಜ 

ಲವ್ ಬ್ಲಡಿ ಲವ್  ಹಯ್ಯಾ ಹಯ್ಯಾ ಹಯ್ಯಾ ಹಯ್ಯಾ
ಹಯ್ಯಾ ಹಯ್ಯಾ ಹಯ್ಯಾ ಹಯ್ಯಾ
ಹಯ್ಯಾ ಹಯ್ಯಾ ಹಯ್ಯಾ ಹಯ್ಯಾ
ಲವ್ ಬ್ಲಡಿ ಲವ್  ಹಯ್ಯಾ ಹಯ್ಯಾ ಪ್ರೆಟಿ ಲವ್
ಲವ್ ಬ್ಲಡಿ ಲವ್  ಹಯ್ಯಾ ಹಯ್ಯಾ ಹಯ್ಯಾ ಹಯ್ಯಾ

ಲವ್ ಬ್ಲಡಿ ಲವ್  ಹಯ್ಯಾ ಹಯ್ಯಾ ಹಯ್ಯಾ ಹಯ್ಯಾ
ಹೇ ಹನಿ ಹೇ ಫನ್ನಿ ಹೇ ಕ್ರೇಜಿ ಲವ್ 
ಹೇ ಬ್ರೌಸಿ ಹೇ ದ್ರೌಜಿ ಲವ್ 

ಒಲವಿನ ರೂಪ ಹಾಕಿದೆ ಮೋಸದ ವೇಷ
ಒಲವಿನ ಆಟ ಕೂಗಿದೆ ವಿಜಯದ ಘೋಷ
ಒಲವಿನ ಯೋಗ ಯಾರಿಗೋ ಅವರಿಗೆ ಹಾರ
ವಿರಹದ ಯೋಗ ಬಾಗದೆ ಒಲವಿಗೆ ದೂರ
ಲವ್ ಬ್ಲಡಿ ಲವ್ ಹಂಚಲು ಆಗದು
ಲವ್ ಪ್ರೆಟಿ ಲವ್ ಸೋಲಲು ಒಪ್ಪದು
ಹಯ್ಯಾ ಹಯ್ಯಾ ಹಯ್ಯಾ ಹಯ್ಯಾ
ಹಯ್ಯಾ ಹಯ್ಯಾ ಹಯ್ಯಾ ಹಯ್ಯಾ 
ಲವ್ ಬ್ಲಡಿ ಲವ್  ಹಯ್ಯಾ ಹಯ್ಯಾ ಪ್ರೆಟಿ ಲವ್ 
ಹಯ್ಯಾ ಹಯ್ಯಾ ಹಯ್ಯಾ ಹಯ್ಯಾ 
ಹಯ್ಯಾ ಹಯ್ಯಾ ಹಯ್ಯಾ ಹಯ್ಯಾ 

ಹೃದಯದ ಹೂವ ಕೊಂದೆಯಾ ಓ ಜೊತೆಗಾರ
ಹೃದಯಕೆ ಜೀವ ತಂದೆಯಾ ಓ ಕಥೆಗಾರ
ಒಲವಿನ ಜೋಡಿ ಕಣ್ಣಿಗೆ ಒಂದೇ ಕನಸು
ಕನಸನು ಕಾಣೋ ಪ್ರೇಮಿಗೂ ಒಂದೇ ಮನಸು
ಲವ್ ಬ್ಲಡಿ ಲವ್ ಬಿಟ್ಟರೆ ವಂಚನೆ
ಲವ್ ಪ್ರೆಟಿ ಲವ್ ಪಡೆದರೆ ವೇದನೆ
ಲವ್ ಬ್ಲಡಿ ಲವ್ ಹಯ್ಯಾ ಹಯ್ಯಾ ಪ್ರೆಟಿ ಲವ್
ಹಯ್ಯಾ ಹಯ್ಯಾ ಹಯ್ಯಾ ಹಯ್ಯಾ
ಹಯ್ಯಾ ಹಯ್ಯಾ ಹಯ್ಯಾ ಹಯ್ಯಾ
-----------------------------------------------------------------------------------------------------------

No comments:

Post a Comment