334. ಗೋಪಿಕೃಷ್ಣ (1992)

ಗೋಪಿ ಕೃಷ್ಣ ಚಿತ್ರದ ಹಾಡುಗಳು 
  1. ಜಗವೆಲ್ಲ ಜಗವೆಲ್ಲ ಅನುರಾಗದಲ್ಲಿ ಜನರೆಲ್ಲ ಜನರೆಲ್ಲ ಅನುರಾಗದಲ್ಲಿ
  2. ಓಹೋ ವಸಂತ, ಹೃದಯ ಅರಳೊ ಕಾಲ
  3. ಏನ್ ಉಡುಗೆ ಇದು ಏನ್ ಉಡುಗೇ 
  4. ಚೋರಿ ಚೋರಿ ಚೋರಿ ಚಿತ್ತ ಚೋರಿ 
  5. ಶಾರದಮ್ಮನವರೆ ಸರಸಮ್ಮನವರೆ 
  6. ಬಾಳಿನಲಿ ಒಂದೊಂದು ದಿನಕೊಂದು ಬಣ್ಣದ ಬಣ್ಣದ ವೇಷ
ಗೋಪಿಕೃಷ್ಣ (1992) - ಜಗವೆಲ್ಲ ಜಗವೆಲ್ಲ ಅನುರಾಗದಲ್ಲಿ ಜನರೆಲ್ಲ ಜನರೆಲ್ಲ ಅನುರಾಗದಲ್ಲಿ
ಸಾಹಿತ್ಯ : ಹಂಸಲೇಖ ಸಂಗೀತ : ಹಂಸಲೇಖ ಗಾಯನ : ಮನು, ಎಸ್.ಜಾನಕಿ

ಗಂಡು : ಜಗವೆಲ್ಲ ಜಗವೆಲ್ಲ ಅನುರಾಗದಲ್ಲಿ ಜನರೆಲ್ಲ ಜನರೆಲ್ಲ ಅನುರಾಗದಲ್ಲಿ
            ಜಗವೆಲ್ಲ ಜಗವೆಲ್ಲ ಅನುರಾಗದಲ್ಲಿ ಜನರೆಲ್ಲ ಜನರೆಲ್ಲ ಅನುರಾಗದಲ್ಲಿ
            ಅಯೋಮಯ ಅಯೋಮಯ ಕಲಾಮಯ ಅಯೋಮಯ
           ಜಗವೆಲ್ಲ ಜಗವೆಲ್ಲ ಅನುರಾಗದಲ್ಲಿ ಜನರೆಲ್ಲ ಜನರೆಲ್ಲ ಅನುರಾಗದಲ್ಲಿ
         
ಗಂಡು : ಆಚಾರ ಅಪಚಾರವಿಲ್ಲ (ಅಪಚಾರವಿಲ್ಲ) ಪ್ರೀತಿ (ಪ್ರೀತಿ) ಮಾಡೊ(ಮಾಡೊ ) ರೀತಿಗೆ ( ರೀತಿಗೆ)
            ಅನುಮಾನ ಅವಮಾನವಿಲ್ಲ (ಅವಮಾನವಿಲ್ಲ)  ಪ್ರೀತಿ (ಪ್ರೀತಿ) ಮಾಡೊ(ಮಾಡೋ) ಜಾತಿಗೆ(ಜಾತಿಗೇ)
            ಸಾಗರ (ಸಾಗರ) ತುಂಬಲು (ತುಂಬಲು) ಬಿಂದಿಗೆ(ಬಿಂದಿಗೆ) ಸಾಲದು(ಸಾಲದು)
           ಪ್ರೀತಿಯ (ಪ್ರೀತಿಯ) ತುಂಬಲು (ತುಂಬಲು)  ಗುಂಡಿಗೆ (ಗುಂಡಿಗೆ) ಸಾಲದು(ಸಾಲದು)
           ರಮಣೀಯ ರಮಣೀಯ ಪ್ರೇಮದ ತೋಟ ರಂಜನೀಯ ರಂಜನೀಯ ಪ್ರೇಮದ ಆಟ
          ಪ್ರೇಮಾಕ್ಷಿಗೆ...  (ಪ್ರೇಮಾಕ್ಷಿಗೆ) ಹೃದಯಾಕ್ಷಿಗೆ (ಹೃದಯಾಕ್ಷಿಗೆ )
         ಜಗವೆಲ್ಲ ಜಗವೆಲ್ಲ ಅನುರಾಗದಲ್ಲಿ ಜನರೆಲ್ಲ ಜನರೆಲ್ಲ ಅನುರಾಗದಲ್ಲಿ
         ಅಯೋಮಯ ಅಯೋಮಯ ಕಲಾಮಯ ಅಯೋಮಯ

