ಅರಿಶಿನ ಕುಂಕುಮ ಚಲನಚಿತ್ರದ ಹಾಡುಗಳು
- ಇಳಿದು ಬಾ ತಾಯಿ ಇಳಿದು ಬಾ
- ನಾನು ನೀನೂ ಜೊತೆಯಿರಲೂ ಕಾಲದ ನೆನಪೇ ಬೇಕಿಲ್ಲಾ
- ಈ ಕೆನ್ನೇ ನೋಡು ಹೇಗೆ ಗುಲಾಬಿ ಆಯಿತು
- ಅರಿಶಿನ ಕುಂಕುಮ ಸೌಭಾಗ್ಯ ತಂದ
- ಗೋಪುರ ಕಂಡು ಹೋಗಲು ಗುಡಿಯೋಳು ದೇವರು ಇಲ್ಲವೇ
ಸಂಗೀತ : ವಿಜಯಭಾಸ್ಕರ್ ಸಾಹಿತ್ಯ : ವರಕವಿ ಡಾ.ದ.ರಾ.ಬೇಂದ್ರೆ ಗಾಯನ : ಡಾ.ಪಿ.ಬಿ.ಶ್ರೀನಿವಾಸ್
ಹೆಣ್ಣು : ಆಆ..ಆಆ.. ಆಆ..ಆಆ..
ಗಂಡು : ಓಂ..ಓಂ..ಓಂ..ಇಳಿದು ಬಾ ತಾಯಿ ಇಳಿದು ಬಾ
ಇಳಿದು ಬಾ ತಾಯಿ ಇಳಿದು ಬಾ ಹರನ ಜಡೆಯಿಂದ ಹರಿಯ ಅಡಿಯಿಂದಗಂಡು : ಓಂ..ಓಂ..ಓಂ..ಇಳಿದು ಬಾ ತಾಯಿ ಇಳಿದು ಬಾ
ಋಷಿಯ ತೊಡೆಯಿಂದ ನುಸುಳಿ ಬಾ ದೇವ ದೇವರನು ತಣಿಸಿ ಬಾ
ದಿಗ್ ದಿಗಂತದಲಿ ಘಣಿಸಿ ಬಾ ಚರಾಚರಗಳಿಗೆ ಉಣಿಸಿ ಬಾ
ನಿನಗೆ ಪೊಡಮಡುವೆ ನಿನ್ನ ನುಡುತೊಡುವೆ ಏಕೆ ಎಡೆತಡೆವೆ ಸುರಿದು ಬಾ (ಆಆ)
ಸ್ವರ್ಗ ತೊರೆದು ಬಾ (ಆಆ) ಬಯಲ ಜರೆದು ಬಾ (ಆಆ) ನೆಲೆದೆ ಹರಿದು ಬಾ (ಆಆ)
ಬಾರೆ ಬಾ ತಾಯಿ ಇಳಿದು ಬಾ
ಕೋರಸ್ : ಆಆಆಆಆಆಆಆಆಆಆಆಆಆ... ಆಆಆ...
ಗಂಡು : ದಯೆಯಿರದ ದೀನ ಹರೆಯಳಿದ ಹೀನ ನೀರಿರರದ ಮೀನ ಕರೆಕರೆವ ಬಾ
ಕರುಕಂಡ ಕರುಳೆ ಮನವುಂಡ ಮರುಳೆ ಉದ್ದoಡ ಅರುಳೆ ಸುಳಿಸುಳಿದೆ ಬಾ
ಶಿವಶುಭ್ರ ಕರುಣೆ ಅತಿಗಿoಚದರುಣೆ ವಾತ್ಸಲ್ಯವರುಣೆ ಇಳಿ ಇಳಿದು ಬಾ
ಸುರಸ್ವಪ್ನವಿದ್ದ ಪ್ರತಿಬಿಂಬವಿದ್ದ ಉದ್ದುದ್ದ ಶುದ್ದ ನೀರೇ..ನೀರೇ..
