326. ನಾಗರಹೊಳೆ (೧೯೭೭)

ನಾಗರ ಹೊಳೆ ಚಲನಚಿತ್ರದ ಹಾಡುಗಳು 
  1. ಇಲ್ಲೇ ಸ್ವರ್ಗ ಇಲ್ಲೇ ನರಕ  ಮೇಲೇನಿಲ್ಲ ಸುಳ್ಳು. 
  2. ಈ ನೋಟಕೆ ಮೈ ಮಾಟಕೆ ನಾ ಸೋತೆ ಈ ಸ್ನೇಹಕೆ 
  3. ಹೇಹೇ .. ಪ್ಲೀಟ್ಟು ಹೇಹೇ ಚಿಲ್ಟು 
  4. ನಾಗರಹೊಳೆಯೋ  ಅಮ್ಮಾಲ್ಲೇ 
ನಾಗರಹೊಳೆ (೧೯೭೭) ಇಲ್ಲೇ ಸ್ವರ್ಗ ಇಲ್ಲೇ ನರಕ... 
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ರವಿ

ಆ... ಆಹಾ.. ಆಹಆಹಹ್ಹಹ್ಹಹ್ಹಾ ..
ಇಲ್ಲೇ ಸ್ವರ್ಗ ಇಲ್ಲೇ ನರಕ  ಮೇಲೇನಿಲ್ಲ ಸುಳ್ಳು.
ಹುಟ್ಟು ಸಾವು ಎರಡರ ಮಧ್ಯೆ ಮೂರು ದಿನದ ಬಾಳು....  ಹೇ.. ಮೂರು ದಿನದ ಬಾಳು.   
ಇಲ್ಲೇ ಸ್ವರ್ಗ ಇಲ್ಲೇ ನರಕ ಮೇಲೇನಿಲ್ಲ ಸುಳ್ಳು. 
ಹುಟ್ಟು ಸಾವು ಎರಡರ ಮಧ್ಯೆ ಮೂರು ದಿನದ ಬಾಳು..  ಹೇ.. ಮೂರು ದಿನದ ಬಾಳು.  

ಕಪ್ಪು ಬಿಳುಪು ಬಣ್ಣ ಹೇಗೊ ಹಗಲು ರಾತ್ರಿ ಹಾಗೆ 
ನಗುವು ಅಳುವು ಎರಡು ಉಂಟು ಬೇಡ ಅಂದರೆ ಹೇಗೆ? 
ಬಂದಾಗ ನಗುವೆ ಹೋದಾಗ ಮಾತ್ರ ಕಣ್ಣೀರೇಕೊ ಕಾಣೆ? 
ಕಸಿದುಕೊಳ್ಳುವ ಹಕ್ಕು ಎಂದು ಕೊಟ್ಟೋನ್ಗೇನೇ ತಾನೆ.
ಇಲ್ಲೇ ಸ್ವರ್ಗ ಇಲ್ಲೇ ನರಕ ಮೇಲೇನಿಲ್ಲ ಸುಳ್ಳು. 
ಹುಟ್ಟು ಸಾವು ಎರಡರ ಮಧ್ಯೆ ಮೂರು ದಿನದ ಬಾಳು... ಹೇ.. ಮೂರು ದಿನದ ಬಾಳು.   

ಬಿಸಿಲಿಗೆ ಕರಗೋ ಮಂಜೇನಲ್ಲ ಕಷ್ಟ ನಷ್ಟ ಎಲ್ಲ 
ಎದುರಿಸಬೇಕು ಧೈರ್ಯದಿಂದ ಬೇರೆ ದಾರಿಯಿಲ್ಲ 
ಬೆಟ್ಟ ಕೊರೆದು ದಾರಿ ಮಾಡಿ ನೀರು ನುಗ್ಗೋ ಹಾಗೆ 
ಮುಂದೆ ನುಗ್ಗಿ ಹೋದ್ರೆ ತಾನೆ ದಾರಿ ಕಾಣೋದ್ ನಂಮ್ಗೆ 
ಇಲ್ಲೇ ಸ್ವರ್ಗ ಇಲ್ಲೇ ನರಕ  ಮೇಲೇನಿಲ್ಲ ಸುಳ್ಳು. 
ಹುಟ್ಟು ಸಾವು ಎರಡರ ಮಧ್ಯೆ ಮೂರು ದಿನದ ಬಾಳು... ಹೇ.. ಮೂರು ದಿನದ ಬಾಳು.
ಓ.... ಮೂರು ದಿನದ ಬಾಳು.
-----------------------------------------------------------------------------------------------------------------------