ಗಂಡು : ಹಗಲಿಲ್ಲ ಇರುಳಿಲ್ಲವಂತೆ (ಇಲ್ಲವಂತೆ) ಪ್ರೀತಿ (ಪ್ರೀತಿ) ಕನಸ (ಕನಸ) ಕಾಣಲು(ಕಾಣಲು)
        ಏಕಾಂತ ಬಲು ಭಾರವಂತೆ (ಭಾರವಂತೆ) ವಿರಹ (ವಿರಹ) ವಿರಹ (ವಿರಹ) ಕಾಡಲು(ಕಾಡಲು)
        ಕಾಮವು (ಕಾಮವು) ಕಾವ್ಯವೇ (ಕಾವ್ಯವೇ) ಲೋಭವು (ಲೋಭವೋ) ಲಾಭವೇ(ಲಾಭವೇ)
        ಕೋಪವು (ಕೋಪವು) ಕೋಮಲ (ಕೋಮಲ) ತಾಪವು (ತಾಪವು) ಶೀತಲ (ಶೀತಲ)
        ಮನನೀಯ ಮನನೀಯ  ಪ್ರೇಮದ ನೋಟ ಘಮನೀಯ ಘಮನೀಯ ಪ್ರೇಮದ ಪಾಠ
        ಪ್ರೇಮಾಕ್ಷಿಗೆ...  (ಪ್ರೇಮಾಕ್ಷಿಗೆ) ಹೃದಯಾಕ್ಷಿಗೆ (ಹೃದಯಾಕ್ಷಿಗೆ )
        ಜಗವೆಲ್ಲ ಜಗವೆಲ್ಲ ಅನುರಾಗದಲ್ಲಿ (ಅಹ್ )ಜನರೆಲ್ಲ ಜನರೆಲ್ಲ ಅನುರಾಗದಲ್ಲಿ (ಹ್ಹೂಹ್ಹೂಹೂಂ)
       ಅಯೋಮಯ ಅಯೋಮಯ ಕಲಾಮಯ (ಕಲಾಮಯ) ಅಯೋಮಯ (ಅಯೋಮಯ )
------------------------------------------------------------------------------------------------------------------------

ಗೋಪಿಕೃಷ್ಣ (1992) - ಓಹೋ ವಸಂತ, ಹೃದಯ ಅರಳೊ ಕಾಲ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಕೆ.ಜೆ.ಯೇಸುದಾಸ್, ಎಸ್.ಜಾನಕಿ 

ಗಂಡು : ಓಹೋ ವಸಂತ, ಹೃದಯ ಅರಳೊ ಕಾಲ ಓಹೋ ವಸಂತ, ಬಯಕೆ ಚಿಗುರೊ ಕಾಲ
           ಭೃಂಗದ ಮೇಲೆ ಬಂದಳು ಬಾಲೆ ಮಲ್ಲಿಗೆಯ ಹೂವಾಗಿ ಮೋಹಿಸುವ ಹೆಣ್ಣಾಗಿ
           ಅಂದ ಅಂದದ ತೇರು ಬಂದ ಜಂಬದ ಜೋರು ನೋಡಿ ವಸಂತ ಹಾಡಿದ
           ತಂಪು ತಂಗಾಳಿ ಬೀಸಿ ಕಂಪು ಕಸ್ತೂರಿ ಸೂಸಿ ಹಾಡಿ ಸ್ವಾಗತ ಹೇಳಿದ
           ನೂರಾರು ಸುಮ ಸೇರಿ ಹೆಣ್ಣಾಗಿ ಬಂದಳಮ್ಮ
           ಮಂದಾರ ಮದನಾರಿ ಸ್ವರ್ಗಾನೇ ತಂದಳಮ್ಮ
           ಅಂದ ಅಂದದ ತೇರು ಬಂದ ಜಂಬದ ಜೋರು ನೋಡಿ ವಸಂತ ಹಾಡಿದ

ಹೆಣ್ಣು : ಓಹೋ ವಸಂತ, ಕವನ ನಡೆವ ಕಾಲ  ಓಹೋ ವಸಂತ, ಮದನ ಮದುವೆ ಕಾಲ
          ಹೋಲಿಕೆಯಲ್ಲು, ಸುಂದರ ಸುಳ್ಳು ಬಣ್ಣಿಸಿದ ಕವಿಯಾಗಿ, ಚುಂಬಿಸಿದ ಸವಿಯಾಗಿ
ಗಂಡು : ಅಂದ ಅಂದದ ತೇರು ಬಂದ ಜಂಬದ ಜೋರು ನೋಡಿ ವಸಂತ ಹಾಡಿದ

