330. ದುನಿಯಾ (2007)

ದುನಿಯಾ ಚಲನಚಿತ್ರದ ಹಾಡುಗಳು 
  1. ಇನ್ನೊಮ್ಮೆ ನೀನು ಬಂದು ನನ್ನ ಕೈಬೆರಳ ಹಿಡಿಯವ್ವಅವ್ವ ಹೆಂಗಾರ ಬಾರವ್ವ
  2. ಈ ಪಾಪಿ ದುನಿಯ ಪ್ರೀತಿ ಕಲಿಸಿ ಉಳಿಸೋದು ಕಲಿಸಿಲ್ಲ 
  3. ನೋಡಯ್ಯ ಕ್ವಾಟೆ ಲಿಂಗವೇ   ಬೆಳ್ಳಕ್ಕಿ ಜೋಡಿ ಕುಂತವೆ
  4. ಕರಿಯ ಐ ಲವ್ ಯು ಕರುನಾಡ ಮೇಲಾಣೆ
  5. ಸಾಲ ಮಡಿಯಾದ್ರು ತುಪ್ಪ ತಿನ್ನು ಗೋಳು ಪರದಾಟ ಸಾಕಿನ್ನು
  6. ಪ್ರೀತಿ ಮಾಯೇ ಹುಷಾರೂ 
  7. ಈ ಪಾಪಿ ಜನರಾ ಹಾಳೂ ದುನಿಯಾ ಜೀವಂತ ಸುಡುಗಾಡೂ
ದುನಿಯಾ (2007) - ಇನ್ನೊಮ್ಮೆ ನೀನು ಬಂದು ನನ್ನ ಕೈಬೆರಳ ಹಿಡಿಯವ್ವಅವ್ವ ಹೆಂಗಾರ ಬಾರವ್ವ
ಸಾಹಿತ್ಯ: ಯೋಗರಾಜ್ ಭಟ್ ಸಂಗೀತ: ವಿ.ಮನೋಹರ್ ಹಾಡಿದವರು: ಬದ್ರಿಪ್ರಸಾದ್

ಇನ್ನೊಮ್ಮೆ ನೀನು ಬಂದು ನನ್ನ ಕೈಬೆರಳ ಹಿಡಿಯವ್ವಅವ್ವ ಹೆಂಗಾರ ಬಾರವ್ವ
ಮತ್ತೊಮ್ಮೆ ನಿನ್ನ ತಂಪು ಮಡಿಲ ತೊಟ್ಟಿಲ ತೂಗವ್ವ ನನ್ನವ್ವ ಹಾಡವ್ವ ಜೋಗುಳವ
ಈ ಪಾಪಿ ಜನರ ಹಾಳು ದುನಿಯಾ ಯಾಕಾಗಿ ಬೇಕವ್ವ ನನ್ನವ್ವ ಎಲ್ಲವ್ವ ಬಾರವ್ವ
ಈ ಗೋರಿಯಿಂದ ನನ್ನ ಹೆಣವ ನೀ ಕೂಗಿ ಕರೆಯವ್ವ ನೀನನ್ನ ಮತ್ತೊಮ್ಮೆ ಹಡೆಯವ್ವ
ನನ್ನವ್ವ ಹೆಂಗಾರ ಬಾರವ್ವ
----------------------------------------------------------------------------------------------------------------------

ದುನಿಯಾ (2007) - ಈ ಪಾಪಿ ದುನಿಯ ಪ್ರೀತಿ ಕಲಿಸಿ ಉಳಿಸೋದು ಕಲಿಸಿಲ್ಲ 
ಸಾಹಿತ್ಯ: ಯೋಗರಾಜ್ ಭಟ್ ಸಂಗೀತ: ವಿ.ಮನೋಹರ್ ಹಾಡಿದವರು: ಬದ್ರಿಪ್ರಸಾದ್

