314. ಅಭಿ (೨೦೦೩)


ಅಭಿ ಚಲನಚಿತ್ರದ ಹಾಡುಗಳು .
  1. ಈ ನನ್ನ ಕಣ್ಣಾಣೆ ಈ ನನ್ನ ಎದೆಯಾಣೆ
  2. ಓ... ವಿಧಿ ಬರಹ ಎಂತ ಘೋರ
  3. ಸುಮ್ ಸುಮ್ನೆ   ಏ! ಸುಮ್ ಸುಮ್ನೆ 
  4. ಡು ಡು ಡು.. ಮಜ ಮಾ ಡು ಡು ಡು
  5. ಬಿಟ್ಟಾಕ್ ಗುರು ಫೀಲು, ಮುಂದೆ ಇದೆ ಗೋಲು
ಅಭಿ (೨೦೦೩) - ಈ ನನ್ನ ಕಣ್ಣಾಣೆ ಈ ನನ್ನ ಎದೆಯಾಣೆ
ಸಂಗೀತ: ಗುರುಕಿರಣ, ಸಾಹಿತ್ಯ : ಕೆ.ಕಲ್ಯಾಣ ಗಾಯಕರು : ಉದಿತ ನಾರಾಯಣ, ಮಹಾಲಕ್ಷ್ಮಿ ಅಯ್ಯೆರ

ಈ ನನ್ನ ಕಣ್ಣಾಣೆ ಈ ನನ್ನ ಎದೆಯಾಣೆ
ಈ ನನ್ನ ಮನದಾಣೆ     ಈ ನನ್ನ ಉಸಿರಾಣೇ
ಈ ಪ್ರೀತಿ, ನೀ ನನ್ನ ಪ್ರಾಣ ಕಣೆ

ನಂಗು ನಿಂಗು ಇನ್ನು ಹೊಸದು ಇಂಥ ಅನುಭವ
ಕಂಡು ಕಂಡು ಎದೆಯ ಒಳಗೆ ಏನೊ ಕಲರವ
ಸದಾ ಸದಾ ವಯ್ಯಾರದ ಪದ ಪದ ಬೆಸೆದಿದೆ
ಹೊಸ ಹೊಸ ಶೃಂಗಾರದ ರಸ ರಾಗ ಲಹರಿಯ ಹರಿಸುತ್ತಿದೆ
ಓ ಒಲವೆ ಒಲವೆಂಬ ಒಲವೆನ್ನಿರಿ
ಈ ನನ್ನ ಕಣ್ಣಾಣೆ        ಈ ನನ್ನ ಎದೆಯಾಣೆ
ಈ ನನ್ನ ಮನದಾಣೆ   ಈ ನನ್ನ ಉಸಿರಾಣೇ

ಪ್ರೀತಿ ಒಂದು ಗಾಳಿಯ ಹಾಗೆ ಗಾಳಿ ಮಾತಲ್ಲ
ಪ್ರೀತಿ ಹರಿಯೋ ನೀರಿನ ಹಾಗೆ ನಿಂತ ನೀರಲ್ಲ
ಅದು ಒಂದು ಜ್ಯೋತಿಯ ಹಾಗೆ ಸುಡೋ ಸುಡೋ ಬೆಂಕಿಯಲ್ಲ
ಅದು ಒಂದು ಭುವಿಯ ಹಾಗೆ ನಿರಂತರ ಈ ಪ್ರೇಮ ಸ್ವರ
ಈ ಪ್ರೀತಿ ಆಕಾಶಕೂ ಎತ್ತರ
ಈ ನನ್ನ ಕಣ್ಣಾಣೆ       ಈ ನನ್ನ ಎದೆಯಾಣೆ
ಈ ನನ್ನ ಮನದಾಣೆ   ಈ ನನ್ನ ಉಸಿರಾಣೇ
----------------------------------------------------------------------------------------------------------------------

ಅಭಿ (೨೦೦೩) - ಓ... ವಿಧಿ ಬರಹ ಎಂತ ಘೋರ!
ಸಂಗೀತ: ಗುರುಕಿರಣ  ಸಾಹಿತ್ಯ: ಕೆ. ಕಲ್ಯಾಣ  ಗಾಯನ: ಡಾ.ರಾಜ್ ಕುಮಾರ

ಓ... ವಿಧಿ ಬರಹ ಎಂತ ಘೋರ!
ಪ್ರೇಮಿಗಳು ದೂರ ದೂರ
ಹಸಿರಾಗೋ ಪ್ರೇಮ ಕಥೆಗೆ

ವಿಷವಾಗೋ ಜಗವು ಕ್ರೂರ!
ಬದುಕು ಪ್ರತಿ ಘಳಿಗೆ
ಒಲವ ಸುಳಿ ಓಳಗೆ
ಏಕೊ ಇಂತ ಸಮರ?!
ವಿಧಿ ಬರಹ ಎಂತ ಘೋರ!