ಎಚ್ಚೆತ್ಟು ಎದ್ದ ಆಕಾಶದುದ್ದ ಧರೆಗಿಳಿಯಲಿದ್ದ ಧೀರೆ
ಸಿರಿವಾರಿಜಾತ ವರಪಾರಿಜಾತ ತಾರಾ ಕುಸುಮದಿಂದೇ
ಬೃoದಾರವoದೆ ಮಂದಾರಗಂದೆ ನೀನೇ ತಾಯಿ ತಂದೇ
ರಸಪೂರ್ಣಜನ್ಯೆ ನೀನಲ್ಲ ಅನ್ಯೆ ಸಚ್ಚಿದಾನಂದಕನ್ಯೆ....ಕನ್ಯೆ
ಇಳಿದು ಬಾ ತಾಯಿ ಇಳಿದು ಬಾ
ಗಂಡು : ಬಂದಾರೆ ಬಾರೆ ಒಂದಾರೆ ಸಾರೆ ಕಣ್ ಧಾರೆ ತಡೆವರೆನೇ
ಅವತಾರವೆಂದೇ ಎಂದಾರೆ ತಾಯಿ ಈ ಅಧ:ಪಾತವನ್ನೇ
ಹರಕೆ ತಂದಂತೆ ಮಮತೆ ಮಿಂದಂತೆ ತುoಬಿ ಬಂದಂತೆ
ಬಂದಾರೆ ಬಾರೆ ಒಂದಾರೆ ಸಾರೆ ಕಣ್ ಧಾರೆ ತಡೆವರೆನೇ
ಅವತಾರವೆಂದೇ ಎಂದಾರೆ ತಾಯಿ ಈ ಅಧ:ಪಾತವನ್ನೇ
ಹರಕೆ ತಂದಂತೆ ಮಮತೆ ಮಿಂದಂತೆ ತುoಬಿ ಬಂದಂತೆ
ಗಂಡು : ದುಂ ದುಂ ಎಂದಂತೆ ದುಡುಕಿ ಬಾ ನಿನ್ನ ಕಂದನ್ನ ಹುಡುಕಿ ಬಾ
ಹುಡುಕಿ ಬಾ ತಾಯಿ ದುಡುಕಿ ಬಾ ಹರಣ ಹೊಸತಾಗೇ ಹೊಳೆದು ಬಾ
ಬಾಳು ಬೆಳಕಾಗಿ ಬೆಳೆದು ಬಾ ಶಂಭು ಶಿವಹರನ ಚಿತ್ತೆ ಬಾ
ದತ್ತ ನರಹರಿಯ ಮುತ್ತೆ ಬಾ (ಆಅ ) ಅoಬಿಕಾತನಯನತ್ತೆ ಬಾ
ಇಳಿದು ಬಾ ತಾಯಿ ಇಳಿದು ಬಾ ಇಳಿದು ಬಾ ತಾಯಿ ಇಳಿದು ಬಾ
ಕೋರಸ್ : ಆಆಆ...ಆಆಆ.... ಆಆಆ...
-----------------------------------------------------------------------------------------------------------------------
ಸಂಗೀತ: ವಿಜಯಭಾಸ್ಕರ್, ಸಾಹಿತ್ಯ: ಚಿ.ಉದಯಶಂಕರ್ ಗಾಯನ: ಪಿ.ಬಿ. ಶ್ರೀನಿವಾಸ್ ಮತ್ತು ಎಸ್.ಜಾನಕಿ
ಗಂಡು : ನಾನು ನೀನೂ ಜೊತೆಯಿರಲೂ ಕಾಲದ ನೆನಪೇ ಬೇಕಿಲ್ಲಾ
ಹೆಣ್ಣು : ನಾನು ನೀನೂ ಜೊತೆಯಿರಲೂ ಕಾಲದ ನೆನಪೇ ಬೇಕಿಲ್ಲಾ
ಗಂಡು : ಋತುಗಳೂ ಕಾಲದಾ ಮಾತುಗಳೂ ಅವುಗಳ ಭೇದವೇ ನಮಗಿಲ್ಲಾ...
ಹೆಣ್ಣು : ಋತುಗಳೂ ಕಾಲದಾ ಮಾತುಗಳೂ ಅವುಗಳ ಭೇದವೇ ನಮಗಿಲ್ಲಾ...
ಇಬ್ಬರು : ನಾನು ನೀನೂ
ಗಂಡು : ಕಣ್ಣು ಕಣ್ಣು ಕಲೆತಿರಲೂ ಹಗಲೂ ಇರುಳಿನ ಅರಿವಿಲ್ಲಾ
ತುಟಿಯೂ ತುಟಿಯೂ ಸೇರಿರಲೂ ಮಧುಮಾಸವೇ ಪ್ರತಿಕ್ಷಣವೆಲ್ಲಾ......
