ತೀರದ ಬಯಕೆ ಚಿತ್ರದ ಹಾಡುಗಳು
- ಕಾಣುತಿರುವೆ ಪ್ರಣಯದಾಟವ
- ನಾ ಮರೆಯಲಾರೆ
- ಈ ಒಲವಿನ ಕವನ ಬರೆದವಳು
- ಕಾಲದ ಕಾಲ ಚೆಂಡಿನಾಟ
ತೀರದ ಬಯಕೆ (1981)
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಹಾಡಿದವರು: ವಾಣಿಜಯರಾಂ
ಕಾಣುತಿರುವೆ ಪ್ರಣಯದಾಟವ ಮಲೆನಾಡಿನ ಈ ಬೆಳಕಿನಲಿ
ಕಾಣುತಿರುವೆ ಪ್ರಣಯದಾಟವ ಮಲೆನಾಡಿನ ಈ ಬೆಳಕಿನಲಿ
ಹೇಳುತಿರುವೇ ಪ್ರೇಮದಾಟವ ಸುಳಿಗಾಳಿ ಅಲೆ ಅಲೆಗಳಲಿ
ಆಆಆ....ಆಆಆಅ...
ಆಆಆ....ಆಆಆಅ...
ನಾಚಿದೆ ಹೆಣ್ಣು ಬೆವತಿಹ ತೆರದಲಿ ಮಂಜದು ಕವಿದಿಹುದು
ಚಿನ್ನದ ಕಿರಣದ ಸೂರ್ಯನ ಪ್ರಭೆಗೆ ಕರಗಿ ನೀರಾಗಿಹುದು
ಹಸಮಣೆ ವಧುವಿನ ನಸನಗು ತೆರದಲಿ ಹಸಿರು ತುಂಬಿಹುದು
ಪ್ರಕೃತಿಯು ವಧುವು ಕಿರಣವೇ ವರನು ಮಿಲನಕೆ ಬಂದಿಹುದು
ಆಆಆ...ಆಆಆ...
ಕಾಣುತಿರುವೆ ಪ್ರಣಯದಾಟವ ಮಲೆನಾಡಿನ ಈ ಬೆಳಕಿನಲಿ (ಆಆಆ.)
ಹೇಳುತಿರುವೇ ಪ್ರೇಮದಾಟವ ಸುಳಿಗಾಳಿ ಅಲೆ ಅಲೆಗಳಲಿ
ಆಆಆ....ಆಆಆಅ... ಆಆಆ....ಆಆಆಅ...
ಆಆಆ....ಆಆಆಅ... ಆಆಆ....ಆಆಆಅ...
ಎಲೆಗಳ ಕಲರವ ಝರಿಗಳ ಮೊರೆತ ವಾಲಗ ಉದಿಹುದು
ಹಕ್ಕಿಯ ಗಾನದ ಮಂತ್ರ ಘೋಷಕೆ ಜಗ ಕಣ್ಣತೆರೆದಿಹುದೋ
ಏಕಾಂತದಲಿ ನಿಶೆ ಮಿಲನದ ಉಷೆಗೆ ಮೆಲ್ಲನೆ ಕರೆದಿಹುದು
ಪ್ರಕೃತಿಯ ಕಾಡು ಚುಂಬಿಸೆ ಬಾನು ಎಲ್ಲಡೆ ಬೆಳಕಿಹುದು
ಆಆಆ...ಆಆಆ... ಆಆಆ...ಆಆಆ...
ಕಾಣುತಿರುವೆ ಪ್ರಣಯದಾಟವ ಮಲೆನಾಡಿನ ಈ ಬೆಳಕಿನಲಿ (ಆಆಆ.)
ಹೇಳುತಿರುವೇ ಪ್ರೇಮದಾಟವ ಸುಳಿಗಾಳಿ ಅಲೆ ಅಲೆಗಳಲಿ
ಆಆಆ....ಆಆಆಅ... ಆಆಆ....ಆಆಆಅ...