ಪ್ರೇಮಿಗಳು ದೂರ ದೂರಾ... ಆ
ನೀನೆ ಜೀವ! ನೀನೆ ಭಾವ! ಅನ್ನೊ ಮಾತಿಗೆ
ಮಾತೂ ನೀಡಿ.. ಮನಸೂ ನೀಡಿ ಹಾಡೋ ಪ್ರೀತಿಗೆ!
ಸನಿಹ.. ವಿರಹ.. ಕಲಹ..
ಹಣೆಯಾ ಬರಹ!
ವಿಧಿ ಬರಹ ಎಂತ ಘೋರ!
ಪ್ರೇಮಿಗಳು ದೂರ ದೂರ
ಹಸಿರಾಗೋ ಪ್ರೇಮ ಕಥೆಗೆ
ವಿಷವಾಗೋ ಜಗವು ಕ್ರೂರ!

ನೋವು ನಲಿವು, ಸೋಲು ಗೆಲುವು ಉಂಟೂ ಪ್ರೀತಿಗೆ
ಯಾರೋ ಬಂದು.. ಯಾರೊ ಬಳಗ ಬಾಳ ಪಯಣಕೆ!
ಕನಸೊ.. ಭ್ರಮೆಯೋ.. ಜಗವೇ.. ಕುರುಡಾಗಿದೆ!
ವಿಧಿ ಬರಹ ಎಂತ ಘೋರ!
ಪ್ರೇಮಿಗಳು ದೂರ ದೂರ
ಹಸಿರಾಗೋ ಪ್ರೇಮ ಕಥೆಗೆ
ವಿಷವಾಗೋ ಜಗವು ಕ್ರೂರ!
ಬದುಕು ಪ್ರತಿ ಘಳಿಗೆ
ಒಲವ ಸುಳಿ ಓಳಗೆ
ಏಕೊ ಇಂತ ಸಮರ?!
--------------------------------------------------------------------------------------------------------------------------

ಅಭಿ (೨೦೦೩) - ಸುಮ್ ಸುಮ್ನೆ   ಏ! ಸುಮ್ ಸುಮ್ನೆ 
ಸಂಗೀತ: ಗುರುಕಿರಣ  ಸಾಹಿತ್ಯ: ಭಂಗ ರಂಗ  ಗಾಯನ: ಉದಿತ್ ನಾರಾಯಣ್, ಸೌಮ್ಯ