ಹೆಣ್ಣು : ಕಣ್ಣು ಕಣ್ಣು ಕಲೆತಿರಲೂ ಹಗಲೂ ಇರುಳಿನ ಅರಿವಿಲ್ಲಾ

ಹೆಣ್ಣು : ಮನಸೂ ಮನಸೂ ಬೆರೆತಿರಲೂ ಅಂದವೆ ನೋಡಿದ ಕಡೆಯೆಲ್ಲಾ
ತನುವೂ ತನುವೂ ಬೆಸೆದಿರಲೂ ಸ್ವರ್ಗವೇ ನಮಗೇ ಬಾಳೆಲ್ಲಾ......
ಹರಕೆ ತಂದಂತೆ ಮಮತೆ ಮಿಂದಂತೆ ತುoಬಿ ಬಂದಂತೆ
ಬಂದಾರೆ ಬಾರೆ ಒಂದಾರೆ ಸಾರೆ ಕಣ್ ಧಾರೆ ತಡೆವರೆನೇ
ಅವತಾರವೆಂದೇ ಎಂದಾರೆ ತಾಯಿ ಈ ಅಧ:ಪಾತವನ್ನೇ
ಹರಕೆ ತಂದಂತೆ ಮಮತೆ ಮಿಂದಂತೆ ತುoಬಿ ಬಂದಂತೆ
ಗಂಡು : ದುಂ ದುಂ ಎಂದಂತೆ ದುಡುಕಿ ಬಾ ನಿನ್ನ ಕಂದನ್ನ ಹುಡುಕಿ ಬಾ
ಹುಡುಕಿ ಬಾ ತಾಯಿ ದುಡುಕಿ ಬಾ ಹರಣ ಹೊಸತಾಗೇ ಹೊಳೆದು ಬಾ
ಬಾಳು ಬೆಳಕಾಗಿ ಬೆಳೆದು ಬಾ ಶಂಭು ಶಿವಹರನ ಚಿತ್ತೆ ಬಾ
ದತ್ತ ನರಹರಿಯ ಮುತ್ತೆ ಬಾ (ಆಅ ) ಅoಬಿಕಾತನಯನತ್ತೆ ಬಾ
ಇಳಿದು ಬಾ ತಾಯಿ ಇಳಿದು ಬಾ ಇಳಿದು ಬಾ ತಾಯಿ ಇಳಿದು ಬಾ
ಕೋರಸ್ : ಆಆಆ...ಆಆಆ.... ಆಆಆ...
-----------------------------------------------------------------------------------------------------------------------
ಅರಿಶಿನ ಕುಂಕುಮ (1970) - ನಾನು ನೀನೂ ಜೊತೆಯಿರಲೂ
ಹೆಣ್ಣು : ನಾನು ನೀನೂ ಜೊತೆಯಿರಲೂ ಕಾಲದ ನೆನಪೇ ಬೇಕಿಲ್ಲಾ
ಗಂಡು : ಋತುಗಳೂ ಕಾಲದಾ ಮಾತುಗಳೂ ಅವುಗಳ ಭೇದವೇ ನಮಗಿಲ್ಲಾ...
ಹೆಣ್ಣು : ಋತುಗಳೂ ಕಾಲದಾ ಮಾತುಗಳೂ ಅವುಗಳ ಭೇದವೇ ನಮಗಿಲ್ಲಾ...
ಇಬ್ಬರು : ನಾನು ನೀನೂ
ತುಟಿಯೂ ತುಟಿಯೂ ಸೇರಿರಲೂ ಮಧುಮಾಸವೇ ಪ್ರತಿಕ್ಷಣವೆಲ್ಲಾ......
ಹೆಣ್ಣು : ಕಣ್ಣು ಕಣ್ಣು ಕಲೆತಿರಲೂ ಹಗಲೂ ಇರುಳಿನ ಅರಿವಿಲ್ಲಾ
ತುಟಿಯೂ ತುಟಿಯೂ ಸೇರಿರಲೂ ಮಧುಮಾಸವೇ ಪ್ರತಿಕ್ಷಣವೆಲ್ಲಾ......
