340. ಅನುರಾಗದ ಅಲೆಗಳು (1993)


ಅನುರಾಗದ ಅಲೆಗಳು ಚಲನಚಿತ್ರದ ಹಾಡುಗಳು 
  1. ಜೀವ ಕೋಗಿಲೇ ಇಂಚರ
  2. ಅನುರಾಗದ ಅಲೆಗಳ ಮೇಲೆ ಸಂಗೀತ ಸ್ವರಗಳ ಲೀಲೆ
  3. ಕನ್ನಡದ ಕಂದ 
  4. ಅಂಬರ ತಾರೇ  
  5. ಮಂಜುಳ ಮಂಜುಳಪ್ರೇಮ ನಾದ  
  6. ನಾನು ಹಾಡೋ ಹಾಡು  
  7. ಸಾಗರವೇ ಸಾಗರವೇ 
ಅನುರಾಗದ ಅಲೆಗಳು (1993) - ಜೀವ ಕೋಗಿಲೇ ಇಂಚರ
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ಡಾ.ರಾಜ್ ಕುಮಾರ್

ಜೀವಕೋಗಿಲೇ ಇಂಚರ ಅದಕೇ ದೇಹವೆಂಬುದೇ ಪಂಜರ ಆ.....ಆ......ಓ....ಓ....
ಜೀವಕೋಗಿಲೇ ಇಂಚರ ಅದಕೇ ದೇಹವೆಂಬುದೇ ಪಂಜರ
ಇಂಚರ ಕೇಳಲು ಪಂಜರ ಅವಸರ
ಪಂಜರ ಮುರಿದರೇ ಇಂಚರ ಅಗೋಚರ.....

ಬರುವಾಗ ತಾಯ ಗರ್ಭ ದಣಿಸೋ ಜೀವಾ
ಬೆಳೆವಾಗ ಮಾತುಬರದೇ ಅಳುವಾ ಜೀವಾ...ಅರಳೋ ಜೀವಾ
ಕಲಿತಾಗ ನಾನೇ ಎಂದು ಬೀಗೋ ಜೀವಾ
ಬಲಿತಾಗ ಪ್ರೀತಿಗಾಗಿ ಅಲೆಯೋ ಜೀವಾ..ಅಲೆಸೋ ಜೀವಾ
ಗೂಡಲ್ಲಿ ಸೇರೋ ಸುದ್ದಿ ಮೊದಲೇ ಕೊಡುವಾ
ಗೂಡಿಂದ ಹಾರೋ ಸುದ್ದಿ ಗುಟ್ಟಾಗಿಡುವಾ
ಇಂಚರ ಕೇಳಲೂ ಪಂಜರ ಅವಸರ
ಪಂಜರ ಮುರಿದರೇ ಇಂಚರ ಅಗೋಚರ...
ಜೀವಕೋಗಿಲೇ ಇಂಚರ ಅದಕೇ ದೇಹವೆಂಬುದೇ ಪಂಜರ
 
ಓ.....ಓ..... ವೇದಾಂತ ಸಾರದಲ್ಲಿ ಅಮರಾತ್ಮವಿದೂ
ವಿಜ್ಞಾನ ಲೋಕದಲ್ಲಿ ಗೂಢಾತ್ಮವಿದೂ...ವಿವಾದಾತ್ಮವಿದೂ
ಕೆನ್ನೀರ ರಾಡಿಯಲ್ಲಿ ರಾಜೀವವಿದೂ
ಪರಿಶುದ್ದ ಪ್ರೇಮದಲ್ಲಿ ತಲ್ಲೀನವಿದೂ....ಪರಮಾತ್ಮವಿದೂ
ಅರಿತೋರು ಯಾರು ಇಲ್ಲಾ ಇದರಾ ಜಾಲಾ
ಸಾಯೋನು ತಾನೆ ಬಲ್ಲಾ ಇದರಾ ಮೂಲಾ
ಇಂಚರ ಕೇಳಲೂ ಪಂಜರ ಅವಸರ
ಪಂಜರ ಮುರಿದರೆ ಇಂಚರ ಅಗೋಚರ..
ಜೀವಕೋಗಿಲೇ ಇಂಚರ ಅದಕೇ ದೇಹವೆಂಬುದೇ ಪಂಜರ
-------------------------------------------------------------------------------------------------------------------------

