328. ಪೋಸ್ಟ್ ಮಾಸ್ಟರ್ (1964)

ಪೋಸ್ಟಮಾಸ್ಟರ್ ಚಲನ ಚಿತ್ರದ ಹಾಡುಗಳು 
  1. ಇಂದೇನು ಹುಣ್ಣಿಮೆಯೊ ರತಿದೇವಿ ಮೆರವಣಿಯೊ
  2. ಕನ್ನಡದ ಕುಲದೇವಿ ಕಾಪಾಡು ಬಾ ತಾಯೆ
  3. ಎರಡು ರಂಭೆಯ ನಡುವೇ 
  4. ನಾನೆಷ್ಟೋ ಸಲ ನೋಡಿದ ಚಂದ್ರ
  5. ಮುತ್ತಿನ ನತ್ತೊಂದು ಮೂಗಿಂದ ಜಾರಿತೂ 
ಪೋಸ್ಟ್ ಮಾಸ್ಟರ್ (1964) - ಇಂದೇನು ಹುಣ್ಣಿಮೆಯೊ ರತಿದೇವಿ ಮೆರವಣಿಯೊ
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಜಿ.ವಿ.ಅಯ್ಯರ್. ಹಾಡಿದವರು: ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ

ಗಂಡು : ಇಂದೇನು ಹುಣ್ಣಿಮೆಯೊ ರತಿದೇವಿ ಮೆರವಣಿಯೊ ಆಕಾಶದ ಏಳು ಬಣ್ಣಗಳ ಮೇಳವೊ
           ಇಂದೇನು ಹುಣ್ಣಿಮೆಯೋ...
ಹೆಣ್ಣು : ನವರಾಗ ಪಲ್ಲವಿಯೊ ಸವಿಮಾತ ಹೊಗಳಿಕೆಯೊ
          ಯೌವನದ ಕಲ್ಪನೆಯ ಕವಿಯಾಸೆ ಹೂಮಳೆಯೋ.. ನವರಾಗ ಪಲ್ಲವಿಯೊ

ಗಂಡು : ನೆಲಹೊತ್ತ ಹೂ ತೇರೆ (ಆಆಆಅ ) ನಲ್ಲನೆದೆ ಹೊಂದೇರೆ (ಆಆಆಅ )
            ನೆಲಹೊತ್ತ ಹೂ ತೇರೆ (ಹೂಂಹೂಂಹೂಂ) ನಲ್ಲನೆದೆ ಹೊಂದೇರೆ (ಹೂಂಹೂಂಹೂಂ)
            ಇಲ್ಲದಿರೆ ನೀ ಮುಂದೆ ಎಲ್ಲ ಹಗಲಿನ ತಾರೇ ... ಇಂದೇನು ಹುಣ್ಣಿಮೆಯೋ ....

ಹೆಣ್ಣು : ಹರೆಯದ ನಾವೆಯಲಿ  (ಆಆಆಅ ) ಸರಸ ಸಲ್ಲಪದಲಿ(ಓಓಓಓಓ  )
          ಹರೆಯದ ನಾವೆಯಲಿ  (ಆಆಆಅ ) ಸರಸ ಸಲ್ಲಪದಲಿ(ಓಓಓಓಓ  )
          ನಡೆಸುವ ಅಂಬಿಗನ   ಕರಪಿಡಿಯೆ ಜೋಕಾಲಿ... ನವರಾಗ ಪಲ್ಲವಿಯೋ...
          ಇಂದೇನು ಹುಣ್ಣಿಮೆಯೊ
ಗಂಡು : ರತಿದೇವಿ ಮೆರವಣಿಯೊ
ಇಬ್ಬರು : ಆಕಾಶದ ಏಳು ಬಣ್ಣಗಳ ಮೇಳವೋ ... ಇಂದೇನು ಹುಣ್ಣಿಮೆಯೊ
-------------------------------------------------------------------------------------------------------------------------

ಪೋಸ್ಟ್ ಮಾಸ್ಟರ್ (1964) - ಕನ್ನಡದ ಕುಲದೇವಿ ಕಾಪಾಡು ಬಾ ತಾಯೆ
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಜಿ.ವಿ.ಅಯ್ಯರ್  ಹಾಡಿದವರು: ಪಿ.ಬಿ.ಶ್ರೀನಿವಾಸ್, 

ಕನ್ನಡದ ಕುಲದೇವಿ ಕಾಪಾಡು ಬಾ ತಾಯೆ ಮುನ್ನಡೆಯ ಕನ್ನಡದ ದಾರಿ ದೀವಿಗೆಯನಿಯೇ
ಕನ್ನಡದ ಕುಲದೇವಿ ಕಾಪಾಡು ಬಾ ತಾಯೆ