ನಾಗರಹೊಳೆ (೧೯೭೭) - ಈ ನೋಟಕೆ ಮೈ ಮಾಟಕೆ
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ವಿಷ್ಣುವರ್ಧನ, ಭಾರತಿ 

ಗಂಡು : ಈ ನೋಟಕೆ ಮೈ ಮಾಟಕೆ ನಾ ಸೋತೆ ಈ ಸ್ನೇಹಕೆ 
            ಬಿಡಲಾರೆ ಬಳಿ ಬಾರೇ ಈ ದೂರ ಇನ್ನೇತಕೆ 
ಹೆಣ್ಣು : ಈ ನೋಟಕೆ ಸವಿಮಾತಿಗೆ ನಾ ಸೋತೆ ಈ ಸ್ನೇಹಕೆ
          ನಿನಗಾಗಿ ಹೊಸದಾಗಿ ನಾ ತಂದೆ  ಈ ಕಾಣಿಕೆ 
ಗಂಡು : ಆಹಾಹಃಹಾಹಾ   (ಆಹಾಹಹಾಹಾ)
ಕೋರಸ್ : ಲಲಲಲಲಾ ಲಲಲಲಲಾ ಲಲಲಲಲಾ ಲಲಲಲಲಾ 

ಹೆಣ್ಣು : ನಿಜವಾಯ್ತು ನಾ ಕಂಡ ನಿನ್ನಾ ತೋಳಿಂದ ಬಳಸಿದ ನನ್ನ 
ಗಂಡು : ಹೇ ಬಿಡಲಾರೆ ಇನ್ನೆಂದು ನಿನ್ನಾ ನಿನಗಿಂತ ಯಾರಿಲ್ಲ ಚಿನ್ನ 
ಹೆಣ್ಣು : ಹೊಸದಾದ (ಹೊಸದಾದ) ಆನಂದ (ಹೂಂ) ನಿನ್ನಿಂದ ನಾ ಕಂಡೆನು 
ಗಂಡು : ಈ ನೋಟಕೆ ಮೈ ಮಾಟಕೆ ನಾ ಸೋತೆ ಈ ಸ್ನೇಹಕೆ (ಹೂಂ) 
            ಬಿಡಲಾರೆ (ಬಿಡಲಾರೆ) ಬಳಿ ಬಾರೇ (ಹೂಂಹೂಂ) ಈ ದೂರ ಇನ್ನೇತಕೆ (ಅಹ್ಹಹ್ಹಹ್ಹಹ್ಹ )

ಕೋರಸ್ : ಲಲಲಲಲಾ ಲಲಲಲಲಾ ಲಲಲಲಲಾ ಲಲಲಲಲಾ 
ಗಂಡು : ಎಲ್ಲಿಂದಲೋ ನೀನು ಬಂದೆ ಅನುರಾಗದ ಜೇನ ತಂದೆ
ಹೆಣ್ಣು :ಓ..  ನನಗಾಗಿ ಏನೇನು ಬಂದೇ ನಿನ್ನಲ್ಲಿ ನೂರಾಸೆ ತಂದೇ  
ಗಂಡು : ಹೇ.. ನನ್ನನ್ನೇ (ನಿನ್ನನ್ನೇ ) ನಾ ಮರೆತು (ಹೂಂಹೂಂ) ನಿನ್ನಲ್ಲಿ ಒಂದಾದನೇ 
ಹೆಣ್ಣು : ಈ ನೋಟಕೆ ಮೈ ಮಾಟಕೆ ನಾ ಸೋತೆ ಈ ಸ್ನೇಹಕೆ 
          ನಿನಗಾಗಿ (ನನಗಾಗಿ) ಹೊಸದಾಗಿ (ಹ್ಹಹ್ಹಾ ) ನಾ ತಂದೆ  ಈ ಕಾಣಿಕೆ 
ಗಂಡು : ಬಿಡಲಾರೆ ಬಳಿ ಬಾರೇ ಈ ದೂರ ಇನ್ನೇತಕೆ 
            ಈ ನೋಟಕೆ ಸವಿಮಾತಿಗೆ ನಾ ಸೋತೆ 
           ಈ ಸ್ನೇಹಕೆ ನಿನಗಾಗಿ ಹೊಸದಾಗಿ ನಾ ತಂದೆ  ಈ ಕಾಣಿಕೆ 
------------------------------------------------------------------------------------------------------------------------