ಆಆಅಅಅ ...
ಈ ಪಾಪಿ ದುನಿಯಾ ಪ್ರೀತಿ ಕಲಿಸಿ ಉಳಿಸೋದು ಕಲಿಸಿಲ್ಲ.. ಓ ಗೆಳತಿ ನೀನೂನು ಉಳಿದಿಲ್ಲ
ಜೊತೇಲಿ ನಡೆದ ಮಾತೆ ಇರದ ಮುಸ್ಸಂಜೆ ಮರೆತಿಲ್ಲ ಓ ಹುಡುಗಿ ಆ ನೆನಪು ಅಳಿಯೊಲ್ಲ
ಮುಂಜಾನೆವರೆಗೂ ಸೋನೆ ಸುರಿದ ದಿನಾಂಕ ಗುರುತಿಡುವೆ ಮಳೇಲಿ ನೆನೆದದ್ದು ನೆನಪಿಡುವೆ
ವಿಶ್ವಾಸವಿರದ ದ್ರೋಹಿ ದುನಿಯಾ ನೀನೂನು ಹಾಗೇನ ಓ ಗೆಳತಿ ನಿನ್ನಲ್ಲೂ ವಿಷವೇನಾ
----------------------------------------------------------------------------------------------------------------------

ದುನಿಯಾ (2007) - ನೋಡಯ್ಯ ಕ್ವಾಟೆ ಲಿಂಗವೇ   ಬೆಳ್ಳಕ್ಕಿ ಜೋಡಿ ಕುಂತವೆ
ಸಾಹಿತ್ಯ: ಯೋಗರಾಜ್ ಭಟ್ ಸಂಗೀತ: ವಿ.ಮನೋಹರ್ ಹಾಡಿದವರು: ಎಂ ಡಿ ಪಲ್ಲವಿ

ನೋಡಯ್ಯ ಕ್ವಾಟೆ ಲಿಂಗವೇ  ಏಏಏಏಏ...  ಬೆಳ್ಳಕ್ಕಿ ಜೋಡಿ ಕುಂತವೆ
ಅಂಗೈ ಅಷ್ಟಗಲ ಗೂಡು   ಆದ್ರುನು ದರ್ಬಾರ್ ನೋಡು ಪ್ರೀತಿಲಿ ಲೋಕ ಮರ್ತವೇ....ಏಏಏಏಏ..
ನೋಡಯ್ಯ ಕ್ವಾಟೆ ಲಿಂಗವೇ  ಏಏಏಏಏ...  ಬೆಳ್ಳಕ್ಕಿ ಜೋಡಿ ಕುಂತವೆ
ನೋಡಯ್ಯ ಕ್ವಾಟೆ ಲಿಂಗವೇ  ಏಏಏಏಏ.

ಪಾಯಯಿಲ್ಲ ಗ್ವಾಡೆಯಿಲ್ಲ ನೋಡು ಇವರ ಅರಮನೆ ರಾಜ ರಾಣಿ ಆಳು ಕಾಳು ಎಲ್ಲಾನೂ ಇವರೇನೇ
ಸ್ವಾನೆ ಮಳ್ಯೋ ಉರಿಯೋ ಬಿಸಿಲೋ ಏನೇ ಬಂದ್ರು ಜಗ್ಗಲ್ಲ
ಅವಳಿಗೆ ಇವನೇ ಕೊಡೆಯಾಗವ್ನೆ ಇವ್ರ್ ಬಿಟ್ ಇವ್ರ್ಗೆಯಾರಿಲ್ಲ
ನೋಡಯ್ಯ ಕ್ವಾಟೆ ಲಿಂಗವೇ  ಏಏಏಏಏ...  ಬೆಳ್ಳಕ್ಕಿ ಜೋಡಿ ಕುಂತವೆ
ಅಂಗೈ ಅಷ್ಟಗಲ ಗೂಡು   ಆದ್ರುನು ದರ್ಬಾರ್ ನೋಡು ಪ್ರೀತಿಲಿ ಲೋಕ ಮರ್ತವೇ....ಏಏಏಏಏ..
ನೋಡಯ್ಯ ಕ್ವಾಟೆ ಲಿಂಗವೇ  ಏಏಏಏಏ...  ಬೆಳ್ಳಕ್ಕಿ ಜೋಡಿ ಕುಂತವೆ
ನೋಡಯ್ಯ ಕ್ವಾಟೆ ಲಿಂಗವೇ  ಏಏಏಏಏ.