ಗಂಡು : ಲಾಲಾಲ ... ಓಹೋಹೋ
ಹೆಣ್ಣು : ಓಹೋ ವಸಂತ, ಬಿಸಿಲು ಸವಿಯೊ ಕಾಲ ಓಹೋ ವಸಂತ, ಹಸಿರು ನೆರೆಯೊ ಕಾಲ
          ಬೆಚ್ಚನೆ ತೋಳು, ಹಚ್ಚನೆ ಬಾಳು ಸಂಧಿಸಿವೆ ಸುಖವಾಗಿ, ಬಂಧಿಸಿವೆ ಪ್ರಿಯವಾಗಿ
ಗಂಡು : ಅಂದ ಅಂದದ ತೇರು ಬಂದ ಜಂಬದ ಜೋರು ನೋಡಿ ವಸಂತ ಹಾಡಿದ
           ತಂಪು ತಂಗಾಳಿ ಬೀಸಿ ಕಂಪು ಕಸ್ತೂರಿ ಸೂಸಿ ಹಾಡಿ ಸ್ವಾಗತ ಹೇಳಿದ
           ನೂರಾರು ಸುಮ ಸೇರಿ ಹೆಣ್ಣಾಗಿ ಬಂದಳಮ್ಮ
           ಮಂದಾರ ಮದನಾರಿ ಸ್ವರ್ಗಾನೇ ತಂದಳಮ್ಮ
--------------------------------------------------------------------------------------------------------------------------

ಗೋಪಿಕೃಷ್ಣ (1992) - ಏನ್ ಉಡುಗೆ ಇದು ಏನ್ ಉಡುಗೆ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಮನು, ಎಸ್.ಜಾನಕಿ, ಲತಾ ಹಂಸಲೇಖ

ಗಂಡು : ಏನ್ ಉಡುಗೆ ಇದು ಏನ್ ಉಡುಗೆ ವಾಕರಿಕೆ ಇದು ಈ ಕಡೆಗೆ
           ಬೆತ್ತಲೆ ಹೋಗದ ಕತ್ತಲೆ ರಾಗದ ಸಂಸ್ಕೃತಿಯಾ ಕಡೆಗೆ
           ಸಲ್ಲದು ಸಲ್ಲದು ಡಂಭದ ಜಂಭದ ಜೀವನ ಈ ಕಡೆಗೆ
          ಸೊಗಸಾಗಿ ಸೀರೆ ಉಡುವಾ ಕೈ ತುಂಬಾ ಬಳೆಯ ತೊಡುವಾ
          ಹಣೆ ಮೇಲೆ ಸಿಂಧೂರದ  ಗಂಧ ಚಂದನದ ಅಂದ ಚೆಂದವಮ್ಮಾ
ಹೆಣ್ಣು : ಏನ್ ಉಡುಗೆ ಇದು ಏನ್ ಉಡುಗೆ ವಾಕರಿಕೆ ಇದು ಆ ಕಡೆಗೆ
           ಕತ್ತಲೆ ರಾಗದ ಕಾಡಿನ ಸಂಸ್ಕೃತಿ ಸಲ್ಲದು ಆ ಕಡೆಗೆ
          ಕುಂತರೇ ನಿಂತರು ಮೈಯಿಗೆ ಮೈಲಿಗೇ ಎಲ್ಲವೂ ಈ ಕಡೆಗೆ
          ಇರಬೇಕು ಇಷ್ಟವಾಗಿ ಮೇರಿಬೇಕು ಗಂಡಸಾಗಿ
         ಅವಮಾನವೇನು ಬಿಗುಮಾನವೇನು ಇಷ್ಟಾರ್ಥ ಸಿದ್ದಿಗಾಗಿ

