327. ಕುದುರೆ ಮುಖ (1978)


ಕುದುರೆಮುಖ ಚಿತ್ರದ ಹಾಡುಗಳು 
  1. ಇಂದೇ ಸವಿ ಸಮಯ 
  2. ನೀ ಬಂದೇ ಮನದೇ ನಿಂದೆ 
  3. ಸೈ ಸೈಲೇ ಸರದಾರ 
  4. ತೂರಾಡೋರೆಲ್ಲಾ ಕುಡಿಯುವರಲ್ಲಾ 
ಕುದುರೆ ಮುಖ (1978)
ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ: ಆರ್.ಎನ್.ಜಯಗೋಪಾಲ್  ಹಾಡಿದವರು: ವಾಣಿ ಜಯರಾಮ್


ಲಾಲ್ ಲಾಲ್ ಲಾಲ್ ಲಾಲ್ ಲಾಲ್ ಲಾಲ್
ಇಂದೆ ಸವಿ ಸಮಯ ನಿಂದೆ ಈ ಹೃದಯ
ಇಂದೆ ಸವಿ ಸಮಯ ನಿಂದೆ ಈ ಹೃದಯ
ಆಸೆ ತುಂಬಿದೆ ಪ್ರೀತಿ ಬಯಸಿದೆ
ಇಂದೆ ಸವಿ ಸಮಯ ನಿಂದೆ ಈ ಹೃದಯ

ಬಳಿಗೆ ಕರೆದಿದೆ ಹರೆಯ ನಯನ ತಿಳಿಸಿದೆ ಕಥೆಯ
ಬಳಿಗೆ ಕರೆದಿದೆ ಹರೆಯ ನಯನ ತಿಳಿಸಿದೆ ಕಥೆಯ
ತುಟಿಯು ಅರಸಿದೆ ಜೊತೆಯ..  ಸುಖವು ಇಲ್ಲಿದೆ ಗೆಳೆಯ
ಮನಸಿದೆ ವಯಸಿದೆ ಎದುರಲಿ ಚೆಲುವಿದೆ
ಮೌನ ಏತಕೆ...  ಹೇಳು ಬೇಡಿಕೆ
ಇಂದೆ ಸವಿ ಸಮಯ ನಿಂದೆ ಈ ಹೃದಯ

ನಮ್ಮ ನಿಮಿಷದ ಮಿಲನ ಹರುಷ ತುಂಬಿದ ಕವನ
ನಮ್ಮ ನಿಮಿಷದ ಮಿಲನ ಹರುಷ ತುಂಬಿದ ಕವನ
ಬಾಳು ಸರಸದ ಪಯಣ ಮರೆಯಲಾರದು ತರುಣ
ಕನಸಿದೊ ನನಸಿದೊ ಅನುಭವ ಸೊಗಸಿದೊ
ಏಕೆ ಯೋಚನೆ...  ಬಾರೋ ಬೇಗನೆ
ಇಂದೆ ಸವಿ ಸಮಯ ನಿಂದೆ ಈ ಹೃದಯ
------------------------------------------------------------------------------------------------------------------------

ಕುದುರೆ ಮುಖ (1978)
ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ: ವಿಜಯನಾರಸಿಂಹ, ಗಾಯನ : ಎಸ್.ಜಾನಕೀ, ಕೆ.ಜೆ.ಏಸುದಾಸ್  


ಹೆಣ್ಣು : ಲಾಆಅ ಆಆಆ   ಗಂಡು : ಆಆಆ...
ಹೆಣ್ಣು : ಆಅ ಆಆಆ   ಗಂಡು : ಆಆಆ...
ಗಂಡು : (ಆಆಆ ) ನೀ ಬಂದೇ ಮನದೇ ನಿಂದೇ   
           ನೀ ಬಂದೇ ಮನದೇ ನಿಂದೇ ಪ್ರೇಮದ ಕಾಣಿಕೆ ನೀಡಿದೇ ಇಂದೇ   
           ಪ್ರೇಮದ ಕಾಣಿಕೆ ನೀಡಿದೇ ಇಂದೇ   
           ನೀ ಬಂದೇ ಮನದೇ ನಿಂದೇ

ಹೆಣ್ಣು : ನಮ್ಮೀ ರಾತ್ರಿ ನಿನ್ನೀ ಮೈತ್ರಿ ತಂದಿತು ಇಂಥ ಅನುಬಂಧ (ಆಆಆ.. )
          ನಮ್ಮೀ ರಾತ್ರಿ ನಿನ್ನೀ ಮೈತ್ರಿ ತಂದಿತು ಇಂಥ ಅನುಬಂಧ 
         ಭಯದಲಿ ಒಲವು ಒಲವಲಿ ಗೆಲುವು ಗೆಳೆಯ ನಿನ್ನೀ ಜೊತೆಯಿಂದಾ (ಆಆಆ)
         ನೀ ಬಂದೇ ಮನದೇ ನಿಂದೇ   