ಅನುರಾಗದ ಅಲೆಗಳು (1993) - ಅನುರಾಗದ ಅಲೆಗಳ ಮೇಲೆ
ಸಾಹಿತ್ಯ : ಹಂಸಲೇಖ ಸಂಗೀತ : ಹಂಸಲೇಖ ಗಾಯನ : ರಾಘವೇಂದ್ರ ರಾಜ್ ಕುಮಾರ್, ಮಂಜುಳಾ ಗುರುರಾಜ 


ಅನುರಾಗದ ಅಲೆಗಳ ಮೇಲೆ ಸಂಗೀತ ಸ್ವರಗಳ ಲೀಲೆ
ನಡೆದಾಗ ಜೀವನ ಗಾನ ರಸಪೂರ್ಣವೋ
ಓ ಮನಸೇ ಕಡಲಾಗಿರು ಮುಗಿಲಾಗುವೆ
ಅನುರಾಗದ ಅಲೆಗಳ ಮೇಲೆ ಸಂಗೀತ ಸ್ವರಗಳ ಲೀಲೆ
ನಡೆದಾಗ ಜೀವನ ಯಾನ ಪರಿಪೂರ್ಣವೋ
ಓ ಮನಸೇ ಮುಗಿಲಾಗಿರು ಮಳೆಯಾಗುವೆ
ಓ ಓ ಓ, ಓ ಓ ಓ. ಓ ಓ ಓ .ಓ ಓ ಓ. ಓ ಓ ಓ. ಓ ಓ ಓ.

ಮೊದಲನೇ ಜಗವ ಪ್ರೀತಿ ಮಾಡು. ಒಲವಿನ ಕೋಟಿ ಮೊಗವ ನೋಡು
ಬದುಕಿಗೆ ಪ್ರೇಮ ಸ್ಪರ್ಶ ನೀಡು ಒಲವಿನ ಪೂರ್ಣ ಫಲವ ನೋಡು
ಸಿರಿತನ ಬಡತನ (ಸಿರಿತನ ಬಡತನ) ಅಂತರದ ಮೇಲೇರು
ನಗುವಿನ ಅಳುವಿನ ನಂತರದ ಹಾಡಾಗು
ನಂತರದ ಒಲವಿನ ಹಾಡಾಗು
ಅನುರಾಗದ ಅಲೆಗಳ ಮೇಲೆ ಸಂಗೀತ ಸ್ವರಗಳ ಲೀಲೆ
ನಡೆದಾಗ ಜೀವನ ಯಾನ ಪರಿಪೂರ್ಣವೋ
ಓ ಮನಸೇ ಮುಗಿಲಾಗಿರು ಮಳೆಯಾಗುವೆ
ಓ ಓ ಓ, ಓ ಓ ಓ. ಓ ಓ ಓ . ಓ ಓ ಓ. ಓ ಓ ಓ. ಓ ಓ ಓ.

