323. ಜಗ ಮೆಚ್ಚಿದ ಮಗ (1972)




ಜಗ ಮೆಚ್ಚಿದ ಮಗ ಚಿತ್ರದ ಹಾಡುಗಳು 
  1. ಇದು ಯಾವ ಜನ್ಮದ ಸ್ನೇಹ 
  2. ಕನಸಿನಲಿ ನನಸಿನಲಿ 
  3. ಒಳಗಿನ ಆಸೆ ಹೇಳುವಾ ಬಾಷೆ 
  4. ಏರಿ ಮೇಲೆ ಏರಿ ಮೇಲೆ ಕೆಳಗೆ ಹಾರಿ 
  5. ಥಾ ಥೈ ಥೈ ಥಕ್ ಕುಣಿಯುವ ಹೆಣ್ಣಿಗೇ 
  6. ಓ.. ರಾಜ ಸಹನೆ ಇರಲಿ 
ಜಗ ಮೆಚ್ಚಿದ ಮಗ (1972)
ಸಾಹಿತ್ಯ: ಹುಣಸೂರ್ ಕೃಷ್ಣಮೂರ್ತಿ ಸಂಗೀತ: ಸತ್ಯಂ ಹಾಡಿದವರು: ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ

ಇದು ಯಾವ ಜನ್ಮದ ಸ್ನೇಹ ಎಳೆ ತಂದು ಬೆಳೆಸಿತು ಮೋಹ
ಒಳಗಿನ ದಾಹ ತಾಳದೆ ದೇಹ   ಹೂಡಾಯ್ತು ಹೊಸದೊಂದು ಸನ್ನಾಹ
ಇದು ಯಾವ ಜನ್ಮದ ಸ್ನೇಹ     ಎಳೆ ತಂದು ಬೆಳೆಸಿತು ಮೋಹ
ಒಳಗಿನ ದಾಹ ತಾಳದೆ ದೇಹ   ಹೂಡಾಯ್ತು ಹೊಸದೊಂದು ಸನ್ನಾಹ
ಇದು ಯಾವ ಜನ್ಮದ ಸ್ನೇಹ

ಕಂಡ ದಿನವೆ ನಿನ್ನ, ವ್ಯಾಮೋಹ ತೋರಿ ನನ್ನ
ಪ್ರಣಯವ ಕೆಣಕಿದೆ ಮನವ ಸೆರೆ ಹಿಡಿದೆ
ಗೋಪ ನಿನ್ನ ಕೈಲಿ, ಆಲಾಪಗೈವ ಮುರಳಿ
ಎನಿಸುತ ನಿನ್ನ ತುಟಿ ಸೋಕು ನನಗಿರಲಿ
ರೂಪಸಿ ಪ್ರೇಯಸಿ, ರೂಪಸಿ ಪ್ರೇಯಸಿ
ಓಲೈಸಿ ಭಲೆಬೀಸಿ ನೀ ಜೈಸಿದೆ
ಇದು ಯಾವ ಜನ್ಮದ ಸ್ನೇಹ      ಎಳೆ ತಂದು ಬೆಳೆಸಿತು ಮೋಹ
ಒಳಗಿನ ದಾಹ ತಾಳದೆ ದೇಹ   ಹೂಡಾಯ್ತು ಹೊಸದೊಂದು ಸನ್ನಾಹ
ಇದು ಯಾವ ಜನ್ಮದ ಸ್ನೇಹ

ನನ್ನ ನಿನ್ನ ಸಂಗ, ಒಂದಾಗಿ ಅಂತರಂಗ
ಜೊತೆಯಲಿ ಬೆಳಗಲಿ ಬದುಕು ರುಚಿಯಿರಲಿ
ಜೀವದಲ್ಲಿ ಜೀವ, ಜೇನಾಗಿ ಬೆರೆತ ಭಾವ
ಸವಿಯುವ ಸೊಗಸಿನ ಸಮಯ ಸರಸಮಯ
ರಾಗವೋ ಭೋಗವೋ, ರಾಗವೋ ಭೋಗವೋ
ಇದು ಯಾವ ಸಂತೋಷದಾವೇಗವೊ
ಇದು ಯಾವ ಜನ್ಮದ ಸ್ನೇಹ
ಎಳೆ ತಂದು ಬೆಳೆಸಿತು ಮೋಹ
ಒಳಗಿನ ದಾಹ ತಾಳದೆ ದೇಹ
ಹೂಡಾಯ್ತು ಹೊಸದೊಂದು ಸನ್ನಾಹ
ಇದು ಯಾವ ಜನ್ಮದ ಸ್ನೇಹ
------------------------------------------------------------------------------------------------------------------------