ಸುಮ್ ಸುಮ್ನೆ   ಏ! ಸುಮ್ ಸುಮ್ನೆ
ಸುಮ್ ಸುಮ್ನೆ ಓಳು ಬಿಡೊ ಪೋಕರಿ!
ಸುಳ್ ಸುಮ್ನೆ ಮಾಡುತಿಯ ಕಿರಿ ಕಿರಿ
ನೀನೊಬ್ಬ ದಾಂಡಿಗನಾದರೆ
ನಿಂದೆಲ್ಲಾ ಕ್ಯಾತೆ ಕಣೊ!
ಹುಷಾರು... ಹುಷಾರು.. ಹುಷಾರು.. ಹುಷಾರೂ..!
ಏ ಸುಮ್ ಸುಮ್ನೆ ಓಳು ಬಿಡೊ ಸುಂದರಿ
ಸುಳ್ ಸುಮ್ನೆ ತರ್ಲೆ ಮಾಡೊ ಬಿತ್ತರಿ
ಹೋಗೆಲೆ ಲಂಕಿಣಿ ಸೋದರಿ
ನಿಂದೆಲ್ಲಾ ಕ್ಯಾತೆ ಕಣೆ!
ಹುಷಾರು... ಹುಷಾರು.. ಹುಷಾರು.. ಹುಷಾರೂ..!
ಬೆಳಗೋಳದಲ್ಲಿ ಆಗೊ ಮಟ.. ಒಳ್ಳೆ ಪೋಸು
ಇಲ್ಲಿ ಒಬ್ಬ ಮಿನುಗೊ ಮಟ.. ಸ್ವಲ್ಪ ಲೂಸು!
ನೀನು ಕಿತ್ತೂರಿನ ಮಹಾರಾಣಿನ?
ಸಾಕು ಮುಚ್ಚು ಮರಿ ನಿನ್ನ ಬಾಯಿನ!
ಈ ಡವ್ವು ಯಾಕೆ ಕಣೊ?.. ಏ!
ಹುಷಾರು... ಹುಷಾರು.. ಹುಷಾರು.. ಹುಷಾರೂ..!
ಸುಮ್ ಸುಮ್ನೆ ಓಳು ಬಿಡೊ ಸುಂದರಿ
ಸುಳ್ ಸುಮ್ನೆ ಮಾಡುತಿಯ ಕಿರಿ ಕಿರಿ.. ಹ!
ಹೋಗೆಲೆ ಲಂಕಿಣಿ ಸೋದರಿ
ಅ ಅಹ! ನಿಂದೆಲ್ಲಾ ಕ್ಯಾತೆ ಕಣೊ!
ಹುಷಾರು... ಹುಷಾರು.. ಹುಷಾರು.. ಹುಷಾರೂ..!
ನಿದಿ ನೀರಿಗಾಗಿ ಅಲ್ಲೊಬ್ಬಳು.. ಇರಿಸುತಾಳೆ
ಸುಕುಮಾರಿ ಬಾಲೆ ಇಲ್ಲೊಬ್ಬಳೂ.. ಬಾಚುತಾಳೆ
ನೀನು ಮಹರಾಜನ ನಮ್ಮ ಊರಿಗೆ?
ನಾನು ಹೆದರೋಳಲ್ಲಾ ನಿನ್ನ ರೊಪಿಗೆ
ಏ! ನಾನೊಬ್ಬ ಘಾಟಿ ಕಣೆ
ಹುಷಾರು... ಹುಷಾರು.. ಹುಷಾರು.. ಹುಷಾರೂ..!
ಒ ಓ!.. ಸುಮ್ ಸುಮ್ನೆ ಓಳು ಬಿಡೊ ಪೋಕರಿ!
ಸುಳ್ ಸುಮ್ನೆ ಮಾಡುತಿಯ ಕಿರಿ ಕಿರಿ
ನೀನೊಬ್ಬ ದಾಂಡಿಗನಾದರೆ
ನಿಂದೆಲ್ಲಾ ಕ್ಯಾತೆ ಕಣೊ!
ಹುಷಾರು... ಹುಷಾರು.. ಹುಷಾರು.. ಹುಷಾರೂ..!
ಹೆ!.. ಸುಮ್ ಸುಮ್ನೆ ಓಳು ಬಿಡೊ ಸುಂದರಿ
ಸುಳ್ ಸುಮ್ನೆ ತರ್ಲೆ ಮಾಡೊ ಬಿತ್ತರಿ
ಹೋಗೆಲೆ ಲಂಕಿಣಿ ಸೋದರಿ
ನಿಂದೆಲ್ಲಾ ಕ್ಯಾತೆ ಕಣೆ!
ಹುಷಾರು... ಹುಷಾರು.. ಹುಷಾರು.. ಹುಷಾರೂ..!
--------------------------------------------------------------------------------------------------------------------------

ಅಭಿ (೨೦೦೩) - ಡು ಡು ಡು.. ಮಜ ಮಾ ಡು ಡು ಡು! 
ಸಂಗೀತ: ಗುರುಕಿರಣ   ಸಾಹಿತ್ಯ: ಹಂಸಲೇಖ  ಗಾಯನ: ಪುನೀತ್ ರಾಜ್ ಕುಮಾರ್

ಡು ಡು ಡು.. ಮಜ ಮಾ ಡು ಡು ಡು
ಡು ಡು ಡು.. ಮಜ ಮಾ ಡು ಡು ಡು! 
ಮಾ ಮಾ ಮಾ ಮಾ .. ಮಜ ಮಾಡು!
ಸ್ಟುಡೆಂಟ್ ಮಾ ಮಾ.. ಮಜ ಮಾಡು!
ಕಾಲೇಜೆ ಲೈಫಿಗೊಂದು ನೆನಪಿನ ಪಾಕೆಟ್ಟು
ಮಾ ಮಾ ಮಾ ಮಾ.. ಮಜ ಮಾಡು!
ಸ್ಟುಡೆಂಟ್ ಮಾ ಮಾ.. ಮಜ ಮಾಡು!
ಈ ಏಜೆ ಟೊಟಲಲ್ಲಿ ಉಳಿಯೋ ಪ್ರಾಫಿಟ್ಟು
ಕ್ಲಾಸಲ್ಲಿ ಲೆಚ್ಚರೂ.. ಬೋರಾದ್ರೆ ಪಿಚ್ಚರೂ
ಊರ್ ಮೇಲೆ ಊರ್ ಬಿದ್ದ್ರು ಗೋಲಿ ಮಾರೊ ಮಾಮ್!
ಮಾ ಮಾ ಮಾ ಮಾ .. ಮಜ ಮಾಡು!
ಸ್ಟುಡೆಂಟ್ ಮಾ ಮಾ.. ಮಜ ಮಾಡು!
ಕಾಲೇಜೆ ಲೈಫಿಗೊಂದು ನೆನಪಿನ ಪಾಕೆಟ್ಟು

