336. ಸೇವಂತಿ ಸೇವಂತಿ (2006)



ಸೇವಂತಿ ಸೇವಂತಿ ಚಲನಚಿತ್ರದ ಹಾಡುಗಳು
  1. ಜಾಜಿ ಮಲ್ಲಿಗೆ ನೋಡೆ......ಸೋಜುಗದ ಹೂವೆ ನೋಡೆ..
  2. ಚೆಲ್ಲಿದರು ಮಲ್ಲಿಗೆಯಾ ಬಾಣಾ ಸುರೇರಿ ಮ್ಯಾಲೆ
  3. ಮಾಯದಂತ ಮಳೆ ಬಂತಣ್ಣಾ
  4. ಭಾಗ್ಯದ ಬಳೆಗಾರ
  5. ನಿಂಬಿಯ ಬನದಾಗ
  6. ನೋಡವಳಂದವ
  7. ಮಾಯದಂತ ಮಳೆ ಬಂತಣ್ಣಾ (ಚಿತ್ರಾ)
ಸೇವಂತಿ ಸೇವಂತಿ (2006) - ಜಾಜಿ ಮಲ್ಲಿಗೆ ನೋಡೆ 
ಸಂಗೀತ : ಎಸ್.ಎ. ರಾಜಕುಮಾರ್ , ಸಾಹಿತ್ಯ : ಎಸ್.ನಾರಾಯಣ ಗಾಯನ : ವಿಜಯ ರಾಘವೇಂದ್ರ & ಶ್ರೇಯಾ ಘೋಷಾಲ್

ಜಾಜಿ ಮಲ್ಲಿಗೆ ನೋಡೆ......ಸೋಜುಗದ ಹೂವೆ ನೋಡೆ..
ಜಾಜಿ ಮಲ್ಲಿಗೆ ನೋಡೆ..ಸೋಜುಗದ ಹೂವೆ ನೋಡೆ..
ಎನ್ನ ಮ್ಯಾಲ ಮುನಿವಾರೆ.. [ಎರಡು ಬಾರಿ]

ಕಮಲದ ಹೂ ನಿನ್ನ ಕಾಣದೆ ಇರಲಾರೆ...ಮಲ್ಲಿಗೆ ಮಾಯೆ..ಓಓ
ಕೇದಿಗೆಗರಿ ನಿನ್ನ ಅಗಲಿರಲಾರೆ..ಮಲ್ಲಿಗೆ ಮಾಯೆ..ಓಓ
ಜಾಜಿ ಮಲ್ಲಿಗೆ ನೋಡೆ..ಸೋಜುಗದ ಹೂವೆ ನೋಡೆ..
ಎನ್ನ ಮ್ಯಾಲ ಮುನಿವಾರೆ..

ಕೆನ್ನೆ ಕಸ್ತೂರಿ ಬಾರೆ..ರಾಮ ಲಕುಮಿ ನೀನೆ..
ಮಾರುದ್ದ ಜಡೆಯೋಳೆ..ಬಿಸ್ತರದ ಹೆಣ್ಣೇ..[ಎರಡು ಬಾರಿ]
ಎಳ್ಳು ಹೂವಿನ ಸೀರೆ..ಬೆಳ್ಳಿ ಕಾಲುಂಗುರ
ಹಳ್ಳದ ನೀರು ತರುತಾಳೆ ನನ ಗೆಳತಿ
ಬಣ್ಣದ ಬಾರೆ..ನೀ ಹೇಳೆ..ಎನ್ನ ಮ್ಯಾಲ ಮುನಿವಾರೇ
ಜಾಜಿ ಮಲ್ಲಿಗೆ ನೋಡೆ..ಸೋಜುಗದ ಹೂವೆ ನೋಡೆ..
ಎನ್ನ ಮ್ಯಾಲ ಮುನಿವಾರೆ..