ಹೃದಯದ ಬಾಗಿಲಂತೆ ಕಣ್ಣು, ಕಣ್ಣಿನ ಕಾವ್ಯದಂತೆ ಹೆಣ್ಣು
ಹೆಣ್ಣಿನ ಗೆಳತಿಯಂತೆ ಪ್ರೇಮ . ಪ್ರೇಮಕೆ ದೇವನಂತೆ ಶ್ಯಾಮ
ಶ್ಯಾಮನ ಕೊಳಲಿನ ಮದುರ ದ್ವನಿ ಕೇಳೀ....
ರಾದೆಯ ಹೃದಯವು ಮಲಗುವುದೇ ಹೇಳೀ....?
ಒಳವಿನೆದೆ ಮಲಗುವುದೇ ಹೇಳೀ....?
ಅನುರಾಗದ ಅಲೆಗಳ ಮೇಲೆ ಸಂಗೀತ ಸ್ವರಗಳ ಲೀಲೆ
ನಡೆದಾಗ ಜೀವನ ಗಾನ ರಸಪೂರ್ಣವೋ
ಓ ಮನಸೇ ಮಳೆಯಾಗಿರು. ಹಸಿರಾಗುವೆ
--------------------------------------------------------------------------------------------------------------------------

ಅನುರಾಗದ ಅಲೆಗಳು (1993) - ಕನ್ನಡದ ಕಂದ
ಸಾಹಿತ್ಯ : ಹಂಸಲೇಖ ಸಂಗೀತ : ಹಂಸಲೇಖ ಗಾಯನ : ರಾಘವೇಂದ್ರ ರಾಜ್ ಕುಮಾರ್
 

ಕನ್ನಡದ ಕಂದ  ಇಯ್ಯಾ ಇಯ್ಯಾ ಓಹೋ 
ಎಲ್ಲರಿಗೂ ಚಂದ ರೀಯಾ ರೀಯಾ ಓಹೋ   
ಮಾತು ಕೊಟ್ಟರೇ ಮಣ್ಣಿನಾಣೆ ಇಟ್ಟರೇ 
ಜೀವ ಕೊಡೋ ಕಂದ ... ಕಸ್ತೂರಿಯ ಗಂಧ  ಇಯ್ಯಾ ಇಯ್ಯಾ ಓಹೋ  
ಲೋಕಕೆಲ್ಲಾ ಚಂದಾ ರೀಯಾ ರೀಯಾ ಓಹೋ   
ಪ್ರೀತಿ ಇಟ್ಟರೇ ಬೆನ್ನು ತಟ್ಟಿ ಕೊಟ್ಟರೇ ಹಾಡೋ ಹೇಳೋ ಕಂದ 
ಹಾಡೋ ಹೇಳೋ ಕಂದ ಕನ್ನಡದ ಕಂದ  ಇಯ್ಯಾ ಇಯ್ಯಾ ಓಹೋ  
ಎಲ್ಲರಿಗೂ ಚಂದ ರೀಯಾ ರೀಯಾ ಓಹೋ   

ಕನ್ನಡದ ಅಂದ ಚಂದ ಹಾಡುತ್ತಿದ್ದರೇ ನಿತ್ಯ ಮೂರೂ ಹೊತ್ತು ಸಾಲದು 
ಕನ್ನಡದ ಕಾವ್ಯಗಳ ಕೇಳುತ್ತಿದರೇ ಸತ್ಯ ಬಿಟ್ಟು ಬೇರೆ ಏನು ತೋಚದು 
ಚಲುವೇ ಚಲುವೇ ಕನ್ನಡತಿ ಅವಳೇ ದಿನ ಸ್ಫೂರ್ತಿ 
ನಮಗೆ ಅವಳ ವರದಿಂದ ಅಜರಾಮರ ಕೀರ್ತಿ 
ಕನ್ನಡ ನೆಲಕ್ಕೆ ಕಾವೇರಿಯು ಜಲಕ್ಕೆ ಋಣ ಪಟ್ಟ ಕಂದ 
ಕನ್ನಡದ ಕಂದ  ಇಯ್ಯಾ ಇಯ್ಯಾ ಓಹೋ  
ಎಲ್ಲರಿಗೂ ಚಂದ ರೀಯಾ ರೀಯಾ ಓಹೋ   

ಅನುರಾಗದಲೆಗಳ ಮೇಲೆ ಸಂಗೀತ ಸ್ವರಗಳ ಲೀಲೆ 
ನಡೆದಾಗ ಜೀವನಗಾನ ರಸಪೂರ್ಣವೋ 
ಓ.. ಮನಸೇ ಕಡಲಾಗಿರೂ... ಮುಗಿಲಾಗುವೇ 
 