ಪೆದ್ದು ಹೈದ ಮನ್ಸು ಸುದ್ದ ಸುಳ್ಳು ಹೇಳೋ ಕುಲವಲ್ಲ
ಸುಣ್ಣದ ನೀರ್ಗು ಗೋವಿನ ಹಾಲ್ಗು ಯತ್ವಾಸ ಗೊತ್ತಿಲ್ಲ
ಅ ಆ ಇ ಈ ಓದಿದೋಳು ಇವ್ನಾ ಮನ್ಸು ಒದವ್ಳೆ
ಕೋಗ್ಲೆ ಬಣ್ಣ ಆದ್ರು ಚಿನ್ನ ಅಂತ ಇವ್ನಾ ಜೊತೆಗವ್ಳೆ
ನೋಡಯ್ಯ ಕ್ವಾಟೆ ಲಿಂಗವೇ  ಏಏಏಏಏ...  ಬೆಳ್ಳಕ್ಕಿ ಜೋಡಿ ಕುಂತವೆ
ಅಂಗೈ ಅಷ್ಟಗಲ ಗೂಡು   ಆದ್ರುನು ದರ್ಬಾರ್ ನೋಡು ಪ್ರೀತಿಲಿ ಲೋಕ ಮರ್ತವೇ....ಏಏಏಏಏ..
ನೋಡಯ್ಯ ಕ್ವಾಟೆ ಲಿಂಗವೇ  ಏಏಏಏಏ...  ಬೆಳ್ಳಕ್ಕಿ ಜೋಡಿ ಕುಂತವೆ
ನೋಡಯ್ಯ ಕ್ವಾಟೆ ಲಿಂಗವೇ  ಏಏಏಏಏ.
(ಹೇಹೇಹೇಹೇಹೇಹೇ ..... )
-----------------------------------------------------------------------------------------------------------------------

ದುನಿಯಾ (2007) - ಕರಿಯ ಐ ಲವ್ ಯು ಕರುನಾಡ ಮೇಲಾಣೆ
ಸಂಗೀತ: ವಿ.ಮನೋಹರ್  ಸಾಹಿತ್ಯ: ವಿ.ನಾಗೇಂದ್ರಪ್ರಸಾದ್   ಹಾಡಿದವರು: ರಾಜೇಶ್ ಕೃಷ್ಣನ್ , ನಂದಿತಾ

ಹೆಣ್ಣು : ಕರಿಯ ಐ ಲವ್ ಯು ಕರುನಾಡ ಮೇಲಾಣೆ
ಗಂಡು : ಬೆಳ್ಳಿ ಐ ಲವ್ ಯು ಬಿಳಿ ಮೋಡದ ಆಣೆ
ಹೆಣ್ಣು : ನಿನಗೊಂದು ಪ್ರೇಮದ ಪತ್ರ ಬರೆಯೋದು ನನಗಾಸೆ
ಗಂಡು : ನಾನೇ ಇರುವೆ ಹತ್ತಿರ ಬಿಡು ಆಸೆ ಓ ಕೂಸೇ...
ಹೆಣ್ಣು : ಕರಿಯ ಐ ಲವ್ ಯು ಕರುನಾಡ ಮೇಲಾಣೆ
ಗಂಡು : ಬೆಳ್ಳಿ ಐ ಲವ್ ಯು ಬಿಳಿ ಮೋಡದ ಆಣೆ
ಹೆಣ್ಣು : ನಿನಗೊಂದು ಪ್ರೇಮದ ಪತ್ರ ಬರೆಯೋದು ನನಗಾಸೆ
ಗಂಡು : ನಾನೇ ಇರುವೆ ಹತ್ತಿರ ಬಿಡು ಆಸೆ ಓ ಕೂಸೇ...

