55. ಪಾವನ ಗಂಗ (1978)


ಪಾವನಗಂಗಾ ಚಿತ್ರದ ಗೀತೆಗಳು
  1. ಆಕಾಶ ದೀಪವು ನೀನು 
  2. ಆಕಾಶ ದೀಪವು ನೀನು (ದುಃಖ) 
  3. ಮೊದಲನೇ ದಿನವೇ 
  4. ಹೂವೊಂದು ಬೇಕು ಬಳ್ಳಿಗೆ 
ಪಾವನ ಗಂಗ (1978) - ಆಕಾಶದೀಪವು ನೀನು
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಚಿ. ಉದಯಶಂಕರ, ಹಾಡಿದವರು : ಎಸ್.ಪಿ.ಬಿ.

ಆಕಾಶದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ಆಕಾಶದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ಆ ನೋಟದಲ್ಲೆ ಹಿತವೇನು ಮರೆಯಾದಾಗ ನೋವೇನು
ಆಕಾಶದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ನಿನ್ನ ಕಂಡಾಗ ಸಂತೋಷವೇನು

ಕಂಡಂದೆ ಕುಣಿಯಿತು ಮನವು ಹೂವಾಗಿ ಅರಳಿತು ತನುವು
ಕಂಡಂದೆ ಕುಣಿಯಿತು ಮನವು ಹೂವಾಗಿ ಅರಳಿತು ತನುವು
ಹೃದಯದ ವೀಣೆಯನು.. ಹಿತವಾಗಿ ನುಡಿಸುತಲೀ
ಆನಂದ ತುಂಬಲು ನೀನು  ನಾ ನಲಿದೆನು
ಆಕಾಶದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ನಿನ್ನ ಕಂಡಾಗ ಸಂತೋಷವೇನು

ಅನುರಾಗ ಮೂಡಿದ ಮೇಲೆ ನೂರಾರು ಬಯಕೆಯ ಮಾಲೆ
ಅನುರಾಗ ಮೂಡಿದ ಮೇಲೆ ನೂರಾರು ಬಯಕೆಯ ಮಾಲೆ
ಹೃದಯವು ಧರಿಸಿದೆ ಈ ಜೀವ ಸೋಲುತಿದೆ
ಸಂಗಾತಿಯಾದರೆ ನೀನು ನಾ ಉಳಿವೆನು
ಆಕಾಶದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ಆ ನೋಟದಲ್ಲೆ ಹಿತವೇನು ಮರೆಯಾದಾಗ ನೋವೇನು
ಆಕಾಶದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ನಿನ್ನ ಕಂಡಾಗ ಸಂತೋಷವೇನು
------------------------------------------------------------------------------------------------------------------------

ಪಾವನ ಗಂಗ (1978) - ಆಕಾಶದೀಪವು ನೀನು
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಚಿ. ಉದಯಶಂಕರ, ಹಾಡಿದವರು : ಎಸ್.ಜಾನಕೀ 

ಆಕಾಶದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ಆ ನೋಟದಲ್ಲೆ ಹಿತವೇನು ಮರೆಯಾದಾಗ ನೋವೇನು
ಆಕಾಶದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ನಿನ್ನ ಕಂಡಾಗ ಸಂತೋಷವೇನು

ಹೂವಾದ ಆಸೆಯೆಲ್ಲಾ  ಮುಳ್ಳಾಗಿ ಹೋಯಿತಲ್ಲ
ಜೀವ ನೋವ ತಾಳದಲ್ಲ ಸುಖ ಶಾಂತಿ ಇನ್ನಿಲ್ಲ
ನೆಮ್ಮದಿಯ ಕಾಣೆನು ನಾ ಸೋತೆನು
ಆಕಾಶದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ಆ ನೋಟದಲ್ಲೆ ಹಿತವೇನು ಮರೆಯಾದಾಗ ನೋವೇನು
------------------------------------------------------------------------------------------------------------------------

ಪಾವನ ಗಂಗಾ (1977) - ಹೂವೊಂದು ಬೇಕು ಬಳ್ಳಿಗೇ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಗಾಯನ: ಎಸ್.ಜಾನಕಿ


