333. ಬದುಕು ಬಂಗಾರವಾಯಿತು (1976)

ಬದುಕು ಬಂಗಾರವಾಯಿತು ಚಿತ್ರದ ಹಾಡುಗಳು 
  1. ಜಗದೀಶ ಸರ್ವೇಶ ಮಲ್ಲೇಶ ಗೌರೀಶ 
  2. ಮನೆಯು ಬೆಳಗಲೀ ಮನವೂ ಬೆಳಗಲಿ 
  3. ನಿಲ್ಲಯ್ಯ ನಿಲ್ಲೋ ಒಹ್ ಕೆಂಚು ಮೀಸೋನೆ 
  4. ಪ್ರಿಯತಮಾ ನಾನಾರೋ ಅರಿವಾಗದೋ 
ಬದುಕು ಬಂಗಾರವಾಯಿತು (1976)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಎಂ.ರಂಗ ರಾವ್ ಹಾಡಿದವರು: ಎಸ್.ಜಾನಕಿ

ಜಗದೀಶ ಸರ್ವೇಶ ಮಲ್ಲೇಶ ಗೌರೀಶ ನೂರಾರು ಹೆಸರು ಶಿವನೀಗೆ
ನೂರಾರು ಹೆಸರು ನಂಜುಂಡೇಶ್ವರನೀಗೆ ಇರುವನು ನೆನೆದೋರ ಮನದಾಗೆ
ಜಗದೀಶ ಸರ್ವೇಶ ಮಲ್ಲೇಶ ಗೌರೀಶ ನೂರಾರು ಹೆಸರು ಶಿವನೀಗೆ
ನೂರಾರು ಹೆಸರು ನಂಜುಂಡೇಶ್ವರನೀಗೆ ಇರುವನು ನೆನೆದೋರ ಮನದಾಗೆ

ಮೊಗ್ಗಲ್ಲಿ ಕುಳಿತವ್ನೆ, ಹೂವಲ್ಲಿ ನಗುತಾನೆ ಮಾಲ್ಯಾಗೆ ಹಾಯಾಗಿ ಮಲಗವ್ನೆ
ಮೊಗ್ಗಲ್ಲಿ ಕುಳಿತವ್ನೆ, ಹೂವಲ್ಲಿ ನಗುತಾನೆ ಮಾಲ್ಯಾಗೆ ಹಾಯಾಗಿ ಮಲಗವ್ನೆ
ಮಾಲ್ಯಾಗೆ ಹಾಯಾಗಿ ಮಲಗವ್ನೆ ಮಾದೇವ ಮನಸಿಟ್ಟು ಕೂಗಲು ಬರುತಾನೆ
ಜಗದೀಶ ಸರ್ವೇಶ ಮಲ್ಲೇಶ ಗೌರೀಶ ನೂರಾರು ಹೆಸರು ಶಿವನೀಗೆ
ನೂರಾರು ಹೆಸರು ನಂಜುಂಡೇಶ್ವರನೀಗೆ ಇರುವನು ನೆನೆದೋರ ಮನದಾಗೆ

ಗಿಳಿಯಲ್ಲಿ ಹಸಿರಾಗಿ, ನವಿಲಲ್ಲಿ ಕಣ್ಣಾಗಿ ಕೋಗಿಲೆ ದನಿಯಾ ಇಂಪಾಗಿ
ಗಿಳಿಯಲ್ಲಿ ಹಸಿರಾಗಿ, ನವಿಲಲ್ಲಿ ಕಣ್ಣಾಗಿ ಕೋಗಿಲೆ ದನಿಯಾ ಇಂಪಾಗಿ
ಕೋಗಿಲೆ ದನಿಯಾ ಇಂಪಾಗಿ ಕೆಳೋರ ಮನಸೀಗೆ ತಂದವ್ನೆ ಆನಂದ
ಜಗದೀಶ ಸರ್ವೇಶ ಮಲ್ಲೇಶ ಗೌರೀಶ ನೂರಾರು ಹೆಸರು ಶಿವನೀಗೆ
ನೂರಾರು ಹೆಸರು ನಂಜುಂಡೇಶ್ವರನೀಗೆ ಇರುವನು ನೆನೆದೋರ ಮನದಾಗೆ