ಮಲ್ಲಿಗೆ ಸಂಪಿಗೆಯ ತಂಪು ಬೀರುವ ಚಂದನದ ಹಾಡು ಕಟ್ಟುವೇ
ಉತ್ತರದ ದಕ್ಷಿಣದ ಇಂಪು ಸೂಸುವ ಪಶ್ಚಿಮ ರಾಗ ಹಾಡುವೇ
ಪೂರ್ವ ಪದದ ಹಿತ ನೋಡಿ ಹಾಡಿ ನಲಿವೆ
ನಗುವೇ ನಗುವೇ ನಗು ಬೆರೆಸಿ ನಿಮ್ಮ ಮನ ಗೆಲುವೇ
ನೀವು ಇಲ್ಲದೇ ಜೀವನ ಎಲ್ಲಿದೆ ನಾನು ನಿಮ್ಮ ಕಂದ
ಕನ್ನಡದ ಕಂದ  ಇಯ್ಯಾ ಇಯ್ಯಾ ಓಹೋ 
ಎಲ್ಲರಿಗೂ ಚಂದ ರೀಯಾ ರೀಯಾ ಓಹೋ   
ಮಾತು ಕೊಟ್ಟರೇ ಮಣ್ಣಿನಾಣೆ ಇಟ್ಟರೇ 
ಜೀವ ಕೊಡೋ ಕಂದ ... ಕಸ್ತೂರಿಯ ಗಂಧ  ಇಯ್ಯಾ ಇಯ್ಯಾ ಓಹೋ  
ಲೋಕಕೆಲ್ಲಾ ಚಂದಾ ರೀಯಾ ರೀಯಾ ಓಹೋ   
ಪ್ರೀತಿ ಇಟ್ಟರೇ ಬೆನ್ನು ತಟ್ಟಿ ಕೊಟ್ಟರೇ ಹಾಡೋ ಹೇಳೋ ಕಂದ 
ಹಾಡೋ ಹೇಳೋ ಕಂದ ಕನ್ನಡದ ಕಂದ  ಇಯ್ಯಾ ಇಯ್ಯಾ ಓಹೋ  
ಎಲ್ಲರಿಗೂ ಚಂದ ರೀಯಾ ರೀಯಾ ಓಹೋ   
----------------------------------------------------------------------------------------------------------------------

ಅನುರಾಗದ ಅಲೆಗಳು (1993) - ಅಂಬರ ತಾರೇ 
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ರಾಘವೇಂದ್ರ ರಾಜ್ ಕುಮಾರ, ಮಂಜುಳಾ 

ಗಂಡು : ಅಂಬರ ತಾರೆ ಅಂಗೈಯಲ್ಲಿದೇ 
ಹೆಣ್ಣು : ಅಂತರದೋಲೆ ಕಂಗಳಲ್ಲಿದೆ 
ಗಂಡು : ಅಹ.. ಅಹ.. ನಾನು ನೀನು ಪ್ರೇಮ ಜೋಡಿಯಾದೆವು 
ಹೆಣ್ಣು : ಕುಹೂ ಕುಹೂ ನಾದವಿಗ ವೇಣುಗಾನ ವಾದವೂ 