ಯಾರೆ ಕೂಗಾಡಲಿ ಊರೆ ಹೋರಾಡಲಿ! 
ಮಜ ಮಾಡು ಮಜ ಮಾಡು ಮಜ ಮಾಡು 
ಅಪ್ಪಾ ಅಮ್ಮ ಅಂದ್ರು ಓದು ಅಂತಾ..
ಹೋದಲ್ಲೆ ತುತ್ತೂರಿ ಊದು ಅಂತಾ..
ಓದೊದ್ ಕಟ್ ಮಾಡದೆ, ಕಾಪಿಚಟ್ ಮಾಡದೆ
ಕುಣಿಯುತ್ತ.. ಕುಣಿಸುತ್ತ ಮನಸೊ ಇಚ್ಚೆ.. ಮಜ ಮಾಡು!
ಕೈಯೆತ್ತಿ ಹೊಡದ್ವಿಂದ್ರೆ ಪೆಚ್ಚಾಗ್ತಾರೆ!
ಸುಮ್ ಸುಮ್ನೆ ಎನಿಮಿಗಳ್ ಹೆಚ್ಚಾಗ್ತಾರೆ
ನಮ್ಗ್ಯಾಕೆ ರೌಡಿಸಮ್.. ಇಲ್ಲದ್ ಹೀರೋಇಸಮ್
ಲೈಪ್ ಈಸ್ ಶಾರ್ಟ್ ಎಂಜಾಯ್ ಇಟ್.. ಎ ಎ ಏ! ಮಜ ಮಾಡು!
ಮಾ ಮಾ ಮಾ ಮಾ .. ಮಜ ಮಾಡು!
ಸ್ಟುಡೆಂಟ್ ಮಾ ಮಾ.. ಮಜ ಮಾಡು!
ಕಾಲೇಜೆ ಲೈಫಿಗೊಂದು ನೆನಪಿನ ಪಾಕೆಟ್ಟು
ಮಾ ಮಾ ಮಾ ಮಾ.. ಮಜ ಮಾಡು!
ಸ್ಟುಡೆಂಟ್ ಮಾ ಮಾ.. ಮಜ ಮಾಡು!
ಈ ಏಜೆ ಟೊಟಲಲ್ಲಿ ಉಳಿಯೋ ಪ್ರಾಫಿಟ್ಟು

ಕಣ್ ಬಿಟ್ಟ್ರೆ ಎಲ್ಲೆಲ್ಲು ಹುಡ್ಗಿರಪ್ಪ ನಮ್ ಗಿಂತ್ಲು ಪ್ಲರ್ಟಲ್ಲಿ ಮುಂದವ್ರಪ್ಪ ಕಣ್ ಕಣ್ಣೊ 30 
ಕಣ್ಕುಕ್ಕೋ ಚಿಟ್ಟೆಯ..ಗುಂಪನ್ನ ಕೆಣಕುತ್ತ.. ಮನಸೋ ಇಚ್ಚೆ!... ಮಜ ಮಾಡು!
ಮದುವೆಯ ಕೆಡ್ಡಾದಲ್ ಬೀಳ್ಲೆಬೇಕು ಸಂಸಾರದ್ ಸಿರ್ಕಸ್ಸು ಮಾಡ್ಲೆಬೇಕು
ಈಗ್ಯಾಕೆ ಟೆಂಶನು.. ಕೊರಗೋ ಕಂಫ್ಯುಶಿಒನು
ಟಾಕ್ಸ್ ಇಲ್ಲಾ.. ಪೈನ್ ಇಲ್ಲಾ .. ಎ ಎ ಏ! ಮಜ ಮಾಡು!
ಮಾ ಮಾ ಮಾ ಮಾ .. ಮಜ ಮಾಡು!
ಸ್ಟುಡೆಂಟ್ ಮಾ ಮಾ.. ಮಜ ಮಾಡು!
ಕಾಲೇಜೆ ಲೈಫಿಗೊಂದು ನೆನಪಿನ ಪಾಕೆಟ್ಟು
ಮಾ ಮಾ ಮಾ ಮಾ.. ಮಜ ಮಾಡು!
ಸ್ಟುಡೆಂಟ್ ಮಾ ಮಾ.. ಮಜ ಮಾಡು!
ಈ ಏಜೆ ಟೊಟಲಲ್ಲಿ ಉಳಿಯೋ ಪ್ರಾಫಿಟ್ಟು
ಕ್ಲಾಸಲ್ಲಿ ಲೆಚ್ಚರೂ.. ಬೋರಾದ್ರೆ ಪಿಚ್ಚರೂ
ಊರ್ ಮೇಲೆ ಊರ್ ಬಿದ್ದ್ರು ಗೋಲಿ ಮಾರೊ ...
--------------------------------------------------------------------------------------------------------------------------