ಕಲ್ಲಲ್ಲಿ ಮುಳ್ಳಲ್ಲಿ, ಗಾಳೀಲಿ ನೀರಲ್ಲಿ ಎಲ್ಲೆಲ್ಲೂ ನಮ್ಮ ಶಿವನುಂಟು
ಕಲ್ಲಲ್ಲಿ ಮುಳ್ಳಲ್ಲಿ, ಗಾಳೀಲಿ ನೀರಲ್ಲಿ ಎಲ್ಲೆಲ್ಲೂ ನಮ್ಮ ಶಿವನುಂಟು
ಎಲ್ಲೆಲ್ಲೂ ನಮ್ಮ ಶಿವನುಂಟು ಜಗದಲ್ಲಿ ಶರಣರಿಗೆ ಕಾಣೋ ಕಣ್ಣುಂಟು
ಜಗದೀಶ ಸರ್ವೇಶ ಮಲ್ಲೇಶ ಗೌರೀಶ ನೂರಾರು ಹೆಸರು ಶಿವನೀಗೆ
ನೂರಾರು ಹೆಸರು ನಂಜುಂಡೇಶ್ವರನೀಗೆ ಇರುವನು ನೆನೆದೋರ ಮನದಾಗೆ
-----------------------------------------------------------------------------------------------------------------------

ಬದುಕು ಬಂಗಾರವಾಯಿತು (1976)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಎಂ.ರಂಗ ರಾವ್ ಹಾಡಿದವರು: ವಾಣಿ ಜಯರಾಮ್

ಮನೆಯು ಬೆಳಗಲೀ ನಮ್ಮ ಮನವು ಬೆಳಗಲೀ
ಶಾಂತಿಯು ತುಂಬಲಿ ನೆಮ್ಮದಿ ಮೂಡಲಿ
ಶಾಂತಿಯು ತುಂಬಲಿ ನೆಮ್ಮದಿ ಮೂಡಲಿ
ನಮ್ಮೀ ಬಾಳಲೀ ಮನೆಯು ಬೆಳಗಲೀ...ಆಆಆ...

ಬಾಳಿನ ನೌಕೆ ಬಿರುಗಾಳಿಯಲಿ ಮುಳುಗದ ಹಾಗೆ ಕಾಪಾಡು
ಬಾಳಿನ ನೌಕೆ ಬಿರುಗಾಳಿಯಲಿ ಮುಳುಗದ ಹಾಗೆ ಕಾಪಾಡು
ನಾಳಿನ ಬದುಕು ಸಿಹಿಯಾಗಿರಲು ಕರುಣೆಯ ನೋಟದಿ ನೀ ನೋಡು
ಕೈಹಿಡಿದೆನ್ನಾ ನಡೆಸು ತಾಯಿಯ ಪ್ರೇಮದಿ ಹರಸು
ಕೈಹಿಡಿದೆನ್ನಾ ನಡೆಸು ತಾಯಿಯ ಪ್ರೇಮದಿ ಹರಸು
ಕತ್ತಲ ಅಳಿಸು ಕನಿಕರಿಸು ಜಗದೀಶ್ವರೀ ಉದ್ದರಿಸು
ಮನೆಯು ಬೆಳಗಲೀ ....ಆಆಆ

ಎಲ್ಲ ಪೂಜೆಯು, ಎಲ್ಲ ವ್ರತಗಳು ಸುಖವನು ಬೇಡುವ ಸಲುವಾಗಿ
ಎಲ್ಲರ ಆಶೆಯು, ಎಲ್ಲರ ಬಯಕೆಯು ಬಾಳಿನ ಭಾಗ್ಯೋದಯಕಾಗಿ
ತಾಯಿಯ ಹಾಗೆ ನೀನು ಮಕ್ಕಳು ಕೋರುವುದೇನು
ತಾಯಿಯ ಹಾಗೆ ನೀನು ಮಕ್ಕಳು ಕೋರುವುದೇನು
ಎಲ್ಲ ಅರಿತ ಅಮ್ಮನು ನೀನು ನಿನ್ನಲಿ ಶರಣು ನಾನು
ಮನೆಯು ಬೆಳಗಲೀ ನಮ್ಮ ಮನವು ಬೆಳಗಲೀ
ಶಾಂತಿಯು ತುಂಬಲಿ ನೆಮ್ಮದಿ ಮೂಡಲಿ
ಶಾಂತಿಯು ತುಂಬಲಿ ನೆಮ್ಮದಿ ಮೂಡಲಿ
ನಮ್ಮೀ ಬಾಳಲೀ ಮನೆಯು ಬೆಳಗಲೀ...ಆಆಆ..
-----------------------------------------------------------------------------------------------------------------------

ಬದುಕು ಬಂಗಾರವಾಯಿತು (1976)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಎಂ.ರಂಗರಾವ್ ಹಾಡಿದವರು: ಎಸ್.ಜಾನಕಿ