ನಾಗರಹೊಳೆ (೧೯೭೭) - ಹೇಹೇ .. ಪಿಲ್ಟು ಹೇಹೇ ಚಿಲ್ಟು
ಸಂಗೀತ : ಸತ್ಯಂ, ಸಾಹಿತ್ಯ : ಆರ್.ಏನ್.ಜಯಗೋಪಾಲ್ , ಗಾಯನ : ಪಿ.ಬಿ.ಎಸ್, ಎಸ್.ಜಾನಕೀ

ಗಂಡು :  ಹೇ.. ಪಿಂಟೂ .. (ಆಹ್ಹಹ್ಹಾ ) ಹೇ ಹೇ.. ಚಿಂಟೂ  (ಓಹ್ಹೋಹ್ಹೋ )
             ತಕಥೈ ಕುಣಿವಾ ಕಿಲಕಿಲ ನಗುವಾ ಜಾಲೀ ಜಾಲೀ ಪಿಕನಿಕ್
             ಸೂಲನು ಮರೆತು ಎಲ್ಲರ ಬರೆತು ಮೆರೆಯುವ ಮೇರಿ ಪಿಕನಿಕ್ ..
            ಹೇ.. ಪಿಂಟೂ .. (ಆಹ್ಹಹ್ಹಾ ) ಹೇ ಹೇ.. ಚಿಂಟೂ  (ಓಹ್ಹೋಹ್ಹೋ )
ಕೋರಸ್:  ತಕಥೈ ಕುಣಿವಾ ಕಿಲಕಿಲ ನಗುವಾ ಜಾಲೀ ಜಾಲೀ ಪಿಕನಿಕ್
                ಸೂಲನು ಮರೆತು ಎಲ್ಲರ ಬರೆತು ಮೆರೆಯುವ ಮೇರಿ ಪಿಕನಿಕ್
                ಲಲಲಾ.. ಲಾಲಲಲ.. 

ಗಂಡು : ಸೋಮಾರಿಯಾಗಿ ಕುಳಿತಿರಲೂ ಡೊಳ್ಳು ಹೊಟ್ಟೆ ಬರುವುದೂ ನೋಡಪ್ಪಾ 
            ಸೋಮಾರಿಯಾಗಿ ಕುಳಿತಿರಲೂ ಡೊಳ್ಳು ಹೊಟ್ಟೆ ಬರುವುದೂ ನೋಡಪ್ಪಾ 
             ಬೆಳಗಾಗೆದ್ದೂ ಡ್ರಿಲ್ಲನ್ನು ಮಾಡೀ ಗಟ್ಟಿ ಮುಟ್ಟಿ ರೆಟ್ಟೆ ಇದಪ್ಪಾ .. 
             ನಮ್ಮ ದೇಶದ ಯೋಧರೇ ವೀರಪ್ಪಾ.. ನಮ್ಮ ದೇಹಕೇ ಶಕ್ತಿ ಬೇಕಪ್ಪಾ.. ಲೆಫ್ಟ್ ರೈಟ್ 
ಹೆಣ್ಣು : ಅಬೌಟ್ ಟರ್ನ್ ...  
           ಡ್ರಿಲ್ಲೊಂದು ಸಾಧಕ ದೇಶ ಸೇವೆಗೇ ಚರಿತೆಯು ತಿಳಿಯಲೂ ಬೇಕಪ್ಪಾ 
           ಡ್ರಿಲ್ಲೊಂದು ಸಾಧಕ ದೇಶ ಸೇವೆಗೇ ಚರಿತೆಯು ತಿಳಿಯಲೂ ಬೇಕಪ್ಪಾ 
ಗಂಡು :  ಹೇ.. ಪಿಂಟೂ .. (ಆಹ್ಹಹ್ಹಾ ) ಹೇ ಹೇ.. ಚಿಂಟೂ  (ಓಹ್ಹೋಹ್ಹೋ )
ಹೆಣ್ಣು :  ತಕಥೈ ಕುಣಿವಾ ಕಿಲಕಿಲ ನಗುವಾ ಜಾಲೀ ಜಾಲೀ ಪಿಕನಿಕ್
           ಸೂಲನು ಮರೆತು ಎಲ್ಲರ ಬರೆತು ಮೆರೆಯುವ ಮೇರಿ ಪಿಕನಿಕ್
         