ಹೂವೊಂದು ಬೇಕು ಬಳ್ಳಿಗೇ ಮಗುವೊಂದು ಬೇಕು ಹೆಣ್ಣಿಗೇ
ಹೂವೊಂದು ಬೇಕು ಬಳ್ಳಿಗೇ ಮಗುವೊಂದು ಬೇಕು ಹೆಣ್ಣಿಗೇ
ಕಂದನಾ ಸಂತೋಷವೇ ತಾಯಿಯ ಸೌಭಾಗ್ಯವೂ
ಬಾಳಿನ ಆನಂದವೂ....
ಹೂವೊಂದು ಬೇಕು ಬಳ್ಳಿಗೇ ಮಗುವೊಂದು ಬೇಕು ಹೆಣ್ಣಿಗೇ

ಬಿಸಿಲಿಗೆ ನೆರಳಿನಂತೇ ಇರುಳಿಗೆ ಬೆಳಕಿನಂತೇ
ಬಾಳಿಗೆ ಕಂಗಳಂತೇ ಮಗುವಿನ ಪ್ರೀತಿಯಂತೇ...ಆ...ಆಆ ...ಆಆಆ
ಕಂದನ ತೊದಲು ನುಡೀ ಜೇನಿನ ಹನಿಗಳಂತೇ
ಕೋಪದಿ ಅಳುವಾಗ ಜೋಗುಳ ಹಾಡಿದಂತೇ
ಸರಸವೇ ದಿನಾ ಅನುದಿನಾ ಹೊಸತನ ಹೊಸತನ...ಹೊಸತನ.
ಹೂವೊಂದು ಬೇಕು ಬಳ್ಳಿಗೇ ಮಗುವೊಂದು ಬೇಕು ಹೆಣ್ಣಿಗೇ

ಒಣಗಿದ ರಂಬೆಯಲೀ ಹಸುರೆಲೆ ಮೂಡುವುದೇ
ಸೊರಗಿದ ಹೃದಯದಲೀ ಸಂತಸ ಕಾಣುವುದೇ
ಮೂಡಿದ ಬಯಕೆಗಳೂ ಮುಗಿಯಲು ಕನಸಿನೊಳೂ
ಆಸೆಯು ಚಿಗುರುವುದೇ ಹರುಷವು ಉಳಿಯುವುದೇ
ಬಳಲಿದೆ ಮನಾ ಅನುದಿನ ಅನುಕ್ಷಣ ಅನುಕ್ಷಣ ಅನುಕ್ಷಣ ....
ಹೂವೊಂದು ಬೇಕು ಬಳ್ಳಿಗೇ ಮಗುವೊಂದು ಬೇಕು ಹೆಣ್ಣಿಗೇ
ಕಂದನಾ ಸಂತೋಷವೇ ತಾಯಿಯ ಸೌಭಾಗ್ಯವೂ
ಬಾಳಿನ ಆನಂದವೂ....
ಆಆಆ.. ಆಆಆ. ಹೂಂಹೂಂಹೂಂಹೂಂ
---------------------------------------------------------------------------------------------------------------------

ಪಾವನ ಗಂಗಾ (1977) - ಹೂವೊಂದು ಬೇಕು ಬಳ್ಳಿಗೇ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಗಾಯನ: ಎಸ್.ಪಿ.ಬಿ,. 
ಎಸ್.ಜಾನಕಿ

ಗಂಡು : ಮೊದಲನೇ ದಿನವೇ ಒಲಿದೆ ನಿನ್ನ ನಡೆಗೆ ಸವಿ ನುಡಿಗೆ
           ನಿನ್ನ ನಡೆಗೆ ಸವಿ ನುಡಿಗೆ ಅನುರಾಗದಿ ಹಾಡಿದೆ ಕವಿತೆ
           ಕಂಗಳಲೇ ಮೌನದಲೇ...
ಹೆಣ್ಣು : ಮೊದಲನೇ ದಿನವೇ ಸೋತೆ ನಿನ್ನ ನಡೆಗೆ ಸವಿ ನುಡಿಗೆ
          ನಿನ್ನ ನಡೆಗೆ ಸವಿ ನುಡಿಗೆ