ಹೆಣ್ಣು : ಇಂಗ್ಲಿಷಿನಾ ಈ ಜೀವನಾ ರೈಲಿನೊಳಗೆ ಬಂತು ಕರೆಸಿಕೊಂಡ್ರೆ ನಿಂತು
          ಇಂಗ್ಲಿಷಿನಾ ಈ ಗಾಯನಾ ಪ್ಲೇನಿನೊಳಗೇ ಬಂತು ಕುಂತು ಜರಿಯೊಂದೆಂತು
ಗಂಡು : ಆದು ಏನು ಕೆಟ್ಟ ಹಾಡು ಅದು ಏನು ಹತ್ತು ಪಾಡು
            ಒಂದು ಭಾವವಿಲ್ಲ ಒಂದು ಜೀವವಿಲ್ಲ ಬರಿ ಕಾಡು ಕುಣಿತವಯ್ಯೋ
            ಏನ್ ಉಡುಗೆ ಇದು ಏನ್ ಉಡುಗೆ ವಾಕರಿಕೆ ಇದು ಈ ಕಡೆಗೆ
           ಬೆತ್ತಲೆ ಹೋಗದ ಕತ್ತಲೆ ರಾಗದ ಸಂಸ್ಕೃತಿಯಾ ಕಡೆಗೆ
           ಸಲ್ಲದು ಸಲ್ಲದು ಡಂಭದ ಜಂಭದ ಜೀವನ ಈ ಕಡೆಗೆ

ಗಂಡು : ಒನ್ ಟೂ ಥ್ರೀ ಫೋರ್ ... ಒನ್ ಟೂ ಥ್ರೀ ಫೋರ್ ...
ಹೆಣ್ಣು : ಸರಿದಾರಿಗೆ ಪರನಾರಿಗೆ ಬೆಳಕು ನಮ್ಮ ದೇಶ ತೆಗೆಯೇ ಥಳಕು ವೇಷ
          ಮಹಾ ವಿದ್ಯೆಗೇ ಮನ ಶುದ್ಧಿಗೆ ಹೆಸರು ನಮ್ಮ ನಾಡು ನಿಲ್ಲಿಸಿ ನಿಮ್ಮ ಹಾಡು
ಗಂಡು : ನನ್ನದೊಂದು ಬಡುಕು ಬಾಯಿ ದಯೆತೋರಿ ನನಗೆ ತಾಯೀ
            ಮನೆಯಿಂದ ಕಳಿಸಿದರೇ ಹಾಡು ನಿಲ್ಲಿಸಿದರೇ ನನ್ನ ಬಾಳು ಗೋಳು
ಹೆಣ್ಣು :  ಏನ್ ಉಡುಗೆ ಇದು ಏನ್ ಉಡುಗೆ ಏನ್ ನಡಿಗೆ ಇದು ಏನ್ ನಡಿಗೆ
           ಈ ತಲೆ ಪಾತಲೇ ಮಂಗನ ಕೋಸಲೇ ಸಲ್ಲದು ಈ ಮನೆಗೇ
           ಲಂಕೆಗೆ ಬೆಂಕಿಯ ಹಚ್ಚಿದ ಮಾರುತಿ ನಡೆಯಲೇ ನೀ ಹೊರಗೇ
ಗಂಡು : ನನ್ನದೊಂದು ಬಡುಕು ಬಾಯಿ ದಯೆತೋರಿ ನನಗೆ ತಾಯೀ
            ಮನೆಯಿಂದ ಕಳಿಸಿದರೇ ಹಾಡು ನಿಲ್ಲಿಸಿದರೇ ನನ್ನ ಬಾಳು ಗೋಳು
--------------------------------------------------------------------------------------------------------------------------

ಗೋಪಿಕೃಷ್ಣ (1992) - ಚೋರಿ ಚೋರಿ ಚಿತ್ತ ಚೋರಿ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಮನು, ಚಿತ್ರಾ

ಗಂಡು : ಚೋರಿ ಚೋರಿ ಚೋರಿ ಚೋರಿ ಚೋರಿ ಚೋರಿ ಚಿತ್ತ ಚೋರಿ
ಹೆಣ್ಣು : ಚೋರಾ ಚೋರಾ ಚೋರಾ ಚೋರಾ ಬಂದಾ
          ಚೋರಿ ಚೋರಿ ಚೋರಿ ಎಂದಾ ಬಾಯಿಂದ ಬಾಯಿಗೆ ಬೀಗ ಇತ್ತ
         ಬಂಢಾರ ಕಡಿಯುವ ಭೀತಿ ಇತ್ತ ಚೋರಾ ಚೋರಾ ಚೋರಾ ಚಿಕ್ಕ ಚೋರ
ಗಂಡು : ಚೋರಾ ಚೋರಾ ಚೋರಾ ಚೋರಾ ಬಂದಾ
           ಚೋರಿ ಚೋರಿ ಚೋರಿ ಎಂದಾ ಬಾಯಿಂದ ಬಾಯಿಗೆ ಬೀಗ ಇತ್ತ
             ಬಂಢಾರ ಕಡಿಯುವ ಭೀತಿ ಇತ್ತ ಚೋರೀ ಚೋರೀ ಚೋರಿ ಚಿಕ್ಕ ಚೋರಿ