ಜಗ ಮೆಚ್ಚಿದ ಮಗ (1972) - ಒಳಗಿನ ಆಸೆ ಹೇಳುವ ಭಾಷೆ ಕಣ್ಣಲಿ ಮೂಡ
ಸಾಹಿತ್ಯ: ಹುಣಸೂರ್ ಕೃಷ್ಣಮೂರ್ತಿ ಸಂಗೀತ: ಸತ್ಯಂ ಗಾಯನ: ಪಿ.ಬಿ.ಶ್ರೀನಿವಾಸ್


ಒಳಗಿನ ಆಸೆ ಹೇಳುವ ಭಾಷೆ ಕಣ್ಣಲಿ ಮೂಡಿ ನಿಂತಿದೆ
ಬಾಳಿಗೆ ಜೋಡಿ ಬೇಕೆನುವಂಥಾ ಮೋಜದು ಮೈ ತಾಳಿದೇ
ಓ ಸುಂದರೀ ನಾ ಬಲ್ಲೆನೇ  ಓ ಸುಂದರೀ ನಾ ಬಲ್ಲೆನೇ...

ಒಲ್ಲೆ ಎಂದರೇ ಅರ್ಥವದೇನೇ ..೨..
ನಿಲ್ಲು ಒಪ್ಪಿದೇ ಬಾ ಎಂದೇನೇ ನಿನ್ನಾ ಸೂಚನೇ
ಆಗಲೀ ಸಮ್ಮತಾ ಒಪ್ಪಿದೇ ಸ್ವಾಗತಾ
ಸ್ವಾಗತಾ..ಈಯ್ಯ ಈಯ್ಯ ಈಯ್ಯಾ....ಒಳಗಿನ ಆಸೆ....

ಕೈಯ ಸೋಕಿಗೇ ಬಳುಕುವೆ ಏಕೇ ..೨..
ತುಂಬು ಬಾಗಿಗೇ ಜೇನದು ಬೇಕೆ ಸಾಕೀ ನಾಚಿಕೇ
ತೀರಿಸೀ ಕೋರಿಕೇ ನೀಡುವೇ ಕಾಣಿಕೇ
ಕಾಣಿಕೇ..ಈಯ್ಯ ಈಯ್ಯ ಈಯ್ಯಾ....ಒಳಗಿನ ಆಸೆ...
----------------------------------------------------------------------------------------------------------------------

ಜಗ ಮೆಚ್ಚಿದ ಮಗ (1972)
ಸಾಹಿತ್ಯ: ಹುಣಸೂರ್ ಕೃಷ್ಣಮೂರ್ತಿ ಸಂಗೀತ: ಸತ್ಯಂ ಹಾಡಿದವರು: ಪಿ.ಬಿ.ಶ್ರೀನಿವಾಸ್, ಎಲ್.ಆರ್.ಈಶ್ವರಿ 


ಏರಿ ಮೇಲೆ ಏರಿ ಮೇಲೆ ಕೆಳಗೆ ಹಾರಿ
ಹಕ್ಕಿ ಬಂತು ಕುಂತೈಯ್ತಲ್ಲೋ ಮಾವಾ... ಕಾದೈತೆ .. ಕೊಬ್ಬಾಯಿತೇ ...

ಗುರುಗುಟ್ಟಿ ನೋಡಿ ಘುರ್ ಅನ್ನಬೇಡ
ದುರುಗಟ್ಟಿ ತೋಳ ತಟ್ಟಲು ಬ್ಯಾಡ
ಗುಮ್ಮನ ಹಾಗೆ ಸುಮ್ಕಿರಬೇಡ
ಗುಂಪಿನಲ್ಲಿ ಕೆಣಕಬೇಡಾ..
ಅಹ್ ಅಹ್ ಅಹ್ ಅಹ್ ಮಾವೋ...
ಏರಿ ಮೇಲೆ ಏರಿ ಮೇಲೆ ಕೆಳಗೆ ಹಾರಿ
ಹಕ್ಕಿ ಬಂತು ಕುಂತೈಯ್ತಲ್ಲೋ ಮಾವಾ... ಕಾದೈತೆ .. ಕೊಬ್ಬಾಯಿತೇ ... 