ನಿಲ್ಲಯ್ಯಾ ನಿಲ್ಲು
ನಿಲ್ಲಯ್ಯಾ ನಿಲ್ಲೋ ಓ ಕೆಂಚು ಮೀಸ್ಯೋನೆ
ನಿಲ್ಲಯ್ಯಾ ನಿಲ್ಲೋ ಓ ಕೆಂಚು ಮೀಸ್ಯೋನೆ
ನಾನು ಜೊತೆಯಾಗಿ ಬರುತೀನಿ ಸಂಚುಗಾರನೆ 
ಹೊಯ್ ಹೊಯ್ ಹೊಯ್ ಸಂಚುಗಾರನೆ
ಹೊಯ್ ಹೊಯ್ ಹೊಯ್ ಹೊಯ್
ನಿಲ್ಲಯ್ಯಾ ನಿಲ್ಲೋ ಓ ಕೆಂಚು ಮೀಸ್ಯೋನೆ
ನಾನು ಜೊತೆಯಾಗಿ ಬರುತೀನಿ ಸಂಚುಗಾರನೆ
ಅಹಹಹ ಸಂಚುಗಾರನೆ, ಅಹ ಅಹ ಅಹ ಅಹಾ

ಅಡ್ಡ ಗುಡ್ಡ ದಾಟಿ ಬಂದೆ, ಕದ್ದು ಕಣಿವೆ ಹಾರಿ ಬಂದೆ
ಅಡ್ಡ ಗುಡ್ಡ ದಾಟಿ ಬಂದೆ, ಕದ್ದು ಕಣಿವೆ ಹಾರಿ ಬಂದೆ
ಬಿದ್ದು ಎದ್ದು ಓಡಿ ಬಂದೇನಾ, ಚೆಲುವ
ನಿದ್ದೆ ಗೆಟ್ಟು ನಿನ್ನಾ ಕಾದೆನು
ಹಾದಿಯಲ್ಲಿ ಯಾರೂ ಇಲ್ಲ, ಬೀದಿಯಲ್ಲಿ ಕೇಳೋರಿಲ್ಲ
ಹಾದಿಯಲ್ಲಿ ಯಾರೂ ಇಲ್ಲ, ಬೀದಿಯಲ್ಲಿ ಕೇಳೋರಿಲ್ಲ
ರಾಜಾ ರಾಣಿ ನಾವೇ ಹಳ್ಳಿಗೆ, ಓ ಚೆನ್ನಿಗ
ನನ್ನ ಕೈಯ ಹಿಡಿಯೋ ಮೆಲ್ಲಗೆ, ಅರೆರೆರೆರೆ
ನಿಲ್ಲಯ್ಯಾ ನಿಲ್ಲೋ ಓ ಕೆಂಚು ಮೀಸ್ಯೋನೆ
ನಾನು ಜೊತೆಯಾಗಿ ಬರುತೀನಿ ಸಂಚುಗಾರನೆ
ಹೇ ಹೇ ಹೇ ಸಂಚುಗಾರನೆ, ಅಹ ಅಹ ಅಹ ಅಹಾ

ದಿನವು ರಾತ್ರಿ ಮಲಗಿದಾಗ ನಿದ್ದೆ ಕಣ್ಣ ತುಂಬಿದಾಗ
ದಿನವು ರಾತ್ರಿ ಮಲಗಿದಾಗ ನಿದ್ದೆ ಕಣ್ಣ ತುಂಬಿದಾಗ
ಕನಸಿನಾಗೆ ನೀನು ಬರುತೀ, ಗೆಣೆಯ
ಪ್ರೀತಿಯಿಂದ ಮಾತನಾಡುತಿ
ತೋಳಿನಿಂದ ಮೈಯ ಬಳಸಿ, ಕಣ್ಣಿನಲ್ಲಿ ಕಣ್ಣನಿರಿಸಿ
ತೋಳಿನಿಂದ ಮೈಯ ಬಳಸಿ, ಕಣ್ಣಿನಲ್ಲಿ ಕಣ್ಣನಿರಿಸಿ
ಮೈಯ ತುಂಬ ಮಿಂಚ ತುಂಬುವೆ
ನನ್ನನ್ನು, ಗಂಡನಂತೆ ಎತ್ತಿ ಆಡುವೆ
ಏಯ್  ನಿಲ್ಲಯ್ಯಾ ನಿಲ್ಲೋ ಓ ಕೆಂಚು ಮೀಸ್ಯೋನೆ
ನಾನು ಜೊತೆಯಾಗಿ ಬರುತೀನಿ ಓಯ್  ಸಂಚುಗಾರನೆ
ಹೊಯ್ ಹೊಯ್ ಹೊಯ್ ಸಂಚುಗಾರನೆ
ಹೊಯ್ ಹೊಯ್ ಹೊಯ್ ಹೊ ಹೊಯ್