ಹೆಣ್ಣು : ಮನಸೂ ಮನಸೂ ಬೆರೆತಿರಲೂ ಅಂದವೆ ನೋಡಿದ ಕಡೆಯೆಲ್ಲಾ
ತನುವೂ ತನುವೂ ಬೆಸೆದಿರಲೂ ಸ್ವರ್ಗವೇ ನಮಗೇ ಬಾಳೆಲ್ಲಾ......
ಹೆಣ್ಣು : ಮನಸೂ ಮನಸೂ ಬೆರೆತಿರಲೂ ಅಂದವೆ ನೋಡಿದ ಕಡೆಯೆಲ್ಲಾ
ತನುವೂ ತನುವೂ ಬೆಸೆದಿರಲೂ ಸ್ವರ್ಗವೇ ನಮಗೇ ಬಾಳೆಲ್ಲಾ......
ತನುವೂ ತನುವೂ ಬೆಸೆದಿರಲೂ ಸ್ವರ್ಗವೇ ನಮಗೇ ಬಾಳೆಲ್ಲಾ......
ಗಂಡು : ಸರಸದಿ ವೇಳೆಯು ಕಳೆದಿರಲೂ...
ಸರಸದಿ ವೇಳೆಯು ಕಳೆದಿರಲೂ ಬರಿಬೆಳದಿಂಗಳೇ ಬಿಸಿಲೆಲ್ಲಾ
ಪ್ರಣಯದ ಪಯಣವು ಸಾಗಿರಲೂ...
ಪ್ರಣಯದ ಪಯಣವು ಸಾಗಿರಲೂ ಹರುಷವೂ ನಮಗೇ ಬದುಕೆಲ್ಲಾ......
ಹೆಣ್ಣು : ಸರಸದಿ ವೇಳೆಯು ಕಳೆದಿರಲೂ...
ಸರಸದಿ ವೇಳೆಯು ಕಳೆದಿರಲೂ ಬರಿಬೆಳದಿಂಗಳೇ ಬಿಸಿಲೆಲ್ಲಾ
ಪ್ರಣಯದ ಪಯಣವು ಸಾಗಿರಲೂ...
ಪ್ರಣಯದ ಪಯಣವು ಸಾಗಿರಲೂ ಹರುಷವೂ ನಮಗೇ ಬದುಕೆಲ್ಲಾ......
ಸರಸದಿ ವೇಳೆಯು ಕಳೆದಿರಲೂ ಬರಿಬೆಳದಿಂಗಳೇ ಬಿಸಿಲೆಲ್ಲಾ
ಪ್ರಣಯದ ಪಯಣವು ಸಾಗಿರಲೂ...
ಪ್ರಣಯದ ಪಯಣವು ಸಾಗಿರಲೂ ಹರುಷವೂ ನಮಗೇ ಬದುಕೆಲ್ಲಾ......
ಹೆಣ್ಣು : ಒಲವಿನ ಗೀತೆಯಾ ಹಾಡುತಿರೇ ಕಾಮನ ಬಿಲ್ಲಿನ ಬಣ್ಣಗಳೂ
ಪ್ರೇಮದ ಸುಧೆಯನು ಸವಿಯನು ಸವಿಯುತಿರೇ ಬಾಳಿನ ಜೋಡಿಯ ಕಣ್ಣುಗಳೂ......
ಗಂಡು : ಒಲವಿನ ಗೀತೆಯಾ ಹಾಡುತಿರೇ ಕಾಮನ ಬಿಲ್ಲಿನ ಬಣ್ಣಗಳೂ
ಪ್ರೇಮದ ಸುಧೆಯನು ಸವಿಯನು ಸವಿಯುತಿರೇ ಬಾಳಿನ ಜೋಡಿಯ ಕಣ್ಣುಗಳೂ......
ಪ್ರೇಮದ ಸುಧೆಯನು ಸವಿಯನು ಸವಿಯುತಿರೇ ಬಾಳಿನ ಜೋಡಿಯ ಕಣ್ಣುಗಳೂ......
ಋತುಗಳೂ ಕಾಲದಾ ಮಾತುಗಳೂ ಅವುಗಳಾ ಭೇದವೇ ನಮಗಿಲ್ಲಾ...ನಾನು ನೀನು...