ಗಂಡು : ನೀನಾ ಅವಳೂ ಓಲೆ ಮಗಳು ಅಭಿಮಾನ ಸುರಿದವಳು 
            ಹುಣ್ಣಿಮೆಯಾ ತಿರುಳು ನೀನಾ ಅವಳೂ 
ಹೆಣ್ಣು : ಬರೆಯಲು ಕೋಟಿ ಪುಟಗಳು ಸಾಲದಾಗಾ 
          ಮುಡಿಯಲು ಕೋಟಿ ಸುಮಗಳು ಸಾಲದೀಗಾ 
ಗಂಡು : ಸ್ವರಗಳನ್ನೇ ಸುಮಗಳಾಗಿ ಮೂಡಿಸುವೆ ಪ್ರೇಮಕೋಗಿಲೆ 
ಗಂಡು : ಅಂಬರ ತಾರೆ ಅಂಗೈಯಲ್ಲಿದೇ 
ಹೆಣ್ಣು : ಅಂತರದೋಲೆ ಕಂಗಳಲ್ಲಿದೆ 
ಗಂಡು : ಅಹ.. ಅಹ.. ನಾನು ನೀನು ಪ್ರೇಮ ಜೋಡಿಯಾದೆವು 
ಹೆಣ್ಣು : ಕುಹೂ ಕುಹೂ ನಾದವಿಗ ವೇಣುಗಾನ ವಾದವೂ 

ಹೆಣ್ಣು : ನೀನಾ ಅವನೂ ಮುರುಳೀಧರನು ಗಂಧರ್ವನು 
          ಹಾಡಲ್ಲಿ ಮನ್ಮಥ ನೀನಿಲ್ಲಿ ನೀನಾ ಅವನು... 
ಗಂಡು : ಅರಿಯದೆ ಹಾಡು ಬಂದಿತು ಬಾಲ್ಯದಲ್ಲಿ 
           ಕರೆಯದೆ ಪ್ರಣಯ ಬಂದಿತು ಹರೆಯದಲ್ಲಿ 
ಹೆಣ್ಣು : ನಿತ್ಯ ಚೈತ್ರ ಹೃದಯ ತೋಟ ಹಾಡು ಬಾ ಪ್ರೆಮ್ಮ ಕೋಗಿಲೆ 
ಗಂಡು : ಅಂಬರ ತಾರೆ ಅಂಗೈಯಲ್ಲಿದೇ 
ಹೆಣ್ಣು : ಅಂತರದೋಲೆ ಕಂಗಳಲ್ಲಿದೆ 
ಗಂಡು : ಅಹ.. ಅಹ.. ನಾನು ನೀನು ಪ್ರೇಮ ಜೋಡಿಯಾದೆವು 
ಹೆಣ್ಣು : ಕುಹೂ ಕುಹೂ ನಾದವಿಗ ವೇಣುಗಾನ ವಾದವೂ 
------------------------------------------------------------------------------------------

ಅನುರಾಗದ ಅಲೆಗಳು (1993) - ಮಂಜುಳ ಮಂಜುಳಪ್ರೇಮ ನಾದ 
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ಡಾ.ರಾಜ್ ಕುಮಾರ, ಮಂಜುಳಾ 

ಹೆಣ್ಣು : ಮಂಜುಳ ಮಂಜುಳ ಮಂಜುಳ ಪ್ರೇಮನಾದ... ಪ್ರೇಮನಾದ 
ಗಂಡು : ಮಂಜುಳ ಮಂಜುಳ ಮಂಜುಳ ಪ್ರೇಮನಾದ... ಪ್ರೇಮನಾದ 
ಹೆಣ್ಣು : ಮಂಗಳ ಗಾನದ ಓಂಕಾರ 
ಗಂಡು : ನಗುವೇ ಆಧಾರ ಅಳುವೇ ಅದರ ಆಕಾರ 
ಹೆಣ್ಣು : ಮಂಜುಳ ಮಂಜುಳ ಮಂಜುಳ ಪ್ರೇಮನಾದ... ಪ್ರೇಮನಾದ 
ಗಂಡು : ಮಂಜುಳ ಮಂಜುಳ ಮಂಜುಳ ಪ್ರೇಮನಾದ... ಪ್ರೇಮನಾದ 