ಹೆಣ್ಣು : ಆ..ಅಂದ್ರೂ ಉಂ.. ಅಂದ್ರೂ ಎದ್ದಾರು ಮನೆಯೋರು
         ಸದ್ದಿಲ್ಲದೇ ಹಾಡು ಶುಶುಶು ಸದ್ದಿಲದೇ ನೋಡು ಶುಶುಶು
         ಕಚಗುಳಿ ಬಳುವಳಿ ಒಳಗೊಳಗೇ ಕೊಡಬೇಡ
        ಕರ ಕೌಶಲ್ಯ ಸಾಕು ಶುಶುಶು ಬರಿ ಚಾಪಲ್ಯ ಸಾಕು ಶುಶುಶು   
ಗಂಡು :  ಶುಶುಶು... ಶುಶುಶು ನವರತ್ನ ನೀನೀಗ ಈ ಇರುಳಲ್ಲಿ ಶಿಶಿಶಿ ಶಿಶಿ ಶಿಶು
             ಮನೆದೀಪ ನೀನಾದೆ ಈ ನಗುವಲ್ಲಿ
ಹೆಣ್ಣು : ಚೋರಾ ಚೋರಾ ಚೋರಾ ಚೋರಾ ಬಂದಾ
          ಚೋರಿ ಚೋರಿ ಚೋರಿ ಎಂದಾ ಬಾಯಿಂದ ಬಾಯಿಗೆ ಬೀಗ ಇತ್ತ
         ಬಂಢಾರ ಕಡಿಯುವ ಭೀತಿ ಇತ್ತ ಚೋರಾ ಚೋರಾ ಚೋರಾ ಚಿಕ್ಕ ಚೋರ 

ಇಬ್ಬರು : ಸಾ.. ರೀ ಗಾ ಮಾ ಪ ದ ನೀ ಸಾ  ಪದನಿಸಾ
ಗಂಡು : ತಕಥಕ್ಕ ಗಡಿಯಾರ ಳಕ್ಕಳಕ್ಕ ಹನೀ ನೀರ್ ತಾಳಕ್ಕೆ ಕಿವಿಗೊಟ್ಟರೇ ಜುಂಜುಂ ಜುಂಜುಂ
            ಮೇಳಕ್ಕೆ  ಮನವಿಟ್ಟರೆ ಜುಂಜುಂ ಜುಂಜುಂ
            ಮೇಲೆಲ್ಲೂ ಸದ್ದಿಲ್ಲ ಸದ್ದೆಲ್ಲಾ ಒಳಗಡೆ ನರನಾಡಿ ತುಡಿಕೆಳು ಡುಂಡುಂಡುಂಡುಂ
            ಎದೆಗೂಡ ತಡೆ ಕೇಳು ಡುಂಡುಂಡುಂಡುಂ
ಹೆಣ್ಣು : ಶುಶು ಶುಶುಶು ಮಾತಲ್ಲಿ ಮೈಯನ್ನೂ ಮರೆಸೋ ಜಾಣ
          ಶುಶು ಶುಶುಶು ಮತ್ತಲ್ಲಿ ತೆಗಿಬೇಡ ನನ್ನಾ ಪ್ರಾಣ
ಹೆಣ್ಣು : ಚೋರಾ ಚೋರಾ ಚೋರಾ ಚೋರಾ ಬಂದಾ
          ಚೋರಿ ಚೋರಿ ಚೋರಿ ಎಂದಾ ಬಾಯಿಂದ ಬಾಯಿಗೆ ಬೀಗ ಇತ್ತ
         ಬಂಢಾರ ಕಡಿಯುವ ಭೀತಿ ಇತ್ತ ಚೋರಾ ಚೋರಾ ಚೋರಾ ಚಿಕ್ಕ ಚೋರ   
--------------------------------------------------------------------------------------------------------------------------

ಗೋಪಿಕೃಷ್ಣ (1992) - ಶಾರದಮ್ಮನೋರೇ ಸರಸಮ್ಮನೊರೆ ಸರೋಜಮ್ಮತಾಯಿಯವರೇ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಮನು, ಚಿತ್ರಾ