ಗಂಡು : ನಿನ್ನೀ ಕಣ್ಣ ಸನ್ನೇ ಮಿಂಚು ತಂದಿತು ಏನೋ ಆನಂದ (ಆಆಆ)
            ನಿನ್ನೀ ಕಣ್ಣ ಸನ್ನೇ ಮಿಂಚು ತಂದಿತು ಏನೋ ಆನಂದ 
            ಕಳೆದೆನೋ ನೂರೂ ಚಿಂತೆಯ ರಾತ್ರಿ ಗೆಳತೀ  ನೆನಪಿಂದಾ.. (ಆಆಆ) 
            ನೀ ಬಂದೇ ಮನದೇ ನಿಂದೇ    

ಹೆಣ್ಣು : ನಿನ್ನಯ ಸಂಗ ಪ್ರೇಮತರಂಗ ಜೀವನವೆಲ್ಲಾ ಶೃಂಗಾರ..ಆಆಆ... 
          ನಿನ್ನಯ ಸಂಗ ಪ್ರೇಮತರಂಗ ಜೀವನವೆಲ್ಲಾ ಶೃಂಗಾರ..
ಗಂಡು : ಮರೆಯುವ ನಾವೂ ಮನಸಿನ ನೋವೂ           
            ಮರೆಯುವ ನಾವೂ ಮನಸಿನ ನೋವೂ ಒಲವೇ ನಮ್ಮ ಆಧಾರ... (ಆಆಆ)
ಇಬ್ಬರು : ನೀ ಬಂದೇ ಮನದೇ ನಿಂದೇ ಪ್ರೇಮದ ಕಾಣಿಕೆ ನೀಡಿದೇ ಇಂದೇ 
            ನೀ ಬಂದೇ ಮನದೇ ನಿಂದೇ
------------------------------------------------------------------------------------------------------------------------

ಕುದುರೆ ಮುಖ (1978)
ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಹಾಡಿದವರು: ಎಸ್.ಪಿ.ಬಿ. ಎಸ್.ಜಾನಕೀ 


ಕೋರಸ್ : ಓಓಓಓಓಹೋ ... (ಒಹೋ..ಒಹೋ..ಒಹೋ..ಒಹೋ..)
               ಓಓಓಓಓಹೋ ... (ಒಹೋ..ಒಹೋ..ಒಹೋ..ಒಹೋ..)
               ಓಹೋ ಓಹೋ ಓಹೋ ..(ಒಹೋ..ಒಹೋ..ಒಹೋ..ಒಹೋ..) 
                ಓ..ಹೋ ಹೋ ..
ಹೆಣ್ಣು : ಸೈ ಸೈಯಲೇ ಸೈಯಲೇ ಸರದಾರ ..ಆಂ.. 
         ಸೈ ಸೈಯಲೇ ಸೈಯಲೇ ಸರದಾರ ಒಪ್ಪಿಗೆನಾ ಹೆಣ್ಣು ಹಮ್ಮಿರಾ . 
ಕೋರಸ್ : ಒಪ್ಪಿಗೆನಾ ಹೆಣ್ಣು ಹಮ್ಮಿರಾ .    
ಹೆಣ್ಣು : ಕಾದವಳೇ ಬೀರವ್ವಾ ನಿಂಗೋಸ್ಕರ ನಿನ್ನ 
          ನಿಂದವಳೇ ಮನದಾಗ ಜೋತೆಗೋಸ್ಕರ   
ಗಂಡು : ಕಾದವನೇ ಮಾದೇವಾ ನಿಂಗೋಸ್ಕರ ನಿನ್ನ
            ನೆನೆದವನೇ ಮನದಾಗ ಜೊತೆಗೋಸ್ಕರ
ಕೋರಸ್ : ನೆನೆದವನೇ ಮನದಾಗ ಜೊತೆಗೋಸ್ಕರ

ಕೋರಸ್  : ಲಾಲ್ ಲ ಲಲಲ ಲಾಲ್ ಲ ಲಲಲ..   (ಒಹೋ..ಒಹೋ..ಒಹೋ..ಒಹೋ.. )
                 ಲಾಲ್ ಲ ಲಲಲ ಲಾಲ್ ಲ ಲಲಲ..   (ಹೋಯ್ )
                 ಲಾಲ್ ಲ ಲಲಲ ಲಾಲ್ ಲ ಲಲಲ..   (ಒಹೋ..ಒಹೋ..ಒಹೋ..ಒಹೋ..)
                 ಲಾಲ್ ಲ ಲಲಲ ಲಾಲ್ ಲ ಲಲಲ..   (ಒಹೋ..ಒಹೋ. ಹೋಯ್) 