ಹೆಣ್ಣು : ಚೈತ್ರ ಹಾಡೋದು ಏನಂತಾ 
ಗಂಡು : ಗ್ರೀಷ್ಮ ಸುಳಿಯೋದು ಬೇಡಂತಾ 
ಹೆಣ್ಣು : ಕೋಗಿಲೆ ಹಾಡೋದು ಏನಂತಾ 
ಗಂಡು : ಚೈತ್ರವು ಹೋಗುವುದೇ ಬೇಡಂತಾ 
ಹೆಣ್ಣು : ಎಲ್ಲಾ ಕಾಲ ಸುಗ್ಗಿನೇ ಆದರೆ ಬೆಳೆಯೋಧ್ಯಾವಾಗ 
ಗಂಡು : ಅದಕೇ ನೋವಿನ ಜೊತೆಯಲ್ಲೇ ಇರುವುದು ಎಲ್ಲರ ಅನುರಾಗ 
ಹೆಣ್ಣು : ಚೆಲುವೇ ಅದರ ಆಧಾರ 
ಗಂಡು : ನೋವೇ ಅದರಾ ಆಕಾರ 
ಹೆಣ್ಣು : ಮಂಜುಳ ಮಂಜುಳ ಮಂಜುಳ ಪ್ರೇಮನಾದ... ಪ್ರೇಮನಾದ 
ಗಂಡು : ಮಂಜುಳ ಮಂಜುಳ ಮಂಜುಳ ಪ್ರೇಮನಾದ... ಪ್ರೇಮನಾದ 

ಹೆಣ್ಣು : ನೋಡು ಅರಳುತಿದೆ ಹೂವೆಲ್ಲ 
ಗಂಡು : ಅರಳುವಾ ಹೂವೆಲ್ಲ ಕಾಯಲ್ಲ 
ಹೆಣ್ಣು : ಕಾಯಿ ತೂಗುತಿವೆ ಕಾಡೆಲ್ಲ 
ಗಂಡು : ಕಾಡಿನ ಕಾಯೆಲ್ಲ ಹಣ್ಣಾಗಲ್ಲಾ 
ಹೆಣ್ಣು : ನಾನು ನೀನು ಇರುವಂತೆ ಹಸಿರು ಚಿಗುರು ಇದೆಯಂತೆ 
ಗಂಡು : ಹಸಿರು ಚಿಗುರು ಹೋದಾಗ ನಾವು ಅದರಾ ಜೊತೆಯಂತೆ 
ಹೆಣ್ಣು : ಹಸಿರೇ ಅದರಾ ಆಧಾರ 
ಗಂಡು : ಉಸಿರೇ ಅದರಾ ಆಕಾರ 
ಹೆಣ್ಣು : ಮಂಜುಳ ಮಂಜುಳ ಮಂಜುಳ ಪ್ರೇಮನಾದ... ಪ್ರೇಮನಾದ 
ಗಂಡು : ಮಂಜುಳ ಮಂಜುಳ ಮಂಜುಳ ಪ್ರೇಮನಾದ... ಪ್ರೇಮನಾದ 
ಹೆಣ್ಣು : ಮಂಗಳ ಗಾನದ ಓಂಕಾರ 
ಗಂಡು : ನಗುವೇ ಆಧಾರ ಅಳುವೇ ಅದರ ಆಕಾರ 
ಹೆಣ್ಣು : ಮಂಜುಳ ಮಂಜುಳ ಮಂಜುಳ ಪ್ರೇಮನಾದ... ಪ್ರೇಮನಾದ 
ಗಂಡು : ಮಂಜುಳ ಮಂಜುಳ ಮಂಜುಳ ಪ್ರೇಮನಾದ... ಪ್ರೇಮನಾದ 
---------------------------------------------------------------------------------------------------------------------

ಅನುರಾಗದ ಅಲೆಗಳು (1993) - ನಾನು ಹಾಡೋ ಹಾಡು 
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ರಾಘವೇಂದ್ರ ರಾಜ್ ಕುಮಾರ