ಪ್ರೇಮ ಕರುಣೆಯ ಕಲಿಸಿ ಶಾಂತಿ ಸಹನೆಯ ಬೆಳೆಸಿ ಕಾಮ ಕ್ರೋಧವನಳಿಸಿ ಕಾಪಾಡು ತಾಯೆ
ಪ್ರೇಮ ಕರುಣೆಯ ಕಲಿಸಿ ಶಾಂತಿ ಸಹನೆಯ ಬೆಳೆಸಿ ಕಾಮ ಕ್ರೋಧವನಳಿಸಿ ಕಾಪಾಡು ತಾಯೆ
ಒಂದಾದ ದೇಶದಲಿ ಹೊಂದಿ ಬಾಳದ ಸುತರ ಹೊಸ ಬೆಸುಗೆಯಲಿ ಬಿಗಿದು ಒಂದುಗೂಡಿಸೆ ತಾಯೇ
ಕನ್ನಡದ ಕುಲದೇವಿ ಕಾಪಾಡು ಬಾ ತಾಯೆ ಮುನ್ನಡೆಯ ಕನ್ನಡದ ದಾರಿ ದೀವಿಗೆಯನಿಯೇ

ಯಾವ ಎಣ್ಣೆಯಾದರೂ ಬೆಳಗುವುದೇ ಗುರಿ ಎಂಬ ತತ್ವವನು ನೀನೆತ್ತಿ ತೋರು ಬಾ ತಾಯೇ 
ಯಾವ ಎಣ್ಣೆಯಾದರೂ ಬೆಳಗುವುದೇ ಗುರಿ ಎಂಬ ತತ್ವವನು ನೀನೆತ್ತಿ ತೋರು ಬಾ ತಾಯೇ 
ಎದೆಯಾಂತರಾಳದಲ್ಲಿ ಪುಟಿವ ಕಾರಂಜಿಯಲಿ ಒಂದಾಗಿ ಕೂಗಲಿ ಕನ್ನಡ ಕನ್ನಡ 
ಕನ್ನಡದ ಕುಲದೇವಿ ಕಾಪಾಡು ಬಾ ತಾಯೆ ಮುನ್ನಡೆಯ ಕನ್ನಡದ ದಾರಿ ದೀವಿಗೆಯ ನಿಯೇ
ಕನ್ನಡದ ಕುಲದೇವಿ ಕಾಪಾಡು ಬಾ ತಾಯೆ
-----------------------------------------------------------------------------------------------------------------------

ಪೋಸ್ಟ್ ಮಾಸ್ಟರ್ (1964) - ಎರಡು ರಂಭೆಯ ನಡುವೇ
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಜಿ.ವಿ.ಅಯ್ಯರ್ ಹಾಡಿದವರು: ಪಾನಿಗ್ರಹಿ

ಎರಡು ರಂಭೆಯ ನಡುವೇ ಬೆಳೆದ ಬಿಡಿ ಗುಲಾಬಿಯ ಹೂವಿದು
ಎರಡು ರಂಭೆಯ ನಡುವೇ ಬೆಳೆದ ಬಿಡಿ ಗುಲಾಬಿಯ ಹೂವಿದು
ಮುಡಿದ ನಲ್ಲನ ಮನೆಗೆ ಒಲಿದು ಮುದದಿ ತೆರಳುತಲಿರುವುದೂ
ಮುದದಿ ತೆರಳುತಲಿರುವುದೂ
ಎರಡು ರಂಭೆಯ ನಡುವೇ ಬೆಳೆದ ಬಿಡಿ ಗುಲಾಬಿಯ ಹೂವಿದು

ನಡೆದ ದಾರಿಗೂ ನಡೆವ ದಾರಿಗೂ ಬಹಳ ಅಂತರವಿರುವುದೂ
ನಡೆದ ದಾರಿಗೂ ನಡೆವ ದಾರಿಗೂ ಬಹಳ ಅಂತರವಿರುವುದೂ
ಮೆಲ್ಲ ನಡೆ ಇಡು ಸಹನೇ ಕಳೆಯದೇ ಎಲ್ಲರೊಡನಿರೂ ವಿನಯದೇ
ಎಲ್ಲರೊಡನಿರೂ ವಿನಯದೇ
ಎರಡು ರಂಭೆಯ ನಡುವೇ ಬೆಳೆದ ಬಿಡಿ ಗುಲಾಬಿಯ ಹೂವಿದು