ಗಂಡು : ಬಾಳಿನ ಲತೆಯಲಿ ಹೂವಾದೇ... ಬಾಳಿನ ಕುಸಮಕೆ ಜೇನಾದೆ
           ಬಾಳಿನ ಲತೆಯಲಿ ಹೂವಾದೇ... ಬಾಳಿನ ಕುಸಮಕೆ ಜೇನಾದೆ
           ಬಾಳ  ಬಯಕೆಯ ನೀನಾದೇ... ಬಾಳಿಗಾನಂದ ನೀ ತಂದೇ...
ಹೆಣ್ಣು : ಅಹಹಹ ಲಲಲಲ (ಹಹಹ) ಲಲಲ (ಅಹ ಅಹ )
           ಲಾಲ ಲಾಲ (ಲಲಾ (ಆ (ಲಲಾ ) ಆ ಲಲಾ ಲಲಾ
          ಪ್ರೇಮದ ಕಡಲಲಿ ಮುತ್ತಾದೆ.. ಪ್ರೇಮದ ಬದುಕಿಗೆ ಕಣ್ಣಾದೆ..
          ಪ್ರೇಮ ಪಲ್ಲವಿ ನೀನಾದೆ ಪ್ರೇಮದಾನಂದ ನೀ ತಂದೆ..
          ಪ್ರೇಮದಾನಂದ ನೀ ತಂದೆ..
ಗಂಡು : ಮೊದಲನೇ ದಿನವೇ ಒಲಿದೆ ನಿನ್ನ ನಡೆಗೆ ಸವಿ ನುಡಿಗೆ
          ನಿನ್ನ ನಡೆಗೆ ಸವಿ ನುಡಿಗೆ

ಹೆಣ್ಣು : ಈ ದಿನ ಹೊಸತನ ನೀ ತಂದೆ.. ನಾಳಿನ ಬದುಕಿಗೆ ಬೆಳಕಾದೆ  
         ಈ ದಿನ ಹೊಸತನ ನೀ ತಂದೆ.. ನಾಳಿನ ಬದುಕಿಗೆ ಬೆಳಕಾದೆ  
         ಪ್ರಾಣ ಪದಕವೇ ನೀನಾದೇ... ನಾನು ನಿನ್ನಲ್ಲಿ ಒಂದಾದೆ..
ಗಂಡು : ಅಹಹಹ ಲಲಲಲ ಲಲಲ  (ಲಲಾ ಲಲಾ ) ಲಾಲ ಲಾಲ
            ಅಹ್ ಅಹಹಾ ಅಹಹಾ ಹೇಹೇ ಆ..
          ಆಡುವ ಮಾತಿಗೆ ದನಿಯಾದೆ.. ಹಾಡುವ ಗೀತೆಗೆ ಶ್ರುತಿಯಾದೆ
         ಜೀವ ಜೀವವೇ ನೀನಾದೆ ನಿನ್ನ ಮನದಲ್ಲಿ ನಾನಾದೇ... 
         ನಿನ್ನ ಮನದಲ್ಲಿ ನಾನಾದೇ...
        ಮೊದಲನೇ ದಿನವೇ ಒಲಿದೆ ನಿನ್ನ ನಡೆಗೆ ಸವಿ ನುಡಿಗೆ
        ನಿನ್ನ ನಡೆಗೆ ಸವಿ ನುಡಿಗೆ
ಹೆಣ್ಣು : ಅನುರಾಗದಿ ಹಾಡಿದೆ ಕವಿತೆ ಕಂಗಳಲೇ ಮೌನದಲೇ...
ಇಬ್ಬರು : ಮೊದಲನೇ ದಿನವೇ ಒಲಿದೆ ನಿನ್ನ ನಡೆಗೆ ಸವಿ ನುಡಿಗೆ
           ನಿನ್ನ ನಡೆಗೆ ಸವಿ ನುಡಿಗೆ
          ಲಲಲಲ ಲಲಲಲಲ ಲಲಲಲ ಲಲಲಲ 
-------------------------------------------------------------------------------------------------------------------------

No comments:

Post a Comment