ಕೋರಸ್ : ಲಾಲಲಲ..  ಲಲಲಾ.. ಲಾಲಲಲ.. ಲಾಲ್ಲಲ್ಲಲ್ಲಾ... ಲಾಲ್ಲಲ್ಲಲ್ಲಾ ಲಾಲ್ಲಲ್ಲಲ್ಲಾ 
ಹೆಣ್ಣು : ಚಂದ್ರದ ತೆರಳುವ ಈ ಕಾಲದಲಿ ಚಂದ್ರಗುಪ್ತನ ಕಥೆಯೇಕೇ .. 
          ಅಣುವಿನ ಶಕ್ತಿ ಸಾಧಿಸುವ ಯುಕ್ತಿ ಇರುವುದೂ ವಿಜ್ಞಾನಕ್ಕೇ ... 
          ನೀವೂ ವಿಜ್ಞಾನವ ಕಲಿಬೇಕೂ .. ರಾಮನಭಾವ ಆಗಬೇಕೂ  
          ವಿಜ್ಞಾನವ ಕಲಿಬೇಕೂ .. ರಾಮನಭಾವ ಆಗಬೇಕೂ  
 ಹೆಣ್ಣು : ನೋ..ನೋ ವೆನ್ ಯು ಗೋ ನೋ ಇಂಗ್ಲಿಷ್ ಸನ್ ಶೀಲ್ ಬ್ರೇಕ್ ಯುವರ್ ಹೇರ್ 
           ಇಂಗ್ಲಿಷ್ ಇಸ್ ದ ಕಿಲ್ಲ ಆಫ್ ನಾಲೆಜ್ ಇಫ್ ಯು ಆರ್ ಯೂ ಬ್ರಿಡ್ಜ್ 
           ಇಂಗ್ಲಿಷ್ ಬರ್ ಬಲಬಲ ಬಲುಬೆಪ್ಪಾ  ಆ ಭಾಷೆಯ ಕಲಿಯಲೇಬೇಕಪ್ಪಾ.. 
           ಆಗಲೇ ನೀವೂ ಪಾಸಪ್ಪಾ... 
ಭಾರತಿ : ಎ ಬಿ ಸಿ ಡಿ ಕಲಿತವರೆಲ್ಲಾ ಪಂಡಿತರಲ್ಲ ತಿಳಿಯಮ್ಮಾ 
             ಎ ಬಿ ಸಿ ಡಿ ಕಲಿತವರೆಲ್ಲಾ ಪಂಡಿತರಲ್ಲ ತಿಳಿಯಮ್ಮಾ 
             ಕನ್ನಡ ಬಾರದ ಕನ್ನಡಿಗರೂ ಬದುಕಿದ್ದರೂ ಫಲವಿಲ್ಲಮ್ಮಾ 
             ಕನ್ನಡ ಕಸ್ತೂರಿ ತಿಳಿಯಮ್ಮಾ ನೀ ಅದನು ಮೊದಲೂ ಕಲಿಯಮ್ಮಾ  
            ಇಂಗ್ಲೀಷ ಕನ್ನಡ ಚರಿತೇ ವಿಜ್ಞಾನ ಜ್ಞಾನಕೇ ಹಲವೂ ಮುಖವಂತೇ .. 
            ಯಾವುದೂ ಹೆಚ್ಚು ಯಾವುದೂ ಕಡಿಮೇ ತರ್ಕವೇ ಮೂರ್ಖರ ತರವಂತೇ 
            ಮಕ್ಕಳೂ ಎಲ್ಲ ಕಲಿಬೇಕು ಈ ನಾಡಿಗೇ ಕೀರ್ತಿ ತರಬೇಕು  
ಎಲ್ಲರು : ಮಕ್ಕಳೂ ಎಲ್ಲ ಕಲಿಬೇಕು ಈ ನಾಡಿಗೇ ಕೀರ್ತಿ ತರಬೇಕು  
ಗಂಡು :  ಹೇ.. ಪಿಂಟೂ .. (ಆಹ್ಹಹ್ಹಾ ) ಹೇ ಹೇ.. ಚಿಂಟೂ  (ಓಹ್ಹೋಹ್ಹೋ )
ಎಲ್ಲರು :  ತಕಥೈ ಕುಣಿವಾ ಕಿಲಕಿಲ ನಗುವಾ ಜಾಲೀ ಜಾಲೀ ಪಿಕನಿಕ್
           ಸೂಲನು ಮರೆತು ಎಲ್ಲರ ಬರೆತು ಮೆರೆಯುವ ಮೇರಿ ಪಿಕನಿಕ್ 
ಕೋರಸ್ : ಲಾಲಲಲ..  ಲಲಲಾ.. ಲಾಲಲಲ.. ಲಾಲ್ಲಲ್ಲಲ್ಲಾ... ಲಾಲ್ಲಲ್ಲಲ್ಲಾ ಲಾಲ್ಲಲ್ಲಲ್ಲಾ 
------------------------------------------------------------------------------------------------------------------------