ಗಂಡು : ಓದು ಬರಹ ಬರದು ಬರಿ ಆಡು ಭಾಷೆ ನಂದು
           ತಬ್ಬಲಿ ನಾನು ತಾಯಿ ನೀನು ಏಳು ಜನ್ಮದ ಬಂಧು
ಹೆಣ್ಣು : ನಿನ್ನ ಪ್ರೀತಿ ಎದುರು ನಾನ್ನಿನ್ನೂ ಕೊನೆಯ ಉಗುರು
          ಸಾರ್ಥಕವಾಯಿತು ನನ್ನ ಬಾಳು ನಾವೂ ಒಂದೇ ಉಸಿರು...
ಹೆಣ್ಣು : ಕರಿಯ ಐ ಲವ್ ಯು ಕರುನಾಡ ಮೇಲಾಣೆ
ಗಂಡು : ಬೆಳ್ಳಿ ಐ ಲವ್ ಯು ಬಿಳಿ ಮೋಡದ ಆಣೆ
ಹೆಣ್ಣು : ನಿನಗೊಂದು ಪ್ರೇಮದ ಪತ್ರ ಬರೆಯೋದು ನನಗಾಸೆ
ಗಂಡು : ನಾನೇ ಇರುವೆ ಹತ್ತಿರ ಬಿಡು ಆಸೆ ಓ ಕೂಸೇ...

ಹೆಣ್ಣು : ಯಾರು ಏನೇ ಅನ್ನಲ್ಲಿ ಇಡೀ ಊರಿಗೂರೇ ಬರಲೀ
          ಜೀವವು ನಿನದೆ ಜೀವನ ನಿನದೆ ನಿನ್ನ ಪ್ರೀತಿ ಸಿಗಲಿ
ಗಂಡು : ಬಾರೆ ಬಾರೆ ಜಮುನಾ ಊರ ಮ್ಯಾಲೆ ಯಾಕೆ ಗಮನ
            ಒಲವೇ ಜೀವನ ಸಾಕ್ಷಾತ್ಕಾರ ಜೀವ ಕೊಡ್ತೀನಿ ಚಿನ್ನ
ಹೆಣ್ಣು : ಕರಿಯ ಐ ಲವ್ ಯು ಕರುನಾಡ ಮೇಲಾಣೆ
ಗಂಡು : ಬೆಳ್ಳಿ ಐ ಲವ್ ಯು ಬಿಳಿ ಮೋಡದ ಆಣೆ
ಹೆಣ್ಣು : ನಿನಗೊಂದು ಪ್ರೇಮದ ಪತ್ರ ಬರೆಯೋದು ನನಗಾಸೆ
ಗಂಡು : ನಾನೇ ಇರುವೆ ಹತ್ತಿರ ಬಿಡು ಆಸೆ ಓ ಕೂಸೇ...
ಹೆಣ್ಣು : ಕರಿಯ ಐ ಲವ್ ಯು ಕರುನಾಡ ಮೇಲಾಣೆ
ಗಂಡು : ಬೆಳ್ಳಿ ಐ ಲವ್ ಯು ಬಿಳಿ ಮೋಡದ ಆಣೆ
ಹೆಣ್ಣು : ನಿನಗೊಂದು ಪ್ರೇಮದ ಪತ್ರ ಬರೆಯೋದು ನನಗಾಸೆ
ಗಂಡು : ನಾನೇ ಇರುವೆ ಹತ್ತಿರ ಬಿಡು ಆಸೆ ಓ ಕೂಸೇ...
-----------------------------------------------------------------------------------------------------------------------

ದುನಿಯಾ (2007) - ಸಾಲ ಮಡಿಯಾದ್ರು ತುಪ್ಪ ತಿನ್ನು ಗೋಳು ಪರದಾಟ ಸಾಕಿನ್ನು
ಸಂಗೀತ ಮತ್ತು ಸಾಹಿತ್ಯ:  ವಿ.ಮನೋಹರ್  ಹಾಡಿದವರು: ಮೈಸೂರ್ ಜೆನ್ನಿ, ಗುರುರಾಜ್ ಹೊಸಕೋಟೆ 