--------------------------------------------------------------------------------------------------------------------------
ಅರಿಶಿನ ಕುಂಕುಮ (1970) - ಈ ಕೆನ್ನೇ ನೋಡು ಹೇಗೆ ಗುಲಾಬಿ ಆಯಿತೂ
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಚಿ.ಉದಯಶಂಕರ್ ಗಾಯನ: ಎಲ್.ಆರ್.ಈಶ್ವರಿ, ಎಸ್.ಜಾನಕಿ
ಕಲ್ಪನಾ : ಈ ಕೆನ್ನೆ ನೋಡು ಹೇಗೆ ಗುಲಾಬಿ ಆಯಿತು
ರಾಧಾ : ಅಹ್ಹಹ್ಹಹ.. ಆ ಕಣ್ಣುಗಳಲಿ ಹೇಗೆ ಆನಂದ ತುಂಬಿತು
ಕಲ್ಪನಾ : ಅಹ್ಹಹ್ಹಹಹ.. ಈ ಕೆನ್ನೆ ನೋಡು ಹೇಗೆ ಗುಲಾಬಿ ಆಯಿತು ನೋಡು
ರಾಧಾ : ಆ ಕಣ್ಣುಗಳಲಿ ಹೇಗೆ ಆನಂದ ತುಂಬಿತು
ಕಲ್ಪನಾ : ಈ ಕೆನ್ನೆ ನೋಡು ಹೇಗೆ ಗುಲಾಬಿ ಆಯಿತು ನೋಡು
ರಾಧಾ : ಆ ಕಣ್ಣುಗಳಲಿ ಹೇಗೆ ಆನಂದ ತುಂಬಿತು
ಇಬ್ಬರು : ಅವರೊಡನೆ ಹೊಸತನದ ಮಧು ಚಂದಿರ ಹೊರಡುವ ದಿನ ಬರುತಿಹುದು ಬಲು ಹತ್ತಿರ

ಕಲ್ಪನಾ : ಗಗನದಲ್ಲಿ ಹಾರುವಾ ಸುಯೋಗ ಬಂದಿದೇ ... ಗಗನ ಸಖಿಯ ಆರೈಕೆ ನಿಮಗಾಗಿದೇ
ರಾಧಾ : ಗಗನದಲ್ಲಿ ಹಾರುವಾ ಸುಯೋಗ ಬಂದಿದೇ ... ಗಗನ ಸಖಿಯ ಆರೈಕೆ ನಿಮಗಾಗಿದೇಕಲ್ಪನ : ಹೊಸ ಗಾಳಿ ಹೊಸ ಜನರೂ ಹೊಸ ಊರಲಿ ಹೊಸ ರೀತಿಯ ಅನುಭವವೂ ನಿಮ್ಮ ಕಾದಿದೇ ..
ಈ ಕೆನ್ನೆ ನೋಡು ಹೇಗೆ ಗುಲಾಬಿ ಆಯಿತು ನೋಡು
ರಾಧಾ : ಆ ಕಣ್ಣುಗಳಲಿ ಹೇಗೆ ಆನಂದ ತುಂಬಿತು
ಕಲ್ಪನ : ಬೆಳಗಾಗಲೂ ಕಂಡೋಡನೇ ಗುಡ್ ಮಾರ್ನಿಂಗ್ ಸಂಜೆ ಮನೆಗೆ ಹಿಂದಿರುವವಳೂ ಗುಡ್ ಇವಿನಿಂಗ್
ರಾಧಾ : ಚಳಿಯೂರಿನ ಮನೆಯಲ್ಲಿ ಡಾರ್ಲಿಂಗ್ ಡಾರ್ಲಿಂಗ್ ನಮಗಿಲ್ಲಿ ನೀವಿಲ್ಲದೇ ಬೋರಿಂಗ್ ಬೋರಿಂಗ್
ಕಲ್ಪನಾ : ಈ ಕೆನ್ನೆ ನೋಡು ಹೇಗೆ ಗುಲಾಬಿ ಆಯಿತು ನೋಡು
ರಾಧಾ : ಆ ಕಣ್ಣುಗಳಲಿ ಹೇಗೆ ಆನಂದ ತುಂಬಿತು
ಕಲ್ಪನ : ಪಯಣದಿಂದ ಸುಖ ಶಾಂತಿ ನಿಮಗೇ ದೊರಕಲೀ ದಯ ತುಂಬಿದ ನಿಮ್ಮ ಮನಸು ನಮ್ಮೊಡಲಿರಲಿ
ರಾಧಾ : ಪಯಣದಿಂದ ಸುಖ ಶಾಂತಿ ನಿಮಗೇ ದೊರಕಲೀ ದಯ ತುಂಬಿದ ನಿಮ್ಮ ಮನಸು ನಮ್ಮೊಡಲಿರಲಿ
ಇಬ್ಬರು : ಎಲ್ಲಿರಲಿ ಎಂತಿರಲಿ ಪ್ರತಿನಿಮಿಷದಲಿ ಈ ಮಕ್ಕಳ ಸವಿನೆನಪು ಚಿರವಾಗಿರಲೀ ..