ಇಬ್ರೇ ಇಲ್ಲಿ ಇರೋವಾಗ, ಅಬ್ರ ಯಾಕೆ ನೀನು ಮಾಡ್ತಿ
ಇಬ್ರೇ ಇಲ್ಲಿ ಇರೋವಾಗ, ಅಬ್ರ ಯಾಕೆ ನೀನು ಮಾಡ್ತಿ
ಕಬ್ಬಿನಂತ ಸಿಹಿಯ ಮಾತಾಡು, ಗೌರೀಶ
ತಬ್ಬಿಕೊಂಡು ನನ್ನ ಓಡಾಡು
ಕಣ್ಣಿನಲ್ಲಿ ಕೊಲ್ಲಬೇಡ, ಹೆಣ್ಣ ದೂರ ತಳ್ಳಬೇಡ
ಕಣ್ಣಿನಲ್ಲಿ ಕೊಲ್ಲಬೇಡ, ಹೆಣ್ಣ ದೂರ ತಳ್ಳಬೇಡ
ಹಣ್ಣಿನಂಥೆ ಹೆಣ್ಣು ಕೇಳಯ್ಯ, ಚೆನ್ನಯ್ಯ
ರುಚಿಯ ನೋಡಿ ಮಾತನಾಡಯ್ಯ
ನಿಲ್ಲಯ್ಯಾ ನಿಲ್ಲೋ ಓ ಕೆಂಚು ಮೀಸ್ಯೋನೆ
ನಾನು ಜೊತೆಯಾಗಿ ಬರುತೀನಿ ಸಂಚುಗಾರನೆ
ಹೆ ಹೆ ಹೆ ಸಂಚುಗಾರನೆ
ಹೊಯ್ ಹೊಯ್ ಹೊಯ್ ಹೊ ಹೊಯ್
--------------------------------------------------------------------------------------------------------------------------

ಬದುಕು ಬಂಗಾರವಾಯಿತು (1976)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಎಂ.ರಂಗ ರಾವ್ ಹಾಡಿದವರು: ಪಿ.ಸುಶೀಲಾ

ಪ್ರಿಯತಮಾ ನಾನಾರೋ ಅರಿವಾಗದೇ
ಹೃದಯವಾ ನೀ ಕೇಳೋ, ಅದು ಹೇಳದೇ
ಮುಸುಗಿದ ತೆರೆ, ತೆರೆಯಲೆ ದೊರೆ
ನಾನಾರೋ ನೀನಾರೋ ನಾ ಹೇಳಲೇ
ಪ್ರಿಯತಮಾ ನಾನಾರೋ ಅರಿವಾಗದೇ

ಮೈತುಂಬಿ ಯೌವನದಿಂದ ಹೂವಂತೆ ನಾ ಅರಳಿರುವೆ
ನೂರಾಸೆ ಕಣ್ಣಲಿ ತುಂಬಿ ಏಕಾಂತ ಹುಡುಕುತಲಿರುವೆ
ಜೊತೆಗಾರ ತಾಮಸವನ್ನೊ ನಾ ಸಹಿಸೆನು
ಕನಸಿನಲಿ ಮನಸಿನಲಿ ಬೇರೇನು ನಾ ಕಾಣೆ ನೀನಲ್ಲದೆ
ಪ್ರಿಯತಮಾ ನಾನಾರೋ ಅರಿವಾಗದೇ
ಹೃದಯವಾ ನೀ ಕೇಳೋ, ಅದು ಹೇಳದೇ
ಮುಸುಗಿದ ತೆರೆ, ತೆರೆಯಲೆ ದೊರೆ
ನಾನಾರೋ ನೀನಾರೋ ನಾ ಹೇಳಲೇ
ಪ್ರಿಯತಮಾ ನಾನಾರೋ ಅರಿವಾಗದೇ

ನೂರಾರು ಜನುಮಗಳಿಂದ ನಾ ನಿನ್ನ ನೆರಳಾಗಿರುವೆ
ನೀನೇಕೋ ನನ್ನೀ ಎದೆಯ ಗುಡಿಯಲ್ಲಿ ಕಲ್ಲಾಗಿರುವೆ
ಕಣ್ಣೀರು ಕರಗಿಸದೇನೋ ನಾ ಸೋತೆನೋ
ಕನಿಕರಿಸು ಸ್ವೀಕರಿಸು ಬೇರೇನು ಬೇಕಿಲ್ಲ ನೀನಲ್ಲದೆ
ಪ್ರಿಯತಮಾ ನಾನಾರೋ ಅರಿವಾಗದೇ
ಹೃದಯವಾ ನೀ ಕೇಳೋ, ಅದು ಹೇಳದೇ
ಮುಸುಗಿದ ತೆರೆ, ತೆರೆಯಲೆ ದೊರೆ
ನಾನಾರೋ ನೀನಾರೋ ನಾ ಹೇಳಲೇ
ಪ್ರಿಯತಮಾ ನಾನಾರೋ ಅರಿವಾಗದೇ
--------------------------------------------------------------------------------------------------------------------------

No comments:

Post a Comment