ಕೋರಸ್ : ಅಹ್ಹಹ್ಹಾ.. ಅಹ್ಹಹ್ಹಾ... ಓಹೋಹೋ ಓಹೋಹೋ
ಗಂಡು : ಸಾಲ ಮಡಿಯಾದ್ರು ತುಪ್ಪ ತಿನ್ನು ಗೋಳು ಪರದಾಟ ಸಾಕಿನ್ನು
            ಬದುಕದ್ ಕಲಿಯೋ ಬಿಕನಾಸಿ ನಗೋದುಕ್ಕು ಯಾಕೆ ಚೌಕಾಸಿ ನಗಿಸಿ ನಗುವುದೇ ಖುಷಿ
            ಸಾಲ ಮಡಿಯಾದ್ರು ತುಪ್ಪ ತಿನ್ನು ಗೋಳು ಪರದಾಟ ಸಾಕಿನ್ನು
            ಬದುಕದ್ ಕಲಿಯೋ ಬಿಕನಾಸಿ ನಗೋದುಕ್ಕು ಯಾಕೆ ಚೌಕಾಸಿ ನಗಿಸಿ ನಗುವುದೇ ಖುಷಿ

ಗಂಡು : ಲಕ್ಷ ರೂಪಾಯಿ (ಹೊಯ್ ) ಇದ್ದೋರಿಗೆ (ಹೊಯ್) ಕೋಟಿಯ ಚಿಂತೆ ಗುರು
            ಕೋಟಿ ಕೋಟಿ (ಹೊಯ್ )ಕೂಡಿಟ್ಟರೇ (ಹೊಯ್ ) ಮೈತುಂಬ ಕಾಯಲೇ ಶುರು
            ಚಿಂತೆಗಳೇ (ಆಹಾ) ಇಲ್ಲದೋರಿಗೆ (ಆಹಾ) ಸಂತೇಲು ನಿದ್ದೆ ಗುರೂ
            ಒಂದೇ ಹುಟ್ಟು (ಆಹೋ) ನಾವಂದ್ರೂ (ಆಹೋ) ತಂಪಾಗಿರೋ ಗಾಂಪರೂ
            ಮೃಷ್ಟವನ್ನಾವೂ ಸೈ ಚಿತ್ರಾನ್ನವೂ ಸೈ ಸಿಕ್ಕಾಗ ಹೊಡಿ ಲೊಟ್ಟೆ
            ಫುಟಪಾತಲ್ಲೂ ಸೈ ಚೌಪಾಟಿಯಲು ಸೈ ಮೈಚಾಚಿ ಹೊಡಿ ನಿದ್ದೆ
            ಸಾಲ ಮಡಿಯಾದ್ರು ತುಪ್ಪ ತಿನ್ನು ಗೋಳು ಪರದಾಟ ಸಾಕಿನ್ನು
            ಬದುಕದ್ ಕಲಿಯೋ ಬಿಕನಾಸಿ ನಗೋದುಕ್ಕು ಯಾಕೆ ಚೌಕಾಸಿ
ಕೋರಸ್ : ನಗಿಸಿ ನಗುವುದೇ ಖುಷಿ

ಗಂಡು : ಕಡಲ ಕಡೆ (ಹೊಯ್ ) ಎದ್ದು ಬಿದ್ದು (ಹೊಯ್ ) ಓಡಾತಾವೇ ಎಲ್ಲಾ ನದಿ
           ತಿಮ್ಮಪ್ಪನ (ಹೊಯ್ ) ಹುಂಡಿಯೊಳಗೆ (ಹೊಯ್ ) ಸೇರತಾವೆ ಎಲ್ಲರ ನಿಧಿ
           ಇದ್ದಹಂಗೇನೇ (ಆಹಾ ) ಇರೋರು ನಾವ್ (ಆಹಾ ) ಸುಮ್ಮನೇ ಬಿಡಲ್ಲ ವಿಧಿ
           ನಮ್ಮ ತಂಟೆಗೆ (ಒಹೋ) ಬಂದ್ರೆ ಅದು (ಒಹೋ) ಎದ್ದೆದ್ದು ಜಾಡಿಸಿ ಒದಿ
          ಸನ್ಯಾಸಿಗೂ ಜೈ ಬೇವಾರ್ಸಿಗೂ ಜೈ ಇಬ್ಬರಿಂದ್ಲು  ಕಲಿ ಪಾಠ
          ಆ ದ್ಯಾವರಿಗೂ ಜೈ ಈ ದ್ಯಾವರಿಗೂ ಜೈ ನಮ್ ದ್ಯಾವರೇ ಈ ಊಟ
          ಸಾಲ ಮಡಿಯಾದ್ರು ತುಪ್ಪ ತಿನ್ನು ಗೋಳು ಪರದಾಟ ಸಾಕಿನ್ನು
          ಬದುಕದ್ ಕಲಿಯೋ ಬಿಕನಾಸಿ ನಗೋದುಕ್ಕು ಯಾಕೆ ಚೌಕಾಸಿ ನಗಿಸಿ ನಗುವುದೇ ಖುಷಿ
ಕೋರಸ್ :  ಸಾಲ ಮಡಿಯಾದ್ರು ತುಪ್ಪ ತಿನ್ನು ಗೋಳು ಪರದಾಟ ಸಾಕಿನ್ನು
                ಬದುಕದ್ ಕಲಿಯೋ ಬಿಕನಾಸಿ ನಗೋದುಕ್ಕು ಯಾಕೆ ಚೌಕಾಸಿ ನಗಿಸಿ ನಗುವುದೇ ಖುಷಿ
--------------------------------------------------------------------------------------------------------------------------