ಹೆಣ್ಣು : ಸೊಟ್ಟ ಮೋರೇ ಸರದಾರ ಇವನೇನ್ ಚಂದ
          ನಮ್ಮ ಹೆಣ್ಣು ಬಂಗಾರ ಇವಳಗೇನ್ ತಂದ್
ಕೋರಸ್ : ಹಾಂ...  ಇವಳಗೇನ್ ತಂದ್
ಗಂಡು : ಹ್ಹಾ.. ಸಾಕು ಈ ಜಂಭ ಸೊಕ್ಕು ಮೈ ತುಂಬಾ
            ಹ್ಹಾ.. ಸಾಕು ಈ ಜಂಭ ಸೊಕ್ಕು ಮೈ ತುಂಬಾ
            ಐನಾತಿ ಸಾವಕಾರ ನಮ್ಮಿ ಹೈದ ಅಹ್ಹಹ್ಹ...
            ತೋಳಿಗಿ ತೋಳಬಂಧಿ ತರ್ತಾನಲ್ಲಾ
            ಮೋಸ್ತಾಗಿ ಮುತ್ತೆಲ್ಲಾ ಕೊಡ್ತಾನಲ್ಲಾ...
ಕೋರಸ್ :  ಕೊಡ್ತಾನಲ್ಲಾ...
ಹೆಣ್ಣು : ಗೊತ್ತು ನೀನ್ ಗತ್ತು ಬ್ಯಾಡ್ ಗಮ್ಮತ್ತು
          ಗೊತ್ತು ನೀನ್ ಗತ್ತು ಬ್ಯಾಡ್ ಗಮ್ಮತ್ತು
          ಚೆಂದುಳ್ಳಿ ನಮ್ಮ ಹೆಣ್ಣು ಬಿಟ್ಟಿ ಬಂದ್ಲಾ
ಹೆಣ್ಣು :ಆಂ ...  ಸೈ ಸೈಯಲೇ ಸೈಯಲೇ ಸರದಾರ ಒಪ್ಪಿಗೆನಾ ಹೆಣ್ಣು ಹಮ್ಮಿರಾ . 
         ಕಾದವಳೇ ಬೀರವ್ವಾ ನಿಂಗೋಸ್ಕರ 

ಗಂಡು : ಬೆಸ್ತಾರ್ ಬಂಗಾರ್ ಕೋಡ್ತಿನಮ್ಮಿ
            ಭಗವಂತ ಕೊಟ್ಟಾಸ್ತಿ ನಂಗೇನ್ ಕಮ್ಮಿ ನಂಗೇನ್ ಕಮ್ಮಿ
ಹೆಣ್ಣು : ತಾಳಿ ಸಂಪತ್ತು ಬೇಕು ಯಾವತ್ತೂ..
          ತಾಳಿ ಸಂಪತ್ತು ಬೇಕು ಯಾವತ್ತೂ ನಿಂಗಿಂತ್ ದ್ಯಾವರಿಲ್ಲಾ ನಂಗೇ ಗೊತ್ತೂ
         (ಓ..) ಆಂ ...  ಸೈ ಸೈಯಲೇ ಸೈಯಲೇ ಸರದಾರ ಒಪ್ಪಿಗೆನಾ ಹೆಣ್ಣು ಹಮ್ಮಿರಾ . 
         ಕಾದವಳೇ ಬೀರವ್ವಾ ನಿಂಗೋಸ್ಕರ ನಿನ್ನ  
         ನೆನೆದವನೇ ಮನದಾಗ ಜೊತೆಗೋಸ್ಕರ
--------------------------------------------------------------------------------------------------------------------------

ಕುದುರೆ ಮುಖ (1978)
ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಹಾಡಿದವರು: ಎಸ್.ಜಾನಕೀ 


ನೀವೆಲ್ಲ ನಾ ಕುಡಿದ್ದಿದ್ದಿನ್ನಿ ಅಂತಾ ತಿಳಿಕೊಂಡರಾ.. ಅಹ್ಹ
ಹುಹ್ಹುಂಹುಹ್ಹುಂಹ್ಹಹ್ಹ  ತೂರಾಡೋರೆಲ್ಲಾ ಕುಡಿಯುವರೆಲ್ಲಾ...
ತೂರಾಡೋರೆಲ್ಲಾ ಕುಡಿಯುವರಲ್ಲಾ...  ಕುಡಿಯುವರೆಲ್ಲಾ...ತೂರಾಡೋಲ್ಲಾ
ತೂರಾಡೋರೆಲ್ಲಾ ಕುಡಿಯುವರಲ್ಲಾ...  ಕುಡಿಯುವರೆಲ್ಲಾ...ತೂರಾಡರಲ್ಲಾ
ಅರಳಿದ ಹೂದೋಟ ಹೆಣ್ಣಿವಳ ಅಂದದಲಿ ಸೋಲದವನೇ ಇಲ್ಲ... ಆಂ..
ತೂರಾಡೋರೆಲ್ಲಾ ಕುಡಿಯುವರಲ್ಲಾ...  ಕುಡಿಯುವರೆಲ್ಲಾ...ತೂರಾಡರಲ್ಲಾ
--------------------------------------------------------------------------------------------------------------------------

No comments:

Post a Comment