ಮಡಿಲ ತುಂಬಿದ ಗುಣದ ಬಾಗೀನ ಎಡಬಿಡದೇ ಕಾಪಾಡಿಕೋ
ಮಡಿಲ ತುಂಬಿದ ಗುಣದ ಬಾಗೀನ ಎಡಬಿಡದೇ ಕಾಪಾಡಿಕೋ
ಕರಳು ತುಂಬಿದ ರಸದ ಕನ್ನಡಿ ನಿನ್ನ ಹೃದಯವ ಮಾಡಿಕೋ
ನಿನ್ನ ಹೃದಯವ ಮಾಡಿಕೋ
ಎರಡು ರಂಭೆಯ ನಡುವೇ ಬೆಳೆದ ಬಿಡಿ ಗುಲಾಬಿಯ ಹೂವಿದು
ಮುಡಿದ ನಲ್ಲನ ಮನೆಗೆ ಒಲಿದು ಮುದದಿ ತೆರಳುತಲಿರುವುದೂ
ಮುದದಿ ತೆರಳುತಲಿರುವುದೂ
ಎರಡು ರಂಭೆಯ ನಡುವೇ ಬೆಳೆದ ಬಿಡಿ ಗುಲಾಬಿಯ ಹೂವಿದು
ಬಿಡಿ ಗುಲಾಬಿಯ ಹೂವಿದು ... ಬಿಡಿ ಗುಲಾಬಿಯ ಹೂವಿದು
-----------------------------------------------------------------------------------------------------------------------

ಪೋಸ್ಟ್ ಮಾಸ್ಟರ್ (1964) - ನಾನೆಷ್ಟೋ ಸಲ ನೋಡಿದ ಚಂದ್ರ
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಜಿ.ವಿ.ಅಯ್ಯರ್ ಹಾಡಿದವರು: ಎಸ್.ಜಾನಕೀ

ಆಆಆ... ನಾನೆಷ್ಟೋ ಸಲ ನೋಡಿದ ಚಂದ್ರ
ನಾನೆಷ್ಟೋ ಸಲ ನೋಡಿದ ಚಂದ್ರ ಬಿದಿಗೆಯ ದಿನದಲಿ ಹುಣಿಮೆಯ ಚಂದ
ನಾನೆಷ್ಟೋ ಸಲ ನೋಡಿದ ಚಂದ್ರ .... ಆಆಆ...

ನಾಲಿಗೇ ಇಲ್ಲದ ನಯನಗಳಲ್ಲಿ ... ಆಆಆ... ಆಆಆ...
ನಾಲಿಗೇ ಇಲ್ಲದ ನಯನಗಳಲ್ಲಿ ನವರಸ ಸಂಗೀತ ಪಾಡಲೇ ನಾನೀ
ಹಗಲಲಿ ಎನ್ನ ಕಣ್ಮರೆಯಾದರೂ
ಹಗಲಲಿ ಎನ್ನ ಕಣ್ಮರೆಯಾದರೂ ಇರುಳಲೀ ನೀ ಎನ್ನ ಎದೆಪದಕ
ನಾನೆಷ್ಟೋ ಸಲ ನೋಡಿದ ಚಂದ್ರ .... ಆಆಆ...

ಹಾಲಿನ ಕೊಳದ ತಾವರೆಯಾದರೂ ಆಆಆ... ಆಆಆ...
ಹಾಲಿನ ಕೊಳದ ತಾವರೆಯಾದರೂ ಚಂದ್ರೋದಯಕೇ ನಾಚಿ ಮಣಿಯದೇ
ಒಲಿದು ತಂದಿಹ ಚೆಲುವಿನ ಅಣಬೆಯೂ
ಒಲಿದು ತಂದಿಹ ಚೆಲುವಿನ ಅಣಬೆಯೂ ಒಡೆಯದೇ ನೇತಲಿ ಆಗಿರದೇ
ನಾನೆಷ್ಟೋ ಸಲ ನೋಡಿದ ಚಂದ್ರ ಬಿದಿಗೆಯ ದಿನದಲಿ ಹುಣಿಮೆಯ ಚಂದ
ನಾನೆಷ್ಟೋ ಸಲ ನೋಡಿದ ಚಂದ್ರ .... ಆಆಆ...
--------------------------------------------------------------------------------------------------------------------------

ಪೋಸ್ಟ್ ಮಾಸ್ಟರ್ (1964) - ಮುತ್ತಿನ ನತ್ತೊಂದು ಮೂಗಿಂದ ಜಾರಿತೂ 
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಜಿ.ವಿ.ಅಯ್ಯರ್ ಹಾಡಿದವರು: ಎಲ್.ಆರ್.ಈಶ್ವರಿ