ದುನಿಯಾ (2007) - ಪ್ರೀತಿ ಮಾಯೇ ಹುಷಾರೂ
ಸಂಗೀತ : ವಿ.ಮನೋಹರ್ ಸಾಹಿತ್ಯ : ರಂಗನಾಥ ಹಾಡಿದವರು: ಹೇಮಂತ, ಅಕಾಂಶ ಬಾದಾಮಿ 

ಗಂಡು : ಹೇ.. ಪ್ರೀತಿ ಮಾಯೇ ಹುಷಾರೂ ಕಣ್ಣೀರ ಮಾರೋ ಬಜಾರೂ
           ಪ್ರೀತಿ ಮಾಯೇ ಹುಷಾರೂ ಕಣ್ಣೀರ ಮಾರೋ ಬಜಾರೂ 
           ಒಮ್ಮೇ ಶರಣಾದ್ರೆ ಪ್ರೀತಿಗೇ ಕತ್ತು ಕೊಟ್ಟಂಗೇ ಕತ್ತಿಗೇ 
           ಒಮ್ಮೇ ಶರಣಾದ್ರೆ ಪ್ರೀತಿಗೇ ಕತ್ತು ಕೊಟ್ಟಂಗೇ ಕತ್ತಿಗೇ 
          ಪ್ರೀತಿ ಮಾಯೇ ಹುಷಾರೂ ಕಣ್ಣೀರ ಮಾರೋ ಬಜಾರೂ 

ಗಂಡು : ರೋಮಿಯೋ ಜೂಲಿಯೆಟ್ ನಮಗೊತ್ತಿಲ್ವಾ ಪೋಯಿಷನ್ ಕೂಡಿಸಿದ್ದೂ ಪ್ರೀತಿಗೇ ಆಲ್ವಾ 
ಹೆಣ್ಣು : ಸಾವಲ್ಲೂ ಒಂದಾದರೂ ಪ್ರೀತ್ಸೋರೆಗೆಲ್ಲಾ ಬೇಕಾದರೂ 
          ಪ್ರೀತ್ಸೋರ ಪಿಸುಮಾತನೂ ಕೊಲ್ಲೋ ಲೋಕ ಸುಳ್ಳೆಂದರೂ 
ಗಂಡು : ಈ ಪ್ರೀತಿ ಕುರುಡೂ ಕಣೇ ನೋವಲ್ಲೇ ಅದರ ಕೊನೇ ಯಾಮಾರ್ ಬೇಡ ಸುಮ್ಮನೇ 
          ಪ್ರೀತಿ ಮಾಯೇ ಹುಷಾರೂ ಕಣ್ಣೀರ ಮಾರೋ ಬಜಾರೂ 
          ಆ... ಪ್ರೀತಿ ಮಾಯೇ ಹುಷಾರೂ ಕಣ್ಣೀರ ಮಾರೋ ಬಜಾರೂ 