ನಾಗರಹೊಳೆ (೧೯೭೭) - ನಾಗರಹೊಳೆಯೋ ಅಮ್ಮಾಲೆ
ಸಂಗೀತ : ಸತ್ಯಂ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಎಸ್.ಜಾನಕೀ, ಎಸ್.ಪಿ.ಬಿ.

ಗಂಡು :ಅ ..ಅ ... ಅ ..ಅ ...  
ಕೋರಸ್ : ಓಂ ...
ಗಂಡು : ತೈಗರ್ಜಿ ಅಬ್ಬೇ .. ನಕ್ಕಳಾ... ಬಲಿಯಾ ಹೈಕಳಾ ಏಸದಾಳ..
           ಹಬ್ಬ ಮಾಡ್ .. ಅಂದಾಳ್ .. ಹುಯ್ಲಾ .. ಹುಯ್ಲಾ.. ಹುಯ್ಲಾ .. ಅವ್ವ್ ಓ.. ಅವ್ವ್ ಓ.. ಅವ್ವ್ ಓ..
ಕೋರಸ್ : ಹೊಯ್ಯಿ ಹೊಯ್ಯಿ ಹೊಯ್ಯಿ ಹೊಯ್ಯಿ ಹೊಯ್ಯಿ ಹೊಯ್ಯಿ ಹೊಯ್ಯಿ  (ಹೊಯ್ಯಿ)
               ಹೊಯ್ಯಿ ಹೊಯ್ಯಿ ಹೊಯ್ಯಿ ಹೊಯ್ಯಿ ಹೊಯ್ಯಿ ಹೊಯ್ಯಿ ಹೊಯ್ಯಿ  (ಹೊಯ್ಯಿ)
 ಹೆಣ್ಣು : ಓಯ್... ನಾಗರ ಹೊಳೆಯೋ  ಅಮ್ಮಾಲ್ಲೇ... ನಲಿಯೋ ತಣಿಯೋ ಆಮೇಲೆ
           ಮರ ಮತ್ತು ಹಟ್ಟಿ ನೇಹಿ ಹೈಕ್ಳಲೇ ನಂಗೇ ಹುಣ್ಣಿಮೇ ...
           ಮರ ಮತ್ತು ಹಟ್ಟಿ ನೇಹಿ ಹೈಕ್ಳಲೇ ನಂಗೇ ಹುಣ್ಣಿಮೇ ...
 ಹೆಣ್ಣು : ಓಯ್... ನಾಗರ ಹೊಳೆಯೋ  ಅಮ್ಮಾಲ್ಲೇ... ನಲಿಯೋ ತಣಿಯೋ ಆಮೇಲೆ (ಆಮೇಲೆ)
           ಮರ ಮತ್ತು ಹಟ್ಟಿ ನೇಹಿ ಹೈಕ್ಳಲೇ ನಂಗೇ ಹುಣ್ಣಿಮೇ ...
           ಮರ ಮತ್ತು ಹಟ್ಟಿ ನೇಹಿ ಹೈಕ್ಳಲೇ ನಂಗೇ ಹುಣ್ಣಿಮೇ ... 