ಲಾಲ ಲಲ್ಲ ಲಲ್ಲ ಲಲ್ಲ..ಲಾಲ ಲಲ್ಲ ಲಲ್ಲ ಲಲ್ಲ..
ಲಾಲ ಲಲ್ಲ ಲಲ್ಲ ಲಲ್ಲಾಲಲಾಲಲಲಾ [ಎರಡು ಬಾರಿ]
ಕೋಗಿಲೆ ದನಿ ಚೆಂದ..ನಾಗರ ಹೆಡೆ ಚೆಂದ..
ದೇವಲೋಕದ ಪದುಮಿನೆ ನೀನು
ಹುಡುಗಿ: ನಿಂತೆಲ್ಲ ನನ ಗೆಳೆಯ..ಕನಸಲ್ಲ ನಂಬು ನನ್ನ ಚೆನ್ನಾದ ಚೆಲುವ ನೀ ಕೇಳೋ
ಹಣ್ಣು ಹೋಳಿಗೆ ತುಪ್ಪ ಅಡಿಗೆಯ ನಾ ಮಾಡಿ ಬತ್ತೀನಿ ನೀನಿಟ್ಟ ಗುರುತಿಗೆ
ಬತ್ತೀನೀ ಜಾಣ ಬರುವ ದಾರಿ ಕಾಯೋ..
ಎನ್ನ ಮ್ಯಾಲೆ ಮುನಿವಾರೆ
ಜಾಜಿ ಮಲ್ಲಿಗೆ ನೋಡೆ......ಸೋಜುಗದ ಹೂವೆ ನೋಡೆ..
ಜಾಜಿ ಮಲ್ಲಿಗೆ ನೋಡೆ..ಸೋಜುಗದ ಹೂವೆ ನೋಡೆ..
ಎನ್ನ ಮ್ಯಾಲ ಮುನಿವಾರೆ..

ಕಮಲದ ಹೂ ನಿನ್ನ ಕಾಣದೆ ಇರಲಾರೆ...ಮಲ್ಲಿಗೆ ಮಾಯೆ..ಓಓ
ಕೇದಿಗೆಗರಿ ನಿನ್ನ ಅಗಲಿರಲಾರೆ..ಮಲ್ಲಿಗೆ ಮಾಯೆ..ಓಓ
ಜಾಜಿ ಮಲ್ಲಿಗೆ ನೋಡೆ..ಸೋಜುಗದ ಹೂವೆ ನೋಡೆ..
ಎನ್ನ ಮ್ಯಾಲ ಮುನಿವಾರೆ..
------------------------------------------------------------------------------------------------------------

ಸೇವಂತಿ ಸೇವಂತಿ (2006) - ಚೆಲ್ಲಿದರು ಮಲ್ಲಿಗೆಯಾ ಬಾಣಾ ಸುರೇರಿ ಮ್ಯಾಲೆ
ಸಂಗೀತ : ಎಸ್.ಎ. ರಾಜಕುಮಾರ್ , ಸಾಹಿತ್ಯ : ಎಸ್.ನಾರಾಯಣ ಗಾಯನ : ಎಸ್.ಎ. ರಾಜಕುಮಾರ್, ಕೋರಸ್ 

ಚೆಲ್ಲಿದರು ಮಲ್ಲಿಗೆಯಾ ಬಾಣಾ ಸುರೇರಿ ಮ್ಯಾಲೆ
ಅಂದಾದ ಚೆಂದಾದ ಮಾಯ್ಕಾರ ಮಾದೆವ್ಗೆ ಚೆಲ್ಲಿದರು ಮಲ್ಲಿಗೆಯ ...
ಮಾದಪ್ಪ ಬರುವಾಗಾ ಮಾಳೆಪ್ಪ ಘಮ್ಮೆಂದಿತೊ ಮಾಳದಲಿ ಗರುಕೆ ಚಿಗುರ್ಯಾವೆ
ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯ... |

ಸಂಪಿಗೆ ಹೂವ್ನಂಗೇ ಇಂಪಾದೊ ನಿನ ಪರುಸೆ
ಇಂಪಾದೊ ನಿನ ಪರುಸೆ ಕೌದಳ್ಳಿ ಬಯಲಾಗಿ ಚೆಲ್ಲಿದರು ಮಲ್ಲಿಗೆಯ ||