ಗಂಡು : ದೇವದಾಸ ಸ್ಟೋರಿ ಗೊತ್ತಾ ನಿಂಗೇ ಪ್ರೀತ್ಸಿ  ಪೀ ಬೋಟ ಆಗಿದ್ಹೆಂಗೇ  
ಹೆಣ್ಣು : ಪಾರೂನಾ ಮರೆಯೋ ನೆಪ ನೆಪವೀ ನೆನಪೂ ಅವಳ ಜಪ 
          ಮರೆಯಾದ್ರೂ ಅವರ ಕಥಿ ನೀ ನೆನೆಯೋದ ಯಾಕೇ ಮತ್ತೀ ಮತ್ತೀ 
ಗಂಡು : ಬೇ ಆದಿ ಕಣ್ಣೀರೂ ಅಂತ್ಯ ಕಣ್ಣೀರೂ ಕೈಕೊಡುವನೂ ದೇವರೂ 
           ಪ್ರೀತಿ ಮಾಯೇ ಹುಷಾರೂ ಕಣ್ಣೀರೂ ಮಾರೋ ಬಜಾರೂ 
           ಪ್ರೀತಿ ಮಾಯೇ ಹುಷಾರೂ ಕಣ್ಣೀರೂ ಮಾರೋ ಬಜಾರೂ 
           ಒಮ್ಮೇ ಶರಣಾದ್ರೆ ಪ್ರೀತಿಗೇ ಕತ್ತು ಕೊಟ್ಟಂಗೇ ಕತ್ತಿಗೇ 
           ಒಮ್ಮೇ ಶರಣಾದ್ರೆ ಪ್ರೀತಿಗೇ ಕತ್ತು ಕೊಟ್ಟಂಗೇ ಕತ್ತಿಗೇ 
          ಪ್ರೀತಿ ಮಾಯೇ ಹುಷಾರೂ ಕಣ್ಣೀರ ಮಾರೋ ಬಜಾರೂ 
          ಪ್ರೀತಿ ಮಾಯೇ ಹುಷಾರೂ ಕಣ್ಣೀರ ಮಾರೋ ಬಜಾರೂ 
--------------------------------------------------------------------------------------------------------------------------

ದುನಿಯಾ (2007) - ಈ ಪಾಪಿ ದುನಿಯ ಪ್ರೀತಿ ಕಲಿಸಿ ಉಳಿಸೋದು ಕಲಿಸಿಲ್ಲ 
ಸಾಹಿತ್ಯ: ಯೋಗರಾಜ್ ಭಟ್ ಸಂಗೀತ: ವಿ.ಮನೋಹರ್ ಹಾಡಿದವರು: ಬದ್ರಿಪ್ರಸಾದ್

ಆಆಅಅಅ ...
ಈ ಪಾಪಿ ಜನರಾ ಹಾಳೂ ದುನಿಯಾ ಜೀವಂತ ಸುಡುಗಾಡೂ ಎಲ್ಲಾರೂ ಬದುಕಿದ್ದೂ ಸತ್ತೋರೂ
ಭೂಮಿನೇ ಕಡಲು ನಾನೂ ಹಡಗು ಬಿರುಗಾಳಿ ಬಾಳೆಲ್ಲಾ ನೀನಿಲ್ಲದೇ ಗೊತ್ತಿಲ್ಲ ಗುರಿಯಿಲ್ಲಾ
ಬೀದಿಲಿ ಬಡವ ಸಾಯುವಾಗ ಕೇಳೋಕೇ ಯಾರಿಲ್ಲಾ.. ಓ.. ಅವ್ವಾ.. ಕಣ್ಣೀರೂ ಒರೆಸಲ್ಲಾ..
ಕಣ್ಣೀರೂ ಕೊಳ್ಳಲೂ ಯಾರೂ ಇಲ್ಲಾ.. ಕಣ್ಣೀರಗೇ ಬೆಲೆ ಇಲ್ಲಾ.. ನನ್ನವ್ವಾ ಈ  ನಮಗಲ್ಲಾ ...
ನನ್ನವ್ವಾ ಈ  ನಮಗಲ್ಲಾ ... ಆಆಆ...
----------------------------------------------------------------------------------------------------------------------

No comments:

Post a Comment