ಗಂಡು : ಸುವ್ವಾಲೇ ... ಏಏಏಏ .. ಅಹಬ್ಬಾ... ಸುವ್ವಾಲೇ .... ಏಏಏಏ 
            ಸುವ್ವಾಲೇ ... ಏಏಏಏ .. ಬಾಳ .. ಸುವ್ವಾಲೇ .... ಏಏಏಏ 
            ಸುವ್ವಾಲೇ ... ಏಏಏಏ .. ಬಾಳ .. ಸುವ್ವಾಲೇ .... ಏಏಏಏ 
ಹೆಣ್ಣು : ಡಮರು ಡಮರು ಡಮಾಲೇ ತುಂತುರೂ ತುಂತುರೂ ಸೋನ್ಯಾಲೇ
ಕೋರಸ್ : ಡಮರು ಡಮರು ಡಮಾಲೇ ತುಂತುರೂ ತುಂತುರೂ ಸೋನ್ಯಾಲೇ
 ಹೆಣ್ಣು : ಓಯ್... ನಾಗರ ಹೊಳೆಯೋ  ಅಮ್ಮಾಲ್ಲೇ... ನಲಿಯೋ ತಣಿಯೋ ಆಮೇಲೆ (ಆಮೇಲೆ)
           ಮರ ಮತ್ತು ಹಟ್ಟಿ ನೇಹಿ ಹೈಕ್ಳಲೇ ನಂಗೇ ಹುಣ್ಣಿಮೇ ...
           ಮರ ಮತ್ತು ಹಟ್ಟಿ ನೇಹಿ ಹೈಕ್ಳಲೇ ನಂಗೇ ಹುಣ್ಣಿಮೇ ... 

ಕೋರಸ್ : ಹುಯ್ಯೀ.. ಹುಯ್ಯೀ..  ಹುಯ್ಯೀ..  ಹುಯ್ಯೀ..  ಹುಯ್ಯೀ..  ಹುಯ್ಯೀ..  ಹುಯ್ಯೀ.. 
               ಹುಯ್ಯೀ.. ಹುಯ್ಯೀ..  ಹುಯ್ಯೀ..  ಹುಯ್ಯೀ..  ಹುಯ್ಯೀ..  ಹುಯ್ಯೀ..  ಹುಯ್ಯೀ.. 
ಹೆಣ್ಣು : ಬಣ್ಣ ಚಮಕಿ ಕಂಡ್ಯಾರ ಚಮಕ್  ಚಮ್ ಚಮ್
          ಕಣ್ಣ ಮುಂದರಾ ನಂಬ್ಯಾರ್  ನಮಗ್ ನಮಗ್ ನಮಗ್
          ಅಪ್ಪಾ ತಿಪ್ಪಾ ಉಂಡ್ಯಾರ್ (ಹೇಹೇಹೇಹೇ )
          ಅಪ್ಪಾ ತಿಪ್ಪಾ ಉಂಡ್ಯಾರ್ (ಹೇಹೇಹೇಹೇ )
ಗಂಡು : ಜೈ ಗೋಡು ... ಉಉಉಉಉ ಆಆಆ ವಾರಟೋ... ಅಂದರಾ.. ( ಬಂಬಬಮ್ .)
            ಹೈಕ್ಳ.. ಮಕ್ಕಳಾ... ಹುಷ್ಶಾರ್ .. (ಆಆಆಅ ) ದಿಟಾ ವಕಾ ..  ಪರರಾ.. (ಆಆಆಅ )
             ಬಣ್ಣ ಓಸಿ ಆಡ್ಯಾಣ ವಿಕಾ ನಡಗಾ ಕಾವಲ್ದಾರ್..
             ಬಣ್ಣ ಓಸಿ ಆಡ್ಯಾಣ ವಿಕಾ ನಡಗಾ ಕಾವಲ್ದಾರ್ ಹೋ ...
ಎಲ್ಲರು : ಆಆಆ.. ಆಹಾ ಆಹಾ ಆಹಾ ಆಹಾ ಆಹಾ ಆಹಾ ಆಹಾ ಆಹಾ
------------------------------------------------------------------------------------------------------------------------

No comments:

Post a Comment