ಕಲ್ಪನಾ : ಈ ಕೆನ್ನೆ ನೋಡು ಹೇಗೆ ಗುಲಾಬಿ ಆಯಿತು ನೋಡು
ರಾಧಾ : ಆ ಕಣ್ಣುಗಳಲಿ ಹೇಗೆ ಆನಂದ ತುಂಬಿತು
ಇಬ್ಬರು : ಅವರೊಡನೆ ಹೊಸತನದ ಮಧು ಚಂದಿರ ಹೊರಡುವ ದಿನ ಬರುತಿಹುದು ಬಲು ಹತ್ತಿರ
ಕಲ್ಪನಾ : ಈ ಕೆನ್ನೆ ನೋಡು ಹೇಗೆ ಗುಲಾಬಿ ಆಯಿತು ನೋಡು
ರಾಧಾ : ಆ ಕಣ್ಣುಗಳಲಿ ಹೇಗೆ ಆನಂದ ತುಂಬಿತು
--------------------------------------------------------------------------------------------------------------------------
ಅರಿಶಿನ ಕುಂಕುಮ (1970) - ಅರಿಶಿನ ಕುಂಕುಮ ಸೌಭಾಗ್ಯ ತಂದ
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಚಿ.ಉದಯಶಂಕರ್ ಗಾಯನ: ಎಸ್.ಜಾನಕಿ
ಅರಿಷಿಣ ಕುಂಕುಮ.. ಅರಿಷಿಣ ಕುಂಕುಮ ಸೌಭಾಗ್ಯ ತಂದ ತಾಯಾಗುವ ಆನಂದ ನಿನಗಾಯಿತು
ಅರಿಷಿಣ ಕುಂಕುಮ ಸೌಭಾಗ್ಯ ತಂದ ತಾಯಾಗುವ ಆನಂದ ನಿನಗಾಯಿತು
ನಿನಗಾದ ಉಲ್ಲಾಸ ನಮಗಾಯ್ತು ನಿನ್ನಿಂದ ಮನವೆಲ್ಲ ಮನೆಯಲ್ಲ ಬೆಳಕಾಯಿತು

ಬೇಡಿದ ವರವಾಗಿ ಒಲವಿನ ಫಲವಾಗಿ ಸಿರಿಯೊಂದು ದೊರೆಯುವ ದಿನ ಬಂದಿದೇ..

ಗುಣವಿರಲೀ ನಿನ್ನಂತೇ ಚೆಲುವಿರಲಿ ಅವರಂತೇ
ಗುಣವಿರಲೀ ನಿನ್ನಂತೇ ಚೆಲುವಿರಲಿ ಅವರಂತೇ ಮೈತುಂಬಿ ಮನದಾಸೆ ನೇರವಿರಲೀ
ಅರಿಷಿಣ ಕುಂಕುಮ ಸೌಭಾಗ್ಯ ತಂದ ತಾಯಾಗುವ ಆನಂದ ನಿನಗಾಯಿತು
ಕೃಷ್ಣನೇ ಬರುವನೋ ರಾಧೆಯೂ ಬರುವಳೋ ಮಾತೆಯ ಮಡಿಲು ತುಂಬಿರಲೀ ..

ಲವಕುಶರಿಬ್ಬರೂ ಜೊತೆಯಾಗಿ ಬರಲೀ ..
ಲವಕುಶರಿಬ್ಬರೂ ಜೊತೆಯಾಗಿ ಬರಲೀ .. ತಾಯಿಗೆ ಸಂತಸ ಸುಖ ತರಲಿ ...