ಗಂಡು : ಶಾರದಮ್ಮನವರೇ...  ಸರಸಮ್ಮನವರೇ...
           ಶಾರದಮ್ಮನವರೇ ಸರಸಮ್ಮನವರೇ ಸರೋಜಮ್ಮ ತಾಯಿಯವರೇ
           ಆಶೀರ್ವಾದ ಮಾಡಿ ಮದುವೆಗೆ ಬರಬೇಕ್ರಮ್ಮಾ
ಹೆಣ್ಣು : ಸುಂದರಮ್ಮನವರೇ ಚಂದ್ರಮನವರೇ ಪಾತೀಮಾಬಿಸಮ್ಮನೊವರೇ
          ಖಾತ್ರಿಯಿಂದ ಮದುವೇಗ ನೀವೂ ಬರಬೇಕ್ರಮ್ಮಾ
ಗಂಡು : ತಪ್ಪದೇ ಹಾಜರೀ ನೀಡಬೇಕು   ಹೆಣ್ಣು : ತಪ್ಪದೇ ಅಕ್ಷತೆಯ ಹಾಕಬೇಕೂ
ಗಂಡು : ತಪ್ಪದೇ ಹಾಜರೀ ನೀಡಬೇಕು   ಹೆಣ್ಣು : ತಪ್ಪದೇ ಅಕ್ಷತೆಯ ಹಾಕಬೇಕೂ
ಗಂಡು : ರಂಗಣ್ಣನವರೇ .. ಅಯ್ಯ ಲಿಂಗಣ್ಣವರೇ 
           ರಂಗಣ್ಣನವರೇ ಲಿಂಗಣ್ಣನವರೇ ಚಿಕ್ಕನ್ನೋರೇ ದೊಡ್ಡಣ್ಣನವರೇ  
           ಲಕ್ಷ್ಯವಿಟ್ಟು ನಮ್ಮ ಮದುವೇಗ ಬರಬೇಕ್ರಣ್ಣ 
ಹೆಣ್ಣು : ಕಮಲಮ್ಮೋನವರೇ ವಿಮಲಮ್ಮನವರೇ ಅಂಬುಜಾಕ್ಷಿ ತಾಯಿಯವರೇ 
          ಆಶೀರ್ವಾದ ಮಾಡಿ  ಮದುವೇಗ ಬರಬೇಕರಮ್ಮಾ 
ಗಂಡು : ತಪ್ಪದೇ ಹಾಜರೀ ನೀಡಬೇಕು   ಹೆಣ್ಣು : ತಪ್ಪದೇ ಅಕ್ಷತೆಯ ಹಾಕಬೇಕೂ
ಗಂಡು : ತಪ್ಪದೇ ಹಾಜರೀ ನೀಡಬೇಕು   ಹೆಣ್ಣು : ತಪ್ಪದೇ ಅಕ್ಷತೆಯ ಹಾಕಬೇಕೂ 

ಹೆಣ್ಣು :  ಪತ್ರಿಕೆಯ ಬೆನ್ನಿನಲ್ಲಿ ಮಂಟಪದ ದಾರಿ ಇದೆ
ಗಂಡು : ಮಂಟಪಕ್ಕೆ ಹೋಗೋದಕ್ಕೆ ಬಸ್ಸುಗಳು ತುಂಬಾ ಇದೇ
ಹೆಣ್ಣು : ಸ್ನೇಹಿತರಿಗೇ ಜಾಗರಣೆ ಜಾಗ            ಗಂಡು : ಬಂಧುಗಳಿಗೆ ಶಾಸ್ತ್ರಗಳ ಯೋಗ
ಹೆಣ್ಣು : ಹೆಣ್ಣು ನೋಡೋಕ್ಕೆ ಇದು ಒಳ್ಳೆ ದಿನ    ಗಂಡು : ಹೆಣ್ಣು ಕೇಳೋದಕ್ಕೂ ಇದು ಒಳ್ಳೆ ದಿನ
ಇಬ್ಬರು : ನಿಮ್ಮ ಸಂಬಂಧ ನೋಡಿ ಕೊಂಡು ನಮ್ಮನು ಕೂಡಿಕೊಂಡು
            ನಿಮ್ಮ ಸಂಬಂಧ ನೋಡಿ ಕೊಂಡು ನಮ್ಮನು ಕೂಡಿಕೊಂಡು ಉಂಡುಕೊಂಡು ಹೋಗ ಬನ್ನಿರೀ..
ಗಂಡು : ಹ್ಹಾಂ ... ಮೈಲಾರಪ್ಪ ಅಪ್ಪ ಕಾವೇರಪ್ಪ
           ಮೈಲಾರಪ್ಪ ಕಾವೇರಪ್ಪ ಬಂಗಾರಪ್ಪ ಬೆಳ್ಳಿಯಪ್ಪ ಪ್ರೀತಿ ಇಟ್ಟು ನಮ್ಮ ಮದುವೆಗೇ ಬರಬೇಕ್ರಪ್ಪಾ
ಹೆಣ್ಣು : ಅಪ್ಪಾಳಮ್ಮ  ತಿಪ್ಪಾಳ್ಳಮ್ಮಾ  ಅಂಡಾಳಮ್ಮಾ ಸಿಂಗಾರಮ್ಮ ಗಮನವಿಟ್ಟು ನಮ್ಮ ಮದುವೇಗ ಬರಬೇಕ್ರಮ್ಮಾ
ಗಂಡು : ತಪ್ಪದೇ ಹಾಜರೀ ನೀಡಬೇಕು   ಹೆಣ್ಣು : ತಪ್ಪದೇ ಅಕ್ಷತೆಯ ಹಾಕಬೇಕೂ
ಗಂಡು : ತಪ್ಪದೇ ಹಾಜರೀ ನೀಡಬೇಕು   ಹೆಣ್ಣು : ತಪ್ಪದೇ ಅಕ್ಷತೆಯ ಹಾಕಬೇಕೂ 