ಮಲ್ಲಿಗೆ ಹೂವಿನ ಮಂಚಾ ಮರುಗಾದ ಮೇಲೊದಪು
ತಾವರೆ ಹೂವು ತಲೆದಿಂಬು ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯ

ಹೊತ್ತು ಮುಳುಗಿದರೇನೂ ಕತ್ತಲಾದರೇನು
ಅಪ್ಪಾ ನಿನ ಪರುಸೆ ಬರುವೆವು ನಾವು ಚೆಲ್ಲಿದರು ಮಲ್ಲಿಗೆಯ ||
------------------------------------------------------------------------------------------------------------


ಸೇವಂತಿ ಸೇವಂತಿ (2006) - ಮಾಯದಂತ ಮಳೆ ಬಂತಣ್ಣ ಮದಗಾಧ ಕೆರೆಗೇ 
ಸಂಗೀತ : ಎಸ್.ಎ. ರಾಜಕುಮಾರ್ , ಸಾಹಿತ್ಯ : ಎಸ್.ನಾರಾಯಣ ಗಾಯನ : ಎಸ್.ಎ. ರಾಜಕುಮಾರ್

ಮಾಯದಂತ ಮಳೆ ಬಂತಣ್ಣ ಮದಗಾಧ ಕೆರೆಗೇ 
ಮಾಯದಂತ ಮಳೆ ಬಂತಣ್ಣ ಮದಗಾಧ ಕೆರೆಗೇ
ಅಂಗೈಷ್ಟು ಮೋಡನಾಗೀ ಭೂಮಿತೂಕದ ಗಾಳೀ ಬೀಸೀ
ಗುಡುಗಿ ಗುಡುಗಿ ಚೆಲ್ಲಿದಳೂ ಗಂಗಮ್ಮ ತಾಯೀ..
ಮಾಯದಂತ ಮಳೆ ಬಂತಣ್ಣ ಮದಗಾಧ ಕೆರೆಗೇ 
ಮಾಯದಂತ ಮಳೆ ಬಂತಣ್ಣ ಮದಗಾಧ ಕೆರೆಗೇ

ಏರೀ ಮ್ಯಾಗಾಲ ಬಲ್ಲಾಳರಾಯ ಕೆರೆಯ ಒಳಗಡೆ ಬೆಸ್ತರ ಹುಡುಗ
ಓದಿ ಓದಿ ಸುದ್ದಿಯ ಕೂಡಿರಯ್ಯೋ ನಾ ನಿಲ್ಲುವಳಲ್ಲಾ
ಮಾಯದಂತ ಮಳೆ ಬಂತಣ್ಣ ಮದಗಾಧ ಕೆರೆಗೇ 
ಮಾಯದಂತ ಮಳೆ ಬಂತಣ್ಣ ಮದಗಾಧ ಕೆರೆಗೇ

ಆರು ಸಾವಿರ ಒಡ್ಡರ ಕರಸೀ ಮೂರು ಸಾವಿರ ಗುದ್ದಲಿ ತರಸೀ
ಸೋಲು ಸೋಲಿಗೇ ಮಣ್ಣನ ಹಾಕಿಸಯ್ಯೋ ನಾ ನಿಲ್ಲುವಳಲ್ಲಾ
ಮಾಯದಂತ ಮಳೆ ಬಂತಣ್ಣ ಮದಗಾಧ ಕೆರೆಗೇ 
ಮಾಯದಂತ ಮಳೆ ಬಂತಣ್ಣ ಮದಗಾಧ ಕೆರೆಗೇ

ಆರು ಸಾವಿರ ಕುರಿಗಳ ತರಿಸೀ ಮೂರು ಸಾವಿರ ಕುಡಗೋಲ ತರಿಸೀ
ಕಲ್ಲು ಕಲ್ಲಿಗೇ ರೈತವ ಬಿಡಿಸಯ್ಯೋ ನಾ ನಿಲ್ಲುವಳಲ್ಲಾ..
ಮಾಯದಂತ ಮಳೆ ಬಂತಣ್ಣ ಮದಗಾಧ ಕೆರೆಗೇ 
ಮಾಯದಂತ ಮಳೆ ಬಂತಣ್ಣ ಮದಗಾಧ ಕೆರೆಗೇ