ಮುತ್ತಿನ ನತ್ತೊಂದು ಮೂಗಿಂದ ಜಾರಿತೂ
ಮುತ್ತಿನ ನತ್ತೊಂದು ಮೂಗಿಂದ ಜಾರಿತೂ ಮೈಸೂರಿನಲ್ಲೆಲ್ಲಲ್ಲೋ ಬಿದ್ದು ಕಳೆದು ಹೋಯ್ತು
ಬಿದ್ದು ಕಳೆದು ಹೋಯ್ತು
ಮುತ್ತಿನ ನತ್ತೊಂದು ಮೂಗಿಂದ ಜಾರಿತೂ

ಬೆಂಗಳೂರಿನ ರಸಿಕ ಬೇರೊಂದ ನೀ ತಾರೋ...
ಚಿಕ್ಕಮಗಳೂರಿನಲಿ ಮುತ್ತ ಕೊಡುವೇನೂ ಬಾರೋ ... ಓಓಓಓಓ
ಹಾಸನದ ಹುರಿಯಾಳೇ ದುರ್ಗದ ಬಯಲಾಳೇ
ಹಾಸನದ ಹುರಿಯಾಳೇ ದುರ್ಗದ ಬಯಲಾಳೇ
ಶಿವಮೊಗ್ಗೆ ಬಿಲ್ಲಾಳೇ ಬನ್ನೀ ಕೊಡಗಿಗೇ ನಾಳೇ ...
ಶಿವಮೊಗ್ಗೆ ಬಿಲ್ಲಾಳೇ ಬನ್ನೀ ಕೊಡಗಿಗೇ ನಾಳೇ ...
ಮುತ್ತಿನ ನತ್ತೊಂದು ಮೂಗಿಂದ ಜಾರಿತೂ

ಎದೆಜಾರೇ ದಾವಣಿಯೂ ಕಣ್ಣು ತಿರುಗಿಸಿ ನಿಂತ... ಆಆಆ.... 
ದಾವಣಗೆರೆಯಾತ ಹೋಗಯ್ಯಾ.. ಸಾಕೂ ಪಂಥ 
ಹೂಬ್ಬು ಹಾರಿಸಬೇಡ ಹುಬ್ಬಳ್ಳಿ ಸರದಾರ 
ಹೂಬ್ಬು ಹಾರಿಸಬೇಡ ಹುಬ್ಬಳ್ಳಿ ಸರದಾರ 
ಕಬ್ಬು ಸಿಹಿಗಿಂತ ಸಿಹಿ ಕಾರವಾರದ ಹುಡುಗೀ 
ಕಬ್ಬು ಸಿಹಿಗಿಂತ ಸಿಹಿ ಕಾರವಾರದ ಹುಡುಗೀ 
ಮುತ್ತಿನ ನತ್ತೊಂದು ಮೂಗಿಂದ ಜಾರಿತೂ

ಮಂಗಳೂರೂ ಪಣಿಯಾಡಿ ತಪ್ಪಿ ಹೋದೆಯ ನೋಡೀ ... 
ಧಾರವಾಡ ಬೆಳಗಾವಿ ಗೆಲುವೆಲ್ಲೋ ಒಡನಾಡಿ... ಆಆಆ.... ಆಆಆ... 
ಬಳ್ಳಾರಿ ಹೊಸಪೇಟೇ ದೊಡ್ಡ ಪೇಟದ ಶೂರ  
ಬಳ್ಳಾರಿ ಹೊಸಪೇಟೇ ದೊಡ್ಡ ಪೇಟದ ಶೂರ  
ವಿಜಯಪುರಿಯ ಕಡೆಗೇ ದಯಮಾಡಿ ಬಾರಾ 
ವಿಜಯಪುರಿಯ ಕಡೆಗೇ ದಯಮಾಡಿ ಬಾರಾ 
ಮುತ್ತಿನ ನತ್ತೊಂದು ಮೂಗಿಂದ ಜಾರಿತೂ ಮೈಸೂರಿನಲ್ಲೆಲ್ಲಲ್ಲೋ ಬಿದ್ದು ಕಳೆದು ಹೋಯ್ತು
ಬಿದ್ದು ಕಳೆದು ಹೋಯ್ತು
ಮುತ್ತಿನ ನತ್ತೊಂದು ಮೂಗಿಂದ ಜಾರಿತೂ
-----------------------------------------------------------------------------------------------------------------------

No comments:

Post a Comment