ಅಭಿ (೨೦೦೩) - ಬಿಟ್ಟಾಕ್ ಗುರು ಫೀಲು, ಮುಂದೆ ಇದೆ ಗೋಲು!
ಸಂಗೀತ: ಗುರುಕಿರಣ  ಸಾಹಿತ್ಯ: ನಾಗೆಂದ್ರ ಪ್ರಸಾದ  ಗಾಯನ: ಶಂಕರ್ ಮಹದೇವನ್

ಬಿಟ್ಟಾಕ್ ಗುರು ಫೀಲು, ಮುಂದೆ ಇದೆ ಗೋಲು!
ದಿನ್ನಾಗೊಕೆ ಬೇಕು ಸ್ಮೈಲು ಸ್ಮೈಲು :)
ಎಲ್ಲಾರ ಪ್ರೀತಿಲು ಪ್ರಾಬ್ಲಂಮ್ಮು ಮಾಮೂಲು..
ನಗುತ್ತಿದ್ದರೆ ಇಲ್ಲ ಸೋಲು ಸೋಲು ಅ ಅ ಅ ಆ ...

ನೋವಲ್ಲು ನಗಲೇ ಬೇಕು.. ಜೇನಂತ ನುಡಿ ಇದು
ಶೋಕಕ್ಕೆ ಔಶದಿ ನಗುವೂ...
ನೀ ನಕ್ಕಿ ನಗಿದು ಸಾಕು ಜಗವೆಲ್ಲಾ ನಗುವುದು
ಈ ಮಾತು ಅರಿತರೆ ಸುಖವೂ
ಲೈಫೆಂಬ ಹೈವೇಲಿ.. ಸ್ನೇಹಾನೆ ತಂಗಾಳಿ
ಈ ಜರ್ನಿ ಜಾಲಿ.. ಜಾಲೀ... ಏ!
ಬಿಟ್ಟಾಕ್ ಗುರು ಫೀಲು, ಮುಂದೆ ಇದೆ ಗೋಲು!
ದಿನ್ನಾಗೊಕೆ ಬೇಕು ಸ್ಮೈಲು ಸ್ಮೈಲು :)

ಪ್ಲೆವಿನ್ನು ಹೊಡೆದ ಹಾಗೆ ಪ್ರೀತ್ಸೋದು ದೊರೆತರೆ
ಕಾಯುತ್ತ ಕುಳಿತಿದೆ ಮನವೂ.. ಉ ಉ
ಸಂಗಾತಿ ಸನಿಹ ಸಾಕು ಅಂಗೈಲೆ ಈ ಧರೆ
ಪ್ರಾಣಾನೆ ಮುಡಿಪಿದೆ ದಿನವೂ
ಲೈಫೆಂಬ ಹೈವೇಲಿ.. ಸ್ನೇಹಾನೆ ತಂಗಾಳಿ
ಈ ಜರ್ನಿ ಜಾಲಿ.. ಜಾಲೀ ಜಾಲಿ!
ಜು ಜು ಜೂ... ಮಜ ಮಾಡು.. ಜು ಜು ಜೂ... |೨|
ಬಿಟ್ಟಾಕ್ ಗುರು ಫೀಲು, ಮುಂದೆ ಇದೆ ಗೋಲು!
ದಿನ್ನಾಗೊಕೆ ಬೇಕು ಸ್ಮೈಲು ಸ್ಮೈಲು :)

ಎಲ್ಲಾರ ಪ್ರೀತಿಲು ಪ್ರಾಬ್ಲಂಮ್ಮು ಮಾಮೂಲು..
ನಗುತ್ತಿದ್ದರೆ ಇಲ್ಲ ಸೋಲು ಸೋಲು
--------------------------------------------------------------------------------------------------------------------------

No comments:

Post a Comment