ಮಲಗಿದ್ರೆ ಮುಟ್ಟಿ ಎಬ್ಬಿಸಬೇಡ 
ಸೊಗಸಿದ್ರೇ ನಿನ್ನ ಚಾಲಕು ತೋರೊಸೋ 
ಜಾಗ ನೋಡಿ ಸೋಡ್ದು  ಹೊಡೆದು 
ಮೇಲೆ ಬಿದ್ದು ಗುದ್ದಾಡಬೇಡಾ... 
ಅಹ್ ಅಹ್ ಅಹ್ ಅಹ್ ಮಾವೋ...
ಏರಿ ಮೇಲೆ ಏರಿ ಮೇಲೆ ಕೆಳಗೆ ಹಾರಿ
ಹಕ್ಕಿ ಬಂತು ಕುಂತೈಯ್ತಲ್ಲೋ ಮಾವಾ... ಕಾದೈತೆ .. ಕೊಬ್ಬಾಯಿತೇ ... 
-----------------------------------------------------------------------------------------------------------------------

ಜಗ ಮೆಚ್ಚಿದ ಮಗ (1972)
ಸಾಹಿತ್ಯ: ಹುಣಸೂರ್ ಕೃಷ್ಣಮೂರ್ತಿ ಸಂಗೀತ: ಸತ್ಯಂ ಹಾಡಿದವರು: ಪಿ.ಬಿ.ಶ್ರೀನಿವಾಸ್,

ತಾ ಥೈ ತಾ ಥೈ ತಾ ಥೈ ತತಹ
ತಾ ಥೈ ಥೈ ತಕ ಕುಣಿಯುವ ಹೆಣ್ಣೇ
ನಿನ್ನ ಕೈಯ್ಯಿಗೆ ಕತ್ತಿ ಏತಕೆ ಹೊಳೆಯುವ ಕಂಗಳೇ ಸಾಕೆ ಚಿನ್ನಾ..
ಹೊಳೆಯುವ ಕಂಗಳೇ ಸಾಕೆ
ತಾ ಥೈ ಥೈ ತಕ ಕುಣಿಯುವ ಹೆಣ್ಣೇ
ನಿನ್ನ ಕೈಯ್ಯಿಗೆ ಕತ್ತಿ ಏತಕೆ ಹೊಳೆಯುವ ಕಂಗಳೇ ಸಾಕೆ ಚಿನ್ನಾ..
ಹೊಳೆಯುವ ಕಂಗಳೇ ಸಾಕೆ

ಓ ಹೆಣ್ಣೇ ನಿನ್ನ ವಯ್ಯಾರದಲ್ಲಿ ಆ..ಆ...ಆ..
ಓ ಹೆಣ್ಣೇ ನಿನ್ನ ವಯ್ಯಾರದಲ್ಲಿ ತೋರಿಸೇ ಎಲ್ಲ ಬೇರೆಡೆಯಲ್ಲಿ
ಅಲ್ಲಿಗೆ ಬೇಕು ತಾಂಬೂಲ ಗಂಧ
ಅಲ್ಲಿಗೆ ಬೇಕು ತಾಂಬೂಲ ಗಂಧ 
ತಂದು ಸೋಲಿಸೆ ಮೋಹದಿಂದ 
ತಾ ಥೈ ಥೈ ತಕ ಕುಣಿಯುವ ಹೆಣ್ಣೇ
ನಿನ್ನ ಕೈಯ್ಯಿಗೆ ಕತ್ತಿ ಏತಕೆ ಹೊಳೆಯುವ ಕಂಗಳೇ ಸಾಕೆ ಚಿನ್ನಾ..
ಹೊಳೆಯುವ ಕಂಗಳೇ ಸಾಕೆ

ಸುಂದರಿ ನನ್ನ ಅರ್ಧಂಗಿಯಾಗಿ ಚಂದದ ಒಂದು ಕಂದನ ಪಡೆದು
ಲೊಳೊಆಯೀ  ಲೊಳೊಆಯೀ
ಸುಂದರಿ ನನ್ನ ಅರ್ಧಂಗಿಯಾಗಿ ಚಂದದ ಒಂದು ಕಂದನ ಪಡೆದು
ತೊಟ್ಟಿಲ ಹೂಡಿ ಲಾಲಿ ಹಾಡಿ 
ತೊಟ್ಟಿಲ ಹೂಡಿ ಲಾಲಿ ಹಾಡಿ
ಕಲಹವಾದೆ ನನ್ನ ಜೋಡಿ ಕೂಡಿ
ಜೋ ಜೋ ಜೋ ಲಾಲಿ ಜೋ ಜೋ ಜೋ ಲಾಲಿ
ತಾ ಥೈ ಥೈ ತಕ ಕುಣಿಯುವ ಹೆಣ್ಣೇ
ನಿನ್ನ ಕೈಯ್ಯಿಗೆ ಕತ್ತಿ ಏತಕೆ ಹೊಳೆಯುವ ಕಂಗಳೇ ಸಾಕೆ ಚಿನ್ನಾ..
ಹೊಳೆಯುವ ಕಂಗಳೇ ಸಾಕೆ
--------------------------------------------------------------------------------------------------------------------------