ಗಂಡು : ಹೊಯ್..ಲಗ್ನದಲ್ಲಿ ಹೆಚ್ಚು ಹೊತ್ತು ಮಂತ್ರಗಳು ಹೇಳೋದಿಲ್ಲ
ಹೆಣ್ಣು : ಅಕ್ಕಿ ಕಾಳು ಕೈಗಳಲ್ಲೇ ಬೇಯುವಂತೇ ಮಾಡೋದಿಲ್ಲ 
ಗಂಡು : ಮದುವೆ ಮನೆಗೇ ಹಿರಿಯ ತಲೆ ನೀವೂ    ಹೆಣ್ಣು : ನಿಮ್ಮ ಹರಕೆ ಬೇಡುವೆವೂ ನಾವೂ 
ಗಂಡು : ಸಂಜೆ ಏಳಕ್ಕೆ ಮರಿ ಬೇಡಿ ಅಕ್ಕ               ಹೆಣ್ಣು : ಹೆಣ್ಣು ಗಂಡು ಕೂರಿಸ್ತೀವಿ ಅಕ್ಕ ಪಕ್ಕ 
ಇಬ್ಬರು : ಸಂಜೆ ಸಂಗೀತ ಕೇಳಿಕೊಂಡು ವಯ್ಯಾರ ನೋಡಿಕೊಂಡು 
            ಸಂಜೆ ಸಂಗೀತ ಕೇಳಿಕೊಂಡು ವಯ್ಯಾರ ನೋಡಿಕೊಂಡು ಉಂಡುಕೊಂಡು ಹೋಗ ಬನ್ನೀರಿ 
ಗಂಡು : ಅಣ್ಣಾ ಕಪೂರಣ್ಣಾ  ಕಬೀರಣ್ಣಾ ... 
            ಕಪೂರಣ್ಣಾ ಕಬೀರಣ್ಣಾ ಜಾನಿ ಅಣ್ಣ ಗೋಪಿ ಅಣ್ಣ ಬುಕ್ಕೇ ಗೀಕ್ಕೆ ಎತ್ತುಕೊಂಡು ಬರಬೇಕ್ರಣ್ಣ 
            ರಾಮರಾಜು ಭೀಮರಾಜು ಭಾಗ್ಯರಾಜು ಧರ್ಮರಾಜು ತೆಂಗಿನಕಾಯಿ ಈಸ್ಕೊಂಡು ಹೋಗಬೇಕರಣ್ಣಾ   
ಹೆಣ್ಣು : ಈರೋಮ್ಮನವರೇ ಬೋರಮ್ಮನವರೇ ಪ್ರೀತಿಯಿಂದ ಮದುವೆಗ ನೀವೂ ಬರಬೇಕ್ರಮ್ಮಾ 
ಗಂಡು : ತಪ್ಪದೇ ಹಾಜರೀ ನೀಡಬೇಕು   ಹೆಣ್ಣು : ತಪ್ಪದೇ ಅಕ್ಷತೆಯ ಹಾಕಬೇಕೂ
ಗಂಡು : ತಪ್ಪದೇ ಹಾಜರೀ ನೀಡಬೇಕು   ಹೆಣ್ಣು : ತಪ್ಪದೇ ಅಕ್ಷತೆಯ ಹಾಕಬೇಕೂ   
--------------------------------------------------------------------------------------------------------------------------