ಅರಿಷಿಣ ಕುಂಕುಮ ಸೌಭಾಗ್ಯ ತಂದ ತಾಯಾಗುವ ಆನಂದ ನಿನಗಾಯಿತು
ನಿನಗಾದ ಉಲ್ಲಾಸ ನಮಗಾಯ್ತು ನಿನ್ನಿಂದ ಮನವೆಲ್ಲ ಮನೆಯಲ್ಲ ಬೆಳಕಾಯಿತು
ಅರಿಷಿಣ ಕುಂಕುಮ ಸೌಭಾಗ್ಯ ತಂದ ತಾಯಾಗುವ ಆನಂದ ನಿನಗಾಯಿತು
ನಿನಗಾದ ಉಲ್ಲಾಸ ನಮಗಾಯ್ತು ನಿನ್ನಿಂದ ಮನವೆಲ್ಲ ಮನೆಯಲ್ಲ ಬೆಳಕಾಯಿತು
ಅರಿಷಿಣ ಕುಂಕುಮ ಸೌಭಾಗ್ಯ ತಂದ ತಾಯಾಗುವ ಆನಂದ ನಿನಗಾಯಿತು
--------------------------------------------------------------------------------------------------------------------------
ಅರಿಶಿನ ಕುಂಕುಮ (1970) - ಗೋಪುರ ಕಂಡು ಹೋಗಲು ಗುಡಿಯೋಳು ದೇವರೇ ಇಲ್ಲವೇ
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಚಿ.ಉದಯಶಂಕರ್ ಗಾಯನ: ಪಿ.ಬಿ. ಶ್ರೀನಿವಾಸ್
ಗೋಪೂರ ಕಂಡು ಹೋಗಲೂ ಗುಡಿಯೋಳು ದೇವರೇ.. ಇಲ್ಲವೇ
ಕಾಣುವನೆಂದೂ ಕಣ್ಣನು ತೆರೆದರೇ ಬೆಳಕೇ ಇಲ್ಲವೇ...

ಮಮತೆಯ ಮಾತೇ ಪ್ರೇಮದ ತಂದೆ ಪ್ರೀತಿಯ ತೋರುವ ಬಂಧುಗಳೂ ..

ಎಲ್ಲರೂ ಇದ್ದೂ ಇರದಂತಾಗಿದೇ .. ಒಂಟಿಗೇ ಇಂದೇ ಬಾಳಿನೊಳು
ಗೋಪೂರ ಕಂಡು ಹೋಗಲೂ ಗುಡಿಯೋಳು ದೇವರೇ.. ಇಲ್ಲವೇ
ಹರುಷದ ನಗುವೂ ಇನಿಯನ ಒಲವೂ ಚಿಮ್ಮಿದ ಚೆಲುವಿನ ಮನೆಯಂದೂ

ಹಗೆತನದುಸಿರೂ ಬಿಸಿ ಕಣ್ಣೀರೂ ನೆಲಸಿದ ನೋವಿನ ಮನೆಯಿಂದೂ
ಗೋಪೂರ ಕಂಡು ಹೋಗಲೂ ಗುಡಿಯೋಳು ದೇವರೇ.. ಇಲ್ಲವೇ
ಹೂವನು ಎಸೆದರೂ ಎಲೆಯನೇ ಎಸೆದರೂ ಕಲ್ಲಿನ ದೇವರು ಒಲಿಯುವನುಹೂವನು ಎಸೆದರೂ ಎಲೆಯನೇ ಎಸೆದರೂ ಕಲ್ಲಿನ ದೇವರು ಒಲಿಯುವನು
ಕಂಬನಿಯಲ್ಲೇ ಪಾದವ ತೊಳೆದರೂ ನಲ್ಲನು ಕಲ್ಲಂತಾಗಿಹನು
ಗೋಪೂರ ಕಂಡು ಹೋಗಲೂ ಗುಡಿಯೋಳು ದೇವರೇ.. ಇಲ್ಲವೇ
ಕಾಣುವನೆಂದೂ ಕಣ್ಣನು ತೆರೆದರೇ ಬೆಳಕೇ ಇಲ್ಲವೇ...
--------------------------------------------------------------------------------------------------------------------------
No comments:
Post a Comment