ಜಗ ಮೆಚ್ಚಿದ ಮಗ (1972)
ಸಾಹಿತ್ಯ: ಹುಣಸೂರ್ ಕೃಷ್ಣಮೂರ್ತಿ ಸಂಗೀತ: ಸತ್ಯಂ ಹಾಡಿದವರು: ಎಸ್. ಜಾನಕೀ 

ಓ ರಾಜ ಸಹನೆ ಇರಲಿ ಸಮಯ ಬರಲಿ
ಹೆಣ್ಣು ಒಂದು ಜಿಂಕೆಯಂತೆ ಕೆಣಕಿ ನೋಡು ಬೆಂಕಿಯಂತೆ
ಸಮಯವು ಬರಲಿ

ಮೈಗೆ ಮೈಯ್ಯನು ಸೋಕಿಸು ಮೆಚ್ಚಿ
ಮಾರನಾಟದ ಕಿಚ್ಚನು ಹಚ್ಚಿ
ಮೈಗೆ ಮೈಯ್ಯನು ಸೋಕಿಸು ಮೆಚ್ಚಿ
ಮಾರನಾಟದ ಕಿಚ್ಚನು ಹಚ್ಚಿ
ಸಮಯವೂ ಬರಲಿ ಓ ರಾಜ

ತೂಗು ಮಂಚದ ಹಾಸಿಗೆಯಲಿ
ಮಲ್ಲೆ ಜಾಜಿಯ ಹೂಗಳ ಚೆಲ್ಲಿ
ತೂಗು ಮಂಚದ ಹಾಸಿಗೆಯಲಿ
ಮಲ್ಲೆ ಜಾಜಿಯ ಹೂಗಳ ಚೆಲ್ಲಿ
ರಂಗಿನ ರಂಗು ರಂಗಿನ ರಂಗು ತೋರಿಸಿ ರಂಗು ಹೀರಿಸಿ 
ಆ ರಂಗ ಸವಿಯೋ ರಸಿಕ ರಂಗ
ಹಾಂ... ಸಮಯವು ಬರಲಿ ಓ ರಾಜ
ಸಹನೆ ಇರಲಿ ಸಮಯವೂ ಬರಲಿ
ಹೆಣ್ಣು ಒಂದು ಜಿಂಕೆಯಂತೆ ಕೆಣಕಿ ನೋಡು ಬೆಂಕಿಯಂತೆ
ಸಮಯವು ಬರಲಿ
-------------------------------------------------------------------------------------------------------------------------

ಜಗ ಮೆಚ್ಚಿದ ಮಗ (1972)
ಸಾಹಿತ್ಯ: ಹುಣಸೂರ್ ಕೃಷ್ಣಮೂರ್ತಿ ಸಂಗೀತ: ಸತ್ಯಂ ಹಾಡಿದವರು: ಪಿ.ಲೀಲಾ 

ಕನಸಲಿ ನನಸಲಿ ಮಾತಲ್ಲಿ ನಡೆಯಲ್ಲಿ
ಮೈಮರೆತು ಅಪರಾಧ ನಾನಂತೂ ಮಾಡಿಲ್ಲಾ
ನಿನ್ನ ದೃಷ್ಠಿಯಲ್ಲಿಂದು ಧೂರ್ತಳಾದರೇ ನನ್ನ
ಎದೆ ಇರಿದು ಸಂಹರಿಸಿ ಕಣ್ಣೀರ ನಿಲ್ಲಿಸಮ್ಮಾ
ಶರಣು ಬಂದಿಹ ನನ್ನ ಸಾಕ್ಷಿಯಾಗಿಹ ನೀನು
ಸತ್ಯವೇನೆಂಬುವುದನ್ನು ಇತ್ಯರ್ಥ ಮಾಡಮ್ಮಾ
ಇತ್ಯರ್ಥ ಮಾಡಮ್ಮಾ
-------------------------------------------------------------------------------------------------------------------------







No comments:

Post a Comment