ಒಂದು ಬಂಡಿಲೀ ವೀಳೇದಡಕೀ ಒಂದೂ ಬಂಡಿಲೀ ಚಿಗಿಣಿತಮತ
ಮೂಲೇ ಮೂಲೇಗೇ ಗಂಗಮ್ಮನ ಮಾಡಸಯ್ಯೋ ನಾ ನಿಲ್ಲುವಳಲ್ಲಾ 
ಮಾಯದಂತ ಮಳೆ ಬಂತಣ್ಣ ಮದಗಾಧ ಕೆರೆಗೇ 
ಮಾಯದಂತ ಮಳೆ ಬಂತಣ್ಣ ಮದಗಾಧ ಕೆರೆಗೇ
------------------------------------------------------------------------------------------------------------

ಸೇವಂತಿ ಸೇವಂತಿ (2006) - ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
ಸಂಗೀತ : ಎಸ್.ಎ. ರಾಜಕುಮಾರ್ , ಸಾಹಿತ್ಯ : ಎಸ್.ನಾರಾಯಣ ಗಾಯನ : ಕುನಾಲ್ ಗುಂಜವಾಲ್, ಶ್ರೇಯಾ ಘೋಷಾಲ್  

ಹೆಣ್ಣು :  ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
           ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
           ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
           ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
ಗಂಡು : ನಿನ್ನ ತವರೂರಾ ನಾನೇನು ಬಲ್ಲೆನು
            ನಿನ್ನ ತವರೂರಾ ನಾನೇನು ಬಲ್ಲೆನು ಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆಬಾಲೆ
            ಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆಬಾಲೆ ತೋರಿಸು ಬಾರೆ ತವರೂರ
ಹೆಣ್ಣು : ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
          ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ

ಹೆಣ್ಣು : ಬಾಳೆ ಬಲಕ್ಕೆ ಬೀಡು ಸೀಬೆ ಎಡಕ್ಕೆ ಬೀಡು
          ಬಾಳೆ ಬಲಕ್ಕೆ ಬೀಡು ಸೀಬೆ ಎಡಕ್ಕೆ ಬೀಡು ನಟ್ಟ ನಡುವೇಲ್ಲಿ ನೀ ಹೋಗು ಬಳೆಗಾರ
          ನಟ್ಟ ನಡುವೇಲ್ಲಿ ನೀ ಹೋಗು ಬಳೆಗಾರ ಅಲ್ಲಿಹುದೆನ್ನಾ ತವರೂರು
ಗಂಡು : ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ
            ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ
ಹೆಣ್ಣು : ಹಂಚಿನಾ ಮನೆ ಕಾಣೋ ಕಂಚಿನಾ ಕದ ಕಾಣೋ
          ಹಂಚಿನಾ ಮನೆ ಕಾಣೋ ಕಂಚಿನಾ ಕದ ಕಾಣೋ
          ಇಂಚಾಡೋವೆರಡು ಗಿಳಿ ಕಾಣೋ ಬಳೆಗಾರ          ಅಲ್ಲಿಹುದೆನ್ನಾ ತವರೂರು
ಗಂಡು : ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ
            ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ
ಹೆಣ್ಣು : ಆಲೆ ಆಡುತ್ತಾವೇ ಗಾಣ ತಿರುಗುತ್ತಾವೇ
          ಆಲೆ ಆಡುತ್ತಾವೇ ಗಾಣ ತಿರುಗುತ್ತಾವೇ
          ನವಿಲು ಸಾರಂಗ ನಲಿದಾವೇ ಬಳೆಗಾರ ಅಲ್ಲಿಹುದೆನ್ನಾ ತವರೂರು
ಗಂಡು : ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ
            ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ
ಹೆಣ್ಣು : ಮುತ್ತೈದೆ ಹಟ್ಟೀಲಿ ಮುತ್ತಿನ ಚಪ್ರ ಹಾಸಿ
          ಮುತ್ತೈದೆ ಹಟ್ಟೀಲಿ ಮುತ್ತಿನ ಚಪ್ರ ಹಾಸಿ ನಟ್ಟ ನಡುವೇಲ್ಲಿ ಪಗಡೆಯ ಆಡುತ್ತಾಳೆ
          ನಟ್ಟ ನಡುವೇಲ್ಲಿ ಪಗಡೆಯ ಆಡುತ್ತಾಳೆ ಅವಳೆ ಕಣೋ ನನ್ನ ಹಡೆದವ್ವ
ಗಂಡು : ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ
            ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ
ಹೆಣ್ಣು : ಅಚ್ಚ ಕೆಂಪಿನ ಬಳೆ, ಹಸಿರು ಗೀರಿನ ಬಳೆ
          ಅಚ್ಚ ಕೆಂಪಿನ ಬಳೆ, ಹಸಿರು ಗೀರಿನ ಬಳೆ ನನ್ನ ಹಡೆದವ್ವಗೆ ಬಲು ಆಸೆ ಬಳೆಗಾರ
          ನನ್ನ ಹಡೆದವ್ವಗೆ ಬಲು ಆಸೆ ಬಳೆಗಾರ ಕೊಂಡು ಹೋಗೊ ನನ್ನ ತವರೀಗೆ
          ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
          ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
ಗಂಡು : ನಿನ್ನ ತವರೂರ ನಾನೀಗ ಬಲ್ಲೆನು ಗೊತ್ತಾಯ್ತು ಎನಗೆ, 
            ಗುರಿಯಾಯ್ತು ಎಲೆ ಹೆಣ್ಣೆ ಹೋಗಿ ಬರ್ತೀನಿ ನಿನ್ನ ತವರೀಗೆ 
------------------------------------------------------------------------------------------------------------