ನಾನು ಹಾಡೋ ಹಾಡು ಈಗ ನನ್ನದಲ್ಲ ನೀವು ಕೇಳೋ ಮುರುಳಿನಾದ ನಿಮಗಲ್ಲ... 
ಅರಳೋ... ಮುಂಚೇನೇ ಬಾಡೋ ಹೂಗಳಿಗೇ ಪ್ರಾರ್ಥನೇ ಗೀತೆ ಇದು ಓಓಓಓ ... 
ನಾನು ಹಾಡೋ ಹಾಡು ಈಗ ನನ್ನದಲ್ಲ ನೀವು ಕೇಳೋ ಮುರುಳಿನಾದ ನಿಮಗಲ್ಲ... 

ಹಣ್ಣಾದ ಮರ ಒಂದು ಮುರಿದಾಗ  ಸಂಪೂರ್ಣ ಬಾಳೊಂದು ಆನಂದಾ... 
ತೆನೆಯಾಗಿ ಶಿರಬಾಗಿ ಕಡಿದಾಗ ಋಣಮುಕ್ತ ನಾನೆಂಬ ಸಂತೋಷ 
ಅಭಿಮನ್ಯು ಅವಸಾನ ಆನಂದವಲ್ಲ ಶಾಂತಲೆಯ ಬಲಿದಾನ ಸಂತೋಷವಲ್ಲ 
ಗಿಣಿಯಾ ಬಣ್ಣ ಕಸಿಯೋ ನದಿಯಾ ಓಟ ಕದಿಯೋ ಧರೆಗೆ ಮಳೆಯಾ ನಿಲ್ಲಿಸೋ ನಗುವ 
ಒಲವಾ ಅಳಿಸೋ ಕಲೆಯ ಒಡೆಯಾ ಮಲಗೋ ಕ್ಷಣಕಾಲ ನೀ 
ನಾನು ಹಾಡೋ ಹಾಡು ಈಗ ನನ್ನದಲ್ಲ ನೀವು ಕೇಳೋ ಮುರುಳಿನಾದ ನಿಮಗಲ್ಲ... 

ಬದುಕೆಲ್ಲ ಬಂಗಾರ ಸುರಿಬೇಡ ಕನಸನ್ನು ಕಾಣೋದ ತಡೀಬೇಡ 
ಸುರಲೋಕ ಸೋಪಾನ ಕೊಡಬೇಡ ಅನುರಾಗದಲೆಮೇಲೆ ಮುನಿಬೇಡ 
ಅನುಕಂಪ ನೀಡೋಕೆ ಹೃದಯಾನೇ ಸಾಕು ಆಯುಷ್ಯ ಹಂಚೋಕೆ ನೀವಿರಲೇ ಬೇಕು 
ನವಿಲಾ ಗರಿಯಾ ಮುರಿಯೋ ಮಳೆಯ ಬಿಲ್ಲ ಮರೆಸೋ 
ಶುಭದಾ ಮದುವೆ ಕೆಡಿಸೋ ನಗುವಾ ಒಲವಾ ಅಳಿಸೋ 
ಕಲೆಯಾ ಒಡೆಯಾ ಮಲಗೋ ಕ್ಷಣಕಾಲ ನೀ 
ನಾನು ಹಾಡೋ ಹಾಡು ಈಗ ನನ್ನದಲ್ಲ ನೀವು ಕೇಳೋ ಮುರುಳಿನಾದ ನಿಮಗಲ್ಲ... 
ಅರಳೋ... ಮುಂಚೇನೇ ಬಾಡೋ ಹೂಗಳಿಗೇ ಪ್ರಾರ್ಥನೇ ಗೀತೆ ಇದು ಓಓಓಓ ... 
ನಾನು ಹಾಡೋ ಹಾಡು ಈಗ ನನ್ನದಲ್ಲ ನೀವು ಕೇಳೋ ಮುರುಳಿನಾದ ನಿಮಗಲ್ಲ... 
---------------------------------------------------------------------------------------------------------------------