ಗೋಪಿಕೃಷ್ಣ (1992) - ನಾಯಕರ ಓ ನಾಯಕ ಬೊಂಬೆಗಳ ಸಂಚಾಲಕ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಮನು, ಚಿತ್ರಾ

ಗಂಡು : ನಾಯಕರ ಓ ನಾಯಕ ಸಾಕು ಇನ್ನೂ ಈ ನಾಟಕ ಸೂತ್ರ ನೀನು ಪಾತ್ರ ನಾನು
           ನಾಯಕರ ಓ ನಾಯಕ ಸಾಕು ಇನ್ನೂ ಈ ನಾಟಕ ಸೂತ್ರ ನೀನು ಪಾತ್ರ ನಾನು
          ಬಾಳಿನಲಿ ಒಂದೊಂದು ದಿನಕ್ಕೊಂದು ಬಣ್ಣದ ಬಣ್ಣದ ವೇಷ ... ಬಣ್ಣದ ಬಣ್ಣದ ವೇಷ
          ಬದುಕಿನ ಅವಸರ ಕೆಡಿಸಿದೇ ಹುಡುಗರ
         ಬಾಳಿನಲಿ ಒಂದೊಂದು ದಿನಕ್ಕೊಂದು ಬಣ್ಣದ ಬಣ್ಣದ ವೇಷ ... ಬಣ್ಣದ ಬಣ್ಣದ ವೇಷ

ಗಂಡು : ನಾಯಕರ ಓ ನಾಯಕ ಬೊಂಬೆಗಳ ಸಂಚಾಲಕ 
            ಚಾಲು ಇನ್ನೂ ಈ ನಾಟಕ ಸೂತ್ರ ನೀನು ಪಾತ್ರ ನಾನು 
            ಸುಳ್ಳುಗಳಾ ಆದೇಶಿಗೇ ವೀರವನು ಓಡಾಡಿಸಿ
           ಧರ್ಮಗಳ ಕಾಪಾಡಿಸೋ ಸೂತ್ರ ನೀನು ಪಾತ್ರ ನಾನು
           ಬಾಳಿನಲಿ ಒಂದೊಂದು ತಲೆಗೊಂದು ತೀರದ ಭಾರದ ಚಿಂತೇ
           ಬದುಕಿನ ಅವಸರ ನುಡಿಸಿದೇ ಅಪಸ್ವರ
          ಬಾಳಿನಲಿ ಒಂದೊಂದು ವಿಷಯಕ್ಕೂ ದಿನವೂ ತಲೆಗೆ ಕೆರೆತ ದುಡ್ಡಿಗೂ ಕಾಸಿಗೂ ಅಲೆತ
          ಬದುಕಿನ ಅವಸರ ಕುಣಿಸಿದೆ ಥರಥರಾ
          ಬಾಳಿನಲಿ ಒಂದೊಂದು ದಿನಕ್ಕೊಂದು ಬಣ್ಣದ ಬಣ್ಣದ ವೇಷ ... ಬಣ್ಣದ ಬಣ್ಣದ ವೇಷ

ಹೆಣ್ಣು : ಬಿಳಿಯ ದಾಡಿ ಚಂದಿರ ಹುಡುಗಿಯರ ಈ ಮಂದಿರ
          ನೋಡಿ ಒಳಗೆ ಬಂದೀರಾ ಯಾರ ಬೇಕು ಏನು ಬೇಕು
ಗಂಡು : ಬಂಗಲೆಯ ಭಾಮಾಮಣಿ ತಿಂಡಿಗಳ ನುಂಗೋ ಗಿಣಿ
            ಅರಗಿಣಿ ಓ ರೂಪಿಣಿ ಕೆಲಸ ಬೇಕು ಕಲಿಸ ಬೇಕು
ಹೆಣ್ಣು : ಬಾಳಿನಲಿ ಒಂದೊಂದು ದಿನಕ್ಕೊಂದು ತರಲೆ ತಲೆಯ ನೋವು ಯಾಕೆ ಬಂದ್ರಿ ನೀವೂ
          ಹಾಡಿನ ಮೇಷ್ಟರೇ ಪುಣ್ಯ ನೀವೂ ಹೊರಟರೇ
ಗಂಡು : ಬಾಳಿನಲಿ ಒಂದೊಂದು ದಿನಕ್ಕೊಂದು ಬಣ್ಣದ ಬಣ್ಣದ ವೇಷ ಬದುಕಿನ ಅವಸರ ಬಯಸಿದೆ ಕನಿಕರ
--------------------------------------------------------------------------------------------------------------------------

No comments:

Post a Comment