--------------------------------------------------------------------------------------------------------------------------
ತೀರದ ಬಯಕೆ (1981)
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಹಾಡಿದವರು: ವಾಣಿಜಯರಾಂ
ಆಆಆ.. ನಾ ಮರೆಯಲಾರೆ ಈ ಸುದಿನ
ನಾ ಮರೆಯಲಾರೆ ಈ ಸುದಿನ ಬಾಳಿಗೆ
ತಂದಿತು ಹೊನ್ನಿನ ನವ ಚೇತನ ನಮ್ಮಿರ್ವರ ಮಧುರ ಮಿಲನ
ನಾ ಮರೆಯಲಾರೆ ಈ ಸುದಿನ
ಬಾಳಿಗೆ ತಂದಿತು ಹೊನ್ನಿನ ನವ ಚೇತನ ನಮ್ಮಿರ್ವರ ಮಧುರ ಮಿಲನ
ಅನುರಾಗ ಮೂಡಿದೆ ಹೊಸ ಜೀವನ
ಹೊಸ ಭಾವ ತಾಳಿದೆ ಮೃದು ಯೌವ್ವನ
ಅನುರಾಗ ಮೂಡಿದೆ ಹೊಸ ಜೀವನ
ಹೊಸ ಭಾವ ತಾಳಿದೆ ಮೃದು ಯೌವ್ವನ
ನಮಗಾಗಿ ಕಾದಿದೆ ಸವಿ ಚುಂಬನ
ನಮಗಾಗಿ ಕಾದಿದೆ ಸವಿ ಚುಂಬನ
ಈ ಮನ ಹಾಡಿದೆ ಸವಿಗಾನ
ನಾ... ಮರೆಯಲಾರೆ ಈ ಸುದಿನ
ನೀ ನಡೆದ ಸ್ಥಳವೆಲ್ಲ ಬೃಂದಾವನ
ನೀ ನುಡಿದ ಮಾತೆಲ್ಲ ಮಧುರ ಗಾನ
ನೀ ನಡೆದ ಸ್ಥಳವೆಲ್ಲ ಬೃಂದಾವನ
ನೀ ನುಡಿದ ಮಾತೆಲ್ಲ ಮಧುರ ಗಾನ
ನಿನ್ನಲುಮೆ ಎನಗಾಯಿತು ಚಿರನೂತನ
ನಿನ್ನಲುಮೆ ಎನಗಾಯಿತು ಚಿರನೂತನ
ಈ ಜಗವೇ ಮರೆತಿದೆ ತನುಮನ

ಈ ಮನಸಿನ ದವನ ಮುಡಿದವಳು ನೀ
ಈ ಒಲವಿನ ಕವನ ಬರೆದವಳು ನೀ
ಈ ಮನಸಿನ ದವನ ಮುಡಿದವಳು ನೀ
ಆಸೆ ಉಯ್ಯಾಲೆ ಮೇಲೆ ನಮ್ಮ ಅನುರಾಗ ಲೀಲೆ
ಹೆಹೆಹೆ ಹೆಹೆಹೆ
ಈ ಒಲವಿನ ಕವನ ಬರೆದವಳು ನೀ
ಈ ಮನಸಿನ ದವನ ಮುಡಿದವಳು ನೀ
ನಯನವೊ ಮಿಂಚಿನ ಬಳೆ ಬಳೆ ನಗುವೊ ರಾಗದ ಅಲೆ ಅಲೆ
ಒಡಲಲಿ ಶಿಲ್ಪಿಯ ಕಲೆ ಕಲೆ ನುಡಿಯಿದು ಮೋಹದ ಬಲೆ ಬಲೆ
ಕುರುಳಿದು ಕಾರ್ಮುಗಿಲೊ ಹೆರಳಿದು ನಾಗಗಳೊ
ಕುರುಳಿದು ಕಾರ್ಮುಗಿಲೊ ಹೆರಳಿದು ನಾಗಗಳೊ
ಭೂಮಿಗಿಳಿದ ಅಪ್ಸರೆಯೊ ನೀ ಭೂಮಿಗಿಳಿದ ಅಪ್ಸರೆಯೊ
ಈ ಒಲವಿನ ಕವನ ಬರೆದವಳು ನೀ
ಈ ಮನಸಿನ ದವನ ಮುಡಿದವಳು ನೀ
ಅಶ್ರಯ ಬಯಸಿದೆ ಲತೆ ಲತೆ ಪ್ರಕೃತಿ ಪುರುಷರ ಕಥೆ ಕಥೆ
ಮಳೆಯನು ಬಯಸಿದೆ ಧರೆ ಧರೆ ಮೈತ್ರಿಯ ಬಯಸಿದೆ ಹರೆ ಹೊರೆ
ಯೌವನ ಸಂಭ್ರಮವೊ ಮನಗಳ ಸಂಗಮವೊ
ಯೌವನ ಸಂಭ್ರಮವೊ ಮನಗಳ ಸಂಗಮವೊ
ಒಡಲು ಬಯಸಿದೆ ಒಡನಾಡಿ ಈ ಒಡಲು ಬಯಸಿದೆ ಒಡನಾಡಿ
ಈ ಒಲವಿನ ಕವನ ಬರೆದವಳು ನೀ
ಈ ಮನಸಿನ ದವನ ಮುಡಿದವಳು ನೀ
ಆಸೆ ಉಯ್ಯಾಲೆ ಮೇಲೆ ನಮ್ಮ ಅನುರಾಗ ಲೀಲೆ
ಹೆಹೆಹೆ ಹೆಹೆಹೆ.. ಹೋ ಹೋ ಹೋ ಹೋ
-------------------------------------------------------------------------------------------------------------------------
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಹಾಡಿದವರು: ಎಸ್.ಪಿ.ಬಿ.