ಸೇವಂತಿ ಸೇವಂತಿ (2006) - ನಿಂಬಿಯ ಬನದ ಮ್ಯಾಗಲ 
ಸಂಗೀತ : ಎಸ್.ಎ. ರಾಜಕುಮಾರ್ , ಸಾಹಿತ್ಯ : ಎಸ್.ನಾರಾಯಣ ಗಾಯನ : ಕುನಾಲ್ ಗುಂಜವಾಲ್. ಪ್ರಿಯ 

ನಿಂಬಿಯ ಬನದಾ ಮ್ಯಾಗಲ ಚಂದ್ರಮ್ಮಾ ಚಂಡಾಡಿದ
ನಿಂಬಿಯ ಬನದಾ ಮ್ಯಾಗಲ ಚಂದ್ರಮ್ಮಾ ಚಂಡಾಡಿದ
ನಿಂಬಿಯ ಬನದಾ ಮ್ಯಾಗಲ ಚಂದ್ರಮ್ಮಾ ಚಂಡಾಡಿದ
ನಿಂಬಿಯಾ.. ಬನದಾ ಮ್ಯಾಗಲ ಚಂದ್ರಮ್ಮಾ ಚಂಡಾಡಿದ ನಿಂಬಿಯಾ.. ನಿಂಬಿಯಾ.. 
ನಿಂಬಿಯ ಬನದಾ ಮ್ಯಾಗಲ ಚಂದ್ರಮ್ಮಾ ಚಂಡಾಡಿದ
ಆಹಾಹ  ಹಹಹಹಾ ಹಾಹಹಹಾ ಹಹಹಹಾ ಹಾಹಹಹಾ