ಅನುರಾಗದ ಅಲೆಗಳು (1993) - ಸಾಗರವೇ ಸಾಗರವೇ 
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ರಾಘವೇಂದ್ರ ರಾಜ್ ಕುಮಾರ

ಸಾಗರವೇ... ಸಾಗರವೇ... ಕಂಬನಿಯಾ ಆಗರವೇ 
ದಣಿವೆ ಇಲ್ಲ ನಿನ್ನಾ ಅಲೆಗೆ  ದಣಿವೆ ಇಲ್ಲ ನನ್ನ ಎದೆಗೆ 
ಹಾಡುವೇ ನಿನ್ನ ಹಾಗೆ ನನ್ನ ಹೂವಿಗಾಗಿ 

ಜಾತಕ ಪಕ್ಷಿ ಆಗಸ ನೋಡಿ ನೀರಿನ ಹನಿಗೆ ಕಾಯದೇ 
ಚಕೋರ ಪಕ್ಷಿ ಪೌರ್ಣಿಮಿಗಾಗಿ ಕತ್ತಲೆ ಊರ ನೋಡದ 
ನಂಬಿಕೆ ಎಂಬ ಸಾಗರದಲ್ಲಿ ಪ್ರಾರ್ಥನೆ ಎಂಬ ಆಸರೆಯ ಪಯಣ 
ಹೊರಟಿರುವೆ ಕೊನೆಗೆ ಜಯ ತರುವೆ ದಣಿವೇ ಇಲ್ಲ ನನ್ನಾ ಎದೆಗೆ 
ದಣಿವೆ ಇಲ್ಲಾ ನಿನ್ನ ನಿನ್ನಾ ಅಲೆಗೆ ಹಾಡುವೆ ನಿನ್ನಾ ಹಾಗೆ ನನ್ನ ಹೂವಿಗಾಗಿ 
ಸಾಗರವೇ... ಸಾಗರವೇ... ಕಂಬನಿಯಾ ಆಗರವೇ 
ದಣಿವೆ ಇಲ್ಲ ನಿನ್ನಾ ಅಲೆಗೆ  ದಣಿವೆ ಇಲ್ಲ ನನ್ನ ಎದೆಗೆ 
ಹಾಡುವೇ ನಿನ್ನ ಹಾಗೆ ನನ್ನ ಹೂವಿಗಾಗಿ 

ಜೀವನ ಸಿಂಧು ನಿನ್ನ ಎದುರು ಬಿಂದುಗಳೆರಡು 
ನಮ್ಮದು ಉಪ್ಪಿನ ನೀರೆ ನಿನ್ನಾ ಮನಕೆ    
ಕಂಬನಿ ಬಿಸಿಯೂ ಸೋಕದು ಕಡಲ ಆಣೆ ಮರಳ ಆಣೆ ಇಲ್ಲಿ ಬೀಸೋ ಗಾಳಿ ಆಣೆ 
ಬಯಸೋ ಪ್ರೇಮಿಗಳ ಹರಸು ವಿಧಿ ಎದುರು ನೀ ಬಾಡದಿರು ನೀ ಆರದಿರು ನೀ ಬಾಡದಿರು 
ಮಲ್ಲಿಗೆ ಅಂಗಳದ ಮಂಗಳ ಆಣೆ ನೀನಿದ್ದರೇ ನಾ ಹಾಡುವೆ ನೀನಿದ್ದರೇ ನಾ ಬಾಳುವೆ 
(ಅನುರಾಗದಲೆಗಳ ಮೇಲೆ ಸಂಗೀತ ಸ್ವರಗಳ ಲೀಲೆ ನಡೆದಾಗ ಜೀವನ ಗಾನ ರಸ ಪೂರ್ಣವೂ) 
ಓ... ಪ್ರೇಮಾ ಉಸಿರಾಗುವಾ ವರವಾಗಿರು 
----------------------------------------------------------------------------------------------------------------------

No comments:

Post a Comment