ಕಾಲದ ಕಾಲ ಚೆಂಡಿನ ಆಟ ಬಾಳಿನ ಬಗೆ ಬಗೆ ನೋಟ
ನಿನ್ನೆಯ ರಸಮಯ ಊಟ ಇಂದಿಗೆ ಅದುವೇ ಕಾಲಕೂಟ
ಮಳೆಯನು ಬಯಸಿದೆ ಧರೆ ಧರೆ ಮೈತ್ರಿಯ ಬಯಸಿದೆ ಹರೆ ಹೊರೆ
ಯೌವನ ಸಂಭ್ರಮವೊ ಮನಗಳ ಸಂಗಮವೊ
ಯೌವನ ಸಂಭ್ರಮವೊ ಮನಗಳ ಸಂಗಮವೊ
ಒಡಲು ಬಯಸಿದೆ ಒಡನಾಡಿ ಈ ಒಡಲು ಬಯಸಿದೆ ಒಡನಾಡಿ
ಈ ಒಲವಿನ ಕವನ ಬರೆದವಳು ನೀ
ಈ ಮನಸಿನ ದವನ ಮುಡಿದವಳು ನೀ
ಆಸೆ ಉಯ್ಯಾಲೆ ಮೇಲೆ ನಮ್ಮ ಅನುರಾಗ ಲೀಲೆ
ಹೆಹೆಹೆ ಹೆಹೆಹೆ.. ಹೋ ಹೋ ಹೋ ಹೋ
-------------------------------------------------------------------------------------------------------------------------
ತೀರದ ಬಯಕೆ (1981)
ನಿನ್ನೆಯ ರಸಮಯ ಊಟ ಇಂದಿಗೆ ಅದುವೇ ಕಾಲಕೂಟ
ಆಸೆಯ ಮಂದಿರ ನೋಡಲು ಸುಂದರ ಹೆಸರೋ ಸುಖನಿವಾಸ
ಮೂಡಿದ ಚಂದಿರ ನುಂಗಿದ ರಾಹು ಏನಿದು ವಿಧಿವಿಲಾಸ
ನೀಡುವ ಕರಗಳು ಬೇಡುವ ತೆರದಲಿ ಮಾಡಿತು ಸರ್ವನಾಶ
ಆದರೂ ಕರುಳಿನ ಕುಡಿಗಳ ತುಡಿತ ಏನೀ ಆಶಾ ಪಾಶ
ಕಾಲದ ಕಾಲ ಚೆಂಡಿನ ಆಟ ಬಾಳಿನ ಬಗೆ ಬಗೆ ನೋಟ
ನಿನ್ನೆಯ ರಸಮಯ ಊಟ ಇಂದಿಗೆ ಅದುವೇ ಕಾಲಕೂಟ
ನಿನ್ನೆಯ ರಸಮಯ ಊಟ ಇಂದಿಗೆ ಅದುವೇ ಕಾಲಕೂಟ
ವಂಶವು ನೀಡಿದ ಪಯಣದ ಬುತ್ತಿ ಸಿಹಿಯೋ ಕಹಿಯೋ ತಂದೇ
ಶಾಪದ ಫಲದ ಸೇಡಿನ ಬೆಂಕಿಯು ಬೀಸಿದೆ ಬಲೆಯ ಮುಂದೆ
ಗೋವಿನ ಮುಖದ ಹುಲಿಗಳ ಸಂಚಲಿ ವಂಚನೆ ಗೆಲುತಿದೆ ಇಂದೇ
ಧರ್ಮದ ನೆರಳು ದಿಮ್ಮಿಗೆ ಕಾವಲು ಸಾಧನೆಯ ಗುರಿ ಒಂದೇ
ಕಾಲದ ಕಾಲ ಚೆಂಡಿನ ಆಟ ಬಾಳಿನ ಬಗೆ ಬಗೆ ನೋಟ
ನಿನ್ನೆಯ ರಸಮಯ ಊಟ ಇಂದಿಗೆ ಅದುವೇ ಕಾಲಕೂಟ
ನಿನ್ನೆಯ ರಸಮಯ ಊಟ ಇಂದಿಗೆ ಅದುವೇ ಕಾಲಕೂಟ
ಸೇವೆಯ ಜೀವಿಗೆ ಮಮತೆಯ ಮೂರ್ತಿಗೆ ಪ್ರಾಣವೇ ತೀರದ ಬಯಕೆ
ಪ್ರೀತಿಯ ಚೆಲುವನು ಪ್ರೇಮದ ಚಿಗುರನು ಸುಡುತಿದೆ ತೀರದ ಬಯಕೆ
ಮೋಸದ ಮೋಜಲಿ ಸತ್ಯವ ಕುಂಟಲು ಕಾಡಿದೆ ತೀರದ ಬಯಕೆ
ದೈವದ ನಂಬಿಕೆ ಆಸೆಯ ಆಸರೆ ನೀಡಿದೆ ತೀರದ ಬಯಕೆ
ಕಾಲದ ಕಾಲ ಚೆಂಡಿನ ಆಟ ಬಾಳಿನ ಬಗೆ ಬಗೆ ನೋಟ
ನಿನ್ನೆಯ ರಸಮಯ ಊಟ ಇಂದಿಗೆ ಅದುವೇ ಕಾಲಕೂಟ
ನಿನ್ನೆಯ ರಸಮಯ ಊಟ ಇಂದಿಗೆ ಅದುವೇ ಕಾಲಕೂಟ
-------------------------------------------------------------------------------------------------------------------------
No comments:
Post a Comment