ಆರೈಲ್ಲೇ ಮಾವಿನ ಬೈರಾಗೀ ಇರುವೋಳೇ...
ವಾಲಗದ ಸದ್ದಿಗೇ ಓಡೋಗೌಳೇ..ಓಡೋಗೌಳೇಟ
ವಾಲಗದ ಸದ್ದಿಗೇ ಓಡೋಗೌಳೇ ಸರಸತಿಯೇ
ನಮ್ಮ ನಾಲಿಗೆ ತೊದುರ ನೀಗವ್ಬಾ ನಿಂಬಿಯಾ.....
ನಿಂಬಿಯಾ.. ಬನದಾ ಮ್ಯಾಗಲ ಚಂದ್ರಮ್ಮಾ ಚಂಡಾಡಿದ 
ನಿಂಬಿಯಾ.. ಬನದಾ ಮ್ಯಾಗಲ ಚಂದ್ರಮ್ಮಾ ಚಂಡಾಡಿದ 
ಎಳಲ ಎಳಲ ಎಲ್ಲಾ ಎಳಲ ಎಳಲ ಎಲ್ಲಾ ಎಳಳಲಳಲಲೋ....
ಚೂಮ್ಮ ಚೂಮ್ಮ ಚೂಮ್ಮ ಚೂಮ್ಮ ಚೂಮರೀ ಚೂಮರೀ
ಚೂಮ್ಮ
ಚೂಮ್ಮ ಚೂಮ್ಮ ಚೂಮ್ಮ ಚೂಮ್ಮ ಚೂಮರೀ ಚೂಮರೀ
ಚೂಮ್ಮ
ಚೂಮ್ಮ ಚೂಮ್ಮ ಚೂಮ್ಮ ಚೂಮ್ಮ ಚೂಮರೀ ಚೂಮರೀ
ಚೂಮ್ಮ ಹೂ..ಹೂ..ಹೂ..ಹೂ..ಹೂ..

ಎಂಟೆಲ್ಲೇ ಮಾವಿನ ದಂಟಾಗಿ ಇರುವೋಳೇ
ಗಂಟೆ ಸದ್ದಿಗೆ ಓಡೋಗೌಳೇ.. ಓಡೋಗೌಳೇ
ಗಂಟೆ ಸದ್ದಿಗೆ ಓಡೋಗೌಳೇ.. ಸರಸತಿಯೇ
ನಮ್ಮ ಗಂಟಲ ತೊಡುರ ಬಿಡಿಸವ ನಿಂಬಿಯ...
ನಿಂಬಿಯಾ.. ಬನದಾ ಮ್ಯಾಗಲ ಚಂದ್ರಮ್ಮಾ ಚಂಡಾಡಿದ 
ಹೇ.,ನಿಂಬಿಯಾ.. ಬನದಾ ಮ್ಯಾಗಲ ಚಂದ್ರಮ್ಮಾ ಚಂಡಾಡಿದ 
ನಿಂಬಿಯಾ.. ಬನದಾ ಮ್ಯಾಗಲ ಚಂದ್ರಮ್ಮಾ ಚಂಡಾಡಿದ 
ನಿಂಬಿಯಾ.. ಬನದಾ ಮ್ಯಾಗಲ ಚಂದ್ರಮ್ಮಾ ಚಂಡಾಡಿದ
ನಿಂಬಿಯಾ.. ಬನದಾ ಮ್ಯಾಗಲ ಚಂದ್ರಮ್ಮಾ ಚಂಡಾಡಿದ 
ನಿಂಬಿಯಾ.. ಬನದಾ ಮ್ಯಾಗಲ ಚಂದ್ರಮ್ಮಾ ಚಂಡಾಡಿದ 
ನಿಂಬಿಯಾ..  ನಿಂಬಿಯಾ
ನಿಂಬಿಯಾ.. ಬನದಾ ಮ್ಯಾಗಲ ಚಂದ್ರಮ್ಮಾ ಚಂಡಾಡಿದ
-----------------------------------------------------------------------------------------------------------

ಸೇವಂತಿ ಸೇವಂತಿ (2006) - ಮಾಯದಂತ ಮಳೆ ಬಂತಣ್ಣ 
ಸಂಗೀತ : ಎಸ್.ಎ. ರಾಜಕುಮಾರ್ , ಸಾಹಿತ್ಯ : ಎಸ್.ನಾರಾಯಣ ಗಾಯನ : ಚಿತ್ರಾ

ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ
ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ
ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ
ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ
ಅಂಗೈಯಗಲ ಮೋಡ ನಾಡಿ ಭೂಮಿ ತೂಕದ ಗಾಳಿ ಬೀಸಿ
ಅಂಗೈಯಗಲ ಮೋಡ ನಾಡಿ ಭೂಮಿ ತೂಕದ ಗಾಳಿ ಬೀಸಿ
ಗುಡುಗಿ ಗೂಡಾಡಿ ಚೆಲ್ಲಿದಳೊ ಗಂಗಮ್ಮ ತಾಯಿ
ಗುಡುಗಿ ಗೂಡಾಡಿ ಚೆಲ್ಲಿದಳೊ ಗಂಗಮ್ಮ ತಾಯಿ
ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ

ಏರಿ ಮ್ಯಾಗಳ ಬೆಳ್ಳಾನು ರಾಯ ಬೆಳ್ಳಾನು ರಾಯ ಬೆಳ್ಳಾನು ರಾಯ
ಕೇರಿಯ ಒಳಗಡ ಬೆಸ್ತರ ಹುಡುಗ ಬೆಸ್ತರ ಹುಡುಗ ಬೆಸ್ತರ ಹುಡುಗ
ಏರಿ ಮ್ಯಾಗಳ ಬೆಳ್ಳಾನು ರಾಯ
ಕೇರಿಯ ಒಳಗಡ ಬೆಸ್ತರ ಹುಡುಗ
ಓಡಿ ಓಡಿ ಸುದ್ದಿಯ ಕೊಡಿರಯ್ಯೊ ನಾ ನಿಲ್ಲುವಳಲ್ಲ
ಆರು ಸಾವಿರ ಒಡ್ಡರ ಕರೆಸಿ ಮೂರು ಸಾವಿರ ಗುದ್ದಲಿ ತರಿಸಿ
ಸೋಲು ಸೋಲಿಗೆ ಮಣ್ಣನ್ ಹಾಕಿಸಯ್ಯೊ ನಾ ನಿಲ್ಲುವಳಲ್ಲ
ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ

ಆರು ಸಾವಿರ ಕುರಿಗಳ ತರ್ಸಿ ಕುರಿಗಳ ತರ್ಸಿ ಕುರಿಗಳ ತರ್ಸಿ
ಮೂರು ಸಾವಿರ ಕುಡುಗೋಲು ತರ್ಸಿ ಕುಡುಗೋಲು ತರ್ಸಿ ಕುಡುಗೋಲು ತರ್ಸಿ
ಆರು ಸಾವಿರ ಕುರಿಗಳ ತರ್ಸಿ ಮೂರು ಸಾವಿರ ಕುಡುಗೋಲು ತರ್ಸಿ
ಕಲ್ಲು ಕಲ್ಲಿಗೆ ರೈತವ ಬಿಡಿಸಯ್ಯೊ ನಾ ನಿಲ್ಲುವಳಲ್ಲ
ಒಂದು ಬಂಡಿಲಿ ವೀಳ್ಯದ್ ಅಡಿಕೆ ಒಂದು ಬಂಡಿಲಿ ಚಿಗಳಿ ತಂಟ
ಮೂಲೆ ಮೂಲೆಗೆ ಗಂಗಮ್ಮ್ನ ಮಾಡ್ಸೈಯ್ಯೊ ನಾ ನಿಲ್ಲುವಳಲ್ಲ
ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ
ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ
ಅಂಗೈಯಗಲ ಮೋಡ ನಾಡಿ ಭೂಮಿ ತೂಕದ ಗಾಳಿ ಬೀಸಿ
ಅಂಗೈಯಗಲ ಮೋಡ ನಾಡಿ ಭೂಮಿ ತೂಕದ ಗಾಳಿ ಬೀಸಿ
ಗುಡುಗಿ ಗೂಡಾಡಿ ಚೆಲ್ಲಿದಳೊ ಗಂಗಮ್ಮ ತಾಯಿ
ಗುಡುಗಿ ಗೂಡಾಡಿ ಚೆಲ್ಲಿದಳೊ ಗಂಗಮ್ಮ ತಾಯಿ
ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ
------------------------------------------------------------------------------------------------------------

No comments:

Post a Comment